Telegram Join My Telegram WhatsApp Join My WhatsApp

Union Bank Recruitment 2026, Big Opportunity: ಅಪ್ರೆಂಟೈಸ್‌ ಹುದ್ದೆಗಳ ಬೃಹತ್‌ ನೇಮಕಾತಿ. ಇಂದೇ ಅರ್ಜಿ ಸಲ್ಲಿಸಿ.

ಯೂನಿಯನ್ ಬ್ಯಾಂಕ್ ನೇಮಕಾತಿ 1865 ಅಪ್ಪ್ರೆಂಟಿಸ್ ಹುದ್ದೆಗಳ ಭರ್ತಿ ( Union Bank Recruitment 2026 )

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವ ಪದವಿದರರಿಗೆ ಯೂನಿಯನ್ ಬ್ಯಾಂಕ್ ತನ್ನ ಅಧಿಕೃತ ನೇಮಕಾತಿ ಅಧಿಸೂಚನೆಯ ಮೂಲಕ 1865 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಆದೇಶವನ್ನು ಹೊರಡಿಸಿದೆ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಭಾರತದದ್ಯಂತ 1865 ಅಪ್ರೆಂಟಿಸ್ ಹುದ್ದೆಗಳಿಗಾಗಿ ಭರ್ಜರಿ ನೇಮಕಾತಿ ಪ್ರಕಟಿಸಿದ್ದು ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ 131 ಹುದ್ದೆಗಳನ್ನು ಮೀಸಲಿಟ್ಟಿರುವುದು ಖುಷಿಯ ಸಂಗತಿಯಾಗಿದೆ ಆದುದರಿಂದ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದ್ದು ಕೊನೆಯ ದಿನಾಂಕದಂದು ಅಥವಾ ಮೊದಲೇ ಅರ್ಜಿಯನ್ನು ಸಲ್ಲಿಸಿ ತಮ್ಮ ಸರ್ಕಾರಿ ಬ್ಯಾಂಕಿನ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಿ.

union bank apprentice recruitmrnt

ವಿಶೇಷ ಸೂಚನೆ
ಯೂನಿಯನ್ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳು ನೇಮಕಗೊಂಡ ನಂತರ ತರಬೇತಿ ಅವಧಿಯಲ್ಲಿ ಉತ್ತಮ ಸ್ಟೇ ಫಂಡ್ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಅನುಭವ ದೊರೆಯುತ್ತದೆ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-05-2026 ಆಗಿರುತ್ತದೆ

Union Bank Recruitment ನ  ಸಂಕ್ಷಿಪ್ತ ವಿವರಗಳು ಈ ಕೆಳಕಂಡಂತಿವೆ

  • ಸಂಸ್ಥೆ ಹೆಸರು :  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  • ಹುದ್ದೆಯ ಹೆಸರು   : ಅಪ್ರೆಂಟೈಸ್
  • ಅಧಿಸೂಚನೆ ಪ್ರಕಾರ ಒಟ್ಟು ಹುದ್ದೆಗಳು :  1865
  • ಕರ್ನಾಟಕ ರಾಜ್ಯಕ್ಕೆ ಮೀಸಲಿರುವ ಹುದ್ದೆಗಳ ಸಂಖ್ಯೆ : 131
  • ಅರ್ಜಿ ಸಲ್ಲಿಕೆ ವಿಧಾನ :  ಆನ್ಲೈನ್
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  19-05-2026

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ (Union Bank Recruitment) ರಾಜ್ಯವಾರು ಹುದ್ದೆಗಳ ಹಂಚಿಕೆ ಈ ರೀತಿ ಆಗಿದೆ

  • ಉತ್ತರ ಪ್ರದೇಶ : 335
  • ಆಂಧ್ರಪ್ರದೇಶ : 33
  • ಮಹಾರಾಷ್ಟ್ರ : 196
  • ತೆಲಂಗಾಣ : 164
  • ಕರ್ನಾಟಕ : 131
  • ತಮಿಳುನಾಡು : 95

ಕರ್ನಾಟಕದಲ್ಲಿ ನಿಯೋಜನೆಗೊಂಡಿರುವ 131 ಹುದ್ದೆಗಳ ವರ್ಗವಾರು ಹಂಚಿಕೆ

ವರ್ಗ ಹುದ್ದೆಗಳ ಸಂಖ್ಯೆ
ಸಾಮಾನ್ಯ 54
ಒ ಬಿ ಸಿ 35
ಪರಿಶಿಷ್ಟ ಜಾತಿ 20
ಇ ಡಬ್ಲೂ ಎಸ್ 13
ಪರಿಶಿಷ್ಟ ಪಂಗಡ 09

 

ಅಂಗವಿಕಲ ಅಭ್ಯರ್ಥಿಗಳಿಗೆ ಸಂಬಂಧಿಸಿದ ಮೀಸಲಾತಿ
  • ಶ್ರವಣದೋಷ ಅಭ್ಯರ್ಥಿಗಳಿಗೆ :  2 ಹುದ್ದೆಗಳು
  • ಮೂಳೆಗೆ ಸಂಬಂಧಿಸಿದ ಅಂಗವಿಕಲ ಅಭ್ಯರ್ಥಿಗಳಿಗೆ :  2 ಹುದ್ದೆಗಳು
  • ದೃಷ್ಟಿ ದೋಷ ಅಭ್ಯರ್ಥಿಗಳಿಗೆ :  1 ಹುದ್ದೆ
  • ಬೌದ್ಧಿಕ ಅಂಗವಿಕಲತೆ ಅಭ್ಯರ್ಥಿಗಳಿಗೆ :  1 ಹುದ್ದೆ

Union Bank Recruitment ನ ಶೈಕ್ಷಣಿಕ ಅರ್ಹತೆ

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ಪದವಿಯನ್ನು ಕಡ್ಡಾಯವಾಗಿ ಪಡೆದಿರಬೇಕಾಗುತ್ತದೆ
  • ಪದವಿಯ ಫಲಿತಾಂಶವು 01-04-2026 ರ ಒಳಗೆ ಪ್ರಕಟಗೊಂಡಿರಬೇಕು
  • ಅಭ್ಯರ್ಥಿಗಳು ಪಡೆದಿರುವ ಪದವಿ ಪೂರ್ಣಗೊಂಡು ನಾಲ್ಕು ವರ್ಷ ಮೀರಿರಬಾರದು (ಅಂದರೆ 01-04-2022 ರ ನಂತರ ಪದವಿಯನ್ನು ಪಡೆದವರು ಮಾತ್ರ ಅರ್ಹರಾಗಿರುತ್ತಾರೆ. ನಿಗದಿಪಡಿಸಿರುವ ದಿನಾಂಕದ ಹಿಂದೆ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ)

 

Union Bank Recruitment ಗೆ ಸಂಬಂಧಿಸಿದ ವಯೋಮಿತಿ ವಿವರ

ಯೂನಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 28 ವರ್ಷಗಳನ್ನು ಮೀರಿರಬಾರದು

ವಯೋಮಿತಿ ಸಡಿಲಿಕೆ
  • ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ : 5 ವರ್ಷಗಳು
  • ಇತರೆ ಹಿಂದುಳಿದ ವರ್ಗಗಳು (OBC) ಅಭ್ಯರ್ಥಿಗಳಿಗೆ :  3 ವರ್ಷಗಳು
  • ಅಂಗವಿಕಲ (PWD) ಅಭ್ಯರ್ಥಿಗಳಿಗೆ :  10 ವರ್ಷಗಳು

 

Union Bank Recruitment ನ ವೇತನದ  ವಿವರ

ಪ್ರದೇಶ ವೇತನ (ಮಾಸಿಕ)
ಮೆಟ್ರೋ ಪ್ರದೇಶ 20,000/- ರೂಗಳು
ನಗರ ಪ್ರದೇಶ 18,000/- ರೂಗಳು
ಗ್ರಾಮೀಣ ಪ್ರದೇಶ 15,000/- ರೂಗಳು

 

ಅರ್ಜಿ ಶುಲ್ಕ

ಸಾಮಾನ್ಯ (General) ಮತ್ತು ಇತರೆ ಹಿಂದುಳಿದ ವರ್ಗಗಳು (OBC) ಅಭ್ಯರ್ಥಿಗಳಿಗೆ :  944/- ರೂಗಳು
ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡದ (ST) ಹಾಗೂ ಅಂಗವಿಕಲ (PWD)  ಅಭ್ಯರ್ಥಿಗಳಿಗೆ :  236/- ರೂಗಳು

ಯೂನಿಯನ್ ಬ್ಯಾಂಕ್ ನೇಮಕಾತಿಯ (Union Bank Recruitment) ಆಯ್ಕೆ ಪ್ರಕ್ರಿಯೆ ಬಗೆಗಿನ ಸಂಪೂರ್ಣ ವಿವರ

1. ಮೊದಲನೇ ಹಂತ : ಆನ್ಲೈನ್ ಪರೀಕ್ಷೆ
ಈ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳನ್ನು ಕೇಳಲಾಗುವುದು ಪ್ರತಿ ಪ್ರಶ್ನೆಗೆ ಒಂದು ಅಂಕವಿದ್ದು 100 ಪ್ರಶ್ನೆಗಳಿಗೆ 100 ಅಂಕಗಳ ಪರೀಕ್ಷೆ ಇರುತ್ತದೆ ಈ ಪರೀಕ್ಷೆಗೆ 60 ನಿಮಿಷಗಳ ಕಾಲಾವಕಾಶವಿದ್ದು ಜನರಲ್ ಅವೇರ್ನೆಸ್ ಬ್ಯಾಂಕಿಂಗ್ ಇಂಗ್ಲಿಷ್ ಭಾಷೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಕಂಪ್ಯೂಟರ್ ನಾಲೆಡ್ಜ್ ಬಗೆಗಿನ ಪ್ರಶ್ನೆಗಳನ್ನು ಕೇಳಲಾಗುವುದು

ಪ್ರಮುಖ ಈ ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕಗಳು ಇರುವುದಿಲ್ಲ

2. ಎರಡನೇ ಹಂತ : ಸ್ಥಳೀಯ ಭಾಷಾ ಪರೀಕ್ಷೆ
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿರುತ್ತದೆ ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಪರೀಕ್ಷೆ ಬರೆದಿದ್ದರೆ ವಿನಾಯಿತಿ ದೊರೆಯುತ್ತದೆ

3. ಮೂರನೇ ಹಂತ : ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂದು ಪರೀಕ್ಷಿಸಲು ಹಾಗೂ ಅಂಗವಿಕಲ ವರ್ಗದಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಈ ವೈದ್ಯಕೀಯ ಪರೀಕ್ಷೆಯ ಮೂಲಕ ಅರ್ಹತೆ ಪರಿಶೀಲನೆ ಮಾಡಲಾಗುವುದು

4. ನಾಲ್ಕನೇ ಹಂತ : ಮೆರಿಟ್ ಪಟ್ಟಿ ಪ್ರಕಟ
ಅಭ್ಯರ್ಥಿಗಳು ತಾವು ಬರೆದಿರುವ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು

5. ಐದನೇ ಹಂತ : ದಾಖಲೆ ಪರಿಶೀಲನೆ
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ವೈಯಕ್ತಿಕ ಗುರುತಿನ ದಾಖಲೆಗಳಾದ ಆಧಾರ್ ಕಾರ್ಡ್ ಹಾಗೂ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಶೈಕ್ಷಣಿಕ ದಾಖಲೆಗಳು ಅನುಭವ ಪ್ರಮಾಣ ಪತ್ರಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಂಗವಿಕಲತೆಗೆ ಸಂಬಂಧಿಸಿದ ಪ್ರಮಾಣ ಪತ್ರ ಹಾಗೂ ಇನ್ನಿತರ ಗುರುತಿನ ಪ್ರಮಾಣ ಪತ್ರಗಳನ್ನು ದಾಖಲೆ ಪರಿಶೀಲನೆ ಮಾಡಲಾಗುತ್ತದೆ

ಒಪ್ಪಂದ ಮತ್ತು ತರಬೇತಿ ಪ್ರಕ್ರಿಯೆ

ಯೂನಿಯನ್ ಬ್ಯಾಂಕ್ ನೇಮಕಾತಿ ಯು ಒಂದು ವರ್ಷದ ಅಪ್ರೆಂಟೈಸ್‌ ಶಿಪ್ ಅವಧಿಗೆ ಒಳಪಟ್ಟಿದ್ದು ತರಬೇತಿ ನೀಡಲಾಗುತ್ತದೆ

ಈ Union Bank Recruitment ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೇ ಹಂತ : NATS / NAPS ನೊಂದಣಿ
ಯೂನಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಕಡ್ಡಾಯವಾಗಿ ಅಪ್ರೆಂಟಿಸ್ಶಿಪ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಆಗಬೇಕು

ಎರಡನೇ ಹಂತ : ಅಧಿಕೃತ ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯೂನಿಯನ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ನಂತರ ನ್ಯೂ ರಿಜಿಸ್ಟ್ರೇಷನ್ ಎಂಬಲ್ಲಿ ಕ್ಲಿಕ್ ಮಾಡಬೇಕು

ಮೂರನೇ ಹಂತ : ಅರ್ಜಿ ಭರ್ತಿ
ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳಾದ ಹೆಸರು ಹುಟ್ಟಿದ ದಿನಾಂಕ ವಿಳಾಸ ಮೊಬೈಲ್ ನಂಬರ್ ಇಮೇಲ್ ಐಡಿ ಮುಂತಾದ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು
ನಂತರ ಶೈಕ್ಷಣಿಕ ದಾಖಲೆಗಳಾದ ಅಂಕಪಟ್ಟಿ ಮತ್ತು ಅನುಭವ ಪ್ರಮಾಣ ಪತ್ರಗಳು ಅನ್ವಯಿಸಿದಲ್ಲಿ ಹಾಗೂ ಅಂಗವಿಕಲತೆಗೆ ಸಂಬಂಧಿಸಿದ ಪ್ರಮಾಣ ಪತ್ರ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ

ನಾಲ್ಕನೇ ಹಂತ :  ಭಾವಚಿತ್ರ ಹಾಗೂ ಸಹಿಯ ಅಪ್ಲೋಡ್
ಅಭ್ಯರ್ಥಿಗಳು ಕಡ್ಡಾಯವಾಗಿ ಬಿಜೆಪಿ ನಲ್ಲಿ ಫೋಟೋ ಹಾಗೂ ಸಹಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಬೇರೆ ಯಾವುದೇ ರೀತಿಯ ಫಾರ್ಮ್ಯಾಟ್ ಅನ್ನು ಅನುಮತಿಸಲಾಗುವುದಿಲ್ಲ

ಐದನೇ ಹಂತ : ದಾಖಲೆ ಪ್ರಮಾಣ ಪತ್ರಗಳ ಅಪ್ಲೋಡ್ ಮಾಡುವುದು
ಅಭ್ಯರ್ಥಿಗಳು ಆಧಾರ್ ಕಾರ್ಡ್ ಪಾನ್ ಕಾರ್ಡ್ ಅಂಕಪಟ್ಟಿಗಳು ಜಾತಿ ಪ್ರಮಾಣ ಪತ್ರ ಅನುಭವ ಪ್ರಮಾಣ ಪತ್ರ ಹಾಗೂ ಅಂಗವಿಕಲತೆ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ

 ಆರನೇ ಹಂತ :  ಶುಲ್ಕ ಪಾವತಿ
ಅಭ್ಯರ್ಥಿಗಳು ಯುಪಿಐ ಡೆಬಿಟ್ ಕಾರ್ಡ್ ಇಂತಹ ಪೇಮೆಂಟ್ ಗೆಟವಿಗಳನ್ನು ಬಳಸುವುದರ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿರುತ್ತದೆ

ಏಳನೇ ಹಂತ : ಅರ್ಜಿ ಸಲ್ಲಿಸುವಿಕೆ
ಅಭ್ಯರ್ಥಿಗಳು ತಾವು ನಮೂದಿಸಿರುವ ಎಲ್ಲಾ ಮಾಹಿತಿಯನ್ನು ಹಾಗೂ ಅಪ್ಲೋಡ್ ಮಾಡಲಾಗಿರುವ ಎಲ್ಲ ದಾಖಲಾತಿಗಳನ್ನು ಒಂದಲ್ಲ ಎರಡು ಬಾರಿ ಪರಿಶೀಲಿಸಿ ರಿವ್ಯೂ ನೋಡಿಕೊಂಡು ನಂತರ ಸಬ್ಮಿಟ್ ಮಾಡಬೇಕಾಗುತ್ತದೆ ಸಬ್ಮಿಟ್ ಮಾಡಿದ ನಂತರ ಪರದೆ ಮೇಲೆ ಬರುವ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದು ಇಟ್ಟುಕೊಂಡು ಅರ್ಜಿ ನೋಂದಣಿ ಸಂಖ್ಯೆಯನ್ನು ಹುಷಾರಾಗಿ ಇಟ್ಟುಕೊಳ್ಳಬೇಕಾಗುತ್ತದೆ ಭವಿಷ್ಯದಲ್ಲಿ ಏನು ನೊಂದಣಿ ಸಂಖ್ಯೆಯ ಪಾತ್ರವು ಪ್ರಮುಖವಾಗಿರುತ್ತದೆ ನೇಮಕಾತಿಯ ಯಾವುದೇ ವೈಯಕ್ತಿಕ ಗುರುತು ಈ ನೋಂದಣಿ ಸಂಖ್ಯೆ ಇಂದಲೇ ಆಗುತ್ತದೆ

Union Bank Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

  • Union Bank Recruitment ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : 29-04-2026
  • ಆನ್ಲೈನಲ್ಲಿ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 19-05-2026
  • Union Bank Recruitment ನ ನಿರೀಕ್ಷಿತ ಪರೀಕ್ಷೆ ದಿನಾಂಕ :  ಮೇ ಅಥವಾ ಜೂನ್ ತಿಂಗಳು

ಈ Union Bank Recruitment ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಹೈಲೈಟ್ಸ್ ಗಳು

  • ಭಾರತದ ಅತ್ಯಂತ 1865 ಹುದ್ದೆಗಳಿದ್ದು ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಅವಕಾಶವಾಗಿದೆ
  • ಯಾವುದೇ ಪದವಿಯನ್ನು ಪಡೆದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹತೆಯನ್ನು ಹೊಂದಿರುತ್ತಾರೆ
  • ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕಗಳು ಇಲ್ಲದಿರುವುದರಿಂದ ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸುವುದು ಸುಲಭವಾಗುತ್ತದೆ
  • 20 ಸಾವಿರ ರೂಗಳವರೆಗೆ ಸ್ಟೇ ಫಂಡ್ ದೊರೆಯುತ್ತದೆ
  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ದೊರೆಯುತ್ತದೆ

 

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಪ್ಪರೆಂಟೈಸ್ ನೇಮಕಾತಿ ಮೂಲಕ 1865 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ ಆದುದರಿಂದ ಇದು ಪದವಿಯನ್ನು ಪಡೆದಿರುವವರಿಗೆ ಉತ್ತಮ ಅವಕಾಶವಾಗಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದು ಹಾಗೂ ಭವಿಷ್ಯ ಕಟ್ಟಿಕೊಳ್ಳಲು ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಆರಂಭವಾಗಬಹುದು ವಿಶೇಷವಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ 131 ಹುದ್ದೆಗಳನ್ನು ಕಾಯ್ದಿರಿಸಿರುವುದರಿಂದ ಸ್ಥಳೀಯ ಭಾಷೆಯ ಪ್ರಯೋಜನವನ್ನು ಪಡೆದು ಈ ಹುದ್ದೆಗಳನ್ನು ಪಡೆಯಬಹುದಾಗಿರುತ್ತದೆ.

ಆದುದರಿಂದ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ನೀವು ಅರ್ಹರಾಗಿದ್ದರೆ ಹಿಂದೆ ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕದಂದು ಸರ್ವರ ಸಮಸ್ಯೆ ಎದುರಾಗಬಹುದಾಗಿರುವುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ

 

Read More: Jobs

BPCL Recruitment 2026, Big Opportunity: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಬೃಹತ್‌ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

KSLSA Recruitment 2026, Big Opportunity: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ

Infosys Recruitment 2026, Big Opportunity: 20000 ಫ್ರೆಶರ್‌ ಅಭ್ಯರ್ಥಿಗಳ ನೇಮಕಾತಿ,, ಐಟಿ ಕ್ಷೇತ್ರದಲ್ಲಿ ಮಹತ್ತರ ನೇಮಕಾತಿ

BSNL Recruitment 2026, Big Opportunity: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನೀ ಹುದ್ದೆಗಳು, ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.

Leave a Comment