ಅಧ್ಯಾಪಕರು, ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ (NITK Recruitment)
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ಈ ಸಂಸ್ಥೆಯು ಅದರ 2026ರ ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನಲ್ಲಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂಬುದನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ನೇಮಕಾತಿಯ (NITK Recruitment) ಅಧಿಸೂಚನೆ ವಿವರ
ಸಂಸ್ಥೆ ಹೆಸರು : ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ
ಹುದ್ದೆಯ ಹೆಸರು : ಅಸೋಸಿಯೇಟ್ ಪ್ರೊಫೆಸರ್, ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು
ಒಟ್ಟು ಹುದ್ದೆಗಳ ಸಂಖ್ಯೆ : 84 ಹುದ್ದೆಗಳು
ಉದ್ಯೋಗದ ಸ್ಥಳ : ದಕ್ಷಿಣ ಕನ್ನಡ, ಕರ್ನಾಟಕ
NITK Recruitment ನ ಹುದ್ದೆಗಳ ವಿವರ
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳ ಸಂಖ್ಯೆ |
| ಸಹಾಯಕ ಪ್ರಾಧ್ಯಾಪಕರು | 82 |
| ಅಸೋಸಿಯೇಟ್ ಪ್ರೊಫೆಸರ್ | 01 |
| ಪ್ರಾಧ್ಯಾಪಕರು | 01 |
NITK Recruitment ಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ

- ಬಿ ಎಸ್ ಸಿ (B.Sc) ಅಥವಾ ಎಮ್ ಎಸ್ ಸಿ (M.Sc)
- ಬಿಇ (B.E) ಅಥವಾ ಬಿ ಟೆಕ್ (B.Tech)
- ಎಂಇ (M.E) ಅಥವಾ ಎಂ ಟೆಕ್ (M.Tech)
- ಹುದ್ದೆಗಳಿಗೆ ಅನುಗುಣವಾಗಿ ಪಿಎಚ್‍ಡಿ (P.hd) ಪದವಿ ಕಡ್ಡಾಯ
NITK Recruitment ಗೆ ಸಂಬಧಿಸಿದ ವಯೋಮಿತಿ ವಿವರ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು
NITK Recruitment ನ ಸಂಬಳದ ವಿವರ
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ಇದರ ನೇಮಕಾತಿ ಸೂಚನೆಯ ಪ್ರಕಾರ ಮಾಸಿಕ ವೇತನವನ್ನು ನೀಡಲಾಗುವುದು ಈವರೆಗೆ ವೇತನದ ಮೊತ್ತವನ್ನು ನಿರ್ಧರಿಸಲಾಗಿರುವುದಿಲ್ಲ
NITK Recruitment ನ ಆನ್ ಲೈನ್ ಅರ್ಜಿ ಶುಲ್ಕ
- ಸಾಮಾನ್ಯ ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಅಭ್ಯರ್ಥಿಗಳಿಗೆ 2,500/- ರೂಗಳು
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 1,250/- ರೂಗಳು
ಸೂಚನೆ: ಶುಲ್ಕವನ್ನು ಕೇವಲ ಆನ್ಲೈನ್ ಮೂಲಕ ಮಾತ್ರವೇ ಪಾವತಿ ಮಾಡಬೇಕಾಗಿರುತ್ತದೆ ಇದನ್ನು ಹೊರತುಪಡಿಸಿ ಯಾವುದೇ ಪಾವತಿ ವಿಧಾನವನ್ನು ಬಳಸಿ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿದಲ್ಲಿ ಅದನ್ನು ಅಧಿಕೃತ ಎಂದು ಪರಿಗಣಿಸಲಾಗುವುದಿಲ್ಲ
ಸೂಚನೆ : ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸುವಾಗ ಕಡ್ಡಾಯವಾಗಿ ಹೆಸರು ಹಾಗೂ ಅರ್ಜಿಯ ನೊಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿರುತ್ತದೆ
NITK Recruitment ನ ಆಯ್ಕೆ ಪ್ರಕ್ರಿಯೆ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಆಧಾರದ ಮೇಲೆ ಶಾರ್ಟ್ಲಿಸ್ಟಿಂಗ್ ಮಾಡಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ
ಈ ನೇಮಕಾತಿಯಲ್ಲಿ ಸಂರಕ್ಷನಾದ ಪ್ರಕ್ರಿಯೆ ಮಾತ್ರ ಇರುವುದರಿಂದ ತಮ್ಮ ಶೈಕ್ಷಣಿಕ ಅಂಕಗಳು ಹಾಗೂ ಕೌಶಲ್ಯತೆ ಆಧಾರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಬಹುದು
NITK Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 04-05-2026
ಆನ್ಲೈನ್ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ 02-06-2026
NITK Recruitment ನ ವಿಭಾಗವಾರು ಹುದ್ದೆಗಳ ಹಂಚಿಕೆ
| ವರ್ಗಗಳು | ವರ್ಗವಾರು ಹುದ್ದೆಗಳ ಸಂಖ್ಯೆ |
| ಸಾಮಾನ್ಯ ವರ್ಗ | 36 |
| ಪರಿಶಿಷ್ಟ ಜಾತಿ ವರ್ಗ | 14 |
| ಪರಿಶಿಷ್ಟ ಪಂಗಡ ವರ್ಗ | 08 |
| ಇತರೆ ಹಿಂದುಳಿದ ವರ್ಗ | 21 |
| ಆರ್ಥಿಕವಾಗಿ ಹಿಂದುಳಿದ ವರ್ಗ | 05 |
ಪ್ರಮುಖ ಸೂಚನೆ : ಅಂಗವಿಕಲ ಅಭ್ಯರ್ಥಿಗಳಿಗೆ 02 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ
NITK Recruitment ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು
- ಆಧಾರ್ ಕಾರ್ಡ್ (ಸರ್ಕಾರದಿಂದ ಅಧಿಕೃತವಾದ ಗುರುತಿನ ಚೀಟಿ ಚಾಲನಾ ಪರವಾನಗಿ ಪಾಸ್ಪೋರ್ಟ್ ಇತ್ಯಾದಿ)
- ಜನ್ಮ ದಿನಾಂಕ ಪ್ರಮಾಣ ಪತ್ರ (ಜನನ ಪ್ರಮಾಣ ಪತ್ರ ಅಥವಾ 10ನೇ ತರಗತಿಯ ಅಂಕಪಟ್ಟಿ)
- ಶೈಕ್ಷಣಿಕ ದಾಖಲೆಗಳಾದ ಅಂಕಪಟ್ಟಿಗಳು
- ಮೀಸಲಾತಿಗೆ ಅನುಗುಣವಾಗಿ ಜಾತಿ ಪ್ರಮಾಣ ಪತ್ರ ಅಂಗವಿಕಲ ಪ್ರಮಾಣ ಪತ್ರ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಪ್ರಮಾಣ ಪತ್ರ
- ಅನುಭವ ಪ್ರಮಾಣ ಪತ್ರಗಳು
- ಇತರೆ ಹೆಚ್ಚುವರಿ ವರ್ಕ್ ಶಾಪ್ ಗಳು ಕೋರ್ಸ್ ಗಳು ಪ್ರೋಗ್ರಾಮ್ ಗಳು ಕಾನ್ಫರೆನ್ಸ್ ನಿಂದ ಪಡೆದ ಪ್ರಮಾಣಪತ್ರಗಳು ಇದ್ದಲ್ಲಿ ಪ್ರಾಮುಖ್ಯತೆ ನೀಡಲಾಗುವುದು
- ಅರ್ಜಿ ಶುಲ್ಕ ಪಾವತಿಸಿರುವ ಬಗ್ಗೆ ರಸೀದಿ
NITK Recruitment ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ

- ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು NITK ಅಧಿಕೃತ ವೆಬ್ಸೈಟ್ ಗೆ ಹೋಗಿ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಂಡು ಅಭ್ಯರ್ಥಿಗಳು ಅರ್ಹತಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನೇಮಕಾತಿ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿ ಹುದ್ದೆಗೆ ಸಂಬಂಧಿಸಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
- ನಂತರ ಆನ್ಲೈನ್ ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ವಯೋಮಿತಿಗೆ ಸಂಬಂಧಿಸಿದ ಮಾಹಿತಿ ಹಾಗೂ ಅನುಭವ ಪ್ರಮಾಣ ಪತ್ರಗಳು ಮುಂತಾದ ದಾಖಲೆಗಳನ್ನು ಸಿದ್ಧಮಾಡಿ ಇಟ್ಟುಕೊಳ್ಳಿ
- ಅಧಿಕೃತ ವೆಬ್ಸೈಟ್ ಅನ್ನು ತೆರೆದ ನಂತರ ಅಪ್ಲೈ ಆನ್ಲೈನ್ ಎಂಬಲ್ಲಿ ಕ್ಲಿಕ್ ಮಾಡಿದ ನಂತರ ಆನ್ಲೈನ್ ಅರ್ಜಿಯು ತೆರೆಯುತ್ತದೆ ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿಗಳನ್ನು ನಿರ್ದಿಷ್ಟವಾಗಿ ನಿಖರವಾಗಿ ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಬೇಕಾಗುತ್ತದೆ
- ಎಲ್ಲ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿದ ನಂತರ ಪ್ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಾವು ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿದ್ದೀರಾ ಎಂದು ಪರಿಶೀಲಿಸಿಕೊಳ್ಳಬೇಕಾಗುತ್ತದೆ
- ಎಲ್ಲ ಮಾಹಿತಿಯನ್ನು ಪರಿಶೀಲಿಸಿದ ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಆಯ್ಕೆಯ ಮೂಲಕ ಕೇಳಲಾಗುವ ವೈಯಕ್ತಿಕ ದಾಖಲೆಗಳು ಶೈಕ್ಷಣಿಕ ದಾಖಲೆಗಳು ಹಾಗೂ ಅನುಭವ ಪ್ರಮಾಣ ಪತ್ರಗಳು ಹಾಗೂ ಇತರ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿಟ್ಟುಕೊಂಡು ಅದರ ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು
- ನಂತರ ಅನ್ವಯಿಕ ವರ್ಗದ ಪ್ರಕಾರ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ
- ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಕೊನೆಯದಾಗಿ ಅರ್ಜಿ ಯಶಸ್ವಿಯಾಗಿ ಸಲ್ಲಿಸಿರುವ ಅಪ್ಲಿಕೇಶನ್ ಓಪನ್ ಆಗುತ್ತದೆ ಈ ಅಪ್ಲಿಕೇಶನ್ ಅನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಿ ಹಾಗೂ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಪಿಡಿಎಫ್ ಅನ್ನು ಸೇವ್ ಮಾಡಿ ಇಟ್ಟುಕೊಳ್ಳಿ ಈ ಪ್ರಕ್ರಿಯೆಯಲ್ಲಿ ಬರುವ ನೋಂದಣಿ ಸಂಖ್ಯೆಯು ನೇಮಕಾತಿ ಪ್ರಕ್ರಿಯೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸಹಕಾರಿ ನೀಡುವುದರಿಂದ ಈ ನೋಂದಣಿ ಸಂಖ್ಯೆಯನ್ನು ಜೋಪಾನವಾಗಿ ಇಟ್ಟುಕೊಳ್ಳಿ
- ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 02-06-2026 ಆಗಿದ್ದು ಕೊನೆಯ ಸಂದರ್ಭಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಹಿಂದೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಹತಮಾನದಂಡಗಳನ್ನು ಪರಿಶೀಲಿಸಿ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ
ಪ್ರಮುಖ ಲಿಂಕ್‌ಗಳು
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಅಧಿಕೃತ ವೆಬ್ಸೈಟ್ : ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ
ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಓದಲು : ಅಧಿಸೂಚನೆ-1 ಅಧಿಸೂಚನೆ-2
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಸೇರಲು : ಇಲ್ಲಿ ಕ್ಲಿಕ್ ಮಾಡಿ
ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ ಈ ಸಂಸ್ಥೆಯು 2026 ನೇ ಸಾಲಿನಲ್ಲಿ ತನ್ನ ನೇಮಕಾತಿ ಅಧಿ ಸೂಚನೆಯ ಮೂಲಕ 84 ಅಧ್ಯಾಪಕರು ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಆದುದರಿಂದ ಅಧಿಕೃತ ಅಧಿಸೂಚನೆಯನ್ನು ಆದಷ್ಟು ಬೇಗ ಓದಿ ಅರ್ಹತಮಾನದಂಡಗಳನ್ನು ಅರ್ಥೈಸಿಕೊಂಡು ಹಿಂದೆ ಅರ್ಜಿ ಸಲ್ಲಿಸಿ ನಿಮ್ಮ ಶಿಕ್ಷಣ ಕ್ಷೇತ್ರದ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ
Read More: Jobs.
PGCIL Recruitment 2026, Big Opportunity : ಆಫೀಸರ್ ಹಾಗೂ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
RLDA Recruitment 2026, Big Opportunity: ಸೈಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ
KSLSA Recruitments 2026, Big Update: ಪ್ರಾಧಿಕಾರದ ಶಾಖಾಧಿಕಾರಿ ಹುದ್ದೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ