Telegram Join Our Telegram WhatsApp Join Our WhatsApp

KMF GUMUL Recruitment 2026, Big Opportunity: ವಿವಿಧ ಹುದ್ದೆಗಳ ನೇಮಕಾತಿ, ಅರ್ಹತೆ, ಸಂಬಳ, ಅರ್ಜಿ ಸಲ್ಲಿಕೆ ಬಗ್ಗೆ ಸಂಪೂರ್ಣ ಮಾಹಿತಿ

KMF GUMUL ನಲ್ಲಿ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಮಸ್ಕಾರ ಸ್ನೇಹಿತರೆ, ಕಲ್ಬುರ್ಗಿ ಬೀದರ್ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ವಿವಿಧ ವರ್ಗದ ಒಟ್ಟು 50 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಸರ್ಕಾರಿ ವಲಯದಲ್ಲಿ ಉತ್ತಮ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಹೊಂದಿರುವ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ

ಈ ನೇಮಕಾತಿಯು ಕಲ್ಯಾಣ ಕರ್ನಾಟಕ ಮತ್ತು ಸ್ಥಳೀಯ ವೃಂದದ ಅಭ್ಯರ್ಥಿಗಳಿಗೆ ಸೂಕ್ತ ವೇತನ ಶ್ರೇಣಿ, ಉತ್ತಮ ಭತ್ಯೆಗಳು ಹಾಗೂ ಪದೋನ್ನತಿ ಅವಕಾಶಗಳನ್ನು ಕಲ್ಪಿಸುವ ಈ ಉತ್ತಮ ಉದ್ಯೋಗಗಳು ವೃತ್ತಿ ಜೀವನವನ್ನು ದೀರ್ಘಕಾಲದಲ್ಲಿ ರೂಪಿಸಿಕೊಳ್ಳಲು ಸಹಕರಿಸಲಿವೆ

ಕರ್ನಾಟಕ ಕೃಷಿ ಇಲಾಖೆ ನೇಮಕಾತಿ ಮಾಹಿತಿ : ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ನೇಮಕಾತಿ

KMF ನೇಮಕಾತಿ ಅಧಿಸೂಚನೆ ವಿವರ

  • ನೇಮಕಾತಿ ಸಂಸ್ಥೆ :  ಕಲ್ಬುರ್ಗಿ ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ
  • ಹುದ್ದೆಗಳ ಹೆಸರು :  ಸಹಾಯಕ ವ್ಯವಸ್ಥಾಪಕರು, ಲೆಕ್ಕಾಧಿಕಾರಿ, ತಾಂತ್ರಿಕ ಅಧಿಕಾರಿ, ಸೂಪರ್ವೈಸರ್, ಹಿರಿಯ ಡೈರಿ ಕೆಮಿಸ್ಟ್, ವಿಸ್ತರಣಾಧಿಕಾರಿ, ಲೆಕ್ಕ ಸಹಾಯಕ, ಆಡಳಿತ ಸಹಾಯಕ, ಕಿರಿಯ ತಾಂತ್ರಿಕರು, ಖರೀದಿ ಉಗ್ರಾಣ ಅಧಿಕಾರಿ ಹಾಗೂ ಮಾರುಕಟ್ಟೆ ಸಹಾಯಕ ಹುದ್ದೆಗಳು
  • ಒಟ್ಟು ಹುದ್ದೆಗಳ ಸಂಖ್ಯೆ :  50 ಹುದ್ದೆಗಳು
  • ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಮಾತ್ರ
  • ಉದ್ಯೋಗ ನಿರ್ವಹಣೆಯ ಸ್ಥಳ :  ಕಲ್ಬುರ್ಗಿ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ

KMF ನೇಮಕಾತಿಯ ಹುದ್ದೆವಾರು ವಿವರಗಳು

ಹುದ್ದೆಗಳ ಹೆಸರು ಖಾಲಿಯಿರುವ ಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು 04 ಹುದ್ದೆಗಳು
ಲೆಕ್ಕಾಧಿಕಾರಿ 01 ಹುದ್ದೆ
ಹಿರಿಯ ಕೆಮಿಸ್ಟ್ 02 ಹುದ್ದೆಗಳು
ತಾಂತ್ರಿಕ ಅಧಿಕಾರಿ 01 ಹುದ್ದೆ
ವಿಸ್ತರಣಾಧಿಕಾರಿ ದರ್ಜೆ-3 13 ಹುದ್ದೆಗಳು
ಸುಪ್ರವೈಸರ್ ದರ್ಜೆ-2 05 ಹುದ್ದೆಗಳು
ಆಡಳಿತ ಸಹಾಯಕ ದರ್ಜೆ-3 06 ಹುದ್ದೆಗಳು
ಲೆಕ್ಕ ಸಹಾಯಕ ದರ್ಜೆ-3 08 ಹುದ್ದೆಗಳು
ಮಾರುಕಟ್ಟೆ ಸಹಾಯಕ ದರ್ಜೆ-3 10 ಹುದ್ದೆಗಳು
ಕಿರಿಯ ತಾಂತ್ರಿಕರು 04 ಹುದ್ದೆಗಳು
ಖರೀದಿ ಮತ್ತು ಉಗ್ರಾಣ ಅಧಿಕಾರಿ 01 ಹುದ್ದೆ

 

ಈ ನೇಮಕಾತಿಯ ಅರ್ಹತಾ ವಿವರಗಳು

ಶೈಕ್ಷಣಿಕ ವಿದ್ಯಾರ್ಹತೆ

KMF ನಲ್ಲಿ ಅಧಿಸೂಚನೆಯಾಗಿರುವ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಮಂಡಳಿಗಳಿಂದ ಈ ಕೆಳಕಂಡ ನಿಗದಿಪಡಿಸಲಾಗಿರುವ ವಿದ್ಯಾರ್ಥಿಯನ್ನು ಹೊಂದಿರಬೇಕಾಗುತ್ತದೆ

  • ಸಹಾಯಕ ವ್ಯವಸ್ಥಾಪಕ ಹುದ್ದೆಗಳು :  ಬಿ.ವಿ.ಎಸ್‌.ಸಿ ಪದವಿ ಮತ್ತು ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ಜ್ಞಾನವನ್ನು ಹೊಂದಿರತಕ್ಕದ್ದು
  • ಲೆಕ್ಕಾಧಿಕಾರಿ ಹುದ್ದೆ :  ಪ್ರಥಮ ದರ್ಜೆಯಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಜೊತೆಗೆ ಸಿ.ಎ, ಐ.ಸಿ.ಡಬ್ಲ್ಯೂ.ಎ ಮತ್ತು ಟ್ಯಾಲಿ ಜಿ.ಎಸ್‌.ಟಿ ಜ್ಞಾನ ಹಾಗೂ ಮೂರು ವರ್ಷಗಳ ಲೆಕ್ಕಾಧಿಕಾರಿ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು
  • ತಾಂತ್ರಿಕ ಅಧಿಕಾರಿ ಹುದ್ದೆ :  ಬಿ.ಟೆಕ್ ಬಿ.ಎಸ್ಸಿ ಪದವಿ ಮತ್ತು ತಾಂತ್ರಿಕ ಅಧಿಕಾರಿಯಾಗಿ ಎರಡು ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು
  • ಡೈರಿ ಸೂಪರ್ವೈಸರ್ :  ಸಂಬಂಧಿಸಿದ ಸೂಪರ್ ವಿಷನ್ ವಿಭಾಗದಲ್ಲಿ ಡಿಪ್ಲೋಮಾ ತಾಂತ್ರಿಕ ವಿಭಾಗದಲ್ಲಿ ಮತ್ತು ಸೂಪರ್ವೈಸಿಂಗ್ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವವನ್ನು ಹೊಂದಿರಬೇಕು 
  • ಹಿರಿಯ ಕೆಮಿಸ್ಟ್ : ಪ್ರಥಮ ದರ್ಜೆಯಲ್ಲಿ ಬಿ.ಎಸ್ಸಿ ಪದವಿಯ ಜೊತೆಗೆ ಎರಡು ವರ್ಷಗಳ ಲ್ಯಾಬ್ ಕೆಮಿಸ್ಟ್ ಅನುಭವವನ್ನು ಹೊಂದಿರಬೇಕು
  • ವಿಸ್ತರಣಾಧಿಕಾರಿ ದರ್ಜೆ-3 :  ಯಾವುದೇ ವಿಭಾಗದ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಳಿಸಬೇಕು ಮತ್ತು ಕಂಪ್ಯೂಟರ್ ನಿರ್ವಹಣಾ ಜ್ಞಾನವನ್ನು ತಿಳಿದಿರಬೇಕು 
  • ಆಡಳಿತ ಸಹಾಯಕ ದರ್ಜೆ-3 :  ಹುದ್ದೆಗಳು ಯಾವುದೇ ಪದವಿಯಲ್ಲಿ ದ್ವಿತೀಯ ದರ್ಜೆ ಅಂಕಗಳೊಂದಿಗೆ ಉತ್ತೀರ್ಣಗೊಂಡು ಕಂಪ್ಯೂಟರ್ ಆಫೀಸ್ ಹಾಗೂ ಕಂಪ್ಯೂಟರ್ ನಿರ್ವಹಣೆಯ ಜ್ಞಾನವನ್ನು ಹೊಂದಿರಬೇಕು
  • ಲೆಕ್ಕ ಸಹಾಯಕ ಹುದ್ದೆಗಳು ದರ್ಜೆ-3 :   ಬಿಕಾಂ ಪದವಿಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಟ್ಯಾಲಿ ಜಿ.ಎಸ್.ಟಿ ತರಬೇತಿ ಜ್ಞಾನವನ್ನು ಹೊಂದಿರಬೇಕು
  • ಮಾರುಕಟ್ಟೆ ಸಹಾಯಕ ದರ್ಜೆ-3 : ಹುದ್ದೆಗಳು ಮಾರುಕಟ್ಟೆ ವಿಷಯದಲ್ಲಿ ಬಿ.ಬಿ.ಎಂ ಅಥವಾ ಬಿ.ಬಿ.ಎ ಪದವಿಗಳನ್ನು ಪ್ರಥಮ ಅಥವಾ ದ್ವಿತೀಯ ದರ್ಜೆಯಲ್ಲಿ ಪೂರ್ಣಗೊಳಿಸಿದ್ದು ಕಂಪ್ಯೂಟರ್ ಜ್ಞಾನವನ್ನು ತಿಳಿದುಕೊಂಡಿರಬೇಕು
  • ಕಿರಿಯ ತಾಂತ್ರಿಕ ಹುದ್ದೆಗಳು : ಕನಿಷ್ಠ ಎಸ್ .ಎಸ್. ಎಲ್. ಸಿ ಯನ್ನು ಪಾಸ್ ಆಗಿದ್ದು ಸಂಬಂಧಪಟ್ಟ ಟ್ರೇಡ್ ನಲ್ಲಿ ಐಟಿಐ ಕೋರ್ಸ್ ಅನ್ನು ಪಾಸ್ ಆಗಿರಬೇಕು ಹಾಗೂ ಅಪ್ರೆಂಟಿಸ್ ಪ್ರಮಾಣವನ್ನು ಹೊಂದುವುದರ ಜೊತೆಯಲ್ಲಿ ಎರಡು ವರ್ಷಗಳ ಅನುಭವವಿದ್ದರೆ ಆದ್ಯತೆಯನ್ನು ನೀಡಲಾಗುವುದು
  • ಖರೀದಿ ಮತ್ತು ಉಗ್ರಾಣ ಅಧಿಕಾರಿ : ಪ್ರಥಮ ದರ್ಜೆಯಲ್ಲಿ ಬಿ.ಕಾಂ, ಬಿ.ಬಿ.ಎ ಪದವಿಯೊಂದಿಗೆ ಕೋರ್ಸುಗಳಲ್ಲಿ ಉತ್ತೀರ್ಣರಾಗಿರಬೇಕು ಎರಡು ವರ್ಷಗಳ ಅನುಭವವಿದ್ದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ 

ವಯೋಮಿತಿ ವಿವರ ಮತ್ತು ವಯಮಿತಿಯಲ್ಲಿ ಸಡಿಲಿಕೆ

ಈ KMF ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರ್ಣಗೊಳಿಸಿರಬೇಕು ಅದರಂತೆಯೇ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿ ವಿವರವು ಇರುತ್ತದೆ.

ಕರ್ನಾಟಕ ಸರ್ಕಾರದ ವಯೋಮಿತಿ ಸಡಿಲಿಕೆ ಆದೇಶದನ್ವಯ ಪ್ರಸ್ತುತ ಈ ನೇಮಕಾತಿಯಲ್ಲಿ ಒಂದು ಬಾರಿಗೆ ಕ್ರಮವಾಗಿ ಆದೇಶದಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 05 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಲಿಕೆ ನೀಡಲಾಗಿದೆ.

ಈ ಆದೇಶದ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ 45 ವರ್ಷಗಳು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 43 ವರ್ಷಗಳು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿರುತ್ತದೆ ಇದರ ಜೊತೆಯಲ್ಲಿ ವಿಕಲಚೇತನ ಅಭ್ಯರ್ಥಿಗಳು ಹಾಗೂ ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯು ಅನ್ವಯವಾಗುತ್ತದೆ ವಯೋಮಿತಿ ಸಡಿಲಿಕೆಯು ಕ್ರಮವಾಗಿ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಿ

ವೇತನದ ವಿವರಗಳು

ಈ KMF ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರ ಆಕರ್ಷಕ ವೇತನವನ್ನು ತಿಂಗಳ ವಿಧಾನದಲ್ಲಿ ನೀಡಲಾಗುತ್ತದೆ

  • ಸಹಾಯಕ ವ್ಯವಸ್ಥಾಪಕರು 83,700/- ರೂಗಳಿಂದ ರೂ.1,55,200/- ರೂಗಳು
  • ಲೆಕ್ಕಾಧಿಕಾರಿ, ಖರೀದಿ ಉಗ್ರಾಣ ಅಧಿಕಾರಿ, ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ 69,250/- ರೂಗಳಿಂದ ರೂ.1,34,200/- ರೂಗಳು
  • ಹಿರಿಯ ಕೆಮೆಸ್ಟ್ ಹುದ್ದೆಗಳು 65,950/- ರೂಗಳಿಂದ ರೂ.1,24,900/- ರೂಗಳು
  • ವಿಸ್ತರಣಾಧಿಕಾರಿ ದರ್ಜೆ-3 ಹಾಗೂ ಡೈರಿ ಸೂಪರ್ವೈಸರ್ ದರ್ಜೆ-2 ಹುದ್ದೆಗಳಿಗೆ 54,175/- ರೂಗಳಿಂದ 99,400/- ರೂಗಳು
  • ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಮಾರುಕಟ್ಟೆ ಸಹಾಯಕ ಹಾಗೂ ಹಿರಿಯ ತಾಂತ್ರಿಕ ಹುದ್ದೆಗಳಿಗೆ 34,100/- ರೂಗಳಿಂದ 67,600/- ರೂಗಳು

ಈ ಹುದ್ದೆಗಳಿಗೆ ಆಕರ್ಷಕ ವೇತನ ಹಾಗೂ ಉತ್ತಮ ಬಗ್ಗೆ ಸೌಲಭ್ಯಗಳು ಇರುವುದರಿಂದ ಉದ್ಯೋಗ ಪದ್ಧತಿಯ ಜೊತೆಯಲ್ಲಿ ದೀರ್ಘಕಾಲದ ಉದ್ಯೋಗವನ್ನು ಒಂದು ಅವಕಾಶವನ್ನು ಪಡೆಯಬಹುದು

ಆನ್ಲೈನ್ ಅರ್ಜಿ ಶುಲ್ಕ

ಸಾಮಾನ್ಯ ಅರ್ಹತೆ ಪಡೆದ ವಿದ್ಯಾರ್ಥಿಗಳು ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ :  1,000/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ  : 500/- ಗಳು

ಆನ್ಲೈನ್ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಬಳಸಿ ಪಾವತಿಸಲು ತಿಳಿಸಲಾಗಿದೆ ಯಾವುದೇ ರೀತಿಯ ಆಫ್ಲೈನ್ ಪಾವತಿ ಪದ್ಧತಿಗಳಾದ ಡಿಡಿ ಅಥವಾ ಮನೆ ಆರ್ಡರ್ಗಳನ್ನು ಅಧಿಕೃತ ಎಂದು ಪರಿಗಣಿಸಲಾಗುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಲು ಕೋರಿದೆ ಯಾವುದೇ ಮಧ್ಯವರ್ತಿ ಅಥವಾ ಆಫ್ ಲೈನ್ ವಿಧಾನಗಳನ್ನು ಅನುಸರಿಸದೇ ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಿ

  • ಮೊದಲು KMF ಒಕ್ಕೂಟದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ವಿಭಾಗಕ್ಕೆ ಭೇಟಿ ನೀಡಿ
  • ಹುದ್ದೆಗಳಿಗೆ ಅನುಗುಣವಾಗಿ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಮತ್ತು ನೀಡಿರುವ ಸೂಚನೆ ನಿಯಮಗಳನ್ನು ಸಂಪೂರ್ಣವಾಗಿ ಓದಿ ಅಲ್ಲಿ ನೀಡಲಾಗಿರುವ ಚೆಕ್ ಬಾಕ್ಸ್ ಅನ್ನು ಹೊತ್ತುವ ಮೂಲಕ ಒಪ್ಪಿಕೊಂಡಿದ್ದೇವೆ ಎಂಬುದನ್ನು ಖಚಿತಪಡಿಸಿ ಮುಂದುವರಿಸಿ
  • ನೀವು ಅರ್ಜಿ ಸಲ್ಲಿಸಲು ಬಯಸುವ ನಿಗದಿತ ಹುದ್ದೆಯ ಆನ್ಲೈನ್ ಅರ್ಜಿ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ವಿವರಗಳು ಶೈಕ್ಷಣಿಕ ಮಾಹಿತಿ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಭರ್ತಿ ಮಾಡಿ
  • ಇತ್ತೀಚನ ಬಿಳಿ ಬ್ಯಾಗ್ರೌಂಡ್ ಇರುವ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನೀವು ಅಪ್ಲೋಡ್ ಮಾಡುವ ಭಾವಚಿತ್ರವು ಸ್ವಯಂ ದೃಢೀಕೃತ ರೀತಿಯಲ್ಲಿ ಇರಬೇಕು‌
  • ಅಗತ್ಯ ದಾಖಲಾತಿಗಳಾದ ಜಾತಿ ಪ್ರಮಾಣ ಪತ್ರ ಮೀಸಲಾತಿ ಪ್ರಮಾಣ ಪತ್ರಗಳಾದ ಗ್ರಾಮೀಣ ಅಭ್ಯರ್ತಿ ಕನ್ನಡ ಮಾಧ್ಯಮ ವಿಕಲಚೇತನ ಹಾಗೂ ಅನ್ವಯಿಕ ಅನುಭವ ಪ್ರಮಾಣ ಪತ್ರಗಳಿದ್ದಲ್ಲಿ ಅವುಗಳನ್ನು ನಿಗದಿತ ಸ್ಥಳದಲ್ಲಿ ನಿಗದಿಪಡಿಸಲಾಗಿರುವ ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ದಾಖಲೆಗಳು ಎಲ್ಲವೂ ಸರಿಯಾಗಿವೆ ಎಂದು ಖಚಿತಪಡಿಸಿಕೊಂಡ ನಂತರ ಮುಂದಿನ ಹಂತಕ್ಕೆ ಹೋಗಿ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಸಲ್ಲಿಸಲು ಸಬ್ಮಿಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
  • ಆನ್ಲೈನ್ ಅರ್ಜಿ ಶುಲ್ಕವನ್ನು ಪೇಮೆಂಟ್ ಗೇಟ್‌ ವೇ ಗಳನ್ನು ಬಳಸುವ ಮೂಲಕ ನಿಗದಿಪಡಿಸಲಾಗಿರುವ ಅರ್ಜಿ ಶುಲ್ಕದ ಮೊತ್ತವನ್ನು ಪಾವತಿಸಿ ಶುಲ್ಕ ಪಾವತಿ ರಸಿದಿಯನ್ನು ಸೆರೆ ಹಿಡಿಯುವುದನ್ನು ಮರೆಯಬೇಡಿ
  • ಶುಲ್ಕ ಪಾವತಿಯಾದ ನಂತರ ನಿಮ್ಮ ಅರ್ಜಿಯು ಯಶಸ್ವಿಯಾಗಿ ಸಲ್ಲಿಕೆಗೊಂಡು ಅರ್ಜಿಯ ಸ್ವೀಕೃತಿ ಪತ್ರವು ನಿಮ್ಮ ಸ್ಕ್ರೀನ್ ನ ಮೇಲೆ ಕಾಣುತ್ತದೆ ಅದನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಟ್ಟುಕೊಂಡು ಪ್ರಿಂಟ್ ತೆಗೆದುಕೊಳ್ಳಿ

ಆಯ್ಕೆ ಪ್ರಕ್ರಿಯೆ

ಈ KMF ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಸಂಪೂರ್ಣ ವಿವರ ಈ ಕೆಳಕಂಡಂತಿದೆ

ಲಿಖಿತ ಪರೀಕ್ಷೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮಗಳ ಪ್ರಕಾರ ಒಟ್ಟು 200 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಯ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಇದರಲ್ಲಿ 50 ಅಂಕಗಳಿಗೆ ಕನ್ನಡ ಭಾಷೆ, 25 ಅಂಕಗಳಿಗೆ ಇಂಗ್ಲಿಷ್ ಭಾಷೆ, 25 ಅಂಕಗಳಿಗೆ ಸಾಮಾನ್ಯ ಜ್ಞಾನ, 50 ಅಂಕಗಳಿಗೆ ಸಹಕಾರ ಮತ್ತು ಕಂಪ್ಯೂಟರ್ ವಿಚಾರಗಳು, 25 ಅಂಕಗಳಿಗೆ ಭಾರತದ ಸಂವಿಧಾನ, ಹಾಲು ಒಕ್ಕೂಟಕ್ಕೆ ಸಂಬಂಧಿಸಿದಂತೆ 25 ಅಂಕಗಳು ಒಳಗೊಂಡಿರುತ್ತವೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ ಈ ಸಂದರ್ಶನವು 15 ಅಂಕಗಳ ಆಧಾರದಲ್ಲಿದ್ದು ಅಂತಿಮವಾಗಿ ಲಿಖಿತ ಪರೀಕ್ಷೆಯಲ್ಲಿನ 85ರಷ್ಟು ಅಂಕಗಳು ಮತ್ತು ಸಂದರ್ಶನದ ಅಂಕಗಳನ್ನು ಪರಿಶೀಲಿಸಿ ಕ್ರೋಡಿಕರಿಸಿ ಮೆರಿಟ್ ಪಟ್ಟಿ ಮತ್ತು ಮೀಸಲಾತಿ ನಿಯಮಗಳು ಅನ್ವಯ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ

KMF Recruitment FAQ’s

1. ನಾನು ಪ್ರಸ್ತುತ ಪರೀಕ್ಷೆಯನ್ನು ಬರೆದು ಪಲಿತಾಂಶಕ್ಕಾಗಿ ಕಾಯುತ್ತಿರುವೆ ನಾನು ಅರ್ಜಿ ಸಲ್ಲಿಸಬಹುದೇ?

ಇಲ್ಲ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ನೇಮಕಾತಿ ಸೂಚನೆಯಂತೆ ನಿಗದಿತ ಅರ್ಹತೆಯನ್ನು ಹೊಂದಿರಬೇಕು ಹಾಗೂ ಅಂಕಪಟ್ಟಿಗಳನ್ನು ಸಹ ಹೊಂದಿರಬೇಕು ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

2. ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?

ಹೌದು, ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಪ್ರತಿ ಹುದ್ದೆಗು ಪ್ರತ್ಯೇಕವಾಗಿ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

3. ಈ ನೇಮಕಾತಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏನು‌ ?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 27-06-2026 ಕೊನೆಯ ದಿನಾಂಕವಾಗಿದೆ.

4. ನಮ್ಮ ಬಳಿ ಕಂಪ್ಯೂಟರ್ ಇಲ್ಲ ನಾನು ಅರ್ಜಿಯನ್ನು ಅಂಚೆ ಮೂಲಕ ಕಳಿಸಬಹುದೇ?

ಇಲ್ಲ, ಈ ನೇಮಕಾತಿಗೆ ಅರ್ಜಿಗಳನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗಿರುತ್ತದೆ. ಹತ್ತಿರದ ಕಂಪ್ಯೂಟರ್‌ ಸೇವಾ ಕೇಂದ್ರದ ಮೂಲಕ ಆನ್‌ ಲೈನ್‌ ನಲ್ಲೇ ಅರ್ಜಿ ಸಲ್ಲಿಸಿ. ಅಂಚೆ ವ್ಯವಸ್ಥೆ ಅಥವಾ ಖುದ್ದಾಗಿ ಸಲ್ಲಿಸುವ ವ್ಯವಸ್ಥೆಗಳನ್ನು ತಿರಸ್ಕರಿಸಲಾಗಿದೆ

5. ಈ ಹುದ್ದೆಗಳಿಗೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ. ನೀಡಿದ್ದರೆ ಎಷ್ಟು ವರ್ಷ?

ಹೌದು, ಈ ಹುದ್ದೆಗಳಿಗೆ ನಿರ್ದಿಷ್ಟ ಪಡಿಸಿದ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಸರ್ಕಾರದ ಆದೇಶದ ಅನ್ವಯ ಒಂದು ಬಾರಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 05 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ಒದಗಿಸಲಾಗಿದೆ

ಪ್ರಮುಖ ದಿನಾಂಕಗಳು

KMF ಅಧಿಕೃತ ಪ್ರಕಟಣೆ ಪ್ರಕಟಿಸಿದ ದಿನಾಂಕ : 27-05-2026

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29-05-2026

ಅರ್ಜಿ ಸಲ್ಲಿಸಲು ಹಾಗೂ ಆನ್‌ ಲೈನ್‌ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 27-06-2026

ಸಂಬಂಧಿಸಿದ ಲಿಂಕ್‌ ಗಳು

ಅಧಿಕೃತ ವೆಬ್ಸೈಟ್ GUMUL KMF
ಅಧಿಕೃತ ಅಧಿಸೂಚನೆಯನ್ನು ಇಲ್ಲಿ ಓದಿ KMF GUMUL Recruitment Notification
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿಯನ್ನು ಪಡೆಯಿರಿ ನೇಮಕಾತಿ ಮಾಹಿತಿ     ಪರೀಕ್ಷಾ ತಯಾರಿ ಸಲಹೆಗಳು    ವೃತ್ತಿ ಮಾರ್ಗದರ್ಶನ    ಸರ್ಕಾರಿ ಯೋಜನೆಗಳ ಮಾಹಿತಿ

 

ಕೆಎಂಎಫ್ ಸಂಸ್ಥೆಯ ಬಗ್ಗೆ

KMF ಸ್ಥಾಪನೆ :

ಕರ್ನಾಟಕ ಹಾಲು ಮಹಾಮಂಡಳಿ (KMF) ಸಂಸ್ಥೆಯನ್ನು 1984 ರಲ್ಲಿ ಕರ್ನಾಟಕ ಸರ್ಕಾರದ ಸಹಕಾರ ಮಾದರಿ‌ ಅಡಿಯಲ್ಲಿ ಸ್ಥಾಪಿಸಲಾಯಿತು. ರಾಜ್ಯದ ಹಾಲು ಉತ್ಪಾದಕ ರೈತರಲ್ಲಿನ ಆರ್ಥಿಕ ಅಭಿವೃದ್ಧಿ, ಹಾಲು ಸಂಗ್ರಹಣೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಸಮಗ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇಂದು ಇದು ಭಾರತದ ಪ್ರಮುಖ ಹಾಗೂ ಪ್ರತಿಷ್ಠಿತ ಹಾಲು ಸಹಕಾರ ಸಂಸ್ಥೆಗಳಲ್ಲಿ ಒಂದಾಗಿದೆ.

ನಂದಿನಿ ಬ್ರಾಂಡ್ :

ನಂದಿನಿ ಬ್ರಾಂಡ್ KMF ನ ಪ್ರಮುಖ ಹಾಲು ಮತ್ತು ಹಾಲು ಉತ್ಪನ್ನಗಳ ಬ್ರಾಂಡ್ ಆಗಿದೆ. ಹಾಲು ಮತ್ತು ಅದರ ಉಪ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಂ ಸೇರಿದಂತೆ ವಿವಿಧ ಗುಣಮಟ್ಟದ ಹಾಗೂ ಹಲವಾರು ರೀತಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಉತ್ತಮ ಗುಣಮಟ್ಟದ ಪದಾರ್ಥಗಳು ಮತ್ತು ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಮಾರಾಟ ಮಾಡುವುದರಿಂದ ನಂದಿನಿ ಕರ್ನಾಟಕದ ಜನರ ವಿಶ್ವಾಸಾರ್ಹ ಬ್ರಾಂಡ್ ಆಗಿ ಬೆಳೆದಿದೆ.

ಕರ್ನಾಟಕ ಆರ್ಥಿಕತೆಗೆ ಕೊಡುಗೆ :

KMF ರಾಜ್ಯದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪಶುಸಂಗೋಪನೆ ಗ್ರಾಮೀಣ ಪ್ರದೇಶದ ಪ್ರಮುಖ ಕಸುಬಾಗಿದೆ. ಹಾಲಿನ ಉತ್ಪಾದನೆ ಮತ್ತು ಮಾರಾಟದ ಮೂಲಕ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಹಾಲು ಸಹಕಾರ ಚಟುವಟಿಕೆಗಳು ರೈತರ ಆದಾಯವನ್ನು ಹೆಚ್ಚಿಸಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ

ರೈತರಿಗೆ ಲಾಭ :

KMF ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡುವುದರ ಜೊತೆ ಜೊತೆಯಲ್ಲಿ ನ್ಯಾಯಯುತ ಬೆಲೆಯನ್ನು ನೀಡುವುದರಲ್ಲಿ ಪರಿಣಾಮಕಾರಿ ಯೋಜನೆ ಹಾಗೂ ನಿರ್ಧಾರಗಳನ್ನು ಕೈಗೊಂಡಿದೆ. ಪಶುಗಳಿಗೆ ಬೇಕಾಗುವ ಆಹಾರ, ಪಶುಗಳಿಗೆ ಬೇಕಾದ ಆರೋಗ್ಯ ಮತ್ತು ವೈದ್ಯಕೀಯ ಸೇವೆ, ಕೃತಕ ಗರ್ಭಧಾರಣೆ ಪದ್ದತಿ, ಉತ್ತಮ ಪಶುಸಂಗೋಪನೆಯ ಮಾರ್ಗ ಮತ್ತು ತರಬೇತಿ ಹಾಗೂ ಪ್ರೋತ್ಸಾಹಧನಗಳ ಮೂಲಕ ರೈತರ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಗ್ರಾಮೀಣ ಕುಟುಂಬಗಳ ಆದಾಯವನ್ನು ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ.

Milk Procurement Statistics :

KMF ಪ್ರತಿದಿನ ಲಕ್ಷಾಂತರ ಲೀಟರ್ ಹಾಲನ್ನು ರಾಜ್ಯದ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಸಂಗ್ರಹಿಸುತ್ತದೆ ಮತ್ತು ಸಂಸ್ಕರಣೆ ಮಾಡುತ್ತದೆ. ಸಾವಿರಾರು ಸಂಖ್ಯೆಯಲ್ಲಿನ ಗ್ರಾಮೀಣ ಹಾಲು ಸಹಕಾರ ಸಂಘಗಳು ಈ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾಲು ಸಂಗ್ರಹಣೆ ಮಾಡುವ ಪ್ರಮಾಣದಲ್ಲಿನ ದೃಷ್ಟಿಯಿಂದ KMF ದೇಶದ ಪ್ರಮುಖ ಹಾಲು ಸಹಕಾರ ಸಂಸ್ಥೆಗಳಲ್ಲೊಂದು ಎಂದು ಪರಿಗಣಿಸಿ ಪ್ರತಿಷ್ಠೆಯನ್ನು ನೀಡಲಾಗಿದೆ

Dairy Development Programs :

KMF ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತದೆ. ಪಶುಗಳ ಆರೋಗ್ಯ ತಪಾಸಣಾ ಶಿಬಿರಗಳು, ಉತ್ತಮ ತಳಿಯ ಪಶುಗಳ ಸಂಶೋಧನೆ ಹಾಗೂ ಅಭಿವೃದ್ಧಿ, ಹಾಲಿನ ಉತ್ಪಾದನೆ  ಮಟ್ಟವನ್ನು ಹೆಚ್ಚಿಸುವ ತರಬೇತಿಗಳು, ಹೊಸ ಹಾಲು ಶೀತಲೀಕರಣ ಕೇಂದ್ರಗಳ ಸ್ಥಾಪನೆ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಪ್ರೋತ್ಸಾಹದ ಮೂಲಕ ಹೈನುಗಾರಿಕೆ ಕ್ಷೇತ್ರದಲ್ಲಿನ ಸಮಗ್ರ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಸಹಕರಿಸುತ್ತದೆ.

ಯಾರು ಈ ನೇಮಕಾತಿಗೆ ಪ್ರಮುಖವಾಗಿ ಅರ್ಜಿ ಸಲ್ಲಿಸಬೇಕು

  • ಬಿ.ವಿ.ಎಸ್‌.ಸಿ ಪದವೀಧರರಿಗೆ ಸಹಾಯಕ ವ್ಯವಸ್ಥಾಪಕ ಹುದ್ದೆಗಳು ಸೂಕ್ತವಾಗಿವೆ
  • ಬಿ.ಕಾಂ ಪದವಿಯನ್ನು ಹೊಂದಿರುವವರಿಗೆ ಲೆಕ್ಕ ಸಹಾಯಕ ಮತ್ತು ಖರೀದಿ ಉಗ್ರಾಣ ಅಧಿಕಾರಿ ಹುದ್ದೆಗಳು ಸೂಕ್ತವಾಗಿವೆ
  • ಬಿ.ಬಿ.ಎ ಮತ್ತು ಎಂ.ಬಿ.ಎ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಮಾರುಕಟ್ಟೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಉತ್ತಮ
  • ಎಸ್ .ಎಸ್. ಎಲ್ ಸಿ. ಹಾಗೂ ಐಟಿಐ ಮಾಡಿರುವ ಅಭ್ಯರ್ಥಿಗಳು ಕಿರಿಯ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಕೆಎಂಎಫ್ ಸಂಸ್ಥೆಗೆ Join ಆಗುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು

  • ಉತ್ತಮ ವೇತನ ಶ್ರೇಣಿ ಮತ್ತು ಭತ್ಯೆಗಳು
  • ಉದ್ಯೋಗ ಭದ್ರತೆ
  • ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳು
  • ಕಾರ್ಮಿಕ ಭವಿಷ್ಯ ನಿಧಿ
  • ವಾರ್ಷಿಕ ವೇತನದ ಹೆಚ್ಚಳ
  • ಪದೋನ್ನತಿ ಅವಕಾಶಗಳು
  • ಸಹಕಾರ ವಲಯದಲ್ಲಿ ಕೆಲಸ ಮಾಡಿದ ಅನುಭವ

ಪರೀಕ್ಷಾ ತಯಾರಿಗೆ ಸಲಹೆಗಳು

ಕನ್ನಡ ಭಾಷಾ ಪರೀಕ್ಷೆ ಪ್ರಶ್ನೆಗಳು :
  • ವ್ಯಾಕರಣ – ಭಾಷೆಯ ಸರಿಯಾದ ಪದ ಬಳಕೆ ಉಚ್ಚಾರ ವಾಕ್ಯ ರಚನೆ ಹಾಗೂ ನಿಯಮಗಳ ಅಧ್ಯಯನ
  • ಸಂಧಿ – ಭಾಷೆಯ ಎರಡು ಅಕ್ಷರಗಳ ಅಥವಾ ಪದಗಳ ಸೇರ್ಪಡೆಯಿಂದ ರೂಪಾಂತರಗೊಳ್ಳುವ ಇನ್ನೊಂದು ಪದ
  • ಸಮಾಸ – ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಪದಗಳನ್ನು ಸೇರಿಸಿ ಒಂದು ಹೊಸ ಪದವನ್ನು ರಚನೆ ಮಾಡುವುದು
  • ವಿರುದ್ಧಾರ್ಥಕ ಪದಗಳು – ನಿರ್ದಿಷ್ಟ ಒಂದು ಪದಕ್ಕೆ ಅದರ ವಿರುದ್ಧಾರ್ಥವನ್ನು ನೀಡುವ ಪದಗಳನ್ನು ಗುರುತಿಸುವುದು
ಇಂಗ್ಲೀಷ್ ಭಾಷಾ ಪರೀಕ್ಷೆ ಪ್ರಶ್ನೆಗಳು :
  • ಗ್ರಾಮರ್ – ಇಂಗ್ಲೀಷ್ ಭಾಷೆಯಲ್ಲಿ ಸರಿಯಾದ ವಾಕ್ಯ ರಚನೆ ಮಾಡುವುದು ಮತ್ತು ನಿಯಮಗಳ ಅಧ್ಯಯನವನ್ನು ಮಾಡುವುದು
  • ವೊಕ್ಯಾಬುಲರಿ – ಹೊಸ ಪದಗಳ ಅರ್ಥವನ್ನು ಕಂಡುಹಿಡಿಯುವುದು ಬಳಸುವುದು ಹಾಗೂ ಪದಗಳ ಸಂಪತ್ತನ್ನು ಹೆಚ್ಚಿಸುವುದು
  • ಕಾಂಪ್ರಿಹೆನ್ಷನ್ – ನಿರ್ದಿಷ್ಟವಾಗಿ ನೀಡಲಾಗುವ ಗದ್ಯಭಾಗವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದು 
ಸಾಮಾನ್ಯ ಜ್ಞಾನ : 
  • ಕರ್ನಾಟಕ ರಾಜ್ಯದ ಇತಿಹಾಸ ಸಂಸ್ಕೃತಿ, ಸಾಮಾಜಿಕ ಪರಿಸ್ಥಿತಿಗಳು ಭೌಗೋಳಿಕ ಸನ್ನಿವೇಶಗಳು ಹಾಗೂ ಆಡಳಿತದ ಬಗ್ಗೆ ಮಾಹಿತಿಗಳು
  • ಭಾರತ ದೇಶದ ಇತಿಹಾಸ ಸಂವಿಧಾನ ಕೇಂದ್ರದ ಆಡಳಿತ ಮತ್ತು ದೇಶಕ್ಕೆ ಸಂಬಂಧಿಸಿದ ಪ್ರಮುಖ ಘಟನೆಗಳ ಬಗ್ಗೆ ಪ್ರಶ್ನೆಗಳು
  • ವಿಜ್ಞಾನದಲ್ಲಿ ದೈನಂದಿನ ಜೀವನಕ್ಕೆ ಸಂಬಂಧಿಸಿದ ತಂತ್ರಜ್ಞಾನ ಸಂಶೋಧನೆ ಮತ್ತು ಮೂಲಭೂತ ವೈಜ್ಞಾನಿಕ ತತ್ವಗಳ ಬಗ್ಗೆ ಅಧ್ಯಯನ
  • ಪ್ರಚಲಿತ ಘಟನೆಗಳು ಇತ್ತೀಚಿನ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಹಾಗೂ ಇತರ ಮಾಹಿತಿಗಳು
ಕಂಪ್ಯೂಟರ್ ಜ್ಞಾನ : 
  • ಎಂ ಎಸ್ ಆಫೀಸ್ – ಎಂ ಎಸ್ ವರ್ಡ್ ಎಂ ಎಸ್ ಎಕ್ಸೆಲ್ ಎಂಎಸ್ ಪವರ್ ಪಾಯಿಂಟ್ ಈ ತಂತ್ರಾಂಶಗಳ ಬಳಕೆ ಮತ್ತು ಅವುಗಳ ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದುವುದು
  • ಇಂಟರ್ನೆಟ್ ಮತ್ತು ಮೈಲಿಂಗ್ – ಆನ್ಲೈನ್ ನಲ್ಲಿ ಮಾಹಿತಿಯನ್ನು ಹುಡುಕುವುದು ಸಂಬಂಧ ಪಟ್ಟ ವೆಬ್ ಸೇವೆಗಳನ್ನು ಬಳಸುವುದು ಹಾಗೂ ಇಮೇಲ್ ಪ್ರತಿಗಳನ್ನು ಬರೆಯುವುದು
  • ಮೂಲಭೂತ ಹಾರ್ಡ್ವೇರ್ – ಕಂಪ್ಯೂಟರ್ನ ಭಾಗಗಳು ಅವುಗಳ ಕಾರ್ಯವಿಧಾನ ನಿರ್ವಹಣೆ ಮತ್ತು ರಿಪೇರಿಗಳ ಬಗ್ಗೆ ಮೂಲಜ್ಞಾನ 
ಸಹಕಾರ ಸಂಘಗಳ ವಿಷಯಗಳು : 
  • ಸಹಕಾರ ಸಂಘದ ಸ್ಥಾಪನೆ ನಿರ್ವಹಣೆ ರಚನೆ, ನಿಯಮಗಳು ಮತ್ತು ಇನ್ನು ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಅಧ್ಯಯನ
  • ಹಾಲು ಒಕ್ಕೂಟದ ಕಾರ್ಯವಿಧಾನದ ಮಾಹಿತಿ ಹಾಲಿನ ಸಂಗ್ರಹಣೆ ಸಂಸ್ಕರಣೆ ಶೇಖರಣೆ ಮಾರಾಟ ಹಾಗೂ ಆಡಳಿತ ವ್ಯವಸ್ಥೆ ನಿಯಂತ್ರಣ ಹಾಗೂ ವಿಸ್ತೃತ ಅಂಶಗಳ ಬಗ್ಗೆ ಪ್ರಶ್ನೆಗಳು

KMF ಹುದ್ದೆಗಳಿಗೆ ಅಗತ್ಯ ಕೌಶಲ್ಯಗಳು

  • ಉತ್ತಮ ಸಂವಹನ ಕೌಶಲ್ಯ
  • ಉತ್ತಮ ಕಂಪ್ಯೂಟರ್‌ ಜ್ಞಾನ
  • ತಂಡದಲ್ಲಿ ಕೆಲಸ ಮಾಡುವ ಆಸಕ್ತಿ
  • ಸಮಸ್ಯೆಗಳನ್ನು ಬೇಗ ಮತ್ತು ಪರಿಣಾಮಕಾರಿಯಾಗಿ ಗುರುತಿಸುವುದು ಮತ್ತು ಪರಿಹರಿಸುವುದು
  • ಮಾಹಿತಿ ಮತ್ತು ದಾಖಲೆಗಳ ನಿರ್ವಹಣೆ

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ

  • ಗುರುತಿನ ಚೀಟಿ (ಆಧಾರ್‌ ಕಾರ್ಡ್)‌
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಮತ್ತು ಪದವಿ ಅಂಕಪಟ್ಟಿಗಳು
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ
  • ಕನ್ನಡ ಮಾಧ್ಯಮ ಮೀಸಲಾತಿ ಪ್ರಮಾಣ ಪತ್ರ
  • ಅನುಭವ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಭಾವಚಿತ್ರ ಮತ್ತು ಸಹಿ

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು

  • ನೀವು ನಮೂದಿಸುವ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಯಾವುದೇ ತೊಂದರೆ ಇಲ್ಲದೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಿರಲಿ
  • ಅಪ್ಲೋಡ್ ಮಾಡುವ ದಾಖಲಾತಿಗಳು ಸ್ಪಷ್ಟವಾಗಿ ಕಾಣುವಂತಿರಲಿ
  • ಶುಲ್ಕವನ್ನು ಪಾವತಿಸಿದ ನಂತರ ರಸೀದಿಯನ್ನು ಪಡೆಯುವುದನ್ನು ಮರೆಯಬೇಡಿ
  • ತಪ್ಪಾದ ಮಾಹಿತಿಯನ್ನು ನಮ್ಮೂರಿಸಬೇಡಿ ಹಾಗೂ ತಪ್ಪಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಡಿ ಅಂದರೆ ನಿಗದಿತ ದಾಖಲೆಗಳ ಜಾಗದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನೇ ಅಪ್ಲೋಡ್ ಮಾಡಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಅವಧಿ ಸಕ್ರಿಯವಾಗಿದೆ ಎಂದು ಪರಿಶೀಲಿಸಿಕೊಳ್ಳಿ (ಪರಿಶೀಲಿಸಲು ಇಲ್ಲಿ ಕ್ಲಿಕ್‌ ಮಾಡಿ)

ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

  • ತಪ್ಪಾದ ಮೀಸಲಾತಿ ವರ್ಗವನ್ನು ಆಯ್ಕೆ ಮಾಡಿಕೊಳ್ಳುವುದು
  • ಫೋಟೋ ಹಾಗೂ ಸಹಿ ಅಪ್ಲೋಡ್ ಮಾಡಲು ನಿಗದಿಪಡಿಸಿರುವ ನಿಯಮಗಳನ್ನು ಕಡೆಗಣಿಸುವುದು
  • ಸಕ್ರಿಯವಾಗಿರದ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಯನ್ನು ನಮೂದಿಸುವುದು
  • ಅನುಭವ ಪ್ರಮಾಣ ಪತ್ರವನ್ನು ಬಯಸುವ ಹುದ್ದೆಗಳ ಆನ್ಲೈನ್ ಅರ್ಜಿಯಲ್ಲಿ ಅನುಭವ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡದೇ ಇರುವುದು
  • ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಕಾಯುವುದು

Career Growth ಮಾಹಿತಿ

  • ಮಾರುಕಟ್ಟೆ ಸಹಾಯಕ -> ಹಿರಿಯ ಸಹಾಯಕ -> ಮಾರುಕಟ್ಟೆ ಅಧಿಕಾರಿ
  • ಲೆಕ್ಕ ಸಹಾಯಕ -> ಹಿರಿಯ ಲೆಕ್ಕ ಸಹಾಯಕ -> ಲೆಕ್ಕಾಧಿಕಾರಿ
  • ತಾಂತ್ರಿಕ ಸಿಬ್ಬಂದಿ -> ಸಹಾಯಕ ತಾಂತ್ರಿಕ ಅಧಿಕಾರಿ -> ತಾಂತ್ರಿಕ ಅಧಿಕಾರಿ
  • ವಿಸ್ತರಣಾಧಿಕಾರಿ-> ಕಿರಿಯ ವಿಸ್ತರಣಾಧಿಕಾರಿ-> ಹಿರಿಯ ವಿಸ್ತರಣಾಧಿಕಾರಿ 

KMF ಉದ್ಯೋಗಿಗಳ ದಿನನಿತ್ಯದ ಕರ್ತವ್ಯಗಳು

  • ಹಾಲಿನ ಸಂಗ್ರಹಣೆ ಮತ್ತು ಮೇಲ್ವಿಚಾರಣೆ ಕಾರ್ಯಗಳು
  • ರೈತರನ್ನು ಸಂಪರ್ಕ ಮಾಡುವುದು ಮತ್ತು ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರ
  • ಹಾಲಿನ ಗುಣಮಟ್ಟದ ಪರೀಕ್ಷೆ ಮಾಡಿ ಸುಧಾರಣೆ ಮಾಡಿಕೊಳ್ಳು ಸಲಹೆಗಳನ್ನು ನೀಡುವುದು
  • ಮಾಹಿತಿಗಳ ಮತ್ತು ದಾಖಲೆಗಳ ಉತ್ತಮ ರೀತಿಯ ನಿರ್ವಹಣೆ
  • ಮಾರುಕಟ್ಟೆಯ ಬಗ್ಗೆ ವಿಶೇಷ ಜ್ಞಾನವನ್ನು ಹೊಂದಿ ಅದರ ಕಾರ್ಯಾಚರಣೆಯನ್ನು ಗಮನಿಸುವುದು

 

ಕಲ್ಬುರ್ಗಿ ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ 50 ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ 27-06-2026 ರಂದು ಅಥವಾ ಮೊದಲೇ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಹತಮಾನದಂಡಗಳನ್ನು ಪರಿಶೀಲಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ

ಈ ಹುದ್ದೆಗಳಲ್ಲಿ ಉತ್ತಮ ವೇತನ ಶ್ರೇಣಿ ಹಾಗೂ ಉತ್ತಮ ಭತ್ಯೆಗಳು ಹಾಗೂ ಬಡ್ತಿ ಅವಕಾಶಗಳು ಇರುವುದರಿಂದ ಈ ವಲಯದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ಭದ್ರತೆಯ ಜೊತೆಯಲ್ಲಿ ವೈದ್ಯಕೀಯ ಸೌಲಭ್ಯಗಳು ಸಹ ಸಿಗುತ್ತವೆ ಆದುದರಿಂದ ಸರ್ಕಾರಿ ವಲಯದಲ್ಲಿ ಹಾಗೂ ಸಹಕಾರ ವಲಯದಲ್ಲಿ ಉದ್ಯೋಗವನ್ನು ಪಡೆಯಬೇಕೆಂಬ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಈ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ

Author Note : ಈ ನೇಮಕಾತಿ ಲೇಖನವನ್ನು ಕಲ್ಬುರ್ಗಿ ಬೀದರ್ ಯಾದಗಿರಿ ಸಹಕಾರ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಪ್ರಕಟಣೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.

About Author : ಕರ್ನಾಟಕ ಸರ್ಕಾರಿ ಉದ್ಯೋಗಗಳು, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಸಂಶೋಧನಾ ಆಧಾರಿತ ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ಅಧಿಕೃತ ಅಧಿಸೂಚನೆಗಳು ಮತ್ತು ಸರ್ಕಾರಿ ಮೂಲಗಳನ್ನು ಆಧರಿಸಿ ಮಾಹಿತಿ ಒದಗಿಸಲಾಗುತ್ತದೆ.

Disclaimer : ಈ ಲೇಖನವು ಮಾಹಿತಿ ಉದ್ದೇಶಕ್ಕಾಗಿ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು. ಅರ್ಹತೆ, ಮೀಸಲಾತಿ, ಶುಲ್ಕ ಮತ್ತು ದಿನಾಂಕಗಳಲ್ಲಿ ಬದಲಾವಣೆಗಳಿರಬಹುದು.

Read More :KSP Recruitment 2026, Big Opportunity: ಪೊಲೀಸ್‌ ಇಲಾಖೆಯಲ್ಲಿ ಬೃಹತ್‌ ನೇಮಕಾತಿ, ಹುದ್ದೆ, ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment