ನಿಯೋಜಿತ ಅಧಿಕಾರಿ ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ (Indian Air Force Recruitment)
ಸ್ನೇಹಿತರೆ ನಮಸ್ಕಾರ ಭಾರತದ ರಕ್ಷಣಾ ವಿಭಾಗವಾದ ಭಾರತೀಯ ವಾಯುಪಡೆಯಲ್ಲಿ ಉದ್ಯೋಗವಕಾಶ ಒದಗಿ ಬಂದಿದೆ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡಬೇಕೆಂದುಕೊಂಡಿರುವ ಅಭ್ಯರ್ಥಿಗಳಿಗೆ ಈ ಅವಕಾಶವೂ ಸುವರ್ಣ ಅವಕಾಶವಾಗಿದ್ದು ಯುವಕ ಮತ್ತು ಯುವತಿಯರಿಬ್ಬರು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ದೇಶದ ಸೇವೆ ನಿರ್ವಹಿಸುವ ಜೊತೆಯಲ್ಲಿ ಗೌರವಾನ್ವಿತ ಹುದ್ದೆ ಹಾಗೂ ಉತ್ತಮ ಸಂಬಳವಿರುವ ಹುದ್ದೆಯನ್ನು ಹುಡುಕುತ್ತಿರುವವರಿಗೆ ಭಾರತೀಯ ವಾಯುಪಡೆಯ ನೇಮಕಾತಿ ಅಧಿಸೂಚನೆಯೂ ಪ್ರಮುಖ ಆಗಿದೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುವುದರಿಂದ ಉತ್ತಮ ಅನುಭವ ಹಾಗೂ ದೇಶಕ್ಕಾಗಿ ಕೆಲಸ ಮಾಡಿದ ಹೆಮ್ಮೆ ಇರುತ್ತದೆ ಆದ್ದರಿಂದ ಅಧಿಕೃತ ಅಧಿಸೂಚನೆಯನ್ನು ಇಂದೇ ಓದಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ
Indian Air Force Recruitment ನ ಅಧಿಸೂಚನೆಯ ಪ್ರಮುಖ ವಿವರಗಳು
ನೇಮಕಾತಿ ಸಂಸ್ಥೆ ಹೆಸರು : ಭಾರತೀಯ ವಾಯುಪಡೆ
ಒಟ್ಟು ಹುದ್ದೆಗಳ ಸಂಖ್ಯೆ : 379 ಹುದ್ದೆಗಳು
ಹುದ್ದೆಗಳ ಹೆಸರು : ನಿಯೋಜಿತ ಅಧಿಕಾರಿಗಳು
ಕೆಲಸ ನಿರ್ವಹಣೆಯ ಸ್ಥಳ : ಪೂರ್ಣ ಭಾರತದಾದ್ಯಂತ
ಶೈಕ್ಷಣಿಕ ವಿದ್ಯಾರ್ಹತೆ ವಿವರ
ಈ Indian Air Force Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಂದರೆ ಪಿಯುಸಿ, ಪದವಿ, ಬಿಎಸ್ಸಿ, ಬಿಇ ಅಥವಾ ಬಿ ಟೆಕ್, ಎಂಎಸ್ಸಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು
ಕಡಿಮೆ ವಿದ್ಯಾರ್ಹತೆಗೂ ಹುದ್ದೆಗಳು ಇರುವುದರಿಂದ ಯಾರೂ ತಪ್ಪಿಸದೆ ಅರ್ಜಿಯನ್ನು ಸಲ್ಲಿಸಿ
ವೇತನದ ವಿವರ
ಈ Indian Air Force Recruitment ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ತಿಂಗಳಿಗೆ 56,100/- ರೂಗಳಿಂದ ರೂ.1,77,500/- ರೂಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ ಹಾಗೂ ಭತ್ಯೆ ಸೌಲಭ್ಯ ಹಾಗೂ ಮುಂಬಡ್ತಿ ಸೌಲಭ್ಯಗಳು ದೊರೆಯುತ್ತದೆ
ವಯೋಮಿತಿ ಮಾಹಿತಿ
ಈ Indian Air Force Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷದಿಂದ ಗರಿಷ್ಠ 24 ವರ್ಷಗಳ ಒಳಗೆ ಇರಬೇಕು
ವಯೋಮಿತಿ ಸಡಿಲಿಕೆ ಮಾಹಿತಿ
ಈ Indian Air Force Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಯೋಮಿತಿ ಸಡಲಿಕ್ಕೆ ಅಧಿನಿಯಮದ ಪ್ರಕಾರ ವರ್ಗದ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು
ಆನ್ಲೈನ್ ಅರ್ಜಿ ಶುಲ್ಕ
ಈ Indian Air Force Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಆನ್ಲೈನ್ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಆನ್ಲೈನಲ್ಲಿ ಅರ್ಜಿ ಶುಲ್ಕದ ವಿವರ ಈ ಕೆಳಕಂಡಂತಿದೆ
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 550/- ರೂಗಳು
ಪಾವತಿ ವಿಧಾನ : ಆನ್ಲೈನ್
ಆನ್ಲೈನ್ ವಿಧಾನವನ್ನು ಅನುಸರಿಸಿ ಅರ್ಜಿ ಶುಲ್ಕವನ್ನು ಪಾವತಿಸಿ ಬೇರೆ ಯಾವುದೇ ಪಾವತಿ ವಿಧಾನವನ್ನು ಅನುಸರಿಸಬೇಡಿ
Indian Air Force Recruitment ನ ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ನ ವರ್ಬಲ್ ಅಬಿಲಿಟಿ ಸಂಖ್ಯಾತ್ಮಕ ಸಾಮರ್ಥ್ಯ ಹಾಗೂ ತಾರ್ಕಿತ ಮತ್ತು ಮಿಲಿಟರಿ ಸಾಮಾನ್ಯ ಪರೀಕ್ಷೆಯನ್ನು ನೀಡಲಾಗುತ್ತದೆ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ತಾಂತ್ರಿಕ ಜ್ಞಾನ ಹಾಗೂ ಹುದ್ದೆಗೆ ಬೇಕಾದ ಇತರ ಅರ್ಹತೆಗಳನ್ನು ಪರೀಕ್ಷಿಸಲಾಗುವುದು
ಎ ಎಫ್ ಎಸ್ ಬಿ ಪರೀಕ್ಷೆ : ಈ ಪರೀಕ್ಷೆಯು ವಾಯುಪಡೆ ಆಯ್ಕೆ ಮಂಡಳಿ ನಡೆಸಲಿದ್ದು ವಾಯು ವಿಮಾನವನ್ನು ಹಾರಿಸುವ ತಾಂತ್ರಿಕ ನಿರ್ವಹಣೆ ಮತ್ತು ನೆಲದ ಕರ್ತವ್ಯಗಳನ್ನು ಒಳಗೊಂಡಂತೆ ಅಧಿಕಾರಿಗಳ ಮಟ್ಟದ ಆಯೋಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆಸುವ ಪರೀಕ್ಷೆಯಾಗಿದೆ
ವೈದ್ಯಕೀಯ ಪರೀಕ್ಷೆ : ಈ ಹುದ್ದೆಯು ರಕ್ಷಣಾತ್ಮಕ ವಲಯದಲ್ಲಿ ಇರುವುದರಿಂದ ಅಭ್ಯರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಸದೃಢರಾಗಬೇಕಾಗಿರುತ್ತದೆ ಆದುದರಿಂದ ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳಿಗೆ ಏನಾದರೂ ದೈಹಿಕ ಅಂಗವಿಕಲತೆ ಇದೆ ಎಂದು ಪರೀಕ್ಷೆ ಮಾಡಲಾಗುತ್ತದೆ
Indian Air Force Recruitment ಗೆ ಅರ್ಜಿ ಸಲ್ಲಿಸುವುದು ಹೇಗೆ
- ಮೊದಲು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಂಡಿಯನ್ ಏರ್ ಫೋರ್ಸ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹೊರಡಿಸಲಾಗಿರುವ ಅಧಿಕೃತ ದಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಬೇಕು
- ನಂತರ ತಮ್ಮ ಚಾಲಿತ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಬಳಸಿ ನೋಂದಣಿ ಮಾಡಿಕೊಳ್ಳಬೇಕು.
- ನಂತರ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಬಂದು ಈ ಸಂಖ್ಯೆಗಳನ್ನು ನಮೂದಿಸುವ ಮೂಲಕ ತಮ್ಮ ಅಕೌಂಟ್ ಗೆ ಲಾಗಿನ್ ಆಗಬೇಕು
- ಅಲ್ಲಿ ಕಾಣಸಿಗುವ ನಿಯೋಜಿತ ಅಧಿಕಾರಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಎಂಬಲ್ಲಿ ಕ್ಲಿಕ್ ಮಾಡಬೇಕು
- ನಿಯೋಜಿತ ಅಧಿಕಾರಿ ಹುದ್ದೆಗೆ ಆನ್ಲೈನ್ ಅರ್ಜಿಯು ತೆರೆಯುತ್ತದೆ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ಸಂವಹನ ಮಾಹಿತಿಗಳು ಹಾಗೂ ಇನ್ನಿತರ ಎಲ್ಲ ಮಾಹಿತಿಗಳನ್ನು ಎಚ್ಚರಿಕೆಯಿಂದ ನಮೂದಿಸಿ
- ಕೇಳಲಾಗುವ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಅಪ್ಲೋಡ್ ಮಾಡಿ
- ಎಲ್ಲಾ ಅಭ್ಯರ್ಥಿಗಳಿಗೂ ಒಂದೇ ಮತದ ಆನ್ಲೈನ್ ಅರ್ಜಿ ಶುಲ್ಕ ಇರುವುದರಿಂದ ಆನ್ಲೈನಲ್ಲಿ ಪಾವತಿಸಿ
- ನಂತರ ನೀವು ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಲಾಗಿರುವ ದಾಖಲಾತಿಗಳು ಸರಿಯಾಗಿವೆ ಎಂದು ಪರೀಕ್ಷಿಸಿಕೊಳ್ಳಿ
- ನಂತರ ಸಬ್ಮಿಟ್ ಮಾಡುವುದರ ಮೂಲಕ ಯಾಜಿಯನ್ನು ಯಶಸ್ವಿಯಾಗಿ ಸಲ್ಲಿಸಿ ಬರುವ ನೋಂದಣಿ ಸಂಖ್ಯೆ ಹಾಗೂ ಅರ್ಜಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಆಗಿದ್ದು ಇಟ್ಟುಕೊಳ್ಳಿ
Indian Air Force Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ನಿಯೋಜಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ : 20-05-2026
ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19-06-2026
ಕೊನೆಯ ಸಂದರ್ಭಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದ್ದರಿಂದ ಅಧಿಸೂಚನೆಯನ್ನು ಆದಷ್ಟು ಬೇಗ ಓದಿ ಅರ್ಜಿ ಸಲ್ಲಿಸಿ
ಪ್ರಮುಖ ಲಿಂಕ್ ಗಳು
| ಭಾರತೀಯ ವಾಯುಪಡೆಯ ಅಧಿಕೃತ ವೆಬ್ಸೈಟ್ | ಭಾರತೀಯ ವಾಯು ಪಡೆ |
| ಅಧಿಕೃತ ಅಧಿಸೂಚನೆಯ ಪಿಡಿಎಫ್ | Indian Air Force Recruitment Notification |
| ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ | ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗ್ರೂಪ್ ಸೇರಲು | ಇಲ್ಲಿ ಕ್ಲಿಕ್ ಮಾಡಿ |
ಭಾರತೀಯ ವಾಯು ಪಡೆಯ ನಿಯೋಜಿತ ಅಧಿಕಾರಿ ಹುದ್ದೆಯ ಪರೀಕ್ಷೆಗಳಿಗೆ ಮಾಕ್ ಪರೀಕ್ಷೆಗಳನ್ನು ಅಭ್ಯಸಿಸಲು : ಮಾಕ್ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಲಿಂಕ್
ಭಾರತೀಯ ವಾಯುಪಡೆಯ ಅಧಿಕಾರಿ ಹುದ್ದೆಗಳ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ಸಿಲಬಸ್ ಹಾಗೂ ಪರೀಕ್ಷಾ ಮಾದರಿ ಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಪ್ರತಿದಿನ ಇಂಗ್ಲಿಷ್, ಸಾಮಾನ್ಯ ಜ್ಞಾನ, ಗಣಿತ ಹಾಗೂ ತಾರ್ಕಿಕ ಸಾಮರ್ಥ್ಯ ವಿಷಯಗಳನ್ನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಪರೀಕ್ಷೆಯ ಬಗ್ಗೆ ಉತ್ತಮ ಅರಿವು ಬರುತ್ತದೆ. ದೈಹಿಕ ಸಾಮರ್ಥ್ಯವೂ ಮುಖ್ಯ ಆಗಿರುವುದರಿಂದ ಪ್ರತಿದಿನ ವ್ಯಾಯಾಮ, ಓಟ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತಮ ರೀತಿಯಲ್ಲಿ ಪಾಲಿಸಿ. ಸಮಯ ನಿರ್ವಹಣೆಯನ್ನು ಕಲಿತು ಮಾಕ್ ಟೆಸ್ಟ್‌ಗಳನ್ನು ತೆಗೆದುಕೊಳ್ಳಿ ( ಮಾಕ್ ಟೆಸ್ಟ್ ಲಿಂಕ್ ಮೇಲೆ ನೀಡಿದ್ದೇವೆ). ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಸಂದರ್ಶನ ಹಾಗೂ AFSB ಪರೀಕ್ಷೆಗೆ ಉತ್ತಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಂಡು ಭಾರತೀಯ ವಾಯು ಪಡೆಯ ನಿಯೋಜಿತ ಅಧಿಕಾರಿ ಹುದ್ದೆಯನ್ನು ಯಶಸ್ವಿಯಾಗಿ ಪಡೆಯಿರಿ.
ಭಾರತೀಯ ವಾಯು ಪಡೆಯು 2026 ನೇಮಕಾತಿ ಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು ಈ ನೇಮಕಾತಿ ಮೂಲಕ ನಿಯೋಜಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಆಹ್ವಾನಿಸಿದೆ ಅರ್ಹವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ರಕ್ಷಣಾ ವಲಯದಲ್ಲಿ ಕೆಲಸ ಮಾಡಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಿ ಈ ವಾಯುಪಡಿಯಲ್ಲಿ ಕೆಲಸ ಮಾಡುವುದರಿಂದ ಉತ್ತಮ ವೇತನ ಭತ್ಯೆಗಳು ಹಾಗೂ ಮುಂಬಡ್ತಿ ಸೌಲಭ್ಯಗಳು ಉತ್ತಮವಾಗಿ ಸಿಗುವುದರಿಂದ ಹಾಗೂ ಅಖಿಲ ಭಾರತ ಮಟ್ಟದಲ್ಲಿ ಕೆಲಸ ಮಾಡುವ ಅನುಭವ ಸಿಗುತ್ತದೆ ಆದುದರಿಂದ ಇಂದೇ ಅರ್ಜಿ ಸಲ್ಲಿಸಿ
Indian Air Force Recruitment 2026 – FAQ’s
1) ಭಾರತೀಯ ವಾಯುಪಡೆ ನೇಮಕಾತಿಯಲ್ಲಿ ಎಷ್ಟು ಹುದ್ದೆಗಳಿಗೆ ಅಧಿಸೂಚನೆಯಾಗಿದೆ?
ಈ ನೇಮಕಾತಿಯಲ್ಲಿ ಒಟ್ಟು 379 ನಿಯೋಜಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
2) ಯಾರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು?
ಯುವಕರು ಮತ್ತು ಯುವತಿಯರು ಇಬ್ಬರೂ ಅರ್ಜಿ ಸಲ್ಲಿಕೆ ಮಾಡಬಹುದು.
3) ವಿದ್ಯಾರ್ಹತೆ ಏನಿರಬೇಕು?
PUC, ಪದವಿ, B.Sc, BE/B.Tech, M.Sc ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
4) ವಯೋಮಿತಿ ಎಷ್ಟಿರಬೇಕು?
ಅಭ್ಯರ್ಥಿಗಳ ವಯಸ್ಸು 20 ರಿಂದ 24 ವರ್ಷಗಳ ಒಳಗೆ ಇರಬೇಕು.
5) ಮಾಸಿಕ ವೇತನ ಎಷ್ಟಿರುತ್ತದೆ?
₹56,100 ರಿಂದ ₹1,77,500 ವರೆಗೆ ತಿಂಗಳ ಸಂಬಳ ಸಿಗಬಹುದು.
6) ಆನ್ ಲೈನ್ ಅರ್ಜಿ ಶುಲ್ಕ ಎಷ್ಟು?
ಎಲ್ಲಾ ವರ್ಗದ ಅಭ್ಯರ್ಥಿಗಳು ₹550 ರೂಗಳ ಆನ್‌ಲೈನ್ ಶುಲ್ಕ ಪಾವತಿ ಮಾಡಬೇಕಿರುತ್ತದೆ.
7) ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-06-2026 ಆಗಿರುತ್ತದೆ.
8) ಆಯ್ಕೆ ಪ್ರಕ್ರಿಯೆ ಹೇಗೆ?
ಲಿಖಿತ ಪರೀಕ್ಷೆ, AFSB ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
9) ಕೆಲಸದ ನಿರ್ವಹಣೆಯ ಸ್ಥಳ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಕೆಲಸದ ಮಾಡುವ ಅವಕಾಶ ಸಿಗುತ್ತದೆ.
10) ಅರ್ಜಿ ಸಲ್ಲಿಕೆ ಹೇಗೆ?
ಭಾರತೀಯ ವಾಯುಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.