ಸೂಪರ್ವೈಸರ್, ಮೇನೇಜರ್ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ (KSRLPS Recruitment)
ನಮಸ್ಕಾರ ಸ್ನೇಹಿತರೆ ನೀವೇನಾದರೂ ಕರ್ನಾಟಕದಲ್ಲಿ ಇದ್ದು ಹತ್ತನೇ ತರಗತಿ, ಪಿಯುಸಿ, ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಾಸಾಗಿದ್ದು ಕರ್ನಾಟಕ ಸರ್ಕಾರದಲ್ಲಿ ಸರ್ಕಾರಿ ಹುದ್ದೆಯನ್ನು ಹುಡುಕುತ್ತಿದ್ದರೆ ಇದೀಗ ಉತ್ತಮ ಅವಕಾಶವಿದೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆಯು ತನ್ನ ಅಧಿಕೃತ ನೇಮಕಾತಿ ಸೂಚನೆ ಮೂಲಕ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಮುಖ್ಯವಾಗಿ ಪದವೀಧರರು ಹಾಗೂ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಹಾಗೂ ವಿವಿಧ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸುವುದರ ಮೂಲಕ ಹುದ್ದೆಗಳನ್ನು ಪಡೆಯಬಹುದಾಗಿರುತ್ತದೆ ಕಡಿಮೆ ವಿದ್ಯಾರ್ಹತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ಲಭ್ಯವಿರುವುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಕನಸಿನ ಉದ್ಯೋಗವನ್ನು ಪಡೆಯಿರಿ
ಈ ನೇಮಕಾತಿ ಮೂಲಕ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆಯು ಬ್ಲಾಕ್ ಮ್ಯಾನೇಜರ್, ಆಫೀಸರ್ ಅಸಿಸ್ಟೆಂಟ್, ಜಿಲ್ಲಾ ಸೂಪರ್ವೈಸರ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಕಾರ್ಡಿನೇಟರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೆಳಗಿ ನೀಡಿರುವ ನೇಮಕಾತಿ ಲಿಂಕನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಿ
KSRLPS Recruitment ಅಧಿಸೂಚನೆಯ ಸಂಪೂರ್ಣ ವಿವರ
ಸಂಸ್ಥೆ ಹೆಸರು : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ
ಹುದ್ದೆಗಳ ಹೆಸರು : ಬ್ಲಾಕ್ ಮ್ಯಾನೇಜರ್ ಕ್ಲಸ್ಟರ್ ಸೂಪರ್ ಆಫೀಸರ್ ಅಸಿಸ್ಟೆಂಟ್ ಇನ್ನೂ ಮುಂತಾದ ಹುದ್ದೆಗಳು
ಅರ್ಜಿ ವಿಧಾನ : ಆನ್ಲೈನ್
ಉದ್ಯೋಗದ ಸ್ಥಳ : ಕರ್ನಾಟಕದ ವಿವಿಧ ಜಿಲ್ಲೆಗಳು
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅಧಿಕೃತ ವೆಬ್ಸೈಟ್ : ಕರ್ನಾಟಕ ರಾಜ್ಯ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ
ಈ ನೇಮಕಾತಿಡಿಯಲ್ಲಿ ಬರುವ ಪ್ರಮುಖ ಹುದ್ದೆಗಳು
ಈ KSRLPS Recruitment ಅಡಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಅನೇಕ ಹುದ್ದೆಗಳಿಗೆ ಅನುಸೂಚನೆಯನ್ನು ಪ್ರಕಟಿಸಿದ್ದು ಅವುಗಳಲ್ಲಿ ಪ್ರಮುಖ ಹುದ್ದೆಗಳು ಈ ಕೆಳಕಂಡಂತಿವೆ
- ಬ್ಲಾಕ್ ಮೆನೇಜರ್
- ಕ್ಲಸ್ಟರ್ ಸೂಪರ್ವೈಸರ್
- ಜಿಲ್ಲಾ ಮ್ಯಾನೇಜರ್
- ತಾಲೂಕು ಕಾರ್ಯಕ್ರಮ ಮ್ಯಾನೇಜರ್
- ಡಾಟಾ ಎಂಟ್ರಿ ಆಪರೇಟರ್
- ಕೋ ಆರ್ಡಿನೇಟರ್
ಕೆಲವೊಂದು ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಹುದ್ದೆಗಳು ನೇಮಕಾತಿ ಪ್ರಕ್ರಿಯೆಗೆ ಒಳಪಟ್ಟಿವೆ
ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ
ಈ KSRLPS Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿಯಿಂದ ನಾದಕೋತ್ತರ ಪದವಿಯನ್ನು ಪಡೆದಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಥಿಯು ಬದಲಾಗುತ್ತಿದ್ದು ಸಾಮಾನ್ಯವಾಗಿ ಈ ಕೆಳಗಿನ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
- ಹತ್ತನೇ ತರಗತಿ (SSLC)
- 12ನೇ ತರಗತಿ (PUC)
- ಯಾವುದೇ ವಿಭಾಗದಲ್ಲಿ ಪದವಿ (ANY DEGREE)
- ಬಿಎಸ್ಸಿ ಅಥವಾ ಎಂ ಎಸ್ ಸಿ (B.Sc/M.Sc)
- ಎಮ್ ಬಿ ಎ (MBA)
- ಎಂ ಎಸ್ ಡಬ್ಲ್ಯೂ (MSW)
- ಪಿಜಿ ಡಿಪ್ಲೋಮಾ (PG DIPLOMA)
KSRLPS Recruitment ನಲ್ಲಿ ಹುದ್ದೆವಾರು ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಸವಿವರವಾಗಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಉತ್ತಮ ವಾಗಿದೆ
ವಯೋಮಿತಿ ವಿವರ
ಈ KSRLPS Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ ಗರಿಷ್ಠ 45 ರಿಂದ 50 ವರ್ಷಗಳವರೆಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ವಯೋಮಿತಿಯು ಹುದ ಅನುಗುಣವಾಗಿ ಬದಲಾಗುತ್ತಿರುತ್ತದೆ ಸಂಪೂರ್ಣ ಮಾಹಿತಿಗಾಗಿ
KSRLPS Recruitment ನ ವಯೋಮಿತಿ ಸಡಿಲಿಕೆ
KSRLPS Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ ಕರ್ನಾಟಕ ಸರ್ಕಾರದ ವಯೋಮಿತಿ ಸಡಿಲಿಕೆ ಕಾಯ್ದೆಯ ಪ್ರಕಾರ ಈ ಸಡಿಲಿಕೆಯು ಸಿಗುತ್ತದೆ
ವೇತನದ ವಿವರಗಳು
ಈ KSRLPS Recruitment ಮೂಲಕ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಕಂಡಂತೆ ಮಾಸಿಕ ವೇತನವನ್ನು ನೀಡಲಾಗುತ್ತದೆ ವೇತನದ ವಿವರ ಈ ಕೆಳಕಂಡಂತಿದೆ
| ಹುದ್ದೆಯ ಹೆಸರು | ಸಂಬಳ (ಮಾಸಿಕ) |
| ಬ್ಲಾಕ್ ಮೆನೇಜರ್ | 17,050/- ರೂಗಳಿಂದ 25,000/- ರೂಗಳು |
| ಕ್ಲಸ್ಟರ್ ಸೂಪರ್ವೈಸರ್ | 18,000/- ರೂಗಳು |
| ಕಚೇರಿ ಸಹಾಯಕ | 20,000/- ರೂಗಳು |
| ಜಿಲ್ಲಾ ಮ್ಯಾನೇಜರ್ | 30,000/- ರೂಗಳು |
| ಡಾಟಾ ಎಂಟ್ರಿ ಆಪರೇಟರ್ ಮತ್ತು ಕೋಆರ್ಡಿನೇಟರ್ | 20,500/- ರೂಗಳು |
ಆನ್ಲೈನ್ ಅರ್ಜಿ ಶುಲ್ಕ
ಈ KSRLPS Recruitment ಗೆ ಯಾವುದೇ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯತೆ ಇರುವುದಿಲ್ಲ ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
KSRLPS Recruitment ನ ಆಯ್ಕೆ ಪ್ರಕ್ರಿಯೆ
ಸರ್ಕಾರಿ ಹುದ್ದೆ ಆಗಿರುವುದರಿಂದ ಆಯ್ಕೆ ಪ್ರಕ್ರಿಯೆಯು ವ್ಯವಸ್ಥಿತವಾಗಿರುತ್ತದೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಂತ ಹಂತದ ವಿವರ ಈ ಕೆಳಕಂಡಂತಿದೆ
ಲಿಖಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತಹ ಗ್ರಾಮೀಣಾಭಿವೃದ್ಧಿ ಜೀವನ ಗುಣಮಟ್ಟ ಪಂಚಾಯತ್ ರಾಜ್ ಹಾಗೂ ಇನ್ನು ಮುಂತಾದ ಕರ್ನಾಟಕ ರಾಜ್ಯ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುವುದು
ಸಂದರ್ಶನ : ಸಂದರ್ಶನದಲ್ಲಿ ಉದ್ಯೋಗನಗುಣವಾಗಿ ಅಭ್ಯರ್ಥಿಗಳಿಗೆ ಇರಬೇಕಾದ ಕೌಶಲ್ಯ ಸಮೂಹನ ಕೌಶಲ್ಯ ಹಾಗೂ ಮತ್ತಿತರ ಅಂಶಗಳನ್ನು ಸಂದರ್ಶನದಲ್ಲಿ ಪರಿಶೀಲಿಸಲಾಗುವುದು
ದಾಖಲೆ ಪರಿಶೀಲನೆ : ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಎಲ್ಲ ದಾಖಲಾತಿಗಳನ್ನು ದಾಖಲೆ ಪರಿಶೀಲನೆ ಮಾಡಲಾಗುತ್ತದೆ ದಾಖಲೆಗಳ ನೈಜತೆ ಹಾಗೂ ಚಾಲ್ತಿಯನ್ನು ಇಲ್ಲಿ ಪರಿಶೀಲಿಸಲಾಗುವುದು
KSRLPS Recruitment ಗೆ ಅರ್ಜಿ ಸಲ್ಲಿಕೆ ವಿಧಾನ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತ ಮಾನದಂಡಗಳನ್ನು ಪರಿಶೀಲಿಸಿ ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅರ್ಜಿ ಪ್ರಕ್ರಿಯೆಯ ಹಂತಗಳು ಈ ಕೆಳಕಂಡಂತೆ ಇವೆ
- ಮೊದಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕತಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
- ನೇಮಕಾತಿ ವಿಭಾಗದಲ್ಲಿ ಹುದ್ದೆಗಳಿಗೆ ಹೊರಡಿಸಲಾಗಿರುವ ಪ್ರತ್ಯೇಕ ಅಧಿಸೂಚನೆಗಳನ್ನು ಗಮನವಿಟ್ಟು ಎಚ್ಚರಿಕೆಯಿಂದ ಓದಿ ಅರ್ಥೈಸಿಕೊಳ್ಳಬೇಕು
- ಅನುಸೂಚನೆಯಲ್ಲಿ ತಿಳಿಸಲಾಗಿರುವ ಅರ್ಹತೆಗಳನ್ನು ಪೂರೈಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ಆನ್ಲೈನ್ ಅರ್ಜಿಯು ತೆರೆಯುತ್ತದೆ ಅಲ್ಲಿ ಕೇಳಲಾಗು ಎಲ್ಲ ಮಾಹಿತಿಯನ್ನು ಸರಿಯಾಗಿ ನಿರ್ದಿಷ್ಟವಾಗಿ ಯಾವುದೇ ತಪ್ಪುಗಳಿಲ್ಲದೆ ನಮೂದಿಸಿ ಅಗತ್ಯವಿದ್ದಲ್ಲಿ ನವೀಕರಿಸಿ
- ಕೇಳಲಾಗುವ ಎಲ್ಲಾ ಗತಿ ದಾಖಲಾತಿಗಳನ್ನು ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಯಶಸ್ವಿಯಾಗಿ ಅರ್ಜಿ ಸಲ್ಲಿಸಲು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ನಂತರ ಪರದೆ ಮೇಲೆ ಕಾಣುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ ನೇಮಕಾತಿ ಪ್ರಕ್ರಿಯೆಯಲ್ಲಿ ಈ ದಾಖಲಾತಿಯು ಪ್ರಮುಖ ಪಾತ್ರ ವಹಿಸುತ್ತದೆ
ಪ್ರಮುಖ ಸೂಚನೆ : ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಹಾಗೂ ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಲು ನಿಗದಿಪಡಿಸಿರುವ ಜಾಗದಲ್ಲೇ ಅಪ್ಲೋಡ್ ಮಾಡಿ
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
- ಭಾವಚಿತ್ರ ಹಾಗು ಸಹಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅನುಭವ ಪ್ರಮಾಣ ಪತ್ರ (ಅನ್ವಯಿಸಿದರೆ)
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
KSRLPS Recruitment ಗೆ ಕೆಲವೊಂದು ಸಂದರ್ಭದಲ್ಲಿ ಇನ್ನು ಹೆಚ್ಚಿನ ದಾಖಲಾತಿಗಳನ್ನು ಕೇಳಲಾಗಬಹುದು
ಯಾವ ಯಾವ ಜಿಲ್ಲೆಗಳಲ್ಲಿ ಉದ್ಯೋಗ ನೇಮಕಾತಿ ನಡೆಯುತ್ತಿದೆ
ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆಯು ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದ್ದು ಈ ಕೆಳಗಿನ ಸ್ಥಳಗಳಲ್ಲಿ ಹುದ್ದೆಗಳು ಖಾಲಿ ಇವೆ
- ಕೋಲಾರ
- ಚಿಕ್ಕಮಗಳೂರು
- ಶೃಂಗೇರಿ
- ವಿಜಯಪುರ
- ಯಾದಗಿರಿ
- ನರಸಿಂಹರಾಜಪುರ
- ಮಾಲೂರು
- ಮುಳಬಾಗಿಲು
- ಬಂಗಾರಪೇಟೆ
ಇನ್ನೂ ಹೆಚ್ಚಿನ ಜಿಲ್ಲೆಗಳಲ್ಲಿ ನೇಮಕಾತಿ ಅಧಿ ಸೂಚನೆಯೂ ಪ್ರಕಟಗೊಂಡಿದೆ
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
- ಕೊನೆಯ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
- ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ಯಾವುದೇ ತಪ್ಪು ಮಾಹಿತಿಯನ್ನು ನೀಡಬೇಡಿ ಅಥವಾ ತಪ್ಪು ದಾಖಲೆಗಳನ್ನು ಅಪ್ಲೋಡ್ ಮಾಡಬೇಡಿ
- ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ ಯಾವುದೇ ಸಂದೇಹಗಳನ್ನು ಇಟ್ಟುಕೊಂಡು ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಬೇಡಿ
- ತಾವು ನೀಡುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಸಕ್ರಿಯವಾಗಿರಲಿ
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ
ನೇಮಕಾತಿ ಅಧಿಸೂಚನೆಯ ಪಿಡಿಎಫ್ : ಅಧಿಸೂಚನೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ಪಡೆಯಿರಿ : ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಕ ಯುವತಿಯರಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆಯು ಹೊರಡಿಸಿರುವ ನೇಮಕಾತಿ ಸೂಚನೆಯೂ ಉದ್ಯೋಗಾವಕಾಶವನ್ನು ಪಡೆಯಲು ಉತ್ತಮ ಅವಕಾಶವಾಗಿದೆ ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಸಾಮಾಜಿಕ ಸೇವೆ ಹಾಗೂ ಆಡಳಿತ ನಿರ್ವಹಣೆಯ ಮಟ್ಟದಲ್ಲಿ ಕೆಲಸವನ್ನು ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳ ಅಧಿಸೂಚನೆ ಆಗಿರುವುದರಿಂದ ಉತ್ತಮ ವೇತನವೂ ಸಹ ಇರುತ್ತದೆ ಇದರ ಜೊತೆಯಲ್ಲಿ ಉತ್ತಮ ಭತ್ಯೆಗಳು ಸಹ ಇರುತ್ತವೆ. ಆದುದರಿಂದ ಈ ನೇಮಕಾತಿಗೆ ಹೆಚ್ಚಿನ ಸ್ಪರ್ಧೆ ಇದ್ದು ಅರ್ಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಕೆಲಸದ ಕನಸನ್ನು ನನಸಾಗಿಸಿಕೊಳ್ಳಿ
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ (KSRLPS) ಹುದ್ದೆ ಪಾಸ್ ಆಗಲು Best Suggestions & Practices
1) ಕರ್ನಾಟಕ ಸಾಮಾನ್ಯ ಜ್ಞಾನವನ್ನು ಹೆಚ್ಚಾಗಿ ಓದಿ
ಕರ್ನಾಟಕ ಸರ್ಕಾರದ ಯೋಜನೆಗಳು, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಬಗ್ಗೆ ಹೆಚ್ಚಾಗಿ ಮಾಹಿತಿ ತಿಳಿದುಕೊಳ್ಳಿ.
2) ಹುದ್ದೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚಿನ ತಯಾರಿ ಮಾಡಿ
ಡಾಟಾ ಎಂಟ್ರಿ ಹುದ್ದೆಗೆ ಕಂಪ್ಯೂಟರ್ ಜ್ಞಾನ, ಮ್ಯಾನೇಜರ್ ಅಥವಾ ಸೂಪರ್ವೈಸರ್ ಹುದ್ದೆಗೆ ನಿರ್ವಹಣಾ ಕೌಶಲ್ಯ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯಗಳು ಮುಖ್ಯವಾಗಿರುವುದರಿಂದ ಓದಿ.
3) ಪ್ರತಿದಿನ Current Affairs ಅನ್ನು ಓದಿ
ಕರ್ನಾಟಕದ ಇತ್ತೀಚಿನ ಸರ್ಕಾರಿ ಯೋಜನೆಗಳು, ಗ್ರಾಮೀಣ ಅಭಿವೃದ್ಧಿ ಸುದ್ದಿಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳು ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
4) ಹಿಂದಿನ ಪ್ರಶ್ನೆ ಪತ್ರಿಕೆ ಮತ್ತು Mock Test ಗಳನ್ನು ಅಭ್ಯಾಸ ಮಾಡಿ
ಸರ್ಕಾರಿ ಉದ್ಯೋಗದ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ, ಇದರಿಂದ ಪ್ರಶ್ನೆಗಳ ಮಾದರಿಯು ಸುಲಭವಾಗಿ ಅರ್ಥವಾಗುತ್ತದೆ.
5) ಸಂದರ್ಶನಕ್ಕೆ (Interview) ಉತ್ತಮವಾಗಿ ತಯಾರಿ ಮಾಡಿ
ಸರಳವಾಗಿ ಮಾತನಾಡುವುದು, ಆತ್ಮವಿಶ್ವಾಸದಿಂದ ಉತ್ತರಿಸುವುದು ಹಾಗೂ ತಮ್ಮ ವಿದ್ಯಾರ್ಹತೆ ಮತ್ತು ಅನುಭವದ ಬಗ್ಗೆ ಸ್ಪಷ್ಟ ಮಾಹಿತಿ ಹೇಳುವುದು ಮುಂತಾದ ವಿಚಾರಗಳನ್ನು ಅಭ್ಯಾಸ ಮಾಡಿ.
ಹೆಚ್ಚುವರಿ ಸಲಹೆ: ಪ್ರತಿದಿನ 2 ರಿಂದ 3 ಗಂಟೆ ನಿಯಮಿತ ಓದು + ನೋಟ್ಗಳು ಮಾಡುವುದು ಈ ಅಭ್ಯಾಸಗಳನ್ನು ಮಾಡುವುದರಿಂದ ಆಯ್ಕೆಯಾಗುವ ಅವಕಾಶವನ್ನು ಹೆಚ್ಚಿಸುತ್ತದೆ.
KSRLPS Recruitment 2026 – FAQ’s
1) ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು?
10ನೇ ತರಗತಿ, PUC, ಪದವಿ ಅಥವಾ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.
2) ಯಾವ ಯಾವ ಹುದ್ದೆಗಳು ಈ ನೇಮಕಾತಿಯಲ್ಲಿ ಲಭ್ಯವಿವೆ?
ಈ ನೇಮಕಾತಿಯಲ್ಲಿ ಬ್ಲಾಕ್ ಮ್ಯಾನೇಜರ್, ಕ್ಲಸ್ಟರ್ ಸೂಪರ್ವೈಸರ್, ಜಿಲ್ಲಾ ಮ್ಯಾನೇಜರ್, ಡಾಟಾ ಎಂಟ್ರಿ ಆಪರೇಟರ್, ಕೋ-ಆರ್ಡಿನೇಟರ್ ಮತ್ತು ಕಚೇರಿ ಸಹಾಯಕ ಹುದ್ದೆಗಳು ಮುಂತಾದ ಹುದ್ದೆಗಳು ಲಭ್ಯವಿವೆ.
3) ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಆಯ್ಕೆ ಲಿಖಿತ ಪರೀಕ್ಷೆ, ಸಂದರ್ಶನ (Interview) ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ನಡೆಯುತ್ತದೆ.
4) ಅರ್ಜಿ ಶುಲ್ಕ ಪಾವತಿಸಬೇಕೇ?
ಇಲ್ಲ, ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು.
5) ಉದ್ಯೋಗದ ಸ್ಥಳ ಯಾವುದು?
ಉದ್ಯೋಗವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇರುತ್ತದೆ. ಕೋಲಾರ, ಚಿಕ್ಕಮಗಳೂರು, ವಿಜಯಪುರ, ಯಾದಗಿರಿ, ಮಾಲೂರು, ಮುಳಬಾಗಿಲು ಸೇರಿದಂತೆ ಹಲವು ಸ್ಥಳಗಳಲ್ಲಿ ಹುದ್ದೆಗಳು ಖಾಲಿ ಇವೆ.