Telegram Join Our Telegram WhatsApp Join Our WhatsApp

E-EPIC Download 2026, Big Update: ಮೊಬೈಲ್ ಮತ್ತು ವೆಬ್‌ಸೈಟ್ ಮೂಲಕ ಡಿಜಿಟಲ್ ವೋಟರ್ ಐಡಿ ಡೌನ್‌ಲೋಡ್ ಮಾಡುವ ಸಂಪೂರ್ಣ ವಿಧಾನ

ಮತದಾರರ E-EPIC ( ಡಿಜಿಟಲ್‌ ಗುರುತಿನ ಚೀಟಿ) ಡೌನ್ಲೋಡ್‌

 

ಭಾರತದಲ್ಲಿ ಮತದಾನ ಪ್ರಕ್ರಿಯೆಗೆ ಒಳಪಡುವ ಪ್ರತಿಯೊಬ್ಬ ನಾಗರಿಕರಿಗೂ ಮತದಾರರ ಗುರುತಿನ ಚೀಟಿಯನ್ನು ನೀಡಲಾಗುತ್ತದೆ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಇದೊಂದು ಪ್ರಮುಖ ದಾಖಲೆಯಾಗಿದೆ. ಇದು ಕೇವಲ ಚುನಾವಣೆಗಳಲ್ಲಿ ಮತ ಚಲಾಯಿಸಲು ಮಾತ್ರವಲ್ಲದೆ ಹಲವು ಖಾಸಗಿ ಮತ್ತು ಸರ್ಕಾರಿ ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ಈ ದಾಖಲೆಯನ್ನು ಗುರುತಿನ ದಾಖಲೆಯಾಗಿ ಹಾಜರುಪಡಿಸಬಹುದಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರದ ಚುನಾವಣಾ ಆಯೋಗವು ಡಿಜಿಟಲ್ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಭಾಗವಾಗಿ ಮತದಾರರು ಗುರುತಿನ ಚೀಟಿಯನ್ನು ಸಹ ಡಿಜಿಟಲ್ ರೂಪದಲ್ಲಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ

ಈ ಮೊದಲು ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಅಥವಾ ಡುಪ್ಲಿಕೇಟ್ ಕಾರ್ಡನ್ನು ಪಡೆಯಲು ಸಾಕಷ್ಟು ಸಮಯ ಕಾಯಬೇಕಾಗಿತ್ತು ಹಾಗೂ ಹಲವು ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಈಗ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಡಿಜಿಟಲ್ ವೋಟರ್ ಐಡಿಯನ್ನು ಪಿಡಿಎಫ್ ಮೂಲಕ ಪಡೆಯಬಹುದಾಗಿರುತ್ತದೆ ಇದರಿಂದ ಸಮಯ ಉಳಿತಾಯವಾಗುವುದಲ್ಲದೆ ನಿಮ್ಮ ದಾಖಲೆಯನ್ನು ಮೊಬೈಲ್ ನಲ್ಲಿ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು ಇದನ್ನೇ ಇ-ಎಪಿಕ್‌ ಎನ್ನಲಾಗುತ್ತದೆ

ಪ್ರಸ್ತುತ ಲೇಖನದಲ್ಲಿ E-EPIC ನ ಪ್ರಯೋಜನಗಳು ಏನು, ಯಾರು ಡೌನ್ಲೋಡ್ ಮಾಡಬಹುದು, ಡೌನ್ಲೋಡ್ ಮಾಡೋ ಮೊದಲು ಯಾವ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಹಾಗೂ ಎಸ್ಐಆರ್ ಪ್ರಕ್ರಿಯೆಯು ಪ್ರಾರಂಭಗೊಂಡಿದೆ ಆದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ

 

ಈ ಎಪಿಕ್ ಎಂದರೆ ಏನು?

E-EPIC ಎಂಬುದು ಭಾರತದ ಚುನಾವಣಾ ಆಯೋಗವು ಮತದಾರರಿಗೆ ನೀಡುವ ಡಿಜಿಟಲ್ ಗುರುತಿನ ಚೀಟಿಯಾಗಿದೆ ಇದು ಸಾಮಾನ್ಯ ಪ್ಲಾಸ್ಟಿಕ್ ವೋಟರ್ ಕಾರ್ಡಿನಂತೆ ಕಾಣುವ ದಾಖಲೆಯಾಗಿದ್ದು ಇದನ್ನು ಪಿಡಿಎಫ್ ರೂಪದಲ್ಲೂ ಸಹ ಹೊಂದಬಹುದಾಗಿರುತ್ತದೆ ಕಾನೂನು ಬದ್ಧವಾಗಿ ಅದೇ ಮಟ್ಟದ ಮಾನ್ಯತೆಯನ್ನು ಪಡೆದಿರುತ್ತದೆ

ಈ ಡಿಜಿಟಲ್ ಕಾರ್ಡಿನಲ್ಲಿ ಮತದಾರರ ಹೆಸರು, ಅವರ ಫೋಟೋ, ಎಪಿಕ್ ಸಂಖ್ಯೆ, ಲಿಂಗ, ಜನ್ಮ ದಿನಾಂಕ, ವಿಧಾನಸಭಾ ಕ್ಷೇತ್ರ, ಮತಗಟ್ಟೆ ಹಾಗೂ ಈ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ ಸಂಗ್ರಹಿಸಲು ಇರುವ ಕ್ಯೂ ಆರ್ ಕೋಡ್ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಒಳಗೊಂಡಿರುತ್ತದೆ ಇದನ್ನು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಂತಹ ಡಿಜಿಟಲ್ ಸಾಧನಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು

ಯಾವುದೇ ಸಮಯದಲ್ಲಿ ಅಗತ್ಯವಿದ್ದರೆ ಪಿಡಿಎಫ್ ಫೈಲ್ ಅನ್ನು ತೆರೆದು ನಿಮ್ಮ ಮತದಾರ ಗುರುತಿನ ಚೀಟಿಯನ್ನು ನೋಡಬಹುದು ಇದರಿಂದ ಭೌತಿಕ ಕಾರ್ಡ್ ಬಳಕೆ ಕಡಿಮೆಯಾಗಿ ಡಿಜಿಟಲ್ ಆವೃತ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಂತಾಗುತ್ತದೆ

ಡಿಜಿಟಲ್ ವೋಟರ್ ಐಡಿ ಏಕೆ ಅಗತ್ಯ

ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಯುಗವು ಮಹತ್ತರ ಪಾತ್ರವನ್ನು ವಹಿಸಿದೆ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಸರಕಾರಿ ಸೇವೆಯು ಸಹ ಆನ್ಲೈನ್ ಮೂಲಕ ಸಿಗುವ ಸೌಲಭ್ಯವನ್ನು ಕಲ್ಪಿಸುತ್ತಿರುವುದರಿಂದ ಅದಕ್ಕೆ ಬೇಕಾದ ಪ್ರಮುಖ ದಾಖಲೆಗಳು ಸಹ ಡಿಜಿಟಲ್ ರೂಪದಲ್ಲಿ ಇರುವುದು ಅಗತ್ಯವಾಗಿದೆ ಹಾಗೂ ಆದಷ್ಟು ಡಿಜಿಟಲ್ ರೂಪದಲ್ಲಿ ದಾಖಲೆಗಳು ಲಭ್ಯವಾಗುತ್ತಿದೆ ಇದೇ ಕಾರಣಕ್ಕಾಗಿ ಪರಿಚಯಿಸಲಾಗಿದೆ

ಈ ಡಿಜಿಟಲ್ ವೋಟರ್ ಐಡಿ ಮೂಲಕ ನಿಮ್ಮ ಗುರುವಿನ ಚಿತ್ರವನ್ನು ಯಾವಾಗ ಬೇಕಾದರೂ ದಿನಕ್ಕೆ ಎಷ್ಟು ಬಾರಿಯಾದರೂ ತೆರೆದು ನೋಡಬಹುದಾಗಿರುತ್ತದೆ ಕಾರ್ಡನ್ನು ಮರೆತುಬಿಟ್ಟರು ಅಥವಾ ಕಳೆದು ಹೋಗಿದ್ದರೂ ಸಹ ಡಿಜಿಟಲ್ ಪ್ರತಿಯನ್ನು ಬಳಸಬಹುದಾಗಿರುತ್ತದೆ ಇದು ಸರ್ಕಾರಿ ಸೇವೆಗಳು ಪ್ರಯಾಣ ಹಾಗೂ ವಿವಿಧ ಇಲಾಖೆಗಳ ದಾಖಲೆ ಪರಿಶೀಲನೆಗೆ ಉಪಯುಕ್ತವಾಗುತ್ತದೆ

 ಇ ಎಪಿಕ್ ಮತ್ತು ಸಾಮಾನ್ಯ ವೋಟರ್ ಐಡಿ ನಡುವಿನ ವ್ಯತ್ಯಾಸ

ಈ ಮಾಹಿತಿಯನ್ನು ಓದುವ ಹಲವು ಜನರಿಗೆ E-EPIC ಮತ್ತು ಪ್ಲಾಸ್ಟಿಕ್ ವೋಟರ್‌ ಐಡಿ ಸಮಾನವೇ ಎಂಬ ಪ್ರಶ್ನೆ ಮೂಡುತ್ತದೆ ಇದಕ್ಕೆ ಉತ್ತರ ಹೌದು. ಈ ಎರಡು ದಾಖಲೆಗಳು ಒಂದೇ ಮಾಹಿತಿಯನ್ನು ಹೊಂದಿದ್ದು ಎರಡಕ್ಕೂ ಸಮಾನವಾದ ಕಾನೂನು ಬದ್ಧ ಮಾನ್ಯತೆ ಇದೆ

ಒಂದು ಕಾರ್ಡ್ ಪ್ಲಾಸ್ಟಿಕ್ ರೂಪದಲ್ಲಿದ್ದರೆ ಇನ್ನೊಂದು ಕಾರ್ಡ್ ಪಿಡಿಎಫ್ ಆವೃತ್ತಿಯಲ್ಲಿ ಇರುತ್ತದೆ ಬದಲಾವಣೆಗಳು ಇರುವುದಿಲ್ಲ ಈ ಡಿಜಿಟಲ್ ಆವೃತ್ತಿಯನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬಹುದು ಹಾಗೂ ಅಗತ್ಯವಿದ್ದಲ್ಲಿ ಮುದ್ರಿಸಿಕೊಳ್ಳಬಹುದಾಗಿರುತ್ತದೆ

ಇ ಎಪಿಕ್ ಹೊಂದುವುದರಿಂದ ಇರುವ ಪ್ರಮುಖ ಪ್ರಯೋಜನಗಳು

ಲಭ್ಯತೆ

ಒಮ್ಮೆ ಪಿಡಿಎಫ್ ಡೌನ್ಲೋಡ್ ಮಾಡಿ ಇಟ್ಟುಕೊಂಡ ನಂತರ ಅದು ಸದಾ ನಿಮ್ಮ ಮೊಬೈಲ್ ನಲ್ಲಿ ಇರುತ್ತದೆ ಕಾರ್ಡನ್ನು ಮನೆಯಲ್ಲಿ ಬಿಟ್ಟು ಬಂದರೂ ಸಹ ವೃತ್ತಿಯನ್ನು ತೆರೆದು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ

ಉಚಿತ ಸೇವೆ

E-EPIC ಕಾರ್ಡನ್ನು ಡೌನ್ಲೋಡ್ ಮಾಡಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯತೆ ಇರುವುದಿಲ್ಲ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು

ಸುರಕ್ಷಿತ ದಾಖಲೆ

E-EPIC ಪಿಡಿಎಫ್ ರೂಪದಲ್ಲಿ ಇರುವುದರಿಂದ ಹಾಳಾಗುತ್ತದೆ ಅಥವಾ ಕಳೆದು ಹೋಗುತ್ತದೆ ಎಂಬ ಭಯ ಇರುವುದಿಲ್ಲ ಈ ದಾಖಲಾತಿಯನ್ನು ಮೊಬೈಲ್ ನಲ್ಲಿ ಎಷ್ಟು ಬಾರಿಯಾದರೂ ಸೇವ್ ಮಾಡಿಕೊಳ್ಳಬಹುದು. ಅಗತ್ಯವಿದ್ದಲ್ಲಿ ಸಂರಕ್ಷಿಸಬಹುದು

ಕಳೆದುಹೋಗುವ ಭಯ ಇರುವುದಿಲ್ಲ

ಪ್ಲಾಸ್ಟಿಕ್ ಕಾರ್ಡ್ ಒಂದು ವೇಳೆ ಕಳೆದು ಹೋದರು ಮತ್ತೆ ಪಡೆಯಲು ಸಮಯ ಬೇಕಾಗುತ್ತದೆ ಆದರೆ‌ E-EPIC ಅನ್ನು ಮೊಬೈಲ್ ನಲ್ಲಿ ಪಡೆಯಬಹುದಾಗಿರುತ್ತದೆ

ಮುದ್ರಣದ ಅವಕಾಶ

ಈ ಡಿಜಿಟಲ್ ಆವೃತ್ತಿಯ ಪಿಡಿಎಫ್ ಫೈಲ್ ಅನ್ನು ಪ್ರಿಂಟ್ ತೆಗೆದುಕೊಂಡು ಲ್ಯಾಮಿನೇಶನ್ ಮಾಡಿಸಿ ಇಟ್ಟುಕೊಳ್ಳಬಹುದಾಗಿರುತ್ತದೆ

ಸೇವೆಯ ವೇಗ

E-EPIC‌ ಕಾರ್ಡ್ ಅನ್ನು ಕೆಲವೇ ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಪಡೆಯಬಹುದಾಗಿರುತ್ತದೆ ಈ ಸೇವೆಯನ್ನು ಪಡೆಯಲು ಯಾವುದೇ ಸಮಯಾವಕಾಶದ ವ್ಯರ್ಥತೆ ಉಂಟಾಗುವುದಿಲ್ಲ

E-EPIC ಅನ್ನು ಯಾರು ಡೌನ್ಲೋಡ್ ಮಾಡಬಹುದು

ಭಾರತದ ಚುನಾವಣಾ ಆಯೋಗದ ಅಡಿಯಲ್ಲಿ ನೊಂದಣಿಗೊಂಡಿರುವ ಮತದಾರರು ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ ಸಾಮಾನ್ಯವಾಗಿ ಈ ಕೆಳಕಂಡವರು ಈ ಸೇವೆಯನ್ನು ಬಳಸಬಹುದು

  • ಅಧಿಕೃತ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವವರು‌
  • ಎಪಿಕ್ ಸಂಖ್ಯೆಯನ್ನು ಹೊಂದಿರುವವರು
  • ನೊಂದಾಯಿತ ಮೊಬೈಲ್ ಸಂಖ್ಯೆ ಹೊಂದಿರುವವರು
  • ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಆನ್ಲೈನ್ ಸೇವೆಗಳನ್ನು ಬಳಸಲು ಸಾಧ್ಯವಾಗುವವರು

ಡೌನ್ಲೋಡ್ ಮಾಡುವ ಮೊದಲು ಈ ಅಂಶಗಳನ್ನು ಗಮನಿಸಿ

ಮತದಾರರ ಗುರುತಿನ ಚೀಟಿಯಲ್ಲಿರುವ ವಿಶಿಷ್ಟ ಗುರುತಿನ ಸಂಖ್ಯೆಯಾದ ಎಪಿಕ್ ಸಂಖ್ಯೆಯನ್ನು ಹೊಂದಿರಬೇಕು ಸಾಮಾನ್ಯವಾಗಿ ಈ ಸಂಖ್ಯೆಯು ಇಂಗ್ಲಿಷ್ ಅಕ್ಷರ ಮತ್ತು ಸಂಖ್ಯೆಗಳ ಸಂಯೋಜನೆಯಿಂದ ಕೂಡಿರುತ್ತದೆ

  • ಓಟಿಪಿ ಪರಿಶೀಲನೆಗಾಗಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ನೊಂದಾಯಿತ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು
  • E-EPIC ಡೌನ್ಲೋಡ್ ಮಾಡಲು ಇಂಟರ್ನೆಟ್ ಸಂಪರ್ಕ ಕಡ್ಡಾಯವಾಗಿರುತ್ತದೆ 
  • ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಹೊಂದಿರಬೇಕು ಇವುಗಳ ಮೂಲಕವೇ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಬಹುದಾಗಿರುತ್ತದೆ
  • ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಪಿಡಿಎಫ್ ಫೈಲ್ ಅನ್ನು ತೆರೆಯುವ ಯಾವುದಾದರೂ ಒಂದು ಸಾಫ್ಟ್ವೇರ್ ಅಪ್ಲಿಕೇಷನ್ ಕಡ್ಡಾಯವಾಗಿ ಇರಬೇಕಾಗುತ್ತದೆ

E-EPIC ಡೌನ್ಲೋಡ್ ಮಾಡಲು ಎಷ್ಟು ವಿಧಾನಗಳಿವೆ

ಭಾರತ ಚುನಾವಣಾ ಆಯೋಗವು ನಾಗರೀಕರ ಅನುಕೂಲಕ್ಕೆ ತಕ್ಕಂತೆ ಎರಡು ಅಧಿಕೃತ ಡೌನ್ಲೋಡ್ ಮಾಡುವ ಮೂಲಗಳನ್ನು ಒದಗಿಸಿದೆ ಈ ವ್ಯವಸ್ಥೆಗಳ ಮೂಲಕ ಮತದಾರರು ತಮ್ಮ ಈ ಎಪಿಕ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ

ವಿಧಾನ 1:

ಭಾರತ ಸರ್ಕಾರವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯಪಡಿಸಿರುವ ವೋಟರ್ ಹೆಲ್ಪ್ ಲೈನ್ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಡೌನ್ಲೋಡ್ ಮಾಡಬಹುದು

ವಿಧಾನ 2:

ಭಾರತ ಚುನಾವಣಾ ಆಯೋಗವು ರಚಿಸಿರುವ ಅಧಿಕೃತ ಚುನಾವಣಾ ಆಯೋಗದ ವೆಬ್ಸೈಟ್ ಮೂಲಕ ಬ್ರೌಸರ್ ನಲ್ಲಿ ಲಾಗಿನ್ ಆಗಿ ಅಗತ್ಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು

ಈ ಎರಡು ವಿಧಾನಗಳು ಸಂಪೂರ್ಣ ರೀತಿಯಲ್ಲಿ ಸುರಕ್ಷಿತವಾಗಿದ್ದು ಯಾವುದೇ ಶುಲ್ಕವಿಲ್ಲದೆ ಈ ವ್ಯವಸ್ಥೆಗಳನ್ನು ಬಳಸಬಹುದಾಗಿರುತ್ತದೆ ಅನುಕೂಲಕ್ಕೆ ತಕ್ಕಂತೆ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳ ಬಹುದು

ಮೊಬೈಲ್ ಅಪ್ಲಿಕೇಶನ್ ಮೂಲಕ E-EPIC ಡೌನ್ಲೋಡ್ ಮಾಡುವ ಸಂಪೂರ್ಣ ವಿಧಾನ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಟ್ಟದ ಸರ್ಕಾರಿ ಸೇವೆಗಳು ಮೊಬೈಲ್ ಮೂಲಕವೇ ಲಭ್ಯವಾಗುತ್ತಿದೆ ಹಾಗೂ ಸರ್ಕಾರವು ಡಿಜಿಟಲ್ ಆವೃತ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ ಇದೇ ರೀತಿ ಚುನಾವಣಾ ಆಯೋಗವು ಕೂಡ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ವೋಟರ್ ಹೆಲ್ಪ್‌ ಲೈನ್ ಎಂಬ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದೆ.

ಇವುಗಳ ಮೂಲಕ ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ಅರ್ಜಿ ಪರಿಶೀಲನೆ ಹಾಗೂ ಮತಗಟ್ಟೆ ಮಾಹಿತಿಗಳು ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಮೊಬೈಲ್ ಮೂಲಕವೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ

ಡೌನ್ಲೋಡ್ ಮಾಡುವವರ ಬಳಿ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಇದ್ದರೆ ವೋಟರ್ ಐಡಿಯನ್ನು ಪಿಡಿಎಫ್ ರೂಪದಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರ ಹಂತ ಹಂತದ ಮಾಹಿತಿ ಈ ಕೆಳಕಂಡಂತಿದೆ

ವೋಟರ್ ಹೆಲ್ಪ್ಲೈನ್ ಆಪ್ ಎಂದರೆ ಏನು

ವೋಟರ್ ಹೆಲ್ಪ್ ಲೈನ್ ಆಪ್ ಒಂದು ಚುನಾವಣಾ ಆಯೋಗದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಒಂದೇ ಸ್ಥಳದಲ್ಲಿ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿರುತ್ತದೆ

ಈ ಎಪಿಕ್ ಡೌನ್ಲೋಡ್

ಹೊಸ ಮತದಾರರ ನಂದಣಿ ಮತದಾರರ ಪಟ್ಟಿಯಲ್ಲಿ ಪ್ರಸ್ತುತ ಇರುವ ಹೆಸರುಗಳ ಪರಿಶೀಲನೆ ಹೆಸರು ವಿಳಾಸ ಮತ್ತು ಇತರ ಅಂಶಗಳ ತಿದ್ದುಪಡಿ ಮತಗಟ್ಟೆಯ ಸಂಬಂಧಿಸಿದ ಮಾಹಿತಿ ಅರ್ಜಿ ಸಲ್ಲಿಸಿರುವ ಸ್ಥಿತಿಪರಿಶೀಲನೆ ಚುನಾವಣೆಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಹಾಗೂ ಪಲಿತಾಂಶಗಳು

ಉಚಿತ ವ್ಯವಸ್ಥೆ

ಇದು ಸಂಪೂರ್ಣ ವಚಿತ ಹಾಗೂ ಸುರಕ್ಷಿತ ಅಪ್ಲಿಕೇಶನ್ ಆಗಿದ್ದು ಅಧಿಕೃತ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಡೌನ್ಲೋಡ್ ಮಾಡಿ ಯಾವುದೇ ಎಪಿಕೆ ಫೈಲ್ ಅನ್ನು ಬಳಸಬೇಡಿ

E-EPIC ಡೌನ್ಲೋಡ್‌ ಮಾಡಲು ಹಂತ ಹಂತದ ವಿಧಾನಗಳು

ಮೊದಲನೇ ಹಂತ: ಅಪ್ಲಿಕೇಶನ್‌ ಡೌನ್ಲೋಡ್

ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಿಂದ ಹಾಗೂ ಐಫೋನ್ ಬಳಕೆದಾರರು ಆಪಲ್ ಆಪ್ ಸ್ಟೋರ್ ತೆರೆದು ಸರ್ಚ್ ಬಾಕ್ಸ್ ನಲ್ಲಿ ವೋಟರ್ ಹೆಲ್ಪ್ ಲೈನ್ ಎಂದು ಹುಡುಕಿ, ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

ಎರಡನೇ ಹಂತ : ಲಾಗಿನ್

ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪಾಸ್ವರ್ಡ್ ದಾಖಲಿಸಿ ಲಾಗಿನ್ ಆಗಿ.

ಇವರಿಗೂ ಖಾತೆಯನ್ನು ಸೃಷ್ಟಿಸದೇ ಇದ್ದರೆ ಸೈನ್ ಅಪ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆ ಹಾಗೂ ಒಟಿಪಿ ಪರಿಶೀಲನೆ ಪೂರ್ಣಗೊಳಿಸಿ ನಂತರ ಲಾಗಿನ್ ಆಗಬಹುದು.

ಮೂರನೇ ಹಂತ‌ :ಆಯ್ಕೆ

ಲಾಗಿನ್ ಆದ ನಂತರ ಅಪ್ಲಿಕೇಶನ್ ನ ಮುಖ್ಯ ಡ್ಯಾಶ್ ಬೋರ್ಡ್ ಕಾಣಿಸುತ್ತದೆ ಲಭ್ಯವಿರುವ ವಿವಿಧ ಸೇವೆಗಳ ಪಟ್ಟಿಯಲ್ಲಿ E-EPIC ಡೌನ್ಲೋಡ್ ಎಂಬ ಆಯ್ಕೆಯನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ

ನಾಲ್ಕನೇ ಹಂತ : E-EPIC‌ ಮಾಹಿತಿಯ ನಮೂದು

ಈ ಹಂತದಲ್ಲಿ ನಿಮ್ಮ ಬಳಿ ಇರುವ ವಿಶಿಷ್ಟ ಗುರುತಿನ ಸಂಖ್ಯಾದ ಎಪಿಕ್ ಸಂಖ್ಯೆಯನ್ನು ನಿಗದಿತ ಸ್ಥಳದಲ್ಲಿ ತಪ್ಪಿಲ್ಲದೆ ನಮೂದಿಸಿ ಸರ್ಚ್ ಎಂಬ ಆಯ್ಕೆಯನ್ನು ಆಯ್ದುಕೊಂಡು ಅದರ ಮೇಲೆ ಕ್ಲಿಕ್ ಮಾಡಿ

ಐದನೇ ಹಂತ : ಮತದಾರರ ವಿವರಗಳ ಪರಿಶೀಲನೆ

ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ ಹುಡುಕಿದ ನಂತರ ಸ್ಕ್ರೀನ್ ಮೇಲೆ ಕಾಣುವ ಹೆಸರು, ತಂದೆ ಅಥವಾ ಪತಿಯ ಹೆಸರು, ಲಿಂಗ, ಜನ್ಮ ದಿನಾಂಕ, ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ

ಆರನೇ ಹಂತ : ಓಟಿಪಿ ಪಡೆಯುವಿಕೆ

ಎಲ್ಲ ಮಾಹಿತಿಯು ಸರಿಯಾಗಿದ್ದರೆ ಒಟಿಪಿ ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೊಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಈ ಒಟಿಪಿಯನ್ನು ನಿಗದಿತ ಸ್ಥಳದಲ್ಲಿ ನಮೂದಿಸುವ ಮೂಲಕ ದೃಢೀಕರಿಸಿ

ಏಳನೇ ಹಂತ : ಡೌನ್ಲೋಡ್

ಓಟಿಪಿಯನ್ನು ಸರಿಯಾಗಿ ನಮೂದಿಸಿದ ನಂತರ ಯಶಸ್ವಿ ಪರಿಶೀಲನೆಯಾಗಿ E-EPIC ಡೌನ್ಲೋಡ್ ಆಗುತ್ತದೆ, ಇದನ್ನು ಡಿಜಿಟಲ್ ವೋಟರ್ ಐಡಿ ರೂಪದಲ್ಲಿ ಪಿಡಿಎಫ್ ಆವೃತ್ತಿಯಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ಈ ಪಿಡಿಎಫ್ ಫೈಲ್ ಅನ್ನು ಡೌನ್ಲೋಡ್ ಫೋಲ್ಡರ್ ಅಥವಾ ಫೈಲ್ಸ್ ಮ್ಯಾನೇಜರ್ ನಲ್ಲಿ ಸಿಗುತ್ತದೆ

ಮೊಬೈಲ್ ನಂಬರ್ ನಮೂದಿಸಿದ ನಂತರ ಓಟಿಪಿ ಬರದಿದ್ದರೆ ಏನು ಮಾಡಬೇಕು

ಕೆಲವೊಂದು ತಾಂತ್ರಿಕ ದೋಷಗಳು ಉಂಟಾದಾಗ ಒಟಿಪಿ ಬರದೇ ಇರಬಹುದು ಆ ಸಂದರ್ಭದಲ್ಲಿ ಈ ಪರ್ಯಾಯಕಿಗಳನ್ನು ತೆಗೆದುಕೊಳ್ಳಬೇಕು ಅವುಗಳೆಂದರೆ

  • ನಿಮ್ಮ ಮೊಬೈಲ್ ನಲ್ಲಿ ನೆಟ್ವರ್ಕ್ ಸರಿಯಾಗಿದೆ ಎಂದು ಪರಿಶೀಲಿಸಿ
  • ಸಾಮಾನ್ಯವಾಗಿ ಒಂದು ಓಟಿಪಿಗೆ ನಿಗದಿತ ಕಾಲಾವಕಾಶ ನೀಡುವುದರಿಂದ ಕೆಲವು ನಿಮಿಷಗಳವರೆಗೆ ಕಾಯಿರಿ
  • ಓಟಿಪಿ ಬರದೇ ಇದ್ದ ಪಕ್ಷದಲ್ಲಿ ರೀಸೆಂಡ್ ಓಟಿಪಿ ಎಂಬ ಆಯ್ಕೆಯನ್ನು ಬಳಸಿ
  • ಈ ಎಲ್ಲಾ ಕ್ರಿಯೆಗಳನ್ನು ಅನುಸರಿಸಿದ ನಂತರವೂ ಓಟಿಪಿ ಬರೆದಿದ್ದರೆ ಏರೋಪ್ಲೇನ್ ಮೋಡನ್ನು ಒಮ್ಮೆ ಆನ್ ಮಾಡಿ ಆಫ್ ಮಾಡಿ
  • ಈ ಎಲ್ಲ ಪ್ರಯತ್ನಗಳನ್ನು ಪ್ರಯತ್ನಿಸಿದ ನಂತರವೂ ಓಟಿಪಿ ಬರೆದಿದ್ದರೆ ಚುನಾವಣಾ ದಾಖಲೆಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಾವಣೆಯಾಗಿದೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ

ಎಪಿಕ್ ಸಂಖ್ಯೆ ಗೊತ್ತಿಲ್ಲದಿದ್ದರೆ ಏನು ಮಾಡಬೇಕು

ಕೆಲವು ಜನರ ಮತದಾರರ ಗುರುತಿನ ಚೀಟಿ ಕಳೆದು ಹೋಗಿರುತ್ತದೆ ಅಥವಾ ಹಾಳಾಗಿರುತ್ತದೆ ಅಂತ ಸಂದರ್ಭದಲ್ಲಿ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಬದಲಾಗಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ ಎಪಿಕ್ ಸಂಖ್ಯೆಯನ್ನು ಪಡೆಯಬಹುದು

  • ನಿಮ್ಮ ಮನೆಯಲ್ಲಿರುವ ಹಳೆಯ ವೋಟರ್ ಐಡಿ ಕಾರ್ಡನ್ನು ಪರಿಶೀಲಿಸಿ
  • ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ
  • ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಮತದಾರರ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ವಿವರಗಳನ್ನು ಹುಡುಕಿ
  • ನಿಮ್ಮ ಗ್ರಾಮದ ಚುನಾವಣಾ ಬಿ ಎಲ್ ಒ (Booth Level Officer) ಗಳನ್ನು ಸಂಪರ್ಕಿಸುವ ಮೂಲಕ ನಿಮ್ಮ ಎಪಿಕ್ ಸಂಖ್ಯೆಯನ್ನು ಪಡೆದುಕೊಳ್ಳಬಹುದು

E-EPIC ಕಾರ್ಡನ್ನು ಡೌನ್ಲೋಡ್ ಮಾಡುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು 

  • ಯಾವಾಗಲೂ ಅಧಿಕೃತ ವೋಟರ್ ಹೆಲ್ಪ್ ಲೈನ್ ಮಾತ್ರ ಬಳಸಿ ಯಾವುದೇ ಎ‌ ಪಿ ಕೆ ಫೈಲ್ ಅನ್ನು ಬಳಸಬೇಡಿ
  • ನೀವು ಪಡೆದುಕೊಳ್ಳುವ ಒಟಿಪಿಯನ್ನು ಯಾರೊಂದಗೂ ಹಂಚಿಕೊಳ್ಳಬೇಡಿ
  • E-EPIC ಅನ್ನು ಡೌನ್ಲೋಡ್ ಮಾಡುವ ಸಮಯದಲ್ಲಿ ವೈಫೈ ಬಳಸುವ ಬದಲು ಸುರಕ್ಷಿತ ಇಂಟರ್ನೆಟ್ಟನ್ನು ಬಳಸಿ
  • ಪಿಡಿಎಫ್ ಡೌನ್ಲೋಡ್ ಆದ ನಂತರದಲ್ಲಿ ಅದರ ಬ್ಯಾಕಪ್ ಇಟ್ಟುಕೊಳ್ಳಿ ಒಂದಲ್ಲ ಎರಡು ಕಡೆ ಸೇವ್ ಮಾಡಿಟ್ಟುಕೊಳ್ಳಿ
  • ಮೊಬೈಲ್ಗೆ ಪಾಸ್ವರ್ಡ್ ಅಥವಾ ಸ್ಕ್ರೀನ್ ಲಾಕ್ ಇಟ್ಟುಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ

ಮೊಬೈಲ್ ಅಪ್ಲಿಕೇಶನ್ ಪ್ರಯೋಜನಗಳು

  • ಕೆಲವೇ ನಿಮಿಷಗಳಲ್ಲಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು
  • ಎಲ್ಲಿಂದ ಬೇಕಾದರೂ ಸೇವೆ ಪಡೆಯಬಹುದು
  • ಸಂಪೂರ್ಣ ಉಚಿತ ವ್ಯವಸ್ಥೆ
  • ಸುರಕ್ಷಿತವಾಗಿ ಓಟಿಪಿ ಪರಿಶೀಲನೆ
  • ಅಧಿಕೃತ ಚುನಾವಣಾ ಆಯೋಗದ ಆಪ್
  • ಪಿಡಿಎಫ್ ಅನ್ನು ಯಾವಾಗ ಬೇಕಾದರೂ ಎಷ್ಟು ಬಾರಿ ಬೇಕಾದರೂ ಪರಿಶೀಲಿಸಬಹುದು ಹಾಗೂ ನೋಡಬಹುದು
  • ಮತದಾರರಿಗೆ ಅವಶ್ಯಕತೆ ಇರುವ ಎಲ್ಲಾ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ಪಡೆಯಬಹುದು

ವೆಬ್ಸೈಟ್ ಮೂಲಕ E-EPIC ಡೌನ್ಲೋಡ್ ಮಾಡುವ ವಿಧಾನ

ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗದವರು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಗಳನ್ನು ಬಳಸುವುದರ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿರುತ್ತದೆ ಈ ವಿಧಾನವು ಸಂಪೂರ್ಣ ಆನ್ಲೈನ್ ಆಗಿದ್ದು ಸರಳ ಹಂತಗಳಿಂದ ಕೂಡಿದೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಡಿಜಿಟಲ್ ವೋಟರ್ ಐಡಿಯನ್ನು ಪಿಡಿಎಫ್ ರೂಪದಲ್ಲಿ ಪಡೆದುಕೊಳ್ಳಬಹುದು

ಮೊದಲನೇ ಹಂತ : 

ಅಧಿಕೃತ ವೆಬ್ ಸೈಟ್‌ ಗೆ ಭೇಟಿ ನೀಡಿ, ಭಾರತ ಸರ್ಕಾರದ ಚುನಾವಣಾ ಆಯೋಗವು ನಿರ್ಮಿಸಿರುವ NVSP ಪೋರ್ಟಲ್ ಗೆ ವೆಬ್ ಬ್ರೌಸರ್ ಮೂಲಕ ಭೇಟಿ ನೀಡಿ.

ಎರಡನೇ ಹಂತ : 

ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ತಮ್ಮ ವೈಯಕ್ತಿಕ ವಿವರಗಳಾದ ಹೆಸರು‌, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಸಂಖ್ಯೆಯನ್ನು ನಮೂದಿಸುವ ಮೂಲಕ ನೋಂದಾವಣೆ ಪಡೆದುಕೊಳ್ಳಿ.

ಮೂರನೇ ಹಂತ : 

ನೊಂದಾವಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ.

ನಾಲ್ಕನೇ ಹಂತ : 

ಲಭ್ಯವಿರುವ ಸೇವೆಗಳ ಪಟ್ಟಿಯಿಂದ E-EPIC ಡೌನ್ಲೋಡ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅರ್ಜಿ ನಮೂನೆಯನ್ನು ತೆರೆಯಬಹುದು.

ಐದನೇ ಹಂತ : 

ಡೌನ್ಲೋಡ್ ಆಯ್ಕೆಯನ್ನು ತೆರೆದ ನಂತರ ನಿಮ್ಮ ಎಪಿಕ್ ಸಂಖ್ಯೆಯನ್ನು ನಮೂದಿಸಬೇಕು.

ಆರನೇ ಹಂತ : 

ನಿಮ್ಮ ವಿವರಗಳ ಪುಟವು ತೆರೆಯುತ್ತದೆ ಅಲ್ಲಿ ನಿಮಗೆ ಬೇಕಾಗುವ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಅಲ್ಲಿ Download E-EPIC ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

7ನೇ ಹಂತ : 

E-EPIC ಸಂಖ್ಯೆಯನ್ನು ನಮೂದಿಸಿದ ನಂತರ ನಿಮ್ಮ ವಿವರಗಳು ಸ್ಕ್ರೀನ್ ಮೇಲೆ ಕಾಣುತ್ತವೆ ಇಲ್ಲಿ ನಿಮ್ಮ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಿ

ಸೂಚನೆ : ಈ ಹಂತದಲ್ಲಿ ಏನಾದರೂ ಮಾಹಿತಿ ಬದಲಾವಣೆಗಳು ಅಥವಾ ತಪ್ಪುಗಳು ಕಂಡುಬಂದಲ್ಲಿ ಮತದಾರರ ಗುರುತಿನ ಚೀಟಿಯನ್ನು ತಿದ್ದುಪಡಿ ಮಾಡಿಕೊಳ್ಳಿ

ಎಂಟನೇ ಹಂತ : 

ವಿವರಗಳನ್ನು ಪರಿಶೀಲಿಸಿದ ನಂತರ ಓಟಿಪಿ ಕಳುಹಿಸು ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ

ಒಂಬತ್ತನೇ ಹಂತ : 

ನೊಂದಾವಣಿ ಗೊಂಡಿರುವ ಮೊಬೈಲ್ ಸಂಖ್ಯೆಗೆ ಆರು ಅಂಕಿಯ ಒಟಿಪಿ ಬರುತ್ತದೆ ಇದನ್ನು ನಿಗಧಿತ ಸ್ಥಳದಲ್ಲಿ ನಮೂದಿಸುವ ಮೂಲಕ ದೃಢೀಕರಿಸಿ

ಹತ್ತನೇ ಹಂತ :

ಓಟಿಪಿ ಪರಿಶೀಲನಾ ಪ್ರಕ್ರಿಯೆಯು ಯಶಸ್ವಿಯಾಗಿ ಸಂಪೂರ್ಣಗೊಂಡ ನಂತರ ಡೌನ್ಲೋಡ್ ಎಪಿಕ್ ಎಂಬ ಆಯ್ಕೆಯು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ವೋಟರ್ ಐಡಿಯನ್ನು ಡಿಜಿಟಲ್ ರೂಪದಲ್ಲಿ ಈ ಎಪಿಕ್ ಆಗಿ ಪಡೆಯಬಹುದಾಗಿರುತ್ತದೆ.

 

E-EPIC ಡೌನ್ಲೋಡ್ ಆದ ನಂತರ ಈ ಮಾಹಿತಿಗಳನ್ನು ಕಡ್ಡಾಯವಾಗಿ ಪರಿಶೀಲಿಸಿ

  • ಹೆಸರು
  • ಭಾವಚಿತ್ರ
  • ಎಪಿಕ್ ಸಂಖ್ಯೆ
  • ವಿಳಾಸ
  • ಜನ್ಮ ದಿನಾಂಕ
  • ವಿಧಾನಸಭಾ ಕ್ಷೇತ್ರ
  • ಮತಗಟ್ಟೆ ಸಂಖ್ಯೆ
  • ಕ್ಯೂಆರ್ ಕೋಡ್

ಈ ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಬದಲಾವಣೆಗಳಿಗೆ ಒಳಪಡಿಸಬಹುದಾಗಿರುತ್ತದೆ

ವೆಬ್ಸೈಟ್ ಮೂಲಕ E-EPIC ಡೌನ್ಲೋಡ್ ಮಾಡುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

ಮೊಬೈಲ್ ಅಪ್ಲಿಕೇಶನ್ ನಿಂದ ಆದರೆ ನಿಮ್ಮ ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಕಂಪ್ಯೂಟರ್ ಮೂಲಕ ಡೌನ್ಲೋಡ್ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ದಾಖಲೆಗಳ ದುರುಪಯೋಗ ಆಗಬಹುದು ಈ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ

  • ಯಾವಾಗಲೂ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟನ್ನೇ ಬಳಸಿ
  • ನೀವು ಸ್ವೀಕರಿಸುವ ಓಟಿಪಿಯನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ
  • ಸೈಬರ್ ಕೆಫೆ ಅಥವಾ ಸಾರ್ವಜನಿಕ ಕಂಪ್ಯೂಟರ್ ಗಳನ್ನು ಬಳಸಿದ ನಂತರ ನಿಮ್ಮ ಖಾತೆಯಿಂದ ಲಾಗ್‌ ಔಟ್ ಆಗುವುದನ್ನು ಮರೆಯಬೇಡಿ‌
  • ಖಾತೆ ಸೃಷ್ಟಿಸುವ ಸಂದರ್ಭದಲ್ಲಿ ಬಲಿಷ್ಠವಾದ ಪಾಸ್ವರ್ಡ್ ಅನ್ನು ರಚಿಸಿ
  • ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ವೈಫೈಯನ್ನು ಬಳಸುವಾಗ ಹೆಚ್ಚು ಗಮನ ಹರಿಸಿ
  • ಡೌನ್ಲೋಡ್ ಮಾಡಿರುವ ವೋಟರ್ ಐಡಿ ಫೈಲನ್ನು ಸುರಕ್ಷಿತವಾಗಿ ಸಂರಕ್ಷಿಸಿ

ವೆಬ್ಸೈಟ್ ಮೂಲಕ E-EPIC ಡೌನ್ಲೋಡ್ ಮಾಡುವ ಪ್ರಯೋಜನಗಳು

  • ಕಂಪ್ಯೂಟರ್ ಸ್ಕ್ರೀನ್ ನ ಮೇಲೆ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು
  • ಪಿಡಿಎಫ್ ಅನ್ನು ನೇರವಾಗಿ ಕಂಪ್ಯೂಟರ್‌ ನಲ್ಲಿ ಉಳಿಸಬಹುದು
  • ಮುದ್ರಣದ ಅವಶ್ಯಕತೆ ಇದ್ದಲ್ಲಿ ಉತ್ತಮ ಗುಣಮಟ್ಟದ ಮುದ್ರಣವನ್ನು ಪಡೆದುಕೊಳ್ಳಬಹುದು
  • ಮೊಬೈಲ್ ಇಲ್ಲದಿದ್ದರೂ ಚುನಾವಣಾ ಸೇವೆಗಳನ್ನು ಪಡೆಯಬಹುದು
  • ಸಮಗ್ರ ಚುನಾವಣಾ ಸೇವೆಗಳ ಲಭ್ಯತೆ ಒಂದೇ ವೆಬ್ ಸೈಟಿನಲ್ಲಿ ಇರುತ್ತದೆ

ಮೊಬೈಲ್ ಅಪ್ಲಿಕೇಶನ್ ಸುರಕ್ಷಿತವೇ ವೆಬ್ಸೈಟ್ ಸುರಕ್ಷಿತವೇ?

ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್ ಸೈಟ್ ಎರಡು ವ್ಯವಸ್ಥೆಗಳು ಚುನಾವಣಾ ಆಯೋಗದ ಅಧಿಕೃತ ವ್ಯವಸ್ಥೆಗಳಾಗಿದ್ದು ಯಾವುದೇ ವಿಧಾನದ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ ಈ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಒಂದೇ ಮಾನ್ಯತೆಯನ್ನು ಪಡೆದಿರುತ್ತದೆ.

E-EPIC ಡೌನ್ಲೋಡ್ ಮಾಡುವ ಸಮಯದಲ್ಲಿ ಎದುರಿಸುವ ಸಮಸ್ಯೆಗೆ ಪರಿಹಾರಗಳು

ಮೊಬೈಲ್ ಗೆ ಓಟಿಪಿ ಬರುತ್ತಿಲ್ಲವಾದರೆ:

ನೆಟ್ವರ್ಕ್ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಂಡು ರೀಸೆಂಡ್ ಓಟಿಪಿ ಎಂಬ ಆಯ್ಕೆಯನ್ನು ಬಳಸಿ ಮೊಬೈಲ್ ನಲ್ಲಿ ಎಸ್ಎಂಎಸ್  ವ್ಯವಸ್ಥೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಂಡು ಇದರ ಜೊತೆಯಲ್ಲಿ ಚುನಾವಣಾ ದಾಖಲೆಯಲ್ಲಿ ಮೊಬೈಲ್ ಸಂಖ್ಯೆ ನೋಂದಾವಣೆಯಾಗಿದೆ ಎಂದು ಪರಿಶೀಲಿಸಿಕೊಳ್ಳಿ

ಎಪಿಕ್ ಸಂಖ್ಯೆ ಗುರುತಿಸಲು ಆಗದಿದ್ದರೆ:

E-EPIC ಸಂಖ್ಯೆಯನ್ನು ತಪ್ಪಿಲ್ಲದೆ ನಮೂದಿಸಬೇಕಾಗುತ್ತದೆ ಈ ಸಂಖ್ಯೆಯು ಇಂಗ್ಲಿಷ್ ಅಕ್ಷರಗಳು ಮತ್ತು ಸಂಖ್ಯೆಗಳ ಸಂಯೋಜನೆಯಿಂದ ಇದ್ದು ಸರಿಯಾದ ರಾಜ್ಯ, ವಿಧಾನಸಭಾ ಕ್ಷೇತ್ರ ಮತ್ತು ಇತರ ವಿವರಗಳನ್ನು ಸರಿಯಾಗಿ ನಮೂದಿಸಿದ್ದೀರಾ ಎಂದು ಪರಿಶೀಲಿಸಿಕೊಳ್ಳಿ

E-EPIC ಸಂಖ್ಯೆ ಸಿಗದಿದ್ದರೆ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಪಡೆದುಕೊಳ್ಳಬಹುದು

ಲಾಗಿನ್ ಸಂದರ್ಭದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ:

ಬಳಕೆದಾರರು ಲಾಗಿನ್ ಆಗುವ ಸಂಬಂಧದಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆ ಅಥವಾ ಪಾಸ್ವರ್ಡ್ ಸರಿಯಾಗಿದೆ ಎಂದು ಪರಿಶೀಲಿಸಿಕೊಳ್ಳಿ ಒಂದು ವೇಳೆ ತಪ್ಪು ಪಾಸ್ವರ್ಡ್ ಎಂದು ಬಂದಲ್ಲಿ Forgot Password ಎಂಬ ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ ದೃಢೀಕರಣ ಪ್ರಕ್ರಿಯೆಗೆ ಒಳಪಟ್ಟು ಪಾಸ್ವರ್ಡ್ ಅನ್ನು ಮರುಪರಿಶೀಲಿಸಿ ಲಾಗಿನ್ ಆಗಿ

ಪಿಡಿಎಫ್ ಡೌನ್ಲೋಡ್ ಆಗದಿದ್ದರೆ:

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಪರಿಶೀಲಿಸಿ. ಬ್ರೌಸರ್ ಅನ್ನು ರಿಫ್ರೇಶ್ ಮಾಡುವುದರ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಸಾಕಷ್ಟು ಪ್ರಮಾಣದ ಸ್ಟೋರೇಜ್ ಇದ್ದು ಪಿಡಿಎಫ್ ಫೈಲ್ ಅನ್ನು ತೆರೆಯುವ ಸಾಫ್ಟ್ವೇರ್ ಅನ್ನು ಹೊಂದಿರಬೇಕಾಗುತ್ತದೆ

ಮೊಬೈಲ್ ಸಂಖ್ಯೆ ನೋಂದಾವಣೆ ಆಗಿಲ್ಲದಿದ್ದರೆ:

ಕೆಲವೊಂದು ಸಂದರ್ಭಗಳಲ್ಲಿ ಮೊಬೈಲ್ ಸಂಖ್ಯೆ ನೋಂದಾವಣೆ ಆಗಿರುವುದಿಲ್ಲ ಈ ಸಂದರ್ಭದಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗುವ ಮೂಲಕ ಮೊಬೈಲ್ ನಂಬರನ್ನು ನೋಂದಾವಣೆ ಮಾಡಿಕೊಳ್ಳಬಹುದು.

E-EPIC ಅನ್ನು ಎಲ್ಲೆಲ್ಲಿ ಬಳಸಬಹುದು

  • ಮತದಾನ ಮಾಡುವ ಸಂದರ್ಭದಲ್ಲಿ ಮತದಾನ ಕೇಂದ್ರಗಳಲ್ಲಿ ಗುರುತಿನ ಚೀಟಿಯಾಗಿ ಇದನ್ನು ಬಳಸಬಹುದು
  • ಕೆಲವು ಸರ್ಕಾರಿ ಯೋಜನೆಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಪ್ರಯೋಜನವನ್ನು ಪಡೆಯಲು ದಾಖಲೆಯಾಗಿ ಬಳಸಬಹುದು
  • ಅಗತ್ಯವಿರುವ ಸಂದರ್ಭಗಳಲ್ಲಿ ಗುರುತಿನ ದಾಖಲೆಯಾಗಿ ಹಾಗೂ ಸೇವೆಗಳನ್ನು ಪಡೆಯುವಲ್ಲಿ ಹೆಚ್ಚುವರಿ ದಾಖಲೆಗಳಾಗಿ ಉಪಯೋಗಿಸಬಹುದು
  • E-EPIC ನಮ್ಮ ವೈಯಕ್ತಿಕ ದಾಖಲೆ ಆಗಿರುವುದರಿಂದ ಪ್ರಮುಖ ಡಿಜಿಟಲ್ ದಾಖಲೆಗಳಲ್ಲಿ ಒಂದಾಗಿದ್ದು ಸದಾ ಮೊಬೈಲ್ ನಲ್ಲಿ ಉಳಿಸಿಕೊಳ್ಳಬಹುದು

ಈ ಎಫ್ ಡೌನ್ಲೋಡ್ ಮಾಡುವಾಗ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು

  • ತಪ್ಪಾದ ಎಪಿಕ್ ಸಂಖ್ಯೆಯನ್ನು ನಮೂದಿಸುವುದು
  • ಬೇರೆ ವ್ಯಕ್ತಿಗಳ ಮೊಬೈಲ್ ನಂಬರನ್ನು ಬಳಸುವುದು
  • ಓಟಿಪಿಯನ್ನು ತಪ್ಪಾಗಿ ನಮೂದಿಸುವುದು
  • ಅಧಿಕೃತವಲ್ಲದ ಅನಧಿಕೃತ ವೆಬ್ಸೈಟ್ ಗಳನ್ನು ಬಳಸುವುದು
  • ಡೌನ್ಲೋಡ್ ಆದ ಪಿಡಿಎಫ್ ಫೈಲ್ ಅನ್ನು ಸೇವ್ ಮಾಡದೆ ಹಾಗೆ ಬಿಡುವುದು
  • ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡದೆ ನವೀಕರಿಸದೆ ಸೇವೆಯನ್ನು ಪಡೆಯಲು ಪ್ರಯತ್ನಿಸುವುದು

ಈ ಎಫ್ ಡೌನ್ಲೋಡ್ ಪ್ರಕ್ರಿಯೆಯಲ್ಲಿ ಸಮಸ್ಯೆಗಳನ್ನು ಎದುರಿಸಿದರೆ ಏನು ಮಾಡಬೇಕು

ಆನ್ಲೈನ್ ಪ್ರವೃತ್ತಿಗಳಲ್ಲಿ ತಾಂತ್ರಿಕ ದೋಷಗಳು ಬರುವುದು ಸಾಮಾನ್ಯ ಈ ಸಂದರ್ಭಗಳಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿರುತ್ತದೆ

  • ಭಾರತ ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1 9 5 0 ಯನ್ನು ಸಂಪರ್ಕಿಸಿ
  • ನಿಮ್ಮ ಪ್ರದೇಶಕ್ಕೆ ನಿಯೋಜನೆಗೊಂಡಿರುವ ಬಿ ಎಲ್ ಒ ಅಂದರೆ ಬೂತ್ ಲೆವೆಲ್ ಆಫೀಸರ್ ಅನ್ನು ಸಂಪರ್ಕಿಸಿ
  • ತಾಲೂಕು ಅಥವಾ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ
  • ಮೊಬೈಲ್ ಅಪ್ಲಿಕೇಶನ್ ಅಥವಾ ಪೋರ್ಟಲ್ ನಲ್ಲಿ ಲಭ್ಯವಿರುವ ಸಹಾಯ ಎಂಬ ವಿಭಾಗವನ್ನು ಆರಿಸಿ

ಡಿಜಿಟಲ್ ದಾಖಲೆಗಳನ್ನು ಹೊಂದುವ ಅಭ್ಯಾಸ ಬೆಳೆಸಿಕೊಳ್ಳಿ

ಇಂದಿನ ದಿನಗಳಲ್ಲಿ ಪ್ರಮುಖ ದಾಖಲೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ವಾಹನದ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳನ್ನು ಪ್ಲಾಸ್ಟಿಕ್ ಕಾರ್ಡಿನ ರೂಪದಲ್ಲಿ ಹಾಗೂ ಡಿಜಿಟಲ್ ರೂಪದಲ್ಲಿ ಲಭ್ಯವಿರುವ ಸೇವೆಗಳನ್ನು ಒದಗಿಸಲಾಗುತ್ತದೆ ಇದೇ ರೀತಿ ಚುನಾವಣಾ ಮತದಾರರ ಗುರುತಿನ ಚೀಟಿಯು ಕೂಡ ಡಿಜಿಟಲ್ ಆವೃತ್ತಿಯನ್ನು ಪಡೆದುಕೊಂಡಿದ್ದು ಈ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಈ ಡಿಜಿಟಲ್ ದಾಖಲೆಗಳನ್ನು ಬಳಸುವುದರ ಮೂಲಕ ಯಾವ ಸಮಯದಲ್ಲಿ ಬೇಕಾದರೂ ನಾವು ಬಳಸಬಹುದಾಗಿರುತ್ತದೆ ಹಾಗೂ ವೀಕ್ಷಿಸಬಹುದಾಗಿರುತ್ತದೆ ಉತ್ತಮವಾಗಿದೆ.

E-EPIC Download 2026: FAQ’s

ಪ್ರಶ್ನೆ-1: E-EPIC ಎಂದರೆ ಏನು?
ಉತ್ತರ:  E-EPIC ಎಂದರೆ ಭಾರತ ಚುನಾವಣಾ ಆಯೋಗವು ಮತದಾರರಿಗೆ ನೀಡಿರುವ ಡಿಜಿಟಲ್ ಆವೃತ್ತಿಯ ಗುರುತಿನ ಚೀಟಿಯಾಗಿದೆ

ಪ್ರಶ್ನೆ-2:  E-EPIC ಮತ್ತು ಪ್ಲಾಸ್ಟಿಕ್ ವೋಟರ್ ಐಡಿ ಎರಡು ಮಾನ್ಯವೇ?
ಉತ್ತರ: ಹೌದು, ಎರಡಕ್ಕೂ ಕಾನೂನು ಬದ್ಧ ಮಾನ್ಯತೆಯನ್ನು ಕೊಡಲಾಗಿದೆ. ವ್ಯತ್ಯಾಸವೆಂದರೆ ಪ್ಲಾಸ್ಟಿಕ್ ಕಾರ್ಡ್ ಭೌತಿಕ ಕಾರ್ಡ್ ಆಗಿದ್ದು E-EPIC ಪಿಡಿಎಫ್ ರೂಪದಲ್ಲಿರುತ್ತದೆ

ಪ್ರಶ್ನೆ-3: E-EPIC ಡೌನ್ಲೋಡ್ ಮಾಡಲು ಅರ್ಜಿ ಶುಲ್ಕ ಪಾವತಿಸಬೇಕೇ?
ಉತ್ತರ: ಇಲ್ಲ, ಇದೊಂದು ಸಂಪೂರ್ಣ ಉಚಿತ ಸೇವೆಯಾಗಿದೆ

ಪ್ರಶ್ನೆ-4: ಮೊಬೈಲ್ ಮೂಲಕ ಡೌನ್ಲೋಡ್ ಮಾಡಬಹುದೇ?
ಉತ್ತರ: ಹೌದು, ಅಧಿಕೃತ ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇದರ ಮೂಲಕ ಡೌನ್ಲೋಡ್ ಮಾಡಬಹುದು

ಪ್ರಶ್ನೆ-5: ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಬೇಕಾದರೆ ಅಧಿಕೃತ ವೆಬ್ಸೈಟ್ ಯಾವುದು?
ಉತ್ತರ: N V S P

ಪ್ರಶ್ನೆ-6: ಎಪಿಕ್ ಸಂಖ್ಯೆ ಇಲ್ಲದಿದ್ದರೆ ಏನು ಮಾಡಬೇಕು?
ಉತ್ತರ: ಅಧಿಕೃತ ಪೋರ್ಟಲ್ ನಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ ಹುಡುಕಬಹುದು ಅಥವಾ ನಿಮ್ಮ ಪ್ರದೇಶದ ಬಿ ಎಲ್ ಓ ಗಳನ್ನು ಸಂಪರ್ಕಿಸಿ ಸಂಖ್ಯೆಯನ್ನು ಪಡೆಯಬಹುದು

ಪ್ರಶ್ನೆ-7: ಡಿಜಿ ಲಾಕರ್ ನಲ್ಲಿ E-EPIC ಅನ್ನು ಉಳಿಸಬಹುದೇ?
ಉತ್ತರ: ಹೌದು, ಡಿಜಿ ಲಾಕರ್ ಒಂದು ಕೇಂದ್ರ ಸರ್ಕಾರದ ಅಧಿಕೃತ ದಾಖಲೆ ಸಂಸ್ಕರಣ ವ್ಯವಸ್ಥೆಯಾಗಿದ್ದು ಇಲ್ಲಿ E-EPIC ಅನ್ನು ಉಳಿಸಬಹುದು

ಪ್ರಶ್ನೆ-8: E-EPIC ಎಲ್ಲ ರಾಜ್ಯಗಳ ಮತದಾರರಿಗೆ ಲಭ್ಯವೇ?
ಉತ್ತರ: ಹೌದು, ಭಾರತ ದೇಶದ ಅಧಿಕೃತ ಎಲ್ಲಾ ಮತದಾರರಿಗೂ E-EPIC ಅನ್ನು ಹೊಂದುವ ಸೇವೆಯನ್ನು ಕಲ್ಪಿಸಲಾಗಿದೆ

ಅಧಿಕೃತ ಲಿಂಕ್‌ ಗಳು

ಮಾಹಿತಿ ಸಂಬಂಧಪಟ್ಟ ಲಿಂಕ್
ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್ ಭಾರತ ಚುನಾವಣಾ ಆಯೋಗ
ವೋಟರ್ ಹೆಲ್ಪ್ ಲೈನ್‌‌ ಮೊಬೈಲ್ ಅಪ್ಲಿಪೇಶನ್‌ ಲಿಂಕ್
ವೋಟರ್ ಹೆಲ್ಪ್ ಲೈನ್‌‌‌ ಪೋರ್ಟಲ್‌ ಲಿಂಕ್
ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ ‌

ಪರೀಕ್ಷಾ ಸಲಹೆ

ವೃತ್ತಿ ಮಾರ್ಗದರ್ಶನ

ಸರ್ಕಾರಿ ಯೋಜನೆಗಳು

Last Updated: 02 July 2026

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ನಾಗರಿಕರು ಸಹ ಡಿಜಿಟಲ್ ದಾಖಲೆಗಳನ್ನು ಹೊಂದುವುದು ಪ್ರಮುಖವಾಗಿದೆ ಏಕೆಂದರೆ ಇಂದಿನ ದಿನಗಳಲ್ಲಿ ದಾಖಲೆಗಳು ಕಳೆದುಹೋಗುವ ಸಾಧ್ಯತೆ ಹೆಚ್ಚಿರುವುದರಿಂದ ಭಾರತ ಸರ್ಕಾರದ ಚುನಾವಣಾ ಆಯೋಗವು ನೀಡಿರುವ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವೋಟರ್ ಐಡಿಯನ್ನು ಪಡೆಯಬಹುದಾಗಿರುತ್ತದೆ

ಈ ಸೇವೆಗಳನ್ನು ಬಳಸುವುದರಿಂದ ಸಮಯ ಹಣ ಹಾಗೂ ಶ್ರಮವನ್ನು ಉಳಿಸುವುದರ ಜೊತೆಯಲ್ಲಿ ಸುರಕ್ಷಿತವಾಗಿ ನಮ್ಮೊಂದಿಗೆ ಇಟ್ಟುಕೊಳ್ಳಬಹುದಾಗಿರುತ್ತದೆ

ನೀವೇನಾದರೂ ಇನ್ನು ನಿಮ್ಮ ಡಿಜಿಟಲ್ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಲ್ಲದಿದ್ದರೆ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆದ ವೋಟರ್ ಹೆಲ್ಪ್ ಲೈನ್ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಡೌನ್ಲೋಡ್‌ ಮಾಡಿಕೊಳ್ಳಬಹುದು

ಈ ಮಾಹಿತಿಯು ಉಪಯುಕ್ತವೆನಿಸಿದರೆ ನಿಮ್ಮ ಕುಟುಂಬದವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಹಾಗೂ ನೀವು ಡಿಜಿಟಲ್ ಸೇವೆಯನ್ನು ಪಡೆಯುವುದರ ಜೊತೆಯಲ್ಲಿ ಅವರು ಸಹ ಸೇವೆಯ ಪ್ರಯೋಜನವನ್ನು ಪಡೆಯಲಿ

 

Related Articles:

New Salary Payment System In Karnataka 2026, Big Update: ನೌಕರರ ವೇತನ ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾವಣೆ. ಇಲ್ಲಿದೆ ಸಂಪೂರ್ಣ ಮಾಹಿತಿ

Social Media, Big Update 2026: ವಾಟ್ಸಾಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಬಳಸುವವರಿಗೆ ಬಿಗ್‌ ನ್ಯೂಸ್‌, ಇಲ್ಲಿದೆ ಸಂಪೂರ್ಣ ಮಾಹಿತಿ

Lost Phone, Big Update 2026: ನಿಮ್ಮ ಫೋನ್‌ ಕಳೆದುಹೋಗಿದೆಯೇ? ಈ ಸುಲಭ ಕೆಲಸ ಮಾಡುವುದರಿಂದ ಮರಳಿ ಪಡೆಯಿರಿ, ಇಲ್ಲಿದೆ ಹಂತ ಹಂತದ ಮಾಹಿತಿ.

Gruhalakshmi Scheme Update 2026, Big Change: ನಿಮ್ಮ ಖಾತೆಗೆ ಹಣ ಬರಬೇಕೆಂದರೆ ಈ ಕೆಲಸ ಮೊದಲು ಮಾಡಿ, ಸಂಪೂರ್ಣ ವಿವರ ಇಲ್ಲಿದೆ

RTE New Order 2026, Big Update: ಆರ್‌ ಟಿ ಇ ಶಾಲಾ ದಾಖಲಾತಿ ನಿಯಮದಲ್ಲಿ ಸರ್ಕಾರದ ಮಹತ್ತರ ಬದಲಾವಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

 

 

ಲೇಖಕರ ಟಿಪ್ಪಣಿ:  ಈ ಲೇಖನವನ್ನು ಸಾರ್ವಜನಿಕರಿಗೆ E-EPIC (ಡಿಜಿಟಲ್ ವೋಟರ್ ಐಡಿ) ಡೌನ್‌ಲೋಡ್ ಪ್ರಕ್ರಿಯೆಯನ್ನು ಸರಳವಾಗಿ ಅರ್ಥವಾಗುವಂತೆ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಅಧಿಕೃತ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪರಿಶೀಲಿಸುವುದು ಉತ್ತಮ.

*****

ಲೇಖಕರ ಬಗ್ಗೆ: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರದಲ್ಲಿ M.A ಪದವಿಯನ್ನು ಪಡೆದಿದ್ದು, ಇವರ  NewsByMR ತಂಡವು ಕಳೆದ ಮೂರು ವರ್ಷಗಳಿಂದ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ತಂತ್ರಜ್ಞಾನ ಮತ್ತು ಸಾರ್ವಜನಿಕ ಸೇವೆಗಳ ಕುರಿತು ನಿಖರ, ಸರಳ ಹಾಗೂ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಪ್ರಕಟಿಸುತ್ತದೆ. ಓದುಗರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

*****

Disclaimer: ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ನಿಯಮಗಳು ಮತ್ತು ಪ್ರಕ್ರಿಯೆಗಳು ಕಾಲಕಾಲಕ್ಕೆ ಬದಲಾಗಬಹುದು. ಅಧಿಕೃತ ಹಾಗೂ ಇತ್ತೀಚಿನ ಮಾಹಿತಿಗಾಗಿ ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿ. ಲೇಖನದ ಆಧಾರದ ಮೇಲೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಓದುಗರೇ ಹೊಣೆಗಾರರು.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment