ಬ್ಯಾಂಕಿಂಗ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ (PSB Bank Recruitment)
ನಮಸ್ಕಾರ ಸ್ನೇಹಿತರೆ ನೀವೇನಾದರೂ ಪದವಿಯನ್ನು ಪೂರ್ಣಗೊಳಿಸಿದ್ದೀರಾ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಹುಡುಕುತ್ತಿದ್ದರೆ ನಿಮಗೆ ಒಂದು ಸುವರ್ಣ ಅವಕಾಶವಿದೆ ಭಾರತದ ಪ್ರತಿಷ್ಠ ಬ್ಯಾಂಕಾದ ಪಂಜಾಬ್ ಸಿಂಧ್ ಬ್ಯಾಂಕ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅಖಿಲ ಭಾರತ ಮಟ್ಟದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಅಂತಲೇ ಹೇಳಬಹುದು ಆದುದರಿಂದ ಆದಷ್ಟು ಬೇಗ ನೇಮಕಾತಿ ಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ ಮಾಸಿಕ ಸಂಬಳ ವಿದ್ಯಾರ್ಹತೆ ಹಾಗೂ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ.
| ನೇಮಕಾತಿ ಬ್ಯಾಂಕ್ | ಪಂಜಾಬ್ ಸಿಂಧ್ ಬ್ಯಾಂಕ್ (Panjab Sindh Bank) |
| ಹುದ್ದೆಯ ಹೆಸರು | ಬ್ಯಾಂಕಿಂಗ್ ಅಪ್ರೆಂಟಿಸ್ |
| ಒಟ್ಟು ಹುದ್ದೆಗಳ ಸಂಖ್ಯೆ | 635 |
| ಉದ್ಯೋಗದ ಸ್ಥಳ | ಭಾರತದಾದ್ಯಂತ |
| ಸ್ಟೇ ಫಂಡ್ (ಮಾಸಿಕ) | 12,300/- ರೂಗಳು |
PSB Bank Recruitment ನ ಶೈಕ್ಷಣಿಕ ಅರ್ಹತೆ
ಈ PSB Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು
ಇದರ ಜೊತೆಯಲ್ಲಿ ಪ್ರಾದೇಶಿಕ ಭಾಷೆಯನ್ನು ಓದಲು ಬರೆಯಲು ಮಾತನಾಡಲು ಹಾಗೂ ಅರ್ಥ ಮಾಡಿಕೊಳ್ಳಲು ಬರಬೇಕು ಈ ಸಂಬಂಧ ಪ್ರಾದೇಶಿಕ ಭಾಷೆಯನ್ನು ಪ್ರಮಾಣಿಕರಿಸಲು 10ನೇ ತರಗತಿಯ ಪರೀಕ್ಷೆಯಲ್ಲಿ ಮತ್ತು ಪದವಿಯಲ್ಲಿ ಭಾಷಾ ಪರೀಕ್ಷೆಯಾಗಿ ಪ್ರಾದೇಶಿಕ ಭಾಷೆಯನ್ನು ತೆಗೆದುಕೊಂಡಿರಬೇಕು
ವಯೋಮಿತಿ
ಈ PSB Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 01-05-2026 ರ ಪ್ರಕಾರ ಕನಿಷ್ಠ 20 ವರ್ಷ ವಯೋಮಿತಿ ಹೊಂದಿರಬೇಕಾಗುತ್ತದೆ ಹಾಗೂ ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕಾಗುತ್ತದೆ
ವಯೋಮಿತಿ ಸಡಿಲಿಕೆ
ಈ PSB Bank Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ ಭಾರತ ಸರ್ಕಾರದ ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ನೀಡುವಂತಹ ವಯೋಮಿತಿ ಸಡಿಲಿಕೆಯ ಮಾಹಿತಿ ಈ ಕೆಳಕಂಡಂತಿದೆ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು : 05 ವರ್ಷಗಳು
- ಇತರೆ ಹಿಂದುಳಿದ ವರ್ಗಗಳು (ನಾನ್ ಕ್ರೀಮಿ ಲೇಯರ್) ಅಭ್ಯರ್ಥಿಗಳು : 03 ವರ್ಷಗಳು
- ವಿಕಲಚೇತನ ಅಭ್ಯರ್ಥಿಗಳು (ಸಾಮಾನ್ಯ ಹಾಗೂ ಆರ್ಥಿಕ ಹಿಂದುಳಿದ ವರ್ಗಗಳು) ಗರಿಷ್ಠ 35 ವರ್ಷಗಳು
- ವಿಕಲಚೇತನ ಅಭ್ಯರ್ಥಿಗಳು (ಇತರೆ ಹಿಂದುಳಿದ ವರ್ಗಗಳು) 38 ವರ್ಷಗಳು
- ವಿಕಲಚೇತನ ಅಭ್ಯರ್ಥಿಗಳು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) 40 ವರ್ಷಗಳು
ವೇತನದ ವಿವರ
ಈ PSB Bank Recruitment ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ 12,300/- ರೂಗಳ ಸ್ಟೇ ಫಂಡನ್ನು ನೀಡಲಾಗುತ್ತದೆ
PSB Bank Recruitment ನ ಅಪ್ರೆಂಟಿಸ್ ಶಿಪ್ ಅವಧಿ
ಈ PSB Bank Recruitment ಮೂಲಕ ನೇಮಕಗೊಳ್ಳುವ ಅಪ್ರೆಂಟಿಸ್ ಗಳಿಗೆ ಒಂದು ವರ್ಷದ ಸೇವಾ ಅವಧಿಯನ್ನು ನಿಗದಿಪಡಿಸಲಾಗಿದೆ
PSB Bank Recruitment ನ ಆಯ್ಕೆ ಪ್ರಕ್ರಿಯೆ
ಈ PSB Bank Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಅಂತಹ ಹಂತವಾಗಿ ನಡೆಯಲಿದ್ದು ಪೂರ್ಣ ಮಾಹಿತಿ ಈ ಕೆಳಕಂಡಂತಿದೆ
ಅರ್ಹತೆ ಪರಿಶೀಲನೆ : ಅಂತಿಮ ಆಯ್ಕೆ ಪ್ರಕ್ರಿಯೆಯು ಹುದ್ದೆಗೆ ಸಂಬಂಧಿಸಿದ ಅರ್ಹತೆ ಮತ್ತು ಆನ್ಲೈನ್ ಅರ್ಜಿಯಲ್ಲಿ ಒದಗಿಸಲಾದ ಪೂರಕ ಮಾಹಿತಿ ಮತ್ತು ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಪರಿಶೀಲನೆಗೆ ಒಳಪಟ್ಟಿರುತ್ತದೆ
ರಾಜ್ಯ ಮತ್ತು ಜಿಲ್ಲೆಯ ಆಯ್ಕೆ : ಅಭ್ಯರ್ಥಿಗಳು ತಾವುಗಳುಆಯ್ಕೆ ಮಾಡಿರುವ ರಾಜ್ಯ ಮತ್ತು ಜಿಲ್ಲೆಯನ್ನು ಅರ್ಜಿಯಲ್ಲಿ ಒದಗಿಸಬೇಕು ಅರ್ಜಿ ಸಲ್ಲಿಸಿದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ
ಮೆರಿಟ್ ಪಟ್ಟಿ ಪ್ರಕಟ : ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಕ್ರೂಢೀಕರಿಸಿ ಮೆರಿಟ್ ಪಟ್ಟಿಯನ್ನು ರಾಜ್ಯವಾರು ಮತ್ತು ಜಿಲ್ಲಾವಾರು ರಚಿಸಲಾಗುತ್ತದೆ
ಕನಿಷ್ಠ ಅರ್ಹತೆ : ಈ ನೇಮಕಾತಿಯಲ್ಲಿ ಅರ್ಜಿಗಳನ್ನು ಅರ್ಹತಮಾನದಂಡಗಳ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಜೊತೆ ಅವರ ದ್ವಿತೀಯ ಪಿಯುಸಿ ಅಂಕಗಳ ಪ್ರಕಾರ ಆಯಾ ವರ್ಗದ ರಾಜ್ಯ ಮತ್ತು ಜಿಲ್ಲೆಗೆ ಅನುಗುಣವಾಗಿ ಅವರೋಹಣ ಕ್ರಮದಲ್ಲಿ ಇರಿಸಲಾಗುತ್ತದೆ
ವಯಸ್ಸಿನ ಅನುಗುಣ : ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಮೆರಿಟ್ ಪಟ್ಟಿಯಲ್ಲಿ ಕಟ್ಟಾ ಪಂಕಗಳಂತೆಯೇ ಒಂದೇ ಪ್ರಮಾಣದ ಅಂಕಗಳನ್ನು ಗಳಿಸಿದ್ದಾಗ ಅಂತಹ ಅಭ್ಯರ್ಥಿಗಳನ್ನು ಅವರ ವಯಸ್ಸಿನ ಆಧಾರದ ಮೇಲೆ ವರ್ಗ ರಾಜ್ಯ ಹಾಗೂ ಜಿಲ್ಲೆಯ ಕ್ರಮದಲ್ಲಿ ಮೆರಿಟ್ ಪಟ್ಟಿಯಲ್ಲಿ ಸ್ಥಾನ ನೀಡಲಾಗುತ್ತದೆ
ಆನ್ಲೈನ್ ಅರ್ಜಿ ಶುಲ್ಕ
ಈ PSB Bank Recruitment ಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಪಾವತಿಸಬೇಕಾದ ಮೊತ್ತದ ವಿವರ ಈ ಕೆಳಕಂಡಂತಿದೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು 100/- ರೂಗಳು + ಅನ್ವಯವಾಗುವ ತೆರಿಗೆ ಮತ್ತು ಪಾವತಿ ಗೇಟ್ ವೇ ಶುಲ್ಕಗಳು
ಸಾಮಾನ್ಯ,, ಆರ್ಥಿಕ ಹಿಂದುಳಿದ ವರ್ಗಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ 200/- ರೂಗಳು + ಅನ್ವಯವಾಗುವ ತೆರಿಗೆ ಮತ್ತು ಪಾವತಿ ಗೇಟ್ ವೇ ಶುಲ್ಕಗಳು
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಿ
ಅಗತ್ಯ ದಾಖಲಾತಿಗಳು
- ಆಧಾರ್ ಕಾರ್ಡ್
- ಸರ್ಕಾರದ ಅಧಿಕೃತ ಗುರುತಿನ ಚೀಟಿ (ಪಾನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ)
- ಚಾಲ್ತಿಯಲ್ಲಿರುವ ಇಮೇಲ್ ಐಡಿ ಮೊಬೈಲ್ ನಂಬರ್
- ಪಾಸ್ಪೋರ್ಟ್ ಸೈಜ್ ಭಾವಚಿತ್ರ ಮತ್ತು ಸಹಿ
- ಬ್ಯಾಂಕ್ ಖಾತೆ ವಿವರಗಳು
- ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ದಾಖಲೆಗಳು
PSB Bank Recruitment ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೊದಲು https://www.apprenticeshipindia.gov.in/ ಅಥವಾ https://nats.education.gov.in/ ಪೋರ್ಟಲ್ ನಲ್ಲಿ ನೋಂದಣಿ ಆಗಿರಬೇಕು ಈ ಪೋರ್ಟಲ್ ಗಳಲ್ಲಿ ಅಭ್ಯರ್ಥಿಗಳ ಸಂಪೂರ್ಣ 100% ಮಾಹಿತಿ ಭರ್ತಿ ಮಾಡಿದ ನಂತರವೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಪಡೆಯುತ್ತಾರೆ
- ಮೇಲಿನ ಪೋರ್ಟಲ್ ಗಳಲ್ಲಿ ನೋಂದಾಯಿಸಿಕೊಂಡ ನಂತರ ಪಂಜಾಬ್ ಅಂಡ್ ಸೀನ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ನ ನೇಮಕಾತಿ ವಿಭಾಗಕ್ಕೆ ಭೇಟಿ ನೀಡಬೇಕು
- ಅಲ್ಲಿ ಕಾಣಸಿಗುವ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕು
- ನಂತರ ಆನ್ಲೈನ್ ಅರ್ಜಿಯು ತೆರೆಯುತ್ತದೆ ಅಲ್ಲಿ ವೈಯಕ್ತಿಕ ಮಾಹಿತಿ ಸಂವಹನ ಮಾಹಿತಿ ಶೈಕ್ಷಣಿಕ ಮಾಹಿತಿ ಹಾಗೂ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ನಿಖರವಾಗಿ ಭರ್ತಿ ಮಾಡಿ
- ಕೇಳಲಾಗುವ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಈ ದಾಖಲಾತಿಗಳು ಸ್ಪಷ್ಟವಾಗಿ ಕಾಣುವಂತಿರಲಿ
- ನಂತರ ತಮ್ಮ ವರ್ಗಕ್ಕೆ ಅನ್ವಯವಾಗುವ ಮತದ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ
- ಕೊನೆಯದಾಗಿ ತಾವು ನಮೂದಿಸಿರುವ ಎಲ್ಲ ಮಾಹಿತಿ ಹಾಗೂ ಅಪ್ಲೋಡ್ ಮಾಡಲಾಗಿರುವ ಎಲ್ಲ ದಾಖಲೆಗಳು ಸರಿಯಾಗಿವೆ ಎಂದು ಪರಿಶೀಲಿಸಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ, ಸ್ಕ್ರೀನ್ ನ ಮೇಲೆ ಕಾಣುವ ನೋಂದಣಿ ಸಂಖ್ಯೆ ಅಥವಾ ಅರ್ಜಿ ಸಂಖ್ಯೆಯನ್ನು ಸೆರೆಹಿಡಿದು ಬರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಭವಿಷ್ಯದ ಉದ್ದೇಶಕ್ಕಾಗಿ ತಮ್ಮಲ್ಲಿ ಇರಿಸಿಕೊಳ್ಳಿ
ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 21-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು, ಮಾಹಿತಿಯನ್ನು ಮಾಡಿಫಿಕೇಶನ್ ಮಾಡಲು ಶುಲ್ಕ ಪಾವತಿಸಲು ಕೊನೆ ದಿನಾಂಕ : 06-06-2026
ಪ್ರಮುಖ ಲಿಂಕುಗಳು
| ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ನ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ | ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ |
| ಪೋರ್ಟಲ್ ಗಳಲ್ಲಿ ನೊಂದಾವಣಿಗೊಳ್ಳಲು | ಅಪ್ರೆಂಟಿಸ್ ಪೋರ್ಟಲ್ NATS ಪೋರ್ಟಲ್ |
| ಅಧಿಕೃತ ಅಧಿಸೂಚನೆಯ ಪಿಡಿಎಫ್ | Panjab And Sindh Bank Recruitment PDF |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು | ನೋಂದಣಿ ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ ಪಡೆಯಿರಿ | ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ |
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ತನ್ನ 2026ರ ನೇಮಕಾತಿದ್ದಿ ಸೂಚನೆ ಪ್ರಕಾರ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅಖಿಲ ಭಾರತದ ಆದ್ಯಂತ 635 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ ಯಾವುದೇ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅರ್ಜಿ ಶುಲ್ಕವು ಕಡಿಮೆ ಇರುವುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಭಾರತದ ಅತ್ಯಂತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯಿರಿ ಈ ಅಪ್ಪ್ರಸಿದ್ಧಗಳು ಭವಿಷ್ಯದಲ್ಲಿ ನೀವು ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಕರಿಸುತ್ತವೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಜ್ಞಾನವನ್ನು ಹೆಚ್ಚಿಸಿ ವೃದ್ಧಿಸುತ್ತವೆ. ಆದ್ದರಿಂದಲೇ ಅಧಿಕೃತ ಅಧಿಸೂಚನೆಯನ್ನು ಹಿಂದೆ ಓದಿ ತಮ್ಮ ಅರ್ಹತಮಾನದಂಡಗಳನ್ನು ಪರಿಶೀಲಿಸಿ ತಾವು ಅರ್ಹರಾಗಿದ್ದರೆ ಮತ್ತು ಆಸಕ್ತಿ ಹೊಂದುತ್ತದೆ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ
PSB Bank Apprentice Exam ಪಾಸ್ ಆಗಲು Best Practices
1) ಬ್ಯಾಂಕಿಂಗ್ ಮೂಲಭೂತ ವಿಷಯಗಳನ್ನು ಹೆಚ್ಚಾಗಿ ಓದಿ
ಬ್ಯಾಂಕ್ ಕೆಲಸಕ್ಕೆ ಸಂಬಂಧಿಸಿದ ಬ್ಯಾಂಕಿಂಗ್ ಪದಗಳು, RBI, ಹಣಕಾಸು, ಖಾತೆಗಳ ಮೂಲಭೂತ ಮಾಹಿತಿಗಳ ತಿಳಿದುಕೊಳ್ಳಿ.
2) ಗಣಿತ ಮತ್ತು ರೀಸನಿಂಗ್ ಅಭ್ಯಾಸ ಮಾಡಿ
ಸರಳ ಗಣಿತ, ಶೇಕಡಾವಾರು, ಲಾಭ-ನಷ್ಟ, ಸರಳ ಬಡ್ಡಿ ಹಾಗೂ ಲಾಜಿಕಲ್ ಪ್ರಶ್ನೆಗಳು ಪ್ರತಿದಿನ ನಿರಂತರವಾಗಿ ಅಭ್ಯಾಸ ಮಾಡಿ.
3) ದಿನನಿತ್ಯ Current Affairs ಬಗ್ಗೆ ಓದಿ
ಬ್ಯಾಂಕ್, ಆರ್ಥಿಕತೆ, ಸರ್ಕಾರದ ಯೋಜನೆಗಳು ಹಾಗೂ ಇತ್ತೀಚಿನ ಸುದ್ದಿಗಳು ತಿಳಿದುಕೊಳ್ಳಿ. ದಿನಕ್ಕೆ 15 ರಿಂದ20 ನಿಮಿಷಗಳ ಕಾಲ ಓದಿ
4) ಹಿಂದಿನ ಪ್ರಶ್ನೆ ಪತ್ರಿಕೆ ಮತ್ತು Mock Test ಅಭ್ಯಾಸ ಮಾಡಿ
ಹಿಂದಿನ ವರ್ಷದ ಪ್ರಶ್ನೆಗಳು ಹಾಗೂ ಆನ್ಲೈನ್ Mock Test ಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ. ಇದರ ಜೊತೆಯಲ್ಲಿ ಪ್ರಶ್ನೆಗಳ ಮಾದರಿ ಸುಲಭವಾಗಿ ಅರ್ಥವಾಗುತ್ತದೆ.
5) ಉತ್ತಮ ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸ ಇರಲಿ
ಓದುವಾಗ ಪ್ರತಿ ವಿಷಯಕ್ಕೆ ಸರಿಯಾದ ಸಮಯ ನಿಗದಿ ಮಾಡಿ, ಕಷ್ಟವಾದ ಪ್ರಶ್ನೆಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಆತ್ಮವಿಶ್ವಾಸದಿಂದ ತಯಾರಿಯನ್ನು ನೆಡೆಸಿ.
ಸಲಹೆ: ಪ್ರತಿದಿನ ಕನಿಷ್ಠ 2 ರಿಂದ 3 ಗಂಟೆಗಳ ಕಾಲ ನಿಯಮಿತವಾಗಿ ಓದಿದರೆ ಆಯ್ಕೆಯಾಗುವ ಅವಕಾಶ ಹೆಚ್ಚಾಗುತ್ತದೆ.
PSB Bank Recruitment 2026 – FAQ’s
1) ಈ ನೇಮಕಾತಿಗೆ ಅರ್ಜಿಯನ್ನು ಯಾರು ಸಲ್ಲಿಸಬಹುದು?
ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
2) ವಯೋಮಿತಿ ವಿವರ ಏನಿದೆ?
01-05-2026ರ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ ವಯಸ್ಸು 28 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
3) ಆಯ್ಕೆ ಪ್ರಕ್ರಿಯೆ ಯಾವ ಹಂತಗಳಲ್ಲಿ ನೆಡೆಯುತ್ತದೆ?
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಅರ್ಜಿಯಲ್ಲಿ ನೀಡಿದ ಮಾಹಿತಿ ಹಾಗೂ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಪ್ರತ್ಯೇಕವಾಗಿ ಪರೀಕ್ಷೆ ಇರಬಹುದು.
4) ಮಾಸಿಕ ವೇತನ (Stipend) ಎಷ್ಟು ದೊರೆಯುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹12,300/- ಸ್ಟೇ ಫಂಡ್ (Stipend) ಮೊತ್ತವನ್ನು ನೀಡಲಾಗುತ್ತದೆ.
5) ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21-05-2026 ಮತ್ತು ಕೊನೆಯ ದಿನಾಂಕ: 06-06-2026 ಆಗಿದೆ. ಕೊನೆಯ ದಿನಾಂಕದವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.