Telegram Join Our Telegram WhatsApp Join Our WhatsApp

SSC Job Recruitment 2026, Big Opportunity: ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗದಿಂದ ನೇಮಕಾತಿ, ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ಇನ್ಸ್ಪೆಕ್ಟರ್‌ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ (SSC Job Recruitment)

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಪದವಿಯನ್ನು ಮುಗಿಸಿದ್ದೀರಾ ಕೇಂದ್ರ ಸರ್ಕಾರದ ಹುದ್ದೆಯನ್ನು ಹುಡುಕುತ್ತಿದ್ದರೆ ನಿಮಗೊಂದು ಸುವರ್ಣ ಅವಕಾಶ ಒದಗಿ ಬಂದಿದೆ ದೇಶದ ಪ್ರಮುಖ ನೇಮಕಾತಿ ಆಯೋಗವಾದ ಸಿಬ್ಬಂದಿ ಆಯ್ಕೆ ಆಯೋಗವು ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು ಈ ನೇಮಕಾತಿ ಮೂಲಕ ಇನ್ಸ್ಪೆಕ್ಟರ್ ಹಾಗೂ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ ನೀವೇನಾದರೂ ಅಖಿಲ ಭಾರತ ಮಟ್ಟದಲ್ಲಿ ಕೆಲಸವನ್ನು ಮಾಡಬೇಕೆಂಬ ಉದ್ದೇಶವನ್ನು ಹೊಂದಿದ್ದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಇದೊಂದು ಬೃಹತ್ ನೇಮಕಾತಿಯಾಗಿದ್ದು ಒಟ್ಟು 1256 ಹುದ್ದೆಗಳನ್ನು ಆನ್ಲೈನ್ ಮೂಲಕ ನೇಮಕ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದೆ ಆದುದರಿಂದ ನೀವೇನಾದರೂ ಪದವಿಯನ್ನು ಪೂರ್ಣಗೊಳಿಸಿದ್ದರೆ ಹಿಂದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ ತಮ್ಮ ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯಿರಿ

ಈ ನೇಮಕಾತಿಗೆ ಯಾವುದೇ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದರು ಅರ್ಜಿ ಸಲ್ಲಿಸಬಹುದಾಗಿರುವುದರಿಂದ ಇದೊಂದು ಸುವರ್ಣ ಅವಕಾಶವಾಗಿ ಈ ಸಿಬ್ಬಂದಿ ಆಯ್ಕೆ ಆಯೋಗದಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿರುವ ಹುದ್ದೆಗಳ ಮಾಹಿತಿ ಸಂಬಳದ ವಿವರ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ವಿವರವಾಗಿ ನಾವು ಇಲ್ಲಿ ನೀಡಿದ್ದೇವೆ ಕೊನೆಯವರೆಗೂ ಈ ಲೇಖನವನ್ನು ಓದಿ ಮಾಹಿತಿಯನ್ನು ತಿಳಿದುಕೊಂಡು ಆದಷ್ಟು ಬೇಗ ಅರ್ಜಿ ಸಲ್ಲಿಸಿ

SSC Job Recruitment ನ ಅಧಿಸೂಚನೆಯ ಮಾಹಿತಿ

ನೇಮಕಾತಿ ಸಂಸ್ಥೆ ಹೆಸರು ಸಿಬ್ಬಂದಿ ಆಯ್ಕೆ ಆಯೋಗ (SSC)
ಹುದ್ದೆಗಳ ಹೆಸರು ಇನ್ಸ್ಪೆಕ್ಟರ್ ಹಾಗೂ ಅಸಿಸ್ಟೆಂಟ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ 12256
ಉದ್ಯೋಗ ಸ್ಥಳ ಅಖಿಲ ಭಾರತ
ಸಂಬಳ (ಮಾಸಿಕ) 25,500/- ರೂಗಳಿಂದ 1,51,000/- ರೂಗಳು

 

ಶೈಕ್ಷಣಿಕ ಅರ್ಹತೆ

ಈ SSC Job Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದೇಶದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ ಯಾವುದೇ ವಿಭಾಗದಲ್ಲಾದರೂ ಪದವಿಯನ್ನು ಪೂರ್ಣಗೊಳಿಸಿರಬೇಕು

ವಯೋಮಿತಿ ವಿವರ

ಈ SSC Job Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಮಾಹಿತಿಯು ಈ ಕೆಳಕಂಡಂತಿದೆ

ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು
ಗರಿಷ್ಠ ವಯಸ್ಸು 30 ವರ್ಷಗಳನ್ನು ಮೀರಿರಬಾರದು

ವಯೋಮಿತಿ ಸಡಿಲಿಕೆ

ಈ SSC Job Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ತಮ್ಮ ವರ್ಗದ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು ವಯೋಮಿತಿ ಸಡಿಲಿಕೆ ಯ ಮಾಹಿತಿ ಈ ಕೆಳಕಂಡಂತಿದೆ

  • ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು : 03 ವರ್ಷಗಳು
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳು : 05 ವರ್ಷಗಳು
  • ಅಂಗವಿಕಲ ಸಾಮಾನ್ಯ ಅಭ್ಯರ್ಥಿಗಳು : 10 ವರ್ಷಗಳು
  • ಅಂಗವಿಕಲ ಇತರೆ ಹಿಂದುಳಿದ ವರ್ಗಗಳು : 13 ವರ್ಷಗಳು
  • ಅಂಗವಿಕಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು : 15 ವರ್ಷಗಳು

SSC Job Recruitment ನ ವೇತನದ ವಿವರ

ಈ ನೇಮಕಾತಿ ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ 25,500/- ರೂಗಳಿಂದ ರೂ.1,51,100/- ರೂಗಳವರೆಗೆ ವೇತನವನ್ನು ನೀಡಲಾಗುತ್ತದೆ ಇದೊಂದು ಕೇಂದ್ರ ಸರ್ಕಾರ ಉದ್ಯೋಗ ಆಗಿರುವುದರಿಂದ ಉತ್ತಮ ರೀತಿಯ ಭತ್ಯೆಗಳು ಹಾಗೂ ಇತರ ಮುಂಬಡ್ತಿ ಸೌಲಭ್ಯಗಳು ಉತ್ತಮ ರೀತಿಯಲ್ಲಿ ಸಿಗುತ್ತವೆ

ಆನ್ಲೈನ್ ಅರ್ಜಿ ಶುಲ್ಕ

ಪಾವತಿ ವಿಧಾನ : ಆನ್ಲೈನ್ ಮೂಲಕ ಮಾತ್ರ
ಇತರೆ ಎಲ್ಲಾ ಅಭ್ಯರ್ಥಿಗಳು : 100/- ರೂ ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು, ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿ ಅವಶ್ಯಕತೆ ಇರುವುದಿಲ್ಲ

SSC Job Recruitment ನ ಆಯ್ಕೆ ಪ್ರಕ್ರಿಯೆ

ಮೊದಲನೇ ಹಂತ : ಕಂಪ್ಯೂಟರ್ ಆಧಾರಿತ ಸಾಮಾನ್ಯ ಪರೀಕ್ಷೆ ಶ್ರೇಣಿ-1

ಈ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುವುದು ಸಾಮಾನ್ಯ ಬುದ್ಧಿ ಮತ್ತೆ ತಾರ್ಕಿಕತೆ ಸಾಮಾನ್ಯವರಿಗೂ ಇಂಗ್ಲೀಷ್ ಗ್ರಹಕ್ಕೆ ಹಾಗೂ ಪರಿಮಣಾತ್ಮಕ ಸಾಮರ್ಥ್ಯಗಳನ್ನು ಪರೀಕ್ಷಿಸಲಾಗುವುದು

ಎರಡನೇ ಹಂತ : ಕಂಪ್ಯೂಟರ್ ಆಧಾರಿತ ಮುಖ್ಯ ಪರೀಕ್ಷೆ ಶ್ರೇಣಿ-2

ಈ ಮುಖ್ಯ ಪರೀಕ್ಷೆಯಲ್ಲಿ 3 ಪತ್ರಿಕೆಗಳಿರುತ್ತವೆ.

  • ಮೊದಲನೇ ಪತ್ರಿಕೆಯು ಎಲ್ಲಾ ಹುದ್ದೆಗಳಿಗೂ ಕಡ್ಡಾಯವಾಗಿದ್ದು ಈ ಪತ್ರಿಕೆಯಲ್ಲಿ ಗಣಿತದ ಸಾಮರ್ಥ್ಯದ ಮಟ್ಟ ತಾರ್ಕಿಕತೆ ಮತ್ತು ಸಾಮಾನ್ಯ ಬುದ್ಧಿ ಮತ್ತೆ ಇಂಗ್ಲಿಷ್ ಭಾಷೆ ಮತ್ತು ಗ್ರಹಿಕೆ ಸಾಮಾನ್ಯರಿಗೂ ಹಾಗೂ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದು
  • ಎರಡನೇ ಪತ್ರಿಕೆಯಲ್ಲಿ ದತ್ತಾಂಶ ಸಂಗ್ರಹಣೆ ಪ್ರವೃತ್ತಿ ಅಳತೆಗಳು ಪ್ರಸರಣ ಸಂಭವನೀಯತೆ ಸಿದ್ಧಾಂತ ಮತ್ತು ಸೂಚ್ಯಂಕಗಳ ಬಗ್ಗೆ ಇರುತ್ತದೆ
  • ಪತ್ರಿಕೆ ಮೂರರಲ್ಲಿ ಸಾಮಾನ್ಯ ಜ್ಞಾನ ಹಣಕಾಸು ಅರ್ಥಶಾಸ್ತ್ರ ಲೆಕ್ಕಪತ್ರದ ಮೂಲ ನಿಬಂಧನೆಗಳು ಭಾರತೀಯ ರಚನೆ ಮುಂತಾದ ಪ್ರಶ್ನೆಗಳನ್ನು ಕೇಳಲಾಗುವುದು

ಮೂರನೇ ಹಂತ :  ದಾಖಲೆ ಪರಿಶೀಲನೆ

ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಸಿರುವ ಎಲ್ಲ ದಾಖಲೆಗಳ ಗುಣಮಟ್ಟ ಹಾಗೂ ನೈಜತೆಯನ್ನು ಪರೀಕ್ಷಿಸಲಾಗುತ್ತದೆ ಅಂಗವಿಕಲ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅಂಗವಿಕಲತೆಗೆ ಸಂಬಂಧಿಸಿದ ಯುಡಿಐಡಿ ಕಾರ್ಡನ್ನು ಇಲ್ಲಿ ಪರಿಶೀಲಿಸಲಾಗುತ್ತದೆ

SSC Job Recruitment ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ

SSC Job Recruitment ಗೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಂತಹ ಪ್ರಕ್ರಿಯೆಯು ಈ ಕೆಳಕಂಡಂತಿದೆ

  • ಮೊದಲು ಎಸ್‌ ಎಸ್‌ ಸಿ ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನ ನೇಮಕಾತಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಸಂಪೂರ್ಣವಾಗಿ ಓದಿಕೊಂಡು ಅರ್ಥೈಸಿಕೊಂಡು ತಮ್ಮ ಅರ್ಹತಮಾನದಂಡಗಳನ್ನು ಪರಿಶೀಲಿಸಿಕೊಳ್ಳಿ
  • ಅರ್ಜಿ ಸಲ್ಲಿಸುವ ಮೊದಲು ಸಂವಹನ ಉದ್ದೇಶಕ್ಕಾಗಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಿ
  • ನಂತರ ತಮ್ಮ ವೈಯಕ್ತಿಕ ದಾಖಲೆಗಳು ಶೈಕ್ಷಣಿಕ ದಾಖಲೆಗಳು ಮೀಸಲಾತಿ ದಾಖಲೆಗಳು ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ
  • ಎಸ್‌ ಎಸ್‌ ಸಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನೋಂದಣಿ ಆಗದಿದ್ದರೆ ಮೊದಲು ನೋಂದಾಯಿಸಿಕೊಳ್ಳಿ
  • ನೊಂದಾವಣಿಗೊಂಡ ನಂತರ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ನಮೂದು ಮಾಡುವುದರ ಮೂಲಕ ಲಾಗಿನ್ ಆಗಿ ಅಲ್ಲಿ ಕಾಣಸಿಗುವ ಎಸ್‌ ಎಸ್‌ ಸಿ ಕಂಬೈಂಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಆನ್ಲೈನ್ ಅರ್ಜಿಯು ತೆರೆದ ನಂತರ ತಮ್ಮ ಎಲ್ಲಾ ಅಗತ್ಯ ಮಾಹಿತಿಗಳನ್ನು ನಮೂದು ಮಾಡಿ
  • ನಂತರ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ ಪಾವತಿ ರಶೀದಿಯನ್ನು ಸೇವೆ ಮಾಡಿ ಇಟ್ಟುಕೊಳ್ಳಿ
  • ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಕೆಯ ಶುಲ್ಕವನ್ನು ಪಾವತಿಸಿದ ನಂತರ ಎಲ್ಲ ವಿವರಗಳನ್ನು ಪರಿಶೀಲಿಸಿ ಸಬ್ಮಿಟ್ ಬಟನ್ ಒತ್ತುವುದರ ಮೂಲಕ ಯಶಸ್ವಿಯಾಗಿ ಅರ್ಜಿ ಸಲ್ಲಿಸಬಹುದು ನಂತರ ಸ್ಕ್ರೀನ್ ನ ಮೇಲೆ ಕಾಣುವ ಆನ್ಲೈನ್ ಅರ್ಜಿಯನ್ನು ಡೌನ್ಲೋಡ್ ಮಾಡಿಟ್ಟುಕೊಂಡು ಬೇಕಿದ್ದ ಪಕ್ಷದಲ್ಲಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ

SSC Job Recruitment ಸಂಬಂಧಿಸಿದ ಪ್ರಮುಖ ಲಿಂಕ್ ಗಳು

ಎಸ್‌ ಎಸ್‌ ಸಿ ಅಧಿಕೃತ ವೆಬ್ಸೈಟ್ : ಸಿಬ್ಬಂದಿ ಆಯ್ಕೆ ಆಯೋಗ (SSC)
ಅಧಿಕೃತ ನೋಟಿಫಿಕೇಶನ್ ನ ಪಿಡಿಎಫ್ : ಅಧಿಸೂಚನೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :  ನೋಂದಣಿ ಮಾಡಲು      ಲಾಗಿನ್‌ ನಂತರ ಅರ್ಜಿ ಸಲ್ಲಿಸಲು
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ :  ನೇಮಕಾತಿ ಮಾಹಿತಿ   ಸರ್ಕಾರಿ ಯೋಜನೆಗಳ ಮಾಹಿತಿ

SSC Job Recruitment ಸಂಬಂಧಿಸಿದ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : 21-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-06-2026
ಆನ್ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 23-06-2026

ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಿಬ್ಬಂದಿ ಆಯ್ಕೆ ಆಯೋಗವು ನೇಮಕಾತಿಯಲ್ಲಿ ಸೂಚನೆಯ ಮೂಲಕ ಪದವಿ ಮಟ್ಟದ ಕಂಬೈನ್ಡ್ ಗ್ರಾಜುಯೇಷನ್ ಲೆವೆಲ್ ನ ಹುದ್ದೆಗಳಿಗೆ SSC Job Recruitment ಗೆ  ಅರ್ಜಿಯನ್ನು ಆಹ್ವಾನಿಸಿದ್ದು ಯಾವುದೇ ಪದವಿಯನ್ನು ಮುಗಿಸಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಖಿಲ ಭಾರತದ ಅತ್ಯಂತ ಈ ಹುದ್ದೆಗಳು ಇರುವುದರಿಂದ ಉತ್ತಮ ವೇತನದ ಜೊತೆ ಇತರೆ ಭತ್ಯೆ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ ಕೇಂದ್ರ ಸರ್ಕಾರದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಭರ್ಜರಿ ನ್ಯೂಸ್ ಆಗಿದ್ದು ಅಧಿಕೃತ ಅಧಿಸೂಚನೆಯನ್ನು ಹಿಂದೆ ಓದಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ

ನೀವು SSC CGL (ಇನ್ಸ್‌ಪೆಕ್ಟರ್/ಸಹಾಯಕ ಹುದ್ದೆಗಳು) ಉತ್ತೀರ್ಣರಾಗಲು ಬಯಸಿದರೆ, ವೇಗ + ನಿಖರತೆ + ದೈನಂದಿನ ಅಭ್ಯಾಸದ ಮೇಲೆ ಹೆಚ್ಚು ಗಮನಹರಿಸಿ . ಹೆಚ್ಚಿನ ಟಾಪರ್‌ಗಳು ಪ್ರತಿದಿನ 12 ಗಂಟೆಗಳ ಕಾಲ ಅಧ್ಯಯನ ಮಾಡುವ ಮೂಲಕ ಅಲ್ಲದೆ, ಬದಲಾಗಿ ಸ್ಮಾರ್ಟ್ ದಿನಚರಿಯನ್ನು ಅನುಸರಿಸುವ ಮೂಲಕ ಪರೀಕ್ಷೆಯನ್ನು ಪಾಸ್ ಮಾಡುತ್ತಾರೆ. ತಜ್ಞರು ಪಠ್ಯಕ್ರಮವನ್ನು ಅರ್ಥಮಾಡಿಕೊಳ್ಳುವುದು, ಹಿಂದಿನ ವರ್ಷದ ಪ್ರಶ್ನೆಗಳನ್ನು ಅಣಕು ಪರೀಕ್ಷೆಗಳು ಮತ್ತು ಪರಿಷ್ಕರಣೆಯನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು

SSC CGL ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉತ್ತಮ ಅಭ್ಯಾಸಗಳು

1. ಮೊದಲು ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ

ಅಧ್ಯಯನ ಮಾಡುವ ಮೊದಲು, ಟೈಯರ್-1 ಮತ್ತು ಟೈಯರ್-2 ರಲ್ಲಿ ಯಾವ ವಿಷಯಗಳು ಬರುತ್ತವೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಿ. ಗಣಿತ, ತಾರ್ಕಿಕತೆ, ಇಂಗ್ಲಿಷ್ ಮತ್ತು ಜಿಕೆಗಳಲ್ಲಿ ಹೆಚ್ಚಿನ ತೂಕದ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ.

2. ಹಿಂದಿನ ವರ್ಷದ ಪ್ರಶ್ನೆಗಳನ್ನು ಪ್ರತಿದಿನ ಅಧ್ಯಯನ ಮಾಡಿ

SSC ಪ್ರಶ್ನೆ ಮಾದರಿಗಳನ್ನು ಪುನರಾವರ್ತಿಸುತ್ತದೆ. ಕನಿಷ್ಠ ಕಳೆದ 5–10 ವರ್ಷಗಳ SSC CGL ಪ್ರಶ್ನೆಗಳನ್ನು ಪರಿಹರಿಸಿ . ಅನೇಕ ಆಕಾಂಕ್ಷಿಗಳು ಹಿಂದಿನ ವರ್ಷದ ಪ್ರಶ್ನೆಗಳು ದೊಡ್ಡ ಬದಲಾವಣೆಕಾರರು ಎಂದು ಹೇಳುತ್ತಾರೆ.

3. ಪ್ರತಿ ವಾರ ಅಣಕು ಪರೀಕ್ಷೆಗಳನ್ನು ನೀಡಿ

ಪೂರ್ಣ ಅಣಕು ಪರೀಕ್ಷೆಗಳನ್ನು ಬೇಗನೆ ಪ್ರಾರಂಭಿಸಿ. ಪ್ರತಿ ಅಣಕು ಪರೀಕ್ಷೆಯ ನಂತರ, ವಿಶ್ಲೇಷಿಸಿ:

  • ಯಾವ ವಿಭಾಗವು ಕಷ್ಟಕರವಾಗಿದೆ?
  • ನೀವು ಎಲ್ಲಿ ಸಮಯ ಹಾಳು ಮಾಡಿದ್ದೀರಿ
  • ಯಾವ ತಪ್ಪುಗಳು ಪುನರಾವರ್ತನೆ ಆಗುತ್ತಿವೆ?

ಅಣಕು ಪರೀಕ್ಷೆಗಳು ವೇಗವನ್ನು ಮತ್ತು ನಿಖರತೆಯನ್ನು ಸುಧಾರಿಸುತ್ತದೆ .

4. ಗಣಿತ ಮತ್ತು ಇಂಗ್ಲಿಷ್ ಮೇಲೆ ಬಲವಾದ ಗಮನ

ಈ ಎರಡು ವಿಷಯಗಳು ಹೆಚ್ಚಾಗಿ ಶ್ರೇಣಿಯನ್ನು ನಿರ್ಧರಿಸುತ್ತವೆ. ಹೆಚ್ಚುವರಿ ಸಮಯವನ್ನು ಇವುಗಳಲ್ಲಿ ಕಳೆಯಿರಿ:

  • ಶೇಕಡಾವಾರು, ಅನುಪಾತ, ಬೀಜಗಣಿತ, DI, ರೇಖಾಗಣಿತ ವಿಷಯಗಳು
  • ವ್ಯಾಕರಣ, ಶಬ್ದಕೋಶ, ಓದುವ ಗ್ರಹಿಕೆ, ದೋಷ ಗುರುತಿಸುವಿಕೆ ವಿಷಯಗಳು

5. ಸಣ್ಣ ಟಿಪ್ಪಣಿಗಳನ್ನು ಮಾಡಿ

ಸೂತ್ರಗಳು, ವ್ಯಾಕರಣ ನಿಯಮಗಳು, ಪ್ರಮುಖ ಜಿಕೆ ಸಂಗತಿಗಳನ್ನು ನೋಟ್‌ಬುಕ್‌ನಲ್ಲಿ ಬರೆಯಿರಿ. ಪ್ರತಿ ದಿನವೂ 15-20 ನಿಮಿಷಗಳ ಕಾಲ ಅವುಗಳನ್ನು ಪರಿಷ್ಕರಿಸಿ.

6. ದೈನಂದಿನ ವೇಳಾಪಟ್ಟಿ (ಸರಳ ಯೋಜನೆ)

  • ಗಣಿತ ವಿಷಯ – 2 ಗಂಟೆಗಳು
  • ತಾರ್ಕಿಕ ಕ್ರಿಯೆಗಳು – 1.5 ಗಂಟೆಗಳು
  • ಇಂಗ್ಲಿಷ್ ಭಾಷೆ – 1.5 ಗಂಟೆಗಳು
  • ಸಾಮಾನ್ಯ ಜ್ಞಾನ/ಪ್ರಚಲಿತ ವಿದ್ಯಮಾನಗಳು – 1 ಗಂಟೆ
  • ಅಣಕು/ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು – 1 ಗಂಟೆ

ತಜ್ಞರು ನಿಯಮಿತ ಪರಿಷ್ಕರಣೆ ಮತ್ತು ಸಮತೋಲಿತ ಅಧ್ಯಯನ ಸಮಯವನ್ನು ಹೆಚ್ಚಾಗಿ ನೀಡಲು ಹೇಳುತ್ತಾರೆ.

7. ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಡಿ.

ಪ್ರತಿ ವಿಷಯಕ್ಕೆ ಒಂದು ಉತ್ತಮ ಮೂಲವನ್ನು ಬಳಸಿ ಮತ್ತು ಪದೇ ಪದೇ ಪರಿಷ್ಕರಿಸಿ. ಪುಸ್ತಕಗಳನ್ನು ಕಾಲ ಕಾಲಕ್ಕೆ ಬದಲಾಯಿಸುವುದರಿಂದ ಸಮಯ ವ್ಯರ್ಥವಾಗುತ್ತದೆ.

8. ಟೈಮರ್ ಅಭ್ಯಾಸದೊಂದಿಗೆ ವೇಗವನ್ನು ಹೆಚ್ಚಿಸಿ

SSC ಸಮಯ ಆಧಾರಿತ ಪರೀಕ್ಷೆಯಾಗಿದೆ. ಟೈಮರ್‌ನೊಂದಿಗೆ ಪ್ರಶ್ನೆಗಳನ್ನು ಪರಿಹರಿಸಿ ಮತ್ತು ಕ್ವಾಂಟ್ ಮತ್ತು ರೀಸನಿಂಗ್‌ಗಾಗಿ ಶಾರ್ಟ್‌ಕಟ್‌ಗಳನ್ನು ಕಲಿಯಿರಿ, ಕಡಿಕೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳನ್ನು ಬಿಡಿಸಿ

9. 4 ರಿಂದ 6 ತಿಂಗಳುಗಳ ಕಾಲ ಅಧ್ಯಯನದಲ್ಲಿ ಸ್ಥಿರವಾಗಿರಿ

ತಯಾರಿ ಅಣಕು ಆಧಾರಿತ ಮತ್ತು ಪರಿಷ್ಕರಣೆ-ಭಾರವಾಗಿದ್ದರೆ, ಅನೇಕ ಅಭ್ಯರ್ಥಿಗಳಿಗೆ 4 ರಿಂದ 6 ತಿಂಗಳುಗಳ ಕಾಲ ದೈನಂದಿನ ಅಭ್ಯಾಸ ಮಾಡಿ

SSC CGL ಗೆ ಸುವರ್ಣ ನಿಯಮ:
“PYQ + ಅಣಕು ಪರೀಕ್ಷೆ + ಪರಿಷ್ಕರಣೆ = ಆಯ್ಕೆ” . ಅನೇಕ ಅಭ್ಯರ್ಥಿಗಳು ದೀರ್ಘ ಅಧ್ಯಯನ ಸಮಯಕ್ಕಿಂತ ಸ್ಥಿರತೆ ಮುಖ್ಯ ಆಗಿದೆ

 

SSC Job Recruitment 2026 – FAQ’s

1. ಈ ನೇಮಕಾತಿ ಪ್ರಕ್ರಿಯೆ ಯಾವ ಸಂಸ್ಥೆಯಿಂದ ನಡೆಯುತ್ತಿದೆ?
ಈ ನೇಮಕಾತಿಯ ಪ್ರಕ್ರಿಯೆಯನ್ನು Staff Selection Commission (SSC) ನಡೆಸುತ್ತಿದೆ.

2. ಯಾವ ಹುದ್ದೆಗಳಿಗೆ ಆನ್‌ ಲೈನ್ ಅರ್ಜಿ ಆಹ್ವಾನಿಸಲಾಗಿದೆ?
ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಸೇರಿದಂತೆ ವಿವಿಧ ಪದವಿ ಮಟ್ಟದ ಹುದ್ದೆಗಳಿಗೆ ಅರ್ಜಿಯನ್ನು ಆನ್‌ ಲೈನ್‌ ಮೂಲಕ ಆಹ್ವಾನಿಸಲಾಗಿದೆ.

3 ಒಟ್ಟಾರೆ ಎಷ್ಟು ಹುದ್ದೆಗಳಿವೆ?
ಒಟ್ಟು 12,256 ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ.

4. ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು?
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದರೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

5. ವಯೋಮಿತಿ ಎಷ್ಟಿರಬೇಕು?

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 30 ವರ್ಷಗಳು

6. ವಯೋಮಿತಿ ಸಡಿಲಿಕೆ ಇದೆಯೇ?
ಹೌದು. ವಿವರ ನೋಡುವುದಾದರೆ

  • OBC ಅಭ್ಯರ್ಥಿಗಳಿಗೆ – 3 ವರ್ಷ
  • SC/ST ಅಭ್ಯರ್ಥಿಗಳಿಗೆ – 5 ವರ್ಷ
  • PwD ಅಭ್ಯರ್ಥಿಗಳಿಗೆ – 10 ರಿಂದ 15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

7. ಮಾಸಿಕ ಸಂಬಳ ಎಷ್ಟು ಸಿಗುತ್ತದೆ?
ಮಾಸಿಕ ₹25,500/-  ರೂಗಳಿಂದ ₹1,51,100  ರೂಗಳವರೆಗೆ ಸಂಬಳ ಸಿಗುತ್ತದೆ.

8. ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?

  • ಸಾಮಾನ್ಯ/OBC ಅಭ್ಯರ್ಥಿಗಳು – ₹100 ರೂಗಳು
  • SC/ST, ಮಹಿಳೆಯರು, ಅಂಗವಿಕಲರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ಇಲ್ಲ

9. ಆಯ್ಕೆ ಪ್ರಕ್ರಿಯೆಯ ಹಂತಗಳು ಯಾವುವು?

  1. ಕಂಪ್ಯೂಟರ್ ಆಧಾರಿತ ಸಾಮಾನ್ಯ ಪರೀಕ್ಷೆ (Tier-1)
  2. ಕಂಪ್ಯೂಟರ್ ಆಧಾರಿತ ಮುಖ್ಯ ಪರೀಕ್ಷೆ (Tier-2)
  3. ದಾಖಲೆ ಪರಿಶೀಲನೆ

10. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು?
ಅರ್ಜಿ ಸಲ್ಲಿಕೆ ಪ್ರಾರಂಭ: 21-05-2026
ಕೊನೆಯ ದಿನಾಂಕ: 22-06-2026
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 23-06-2026

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment