Telegram Join Our Telegram WhatsApp Join Our WhatsApp

Best Courses After PUC Commerce In 2026: Higher Education Chances And Top Career Courses After PUC Commerce in Kannada

PUC Commerce ನಂತರ ಇರುವ ಉನ್ನತ ಶಿಕ್ಷಣದ ಕೋರ್ಸ್‌ ಮತ್ತು ವೃತ್ತಿ ಅವಕಾಶಗಳು

ಇಂದಿನ ಸ್ಮರ್ಧಾತ್ಮಕ ಪ್ರಪಂಚದಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಹಲವಾರು ಉದ್ಯೋಗಾಕಾಂಕ್ಷಿಗಳು ಪ್ರಯತ್ನ ಪಡುತ್ತಾರೆ. PUC Commerce ವಿಭಾಗವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಉನ್ನತ ಶಿಕ್ಷಣದ ಅವಕಾಶಗಳು ಇವೆ.

ಈ ಹಿಂದೆ ಹೆಚ್ಚಿನ ವಿದ್ಯಾರ್ಥಿಗಳು ಬಿಕಾಂ ಅಥವಾ ಬಿಬಿಎ ಕೋರ್ಸ್ ಅನ್ನು ಮಾತ್ರ ಆಯ್ಕೆ ಮಾಡುತ್ತಿದ್ದು ಪ್ರಸ್ತುತದಲ್ಲಿ ಬ್ಯಾಂಕಿಂಗ್, ಫೈನಾನ್ಸ್, ಡಿಜಿಟಲ್ ಮಾರ್ಕೆಟಿಂಗ್, ಡಾಟಾ ಅನಲ್ಲಿಟಿಕ್ಸ್, ಕಾನೂನು, ಅಕೌಂಟಿಂಗ್, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಮ್ಮ ಉತ್ತಮ ಉದ್ಯೋಗವನ್ನು ಪಡೆಯುವಲ್ಲಿ ಹಾಗೂ ಹೆಚ್ಚಿನ ಸಂಬಳವನ್ನು ಪಡೆಯುವಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ

ಸರಿಯಾದ ಕೋರ್ಸನ್ನು ಆಯ್ಕೆ ಮಾಡುವುದು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಹಂತವಾಗಿದೆ ವಿದ್ಯಾರ್ಥಿಗಳ ಆಸಕ್ತಿ, ಆರ್ಥಿಕ ಪರಿಸ್ಥಿತಿ, ಕೌಶಲ್ಯ, ಉದ್ಯೋಗ ಬೇಡಿಕೆ ಮತ್ತು ಭವಿಷ್ಯದಲ್ಲಿ ಇರಬಹುದಾದ ಅಧ್ಯಯನದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಸನ್ನು ಆಯ್ಕೆ ಮಾಡಿದರೆ ಯಶಸ್ಸನ್ನು ಪಡೆಯುವ ದಾರಿಯು ಸುಲಭವಾಗಿರುತ್ತದೆ

ಪ್ರಸ್ತುತ ಲೇಖನದಲ್ಲಿ ನಾವು PUC Commerce ನಂತರ ಲಭ್ಯವಿರುವ ಪ್ರಮುಖ ಕೋರ್ಸುಗಳು, ಅವುಗಳ ಅರ್ಹತೆ, ಪೂರ್ಣಗೊಳಿಸಲು ಬೇಕಾಗುವ ಅವಧಿ, ಪೂರ್ಣಗೊಳಿಸಿದ ನಂತರ ಸಿಗುವ ಉದ್ಯೋಗಾವಕಾಶಗಳು ಮತ್ತು ಸಿಗಬಹುದಾದ ಅಂದಾಜು ಸಂಬಳದ ಕುರಿತು ವಿವರವಾಗಿ ತಿಳಿಸಿದ್ದೇವೆ ಆದುದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಿಮ್ಮ ಆಸಕ್ತಿಗೆ ತಕ್ಕಂತೆ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಿ

PUC Commerce ನಂತರ ವೃತ್ತಿ ಯೋಜನೆ ಮುಖ್ಯವೇ

PUC Commerce ಪೂರ್ಣಗೊಂಡ ನಂತರ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಅದೇ ಸಮಯದಲ್ಲಿ ಸರಿಯಾದ ವೃತ್ತಿ ಯೋಜನೆಯನ್ನು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೋರ್ಸುಗಳನ್ನು ಬದಲಾವಣೆ ಮಾಡುವ ಅವಕಾಶಗಳು ಕಡಿಮೆಯಾಗಬಹುದು, ಸಮಯದ ನಷ್ಟ ಉಂಟಾಗಬಹುದು ಮತ್ತು ಉದ್ಯೋಗ ಪಡೆಯುವ ಅವಕಾಶಗಳನ್ನು ಕಳೆದುಕೊಳ್ಳುವ ಮತ್ತು ಕಡಿಮೆಯಾಗುವ ಸಾಧ್ಯತೆ ಇರುತ್ತದೆ

ವೃತ್ತಿ ಯೋಜನೆಯನ್ನು ಮಾಡುವಾಗ ಮೊದಲು ನಿಮ್ಮ ಆಸಕ್ತಿ ಯಾವ ಕ್ಷೇತ್ರದಲ್ಲಿದೆ, ನಿಮಗೆ ಯಾವ ಕೌಶಲ್ಯಗಳಿವೆ ಮತ್ತು ಯಾವ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವಿದೆ ಎಂಬುದನ್ನು ಗುರುತಿಸಬೇಕು ಕೆಲವರಿಗೆ ಅಕೌಂಟಿಂಗ್ ಕ್ಷೇತ್ರವು ಇಷ್ಟವಾಗಬಹುದು ಕೆಲವರಿಗೆ ವ್ಯಾಪಾರ ನಿರ್ವಹಣೆ ಮತ್ತು ವ್ಯವಹಾರ ನಿರ್ವಹಣೆ ಇನ್ನೂ ಕೆಲವರಿಗೆ ಬ್ಯಾಂಕಿಂಗ್ ಅಥವಾ ಕಾನೂನು ಕ್ಷೇತ್ರದಲ್ಲಿ ಆಸಕ್ತಿ ಇರಬಹುದು ಸಾಮರ್ಥ್ಯ ಹಾಗೂ ಗುರಿಗೆ ಹೋಲುವ ಕೋರ್ಸ್ ಅನ್ನು ಆಯ್ಕೆ ಮಾಡಿದರೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುತ್ತದೆ ಮತ್ತು ಉತ್ತಮ ಫಲಿತಾಂಶ ಪಡೆಯುವ ಜೊತೆಯಲ್ಲಿ ಉತ್ತಮ ರೀತಿಯಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು

ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಸಂಬಂಧಿತ ಪದವಿಯನ್ನು ಪಡೆದರೆ ಸಾಕಾಗುವುದಿಲ್ಲ ಬದಲಾಗಿ ಉತ್ತಮ ಕೌಶಲ್ಯ, ಕಂಪ್ಯೂಟರ್ ಜ್ಞಾನ ಹಾಗೂ ವೃತ್ತಿಪರ ಪ್ರಮಾಣ ಪತ್ರಗಳನ್ನು ಹೊಂದುವುದು ಕೂಡ ಅತ್ಯಂತ ಪ್ರಮುಖವಾಗಿದೆ ಆದುದರಿಂದ ಪದವಿಯ ಜೊತೆಯಲ್ಲಿ ಹೊಸ ಹಾಗೂ ಅತ್ಯಾಧುನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಪ್ರವೃತ್ತಿಯನ್ನು ರೂಪಿಸಬೇಕು

ವೃತ್ತಿ ಯೋಜನೆಯನ್ನು ಮಾಡುವಾಗ ಕುಟುಂಬದವರ ಸಲಹೆ, ಶಿಕ್ಷಕರ ಮಾರ್ಗದರ್ಶನ ಮತ್ತು ಕ್ಷೇತ್ರದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುವ ತಜ್ಞರ ಅಭಿಪ್ರಾಯ ಪಡೆದುಕೊಳ್ಳುವುದು ಉತ್ತಮವಾಗಿದೆ ಇದರಿಂದ ತಪ್ಪು ಕೋರ್ಸನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ ಜೊತೆಯಲ್ಲಿ ಸರಿಯಾದ ಯೋಜನೆಯೊಂದಿಗೆ ಮುಂದುವರೆದರೆ ದೇಶ ಹಾಗೂ ವಿದೇಶಿ ಕಂಪನಿಗಳಲ್ಲೂ ಸಹ ಉದ್ಯೋಗವನ್ನು ಪಡೆಯಬಹುದು

PUC Commerce ನಂತರದ ಸಂಪೂರ್ಣ ಕೋರ್ಸುಗಳ ಪಟ್ಟಿ

PUC Commerce ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕಾಮರ್ಸ್ ಮತ್ತು ಆರ್ಟ್ಸ್ ಎರಡು ವಿಭಾಗದಲ್ಲಿ ಮುಂದುವರಿಯಲು ಹಲವು ಅವಕಾಶಗಳಿರುತ್ತವೆ ಆದರೆ ಅಭ್ಯರ್ಥಿಗಳ ಆಸಕ್ತಿ ಮತ್ತು ಕೌಶಲ್ಯವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ನಿರ್ಧರಿಸುವುದರಿಂದ ಮೊದಲು ವೃತ್ತಿ ಯೋಜನೆಯನ್ನು ಪೂರ್ಣಗೊಳಿಸಿ ನಂತರ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಈ ಕೆಳಕಂಡ ಕೋರ್ಸುಗಳನ್ನು PUC Commerce ಮುಗಿದ ನಂತರ ತೆಗೆದುಕೊಳ್ಳಬಹುದಾಗಿರುತ್ತದೆ ಅವುಗಳೆಂದರೆ:

PUC Commerce ನಂತರದ ಅತ್ಯುತ್ತಮ ಪದವಿ ಕೋರ್ಸ್ ಗಳು

Bachelor of Commerce (B.Com)

ಬ್ಯಾಚುಲರ್ ಆಫ್ ಕಾಮರ್ಸ್ ಎನ್ನುವುದು ವಿದ್ಯಾರ್ಥಿಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ಕೋರ್ಸ್ ಆಗಿದ್ದು ಈ ಕೋರ್ಸ್ ಮೂರು ವರ್ಷದ ಪದವಿಯಾಗಿದ್ದು ಲೆಕ್ಕಪತ್ರ,, ತೆರಿಗೆ ವ್ಯವಸ್ಥೆ, ಹಣಕಾಸು ನಿರ್ವಹಣೆ, ಅರ್ಥಶಾಸ್ತ್ರ ಬ್ಯಾಂಕಿಂಗ್ ಮತ್ತು ವ್ಯವಹಾರ ಕಾನೂನು ಮತ್ತು ಆಡಿಟಿಂಗ್ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ನೀಡುತ್ತದೆ

ಪಿಯುಸಿ ಕಾಮರ್ಸ್ ನಂತರದಲ್ಲಿ ಬಿಕಾಂ ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅಕೌಂಟಿಂಗ್ ಕ್ಷೇತ್ರದಲ್ಲಿ ಬಲವಾದ ಅಡಿಪಾಯವು ಸಿಕ್ಕಿದಂತಾಗುತ್ತದೆ ಪಿಯುಸಿ ನಂತರದಲ್ಲಿ ಬಿಕಾಂ ಮಾಡುವುದರಿಂದ ಮುಂದಿನ ದಿನಗಳಲ್ಲಿ CA, CMA, CS, MBA, M.Com ನಂತಹ  ಉನ್ನತ ಶಿಕ್ಷಣ ಕೋರ್ಸ್ ಗಳನ್ನು ಪಡೆಯುವುದರ ಜೊತೆಯಲ್ಲಿ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಇದೊಂದು ಅತ್ಯುತ್ತಮ ಕೋರ್ಸ್ ಆಯ್ಕೆಯಾಗಿದೆ

ಬಿಕಾಂ ಕೋರ್ಸ್ ಪೂರ್ಣಗೊಳಿಸಿದ ನಂತರ ಬ್ಯಾಂಕುಗಳು ಖಾಸಗಿ ಕಂಪನಿಗಳು ಸರ್ಕಾರಿ ಕಚೇರಿಗಳು ಹಣಕಾಸು ಸಂಸ್ಥೆಗಳು ಮಲ್ಟಿ ನ್ಯಾಷನಲ್ ಕಂಪನಿಗಳು ಮತ್ತು. ವಿಮಾ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ Account Executive, Tax Consultant, Financial Analyst, Auditor, Accountant, Banking Associate, Finance Executive ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ

ಪ್ರಸ್ತುತದಲ್ಲಿ ಬಿಕಾಂ ಕೊರ್ಸಿನಲ್ಲಿTally, GST, Income Tax Filing, Advanced Excel, ERP Software, Business Analytics ಮೊದಲಾದ ಕೌಶಲ್ಯಗಳನ್ನು ಉತ್ತಮ ರೀತಿಯಲ್ಲಿ ಕಲಿತರೆ ಉದ್ಯೋಗಗಳನ್ನು ಸುಲಭವಾಗಿ ಬೇಗನೆ ಪಡೆಯಬಹುದಾಗಿರುತ್ತದೆ ಲಭ್ಯವಾಗುತ್ತದೆ

Bachelor of Business Administration (BBA)

ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಎನ್ನುವುದು ವ್ಯವಹಾರ ನಿರ್ವಹಣೆ ಮತ್ತು ವ್ಯವಹಾರ ಆಡಳಿತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಈ ಪದವಿಯು 3 ವರ್ಷಗಳಾಗಿರುತ್ತವೆ ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಹಣಕಾಸು, ವ್ಯಾಪಾರ ಸಂಸ್ಥೆಗಳು ನಿರ್ವಹಣೆ ನಾಯಕತ್ವ ಹಾಗೂ ಉದ್ಯಮಶೀಲತೆ ಕೌಶಲ್ಯಗಳನ್ನು ಈ ಕೋರ್ಸ್ ನಲ್ಲಿ ಕಲಿಯಲಾಗುತ್ತದೆ

ವ್ಯವಹಾರವನ್ನು ಆರಂಭಿಸುವ ಕನಸನ್ನು ಹೊಂದಿರುವವರು ಅಥವಾ ಭವಿಷ್ಯದಲ್ಲಿ ಪ್ರಖ್ಯಾತ ಕಂಪನಿಗಳಲ್ಲಿ Manager, Team Leader ಅಥವಾ Business Consultant ಆಗಲು ಬಯಸುವವರಿಗೆ ಬಿಬಿಎ ಅತ್ಯುತ್ತಮ ಕೋರ್ಸಿನ ಆಯ್ಕೆಯಾಗಿದೆ ಈ ಕೋರ್ಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸಮಸ್ಯೆ ಪರಿಹರಿಸುವ ಕೌಶಲ್ಯ ಹಾಗೂ ಉತ್ತಮ ರೀತಿಯ ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ

ಬಿಬಿಎ ನಂತರ ಎಂಬಿಎ ಕೋರ್ಸನ್ನು ಆಯ್ಕೆ ಮಾಡುವುದರಿಂದ ಉನ್ನತ ಮಟ್ಟದಲ್ಲಿ ನಿರ್ವಹಣಾ ಹುದ್ದೆಗಳನ್ನು ಪಡೆಯುವ ಅವಕಾಶಗಳು ಸಹ ಹೆಚ್ಚಾಗುತ್ತದೆ ಹಿಂದಿನ ದಿನಗಳಲ್ಲಿ ಐಟಿ ಕಂಪನಿಗಳು, ಈ ಕಾಮರ್ಸ್ ಸಂಸ್ಥೆಗಳು, ಸ್ಟಾರ್ಟ್ ಅಪ್ ಗಳು, ಬ್ಯಾಂಕುಗಳು ಹಾಗೂ ಬಹು ರಾಷ್ಟ್ರೀಯ ಕಂಪನಿಗಳು ಬಿಬಿಎ ಪದವಿದರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ನೀಡುತ್ತಿವೆ

ಬಿಬಿಎ ಕೋರ್ಸ್ ಅನ್ನು ಓದುತ್ತಿರುವ ಅವಧಿಯಲ್ಲಿಯೇ Internship, Presentation, Project Work ಹಾಗೂ Industrial Visit ಗಳ ಮೂಲಕ ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳಬೇಕಾಗುತ್ತದೆ ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ಜ್ಞಾನವನ್ನು ಹೊಂದಬಹುದಾಗಿದೆ ಸರಿಯಾದ ಕೌಶಲ್ಯಗಳನ್ನು ಬೆಳೆಸಿಕೊಂಡರೆ ದೇಶ ಮತ್ತು ವಿದೇಶದಲ್ಲಿಯೂ ಸಹ ಉತ್ತಮ ಉದ್ಯೋಗಗಳನ್ನು ಪಡೆದು ವೃತ್ತಿ ಜೀವನವನ್ನು ಕಟ್ಟಿಕೊಳ್ಳಬಹುದಾಗಿರುತ್ತದೆ

BCA (Bachelor Of Computer Applications)

ಬಹುತೇಕ ವಿದ್ಯಾರ್ಥಿಗಳಿಗೆ ಬಿಸಿಎ ಎಂದರೆ ಕೇವಲ ಸೈನ್ಸ್ ವಿದ್ಯಾರ್ಥಿಗಳು ಮಾತ್ರ ತೆಗೆದುಕೊಳ್ಳಬಹುದಾದ ಕೋರ್ಸ್ ಎಂಬ ತಪ್ಪು ಕಲ್ಪನೆ ಇರುತ್ತದೆ ಆದರೆ ಅನೇಕ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾಮರ್ಸ್ ಓದಿರುವ ವಿದ್ಯಾರ್ಥಿಗಳಿಗೂ ಸಹ ಬಿಸಿಎ ಪ್ರವೇಶದ ಅವಕಾಶವನ್ನು ನೀಡಲಾಗುತ್ತದೆ ಸಾಫ್ಟ್ವೇರ್ ಅಭಿವೃದ್ಧಿ, ಕಂಪ್ಯೂಟರ್ ತಂತ್ರಜ್ಞಾನ ಮತ್ತು ಐಟಿ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ

ಬಿಸಿಎ ಕೋರ್ಸಿನಲ್ಲಿ Programming Languages, Database Management, Web Development, Networking, Cyber Security, Cloud Computing, Artificial Intelligence ಹಾಗೂ Software Development ಮುಂತಾದ ವಿಷಯಗಳನ್ನು ಇಲ್ಲಿ ಅಧ್ಯಯನ ಮಾಡಲಾಗುತ್ತದೆ ಈ ಕೋರ್ಸಿನ ಅವಧಿ ಸಾಮಾನ್ಯವಾಗಿ ಮೂರು ವರ್ಷಗಳಾಗಿರುತ್ತವೆ

ಬಿಸಿಎ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ Software Developer, Web Developer, System Administrator, Data Analyst, Technical Support Engineer, Application Developer, Cyber Security Analyst ಇನ್ನೂ ಮುಂತಾದ ರೀತಿಯ ತಾಂತ್ರಿಕ ಹುದ್ದೆಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ ಇದರ ಜೊತೆಯಲ್ಲಿ ಮುಂದುವರೆದು ಎಂಸಿಎ ಅಥವಾ ಆಯ್ಕೆ ಸಂಬಂಧಿತ ವಿಶೇಷ ಕೋರ್ಸುಗಳನ್ನು ಅಧ್ಯಯನ ಮಾಡುವುದರಿಂದ ಇನ್ನಷ್ಟು ಉತ್ತಮ ಅವಕಾಶಗಳು ಮತ್ತು ಬಡ್ತಿ ಹೊಂದುವ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ

ಇಂದಿನ ಡಿಜಿಟಲ್ ಆವೃತ್ತಿಯ ಯುಗದಲ್ಲಿ ಐಟಿ ಕ್ಷೇತ್ರದ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದ್ದು ಉತ್ತಮ ಕೌಶಲ್ಯವನ್ನು ಹೊಂದಿರುವ ಬಿಸಿಎ ಪದವೀಧರರಿಗೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ ಈ ಉದ್ಯೋಗಗಳಲ್ಲಿ ಹೆಚ್ಚಿನ ಸಂಬಳದ ಅವಕಾಶಗಳಿವೆ. ಇದರ ಜೊತೆಯಲ್ಲಿ Programming ಜೊತೆಗೆ Communication Skills, Problem Solving ಹಾಗೂ Practical Projects ಮೇಲೆ ಹೆಚ್ಚು ಗಮನ ಹರಿಸಿದರೆ ವೃತ್ತಿ ಜೀವನವನ್ನು ವೇಗವಾಗಿ ಮತ್ತು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿಕೊಳ್ಳಬಹುದು

PUC Commerce ನಂತರದ ಅತ್ಯುತ್ತಮ ವೃತ್ತಿಪರ ಕೋರ್ಸ್ ಗಳು

ಎರಡು ವರ್ಷಗಳ ಅವಧಿಯ PUC Commerce ವಿಭಾಗವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಕೇವಲ ಪದವಿ ಕೋರ್ಸ್ ಗಳಷ್ಟೇ ಆಯ್ಕೆ ಮಾಡಬೇಕೆಂದಿಲ್ಲ ಇಂದಿನ ದಿನಗಳಲ್ಲಿ ಎಕನಾಮಿಕ್ಸ್ ವಿಭಾಗದಲ್ಲಿ ಬಿಎ ಮಾಡುವ ಅವಕಾಶಗಳು ಸಹ ಸಿಗುತ್ತವೆ ಈ ಕೋರ್ಸುಗಳಲ್ಲಿ ಉತ್ತಮ ಸಂಬಳ ಪ್ರತಿಷ್ಠಿತ ಉದ್ಯೋಗಗಳು ಮತ್ತು ದೇಶವಿದೇಶಗಳಲ್ಲಿ ವೃತ್ತಿ ಬೆಳವಣಿಗೆಗೆ ಅವಕಾಶಗಳನ್ನು ಪಡೆದುಕೊಳ್ಳಬಹುದು. ಪ್ರತಿಯೊಂದು ಕೋರ್ಸಿಗೂ ತನ್ನದೇ ಆದ ವಿಶೇಷತೆ ಮತ್ತು ಮಹತ್ವದ್ದು ವಿದ್ಯಾರ್ಥಿ ಆಸಕ್ತಿ ಮತ್ತು ಭವಿಷ್ಯದ ಗುರಿಯನ್ನಾಧರಿಸಿ ಆಯ್ಕೆ ಮಾಡುವುದು ಉತ್ತಮ ಪ್ರವೃತ್ತಿಯಾಗಿದೆ

CA (Chartered Accountant)

ಚಾರ್ಟರ್ಡ್ ಅಕೌಂಟೆಂಟ್ ಭಾರತದಲ್ಲಿನ ಅತ್ಯಂತ ಪ್ರಮುಖ ಹಾಗೂ ಪ್ರತಿಷ್ಠಿತ ವೃತ್ತಿಪರ ಕೋರ್ಸ್ ಗಳಲ್ಲಿ ಒಂದಾಗಿದ್ದು ಈ ಕೋರ್ಸಿನಲ್ಲಿ ಆಡಿಟಿಂಗ್ ಅಕೌಂಟಿಂಗ್ ತೆರಿಗೆ ವ್ಯವಸ್ಥೆ ಹಣಕಾಸು ನಿರ್ವಹಣೆ ಮತ್ತು ವ್ಯಾಪಾರಗಳಲ್ಲಿ ಸಲಹೆ ನೀಡುವ ಕ್ಷೇತ್ರದಲ್ಲಿ ಅಧ್ಯಯನ ಮಾಡಲಾಗುತ್ತದೆ ಈ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳನ್ನು ನಿರ್ಮಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ PUC Commerce ಅನ್ನು ಪೂರ್ಣಗೊಳಿಸಿದ ನಂತರ ಸಿಎ ಫೌಂಡೇಶನ್ ಕೋರ್ಸಿಗೆ ಪ್ರವೇಶವನ್ನು ಪಡೆಯಬಹುದಾಗಿರುತ್ತದೆ

ಸಿಎ ಕೊರ್ಸಿನಲ್ಲಿ ಮುಖ್ಯವಾಗಿAccounting, Auditing, Corporate Laws, Income Tax, GST, Cost Management, Financial Management ಹಾಗೂ Business Ethics ಮುಂತಾದ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ ಇದರ ಜೊತೆಯಲ್ಲಿ Articleship Training ಕೂಡ ಕಡ್ಡಾಯವಾಗಿ ಇರುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ನೈಜ ಕೆಲಸಗಳ ಅನುಭವ ಸಿಗುವುದರ ಜೊತೆಯಲ್ಲಿ ಉದ್ಯೋಗ ಕ್ಷೇತ್ರಕ್ಕೆ ಹೊಂದಿಕೊಳ್ಳುವ ಅವಕಾಶಗಳು ಸಹ ಸುಲಭವಾಗುತ್ತವೆ

ಸಿಎ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ Chartered Accountant, Tax Consultant, Internal Auditor, Financial Advisor, Investment Consultant, Chief Financial Officer (CFO) ಸೇರಿದಂತೆ ಅನೇಕ ರೀತಿಯ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳಲ್ಲಿಯೂ ಸಹ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ

ಸಿಎ ಕೋರ್ಸ್ ಒಂದು ಸವಾಲಿನ ವೃತ್ತಿಪರ ಕೋರ್ಸ್ ಆಗಿದ್ದರೂ ಸಹ ಉತ್ತಮ ಪರಿಶ್ರಮ ಸಮಯ ನಿರ್ವಹಣೆ ಮತ್ತು ನಿರಂತರ ಅಭ್ಯಾಸದಿಂದ ಯಶಸ್ಸನ್ನು ಸಾಧಿಸಬಹುದಾಗಿರುತ್ತದೆ ಅನುಭವ ಹೆಚ್ಚಾದಂತೆ ಸಂಬಳವೂ ಸಹ ಗಮನಾರ್ಹವಾಗಿ ಹೆಚ್ಚಾಗುತ್ತೆ ಸ್ವಂತ ಸಿಎ ಪ್ರಾಕ್ಟೀಸ್ ಆರಂಭಿಸುವ ಅವಕಾಶ ಇರುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ರೀತಿಯ ಆದಾಯವನ್ನು ಗಳಿಸಬಹುದಾಗಿರುತ್ತದೆ

CS (Company Secretary)

ಕಂಪನಿ ಸೆಕ್ರೆಟರಿ (ಸಿಎಸ್) ಕೋರ್ಸ್ ನಲ್ಲಿ ಕಂಪನಿಗಳ ಆಡಳಿತ ಕಾನೂನು ಮತ್ತು ಕಾರ್ಪೊರೇಟ್ ಆಡಳಿತದ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ನಿರ್ಮಿಸಲು ಬಯಸುವ ಅಭ್ಯರ್ಥಿಗಳಿಗೆ ಸೂಕ್ತವಾದ ಕೋರ್ಸ್ ಆಗಿದೆ ಭಾರತದಲ್ಲಿ ಈ ಕೋರ್ಸ್ ಅನ್ನು Institute of Company Secretaries of India (ICSI) ಸಂಸ್ಥೆಯು ನಡೆಸುತ್ತದೆ PUC Commerce ನಂತರ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ಪಡೆಯಬಹುದಾಗಿರುತ್ತದೆ

ಈ ಕೋರ್ಸಿನಲ್ಲಿ Company Law, Corporate Governance, Business Communication, Securities Law, Tax Laws, Corporate Compliance ಹಾಗೂ Secretarial Practice ಮುಂತಾದ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ ಕಂಪನಿಯ ಎಲ್ಲಾ ಕಾನೂನು ನಿಯಮಗಳನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲಿಸಲಾಗುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ಜವಾಬ್ದಾರಿ ಕಂಪನಿ ಸೆಕ್ರೆಟರಿ ಅವರದಾಗಿರುತ್ತದೆ

ಸಿಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ Listed Companies, ಖಾಸಗಿ ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಕಾನೂನು ಸಲಹಾ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಯ ಉದ್ಯೋಗಗಳನ್ನು ಪಡೆಯಬಹುದಾಗಿರುತ್ತದೆ Compliance Officer, Corporate Legal Advisor, Company Secretary, Governance Consultant ಮುಂತಾದ ಹುದ್ದೆಗಳಲ್ಲಿ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ

ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅರ್ಹ ಕಂಪನಿ ಸೆಕ್ರೆಟರಿಗಳ ಬೇಡಿಕೆಯು ಸಹ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ ಕಾನೂನು ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ PUC Commerce ವಿದ್ಯಾರ್ಥಿಗಳು ಒಂದು ಉತ್ತಮ ಮತ್ತು ಗೌರವಾನ್ವಿತ ವೃತ್ತಿ ರೂಪಿಸಿಕೊಳ್ಳುವ ಆಯ್ಕೆಯಾಗಿದೆ

CMA (Cost & Management Accountant)

ಕಾಸ್ಟ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ (ಸಿಎಂಎ) ಕೋರ್ಸ್ ಒಂದು ನಿಗದಿತ ಸಂಸ್ಥೆಯ ವೆಚ್ಚ ನಿಯಂತ್ರಣ ಹಣಕಾಸು ಯೋಜನೆ ಮತ್ತು ಲಾಭದ ಮಟ್ಟವನ್ನು ಹೆಚ್ಚಿಸುವ ಕಾರ್ಯಗಳಲ್ಲಿ ಪರಿಣಿತಿಯನ್ನು ನೀಡುವ ಅಧ್ಯಯನವನ್ನು ಇಲ್ಲಿ ಮಾಡಲಾಗುತ್ತದೆ ಈ ಕೋರ್ಸ್ ಅನ್ನು Institute of Cost Accountants of India (ICMAI) ನಡೆಸುತ್ತದೆ PUC Commerce ನಂತರದಲ್ಲಿ ಫೌಂಡೇಶನ್ ಹಂತದಿಂದ ಈ ಕೋರ್ಸ್ ಅನ್ನು ಆರಂಭಿಸಬಹುದಾಗಿರುತ್ತದೆ

ಸಿಎಂಎ ಕೋರ್ಸ್ ನಲ್ಲಿ ost Accounting, Financial Accounting, Direct & Indirect Taxation, Financial Management, Cost Audit, Strategic Management ಹಾಗೂ Performance Management ಮುಂತಾದ ವಿಷಯಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಲಾಗುತ್ತದೆ ಈ ಕೋರ್ಸಿಗೆ ಉತ್ಪಾದನಾ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ

CMA ಕೋರ್ಸ್ ಅನ್ನಪೂರ್ಣ ಗೊಳಿಸಿದ ನಂತರ Cost Accountant, Budget Analyst, Financial Controller, Cost Auditor, Management Accountant, Finance Manager ಹಾಗೂ Business Analyst ಹುದ್ದೆಗಳಲ್ಲಿ ಕೆಲಸ ಮಾಡಬಹುದಾಗಿರುತ್ತದೆ ಸಾರ್ವಜನಿಕ ವಲಯದ ಸಂಸ್ಥೆಗಳು ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳು ಖಾಸಗಿ ಉದ್ಯಮಗಳು ಮತ್ತು ಬಹಳಷ್ಟು ಕಂಪನಿಗಳಲ್ಲಿ ಉದ್ಯೋಗ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ

ಕಂಪನಿಯ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ತಜ್ಞರಿಗೆ ಇಂದಿನ ಉದ್ಯಮಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ ಆದುದರಿಂದ ಸಿಎಂಎ ಪದವೀಧರರಿಗೆ ಇದೊಂದು ಉತ್ತಮ ವೃತ್ತಿ ಬೆಳವಣಿಗೆ ಅವಕಾಶವಾಗಿದ್ದು ಇದರ ಜೊತೆಯಲ್ಲಿ ಆಕರ್ಷಕ ಸಂಬಳವೂ ಸಹ ದೊರೆಯುತ್ತದೆ ಸಿಎ ಮತ್ತು ಸಿಎಂಎ ಕೋರ್ಸ್ ಅನ್ನು ಒಟ್ಟಿಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಮತ್ತು ಅವಕಾಶಗಳಿರುತ್ತವೆ

BBM / BMS (Bachelor of Business Management (BBM) ಮತ್ತು Bachelor of Management Studies (BMS)

ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ಬ್ಯಾಚಲರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕೋರ್ಸುಗಳು ನಿರ್ದಿಷ್ಟ ಕಂಪನಿಯ ವ್ಯವಹಾರ ನಿರ್ವಹಣೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸಿರುವ ಸಲುವಾಗಿ ಇರುವ ಕೋರ್ಸುಗಳಾಗಿದ್ದು ಕೆಲವು ವಿಶ್ವವಿದ್ಯಾಲಯಗಳು ಬಿಬಿಎಂ ಕೋರ್ಸನ್ನು ನೀಡಿದರೆ ಕೆಲವು ವಿದ್ಯಾ ಸಂಸ್ಥೆಗಳು ಬಿಎಮ್ಎಸ್ ಕೋರ್ಸ್ ಅನ್ನು ನೀಡುತ್ತವೆ. ಈ ಎರಡು ಕೋರ್ಸ್ಗಳ ಉದ್ದೇಶವು ವಿದ್ಯಾರ್ಥಿಗಳನ್ನು ನಿರ್ವಹಣಾ ಕ್ಷೇತ್ರಕ್ಕೆ ಸಿದ್ಧಗೊಳಿಸುವುದಾಗಿರುವುದರಿಂದ ಎರಡು ಕೋರ್ಸ್ ಗೂ ಸಮಾನ ಆದ್ಯತೆ ಇದೆ

ಈ ಕೋರ್ಸುಗಳಲ್ಲಿ Marketing, Human Resource Management, Business Communication, Finance, Entrepreneurship, Organizational Behaviour, Business Statistics ಮುಂತಾದ ವಿಷಯಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ ಈ ಕೋರ್ಸಿನ ವಿದ್ಯಾರ್ಥಿಗಳಲ್ಲಿ ತಂಡದ ನಿರ್ವಹಣೆ ನಾಯಕತ್ವ ವ್ಯವಹಾರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಉತ್ತಮ ರೀತಿಯ ಅಧ್ಯಯನವನ್ನು ಕೈಗೊಳ್ಳಲಾಗುತ್ತದೆ

ಬಿಬಿಎಂ ಅಥವಾ ಬಿಎಮ್ಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ Marketing Executive, HR Executive, Operations Executive, Business Development Executive, Sales Manager, Project Coordinator ಮುಂತಾದ ಹುದ್ದೆಗಳಲ್ಲಿ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದಾಗಿರುತ್ತದೆ ಹಿರಿಯ ಶ್ರೇಣಿಯ ನಿರ್ವಹಣಾ ಹುದ್ದೆಗಳನ್ನು ಅವಕಾಶಗಳನ್ನು ಹೆಚ್ಚಿಸಿಕೊಳ್ಳಬಹುದು

ಸ್ಟಾರ್ಟ್ ಅಪ್ ಗಳನ್ನು ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಕೋರ್ಸ್ ಉಪಯುಕ್ತವಾಗಿದ್ದು ಪ್ರಾಜೆಕ್ಟ್ ವರ್ಕ್, ಇಂಟರ್ನ್‌ ಶಿಪ್‌, ಇಂಟರ್ನ್ಯಾಷನಲ್ ಮತ್ತು ಇಂಡಸ್ಟ್ರಿಯಲ್ ಟ್ರೈನಿಂಗ್ ಮೂಲಕ ಪ್ರಯೋಗಿಕ ಅನುಭವವನ್ನು ಪಡೆದು ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ

BA Economics

ಅರ್ಥಶಾಸ್ತ್ರ ವಿಭಾಗದಲ್ಲಿ ಆಸಕ್ತಿಯನ್ನು ಹೊಂದಿರುವ ಕಾಮರ್ಸ್ ವಿದ್ಯಾರ್ಥಿಗಳಿಗೆ ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಎಕನಾಮಿಕ್ಸ್ ಅತ್ಯುತ್ತಮ ಆಯ್ಕೆಯಾಗಿದೆ ಈ ಕೋರ್ಸ್ ಅನ್ನು ಓದುವುದರಿಂದ ದೇಶದ ಆರ್ಥಿಕತೆ ಮಾರುಕಟ್ಟೆ ವ್ಯವಸ್ಥೆ, ಸಾರ್ವಜನಿಕ ಹಣಕಾಸು ಬ್ಯಾಂಕಿಂಗ್ ಮತ್ತು ಆರ್ಥಿಕ ನೀತಿಯ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಳ್ಳಬಹುದು

ಈ ಕೋರ್ಸಿನಲ್ಲಿ Micro Economics, Macro Economics, Public Finance, International Economics, Statistics, Econometrics, Development Economics ಹಾಗೂ Indian Economic System ಕುರಿತು ಹಲವು ಪ್ರಮುಖ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ ಮಾಹಿತಿ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯ ಮತ್ತು ವಿಶ್ಲೇಷಣಾತ್ಮಕ ಚಿಂತನೆಗಳ ಬಗ್ಗೆ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದುತ್ತಾರೆ

ಬಿಎ ಎಕನಾಮಿಕ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ಬ್ಯಾಂಕುಗಳು ಸರ್ಕಾರಿ ಇಲಾಖೆಗಳು ಹಣಕಾಸು ಸಂಸ್ಥೆಗಳು ಸಂಶೋಧನಾ ಸಂಸ್ಥೆಗಳು ನೀತಿ ಸಂಶೋಧನಾ ಕೇಂದ್ರಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ ಕೆಲಸ ಮಾಡಬಹುದಾಗಿರುತ್ತದೆ. Economic Analyst, Research Assistant, Banking Officer, Policy Analyst, Data Research Executive ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ.

ಮುಂದುವರೆದು MA Economics, MBA, UPSC, KPSC, RBI, NABARD ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಈ ಕೋರ್ಸ್ ಉತ್ತಮ ಅಡಿಪಾಯವನ್ನು ಒದಗಿಸುವುದರ ಜೊತೆಯಲ್ಲಿ ಆರ್ಥಿಕ ವಿಶ್ಲೇಷಣೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಭವಿಷ್ಯದಲ್ಲಿ ಉತ್ತಮ ರೀತಿಯ ವೃತ್ತಿಯ ಅವಕಾಶಗಳನ್ನು ನೀಡುತ್ತದೆ

PUC Commerce ನಂತರ ಉದ್ಯೋಗ ಖಾತರಿಯುಳ್ಳ ಆಧುನಿಕ ಕೋರ್ಸ್‌ಗಳು

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಹಳೆಯ ಮತ್ತು ಸಾಂಪ್ರದಾಯಿಕ ಕೋರ್ಸ್ ಗಳನ್ನು ಮಾಡುವುದಷ್ಟೇ ಅಲ್ಲದೆ ಕೌಶಲ್ಯ ಆಧಾರಿತ ಮತ್ತು ಉದ್ಯಮದ ಬೇಡಿಕೆಗೆ ಅನುಗುಣವಾದ ಕೋರ್ಸುಗಳಿಗೂ ಸಹ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಮಾಹಿತಿ ವಿಶ್ಲೇಷಣೆ, ಡಿಜಿಟಲ್ ತಂತ್ರಜ್ಞಾನ ಮತ್ತು ಕಾನೂನು ಕ್ಷೇತ್ರಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭ್ಯವಿದೆ. PUC Commerce ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಹೊಂದಿಕೊಂಡಂತೆ ಈ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದಾಗಿರುತ್ತದೆ.

Hotel Management

ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ನಿರ್ಮಿಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ ಭಾರತದಲ್ಲಿ ದಿನೇ ದಿನೇ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ ಪ್ರವಾಸೋದ್ಯಮ ಹೋಟೆಲ್ ಉದ್ಯಮ ಹಾಗೂ ಆಹಾರ ಸೇವಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ವಿಶೇಷ ಜ್ಞಾನ ಮತ್ತು ಪರಿಣಿತಿ ಹೊಂದಿರುವ ವೃತ್ತಿ ಪರರಿಗೆ ಹೆಚ್ಚಿನ ಬೇಡಿಕೆ ಇದೆ. PUC Commerce ನಂತರ ವಿದ್ಯಾರ್ಥಿಗಳು ಬ್ಯಾಚುಲರ್‌ ಇನ್ ಹೋಟೆಲ್ ಮ್ಯಾನೇಜ್ಮೆಂಟ್‌, ಬಿ ಎಸ್ ಸಿ ಹಾಸ್ಪಿಟಾಲಿಟಿ, ಅಥವಾ ಡಿಪ್ಲೋಮಾ ಇನ್ ಹೋಟೆಲ್ ಮ್ಯಾನೇಜ್ಮೆಂಟ್ ಮುಂತಾದ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ

ಈ ಕೋರ್ಸಿನಲ್ಲಿ Front Office Management, Food Production, Food & Beverage Service, Housekeeping, Hospitality Marketing, Event Hospitality, Customer Relationship Management ಹಾಗೂ Hotel Operations ಮುಂತಾದ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ ಜೊತೆಗೆ ಅತಿಥಿಗಳೊಂದಿಗೆ ವೃತ್ತಿಪರವಾಗಿ ವರ್ತಿಸುವುದು‌, ತಂಡವನ್ನು ನಿರ್ವಹಿಸುವ ಕೌಶಲ್ಯ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ

ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಐಷಾರಾಮಿ ಹೋಟೆಲ್ ಗಳಲ್ಲಿ, ಕ್ರೂಸ್ ಗಳಲ್ಲಿ, ರೆಸಾರ್ಟ್ ಗಳಲ್ಲಿ, ರೆಸ್ಟೋರೆಂಟ್ ಸರಪಳಿಗಳು, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹಾಗೂ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ. Hotel Manager, Front Office Executive, Restaurant Manager, Food Production Manager, Guest Relations Officer, Catering Manager ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡಬಹುದಾಗಿರುತ್ತದೆ

ಇಂಗ್ಲಿಷ್ ಭಾಷೆಯ ಸಂವಹನ ಕೌಶಲ್ಯ, ಗ್ರಾಹಕರ ಸೇವೆಗಳ ಮನೋಭಾವ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಮಹತ್ವ ಇರುವುದರಿಂದ ಈ ಕೌಶಲ್ಯಗಳನ್ನು ಬೆಳೆಸಿಕೊಂಡರೆ ವಿದೇಶಗಳಲ್ಲಿಯೂ ಸಹ ಉತ್ತಮ ಸಂಬಳವನ್ನು ಪಡೆಯಬಹುದಾದ ಉದ್ಯೋಗಗಳನ್ನು ಕೊಲ್ಲಬಹುದು

Digital Marketing

ಇಂದಿನ ಮುಂದುವರೆಯುತ್ತಿರುವ ಡಿಜಿಟಲ್ ಯುಗದಲ್ಲಿ ಅತ್ಯಂತ ಬೇಡಿಕೆಯ ವೃತ್ತಿಪರ ಕೋರ್ಸ್ ಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೂಡ ಒಂದಾಗಿದೆ ಪ್ರತಿಯೊಂದು ಸಣ್ಣ ಮಟ್ಟದಿಂದ ದೊಡ್ಡ ಮಟ್ಟದವರೆಗೂ ವ್ಯವಹಾರವು ಆನ್ಲೈನ್ ಮೂಲಕ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿರುವುದರಿಂದ ಡಿಜಿಟಲ್ ಮಾರ್ಕೆಟಿಂಗ್ ತಜ್ಞರ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ PUC Commerce ವಿದ್ಯಾರ್ಥಿಗಳಿಗೆ ವ್ಯವಹಾರ ಮತ್ತು ಮಾರುಕಟ್ಟೆ ಬಗ್ಗೆ ಈಗಾಗಲೇ ಮೂಲಭೂತ ಜ್ಞಾನ ಇರುವುದರಿಂದ ಈ ಕ್ಷೇತ್ರದಲ್ಲಿ ಅವರು ಉತ್ತಮ ರೀತಿ ಯಶಸ್ಸು ಮತ್ತು ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದಾಗಿರುತ್ತದೆ

ಈ ಕೋರ್ಸಿನಲ್ಲಿSearch Engine Optimization (SEO), Search Engine Marketing (SEM), Social Media Marketing, Content Marketing, Email Marketing, Google Ads, Meta Ads, YouTube Marketing, Affiliate Marketing ಹಾಗೂ Web Analytics ಕುರಿತು ತರಬೇತಿ ನೀಡಲಾಗುತ್ತದೆ ಇದರ ಜೊತೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧಾರಿತ ಮಾರುಕಟ್ಟೆ ಉಪಕರಣಗಳ ಬಗ್ಗೆ ಜ್ಞಾನವನ್ನು ನೀಡಲಾಗುತ್ತದೆ

ಈ ಕೋರ್ಸು ಪೂರ್ಣಗೊಂಡ ನಂತರ Digital Marketing Executive, SEO Analyst, Social Media Manager, Content Strategist, Performance Marketing Specialist, PPC Expert, Brand Manager ಮುಂತಾದ ಕೆಲಸಗಳಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬಹುದಾಗಿರುತ್ತದೆ ಸ್ವಂತವಾಗಿ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ ಆರಂಭಿಸುವುದು ಅಥವಾ ಫ್ರೀ ಲಾನ್ಸಿಂಗ್ ಮಾಡುವ ಅವಕಾಶಗಳು ಸಹ ದೊರೆಯುತ್ತವೆ

Google, Meta, HubSpot, Canva, WordPress, Google Analytics ಮುಂತಾದ ಸಾಧನಗಳಲ್ಲಿ ಪರಿಣಿತಿಯನ್ನು ಹೊಂದಿದ್ದರೆ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚಾಗುತ್ತದೆ ಮತ್ತು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಕಲಿತು ದಿನದಿಂದ ದಿನಕ್ಕೆ ಅಳವಡಿಸಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆದು ಪ್ರತಿ ಜೀವನವನ್ನು ನಿರ್ಮಿಸಿಕೊಳ್ಳಬಹುದಾಗಿರುತ್ತದೆ.

Data Analytics

ಡಾಟಾ ಅನಲಿಟಿಕ್ಸ್ ಕ್ಷೇತ್ರವು ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಂತ ವೇಗವಾಗಿ ಮತ್ತು ಹೆಚ್ಚಿನ ಬೇಡಿಕೆಯಿಂದ ಇರುವ ಕೋರ್ಸ್ ಆಗಿದೆ ಪ್ರತಿಷ್ಠಿತ ಕಂಪೆನಿಗಳು ತಮ್ಮ ವ್ಯವಹಾರ ನಿರ್ಧಾರಗಳನ್ನು ಮಾಹಿತಿ ಆಧಾರದ ಮೇಲೆ ತೆಗೆದುಕೊಳ್ಳುತ್ತಿರುವುದರಿಂದ ಡಾಟಾ ಅನಲಿಟಿಕ್ಸ್ ನಲ್ಲಿ ಹೆಚ್ಚಿನ ಬೇಡಿಕೆ ಇದೆ ಅಂಕಿ ಅಂಶಗಳ ವಿಶ್ಲೇಷಣೆ ಮತ್ತು ಸಮಸ್ಯೆಯನ್ನು ಪರಿಹರಿಸುವಲ್ಲಿ ಆಸಕ್ತಿಯನ್ನು ಹೊಂದಿರುವ ‌PUC Commerce ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೃತ್ತಿ ಆಯ್ಕೆಯಾಗಿದೆ

ಈ ಕೋರ್ಸಿನಲ್ಲಿ Microsoft Excel, SQL, Power BI, Tableau, Python, Statistics, Data Visualization, Business Intelligence ಹಾಗೂ ಡೇಟಾ ವಿಶ್ಲೇಷಣೆಯ ಹಲವು ವಿಧಾನಗಳನ್ನು ಅಧ್ಯಯನ ಮಾಡಲಾಗುತ್ತದೆ ದೊಡ್ಡ ಪ್ರಮಾಣದ ಮಾಹಿತಿಗಳನ್ನು ವಿಶ್ಲೇಷಣೆ ಮಾಡುವ ಮೂಲಕ ಸಂಸ್ಥೆಗಳಿಗೆ ಉಪಯುಕ್ತವಾದ ವರದಿಗಳನ್ನು ಸಿದ್ಧಪಡಿಸುವ ಕೌಶಲ್ಯ ಹಾಗೂ ವರದಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾರೆ

ಈ ಕೋರ್ಸ್ ಪೂರ್ಣಗೊಂಡ ನಂತರ Data Analyst, Business Analyst, MIS Executive, Reporting Analyst, Financial Data Analyst, Business Intelligence Executive ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡಬಹುದಾಗಿರುತ್ತದೆ.  ಇ ಕಾಮರ್ಸ್ ಸಂಸ್ಥೆಗಳು, ಐಟಿ ಕಂಪನಿಗಳು, ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ

Data Analytics ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಲಾಜಿಕಲ್ ಥಿಂಕಿಂಗ್, ಗಣಿತದ ಮೂಲಭೂತ ಜ್ಞಾನ, ಕಂಪ್ಯೂಟರ್ ಕೌಶಲ್ಯ ಹಾಗೂ ನಿರಂತರ ಅಭ್ಯಾಸವು ಅತ್ಯಗತ್ಯವಾಗಿದೆ ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ಕ್ಷೇತ್ರಗಳ ಬೆಳವಣಿಗೆಯೊಂದಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಘಾತ ಪ್ರಮಾಣದಲ್ಲಿ ಹೆಚ್ಚುವ ನಿರೀಕ್ಷೆ ಇದೆ.

Banking & Finance Courses

ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ನಿರ್ಮಿಸಲು ಬಯಸುವ PUC Commerce ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಕೋರ್ಸ್ ಗಳು ಅತ್ಯುತ್ತಮ ಆಯ್ಕೆಯಾಗಿವೆ. ಬ್ಯಾಂಕಿಂಗ್ ಉದ್ಯಮವು ಭಾರತದಲ್ಲಿ ನಿರಂತರವಾಗಿ ವಿಸ್ತರಣೆಗೊಳ್ಳುತ್ತಿದ್ದು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ವಿಶೇಷ ಜ್ಞಾನ ಮತ್ತು ಪರಿಣಿತಿಯನ್ನು ಹೊಂದಿರುವ ಸಿಬ್ಬಂದಿಗಳಿಗೆ ಸಹ ಬೇಡಿಕೆ ಹೆಚ್ಚಾಗುತ್ತದೆ ಬಿಕಾಂ ಜೊತೆಯಲ್ಲಿ ಬ್ಯಾಂಕಿಂಗ್ ಮತ್ತು ಫೈನಾನ್ಸ್ ನಲ್ಲಿ ವಿಶೇಷ ಕೋರ್ಸ್ ಅಥವಾ ಪ್ರಮಾಣ ಪತ್ರಗಳನ್ನು ಪಡೆದರೆ ಉತ್ತಮ ರೀತಿಯ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ ಮತ್ತು ಬಡ್ತಿ ಹೊಂದುವ ಅವಕಾಶಗಳನ್ನು ಹೆಚ್ಚಿಸುತ್ತದೆ

ಈ ಕೋರ್ಸಿನಲ್ಲಿ Banking Operations, Financial Markets, Investment Management, Insurance, Risk Management, Mutual Funds, Retail Banking, Corporate Banking ಹಾಗೂ Financial Planning ಮುಂತಾದ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ ಇದರ ಜೊತೆಯಲ್ಲಿ ಆರ್‌ ಬಿ ಐ ನಿಯಮಗಳು ಫಿನ್‌ ಟೆಕ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಲಾಗುತ್ತದೆ

ಈ ಕೋರ್ಸ್ ಪೂರ್ಣಗೊಂಡ ನಂತರ ಬ್ಯಾಂಕುಗಳು ಎನ್ ಬಿ ಎಫ್ ಸಿ ಗಳು, ಷೇರು ಮಾರುಕಟ್ಟೆ ಸಂಸ್ಥೆಗಳು, ವಿಮಾ ಸಂಸ್ಥೆಗಳು, ಮ್ಯೂಚುಯಲ್ ಫಂಡ್ ಕಂಪನಿಗಳು, ಹಣಕಾಸು ಸಲಹಾ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ Banking Officer, Relationship Manager, Loan Officer, Financial Advisor, Investment Executive, Credit Analyst ಮುಂತಾದ ಹುದ್ದೆಗಳಲ್ಲಿ ಕೆಲಸವನ್ನು ನಿರ್ವಹಿಸಬಹುದಾಗಿರುತ್ತದೆ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂದು ಬಯಸುವ ವಿದ್ಯಾರ್ಥಿಗಳು IBPS, SBI, RBI, NABARD ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಬಹುದಾಗಿರುತ್ತದೆ ಹಣಕಾಸು ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ತಂತ್ರಜ್ಞಾನಗಳು ಮತ್ತು ಸಂಶೋಧನೆಗಳು ಅಳವಡಿಕೆ ಆಗುತ್ತಿರುವುದರಿಂದ ಡಿಜಿಟಲ್ ಬ್ಯಾಂಕಿಂಗ್ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯುತ್ತಮವಾಗಿದೆ

Law (Integrated B.Com LLB / BBA LLB)

ಕಾನೂನು ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ PUC Commerce ವಿದ್ಯಾರ್ಥಿಗಳಿಗೆ ಇಂಟಿಗ್ರೇಟೆಡ್ ಬಿಕಾಂ ಎಲ್ ಎಲ್ ಬಿ ಅಥವಾ ಬಿಬಿಎ ಎಲ್‌ ಎಲ್ ಬಿ  ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ ಈ ಕೋರ್ಸ್ಗಳು ಸಾಮಾನ್ಯವಾಗಿ ಐದು ವರ್ಷಗಳ ಅವಧಿಯನ್ನು ಹೊಂದಿದ್ದು ಪದವಿ ಹಾಗೂ ಕಾನೂನು ಶಿಕ್ಷಣವನ್ನು ಒಂದೇ ಕೋರ್ಸಿನ ಅಡಿಯಲ್ಲಿ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ ವ್ಯಾಪಾರ ಕಾನೂನು, ತೆರಿಗೆ ಕಾನೂನು ಮತ್ತು ಕಾರ್ಪೊರೇಟ್ ಕಾನೂನುಗಳಲ್ಲಿ ಪರಿಣಿತಿ ಪಡೆಯಲು ಸಹಾಯಕವಾಗಿದೆ

ಈ ಕೋರ್ಸಿನಲ್ಲಿ Constitutional Law, Corporate Law, Business Law, Contract Law, Taxation Law, Intellectual Property Law, Labour Law ಹಾಗೂ Legal Drafting ಮುಂತಾದ ವಿಷಯಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನ ಮಾಡಲಾಗುತ್ತದೆ ಕಾನೂನು ಸಂಶೋಧನೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಸಹ ನೀಡಲಾಗುತ್ತದೆ

ಈ ಕೋರ್ಸ್ ಪೂರ್ಣಗೊಂಡ ನಂತರ Advocate, Corporate Lawyer, Legal Advisor, Compliance Officer, Legal Consultant, Tax Law Specialist, Company Legal Officer ಮುಂತಾದ ಹುದ್ದೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ ಕಾನೂನು ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕುಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸಹ ಪಡೆಯಬಹುದಾಗಿರುತ್ತದೆ

ನ್ಯಾಯಾಂಗ ಸೇವೆಗಳು, ನ್ಯಾಯಾಧೀಶರ ಪರೀಕ್ಷೆಗಳು, ಕಾನೂನು ಸಲಹೆಗಳು ಮತ್ತು ಕಾರ್ಪೊರೇಟ್ ಕಾನೂನು ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸು ಅತ್ಯುತ್ತಮ ಆಯ್ಕೆಯಾಗಿದ್ದು ಉತ್ತಮ ರೀತಿಯ ಭವಿಷ್ಯವನ್ನು ಸಹ ಒದಗಿಸುತ್ತದೆ ಉತ್ತಮ ರೀತಿಯ ಸಂವಹನ ಕೌಶಲ್ಯ ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಉತ್ತಮ ರೀತಿಯ ಕಾನೂನು ಜ್ಞಾನವನ್ನು ಹೊಂದುವುದರಿಂದ ಈ ಕ್ಷೇತ್ರದಲ್ಲಿ ದೀರ್ಘಕಾಲಿಕ ಯಶಸ್ಸನ್ನು ಪಡೆಯಬಹುದಾಗಿರುತ್ತದೆ

PUC Commerce ನಂತರ ಹೊಸ ತಲೆಮಾರಿನ ಕೋರ್ಸ್‌ ಗಳು ಮತ್ತು ಹೆಚ್ಚಿನ ಸಂಬಳದ ವೃತ್ತಿ ಅವಕಾಶಗಳು

ಇಂದಿನ ಅಭಿವೃದ್ಧಿ ಹೊಂದುತ್ತಿರುವ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಪದವಿ ಮಾತ್ರವಲ್ಲದೇ ವಿಶೇಷ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ವಿಮಾನಯಾನ, ಇವೆಂಟ್ ಮ್ಯಾನೇಜ್ಮೆಂಟ್, ವಿದೇಶಿ ಭಾಷೆಗಳು, ಸರ್ಕಾರಿ ಉದ್ಯೋಗಗಳಿಗೆ ಸಿದ್ಧತೆ ಮಾಡುವುದು ಹಾಗೂ ಹೆಚ್ಚಿನ ಸಂಬಳವನ್ನು ನೀಡುವ ವೃತ್ತಿಪರ ಕೋರ್ಸ್ ಗಳನ್ನು PUC Commerce ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಭವಿಷ್ಯವನ್ನು ನಿರ್ಮಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ ಆಸಕ್ತಿ ಸಾಮರ್ಥ್ಯ ಮತ್ತು ದೀರ್ಘಾವಧಿಯಲ್ಲಿ ವೃತ್ತಿ ಜೀವನವನ್ನು ಆಧರಿಸಿ ಸರಿಯಾದ ಆಯ್ಕೆ ಮಾಡಿದರೆ ಉತ್ತಮ ಉದ್ಯೋಗದ ಜೊತೆಯಲ್ಲಿ ಆರ್ಥಿಕ ಸದೃಢತೆಯನ್ನು ಸಹ ನಿರ್ಮಿಸಿಕೊಳ್ಳಬಹುದಾಗಿದೆ

Aviation Courses

ವಿಮಾನಯಾನ ಕ್ಷೇತ್ರವು ಭಾರತದಲ್ಲಿ ವೇಗವಾಗಿ ಮತ್ತು ಉತ್ತಮವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ ಹೊಸ ವಿಮಾನ ನಿಲ್ದಾಣಗಳು, ದೇಶಿ ಮತ್ತು ವಿದೇಶಿ ಅಂತರಾಷ್ಟ್ರೀಯ ವಿಮಾನ ಸೇವೆಗಳ ವಿಸ್ತರಣೆಯು ಹಾಗೂ ಪ್ರವಾಸೋದ್ಯಮ ಬೆಳವಣಿಗೆಯಿಂದ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಹೆಚ್ಚುತ್ತಿವೆ PUC Commerce ಕೋರ್ಸಿನ ನಂತರ ವಿದ್ಯಾರ್ಥಿಗಳು Aviation Management, Airport Management, Cabin Crew Training, Ground Staff Management ಹಾಗೂ Airline Management ಮುಂತಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ

ಈ ಕೋರ್ಸಿನಲ್ಲಿ Airport Operations, Airline Management, Customer Service, Aviation Safety, Cargo Management, Travel & Tourism, Passenger Handling ಹಾಗೂ Communication Skills ಬಗ್ಗೆ ಉತ್ತಮ ರೀತಿಯಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಉತ್ತಮವಾಗಿ ಮತ್ತು ಸಮರ್ಥವಾಗಿ ನಿರ್ವಹಣೆ ಮಾಡುವುದು ಹಾಗೂ ಸುರಕ್ಷತ ನಿಯಮಗಳನ್ನು ಕಡ್ಡಾಯವಾಗಿ ಮತ್ತು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ಇಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ

ಈ ಕೋರ್ಸು ಮುಗಿದ ನಂತರ Airport Executive, Ground Staff Officer, Cabin Crew, Customer Service Executive, Cargo Executive, Airline Operations Executive ಹಾಗೂ Airport Manager ಹುದ್ದೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲಿ ಖಾಸಗಿ ವಿಮಾನ ನಿಲ್ದಾಣಗಳಲ್ಲಿ ಹಾಗೂ ಟ್ರಾವೆಲ್ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ

ಇಂಗ್ಲಿಷ್ ಭಾಷೆಯ ಜ್ಞಾನ, ಉತ್ತಮ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಮತ್ತು ಗ್ರಾಹಕರೊಂದಿಗೆ ಉತ್ತಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳುವುದರಿಂದ ಈ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದಾಗಿರುತ್ತದೆ ವಿದೇಶಗಳಲ್ಲಿಯೂ ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದೆ

Event Management

ಇಂದಿನ ದಿನಗಳಲ್ಲಿ ಮದುವೆಗಳು, ಸಂಗೀತ ಉತ್ಸವಗಳು, ಪ್ರದರ್ಶನಗಳು, ಕಾರ್ಪೊರೇಟ್ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳು ಹೆಚ್ಚುತ್ತಿರುವುದರಿಂದ ಇವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು, ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿರ್ವಹಿಸುವುದು ಮತ್ತು ಸೃಜನಶೀಲತೆಯನ್ನು ಬಳಸಲು ಇಷ್ಟಪಡುವ PUC Commerce ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೃತ್ತಿ ಅವಕಾಶವಾಗಿದೆ

ಈ ಕೋರ್ಸಿನಲ್ಲಿ Event Planning, Budget Management, Client Management, Marketing, Sponsorship Management, Public Relations, Logistics Management ಹಾಗೂ Event Promotion ವಿಷಯಗಳನ್ನು ಕೂಲಂಕುಶವಾಗಿ ಪ್ರಾಯೋಗಿಕ ಆಯಾಮಗಳಲ್ಲಿ ಅಧ್ಯಯನ ಮಾಡಲಾಗುತ್ತದೆ ಸಮಯ ನಿರ್ವಹಣೆ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಕೌಶಲ್ಯ ಹಾಗೂ ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯಗಳನ್ನು ಇಲ್ಲಿ ನೋಡಬಹುದಾಗಿರುತ್ತದೆ

ಈ ಕೋರ್ಸ್ ಪೂರ್ಣಗೊಂಡ ನಂತರ Event Manager, Wedding Planner, Corporate Event Coordinator, Exhibition Manager, Production Coordinator, Public Relations Executive ಹಾಗೂ Brand Promotion Executive ಹುದ್ದೆಗಳಲ್ಲಿ ಕೆಲಸ ಮಾಡಬಹುದಾಗಿರುತ್ತದೆ ಇದರ ಜೊತೆಯಲ್ಲಿ ಸ್ವಂತವಾಗಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಸಹ ಆರಂಭಿಸುವ ಅವಕಾಶಗಳನ್ನು ಕೊಂದಬಹುದಾಗಿರುತ್ತದೆ

ಈ ಕ್ಷೇತ್ರದಲ್ಲಿ ಅನುಭವ ಹೆಚ್ಚಾದಂತೆ ಆದಾಯವು ಸಹ ಹೆಚ್ಚಾಗುತ್ತದೆ ಉತ್ತಮ ರೀತಿಯಲ್ಲಿ ಜನರ ಸಂಪರ್ಕ ಬೆಳೆಸುವುದು, ಉತ್ತಮ ನೆಟ್ವರ್ಕ್ ಸಾಧಿಸುವುದು, ಸೃಜನಶೀಲತೆ ಮತ್ತು ಗ್ರಾಹಕರ ವಿಶ್ವಾಸವನ್ನು ಪಡೆದುಕೊಂಡರೆ ದೇಶದ ಪ್ರಮುಖ ಇವೆಂಟ್ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ

Foreign Language Courses

ಇಂದಿನ ಜಾಗತೀಕರಣ ಯುಗದಲ್ಲಿ ಸ್ವದೇಶಿ ಭಾಷೆಗಳ ಪ್ರಾಮುಖ್ಯತೆಯ ಜೊತೆಯಲ್ಲಿ ವಿದೇಶಿ ಭಾಷೆಗಳ ಜ್ಞಾನವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. PUC Commerce ವಿದ್ಯಾರ್ಥಿಗಳು ಪದವಿಯ ಜೊತೆಯಲ್ಲಿ ಜರ್ಮನ್, ಫ್ರೆಂಚ್, ಜಪಾನೀಸ್, ಫ್ಯಾನ್ಸ್, ಕೊರಿಯನ್ ಮತ್ತು ಚೈನೀಸ್ ಮುಂದಾದ ಭಾಷೆಗಳನ್ನು ಕಲಿತರೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಭಾಷೆ ಆಧಾರಿತ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ

ವಿದೇಶಿ ಭಾಷಾ ಕೋರ್ಸುಗಳಲ್ಲಿ ಓದುವುದು, ಬರೆಯುವುದು, ಮಾತನಾಡುವುದು, ವ್ಯಾಕರಣ, ಅನುವಾದ, ಕೌಶಲ್ಯ ಹಾಗೂ ವ್ಯವಹಾರಿಕ ಸಂವಹನದ ಬಗ್ಗೆ ತರಬೇತಿ ನೀಡಲಾಗುತ್ತದೆ ಅನೇಕ ವಿಶ್ವವಿದ್ಯಾಲಯಗಳು ಮತ್ತು ಮಾನ್ಯತೆಯನ್ನು ಪಡೆದಿರುವ ಭಾಷಾ ಸಂಸ್ಥೆಗಳು ಪ್ರಮಾಣ ಪತ್ರ ಡಿಪ್ಲೋಮಾ ಹಾಗೂ ಅಡ್ವಾನ್ಸ್ ಡಿಪ್ಲೋಮಾ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತವೆ

ಈ ಕೋರ್ಸುಗಳನ್ನು ಪೂರ್ಣಗೊಳಿಸಿದ ನಂತರ Translator, Interpreter, Language Trainer, International Customer Support Executive, Export-Import Executive, Tourism Guide ಹಾಗೂ MNC Communication Specialist ಹುದ್ದೆಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದಾಗಿರುತ್ತದೆ ವಿದೇಶಿ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುವ ಭಾರತೀಯ ಸಂಸ್ಥೆಗಳಲ್ಲಿಯೂ ಸಹ ಹೆಚ್ಚಿನ ಅವಕಾಶಗಳಿವೆ

ಎರಡು ಅಥವಾ ಮೂರು ವಿದೇಶಿ ಭಾಷೆಗಳಲ್ಲಿ ಉತ್ತಮ ರೀತಿಯ ಪರಿಣಿತಿಯನ್ನು ಪಡೆದರೆ ಸಂಬಳದ ಜೊತೆಗೆ ವಿದೇಶಗಳಲ್ಲಿ ಉದ್ಯೋಗ ಪಡೆಯುವ ಅವಕಾಶಗಳನ್ನು ಸಹ ಹೆಚ್ಚಿಸಿಕೊಳ್ಳಬಹುದು ಭಾಷೆಯ ಜೊತೆಗೆ ವ್ಯವಹಾರ ಸಂವಹನ ಜ್ಞಾನ ಮತ್ತು ಸಂಸ್ಕೃತಿಯನ್ನು ಕಲಿತುಕೊಂಡರೆ ಗುರುತಿ ಬೆಳವಣಿಗೆ ಇನ್ನಷ್ಟು ಉತ್ತಮವಾಗುತ್ತದೆ

Government Job Preparation

ಇಂದಿನ ಪ್ರಪಂಚದಲ್ಲಿ ಸರ್ಕಾರಿ ಉದ್ಯೋಗಗಳು ಉತ್ತಮ ವೇತನ, ಸ್ಥಿರತೆ, ನಿವೃತ್ತಿ ಸೌಲಭ್ಯ ಹಾಗೂ ಸಾಮಾಜಿಕ ಗೌರವವನ್ನು ನೀಡುವ ಕಾರಣ ಅನೇಕ PUC Commerce ವಿದ್ಯಾರ್ಥಿಗಳು ಮೊದಲು ಸರ್ಕಾರಿ ಉದ್ಯೋಗಕ್ಕೆ ತಯಾರಿಯನ್ನು ಮಾಡುತ್ತಾರೆ PUC Commerce ನಂತರ ಪದವಿ ವ್ಯಾಸಂಗದ ಜೊತೆಯಲ್ಲಿ ಸರಕಾರಿ ಉದ್ಯೋಗಗಳ ಪರೀಕ್ಷೆಗಳ ಸಿದ್ಧತೆಯನ್ನು ಆರಂಭಿಸಿದರೆ ಯಶಸ್ಸಿನ ಸಾಧ್ಯತೆ ಹೆಚ್ಚಾಗುತ್ತದೆ

PUC Commerce ವಿದ್ಯಾರ್ಥಿಗಳಿಗೆBanking Exams (IBPS, SBI, RBI), SSC, UPSC, KPSC, Railway Recruitment, Insurance Exams, Income Tax Department, Accounts Department ಸೇರಿದಂತೆ ಅನೇಕ ಸರ್ಕಾರಿ ಉದ್ಯೋಗಾವಕಾಶಗಳಿವೆ. ಅಕೌಂಟಿಂಗ್ ಮತ್ತು ಗಣಿತದ ಜ್ಞಾನ ಇರುವುದರಿಂದ ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ PUC Commerce ಜ್ಞಾನವು ಸಹಕಾರಿಯಾಗುತ್ತದೆ

ಸರ್ಕಾರಿ ಉದ್ಯೋಗಗಳಿಗೆ ಸಿದ್ಧತೆ ಮಾಡುವ ವೇಳೆಯಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ತಾರ್ಕಿಕ ಸಾಮರ್ಥ್ಯ, ಕನ್ನಡ ಹಾಗೂ ಇಂಗ್ಲಿಷ್ ಭಾಷಾಜ್ಞಾನ, ಕಂಪ್ಯೂಟರ್ ಜ್ಞಾನ ಹಾಗೂ ಗಣಿತ ಭಾಷೆಯ ವಿಷಯಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕಾಗುತ್ತದೆ ಪ್ರತಿದಿನವೂ ದಿನಪತ್ರಿಕೆ ಓದುವುದು ಮಾಕ್‌ ಟೆಸ್ಟ್ ತೆಗೆದುಕೊಳ್ಳುವುದು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಸರ್ಕಾರಿ ಉದ್ಯೋಗಗಳನ್ನು ಸುಲಭವಾಗಿ ಪಡೆಯಬಹುದಾಗಿರುತ್ತದೆ

ಸರಿಯಾದ ಸಮಯ ನಿರ್ವಹಣೆ ನಿರಂತರವಾಗಿ ಅಭ್ಯಾಸ ಮಾಡುವುದು ಮತ್ತು ಆತ್ಮವಿಶ್ವಾಸದಿಂದ ಇದ್ದರೆ ಸರ್ಕಾರಿ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ ಪದವಿಯ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರಿಂದ ಸಮಯ ಉಳಿತಾಯವಾಗುವುದರ ಜೊತೆಯಲ್ಲಿ ಪದವಿ ಮುಗಿದ ನಂತರವೇ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ

PUC‌ Commerce ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಬಳದ ಕೋರ್ಸ್‌ಗಳು

PUC Commerce ಕೋರ್ಸನ್ನು ಮುಗಿಸಿದ ನಂತರ ಯಾವ ಕೋರ್ಸನ್ನು ಆಯ್ಕೆ ಮಾಡಿದರೆ ಉತ್ತಮ ಸಂಬಳ ಸಿಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಬರುವುದು ಸಾಮಾನ್ಯವಾಗಿರುತ್ತದೆ ವಾಸ್ತವವಾಗಿ ಹೆಚ್ಚಿನ ಸಂಬಳವೂ ಕೇವಲ ಓದುವ ಕೋರ್ಸಿನ ಮೇಲೆ ಅವಲಂಬನೆ ಆಗಿರದೆ ವಿದ್ಯಾರ್ಥಿಗಳ ಕೌಶಲ್ಯ, ಅನುಭವ, ಸಂವಹನ ಸಾಮರ್ಥ್ಯ ಹಾಗೂ ನಿರಂತರ ಕಲಿಕೆಯ ಮನೋಭಾವವು ಸಹ ಪ್ರಮುಖವಾಗಿರುತ್ತದೆ ಆದರೂ ಕೆಲವು ಕೋರ್ಸುಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಉತ್ತಮ ಆದಾಯ ಗಳಿಸುವ ಅವಕಾಶಗಳಿವೆ

ಹೆಚ್ಚಿಗೆ ಸಂಬಳ ನೀಡುವ ಕೋರ್ಸ್ ಗಳಲ್ಲಿ CA (Chartered Accountant), CS (Company Secretary), CMA (Cost & Management Accountant), BBA + MBA, B.Com + MBA Finance, Data Analytics, Digital Marketing, Corporate Law (B.Com LLB / BBA LLB), Investment Banking, Financial Planning ಹಾಗೂ Business Analytics ಕೋರ್ಸುಗಳು ಪ್ರಮುಖವಾಗಿವೆ ಈ ಕೋರ್ಸುಗಳಲ್ಲಿ ಉತ್ತಮ ರೀತಿಯ ಪರಿಣಿತಿಯನ್ನು ಪಡೆದರೆ ಅಭ್ಯರ್ಥಿಗಳಿಗೆ ದೇಶದಲ್ಲಿ ಹಾಗೂ ವಿದೇಶದಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಹಾಗೂ ಇತರೆ ಹಣಕಾಸು ಕಂಪನಿಗಳಲ್ಲಿ ಉತ್ತಮ ರೀತಿಯ ಉದ್ಯೋಗಗಳು ದೊರೆಯುತ್ತವೆ

ಇದರ ಜೊತೆಗೆ Tally Prime, GST, SAP FICO, Advanced Excel, Power BI, SQL, Financial Modeling, Stock Market Analysis, AI Tools ಹಾಗೂ Business Communication ಮುಂತಾದ ಹೆಚ್ಚುವರಿ ಕೌಶಲ್ಯಗಳನ್ನು ಕಲಿತರೆ ಉದ್ಯೋಗಾವಕಾಶಗಳ ಪಡೆಯುವ ಸಾಧ್ಯತೆ ಇನ್ನಷ್ಟು ಹೆಚ್ಚಾಗುತ್ತದೆ ಇದರ ಜೊತೆಯಲ್ಲಿ ಹೆಚ್ಚುವರಿ ಕೌಶಲ್ಯಗಳನ್ನು ಕಲಿಯುವುದರ ಮೂಲಕ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚು ಮಟ್ಟದಲ್ಲಿ ಪಡೆದುಕೊಳ್ಳಬಹುದು ಇದರ ಜೊತೆಯಲ್ಲಿ Internship ಮತ್ತು Practical Experience ಅನುಭವಗಳ ಮೂಲಕ ಉದ್ಯಮದ ಅನುಭವವನ್ನು ಪಡೆದುಕೊಳ್ಳುವುದು ಸಹ ಪ್ರಮುಖವಾಗಿದೆ

ಯಾವುದೇ ಕೋರ್ಸನ್ನು ಆಯ್ಕೆ ಮಾಡಿದರು ಅದಕ್ಕೆ ಸಂಬಂಧಪಟ್ಟ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿ ಅಳವಡಿಸಿಕೊಂಡರೆ ಹೆಚ್ಚಿನ ಸಂಬಳ ಮತ್ತು ಉತ್ತಮ ವೃತ್ತಿ ಬೆಳವಣಿಗೆ ಸಾಧಿಸಲು ಸಹಕಾರಿಯಾಗುತ್ತದೆ

ಸರಿಯಾದ ಕಾಲೇಜು ಆಯ್ಕೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಲಹೆಗಳು ಮತ್ತು ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು

PUC Commerce ಕೋರ್ಸ್ ಮುಗಿದ ನಂತರ ಸರಿಯಾದ ಕೋರ್ಸ್ ಆಯ್ಕೆ ಮಾಡಿದರೆ ಯಶಸ್ಸು ಸಿಗುವುದಿಲ್ಲ ಇದರ ಜೊತೆಯಲ್ಲಿ ಉತ್ತಮ ಗುಣಮಟ್ಟವನ್ನು ಹೊಂದಿರುವ ಕಾಲೇಜನ್ನು ಹಾಗೂ ಉತ್ತಮ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಕಾಲೇಜನ್ನು ಸಹ ಆಯ್ಕೆ ಮಾಡಬೇಕಾಗುತ್ತದೆ ಇದರ ಜೊತೆಯಲ್ಲಿ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳುವುದು ಮತ್ತು ವಿದ್ಯಾರ್ಥಿ ಆಸಕ್ತಿಯನ್ನು ಗುರುತಿಸುವುದು ಕೂಡ ಮುಖ್ಯವಾಗಿರುತ್ತದೆ ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರನ್ನು ಅನುಸರಿಸಿ ಕೋರ್ಸು ಅಥವಾ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವ ಒತ್ತಡಕ್ಕೆ ಒಳಗಾಗಿ ತೊಂದರೆಯನ್ನು ಎದುರಿಸುತ್ತಾರೆ ಇದರಿಂದ ಮುಂದಿನ ದಿನಗಳಲ್ಲಿ ನಿರಾಸೆ ಉಂಟಾಗಬಹುದು ಕೋರ್ಸ್ ಬದಲಾವಣೆ ಮಾಡುವಲ್ಲಿ ತೊಂದರೆಗಳು ಎದುರಾಗಬಹುದು ಅಥವಾ ಭವಿಷ್ಯದಲ್ಲಿ ಉದ್ಯೋಗ ಸಮಸ್ಯೆಗಳು ಎದುರಾಗಬಹುದು ಆದುದರಿಂದ ಪ್ರತಿಯೊಂದು ನಿರ್ಧಾರವನ್ನು ಸಹ ಯೋಚಿಸಿ ತೆಗೆದುಕೊಳ್ಳುವುದು ಪ್ರಮುಖವಾಗಿದೆ

ಭಾರತದಲ್ಲಿ ಅತ್ಯುತ್ತಮ ಕಾಲೇಜುಗಳು

PUC Commerce ಮುಗಿದ ನಂತರ ಉತ್ತಮ ಶಿಕ್ಷಣ ಪಡೆಯಲು ಅಧಿಕೃತ ಮಾನ್ಯತೆಯನ್ನು ಪಡೆದಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯವನ್ನು ಅವುಗಳ ಮಾಹಿತಿಯನ್ನು ಕಲೆಹಾಕಿ ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಉತ್ತಮ ಕಾಲೇಜುಗಳಲ್ಲಿ ಗುಣಮಟ್ಟದ ಬೋಧನೆ, ಅನುಭವ ಹೊಂದಿರುವ ಅಧ್ಯಾಪಕರು, ಆಧುನಿಕ ಮತ್ತು ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ ವ್ಯವಸ್ಥೆ, ಇಂಟರ್ನ್ಶಿಪ್ ಅವಕಾಶಗಳು ಮತ್ತು ಕ್ಯಾಂಪಸ್ ನೇಮಕಾತಿ ಮುಂತಾದ ಸೌಲಭ್ಯಗಳು ಉತ್ತಮ ರೀತಿಯಲ್ಲಿ ಲಭ್ಯವಿರುತ್ತದೆ ಇದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿದ ನಂತರವೇ ತಕ್ಷಣದಲ್ಲಿ ಉದ್ಯೋಗವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ

ಭಾರತದಲ್ಲಿ PUC Commerce ಹಾಗೂ ಮ್ಯಾನೇಜ್ಮೆಂಟ್ ಶಿಕ್ಷಣಕ್ಕೆ ಹೆಸರುವಾಸಿಯಾದ ಹಲವಾರು ಶಿಕ್ಷಣ ಸಂಸ್ಥೆಗಳಿವೆ ಅವುಗಳಲ್ಲಿ ಪ್ರಮುಖವಾದ ವೆಂದರೆ, Christ University (ಬೆಂಗಳೂರು), St. Xavier’s College (ಮುಂಬೈ), Loyola College (ಚೆನ್ನೈ), Narsee Monjee College of Commerce and Economics (ಮುಂಬೈ), Shri Ram College of Commerce – SRCC (ದೆಹಲಿ), Hindu College (ದೆಹಲಿ), Hansraj College (ದೆಹಲಿ), Jain University (ಬೆಂಗಳೂರು), Symbiosis International University (ಪುಣೆ), Mount Carmel College (ಬೆಂಗಳೂರು) ಪ್ರಮುಖವಾಗಿವೆ. ಈ ಶಿಕ್ಷಣ ಸಂಸ್ಥೆಗಳು ಉತ್ತಮ ರೀತಿಯ ಗುಣಮಟ್ಟದ ಶಿಕ್ಷಣ ಜೊತೆಗೆ ಕೈಗಾರಿಕಾ ಸಂಪರ್ಕವನ್ನು ಹೊಂದಿರುವುದರಿಂದ ಉತ್ತಮ ಗುಣಮಟ್ಟದ ಪ್ಲೇಸ್ಮೆಂಟ್ ಅವಕಾಶಗಳನ್ನು ಸಹ ಒದಗಿಸುತ್ತವೆ

ಕಾಲೇಜನ್ನು ಆಯ್ಕೆ ಮಾಡುವಾಗ ಕೇವಲ ಹೆಸರನ್ನು ಮಾತ್ರ ಗಮನಿಸದೆ ಆ ಕಾಲೇಜು UGC ಅಥವಾ AICTE ಮಾನ್ಯತೆ, NAAC ಗ್ರೇಡ್, ಪ್ಲೇಸ್‌ಮೆಂಟ್ ದಾಖಲೆ, ಅಧ್ಯಾಪಕರ ಅನುಭವ, ಶುಲ್ಕ, ವಿದ್ಯಾರ್ಥಿವೇತನ, ಮೂಲಸೌಕರ್ಯ ಹಾಗೂ ಹಳೆಯ ವಿದ್ಯಾರ್ಥಿಗಳ ಸಾಧನೆ ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೂಲಂಕುಶವಾಗಿ ಪರಿಶೀಲಿಸಬೇಕು ಸಾಧ್ಯವಾದರೆ ಕಾಲೇಜಿನ ಅಧಿಕೃತ ವೆಬ್ಸೈಟ್ ಹಾಗೂ ಇಂದಿನ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಪಡೆದುಕೊಂಡ ನಂತರವೇ ಪ್ರವೇಶ ಪಡೆಯುವುದು ಉತ್ತಮವಾಗಿದೆ

ಕೋರ್ಸ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

PUC Commerce ನಂತರ ಕೋರ್ಸ್ ಆಯ್ಕೆ ಮಾಡುವುದು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಆದ್ದರಿಂದ ಯಾವುದೇ ಒತ್ತಡಕ್ಕೆ ಒಳಗಾಗದೆ ಆತುರದಲ್ಲಿ ಅಥವಾ ಇತರರನ್ನು ಅನುಸರಿಸುವ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಮೊದಲು ನಿಮಗೆ ಇರುವ ಆಸಕ್ತಿ ನಿಮ್ಮ ಸಾಮರ್ಥ್ಯ ಹಾಗೂ ನೀವು ನಿರ್ಧರಿಸುವ ದೀರ್ಘಾವಧಿ ವೃತ್ತಿ ಗುರಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಇದರ ಜೊತೆಯಲ್ಲಿ ಲೆಕ್ಕಪತ್ರದಲ್ಲಿ ಆಸಕ್ತಿ ಇದ್ದರೆ ಸಿ ಎ ಅಥವಾ ಬಿಕಾಂ ಉತ್ತಮ ಮಾಹಿತಿ ಆಗಬಹುದು ವ್ಯವಹಾರ ನಿರ್ವಹಣೆಯಲ್ಲಿ ಆಸಕ್ತಿ ಇದ್ದರೆ ಬಿಬಿಎ ಅಥವಾ ಬಿ ಎಂ ಎಸ್ ಕೋರ್ಸ್ ಅನ್ನು ಆಯ್ಕೆ ಮಾಡಬಹುದಾಗಿರುತ್ತದೆ

ಕೋರ್ಸನ್ನು ಆಯ್ಕೆ ಮಾಡುವಾಗ ಅದರ ಅವಧಿ, ಪಠ್ಯಕ್ರಮ, ಉದ್ಯೋಗಾವಕಾಶಗಳು, ಭವಿಷ್ಯದಲ್ಲಿ ಉದ್ಯೋಗದ ಬೇಡಿಕೆ, ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ಸರಾಸರಿ ಸಂಬಳದ ಬಗ್ಗೆ ಸಾಮಾನ್ಯ ಮಾಹಿತಿಯನ್ನು ಸಂಗ್ರಹಿಸಿ ತಿಳಿದುಕೊಳ್ಳಬೇಕಾಗುತ್ತದೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ಕ್ಷೇತ್ರಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ಸಹ ತಿಳಿದುಕೊಳ್ಳುವುದು ಸಹಾಯಕವಾಗಲಿದೆ

ಕೋರ್ಸನ್ನು ಆಯ್ಕೆ ಮಾಡುವಾಗ ಆರ್ಥಿಕ ಪರಿಸ್ಥಿತಿಯನ್ನು ಸಹ ಗಮನಿಸಬೇಕಾಗುತ್ತದೆ ಅಂದರೆ ಕೆಲವು ವೃತ್ತಿಪರ ಕೋರ್ಸ್ಗಳ ಶುಲ್ಕ ಹೆಚ್ಚಾಗಿರಬಹುದು ಅಂತಹ ಸಂದರ್ಭಗಳಲ್ಲಿ ಸಿಗಬಹುದಾದ ವಿದ್ಯಾರ್ಥಿ ವೇತನಗಳು, ಶಿಕ್ಷಣ ಸಾಲದ ವ್ಯವಸ್ಥೆ ಅಥವಾ ಸರ್ಕಾರವು ನೆರವು ನೀಡುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಇದರ ಜೊತೆಯಲ್ಲಿ ಕೋರ್ಸ್ ನಲ್ಲಿ Internship, Practical Training ಹಾಗೂ Placement ಸೌಲಭ್ಯ ಇದೆಯೇ ಎಂಬುದನ್ನು ಸಹ ತಿಳಿದುಕೊಳ್ಳಬೇಕಾಗುತ್ತದೆ

ಇಂದಿನ ದಿನಗಳಲ್ಲಿ ಪದವಿಯನ್ನು ಪಡೆಯುವುದರ ಜೊತೆಯಲ್ಲಿ ಸಂವಹನ ಕೌಶಲ್ಯ, ಕಂಪ್ಯೂಟರ್ ಕೌಶಲ್ಯ, ಇಂಗ್ಲಿಷ್ ಭಾಷಾಜ್ಞಾನ, ಕೃತಕ ಬುದ್ಧಿಮತ್ತೆ, ಮಾಹಿತಿ ವಿಶ್ಲೇಷಣೆ ಮತ್ತು ಡಿಜಿಟಲ್ ಕೌಶಲ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಈ ಎಲ್ಲಾ ಕೌಶಲ್ಯಗಳು ಉದ್ಯೋಗವನ್ನು ಪಡೆಯಲು ಬಹಳ ಸಹಾಯಕವಾಗಲಿದೆ ಆದ್ದರಿಂದ ಭವಿಷ್ಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೋರ್ಸನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ

PUC Commerce ನಂತರ ಇರುವ ಕೋರ್ಸುಗಳು ಮತ್ತು ಅವುಗಳ ಭವಿಷ್ಯದ ನಿರೀಕ್ಷಿತ ವೇತನದ ಮಾಹಿತಿ

ಕೋರ್ಸ್ ಅವಧಿ ನಿರೀಕ್ಷಿತ ವೇತನ
B.Com 3 ವರ್ಷಗಳು ₹3 ರಿಂದ 6 ಲಕ್ಷ ರೂಗಳವರೆಗೆ
BBA 3 ವರ್ಷಗಳು ₹4 ರಿಂದ 8 ಲಕ್ಷ ರೂಗಳವರೆಗೆ
CA 4 ರಿಂದ 5 ವರ್ಷಗಳು ₹8 ರಿಂದ 25 ಲಕ್ಷ ರೂಗಳವರೆಗೆ
CS 3 ರಿಂದ 4 ವರ್ಷಗಳು ₹6 ರಿಂದ 18 ಲಕ್ಷ ರೂಗಳವರೆಗೆ
CMA 3 ರಿಂದ 4 ವರ್ಷಗಳು ₹6 ರಿಂದ 15 ಲಕ್ಷ ರೂಗಳವರೆಗೆ
Data Analytics 6 ರಿಂದ 12 ವರ್ಷಗಳು ₹5 ರಿಂದ 12 ಲಕ್ಷ ರೂಗಳವರೆಗೆ

ಪೋಷಕರಿಗೆ ಸಲಹೆಗಳು

ವಿದ್ಯಾರ್ಥಿಗಳ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ಪೋಷಕರ ಪಾತ್ರವು ಅತ್ಯಂತ ಪ್ರಮುಖವಾಗಿರುತ್ತದೆ ಅನೇಕ ಸಮಯದಲ್ಲಿ ಪೋಷಕರು ತಮ್ಮ ಇಚ್ಚೆಯ ಕೋರ್ಸ್ ಅನ್ನು ಮಕ್ಕಳ ಮೇಲೆ ಹೇರಲು ಪ್ರಯತ್ನಿಸುತ್ತಾರೆ ಅಂದರೆ ಪೋಷಕರು ಇಂಜಿನಿಯರ್ ಆಗಲು ಅಥವಾ ಡಾಕ್ಟರ್ ಆಗಲು ಬಯಸಿದ್ದರೆ ಅವರ ಮಕ್ಕಳ ಮೇಲೆ ಆ ಕೋರ್ಸ್ ಓದಲು ಒತ್ತಡವನ್ನು ಹೇರುವ ಪ್ರಯತ್ನವಾಗಿದೆ ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಅವರ ಆಸಕ್ತಿ, ಸಾಮರ್ಥ್ಯ ಮತ್ತು ಕನಸು ವಿಭಿನ್ನವಾಗಿರುತ್ತದೆ ಆದ್ದರಿಂದ ಮಕ್ಕಳ ಆಸಕ್ತಿ ಕೌಶಲ್ಯ ಹಾಗೂ ಅಭಿವೃದ್ಧಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವುದು ಪೋಷಕರ ಜವಾಬ್ದಾರಿಯಾಗಿದೆ

ಪೋಷಕರು ಮೊದಲು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ವಿವಿಧ ಕೋರ್ಸುಗಳು, ಅವುಗಳನ್ನು ಓದಿದರೆ ಸಿಗುವ ಉದ್ಯೋಗಾವಕಾಶಗಳು ಹಾಗೂ ಭವಿಷ್ಯದಲ್ಲಿ ಇರಬಹುದಾದ ಬೇಡಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ ನಂತರ ಶಿಕ್ಷಕರು, ವೃತ್ತಿ ಸಲಹೆಗಾರರು ಹಾಗೂ ಅನುಭವಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರು ಕೋರ್ರ್ಸನ್ನು ಆಯ್ಕೆ ಮಾಡುವಲ್ಲಿ ಉತ್ತಮ ಮಾರ್ಗದರ್ಶನ ನೀಡಬೇಕಾಗುತ್ತದೆ. ಕೇವಲ ಸಂಬಳ ಅಥವಾ ಸಮಾಜದ ಅಭಿಪ್ರಾಯವನ್ನು ಆಧಾರವಾಗಿಟ್ಟುಕೊಂಡು ಕೋರ್ಸನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳ ಮೇಲೆ ಒತ್ತಡ ಇರುವುದು ಭವಿಷ್ಯದಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ

ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವುದು, ಹೊಸ ಕೌಶಲ್ಯಗಳನ್ನು ಕಲಿಯಲು ಪ್ರೇರೇಪಿಸುವುದು ಮತ್ತು ಪ್ರೋತ್ಸಾಹಿಸುವುದು ಹಾಗೂ ಮಕ್ಕಳು ವಿಫಲವಾದ ಸಂದರ್ಭದಲ್ಲಿಯೂ ಧೈರ್ಯ ತುಂಬುವ ಮೂಲಕ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮ ದಾರಿಗೆ ತರಬಹುದಾಗಿರುತ್ತದೆ ಶಿಕ್ಷಣದ ಜೊತೆಗೆ ವ್ಯಕ್ತಿತ್ವವನ್ನು ವಿಕಸನಗೊಳಿಸುವುದು, ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು ಹಾಗೂ ಸಮಯ ನಿರ್ವಹಣೆಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಹೇಳಬೇಕಾಗುತ್ತದೆ

ಕಾಲೇಜಿನ ಆಯ್ಕೆ, ವಿದ್ಯಾರ್ಥಿ ವೇತನ ಸೌಲಭ್ಯಗಳು, ಇಂಟರ್ನ್ ಶಿಪ್ ಹಾಗೂ ಉದ್ಯೋಗಾವಕಾಶಗಳ ಕುರಿತು ಮಕ್ಕಳೊಂದಿಗೆ ನಿಯಮತವಾಗಿ ಚರ್ಚಿಸುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಹಕರಿಸಬಹುದಾಗಿರುತ್ತದೆ.‌ ಪೋಷಕರಿಂದ ಉತ್ತಮ ರೀತಿಯಲ್ಲಿ ಬೆಂಬಲ ಸಿಕ್ಕಿದರೆ ವಿದ್ಯಾರ್ಥಿಯು ಶೈಕ್ಷಣಿಕ ಜೀವನ ಮತ್ತು ವೃತ್ತಿ ಜೀವನದಲ್ಲಿ ಉತ್ತಮ ರೀತಿಯ ಯಶಸ್ಸನ್ನು ಕಾಣಬಹುದು

ಪೋಷಕರು ಮತ್ತು ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

PUC Commerce ನಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಅವರ ಉದ್ಯೋಗ ಮತ್ತು ವೃತ್ತಿ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಅವುಗಳೆಂದರೆ:

ಮೊದಲನೆಯದಾಗಿ ಸ್ನೇಹಿತರು ಯಾವ ಕೋರ್ಸ್ ಆಯ್ಕೆ ಮಾಡುತ್ತಾರೆ ಇವರು ಸಹ ಅದೇ ಕೋರ್ಸಿಗೆ ಸೇರುವುದು ದೊಡ್ಡ ತಪ್ಪಾಗಿದೆ ಏಕೆಂದರೆ ಪ್ರತಿಯೊಬ್ಬರ ಆಸಕ್ತಿ, ಸಾಮರ್ಥ್ಯ ಮತ್ತು ಕೌಶಲ್ಯಗಳು ಬೇರೆಬೇರೆಯಾಗಿರುವುದರಿಂದ ಈ ಅಂಶವನ್ನು ಅನುಸರಿಸಿ ಆಯ್ಕೆ ಮಾಡಿದರೆ ಭವಿಷ್ಯದಲ್ಲಿ ಸಮಸ್ಯೆಗಳು ಎದುರಾಗಬಹುದು ಆದುದರಿಂದ ನಿಮ್ಮ ಗುರಿಗೆ ಹೊಂದುವಂತಹ ಕೋರ್ಸ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ

ಎರಡನೆಯದಾಗಿ ಕೋರ್ಸನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ಪ್ರವೇಶವನ್ನು ಪಡೆಯುವುದು. ಪಠ್ಯಕ್ರಮ, ಉದ್ಯೋಗಾವಕಾಶಗಳು, ಕಾಲೇಜಿನ ಮಾನ್ಯತೆ, ಶುಲ್ಕ ಹಾಗೂ ಭವಿಷ್ಯದ ಬೆಳವಣಿಗೆ ಬಗ್ಗೆ ಸಂಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳದೆ ಹಾಗೂ ನಿರ್ಧಾರವನ್ನು ಸ್ಪಷ್ಟಪಡಿಸದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು

ಮೂರನೇಯದಾಗಿ ಕೇವಲ ಹೆಚ್ಚು ಸಂಬಳ ಸಿಗುತ್ತದೆ ಎಂಬ ಕಾರಣಕ್ಕೆ ಆಸಕ್ತಿ ಇಲ್ಲದ ಅಥವಾ ಕಷ್ಟವೆನಿಸುವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಸಹ ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ನಿರಾಸೆ ಉಂಟಾಗಬಹುದು

ಇನ್ನೊಂದು ಸಾಮಾನ್ಯ ತಪ್ಪು ಎಂದರೆ ಪದವಿ ಸಾಕು, ಹೆಚ್ಚುವರಿ ಕೌಶಲ್ಯಗಳ ಅಗತ್ಯವಿಲ್ಲ ಎಂದು ಭಾವಿಸುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯ, ಕಂಪ್ಯೂಟರ್ ಕೌಶಲ್ಯ, ಇಂಟರ್ನ್ ಶಿಪ್ ಹಾಗೂ ಡಿಜಿಟಲ್ ಕೌಶಲ್ಯಗಳನ್ನು ಕಲಿಯುವುದರ ಮೂಲಕ ಉತ್ತಮ ಪ್ರಮಾಣಪತ್ರ ಕೋರ್ಸ್ ಗಳನ್ನು ಮಾಡಿ ಉದ್ಯೋಗವನ್ನು ಬೇಗ ಮತ್ತು ಉತ್ತಮ ಸಂಬಳವಿರುವ ಕೆಲಸಗಳನ್ನು ಪಡೆಯಬಹುದಾಗಿರುತ್ತದೆ

ಕೊನೆಯದಾಗಿ ಇರುವ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡುವುದು ಪ್ರವೇಶ ಪರೀಕ್ಷೆಗಳಿಗೆ ಸರಿಯಾದ ಸಿದ್ಧತೆ ಮಾಡಿಕೊಳ್ಳದಿರುವುದು ವೃತ್ತಿ ಯೋಜನೆಯನ್ನು ರೂಪಿಸದೆ ಇರುವುದು ಹಾಗೂ ಶಿಕ್ಷಕರ ಅಥವಾ ತಜ್ಞರ ಸಲಹೆಯನ್ನು ತೆಗೆದುಕೊಳ್ಳದೆ ನಿರ್ಲಕ್ಷಿಸುವುದು ಕೂಡ ದೊಡ್ಡ ಸಮಸ್ಯೆಗಳಾಗಿವೆ.

ಆರಂಭದಿಂದಲೇ ದೀರ್ಘಕಾಲದ ಸ್ಪಷ್ಟ ಗುರಿ ಇಟ್ಟುಕೊಂಡು ನಿರಂತರವಾಗಿ ಅಧ್ಯಯನವನ್ನು ಮುಂದುವರಿಸಿ ಉತ್ತಮ ಕಲಿಕೆಯ ಮನೋಭಾವವನ್ನು ಬೆಳೆಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದಾಗಿರುತ್ತದೆ

 

Best Courses After PUC Commerce In 2026: FAQ’s

ಪ್ರಶ್ನೆ 10 ಕನ್ನಡ ಪದಗಳ ಸರಳ ಉತ್ತರ
Q1. PUC Commerce ನಂತರದಲ್ಲಿ ಇರುವ ಉತ್ತಮ ಕೋರ್ಸುಗಳು ಯಾವುದು? ಆಸಕ್ತಿ, ಗುರಿಗೆ ತಕ್ಕ ಕೋರ್ಸ್ ಆಯ್ಕೆ ಯಶಸ್ಸಿಗೆ ಅತ್ಯುತ್ತಮ ಮಾರ್ಗ.
Q2. PUC Commerce ನಂತರ ಹೆಚ್ಚು ಸಂಬಳ ಸಿಗುವ ಕೋರ್ಸ್ ಯಾವುದು? CA, CS, CMA, MBA ಹೆಚ್ಚಿನ ಸಂಬಳದ ಸಿಗುವ ಪ್ರಮುಖ ಕೋರ್ಸ್‌ಗಳು.
Q3. Commerce ವಿದ್ಯಾರ್ಥಿಗಳು BCA ಮಾಡಬಹುದೇ? ಹೌದು, ಅನೇಕ ಕಾಲೇಜುಗಳಲ್ಲಿ Commerce ವಿದ್ಯಾರ್ಥಿಗಳಿಗೆ BCA ಅವಕಾಶವಿದೆ.
Q4. B.Com ನಂತರ ಯಾವ ಉನ್ನತ ಶಿಕ್ಷಣ ಮಾಡಬಹುದು? MBA, M.Com, CA, CMA, CS ಮುಂತಾದ ಉತ್ತಮ ಮುಂದಿನ ಶಿಕ್ಷಣ ಆಯ್ಕೆಗಳು.
Q5. Commerce ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳ ಅವಕಾಶವಿದೆಯೇ? ಹೌದು, ಬ್ಯಾಂಕ್, SSC, UPSC, KPSC ಸೇರಿದಂತೆ ಹಲವು ಉದ್ಯೋಗಗಳಿವೆ.
Q6. Commerce ವಿದ್ಯಾರ್ಥಿಗಳಿಗೆ MBA ಮಾಡುವುದು ಉತ್ತಮ ಆಯ್ಕೆಯೇ? ಹೌದು, MBA ಉತ್ತಮ ಉದ್ಯೋಗ ಹಾಗೂ ಹೆಚ್ಚಿನ ಸಂಬಳದ ಅವಕಾಶ ನೀಡುತ್ತದೆ.
Q7. Digital Marketing Commerce ವಿದ್ಯಾರ್ಥಿಗಳಿಗೆ ಸೂಕ್ತವೆನಿಸುತ್ತದೆಯೇ? ಹೌದು, ಡಿಜಿಟಲ್ ಮಾರ್ಕೆಟಿಂಗ್ ಉತ್ತಮ ಭವಿಷ್ಯ ಮತ್ತು ಆದಾಯ ನೀಡುತ್ತದೆ.
Q8. ಕೋರ್ಸ್ ಆಯ್ಕೆ ಮಾಡುವಾಗ ಯಾವ ಪ್ರಮುಖ ಅಂಶಗಳನ್ನು ಗಮನಿಸಬೇಕು? ಆಸಕ್ತಿ, ಉದ್ಯೋಗ, ಕಾಲೇಜು, ಶುಲ್ಕ, ಕೌಶಲ್ಯ ಮುಂತಾದ ಮುಖ್ಯ ಅಂಶಗಳನ್ನು ಗಮನಿಸಬೇಕು
Q9. PUC Commerce ನಂತರ ವಿದೇಶದಲ್ಲಿ ಉದ್ಯೋಗಗಳನ್ನು ಪಡೆಯಬಹುದೇ? ಹೌದು, ಕೌಶಲ್ಯ ಇದ್ದರೆ ವಿದೇಶದಲ್ಲೂ ಉತ್ತಮ ಉದ್ಯೋಗವನ್ನು ಪಡೆಯಬಹುದು.
Q10. Commerce ವಿದ್ಯಾರ್ಥಿಗಳು ಯಶಸ್ವಿ ವೃತ್ತಿಜೀವನಕ್ಕಾಗಿ ಏನು ಮಾಡಬೇಕು? ಸರಿಯಾದ ಕೋರ್ಸ್ ಆಯ್ಕೆ ಮಾಡಿ, ಕೌಶಲ್ಯ, ಅಭ್ಯಾಸ ಯಶಸ್ಸಿನ ಪ್ರಮುಖ ಗುಟ್ಟು ಆಗಿದೆ.

 

ಅಧಿಕೃತ ಲಿಂಕ್‌ ಗಳು

Last Updated: 10 July 2026

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ  ಅಧಿಕೃತ ವೆಬ್ಸೈಟ್ ಭಾರತ ಶಿಕ್ಷಣ ಸಚಿವಾಲಯ
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಕರ್ನಾಟಕ ಶಿಕ್ಷಣ ಇಲಾಖೆ
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣದ ಅಧಿಕೃತ ವೆಬ್ಸೈಟ್ ಕರ್ನಾಟಕ ಉನ್ನತ ಶಿಕ್ಷಣ ಇಲಾಖೆ
ಕರ್ನಾಟಕ ವಿದ್ಯಾರ್ಥಿ ವೇತನ ತಂತ್ರಾಂಶದ ಅಧಿಕೃತ ವೆಬ್ಸೈಟ್ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ
ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನದ ಅಧಿಕೃತ ವೆಬ್ಸೈಟ್ ಕೇಂದ್ರ ವಿದ್ಯಾರ್ಥಿವೇತನ ತಂತ್ರಾಂಶ

 

ಹೆಚ್ಚುವರಿ ಲಿಂಕ್‌ ಗಳು

ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿಯನ್ನು ಪಡೆಯಲು ಈ ಆಯ್ಕೆಗಳನ್ನು ಆಯ್ದುಕೊಳ್ಳಿ ನೇಮಕಾತಿ ಮಾಹಿತಿ

ಪರೀಕ್ಷಾ ತಯಾರಿ ಸಲಹೆಗಳ ಮಾಹಿತಿ

ವೃತ್ತಿ ಮಾರ್ಗದರ್ಶನಕ್ಕೆ ಮಾಹಿತಿ

ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ

 

PUC Commerce ಎರಡು ವರ್ಷದ ಕೋರ್ಸ್ ಆಗಿದ್ದು ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎಂಬ ಮೂರು ವಿಭಾಗಗಳಾಗಿ ಮಾರ್ಪಡಿಸಲಾಗಿದೆ PUC Commerce ಅನ್ನು ತೆಗೆದುಕೊಂಡ ನಂತರ ಪದವಿ ಕೋರ್ಸುಗಳು, ವೃತ್ತಿಪರ ಕೋರ್ಸುಗಳು, ಕೌಶಲ್ಯಾಭಿವೃದ್ಧಿ ಕೋರ್ಸುಗಳು, ಮತ್ತು ಇತರೆ ಹೆಚ್ಚುವರಿ ಕೋರ್ಸ್ ಗಳನ್ನು ಆಯ್ದುಕೊಳ್ಳುವುದರ ಮೂಲಕ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದಾಗಿರುತ್ತದೆ

ಉನ್ನತ ಶಿಕ್ಷಣದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವಾಗ ಸರಿಯಾದ ವೃತ್ತಿ ಯೋಜನೆ ರೂಪಿಸದಿರುವುದು, ತಜ್ಞರ ಸಲಹೆ ತೆಗೆದುಕೊಳ್ಳದಿರುವುದು, ಕಾಲೇಜಿನ ಮಾನ್ಯತೆ ಪರಿಚಯಿಸದಿರುವುದು ಮುಂತಾದ ತಪ್ಪುಗಳನ್ನು ಮಾಡುವುದರಿಂದ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತದೆ ಆದುದರಿಂದ ಯಾವುದೇ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಸಂಪೂರ್ಣ ಮಾಹಿತಿಯನ್ನು ಪಡೆಯುವುದು ಪ್ರತಿ ವಿದ್ಯಾರ್ಥಿಯ ಜವಾಬ್ದಾರಿಯಾಗಿರುತ್ತದೆ.

ನಾವು ಇಂದು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಮುಂದಿನ 10 ರಿಂದ 15 ವರ್ಷಗಳಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರಬೇಕಾಗಿರುತ್ತದೆ ಪ್ರಸ್ತುತದಲ್ಲಿ ಉತ್ತಮ ಬೇಡಿಕೆ ಇರುವ ಕೋರ್ಸುಗಳನ್ನು ಆಯ್ದುಕೊಂಡು ಓದಿದ ನಂತರ ಭವಿಷ್ಯದಲ್ಲಿ ಅವಕಾಶ ಗಳಿಗೆ ಇರುವ ಬೇಡಿಕೆಗೆ ಕಡಿಮೆಯಾದರೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಹಿಂದುಳಿಬೇಕಾಗುತ್ತದೆ ಪಿಯುಸಿ ನಂತರದ ವೃತ್ತಿ ಯೋಜನೆ ಪ್ರಮುಖ ಅಂಶವಾಗಿದೆ.

 

Related Information Articles:

 

SSLC ನಂತರ ಏನು ಮಾಡಬೇಕು? 2026ರ Best ಕೋರ್ಸ್‌ಗಳು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಇಲ್ಲಿದೆ ಮಾಹಿತಿ

Best Courses After PUC in 2026: Top Career Options, Job Opportunities & Expert Guidance

Best Courses After PUC Science In 2026: Here Is The Career Guide, Best Courses, Salary, Jobs & Future

BSNL JTO Exam Best Preparation Tips 2026: ಸಂಪೂರ್ಣ ಸಿಲಬಸ್‌, ಪ್ರಮುಖ ವಿಷಯಗಳು, ಪರೀಕ್ಷಾ ತಯಾರಿ ಮತ್ತು 90 ದಿನಗಳ ಅಧ್ಯಯನ ವೇಳಾಪಟ್ಟಿ

KMF GUMUL Jobs Best Exams Preparation Tips 2026: Complete Syllabus, 90 Days Study Plan, Books & Best Tips in Kannada

Karnataka Police CPC Exam Preparation Tips 2026 | Complete And Best Study Plan

 

 

Author Note: ಈ ಲೇಖನವು PUC Commerce ನಂತರ ಲಭ್ಯವಿರುವ ಪ್ರಮುಖ ಶೈಕ್ಷಣಿಕ ಕೋರ್ಸ್‌ಗಳು, ಉದ್ಯೋಗಾವಕಾಶಗಳು ಹಾಗೂ ವೃತ್ತಿ ಯೋಜನೆ ಕುರಿತು ವಿಶ್ವಾಸಾರ್ಹ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸರಳ ಕನ್ನಡದಲ್ಲಿ ಒದಗಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ.

***

About Author: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರದಲ್ಲಿ ಎಂ,ಎ ಪದವಿಯನ್ನು ಪಡೆದಿದ್ದು, ಇವರು ಕಳೆದ 3 ವರ್ಷಗಳಿಂದ ಶಿಕ್ಷಣ, ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಪರೀಕ್ಷಾ ಮಾರ್ಗದರ್ಶನ ಹಾಗೂ ವೃತ್ತಿ ಅಭಿವೃದ್ಧಿ ಕುರಿತ ನಿಖರ ಮತ್ತು ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಸರಳ ಕನ್ನಡದಲ್ಲಿ ನಿರಂತರವಾಗಿ ಪ್ರಕಟಿಸುತ್ತಿದ್ದಾರೆ.

***

Disclaimer: ಈ ಲೇಖನವು ಸಾರ್ವಜನಿಕ ಮಾಹಿತಿ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಕಾಲೇಜು ಪ್ರವೇಶ, ಅರ್ಹತೆ, ಶುಲ್ಕ ಮತ್ತು ಪಠ್ಯಕ್ರಮದಲ್ಲಿ ಬದಲಾವಣೆಗಳಿರಬಹುದು. ಅಂತಿಮ ಮಾಹಿತಿಗಾಗಿ ಸಂಬಂಧಿತ ವಿಶ್ವವಿದ್ಯಾಲಯ ಅಥವಾ ಕಾಲೇಜಿನ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment