BEML Recruitment ಮೂಲಕ ಮೇನೇಜರ್ ಹಾಗೂ ಇಂಜಿನಿಯರ್ ಹುದ್ದೆಗಳ ನೇಮಕಾತಿ
ನಮಸ್ಕಾರ ಸ್ನೇಹಿತರೆ, ನೀವು ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿ ಮ್ಯಾನೇಜರ್ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಬೇಕೆಂಬ ಕನಸು ಹೊಂದಿದ್ದೀರಾ? ಹಾಗಾದರೆ ನಿಮಗಾಗಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಒಂದು ಸುವರ್ಣಾವಕಾಶವನ್ನು ನಿಮ್ಮ ಮುಂದೆ ತಂದಿದೆ . BEML Recruitment ಮೂಲಕ ಇಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವಾಗಿ, ಈ ಸಂಸ್ಥೆಯ ಕಚೇರಿ ಬೆಂಗಳೂರಿನಲ್ಲಿ ಇರುವುದರಿಂದ ಕರ್ನಾಟಕದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಉದ್ಯೋಗಾವಕಾಶವಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಉತ್ತಮ ವೇತನ, ಉದ್ಯೋಗ ಭದ್ರತೆ ಹಾಗೂ ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಈ ನೇಮಕಾತಿಯನ್ನು ತಪ್ಪಿಸಿಕೊಳ್ಳದೇ ಅರ್ಜಿ ಸಲ್ಲಿಸುವುದು ಉತ್ತಮ ಅವಕಾಶವಾಗಿರುತ್ತದೆ.
ಹುದ್ದೆಗಳ ವಿವರವಾದ ಮಾಹಿತಿ
ಸಂಸ್ಥೆ ಹೆಸರು : ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ ಇ ಎಂ ಎಲ್)
ಹುದ್ದೆಯ ಹೆಸರು : ಇಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ : 27 ಹುದ್ದೆಗಳು
ಉದ್ಯೋಗದ ಸ್ಥಳ : ಬೆಂಗಳೂರು, ಕರ್ನಾಟಕ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ
BEML Recruitment ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ B.E (ಬಿ ಇ) /B.Tech (ಬಿ ಟೆಕ್) ಪದವಿಯನ್ನು ಪೂರ್ಣಗೊಳಿಸಬೇಕು.
ವಯೋಮಿತಿ ವಿವರ
ಅಭ್ಯರ್ಥಿಗಳು 14-05-2026ರಂತೆ, ಕನಿಷ್ಠ 18 ವರ್ಷ ವಯಸ್ಸುಳ್ಳವರಾಗಿದ್ದು ಹಾಗೂ ಗರಿಷ್ಠ 39 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
ವಯೋಮಿತಿ ಸಡಿಲಿಕೆ
BEML Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವರ್ಗದ ಆಧಾರದ ಮೇಲೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು ವಯೋಮಿತಿ ಸಡಿಲಿಕೆಯ ವಿವರ ಈ ಕೆಳಕಂಡಂತಿದೆ.
ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಎಲ್ಲಾ ಅಭ್ಯರ್ಥಿಗಳಿಗೆ : 03 ವರ್ಷಗಳು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ : 05 ವರ್ಷಗಳು.
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷಗಳು.
ಆನ್ಲೈನ್ ಅರ್ಜಿ ಶುಲ್ಕ
ಇತರ ಎಲ್ಲಾ ಅಭ್ಯರ್ಥಿಗಳಿಗೆ 500/- ರೂಗಳು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇವಲ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಇತರ ಯಾವುದೇ ಪಾವತಿ ವಿಧಾನಗಳನ್ನು ಉಪಯೋಗಿಸಿ ಆನ್ಲೈನ್ ಪೇಮೆಂಟ್ ಮಾಡುವುದರನ್ನು ತಪ್ಪಿಸಿ.
BEML Recruitment ನ ಆಯ್ಕೆ ಪ್ರಕ್ರಿಯೆ
- ಮೌಲ್ಯಮಾಪನದ ಆಧಾರದ ಪರೀಕ್ಷೆ.
ಮೌಲ್ಯಮಾಪನ ಪರೀಕ್ಷೆ ಎಂದರೆ ಹುದ್ದೆಗೆ ಬೇಕಾಗಿರುವ ಕನಿಷ್ಠ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸುವ ಪ್ರಕ್ರಿಯೆ ಇದಾಗಿರುತ್ತದೆ. - ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂದು ಪರೀಕ್ಷಿಸಲು ಉದ್ಯೋಗವನ್ನು ನೀಡುವ ಮೊದಲು ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಾರೆ. - ದಾಖಲೆ ಪರಿಶೀಲನೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವೈಯಕ್ತಿಕ ದಾಖಲೆಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ವಯೋಮಿತಿಗೆ ಸಂಬಂಧಿಸಿದ ಪ್ರಮಾಣ ಪತ್ರ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರ ಹಾಗೂ ಅನ್ವಯಿಸಿದ ಅನುಭವ ಪ್ರಮಾಣ ಪತ್ರಗಳ ದಾಖಲೆ ಪರಿಶೀಲನೆಯನ್ನು ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ
- ಈ BEML Recruitment ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಬಿ ಇ ಎಮ್ ಎಲ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು (ವೆಬ್ ಸೈಟ್ ಲಿಂಕನ್ನು ಕೆಳಗೆ ನೀಡಿದ್ದೇವೆ).
- ನಂತರ ವೆಬ್ಸೈಟ್ ನಲ್ಲಿ ನೇಮಕಾತಿ ವಿಭಾಗದಲ್ಲಿ ಸಂಬಂಧಿಸಿದ ಹುದ್ದೆಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಹತೆಯನ್ನು ಹಾಗೂ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಿ.
- ನಂತರ ಅಪ್ಲೈ ಆನ್ಲೈನ್ ಎಂಬಲ್ಲಿ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ವಿವರಗಳು ಶೈಕ್ಷಣಿಕ ವಿವರಗಳು ಮೀಸಲಾತಿ ವಿವರಗಳು ಹಾಗೂ ಕಡ್ಡಾಯವಾಗಿ ಕೇಳಲಾಗುವ ಸಂವಹನ ಉದ್ದೇಶದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಅಗತ್ಯ ದಾಖಲೆಗಳಾದ ಗುರುತಿನ ದಾಖಲೆ ಶೈಕ್ಷಣಿಕ ದಾಖಲೆ ಬಯೋಮಿತಿ ಸಡಿಲಿಕಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಅನುಭವ ಪ್ರಮಾಣ ಪತ್ರಗಳ ಅಗತ್ಯತೆ ಇದ್ದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ವಿವರಗಳನ್ನು ನಮೂದಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಪ್ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಾವು ನಮೂದಿಸಿರುವ ಎಲ್ಲಾ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿಕೊಳ್ಳಿ.
- ನಂತರ ಆನ್ಲೈನ್ ಮೂಲಕ ಅನ್ವಯಿತ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ಸಬ್ಮಿಟ್ ಬಟನ್ ಮೇಲೆ ಒತ್ತಿ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿ.
- ಯಶಸ್ವಿ ಅರ್ಜಿ ಸಲ್ಲಿಕೆಯ ನಂತರ ಬರುವ ಅರ್ಜಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ ಹಾಗೂ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳುವುದು ಉತ್ತಮ.
ಪ್ರಮುಖ ದಿನಾಂಕಗಳು ಈ ಕೆಳಕಂಡಂತಿವೆ
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 29-04-2026 ಆಗಿರುತ್ತದೆ.
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 14-05-2026 ಆಗಿರುತ್ತದೆ.
ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು.
- ಅಧಿಕೃತ ಅಧಿಸೂಚನೆಯ ಪಿಡಿಎಫ್ : BEML Recruitment Notification
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು : ನೋಂದಣಿ ಅರ್ಜಿ ಸಲ್ಲಿಕೆ
- ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಭಾರತ್ ಅರ್ಥ್ ಮೂವರ್ ಲಿಮಿಟೆಡ್ (BEML) ಸಂಸ್ಥೆಯು 2026ರ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಇಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಇಂಜಿನಿಯರಿಂಗ್ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಶೈಕ್ಷಣಿಕ ಅರ್ಹತೆ, ವಯೋಮಿತಿ ಹಾಗೂ ಇತರೆ ಮಾನದಂಡಗಳನ್ನು ಪೂರೈಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-05-2026 ಆಗಿರುವುದರಿಂದ, ಕೊನೆಯ ಕ್ಷಣದ ಸರ್ವರ್ ಸಮಸ್ಯೆಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿಯೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆಗೆ ತಯಾರಿಯನ್ನು ಆರಂಭಿಸಿ ಹಾಗೂ ಸಂದರ್ಶನಕ್ಕೆ ಉತ್ತಮ ಕೌಶಲ್ಯಗಳನ್ನು ಕಲಿತುಕೊಳ್ಳಿ, ತಮ್ಮ ಕೇಂದ್ರ ಸರ್ಕಾರದ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ
Frequently Asked Questions About BEML Recruitment
1. ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
BEML Recruitment 2026 ಮೂಲಕ ಇಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ಒಟ್ಟು 27 ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.
2. ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ ಏನು?
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E / B.Tech ಪದವಿಯನ್ನು ಪೂರ್ಣಗೊಳಿಸಿರಬೇಕು.
3. BEML Recruitment 2026 ರಲ್ಲಿ ಉದ್ಯೋಗದ ಸ್ಥಳ ಯಾವುದು?
ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು, ಕರ್ನಾಟಕದಲ್ಲಿ ಉದ್ಯೋಗ ನೀಡಲಾಗುತ್ತದೆ.
4. BEML Recruitment ಗೆ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು ಇರಬೇಕು?
14-05-2026ರಂತೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 39 ವರ್ಷ ವಯಸ್ಸಿನೊಳಗಿರಬೇಕು.
5. ವಯೋಮಿತಿ ಸಡಿಲಿಕೆ ಇದೆಯೇ?
ಹೌದು, OBC ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
6. BEML Recruitment ಗೆ ಅರ್ಜಿ ಶುಲ್ಕ ಎಷ್ಟು?
ಇತರ ಎಲ್ಲಾ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕವಿದ್ದು, SC/ST ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
7. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಆಯ್ಕೆ ಪ್ರಕ್ರಿಯೆಯಲ್ಲಿ ಮೌಲ್ಯಮಾಪನ ಪರೀಕ್ಷೆ, ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ಒಳಗೊಂಡಿರುತ್ತದೆ.
8. BEML Recruitment ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಅರ್ಜಿ ಸಲ್ಲಿಕೆ ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 14-05-2026 ಆಗಿರುತ್ತದೆ.
Read More: Jobs.
NITK Recruitment 2026, Big Opportunity: ಬೋಧಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ.
PGCIL Recruitment 2026, Big Opportunity : ಆಫೀಸರ್ ಹಾಗೂ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
RLDA Recruitment 2026, Big Opportunity: ಸೈಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ