Telegram Join My Telegram WhatsApp Join My WhatsApp

Agriculture Land, Big Update 2026 : ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಬಹುದೇ? ಸರ್ಕಾರದ ನಿಯಮಗಳು ಏನು ಹೇಳುತ್ತವೆ , ಸಂಪೂರ್ಣ ಮಾಹಿತಿ ಇಲ್ಲಿದೆ

ಕೃಷಿ ಭೂಮಿ (Agriculture Land ) ಯಲ್ಲಿ ಮನೆ ನಿರ್ಮಾಣ ಮಾಡಬಹುದೇ, ಸರ್ಕಾರದ ನಿಯಮಗಳು ಏನು ಹೇಳುತ್ತವೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ ಸೈಟ್‌ : ಕರ್ನಾಟಕ ಕೃಷಿ ಇಲಾಖೆ

ಭಾರತವು ಒಂದು ಕೃಷಿ ಪ್ರಧಾನ ರಾಷ್ಟ್ರ ಆಗಿರುವುದರಿಂದ ಕೃಷಿಕರು ತಮ್ಮ ಜಮೀನುಗಳಲ್ಲಿ ಕೃಷಿ ನಿರ್ವಹಣೆಗಾಗಿ ಮನೆಗಳನ್ನು ನಿರ್ಮಿಸುವುದು ನಾವು ಕಾಣುತ್ತೇವೆ ಆದರೆ ಸರಿಯಾದ ಪರವಾನಗಿ ಇಲ್ಲದೆ ಕೃಷಿ ಜಮೀನಿನಲ್ಲಿ ಮನೆಯನ್ನು ನಿರ್ಮಿಸುವುದು ಭವಿಷ್ಯದಲ್ಲಿ ದೊಡ್ಡ ತೊಂದರೆಗಳಿಗೆ ಕಾರಣವಾಗಬಹುದು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮನೆಯನ್ನು ಕೆಡವಲು ನೋಟಿಸ್ ಪ್ರತಿಗಳನ್ನು ನೀಡಬಹುದು ಕೆಲವೊಂದು ಸಂದರ್ಭಗಳಲ್ಲಿ ದಂಡವನ್ನು ಕೂಡ ವಿಧಿಸಬಹುದು ಹಾಗೆಯೇ ಕೃಷಿ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡುವುದರಿಂದ ವಿದ್ಯುತ್ ಶಕ್ತಿ ಮತ್ತು ನೀರಿನ ಸೌಲಭ್ಯಗಳನ್ನು ಪಡೆಯುವುದು ಕಷ್ಟಕರವಾಗಿರುತ್ತದೆ ಹಾಗೂ ಮುಖ್ಯವಾಗಿ ಇಂತಹ ಆಸ್ತಿಗಳಿಗೆ ಬ್ಯಾಂಕುಗಳು ಸಾಲ ಸೌಲಭ್ಯವನ್ನು ನೀಡುವುದಿಲ್ಲ ಎಂಬುದನ್ನು ಅರಿತುಕೊಳ್ಳಿ, ಆದುದರಿಂದ ಕೃಷಿ ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ಮನೆಯನ್ನು ನಿರ್ಮಿಸುವ ಪರಿಸ್ಥಿತಿಯಲ್ಲಿ ನೀವೇನಾದರೂ ಇದ್ದರೆ ನಿಮಗೆ ಈ ಮಾಹಿತಿಯು ಉಪಯೋಗವಾಗಲಿದೆ ಆದುದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಭವಿಷ್ಯದ ಹೆಜ್ಜೆಯನ್ನು ಹಾಕಿ.

ಭೂಮಿ ತಂತ್ರಾಂಶದ ಮೂಲಕ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಕೆಗೆ : ಭೂ ಪರಿವರ್ತನೆ ಅರ್ಜಿ

Agriculture Land ಕೇವಲ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಂದರೆ ಹಣ್ಣು ತರಕಾರಿ ಹಾಗೂ ಇತರ ಬೆಳೆಗಳನ್ನು ಬೆಳೆಯಲು ಹೈನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಕೋಳಿ ಸಾಕಣೆ ಮಾಡಲು ಇತ್ಯಾದಿ, ಕೇವಲ ಕೃಷಿ ಉತ್ಪಾದಕ ಚಟುವಟಿಕೆಗಳನ್ನು ಮಾಡಲು ಗುರುತಿಸಿದ ಭೂಮಿಯಾಗಿದೆ ಅದರಂತೆಯೇ ಪಹಣಿ ಮುಂತಾದ ಜಮೀನಿನ ದಾಖಲೆಗಳು ಸಹ ಈ ಭೂಮಿ ಕೃಷಿ ಉಪಯೋಗಕ್ಕೆ ಮಾತ್ರ ಹಾಗೂ ಯೋಗ್ಯ ಎಂದು ಸ್ಪಷ್ಟವಾಗಿ ತಿಳಿಸುತ್ತವೆ ಅದಕ್ಕಾಗಿಯೇ ಈ ಭೂಮಿಯಲ್ಲಿ ನೇರವಾಗಿ ಮನೆ ನಿರ್ಮಾಣ ಮಾಡಲು ಅವಕಾಶ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಜನರು ತಾವು ಹೊಂದಿರುವ Agriculture Land ನ  ಭೂ ಬಳಕೆಯ ಮೇಲೆ ಕೆಲವು ಶರತ್ತು ಹಾಗೂ ನಿರ್ಬಂಧಗಳಿವೆ ಸಾಮಾನ್ಯವಾಗಿ ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ ಆಗಿದ್ದರು ಈ ಭೂಮಿಯಲ್ಲಿ ನೇರವಾಗಿ ಮನೆ ನಿರ್ಮಾಣ ಮಾಡಲು ಅವಕಾಶ ಇರುವುದಿಲ್ಲ ಅಂದರೆ ಈ ಕೃಷಿ ಭೂಮಿಯನ್ನು ಕಾನೂನು ಬದ್ಧವಾಗಿ ಕೃಷಿಯೇತರ ಭೂಮಿ ಅಥವಾ ವಸತಿ ಭೂಮಿಯಾಗಿ ಪರಿವರ್ತಿಸಲು ಪ್ರತ್ಯೇಕ ಕಾನೂನು ಇದೆ ಇದನ್ನು ಭೂ ಪರಿವರ್ತನೆ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ ಈ ಪರಿವರ್ತನೆ ಇಲ್ಲದೆ ಮನೆಯನ್ನು ನಿರ್ಮಿಸಿದರೇ ಅಥವಾ ತಯಾರಿಯನ್ನು ಮಾಡಿದರೆ ಅದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿರುತ್ತದೆ ಕೆಲವೊಂದು ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಜಮೀನಿನಲ್ಲಿ ಸಣ್ಣ ಶೆಡ್‌ ಗಳು ಅಥವಾ ತಾತ್ಕಾಲಿಕವಾಗಿ ವಸತಿಯನ್ನು ಪಡೆಯಲು ಮನೆಗಳನ್ನು ಕಟ್ಟಲು ಅನುಮತಿ ನೀಡಲಾಗುತ್ತದೆ ಆದರೆ ಅವು ಪೂರ್ಣ ಪ್ರಮಾಣದಲ್ಲಿ ವಾಸಿಸಲು ಯೋಗ್ಯವಾದಂತಹ ಮನೆಗಳಲ್ಲ ಪೂರ್ಣ ಸೌಲಭ್ಯಗಳನ್ನು ಹೊಂದಿರುವ ಮನೆ ಅಂದರೆ ವಿದ್ಯುತ್ ಶಕ್ತಿ ನೀರಿನ ಸಂಪರ್ಕ ರಸ್ತೆ ಸಂಪರ್ಕ ಹಾಗೂ ಕಂದಾಯ ವ್ಯವಸ್ಥೆಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ ಈ ಎಲ್ಲಾ ವ್ಯವಸ್ಥೆಗಳನ್ನು ಪಡೆಯಲು ಭೂ ಪರಿವರ್ತನೆಯ ಮೂಲಕ ಪರಿವರ್ತಿಸಿ ವ್ಯವಸ್ಥೆಗಳನ್ನು ಹೊಂದಬಹುದಾಗಿರುತ್ತದೆ.

ಯಾವ ನಿರ್ದಿಷ್ಟ ಸಂದರ್ಭಗಳಲ್ಲಿ ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಬಹುದು?

ಒಂದು ನಿರ್ದಿಷ್ಟ ಭೂಮಿಗೆ ಸಂಬಂಧಿಸಿದ ದಾಖಲೆಯಲ್ಲಿ ಕೇವಲ  ಕೃಷಿ ಚಟುವಟಿಕೆಗಳಿಗಾಗಿ ಈ ಭೂಮಿ (Agriculture Land) ಎಂದು ಇದ್ದರೆ ಆ ಕೃಷಿ ಭೂಮಿಯಲ್ಲಿ ಮನೆಯನ್ನು ಕಟ್ಟಲು ಅನುಮತಿ ಇರುವುದಿಲ್ಲ ಆದರೆ ಆ ಕೃಷಿ ಜಮೀನಿನ ಒಂದು ಸಣ್ಣ ಭಾಗದಲ್ಲಿ ಮಾತ್ರ ತಾತ್ಕಾಲಿಕ ವಸತಿ ಪಡೆಯಲು ಕಟ್ಟಡವನ್ನು ನಿರ್ಮಿಸಬಹುದಾಗಿರುತ್ತದೆ ಇದನ್ನು ಹೊರತುಪಡಿಸಿ ಸಂಪೂರ್ಣ ಕೃಷಿ ಭೂಮಿಯನ್ನು ವಸತಿಯುತ ಮನೆ ನಿರ್ಮಾಣದ ಬಳಕೆಗೆ ಅನುಮತಿಯನ್ನು ನೀಡಲಾಗುವುದಿಲ್ಲ ರೈತರಾಗಿದ್ದು ಅವರ ಸ್ವಂತ ಜಮೀನನ್ನು ಹೊಂದಿದ್ದು ಅವರಿಗೆ ಗ್ರಾಮದಲ್ಲಿ ಯಾವುದೇ ಸ್ವಂತ ಮನೆ ಇಲ್ಲದಿದ್ದರೆ ಈ ಜಮೀನಿನ ಆಯುಧ ಒಂದು ಭಾಗದಲ್ಲಿ ವಸತಿಯನ್ನು ನಿರ್ಮಿಸಲು ಮನೆಯನ್ನು ಕಟ್ಟಬಹುದಾಗಿರುತ್ತದೆ ಅದು ಸಹ ತಾತ್ಕಾಲಿಕವಾಗಿ ಈ ಪ್ರಕ್ರಿಯೆಯನ್ನು ಶುರು ಮಾಡುವ ಮೊದಲು ಕೃಷಿ ಜಮೀನನ್ನು ಕೃಷಿಯೇತರ ಜಮೀನು ಅಥವಾ ವಸತಿಯುತ ಜಮೀನು ಎಂಬಂತೆ ಪರಿವರ್ತನೆ ಮಾಡಿಸಬೇಕಾಗುತ್ತದೆ ಇದನ್ನು ಲ್ಯಾಂಡ್ ಕನ್ವರ್ಷನ್ (ಭೂ ಪರಿವರ್ತನೆ) ಎಂದು ಕರೆಯಲಾಗುತ್ತದೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಕೃಷಿ ಜಮೀನಿನ ಒಂದು ಭಾಗದಲ್ಲಿ ಮನೆಯನ್ನು ನಿರ್ಮಾಣ ಮಾಡಲು ಅವಕಾಶವಿರುತ್ತದೆ.

ಭೂ ಪರಿವರ್ತನೆ ಪ್ರಕ್ರಿಯೆ ಹೇಗಿರುತ್ತದೆ?

ಯೋಗ್ಯ ಕೃಷಿ ಭೂಮಿಯಲ್ಲಿ ವಸತಿ ಉದ್ದೇಶಕ್ಕಾಗಿ ಮನೆಯನ್ನು ಕಟ್ಟಲು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ ಎಲ್ಲದಕ್ಕಿಂತ ಮೊದಲು ಕೃಷಿ ಭೂಮಿಯಿಂದ ವಸತಿ ಭೂಮಿಯಾಗಿ ಪರಿವರ್ತಿಸಲು ಭೂ ಪರಿವರ್ತನೆ ಸಂಬಂಧಪಟ್ಟ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಸಂಬಂಧ ಪಟ್ಟ ಅನ್ವಯಿತ ಶುಲ್ಕವನ್ನು ಪಾವತಿಸಬೇಕು ಇದರ ನಂತರ ಭೂಮಿಯನ್ನು ಏನಾದರೂ ವಿಂಗಡಣೆ ಮಾಡಿದ್ದಾರೆ ಆ ವಿಂಗಡಣೆಗೆ ವಿನ್ಯಾಸದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ ಈ ಪ್ರಕ್ರಿಯೆ ಮುಗಿದ ನಂತರವೇ ನೀವು ಕಟ್ಟಡದ ಯೋಜನೆಯನ್ನು ನಗರ ಪ್ರದೇಶ ಆಗಿದ್ದರೆ ಪುರಸಭೆ ಅಥವಾ ಗ್ರಾಮ ಪ್ರದೇಶವಾಗಿದ್ದರೆ ಪಂಚಾಯತಿಗೆ ಅರ್ಜಿಯನ್ನು ಸಲ್ಲಿಸಿ ನಿರ್ಪೇಕ್ಷಣ ಪತ್ರ ಅಂದರೆ ಎನ್‌ ಒ ಸಿ ಯನ್ನು ಪಡೆಯಬೇಕು ಈ ಹಂತಗಳು ಪೂರ್ಣಗೊಂಡ ನಂತರವೇ ಮನೆಯನ್ನು ಪ್ರಾರಂಭಿಸಬಹುದಾಗಿರುತ್ತದೆ

ಕೃಷಿ ಜಮೀನನ್ನು ಕೃಷಿಯೇತರ ಜಮೀನು ಅಥವಾ ವಸತಿ ಜಮೀನು ಎಂದು ಭೂ ಪರಿವರ್ತನೆ ಮಾಡಲು ಯಾವ ದಾಖಲೆಗಳ ಅಗತ್ಯವಿದೆ?

ಯೋಗ್ಯವಾದ Agriculture Land ಅನ್ನು ವಸತಿಯ ಉದ್ದೇಶಕ್ಕಾಗಿ ಮನೆಯನ್ನು ನಿರ್ಮಾಣ ಮಾಡಲು ಭೂ ಪರಿವರ್ತನೆ ಪ್ರಕ್ರಿಯೆ ಕಡ್ಡಾಯವಾಗಿದ್ದು ಈ ಪರಿವರ್ತನೆಗೆ ಅರ್ಜಿ ಸಲ್ಲಿಸಲು ಹಲವು ದಾಖಲೆಗಳ ಅಗತ್ಯತೆ ಕಡ್ಡಾಯವಾಗಿದೆ ಅದರಂತೆಯೇ ಜಮೀನಿನ ಮಾಲೀಕರು ಸರಕಾರದಿಂದ ನೀಡಿರುವ ಗುರುತಿನ ಚೀಟಿಯನ್ನು ಹೊಂದಿರಬೇಕಾಗುತ್ತದೆ ಇದರೊಂದಿಗೆ ಕೃಷಿ ಜಮೀನಿಗೆ ಸಂಬಂಧಿಸಿದ ಬೆಳೆಗಳ ನೋಂದಣಿ ಪತ್ರ ಗುತ್ತಿಗೆ ಕ್ರಯ ಅಥವಾ ಮಾಲೀಕತ್ವದ ಪ್ರಮಾಣ ಪತ್ರ ಪಹಣಿ ನ್ಯೂಟೇಶನ್ ಮುಂತಾದ ಅಗತ್ಯ ದಾಖಲೆಗಳು ಬೇಕಾಗುತ್ತದೆ ಇದರ ಜೊತೆಯಲ್ಲಿ ಭೂ ಬಳಕೆ ಯೋಜನೆ ಪ್ರಮಾಣ ಪತ್ರ ಸರ್ವೆ ಮಾಡಿರುವ ನಕ್ಷೆ ಪ್ರತಿ ಕೃಷಿ ಜಮೀನಿಗೆ ಪಾವತಿಸಲಾಗಿರುವ ಭೂಖಂಡ ಎರಿಸಿದಿ ಮುಂತಾದ ದಾಖಲೆಗಳನ್ನು ಕೇಳಬಹುದು ಅದರಂತೆಯೇ ಜಮೀನಿನ ಮೇಲೆ ಯಾವುದೇ ಪ್ರಕರಣಗಳು ಸಾಲಗಳು ಅಥವಾ ಬಾಕಿ ಪಾವತಿಗಳು ಇರಬಾರದು

Kaveri 2.0 Property Registration Is Fast: ಕಾವೇರಿ 2.0 ಆರಂಭ, ಕೇವಲ 10 ನಿಮಿಷದಲ್ಲಿ ಆಸ್ತಿ ನೋಂದಣಿ! ಇನ್ಮುಂದೆ ಸಂಪೂರ್ಣ ಕಾಗದರಹಿತ ವ್ಯವಸ್ಥೆ

ಆದುದರಿಂದ Agriculture Land ನಲ್ಲಿ  ಸರಿಯಾದ ಪರವಾನಗಿ ಇಲ್ಲದೆ ವಸತಿ ಉದ್ದೇಶಕ್ಕಾಗಿ ಮನೆಯನ್ನು ನಿರ್ಮಿಸುವುದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು ಅದರಂತೆಯೇ ಭೂಮಿಯ ದುರ್ಬಳಕೆ ಎಂಬಂತೆ ಅಧಿಕಾರಿಗಳು ನೋಟಿಸ್ ನೀಡಬಹುದು ಅಥವಾ ದಂಡವನ್ನು ಸಹ ವಿಧಿಸಬಹುದು ವಿದ್ಯುತ್ ಶಕ್ತಿ ನೀರಿನ ಸಂಪರ್ಕ ರಸ್ತೆ ಸಂಪರ್ಕ ಮುಂತಾದ ವ್ಯವಸ್ಥೆಗಳನ್ನು ಪಡೆಯಲು ಕಷ್ಟವಾಗಿರುತ್ತದೆ ಹಾಗೂ ಬ್ಯಾಂಕುಗಳು ಸಹ ಸಾಲವನ್ನು ನೀಡುವುದರಲ್ಲಿ ಮುಂದೆ ಬರದ ಕಾರಣ ಆದಷ್ಟು ನೀವು ಪರಿವರ್ತನೆಯನ್ನು ಕಡ್ಡಾಯವಾಗಿ ಮಾಡಿಸಬೇಕು

ಈ ಜಮೀನನ್ನು ನೀವು ಮಾರಾಟ ಮಾಡಬಹುದೇ?

Agriculture Land ಅನ್ನು ಭೂ ಪರಿವರ್ತನೆ ಮಾಡದೆ ಮನೆ ನಿರ್ಮಾಣ ಮಾಡಿದರು ಅಥವಾ ಬೇರೆಯವರಿಗೆ ಮನೆ ನಿರ್ಮಿಸಲು ಅವಕಾಶ ನೀಡಿದರು ಸಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಆದುದರಿಂದ ಸೂಕ್ತ ಕಾನೂನಿನ ಬಗ್ಗೆ ಅರಿವನ್ನು ಪಡೆದು ಪರಿಶೀಲನೆ ಮಾಡಿ ಭೂ ಪರಿವರ್ತನೆ ಮಾಡಿದ ನಂತರವೇ ಮನೆ ನಿರ್ಮಾಣ ಮಾಡುವುದು ಸೂಕ್ತ

ಮನೆ ನಿರ್ಮಾಣ ಮಾಡುವ ಮೊದಲು ಯಾವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು !

ಯಾವುದೇ ಭೂಮಿಯನ್ನು ಖರೀದಿಸುವ ಮುಂಚೆ ಅದು ಕೃಷಿ ಭೂಮಿಗೆ ಕೃಷಿಯ ತರಭೂಮಿಗೆ ವಸತಿ ಭೂಮಿಯೇ ಎಂದು ಕಡ್ಡಾಯವಾಗಿ ಪರಿಶೀಲಿಸಿ ನಂತರ ಮಾಲೀಕತ್ವದ ವಿವರಗಳು ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಹಾಗೂ ತುಂಬಾ ಕಡಿಮೆ ಬೆಲೆಗೆ ಮಾರಾಟ ಗೊಳ್ಳುವ ಪ್ರಸಂಗ ಇದ್ದರೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ ಅದರಂತೆಯೇ ಸೂಕ್ತ ಮಾಹಿತಿಯನ್ನು ಪಡೆದು ಭೂ ಪರಿವರ್ತನೆಯ ಅವಶ್ಯಕತೆ ಇದ್ದಲ್ಲಿ ಪರಿವರ್ತಿಸಿ ನಂತರವೇ ಮುಂದಿನ ಕೆಲಸವನ್ನು ನಿರ್ವಹಿಸಿ

Top News Karnataka Today 04-05-2026: ಕರ್ನಾಟಕ ರಾಜ್ಯದ ಕೃಷಿಕ ರೈತರಿಗೆ ಸಂಬಂಧಿಸಿದ ಅರಿವು, ಮುಂಜಾಗ್ರತೆ ಹಾಗೂ ಯೋಜನೆಗಳ ಬಗೆಗಿನ ಮಾಹಿತಿ

Frequently Asked Questions (FAQs)

1. ಕೃಷಿ ಭೂಮಿ (Agriculture Land) ಯಲ್ಲಿ ನೇರವಾಗಿ ಮನೆ ನಿರ್ಮಾಣ ಮಾಡಬಹುದೇ?
ಇಲ್ಲ, ಸಾಮಾನ್ಯವಾಗಿ ಕೃಷಿ ಭೂಮಿಯಲ್ಲಿ ನೇರವಾಗಿ ವಸತಿ ಮನೆ ನಿರ್ಮಾಣ ಮಾಡಲು ಅನುಮತಿ ಇರುವುದಿಲ್ಲ. ಮೊದಲು ಭೂ ಪರಿವರ್ತನೆ (Land Conversion) ಪ್ರಕ್ರಿಯೆ ಪೂರ್ಣಗೊಳಿಸಿ ಕೃಷಿಯೇತರ ಅಥವಾ ವಸತಿ ಭೂಮಿಯಾಗಿ ಪರಿವರ್ತಿಸಬೇಕು.

2. ಭೂ ಪರಿವರ್ತನೆ ಮಾಡದೆ ಕೃಷಿ ಜಮೀನಿನಲ್ಲಿ ಮನೆ ಕಟ್ಟಿದರೆ ಏನಾಗುತ್ತದೆ?
ಸರಿಯಾದ ಪರವಾನಗಿ ಇಲ್ಲದೆ ಮನೆ ನಿರ್ಮಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ನೀಡಬಹುದು, ಕೆಲವೊಮ್ಮೆ ದಂಡ ವಿಧಿಸಬಹುದು ಹಾಗೂ ಅಕ್ರಮ ಕಟ್ಟಡ ತೆರವುಗೊಳಿಸುವ ಕ್ರಮವನ್ನೂ ಕೈಗೊಳ್ಳಬಹುದು.

3. ಯಾವ ಸಂದರ್ಭಗಳಲ್ಲಿ ಕೃಷಿ ಜಮೀನಿನಲ್ಲಿ ಮನೆ ನಿರ್ಮಿಸಲು ಅವಕಾಶ ಇರುತ್ತದೆ?
ರೈತರು ತಮ್ಮ ಕೃಷಿ ಚಟುವಟಿಕೆಗಳ ನಿರ್ವಹಣೆಗಾಗಿ ಅಥವಾ ತಾತ್ಕಾಲಿಕ ವಸತಿಗಾಗಿ ಜಮೀನಿನ ಒಂದು ಸಣ್ಣ ಭಾಗದಲ್ಲಿ ಕಟ್ಟಡ ನಿರ್ಮಿಸಲು ಕೆಲವು ಸಂದರ್ಭಗಳಲ್ಲಿ ಅವಕಾಶ ಇರಬಹುದು. ಆದರೆ ಪೂರ್ಣ ಪ್ರಮಾಣದ ವಸತಿ ಮನೆಗೆ ಭೂ ಪರಿವರ್ತನೆ ಕಡ್ಡಾಯವಾಗಿರುತ್ತದೆ.

4. ಕೃಷಿ ಜಮೀನನ್ನು ವಸತಿ ಜಮೀನಾಗಿ ಹೇಗೆ ಪರಿವರ್ತಿಸಬಹುದು?
ಭೂ ಪರಿವರ್ತನೆಗಾಗಿ ಸಂಬಂಧಪಟ್ಟ ಕಂದಾಯ ಇಲಾಖೆ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ನೀಡಿ ಹಾಗೂ ಅನ್ವಯಿತ ಶುಲ್ಕ ಪಾವತಿಸಿದ ನಂತರ ಕಾನೂನುಬದ್ಧವಾಗಿ ಪರಿವರ್ತನೆ ಮಾಡಿಸಬಹುದು.

5. ಭೂ ಪರಿವರ್ತನೆಗೆ ಯಾವ ದಾಖಲೆಗಳು ಅಗತ್ಯ?
ಪಹಣಿ, ಮ್ಯೂಟೇಶನ್ ದಾಖಲೆ, ಮಾಲೀಕತ್ವ ಪ್ರಮಾಣ ಪತ್ರ, ಗುರುತಿನ ಚೀಟಿ, ಸರ್ವೆ ನಕ್ಷೆ, ಭೂ ಬಳಕೆ ಯೋಜನೆ ಪ್ರಮಾಣ ಪತ್ರ ಹಾಗೂ ಭೂ ತೆರಿಗೆ ಪಾವತಿ ದಾಖಲೆಗಳು ಅಗತ್ಯವಾಗಬಹುದು.

6. ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗುತ್ತದೆಯೇ?
ಭೂ ಪರಿವರ್ತನೆ ಮಾಡದ Agriculture Land ನಲ್ಲಿ ಶಾಶ್ವತ ವಿದ್ಯುತ್, ನೀರು, ರಸ್ತೆ ಸಂಪರ್ಕ ಪಡೆಯುವುದು ಕಷ್ಟಕರವಾಗಿರುತ್ತದೆ. ಅಧಿಕೃತ ವಸತಿ ಸೌಲಭ್ಯಗಳಿಗಾಗಿ ಭೂ ಪರಿವರ್ತನೆ ಮುಖ್ಯ.

7. ಕೃಷಿ ಜಮೀನಿನಲ್ಲಿ ನಿರ್ಮಿಸಿದ ಮನೆಗೆ ಬ್ಯಾಂಕ್ ಸಾಲ ಸಿಗುತ್ತದೆಯೇ?
ಸಾಮಾನ್ಯವಾಗಿ Agriculture Land ನಲ್ಲಿ ಕಾನೂನುಬದ್ಧ ಪರಿವರ್ತನೆ ಇಲ್ಲದೆ ನಿರ್ಮಿಸಿದ ಮನೆಗಳಿಗೆ ಬ್ಯಾಂಕುಗಳು ಗೃಹ ಸಾಲ ಅಥವಾ ಆಸ್ತಿ ಆಧಾರಿತ ಸಾಲ ನೀಡುವುದಿಲ್ಲ.

8. Agriculture Land ಅನ್ನು ಖರೀದಿಸುವ ಮೊದಲು ಯಾವ ವಿಚಾರಗಳನ್ನು ಪರಿಶೀಲಿಸಬೇಕು?
ಭೂಮಿಯ ಸ್ವರೂಪ (ಕೃಷಿ/ವಸತಿ), ಮಾಲೀಕತ್ವ ದಾಖಲೆಗಳು, ಪಹಣಿ, ಕಾನೂನು ಸಮಸ್ಯೆಗಳು, ಸಾಲ ಬಾಕಿಗಳು ಹಾಗೂ ಭೂ ಪರಿವರ್ತನೆ ಅಗತ್ಯವಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

PM Kisan Yojana: Big Update: ಪಿ ಎಂ ಕಿಸಾನ್‌ ಯೋಜನೆಯ 23ನೇ ಕಂತಿನ ಹಣ ಜಮಾವಣೆಯ ದಿನಾಂಕ ನಿಗಧಿ.

ಇದೇ ರೀತಿ ಉದ್ಯೋಗ, ಸರ್ಕಾರಿ ಸ್ಕೀಂಗಳು ವಿದ್ಯಾರ್ಥಿವೇತನ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ದೈನಂದಿನ ಪಡೆಯಲು ನಮ್ಮ ವಾಟ್ಸಾಪ್‌ ಗ್ರೂಪ್‌ ಅನ್ನು ಸೇರಲು : ಇಲ್ಲಿ ಕ್ಲಿಕ್‌ ಮಾಡಿ

Leave a Comment