Telegram Join My Telegram WhatsApp Join My WhatsApp

NMPT Recruitment 2026, Job Opportunity : ಮೇನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ನವ ಮಂಗಳೂರು ಪೋರ್ಟ್‌ ನಲ್ಲಿ ಮೇನೇಜರ್‌ ಹುದ್ದೆಗಳಿಗೆ ಆನ್‌ ಲೈನ್‌ ಅರ್ಜಿ ಆಹ್ವಾನ (NMPT Recruitment)

ನಮಸ್ತೆ ಗೆಳೆಯರೇ ಮಂಗಳೂರಿನ ಪ್ರತಿಷ್ಠಿತ ಕೇಂದ್ರ ಸರ್ಕಾರದ ಸಂಸ್ಥೆಯಾದ ನ್ಯೂ ಮಂಗಳೂರು ಪೋರ್ಟ್ ನಲ್ಲಿ ನೇಮಕಾತಿ ಸೂಚನೆ ಪ್ರಕಟಗೊಂಡಿದೆ ತಾವುಗಳು ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಕಂಪನಿಯಲ್ಲಿ ಕೆಲಸ ಮಾಡಲು ಕನಸು ಕಂಡಿದ್ದೀರಾ ಹಾಗಿದ್ದರೆ ಇದು ನಿಮಗೆ ಸುವರ್ಣ ಅವಕಾಶವಾಗಿದೆ ಈ ನೇಮಕಾತಿ ಸೂಚನೆಯ ಮೂಲಕ ಮ್ಯಾನೇಜರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನಿಸಿದೆ ಆದಷ್ಟು ಬೇಗ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ತಮ್ಮ ಕೇಂದ್ರ ಸರ್ಕಾರ ಒಂದೇ ಕನಸನ್ನು ಪೂರ್ಣಗೊಳಿಸಬಹುದು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-05-2026 ಆಗಿರುವುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ.

CESCOM Recruitment 2026, Job Opportunity : ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಕೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

NMPT Recruitment ನ ಅಧಿಸೂಚನೆಯ ವಿವರ

ಸಂಸ್ಥೆ ಹೆಸರು : ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್
ಉದ್ಯೋಗದ ಸ್ಥಳ :  ಮಂಗಳೂರು ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ :  12 ಹುದ್ದೆಗಳು
ಹುದ್ದೆಯ ಹೆಸರು :  ಮ್ಯಾನೇಜರ್
ಸಂಬಳ (ತಿಂಗಳಿಗೆ) :  1,20,000/- ರೂಗಳಿಂದ  2,00,000/- ರೂಗಳು

NMPT Recruitment ನ ಹುದ್ದೆ ವಾರು ಹಂಚಿಕೆ

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಮುಖ್ಯ ವ್ಯವಸ್ಥಾಪಕರು 03
 ಹಿರಿಯ ವ್ಯವಸ್ಥಾಪಕರು 03
ವ್ಯವಸ್ಥಾಪಕರು 06

 

NMPT Recruitment ನಲ್ಲಿ ನೀಡಲಾಗುವ ಸಂಬಳದ ವಿವರಗಳು

ಹುದ್ದೆಯ ಹೆಸರು ಸಂಬಳ (ತಿಂಗಳಿಗೆ)
ಮುಖ್ಯ ವ್ಯವಸ್ಥಾಪಕರು 2,00,000/- ರೂಗಳು
 ಹಿರಿಯ ವ್ಯವಸ್ಥಾಪಕರು 1,60,000/- ರೂಗಳು
ವ್ಯವಸ್ಥಾಪಕರು 1,20,000/- ರೂಗಳು

NMPT Recruitment ನೇಮಕಾತಿಯ ಶೈಕ್ಷಣಿಕ ಅರ್ಹತಾ ವಿವರಗಳು

NMPT Recruitment ನ  ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿ.ಇ ಪದವಿ ( B.E) ಬಿ.ಟೆಕ್ ಪದವಿ (B.Tech)  ಎಂ.ಬಿ.ಎ ಪದವಿ  (M.B.A) ಅಥವಾ  ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ವಯಸ್ಸಿನ ಮಿತಿಯ ವಿವರಗಳು

ಈ NMPT Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ, ಹುದ್ದೆವಾರು ವಯಸ್ಸಿನ ಮಿತಿಯ ವಿವರಗಳು ಈ ಕೆಳಕಂಡಂತಿದೆ.

ಹುದ್ದೆಯ ಹೆಸರು ಗರಿಷ್ಠ ವಯೋಮಿತಿ (ವರ್ಷಗಳಲ್ಲಿ)
ಮುಖ್ಯ ವ್ಯವಸ್ಥಾಪಕರು 55 ವರ್ಷಗಳು
 ಹಿರಿಯ ವ್ಯವಸ್ಥಾಪಕರು 45 ವರ್ಷಗಳು
ವ್ಯವಸ್ಥಾಪಕರು 40 ವರ್ಷಗಳು

 

ವಯೋಮಿತಿ ಸಡಿಲಿಕೆ

ನವಮಂಗಳೂರು ಕೋರ್ಟ್ ಟ್ರಸ್ಟ್ ಅಧಿಸೂಚನೆಯ NMPT Recruitment ನ  ವಯೋಮಿತಿ ಸಡಿಲಿಕೆಯ ನಿಯಮದ ಪ್ರಕಾರ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ

  • ಶಾರ್ಟ್ ಲಿಸ್ಟಿಂಗ್ : ಈ NMPT Recruitment ಗೆ  ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಹತೆ ಹಾಗೂ ಶೈಕ್ಷಣಿಕ ವಿವರಗಳ ಆಧಾರದ ಮೇಲೆ ಶಾರ್ಟ್ ಲಿಸ್ಟಿಂಗ್ ಮಾಡಲಾಗುವುದು.
  • ಸಂದರ್ಶನ : ಸಂದರ್ಶನದಲ್ಲಿ ಶಾರ್ಟ್ಲಿಸ್ಟಿಂಗ್ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ ಇಲ್ಲಿ ಹುದ್ದೆಗೆ ಅಭ್ಯರ್ಥಿಗಳಿಗೆ ಇರಬೇಕಾದ ಕೌಶಲ್ಯ ಹಾಗೂ ಜ್ಞಾನದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ.

NMPT Recruitment ಗೆ ಅರ್ಜಿ ಸಲ್ಲಿಕೆ ಹೇಗೆ?

  • ಮೊದಲು ನವಮಂಗಳೂರು ಕೋರ್ಟ್ ಟ್ರಸ್ಟ್ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನೇಮಕಾತಿಯ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಬಹುದೇ ಎಂದು ತಿಳಿದು ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ.
  • ಪ್ರಮುಖ ಸೂಚನೆ ಎಂದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆಗುವುದರಿಂದ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸಂವಹನ ಸಂಪರ್ಕದ ಉದ್ದೇಶಕ್ಕಾಗಿ ತಮ್ಮದೇ ಆದ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರನ್ನು ಸಿದ್ಧವಾಗಿಟ್ಟುಕೊಳ್ಳಿ ಇದರ ಜೊತೆಯಲ್ಲಿ ಗುರುತಿನ ಪ್ರಮಾಣ ಪತ್ರಗಳು ವಯಸ್ಸಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಅನ್ವಯಿಸುವ ರೆಸ್ಯೂಮ್ ಹಾಗೂ ಯಾವುದೇ ಅನುಭವ ಪ್ರಮಾಣ ಪತ್ರಗಳು ಇದ್ದಲ್ಲಿ ಮತ್ತು ಫೋಟೋ ಹಾಗೂ ಸಹಿಯನ್ನು ಸಿದ್ದಪಡಿಸಿ ಇಟ್ಟುಕೊಳ್ಳಿ.
  • ನಂತರ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ಅರ್ಜಿ ತೆರೆಯಲಿದ್ದು ಅಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ವಯಸ್ಸಿಗೆ ಸಂಬಂಧಿಸಿದ ಮಾಹಿತಿ ಹಾಗೂ ಅನುಭವಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಪೂರ್ಣವಾಗಿ ಎಚ್ಚರಿಕೆಯಿಂದ ಭರ್ತಿ ಮಾಡಿ.
  • ನಂತರ ಕೇಳಲಾಗುವ ಅಗತ್ಯ ದಾಖಲೆಗಳನ್ನು ಅವುಗಳ ಗರಿಷ್ಟ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ನಂತರ ತಾವು ನಮೂದಿಸಿರುವ ಎಲ್ಲ ಮಾಹಿತಿಯು ಸರಿಯಾಗಿದೆಯೇ ಎಂದು ತಿಳಿಯಲು ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿದ್ದೇನೆ ಎಂದು ಖಚಿತಪಡಿಸಿಕೊಳ್ಳಿ.
  • ನಂತರ ಎಲ್ಲ ವಿವರಗಳನ್ನು ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ.
  • ಈ ನೇಮಕಾತಿಗೆ ಯಾವುದೇ ಆನ್ಲೈನ್ ಅರ್ಜಿ ಶುಲ್ಕ ಇರುವುದಿಲ್ಲ ಅರ್ಜಿಯನ್ನು ಸಬ್ಮಿಟ್ ಮಾಡಿದ ನಂತರ ನೋಂದಣಿ ಸಂಖ್ಯೆ ಹಾಗೂ ಅರ್ಜಿ ಮೂಡುತ್ತದೆ ಆ ಅರ್ಜಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಹಾಗೂ ಭವಿಷ್ಯದ ಉದ್ದೇಶಕ್ಕಾಗಿ ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ ನಲ್ಲಿ ಒಂದು ಪ್ರತಿಯನ್ನು ಸೇವ್ ಮಾಡಿಕೊಳ್ಳಿ.

NMPT Recruitment ಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು

NMPT Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 17-04-2026
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-05-2026

ಒಟ್ಟಾರೆಯಾಗಿ, ಮಂಗಳೂರಿನ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಯಾದ New Mangalore Port Trust ನಲ್ಲಿ ಮ್ಯಾನೇಜರ್ ಹುದ್ದೆಗಳಿಗೆ ಪ್ರಕಟವಾಗಿರುವ ಈ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಕೇಂದ್ರ ಸರ್ಕಾರದ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಕೈಚೆಲ್ಲಬಾರದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತಾ ಮಾನದಂಡಗಳು, ವಯೋಮಿತಿ, ವೇತನ ಹಾಗೂ ಆಯ್ಕೆ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಕೊಳ್ಳುವುದು ಮುಖ್ಯ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಮೇ 2026 ಆಗಿರುವುದರಿಂದ ವಿಳಂಬ ಮಾಡದೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಿ.

 

NMPT Recruitment 2026 – Frequently Asked Questions (FAQs)

1. NMPT Recruitment 2026 ನಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
New Mangalore Port Authority ನೇಮಕಾತಿಯಲ್ಲಿ ಮುಖ್ಯ ವ್ಯವಸ್ಥಾಪಕರು, ಹಿರಿಯ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕರು (Manager) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

2.  ಒಟ್ಟು ಎಷ್ಟು ಹುದ್ದೆಗಳಿವೆ?
ಈ ನೇಮಕಾತಿಯಲ್ಲಿ ಒಟ್ಟು 12 ಹುದ್ದೆಗಳು ಖಾಲಿ ಇದ್ದು, ಮುಖ್ಯ ವ್ಯವಸ್ಥಾಪಕರು – 03, ಹಿರಿಯ ವ್ಯವಸ್ಥಾಪಕರು – 03 ಹಾಗೂ ವ್ಯವಸ್ಥಾಪಕರು – 06 ಹುದ್ದೆಗಳಿವೆ.

3. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನು?
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ B.E, B.Tech, MBA ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

4. NMPT Recruitment 2026 ಗೆ ವಯೋಮಿತಿ ಎಷ್ಟು?
ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು. ಹುದ್ದೆವಾರು ಗರಿಷ್ಠ ವಯೋಮಿತಿ: ಮುಖ್ಯ ವ್ಯವಸ್ಥಾಪಕರು – 55 ವರ್ಷ, ಹಿರಿಯ ವ್ಯವಸ್ಥಾಪಕರು – 45 ವರ್ಷ, ವ್ಯವಸ್ಥಾಪಕರು – 40 ವರ್ಷ.

5. NMPT Recruitment ನಲ್ಲಿ ನೀಡಲಾಗುವ ಸಂಬಳ ಎಷ್ಟು ?
ಹುದ್ದೆವಾರು ತಿಂಗಳ ಸಂಬಳ ₹1,20,000 ರಿಂದ ₹2,00,000 ವರೆಗೆ ನೀಡಲಾಗುತ್ತದೆ. ಮುಖ್ಯ ವ್ಯವಸ್ಥಾಪಕರಿಗೆ ₹2,00,000, ಹಿರಿಯ ವ್ಯವಸ್ಥಾಪಕರಿಗೆ ₹1,60,000 ಹಾಗೂ ವ್ಯವಸ್ಥಾಪಕರಿಗೆ ₹1,20,000 ಸಂಬಳ ನೀಡಲಾಗುತ್ತದೆ.

6. NMPT Recruitment ಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಮೊದಲು ಶಾರ್ಟ್‌ಲಿಸ್ಟಿಂಗ್ ಮೂಲಕ ಆಯ್ಕೆ ಮಾಡಲಾಗುತ್ತದೆ. ನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನ (Interview) ನಡೆಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

7. ಈ ನೇಮಕಾತಿಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಮೇ 2026 ಆಗಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

8. NMPT Recruitment ಗೆ ಅರ್ಜಿ ಶುಲ್ಕ ಇದೆಯೇ?
ಇಲ್ಲ, ಈ ನೇಮಕಾತಿಗೆ ಯಾವುದೇ ಆನ್‌ಲೈನ್ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Read More: Jobs.

BEML Recruitment 2026, Big Opportunity : ಪದವೀಧರರಿಗೆ ಸುವರ್ಣಾವಕಾಶ, ಅರ್ಜಿ ವಿಧಾನ, ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

RLDA Recruitment 2026, Big Opportunity: ಸೈಟ್‌ ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

Leave a Comment