ವಸುಧಾಮೃತ ಕಾರ್ಯಕ್ರಮವು (Vasudhamruta Program) ಕರ್ನಾಟಕ ಸರ್ಕಾರದ 2026 22ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಪ್ರಮುಖ ಅಂಶವಾಗಿದೆ ಇದರ ಉದ್ದೇಶ ಏನೆಂದರೆ ರಾಜ್ಯದಲ್ಲಿನ ಕೃಷಿ ಪದ್ಧತಿಯನ್ನು ಅಭಿವೃದ್ಧಿಪಡಿಸಿ ಸುಸ್ಥಿರತೆಯನ್ನು ಸಾಧಿಸಿ ಪರಿಸರ ಸಮತೋಲನವನ್ನು ಕಾಪಾಡುವ ಗುರಿಯಾಗಿದೆ ಅತಿಯಾದ ರಾಸಾಯನಿಕ ಗೊಬ್ಬರದ ಉಪಯೋಗದಿಂದ ಮಣ್ಣಿನ ಆರೋಗ್ಯವು ಹಾಳಾಗಿದ್ದು ಈ ಕಾರ್ಯಕ್ರಮದ ಮೂಲಕ ಮಣ್ಣಿನ ಫಲವತ್ತತೆ ಹಾಗೂ ಗುಣಮಟ್ಟವನ್ನು ಮರು ಸ್ಥಾಪಿಸಲು ದೀರ್ಘಾವಧಿಯಲ್ಲಿ ಕೃಷಿ ಉತ್ಪಾದಕ ಮಟ್ಟವನ್ನು ಹೆಚ್ಚಿಸಿ ಖಚಿತಪಡಿಸಿ ಮತ್ತು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರೈತರ ಇಳುವಳಿಯ ಗುಣಮಟ್ಟ ಹಾಗೂ ರಾಸಾಯನಿಕ ಗೊಬ್ಬರಗಳ ಕಡಿಮೆ ಬಳಕೆಯನ್ನು ಪ್ರಯತ್ನಿಸುತ್ತದೆ.
ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ : ಕರ್ನಾಟಕ ರಾಜ್ಯ ಕೃಷಿ ಇಲಾಖೆ
ವಸುಧಾಮೃತ ಪದದ ಅರ್ಥ ಏನು?
ವಸುಧಾಮೃತ ಪದವು ಮೊದಲನೆಯದಾಗಿ ಪರಿಸರಸ್ನೇಹಿ ದೃಷ್ಟಿಕೋನವನ್ನು ಹೊಂದಿರುವಂತಹ ಹಾಗೂ ಕೃಷಿ ಪದ್ಧತಿಯನ್ನು ಸುಸ್ಥಿರಗೊಳಿಸುವ ಮತ್ತು ಉತ್ತೇಜಿಸುವ ಅರ್ಥವನ್ನು ಹೊಂದಿದೆ ಇದರ ಪ್ರಮುಖ ಉದ್ದೇಶವೇನೆಂದರೆ ಮಣ್ಣಿನ ಆರೋಗ್ಯವನ್ನು ಸಂಪೂರ್ಣವಾಗಿ ಸುಧಾರಿಸುವುದು ಎಂದರ್ಥ ವಸುಧಾ ಎಂದರೆ ಭೂಮಿ ಅಮೃತ ಎಂದರೆ ಜೀವ ನೀಡುವ ಹಾಗೂ ಮರು ಜೀವ ನೀಡುವ ವಸ್ತು ಎಂದು ಅರ್ಥ
ವಸುಧಾಮೃತ ಯೋಜನೆಯ (Vasudhamruta Program) ಉದ್ದೇಶಗಳು.
Vasudhamruta Program ಮೂಲಕ ಕರ್ನಾಟಕ ಸರ್ಕಾರವು ಹಲವು ಉದ್ದೇಶಗಳನ್ನು ಸಾಧಿಸುವ ಪ್ರಮುಖ ಗುರಿಗಳನ್ನು ಹೊಂದಿದೆ ಆ ಉದ್ದೇಶಗಳು ಪರಿಸರ ಸ್ನೇಹಿ ಹಾಗೂ ಕೃಷಿ ಪದ್ಧತಿಯನ್ನು ಉತ್ತುಂಗಕ್ಕೆ ಕರೆದೊಯ್ಯುವ ಪ್ರಮುಖ ಗುರಿಗಳನ್ನು ಹೊಂದಿದೆ ಆ ಉದ್ದೇಶಗಳು ಈ ಕೆಳಕಂಡಂತಿವೆ
ಮಣ್ಣಿನಲ್ಲಿರುವ ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚಿಸುವುದು :
ಮಣ್ಣಿನ ಫಲವತ್ತತೆ ಮತ್ತು ತೇವಾಂಶದ ಮಟ್ಟವನ್ನು ಸುಧಾರಿಸಲು ಹಾಗೂ ಹೆಚ್ಚಿಸಲು ಮಣ್ಣಿನಲ್ಲಿ ಇಂಗಾಲದ ಅಂಶವನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸುವ ಗುರಿಯನ್ನು ಹೊಂದಿದೆ
ಮಣ್ಣಿನ ಸಂಪೂರ್ಣ ಆರೋಗ್ಯವನ್ನು ಸುಧಾರಿಸುವಿಕೆ :
ಮಣ್ಣಿನಲ್ಲಿರುವ ಭೌತಿಕ ಜೈವಿಕ ಹಾಗೂ ರಾಸಾಯನಿಕ ಗುಣಲಕ್ಷಣವನ್ನು ಈಗಾಗಲೇ ಹೊಂದಿದ್ದು ಅತಿಯಾದ ಭೂ ಬಳಕೆಯಿಂದ ಮಣ್ಣಿನ ಆರೋಗ್ಯವು ಕುಸಿತಿದೆ ವಸುಧಾಮೃತ ಯೋಜನೆಯ ಮೂಲಕ ಮಣ್ಣಿನ ಆರೋಗ್ಯವನ್ನು ಪುನರ್ ಸ್ಥಾಪಿಸುವ ಮಹದಾಸೆಯನ್ನು ಈ ಯೋಜನೆ ಹೊಂದಿದೆ
ಹವಾಮಾನದ ಹೊಂದಾಣಿಕೆ ಅಂಶ :
ಕೃಷಿಯನ್ನು ವರ್ಷದ ಮೂರು ಋತುಮಾನಗಳಲ್ಲಿ ನಡೆಸಬಹುದಾಗಿದೆ ಅದರಂತೆಯೇ ಹವಾಮಾನವು ಕೃಷಿ ಚಟುವಟಿಕೆಗಳನ್ನು ಅಲ್ಪ ಮಟ್ಟದಲ್ಲಿ ನಿರ್ಧರಿಸುವುದರಿಂದ ಕೃಷಿಯಲ್ಲಿ ಹೆಚ್ಚು ಸ್ಥಿತಿಸ್ಥಾಪಕ ಮತ್ತು ಸುಸ್ಥಿರವಾಗಿ ಇರಿಸುವ ಮೂಲಕ ಹವಾಮಾನದ ವೈಪರೀತ್ಯಗಳನ್ನು ಮತ್ತು ಅವುಗಳ ಕೃಷಿಯ ಮೇಲಿನ ಪರಿಣಾಮವನ್ನು ವಿರುದ್ಧ ದಿಕ್ಕಿನಲ್ಲಿ ಬಲಪಡಿಸುವುದು ವಸುಧಾಮೃತ ಯೋಜನೆಯ ಗುರಿಯಾಗಿದೆ
ಪರಿಸರ ಸ್ನೇಹಿ ಕೃಷಿಯ ಉತ್ತೇಜನ :
ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಈಗಾಗಲೇ ಮಣ್ಣಿನ ಆರೋಗ್ಯವು ಹಾಳಾಗಿದ್ದು ರಾಸಾಯನಿಕಗಳ ಸಿಂಪಡಣೆ ಮತ್ತು ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ನೈಸರ್ಗಿಕ ಗೊಬ್ಬರಗಳ ಹಾಗೂ ಸಾವಯುವ ಗೊಬ್ಬರಗಳ ಒಳಹರಿವನ್ನು ಹೆಚ್ಚಿಸುವುದು ಆಗಿದೆ
ಈ Vasudhamruta Program ನ ಪ್ರಮುಖ ಅಂಶಗಳು
ಮಣ್ಣಿನ ಆರೋಗ್ಯ ಹಾಗೂ ನೈಸರ್ಗಿಕವಾಗಿ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ಪುನರ್ ಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಲು ವಸುಧಾಮೃತ ಕಾರ್ಯಕ್ರಮ ಹಲವು ರೀತಿಯಲ್ಲಿ ಕಾರ್ಯತಂತ್ರ ರೂಪಿಸಿ ಕಾರ್ಯನಿರ್ವಹಿಸುವ ಆಧಾರವನ್ನು ಹೊಂದಿದೆ ಅವುಗಳೆಂದರೆ
ಮಣ್ಣಿನ ಪೋಷಕಾಂಶ ಮಟ್ಟದ ನಿರ್ವಹಣೆ :
Vasudhamruta Program ಮಣ್ಣಿನ ರಚನೆ ಪ್ರಕ್ರಿಯೆ ಮತ್ತು ಅಗತ್ಯ ಪೋಷಕಾಂಶಗಳ ಲಭ್ಯತೆಗೆ ನಿರ್ಣಾಯಕವಾದ ಸಾವಯುವ ಇಂಗಾಲದ ಪ್ರಮಾಣದ ಸವಕಳಿ ಅಥವಾ ಕಡಿಮೆಗೊಳ್ಳುವ ಪ್ರಮಾಣವನ್ನು ಹೆಚ್ಚು ಗಮನ ಹರಿಸಲಿದೆ
ಜೈವಿಕ ಮತ್ತು ಪರಿಸರದ ಕಡೆಗೆ ಗಮನ :
ಮಣ್ಣಿನ ಜೈವಿಕ ಜೀವಿತ ಅವಧಿಯನ್ನು ಹೆಚ್ಚಿಸುವ ಸಲುವಾಗಿ ಜೈವಿಕ ಗೊಬ್ಬರಗಳು ಜೈವಿಕ ಕೀಟನಾಶಕಗಳು ಹಾಗೂ ಇನ್ನಿತರ ಪರಿಸರಕ್ಕೆ ಹಾನಿ ಮಾಡದಂತಹ ಗೊಬ್ಬರಗಳ ಬಳಕೆಯನ್ನು ಅನುಷ್ಠಾಪಿಸುವುದು ಹಾಗೂ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ
ಮೂರು ವರ್ಷಗಳ ಅನುಷ್ಠಾನ ಯೋಜನೆ ಪ್ರಕ್ರಿಯೆ :
ಮಣ್ಣು ಒಂದು ನೈಸರ್ಗಿಕ ಸಂಪನ್ಮೂಲ ಹಾಗೆಯೇ ಈ ಮಣ್ಣನ್ನು ಗುಣಮಟ್ಟ ಹಾಗೂ ಸುಧಾರಣೆಯನ್ನು ತರುವಲ್ಲಿ ದೀರ್ಘಾವಧಿ ಅವಶ್ಯಕತೆ ಇದೆ ಅದರಂತೆಯೇ ಈ ಸುಧಾರಣೆಗಳನ್ನು ಖಚಿತಪಡಿಸಲು ಕೇಂದ್ರೀಕೃತ ಉಪಕ್ರಮವನ್ನು ಜಾರಿಗೆ ತಂದಿದ್ದು ಮುಂದಿನ ಮೂರು ವರ್ಷಗಳಲ್ಲಿ ಈ ವಸುಧಾಮೃತ ಯೋಜನೆಯ ಅನುಷ್ಠಾನವನ್ನು ಸರ್ಕಾರ ವಹಿಸಿದೆ
Vasudhamruta Program ನ ಅನುಷ್ಠಾನಕ್ಕೆ ಅಗತ್ಯದ ತಂತ್ರಗಳು
ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ವಸುಧಾಮೃತ ಎಂಬ ಮಣ್ಣಿನ ಆರೋಗ್ಯವನ್ನು ಸುಧಾರಿಸುವ Vasudhamruta Program ಉಪಕ್ರಮವನ್ನು ಜಾರಿಗೆ ತಂದಿದ್ದು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಹಲವು ಕಾರ್ಯವಿಧಾನಗಳನ್ನು ರೂಪಿಸಿದ್ದು ಮುಂದಿನ ಮೂರು ವರ್ಷಗಳಲ್ಲಿ ಈ ಗುರಿಯನ್ನು ಸಾಧಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ
ಸುಧಾರಿತ ಹಾಗೂ ಆಧುನಿಕ ತಂತ್ರಜ್ಞಾನಗಳೊಂದಿಗೆ ಏಕೀಕರಣಗೊಳ್ಳುವಿಕೆ :
Vasudhamruta Program ಮಣ್ಣಿನಲ್ಲಿರುವ ಸಾವಯುವ ಇಂಗಾಲದ ಪ್ರಮಾಣವನ್ನು ಅಳೆಯಲು ಹಾಗೂ ಮೇಲ್ವಿಚಾರಣೆ ಮಾಡಲು ಮತ್ತು ಮಣ್ಣಿನ ಜೈವಿಕ ಗುಣಗಳು ಹಾಗೂ ಭೌತಿಕ ಗುಣಲಕ್ಷಣಗಳನ್ನು ಅಳೆಯಲು ಹಾಗೂ ನಿರ್ವಹಿಸಿ ನಿರ್ಣಯಿಸಲು ಎ ಐ ಆಧಾರಿತ ತಂತ್ರಜ್ಞಾನಗಳನ್ನು ರೂಡಿಸಿಕೊಂಡು ಬಳಸುತ್ತಿದೆ
ಉತ್ತಮ ಗುಣಮಟ್ಟದ ಕೃಷಿ ತಂತ್ರಗಳ ಪ್ರಚಾರ ಕೈಗೊಳ್ಳುವಿಕೆ :
ಉದಾಹರಣೆಗೆ ಭತ್ತ ಬೆಳೆಯುವಲ್ಲಿ ಪರ್ಯಾಯವಾಗಿ ತೇವಗೊಳಿಸುವಿಕೆ ಹಾಗೂ ಒಣಗಿಸುವ ಪ್ರಕ್ರಿಯೆ ರೂಢಿಯಲ್ಲಿದ್ದು ಅದರಂತೆ ಈ ಪ್ರಕ್ರಿಯೆಯಲ್ಲಿ ಪರ್ಯಾಯ ಕೃಷಿಯ ತಂತ್ರಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ ಈ ಪರ್ಯಾಯ ತಂತ್ರವು ನೀರಿನ ಬಳಕೆಯನ್ನು ಕಡಿಮೆ ಮಾಡಿ ಇದರ ಜೊತೆಯಲ್ಲಿ ಪರಿಸರಕ್ಕೆ ದುಷ್ಪರಿಣಾಮ ಬೀರುವ ಮಿಥೇನ್ ಅನಿಲದ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ
ಪೋಷಕ ಮೂಲ ಸೌಕರ್ಯಗಳು ಅಥವಾ ಮಿಲ್ಲೆಟ್ ಹಬ್ ಗಳು :
ಪ್ರಸ್ತುತದಲ್ಲಿ ಅಸ್ತಿತ್ವದಲ್ಲಿರುವ ಮಿಲ್ಲೆಟ್ ಹಬ್ಗಳನ್ನು ಬಲಪಡಿಸುವ ಆಯವ್ಯಯವು ಅದರ ಜೊತೆಯಲ್ಲಿ ಮಣ್ಣಿನ ಆರೋಗ್ಯಕ್ಕೆ ಉತ್ತಮ ರೀತಿಯ ಬೆಳೆಗಳಾದ ರಾಗಿ ಹಾಗೂ ಇತರ ಉತ್ತಮ ಸಾವಯುವ ಉತ್ಪನ್ನಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮೂಲಕ ವಸುಧಾಮೃತ ಯೋಜನೆಗೆ ಬೆಂಬಲವನ್ನು ಸೂಚಿಸುವಂತಿದೆ
ಸಸ್ಯ ಸಂಜೀವಿನಿ ಕಾರ್ಯಕ್ರಮದ ಏಕೀಕರಣ :
Vasudhamruta Program ಜೊತೆಗೆ ಕರ್ನಾಟಕ ಸರ್ಕಾರವು ಸಸ್ಯ ಸಂಜೀವಿನಿ ಎಂಬ ಇನ್ನೊಂದು ಪ್ರಕ್ರಮವನ್ನು ಪ್ರಾರಂಭಿಸಲಿದ್ದು ಈ ಉಪಕ್ರಮವು ಬೆಳೆಯ ಮೇಲೆ ಆಗಬಹುದಾದ ಆರಂಭಿಕ ಕೀಟದ ದಾಳಿ ಅದರ ಗುರುತಿಸುವಿಕೆ ಮತ್ತು ಪರಿಸರ ಸ್ನೇಹಿ ನಿಯಂತ್ರಣ ಕ್ರಮಗಳನ್ನು ರೈತರಿಗೆ ನೀಡುತ್ತದೆ
Vasudhamruta Program ನ ಮಹತ್ವ
ವಸುಧಾಮೃತ ಉಪಕ್ರಮವು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಹಲವು ಮೈಲಿಗಳನ್ನು ಸಾಧಿಸಬಹುದಾಗಿದೆ ಅದರಲ್ಲಿ ಪ್ರಮುಖವಾದವು ಈ ಕೆಳಕಂಡಂತಿವೆ
ಸುಸ್ಥಿರ ಕೃಷಿ ಸಾಧನೆ :
ವಸುಧಾಮೃತ ಯೋಜನೆಯು ಕೇವಲ ಮಣ್ಣಿನ ಅನಾರೋಗ್ಯದಿಂದ ಬೆಳೆಗಳ ಮೇಲಾಗುವ ರೋಗಗಳು ಮತ್ತು ಅದರ ಲಕ್ಷಣಗಳನ್ನು ಗುರುತಿಸಿ ನಿಭಾಯಿಸುವುದಲ್ಲದೆ ಕೃಷಿ ಉತ್ಪಾದಕತೆ ಕಡಿಮೆಯಾಗಲು ಮೂಲ ಕಾರಣವನ್ನು ಹುಡುಕಿ, ಮಣ್ಣಿನ ಆರೋಗ್ಯವನ್ನು ಪರೀಕ್ಷಿಸಿ, ಆರೋಗ್ಯ ಹೆಚ್ಚಿಸಿ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ
ಪರಿಸರ ಸಂರಕ್ಷಣೆಯ ಉದ್ದೇಶ :
ವಸುಧಾಮೃತ ಉಪಕ್ರಮವು ಕೃಷಿ ಚಟುವಟಿಕೆಗಳಲ್ಲಿ ಪರಿಸರಸ್ನೇಹಿ ಪದ್ಧತಿಗಳನ್ನು ಅಳವಡಿಸಿ ನಿರ್ವಹಿಸಿ ಪ್ರೋತ್ಸಾಹಿಸುವ ಮೂಲಕ ಜೀವವೈವಿಧ್ಯತೆಯನ್ನು ಉತ್ತೇಜಿಸಿ ಹಸಿರು ಆರ್ಥಿಕ ತತ್ವಗಳೊಂದಿಗೆ ನೇರವಾಗಿ ಸಂಬಂಧವನ್ನು ಕಲ್ಪಿಸುತ್ತದೆ
ಕೃಷಿ ಚಟುವಟಿಕೆಗಳ ಉತ್ಪಾದನಾ ವೆಚ್ಚ ಕಡಿಮೆಗೊಳಿಸುವಿಕೆ :
ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಪ್ರಮಾಣದಲ್ಲಿ ಕೃಷಿ ತಂತ್ರಗಳನ್ನು ಉತ್ತೇಜಿಸುವ ಮೂಲಕ ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಮೇಲೆ ಹೆಚ್ಚು ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡುವ ರೈತರಿಗೆ ಈ ಉತ್ಪಾದನಾ ವೆಚ್ಚವು ಕಡಿಮೆಯಾಗಲಿದ್ದು ಅವರಿಗೆ ಆರ್ಥಿಕ ಅವರೆಯನ್ನು ಕಡಿಮೆ ಮಾಡುತ್ತದೆ
ಹವಾಮಾನ ಬದಲಾವಣೆಯ ತಗ್ಗಿಸುವಿಕೆಯ ಉದ್ದೇಶ :
ಮಣ್ಣಿನ ಆರೋಗ್ಯವು ಉತ್ತಮಗೊಂಡು ಸಾವಯುವ ಇಂಗಾಲದ ಪ್ರಮಾಣವು ಹೆಚ್ಚಾಗುವುದರಿಂದ ವಾತಾವರಣದಲ್ಲಿನ ಹಸಿರು ಮನೆ ಅನಿಲಗಳನ್ನು ಕಡಿಮೆ ಮಾಡಿ ಮಣ್ಣಿನ ಆರೋಗ್ಯವನ್ನು ಸುಧಾರಿಸಿ ಉತ್ತಮ ಇಳುವರಿಯನ್ನು ನೀಡುವಲ್ಲಿ ಈ ಉಪಕ್ರಮವು ಸಹಕರಿಸುತ್ತದೆ
ಒಟ್ಟಾರೆಯಾಗಿ ಹೇಳುವುದಾದರೆ Vasudhamruta Program ವು ಕರ್ನಾಟಕ ಸರ್ಕಾರದ ಒಂದು ಮುಂದಾಲೋಚನೆ ಎಂದೇ ಹೇಳಬಹುದು ಏಕೆಂದರೆ ರಾಜ್ಯದ ಕೃಷಿ ಉಪಕ್ರಮವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಕೃಷಿ ಉತ್ಪನ್ನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಎಲ್ಲರ ಕರ್ತವ್ಯವಾಗಿದೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಹಾಗೂ ಪರಿಸರಸ್ನೇಹಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಮಣ್ಣಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ಸಹ ನಮ್ಮ ಜವಾಬ್ದಾರಿಯಾಗಿದೆ ಆದುದರಿಂದ ಮುಂದಿನ ಮೂರು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಹಸಿರು ಆರೋಗ್ಯಕರ ಹಾಗೂ ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಮೂಲಕ ಲಾಭದಾಯಕ ಭವಿಷ್ಯವನ್ನು ನಾವು ಪಡೆಯಬಹುದಾಗಿರುತ್ತದೆ ಆದುದರಿಂದ ಜನರು ಈ Vasudhamruta Program ಉಪಕ್ರಮವನ್ನು ಆದಷ್ಟು ಬೇಗ ಅಳವಡಿಸಿಕೊಂಡು ಮಣ್ಣಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಬೇಕಾಗುತ್ತದೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
Read More : Agriculture Related Information
PM Kisan Yojana: Big Update: ಪಿ ಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಜಮಾವಣೆಯ ದಿನಾಂಕ ನಿಗಧಿ.