Telegram Join My Telegram WhatsApp Join My WhatsApp

NALCO Recruitment 2026, Big Opportunity : ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಹಾಗೂ ಸಂಬಳದ ಬಗೆಗಿನ ಸಂಪೂರ್ಣ ಮಾಹಿತಿ

ತಂತ್ರಜ್ಞ ಹಾಗೂ ಆಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ (NALCO Recruitment)

ಸ್ನೇಹಿತರೆ ನಮಸ್ಕಾರ ನೀವೇನಾದರೂ ಕೇಂದ್ರ ಸರ್ಕಾರದ ಹುದ್ದೆಯ ಹುಡುಕಾಟದಲ್ಲಿ ಇದ್ದೀರಾ ಈ ಉದ್ಯೋಗದಲ್ಲಿ ಉತ್ತಮ ಉದ್ಯೋಗ ಭದ್ರತೆ ಹಾಗೂ ಉತ್ತಮ ಸಂಬಳವನ್ನು ತರುವ ಉದ್ಯೋಗದ ಹುಡುಕಾಟದಲ್ಲಿ ಇದ್ದರೆ ಈ ನೇಮಕಾತಿ ನಿಮಗೆ ಸಹಕಾರಿಯಾಗಿದೆ ಭಾರತ ಸರ್ಕಾರದ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ ಸಂಸ್ಥೆಯು 2026 ಆರ್ಥಿಕ ವರ್ಷದಲ್ಲಿ ಬೃಹತ್ ನೇಮಕಾತಿಯನ್ನು ಹೊರಡಿಸಿದೆ ಭಾರತದ ಅತ್ಯಂತ ಈ ಹುದ್ದೆಗಳು ನೇಮಕಗೊಳ್ಳುತ್ತಿರುವುದರಿಂದ ಕೇಂದ್ರ ಸರ್ಕಾರದಲ್ಲಿ ವೃತ್ತಿ ಜೀವನವನ್ನು ರೂಪಿಸಬೇಕು ಅಂದುಕೊಂಡವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಆದ್ದರಿಂದ NALCO Recruitment ನ ನೇಮಕಾತಿಯ ಅಧಿಕೃತ ಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸುವುದರ ಮೂಲಕ ನೀವು ಈ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ

Railway Recruitment 2026, Best Opportunity : ರೈಲ್ವೇ ನೇಮಕಾತಿ ಮಂಡಳಿಯಿಂದ ಹುದ್ದೆಗಳ ಅಧಿಸೂಚನೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ

NALCO Recruitment ನ ಅಧಿಸೂಚನೆ ವಿವರಗಳು

ನೇಮಕ ಮಾಡಿಕೊಳ್ಳುತ್ತಿರುವ ಸಂಸ್ಥೆ ಹೆಸರು :  ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್
ಹುದ್ದೆಗಳ ಹೆಸರು :  ಆಪರೇಟರ್ ಹಾಗೂ ತಂತ್ರಜ್ಞ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :  268
ಉದ್ಯೋಗದ ಸ್ಥಳ :  ಅಖಿಲ ಭಾರತದಾದ್ಯಂತ

ಶೈಕ್ಷಣಿಕ ವಿದ್ಯಾರ್ಹತೆ

ಈ NALCO Recruitment ಮೂಲಕ ಅಧಿಸೂಚನೆಗೊಂಡಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಹತ್ತನೇ ತರಗತಿ, ಐ ಟಿ ಐ, ಡಿಪ್ಲೋಮಾ ಹಾಗೂ ಪದವಿಯನ್ನು ಪೂರ್ಣಗೊಳಿಸಿರಬೇಕು

NALCO Recruitment ನ ವೇತನದ ವಿವರ

ಈ   ಹುದ್ದೆಗಳಿಗೆ 29,500/- ರೂಗಳಿಂದ 1,15,000/- ರೂಗಳ ವರೆಗೆ ತಿಂಗಳ ವೇತನವನ್ನು ನೀಡಲಾಗುತ್ತದೆ ಈ ನೇಮಕಾತಿ ಸಂಸ್ಥೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಉತ್ತಮ ರೀತಿಯ ಭತ್ಯೆಗಳು ಹಾಗೂ ಮುಂಬಡ್ತಿ ದೊರೆಯುತ್ತದೆ

NALCO Recruitment ನ ವಯೋಮಿತಿ ವಿವರ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿದ್ದು ಗರಿಷ್ಠ ವಯಸ್ಸು 01-01-2026 ರಂತೆ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವಯೋಮಿತಿ ಸಡಿಲಿಕೆ

ಭಾರತ ಸರ್ಕಾರದ ವಯೋಮಿತಿ ಸಡಿಲಿಕೆ ಅಧಿಕೃತ ನಿಯಮಗಳ ಪ್ರಕಾರ ವರ್ಗಗಳ ಅನುಗುಣವಾಗಿ ವಯೋಮಿತಿ ಸಡಿಲಿಕೆಯನ್ನು NALCO Recruitment ಗೆ ನೀಡಲಾಗುತ್ತದೆ

NALCO Recruitment ನ ಆನ್ಲೈನ್ ಅರ್ಜಿ ಶುಲ್ಕದ ವಿವರ

  • ಸಾಮಾನ್ಯ ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳಿಗೆ : 100/- ರೂಗಳು
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ :  ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯತೆ ಇರುವುದಿಲ್ಲ

NALCO Recruitment ಗೆ ಆನ್ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಬೇರೆ ಯಾವುದೇ ಪಾವತಿ ವಿಧಾನಗಳನ್ನು ಬಳಸುವುದನ್ನು ತಪ್ಪಿಸಿ

ಹುದ್ದೆಗಳ ಆಯ್ಕೆ ಪ್ರಕ್ರಿಯೆ

ಈ NALCO Recruitment ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ನೆಡೆಯಲಿದ್ದು ವ್ಯವಸ್ಥಿತ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿರುತ್ತದೆ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಹುದ್ದೆಗೆ ಬೇಕಾಗುವ ತಾಂತ್ರಿಕ ಜ್ಞಾನವನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಪರೀಕ್ಷಿಸಲಾಗುತ್ತದೆ
  • ವ್ಯಾಪಾರ ಪರೀಕ್ಷೆ : ವ್ಯಾಪಾರ ಪರೀಕ್ಷೆ ಅಂದರೆ ಟ್ರೇಡ್ ಪರೀಕ್ಷೆ ಆಗಿದ್ದು ವೈಯಕ್ತಿಕ ಕ್ಷೇತ್ರದಲ್ಲಿ ಹೊಂದಿರಬೇಕಾದ ಕನಿಷ್ಠ ಜ್ಞಾನ ಹಾಗೂ ಕೌಶಲ್ಯಗಳನ್ನು ಪರಿಶೀಲಿಸಲಾಗುತ್ತದೆ
  • ದಾಖಲೆ ಪರಿಶೀಲನೆ : ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳ ನೈಜತೆ ಪರಿಶೀಲನೆ ಮಾಡಲಾಗುತ್ತದೆ
  • ವೈದ್ಯಕೀಯ ಪರೀಕ್ಷೆ :  ಅಭ್ಯರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಮತ್ತು ಉದ್ಯೋಗವನ್ನು ನಿರ್ವಹಿಸುವಲ್ಲಿ ಅಂಗವಿಕಲತೆಯು ತೊಡಕಾಗಬಹುದೇ ಎಂಬುದನ್ನು ಪರೀಕ್ಷಿಸಲಾಗುತ್ತದೆ 

ಪ್ರಮುಖ ಸೂಚನೆ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂಗವಿಕಲ ಅಭ್ಯರ್ಥಿಗಳಿಗೆ ಭಾರತ ಸರ್ಕಾರದಿಂದ ನೀಡುವ ಅಂಗವಿಕಲರ ಗುರುತಿನ ಚೀಟಿ ಯುಡಿಐಡಿ ಕಡ್ಡಾಯವಾಗಿದ್ದು ಈ ಗುರುತಿನ ಚೀಟಿ ಆಧಾರದ ಮೇಲೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ

NALCO Recruitment ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ನ್ಯಾಷನಲ್ ಅಲ್ಯೂಮಿನಿಯಂ ಲಿಮಿಟೆಡ್ ಕಂಪನಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ಅಧಿ ಸೂಚನೆಯನ್ನು ಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಬೇಕು ನೇಮಕಾತಿ ಸೂಚನೆಯನ್ನು ಈ ಕೆಳಗೆ ನೀಡಲಾಗಿದೆ
  • ನಿಮ್ಮ ವೈಯಕ್ತಿಕ ಮಾಹಿತಿ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನಮೂದಿಸುವ ಮೂಲಕ ಹಾಗೂ ಅದನ್ನು ವೇರಿಫೈ ಮಾಡುವ ಮೂಲಕ ಖಾತೆಯನ್ನು ರಚಿಸಿ
  • ನಂತರ ತಂತ್ರಜ್ಞಾನ ಹಾಗೂ ಆಪರೇಟರ್ ಹುದ್ದೆಗಳಿಗೆ ನೇಮಕಾತಿ ಲಿಂಕ್ ಅನ್ನು ನೀಡಲಾಗಿರುತ್ತದೆ
  • ಲಿಂಕ್‌ ನ  ಮೇಲೆ ಕ್ಲಿಕ್ ಮಾಡಿದ ಮೂಲಕ ಆನ್ಲೈನ್ ಅರ್ಜಿ ತೆರೆಯುತ್ತದೆ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಿ
  • ಅರ್ಜಿ ಸಲ್ಲಿಕೆಯಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲಾತಿಗಳು ಅಂದರೆ ಫೋಟೋ ಸಹಿ ವಿದ್ಯಾರ್ಹತೆ ದಾಖಲೆಗಳು ವಯಸ್ಸಿನ ದಾಖಲಾತಿಗಳು ಹಾಗೂ ಅಗತ್ಯವಿದ್ದಲ್ಲಿ ಅಂಗವಿಕಲತೆಯ ಪ್ರಮಾಣ ಪತ್ರಗಳು ಹಾಗೂ ಅನುಭವ ಪ್ರಮಾಣ ಪತ್ರಗಳನ್ನು ಕೇಳಬಹುದು
  • ನಿಮ್ಮ ಅನ್ವಯಿತ ವರ್ಗದ ಪ್ರಕಾರ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ
  • ನೀವು ನಮೂದಿಸಿರುವ ಎಲ್ಲಾ ಭವೀರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಬರುವ ನೊಂದಣಿ ಸಂಖ್ಯೆ ಹಾಗೂ ಅರ್ಜಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ

NALCO Recruitment ಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು

ಅಧಿಕೃತ ವೆಬ್ ಸೈಟ್ (ನೇಮಕಾತಿ ವಿಭಾಗ) : ನ್ಯಾಷನಲ್‌ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್
ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಓದಲು‌ : ಅಧಿಸೂಚನೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು :  ನೋಂದಣಿಗಾಗಿ ಇಲ್ಲಿ ಕ್ಲಿಕ್‌ ಮಾಡಿ        ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಸೇರಲು :  ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ :  21-05-2026
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಆನ್ಲೈನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ :  10-06-2026

ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ ತನ್ನ ನೇಮಕಾತಿ ಸೂಚನೆಯ ಪ್ರಕಾರ 268 ಆಪರೇಟರ್ ಹಾಗೂ ತಂತ್ರಜ್ಞಾನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅಖಿಲ ಭಾರತದ ಅತ್ಯಂತ ಹುದ್ದೆಗಳನ್ನು ಹೊಂದಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.06.2026 ಆಗಿರುವುದರಿಂದ ಕೊನೆಯ ಸಮಯದಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಅಧಿಕೃತ ಅನುಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಹಿಂದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಕೇಂದ್ರ ಸರ್ಕಾರದ ಉದ್ಯೋಗವನ್ನು ಹೊಂದಬೇಕೆಂಬ ಕನಸನ್ನು ಸಹಕಾರ ಗೊಳಿಸಿ

NALCO ಆಪರೇಟರ್‌ ಉದ್ಯೋಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉತ್ತಮ ಸಲಹೆಗಳು:
ಮೊದಲು ಪರೀಕ್ಷೆಯ ಸಿಲೆಬಸ್‌ ಮತ್ತು ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಚೆನ್ನಾಗಿ ಅಧ್ಯಯನ ಮಾಡಿಕೊಳ್ಳಿ. ತಾಂತ್ರಿಕ ವಿಷಯಗಳು, ಸಾಮಾನ್ಯ ಜ್ಞಾನ, ಗಣಿತ ಹಾಗೂ ತಾರ್ಕಿಕ ಪ್ರಶ್ನೆಗಳ ಮೇಲೆ ಹೆಚ್ಚು ಗಮನ ಹರಿಸಿ. ಪ್ರತಿದಿನ ನಿಗದಿತ ಸಮಯದಲ್ಲಿ ಓದುವ ಅಭ್ಯಾಸ ಬೆಳೆಸಿಕೊಂಡು ಮತ್ತು ಚಿಕ್ಕ ನೋಟ್ಸ್‌ ತಯಾರಿಸಿ. ಇದು ನಿಮ್ಮ ರಿವಿಷನ್‌ ಗೆ ಸಹಾಯವಾಗುತ್ತದೆ. Mock test ಹಾಗೂ online practice test‌ಗಳನ್ನು ಬರೆಯುವುದರಿಂದ ಸಮಯ ನಿರ್ವಹಣೆ ಉತ್ತಮವಾಗುತ್ತದೆ. ಪ್ರಸ್ತುತ ಘಟನೆಗಳು ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೈನಂದಿನವಾಗಿ  ತಿಳಿದುಕೊಳ್ಳಿ.  ನಿಮ್ಮ ದುರ್ಬಲ ವಿಷಯ ಅಂದರೆ ನಿಮಗೆ ಕಷ್ಟಕರ ಎನಿಸುವ ವಿಷಯಗಳಿಗೆ ಹೆಚ್ಚು ಸಮಯ ನೀಡಿ. ಆತ್ಮವಿಶ್ವಾಸ ಉಳಿಸಿಕೊಂಡು ನಿಯಮಿತ ಅಭ್ಯಾಸ ಮಾಡಿದರೆ NALCO ಆಪರೇಟರ್‌ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಸಾಧ್ಯತೆ ಹೆಚ್ಚುತ್ತದೆ.

NALCO Recruitment 2026 – FAQs

1) NALCO Recruitment 2026 ಗೆ ಯಾರು ಅರ್ಜಿ ಸಲ್ಲಿಸಬಹುದು?

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ITI, ಡಿಪ್ಲೋಮಾ ಅಥವಾ ಪದವಿ ಪೂರ್ಣಗೊಳಿಸಿರಬೇಕು. ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಬದಲಾಗಬಹುದು.

2) NALCO Recruitment ನಲ್ಲಿ ಎಷ್ಟು ಹುದ್ದೆಗಳಿವೆ ಹಾಗೂ ಯಾವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನೆಡೆಯುತ್ತಿದೆ?

ಈ ನೇಮಕಾತಿಯ ಮೂಲಕ ಒಟ್ಟು 268 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಮುಖವಾಗಿ ಆಪರೇಟರ್ ಹಾಗೂ ತಂತ್ರಜ್ಞ (Technician) ಹುದ್ದೆಗಳು ನೇಮಕಗೊಳ್ಳಲಿವೆ

3) NALCO Recruitment ಗೆ ವಯೋಮಿತಿ ವಿವರ ಏನು?

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 40 ವರ್ಷ ಇರಬೇಕು. 01-01-2026 ರಂತೆ ವಯೋಮಿತಿಯನ್ನು ಪರಿಗಣಿಸಲಾಗುತ್ತದೆ. ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಸಿಗುತ್ತದೆ.

4) NALCO Recruitment ಆಯ್ಕೆ ಪ್ರಕ್ರಿಯೆ ಹೇಗಿದೆ?

ಅಭ್ಯರ್ಥಿಗಳ ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಟ್ರೇಡ್ ಟೆಸ್ಟ್, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಆಧಾರದ ಮೇಲೆ ಆಧಾರಿತವಾಗಿದೆ.

5) NALCO Recruitment ಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?

ಈ ನೇಮಕಾತಿಗೆ 21-05-2026 ರಿಂದ ಅರ್ಜಿ ಪ್ರಾರಂಭವಾಗುತ್ತದೆ ಮತ್ತು 10-06-2026 ಕೊನೆಯ ದಿನಾಂಕ ಆಗಿರುತ್ತದೆ. ಕೊನೆಯ ಕ್ಷಣದ ಸರ್ವರ್ ಸಮಸ್ಯೆ ತಪ್ಪಿಸಲು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

Leave a Comment