ಪಶುಸಂಗೋಪನೆ ಹಾಗೂ ಹೈನುಗಾರಿಕೆಗೆ ಕೇಂದ್ರದಿಂದ ಪ್ರೋತ್ಸಾಹ ( Dairy farming Loan Scheme )
ಕರ್ನಾಟಕ ಒಂದು ಕೃಷಿ ಪ್ರಧಾನ ರಾಜ್ಯವಾಗಿದೆ ಅಂತೆಯೇ ನೀವೇನಾದರೂ ಹಳ್ಳಿಯಲ್ಲೇ ಇದ್ದು ಸ್ವಂತ ಉದ್ಯೋಗ ಮಾಡಿ ಉತ್ತಮ ಆದಾಯವನ್ನು ಗಳಿಸಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ ನಿಮಗೆ ಸುವರ್ಣ ಅವಕಾಶ ಒದಗಿ ಬಂದಿದೆ Dairy farming Loan Schemeಹೈನುಗಾರಿಕೆ ಉದ್ಯಮವನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಪ್ರತಿಷ್ಠಿತ ಬ್ಯಾಂಕ್ ಆದ ನಬಾರ್ಡ್ ಬ್ಯಾಂಕ್ ಸಂಸ್ಥೆಯು ಈ ಉದ್ಯಮವನ್ನು ಆರಂಭಿಸಲು ಬರೋಬ್ಬರಿ 25 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಸೇರಿ ಸಾಲ ನೀಡುತ್ತದೆ ವರ್ಗಗಳ ಆಧಾರದ ಮೇಲೆ ಸಬ್ಸಿಡಿ ಹಣವು ನಿರ್ಧರಿತವಾಗುತ್ತದೆ ಹಾಗೂ ಮರುಪಾವತಿಯ ಅವಧಿ ಹಾಗೂ ವೇಳಾಪಟ್ಟಿಯು ಸಾಲಗಾರರ ಪರವಾಗಿದೆ ಆದ್ದರಿಂದ ತಮ್ಮ ಸ್ವಂತ ಉದ್ಯೋಗದ ಕನಸನ್ನು ಭದ್ರಪಡಿಸಲು ಇದೊಂದು ಸುವರ್ಣ ಅವಕಾಶವಾಗಿದೆ ಈ ಲೇಖನದಲ್ಲಿ ಯೋಜನೆಗೆ ಸಂಬಂಧಿಸಿ ಎಲ್ಲ ಮಾಹಿತಿಯನ್ನು ನಮೂದಿಸಿದ್ದೇವೆ ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ ಸಬ್ಸಿಡಿ ಯೊಂದಿಗೆ ಸಾಲವನ್ನು ಪಡೆದು ನಿಮ್ಮ ಸ್ವಂತ ಉದ್ಯೋಗದ ಕನಸನ್ನು ನನಸಾಗಿಸಿ
ಗ್ರಾಮೀಣ ಪ್ರದೇಶದಲ್ಲಿನ ಅಭಿವೃದ್ಧಿಯು ತಡವಾದರೂ ಪರಿಣಾಮಕಾರಿಯಾಗಿರುತ್ತದೆ ಇಲ್ಲಿನ ಸ್ವಯಂ ಉದ್ಯೋಗಗಳು ಹೆಚ್ಚು ಭರವಸೆಯನ್ನು ನೀಡುತ್ತವೆ ಎಂದು ನಬಾರ್ಡ್ ಅಭಿಪ್ರಾಯಪಟ್ಟಿದ್ದು ಈ ಭಾಗದಲ್ಲಿ ಸ್ವಯಂ ಉದ್ಯೋಗಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ನಬಾರ್ಡ್ ಬ್ಯಾಂಕ್ ಡೈರಿ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯನ್ನು Dairy farming Loan Scheme ಆರಂಭಗೊಳಿಸಿದೆ ಈ ಸಾಲದ ಯೋಜನೆಯು ಸಹ ಈ ಯೋಜನೆ ಅಡಿಯಲ್ಲಿ ಬರುತ್ತಿದ್ದು ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯ ಮಾದರಿಯಲ್ಲೇ ಈ ಯೋಜನೆಯು ಸಹ ಕಾರ್ಯ ನಿರ್ವಹಿಸುತ್ತದೆ ಈ ಯೋಜನೆಯು ಕುರಿ ಮೇಕೆ ಹಸು ಹಾಗೂ ಎಮ್ಮೆ ಷೆಡ್ಗಳನ್ನು ನಿರ್ಮಿಸಲು ಮತ್ತು ಖರೀದಿಸಲು ಇದರ ಜೊತೆಯಲ್ಲಿ ನಿರ್ವಹಣೆಗಾಗಿ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಉಪಕರಣವನ್ನು ಖರೀದಿಸಲು ಹಣಕಾಸಿನ ನೆರವನ್ನು ಸಬ್ಸಿಡಿಯ ಜೊತೆಗೆ Dairy farming Loan Scheme ನೀಡುತ್ತದೆ
ಈ ಯೋಜನೆಯ ಸಾಲದಲ್ಲಿ ಯಾರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ
ಕರ್ನಾಟಕದ ನಿವಾಸಿಗಳಾಗಿದ್ದು ಸಾಮಾನ್ಯ ವರ್ಗಕ್ಕೆ ಸೇರಿದ್ದರೆ ಅವರಿಗೆ ಒಟ್ಟು ಕಾರ್ಯಯೋಜನಾ ವೆಚ್ಚದ 25% ಅಷ್ಟು ಸಬ್ಸಿಡಿ ಮತ್ತು ಸಿಗಲಿದೆ ( 10 ಲಕ್ಷ ರೂಗಳ ವೆಚ್ಚವಾದರೆ ಅವರಿಗೆ 2.5 ಲಕ್ಷ ಹಣವು ಸಬ್ಸಿಡಿ ಸಿಗುತ್ತದೆ )
ಅರ್ಜಿದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವರ್ಗದವರಿಗೆ ಸೇರಿದ್ದರೆ ಬರೋಬ್ಬರಿ 33.33% ಅಷ್ಟು ಸಬ್ಸಿಡಿ ರಿಯಾಯಿತಿ ಸಿಗುತ್ತದೆ ( 10 ಲಕ್ಷ ರೂ ಕಾರ್ಯ ವೆಚ್ಚಕ್ಕೆ 3,33,300 ರೂಪಾಯಿಗಳಷ್ಟು ಸಬ್ಸಿಡಿ ಸಿಗುತ್ತದೆ )
ಸಬ್ಸಿಡಿ ಮೊತ್ತವು ಹೆಚ್ಚಾಗಿರುವುದರಿಂದ ಆದಷ್ಟು ನಿಮ್ಮ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಲು ಆರಂಭಿಸಿ ಏಕೆಂದರೆ ನಿರ್ಮಾಣ ಹಾಗೂ ನಿರ್ವಹಣೆ ಕಾರ್ಯಕ್ಕೆ 25 ಲಕ್ಷಗಳವರೆಗೆ ಹಣಕಾಸಿನ ನೆರವು ಸಿಗುವುದರಿಂದ ನಿಮ್ಮ ಕಾರ್ಯ ಯೋಜನೆಯು ದೊಡ್ಡದಾಗಿರಲಿ
Dairy farming Loan Scheme ಗೆ ಕರ್ನಾಟಕದಲ್ಲಿ ಹೆಚ್ಚುವರಿ ಪ್ರೋತ್ಸಾಹ
ಕರ್ನಾಟಕ ರಾಜ್ಯದಲ್ಲಿ ಈ ಸಾಲದ ಯೋಜನೆಗೆ ಉತ್ತಮ ರೀತಿಯಲ್ಲಿ ಪ್ರತಿಭೆಯ ದೊರೆತಿದ್ದು ಕರ್ನಾಟಕ ಸರ್ಕಾರದ ಪಶುಸಂಗೋಪನ ಇಲಾಖೆ ಹಾಗೂ ನಮ್ಮ ರಾಜ್ಯದ ಪ್ರತಿಷ್ಠಿತ ಕಂಪನಿಯಾದ ಕೆಎಂಎಫ್ ನಂದಿನಿ ಒಕ್ಕೂಟಗಳು ಈ ಯೋಜನೆಯನ್ನು ಪ್ರೋತ್ಸಾಹಿಸುತ್ತಿವೆ ಇದರ ಜೊತೆಯಲ್ಲಿ ಪೂರ್ಣ ರೀತಿಯಲ್ಲಿ ತಾಂತ್ರಿಕ ಬೆಂಬಲ ನೀಡುವುದು ತರಬೇತಿ ಒದಗಿಸುವುದು ಅತ್ಯಧುನಿಕ ಉಪಕರಣಗಳನ್ನು ಖರೀದಿಸುವುದು ಮತ್ತು ಹೈನುಗಾರಿಕೆ ಪಶುಸಂಗೋಪನೆಯಲ್ಲಿ ಅಳವಡಿಸುವುದು ಇದರ ಜೊತೆಯಲ್ಲಿ ಉತ್ಪಾದಿಸುವ ಹಾಲಿಗೆ ನೇರ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವುದರ ಮೂಲಕ ಹಾಲಿಗೆ ಉತ್ತಮ ಬೆಲೆಯನ್ನು ರಚಿಸುತ್ತಿದೆ ಈಗಿರುವಾಗ ಹಾಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು
ಈ Dairy farming Loan Scheme ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು
- ಈ Dairy farming Loan Scheme ಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಭಾರತೀಯ ನಾಗರಿಕರಾಗಿದ್ದು 18 ವರ್ಷದಿಂದ 65 ವರ್ಷದ ಒಳಗಿನ ವಯೋಮಿತಿಯನ್ನು ಹೊಂದಿರುವವರು ಯಾರಾದರೂ ಅರ್ಜಿಯನ್ನು ಸಲ್ಲಿಸಬಹುದು
- ಪ್ರಮುಖವಾಗಿ ರೈತರು ವೈಯಕ್ತಿಕ ಉದ್ಯಮಗಳನ್ನು ನಡೆಸುವವರು ಅರೆ ಸರ್ಕಾರಿ ಸಂಸ್ಥೆಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಅವಕಾಶವಿದೆ
- ಒಂದೇ ಕುಟುಂಬದಿಂದ ಇಬ್ಬರು ಅರ್ಜಿ ಸಲ್ಲಿಸಿದರು ಕೆಲವು ಶರತು ಹಾಗೂ ನಿಬಂಧನೆಗೊಳಪಟ್ಟು ಇಬ್ಬರು ಈ ಯೋಜನೆಯ ಲಾಭವನ್ನು ಪಡೆಯಬಹುದು ಆದರೆ ಬ್ಯಾಂಕ್ ಕೇಳುವ ದಾಖಲೆಗಳನ್ನು ಸರಿಯಾಗಿ ಒದಗಿಸಿದರೆ ಮಾತ್ರ Dairy farming Loan Scheme ನ ಪ್ರಯೋಜನ ಪಡೆಯಬಹುದು
- ಇದಕ್ಕೆಲ್ಲಾ ಪ್ರಮುಖವಾಗಿ ನೀವು ಖರೀದಿಸುವ ಮೇಕೆ ಕುರಿ ಹಸು ಹಾಗೂ ಎಮ್ಮೆಗಳನ್ನು ಸಾಕಲು ನಿಮ್ಮ ಬಳಿ ಹೆಚ್ಚು ಮತ್ತು ಹೈನುಗಾರಿಕೆ ಮಾಡಲು ಸೂಕ್ತವಾದ ಸ್ಥಳಾವಕಾಶ ಇರಬೇಕಾಗುತ್ತದೆ
ಈ ಯೋಜನೆಯ ಮೂಲಕ ಸಾಲ ಹಾಗೂ ಸಬ್ಸಿಡಿಯನ್ನು ಹೇಗೆ ಪಡೆಯಬೇಕು
ಯೋಜನಾ ಕಾರ್ಯ ವರದಿಯನ್ನು ರಚಿಸಿ : ನೀವು ಎಲ್ಲದಕ್ಕಿಂತ ಮೊದಲು ನಿಮ್ಮ ಬಳಿ ಎಷ್ಟು ಜಾಗ ಇದೆ ಎಷ್ಟು ಹಸುಗಳನ್ನು ಸಾಕಬಹುದು ಅವುಗಳನ್ನು ಖರೀದಿಸಲು ಹಾಗೂ ನಿರ್ವಹಿಸಲು ಎಷ್ಟು ವೆಚ್ಚವಾಗುತ್ತದೆ ಅವುಗಳನ್ನು ನಿರ್ವಹಿಸಲು ಯಂತ್ರೋಪಕರಣ ಅವಶ್ಯಕತೆ ಏನಿದೆ ವೈದ್ಯಕೀಯ ವೆಚ್ಚ ಎಷ್ಟಾಗಬಹುದು ಹಾಗೂ ಇನ್ನಿತರ ಖರ್ಚು ವೆಚ್ಚಗಳನ್ನು ಒಂದು ಅಂದಾಜಿನಲ್ಲಿ ಲೆಕ್ಕ ಹಾಕುವಂತೆ ಒಂದು ಕ್ರಿಯಾ ಯೋಜನೆಯನ್ನು Dairy farming Loan Scheme ಗೆ ರಚಿಸಿ
ಬ್ಯಾಂಕಿನ ಸಂಪರ್ಕ : ನಿಮ್ಮ ಸ್ಥಳೀಯ ಪ್ರದೇಶಕ್ಕೆ ಹತ್ತಿರವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಬ್ಯಾಂಕ್ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಗಳಲ್ಲಿ ಈ ಯೋಜನೆಗೆ ಸಾಲದ ಸೌಲಭ್ಯವು ಲಭ್ಯವಿದ್ದು ಈ ಬ್ಯಾಂಕುಗಳಿಗೆ ಭೇಟಿ ನೀಡಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು
ದಾಖಲೆಗಳ ಸಲ್ಲಿಕೆ : ಬ್ಯಾಂಕ್ ಕೇಳಬಹುದಾದ ವೈಯಕ್ತಿಕ ದಾಖಲೆಗಳಾದ ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಾಗೂ ವಿಳಾಸದ ದಾಖಲೆಗಳಾದ ರೇಷನ್ ಕಾರ್ಡ್ ಮತದಾರರ ಗುರುತಿನ ಚೀಟಿ ಹಾಗೂ ಜಮೀನನ್ನು ಹೊಂದಿರುವ ಬಗ್ಗೆ ಜಮೀನಿನ ದಾಖಲೆ ಸಬ್ಸಿಡಿ ಹಣವನ್ನು ನಿರ್ಧರಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಅಂದಾಜಿನ ಖರ್ಚು ವೆಚ್ಚಗಳನ್ನು ನಿರ್ಧರಿಸಿ ನೀವು ತಯಾರು ಮಾಡಿರುವ ಪ್ರಾಜೆಕ್ಟ್ ರಿಪೋರ್ಟ್ನ್ನು ಬ್ಯಾಂಕಿಗೆ ಸಲ್ಲಿಸುವುದರ ಮೂಲಕ ಬ್ಯಾಂಕು ನಿಮಗೆ ದೊರೆಯಬಹುದಾದ ಸಾಲದ ಮೊತ್ತ ಸಬ್ಸಿಡಿ ಮೊತ್ತ ಹಾಗೂ ಮರುಪಾವತಿ ಯೋಜನೆಯನ್ನು ತಿಳಿಸುತ್ತದೆ
ಬ್ಯಾಂಕು ನೀಡುವ ಷರತ್ತು ಮತ್ತು ನಿಬಂಧನೆಗಳನ್ನು ಒಪ್ಪಿದ ನಂತರ ಸಾಲದ ಮೊತ್ತವು ನಿಮ್ಮ ಖಾತೆಗೆ ಜಮೆಯಾಗುತ್ತದೆ
ಪ್ರಮುಖ ಸಲಹೆ : ನೀವು Dairy farming Loan Scheme ಗೆ ಅರ್ಜಿ ಸಲ್ಲಿಸುವ ಮುನ್ನ ಇತರೆ ಬ್ಯಾಂಕುಗಳಲ್ಲಿ ಒಮ್ಮೆ ಈ ಯೋಜನೆಯ ಬಗ್ಗೆ ವಿಚಾರಿಸುವುದು ಉತ್ತಮ ಏಕೆಂದರೆ ಒಂದೊಂದು ಬ್ಯಾಂಕ್ ಅದರ ನಿಯಮಗಳನ್ನು ಹೊಂದಿದ್ದು ಸಾಲದ ಅನುಮೋದನೆ ಮೊತ್ತ ಬಡ್ಡಿದರ ಮರುಪಾವತಿ ನಿಯಮಗಳು ಹಾಗೂ ಸಬ್ಸಿಡಿ ಮೊತ್ತವನ್ನು ಬದಲಾವಣೆಗೆ ಒಳಪಡಿಸಿರಬಹುದು ಆದಷ್ಟು ಹೆಚ್ಚು ಸಬ್ಸಿಡಿ ಕಡಿಮೆ ಬಡ್ಡಿದರ ಹಾಗೂ ಹೆಚ್ಚು ಮರುಪಾವತಿ ಅವಧಿಯನ್ನು ನೀಡುವ ಬ್ಯಾಂಕ್ ಅನ್ನು ನೀವು ಆರಿಸಬಹುದು
ಆನ್ಲೈನ್ ಮೂಲಕ ಮಾಹಿತಿ : ಈ Dairy farming Loan Scheme ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಬಾರ್ಡ್ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು
ಅಧಿಕೃತ ವೆಬ್ಸೈಟ್ : ನಬಾರ್ಡ್
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಗುಂಪನ್ನು ಸೇರಿ
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ನಬಾರ್ಡ್ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿನ ಸ್ವಯಂ ಉದ್ಯೋಗಗಳ ಮಟ್ಟವನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಉತ್ಪಾದಕತೆ ಗುಣಮಟ್ಟವನ್ನು ಪರಿಣಾಮಕಾರಿಯ ಅಭಿವೃದ್ಧಿಪಡಿಸಲು ಈ ಸಾಲದ ಯೋಜನೆಯನ್ನು ಪ್ರಸ್ತುತಪಡಿಸಿದೆ ಈ ಯೋಜನೆಯ ಉಪಯೋಗವನ್ನು ಪಡಿಸಿಕೊಂಡು ಗ್ರಾಮೀಣ ಪ್ರದೇಶದ ಜನರು ಸ್ವಯಂ ಉದ್ಯೋಗಗಳನ್ನು ಆರಂಭಿಸಿ ತಮ್ಮ ಜೀವನ ಮಟ್ಟವನ್ನು ಹಾಗೂ ಆದಾಯದ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಾಗಿರುತ್ತದೆ ಇಂದೇ ನಬಾರ್ಡ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪೂರ್ಣ ಮಾಹಿತಿಯನ್ನು ತಿಳಿದು ಈ ಸಬ್ಸಿಡಿ ಸಾಲದ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಸ್ವಯಂ ಉದ್ಯೋಗದ ಕನಸನ್ನು ಸಹಕಾರ ಗೊಳಿಸಿ
Dairy Farming Loan Scheme – Frequently Asked Questions (FAQ)
1. Dairy Farming Loan Scheme ನಲ್ಲಿ ಎಷ್ಟು ಸಾಲ ಸಿಗುತ್ತದೆ?
ಈ ಯೋಜನೆಯಡಿ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಶೆಡ್ ನಿರ್ಮಾಣ ಹಾಗೂ ಉಪಕರಣ ಖರೀದಿಗೆ ₹25 ಲಕ್ಷವರೆಗೆ ಸಾಲ ಸಬ್ಸಿಡಿ ಸಹಿತ ದೊರೆಯುತ್ತದೆ.
2. ಈ ಯೋಜನೆಯಲ್ಲಿ ಎಷ್ಟು ಸಬ್ಸಿಡಿ ಸಿಗುತ್ತದೆ?
- ಸಾಮಾನ್ಯ ವರ್ಗ (General Category) ಅಭ್ಯರ್ಥಿಗಳಿಗೆ 25% ನಷ್ಟು ಸಬ್ಸಿಡಿ ಸಿಗುತ್ತದೆ.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ 33.33% ನಷ್ಟು ಸಬ್ಸಿಡಿ ಸಿಗುತ್ತದೆ.
3. ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
18 ರಿಂದ 65 ವರ್ಷದೊಳಗಿನ ಭಾರತೀಯ ನಾಗರಿಕರು, ರೈತರು, ಮಹಿಳಾ ಸ್ವಸಹಾಯ ಗುಂಪುಗಳು, ವೈಯಕ್ತಿಕ ಉದ್ಯಮಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರು ಅರ್ಜಿ ಸಲ್ಲಿಸಬಹುದು.
4. ಯಾವ ಯಾವ ಬ್ಯಾಂಕ್ಗಳಲ್ಲಿ ಈ ಸಾಲ ಸೌಲಭ್ಯ ಲಭ್ಯವಿದೆ?
ಈ ಯೋಜನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಸಿಗುತ್ತದೆ.
5. ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ?
ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸದ ದಾಖಲೆ, ಜಮೀನಿನ ದಾಖಲೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಪ್ರಾಜೆಕ್ಟ್ ರಿಪೋರ್ಟ್ ಮುಖ್ಯ ದಾಖಲೆಗಳು