PMFBY ಯೋಜನೆ ಮೂಲಕ ನಿಮ್ಮ ಕೃಷಿ ಬೆಳೆಗಳಿಗೆ ವಿಮಾ ಸೌಲಭ್ಯ
ಭಾರತ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿಯಾಗಿದೆ. ದೇಶದ ದ್ವಿತೀಯ ಉತ್ಪಾದನಾ ವಲಯವಾದ ಕೃಷಿ ಕ್ಷೇತ್ರವು ದೇಶದ ಕೋಟ್ಯಂತರ ರೈತರು ತಮ್ಮ ಜೀವನೋಪಾಯಕ್ಕಾಗಿ ಆರಂಭಿಸಿರುವ ಮೂಲ ಕಸಬಾಗಿದೆ ಆದರೆ ಕೃಷಿಯು ಸಂಪೂರ್ಣವಾಗಿ ಪ್ರಕೃತಿಯ ಮೇಲೆ ಮತ್ತು ಸ್ವಾಭಾವಿಕ ಮಳೆಯ ಮೇಲೆ ಅವಲಂಬಿತ ಆಗಿರುವುದರಿಂದ ಪ್ರತಿ ಹಂಗಾಮಿನಲ್ಲಿಯೂ ಸಹ ರೈತರು ಅನೇಕ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ
ಕೆಲವೊಮ್ಮೆ ಸಮರ್ಪಕ ಮಳೆಯ ಕೊರತೆ ಉಂಟಾಗುತ್ತದೆ ಮತ್ತು ಕೆಲವೊಮ್ಮೆ ಅತಿಯಾದ ಮಳೆ ಉಂಟಾಗಿ ಪ್ರವಾಹ, ಚಂಡಮಾರುತ, ಗಾಳಿ, ಆಲಿಕಲ್ಲು ಮಳೆ ಮುಂತಾದವುಗಳ ಜೊತೆ ರೋಗಭಾದೆಗಳಿಂದ ಸಂಪೂರ್ಣವಾಗಿ ಬೆಳೆ ಹಾನಿಯಾಗುತ್ತವೆ ಇಂತಹ ಪರಿಸ್ಥಿತಿಯಲ್ಲಿ ರೈತರ ಆದಾಯ ಕೃಷಿಯುವುದರ ಜೊತೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂದರ್ಭಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ
ಈ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯ ಮೂಲಕ ರೈತರಿಗೆ ಕಡಿಮೆ ಪ್ರೀಮಿಯಂ ಪಾವತಿಸುವ ಮೂಲಕ ಬೆಳೆಗಳಿಗೆ ವಿಮಾ ಸೌಲಭ್ಯವನ್ನು ಮಾಡಿಸಿಕೊಳ್ಳಬಹುದಾಗಿದೆ ಪ್ರಕೃತಿ ವಿಕೋಪ ಅಥವಾ ಇತರೆ ಯಾವುದೇ ಮಾನ್ಯ ಕಾರಣಗಳಿಂದ ಬೆಳೆಯ ಪ್ರಮಾಣವು ನಷ್ಟವಾದರೆ ನಿಯಮನುಸಾರ ವಿಮಾ ಪರಿಹಾರವನ್ನು ಪಡೆಯಬಹುದಾಗಿರುತ್ತದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ
2026 27ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಸೇರಿಸಿದಂತೆ ಕರ್ನಾಟಕದಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಅರ್ಹ ರೈತರು ತಾವು ಬೆಳೆಯುತ್ತಿರುವ ಬೆಳೆಗಳಿಗೆ ನಿಗದಿತ ದಿನಾಂಕದೊಳಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ ಮೆಕ್ಕೆಜೋಳ, ಹತ್ತಿ, ತೊಗರಿ, ಸೋಜಾಬೀನ್, ಹೆಸರು ಕಾಳು,,,, ಉದ್ದಿನಕಾಳು, ಸೂರ್ಯಕಾಂತಿ ಮತ್ತು ಈರುಳ್ಳಿ ಮುಂತಾದ ಬೆಳೆಗಳು ಸೇರಿದಂತೆ ಪ್ರಮುಖ ಬೆಳೆಗಳಿಗೆ ಈ ಬಾರಿ ವಿಮಾ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಎಂದರೆ ಏನು
PMFBY ಎಂಬುದು ರೈತರ ಬೆಳೆಗಳಿಗೆ ವಿಮೆ ರಕ್ಷಣೆ ಒದಗಿಸುವ ಮಹತ್ವದ ಭಾರತ ಸರ್ಕಾರದ ಯೋಜನೆಯಾಗಿದೆ ಈ ಯೋಜನೆಯು 2016ರಲ್ಲಿ ಆರಂಭಗೊಂಡಿದ್ದು ಯೋಜನೆಯ ಮುಖ್ಯ ಉದ್ದೇಶವು ಬೆಳೆ ನಷ್ಟದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ರೈತರ ಆದಾಯವನ್ನು ರಕ್ಷಿಸುವುದು ಮತ್ತು ಪ್ರೋತ್ಸಾಹಿಸುವುದಾಗಿದೆ
ಈ ಯೋಜನೆ ಅಡಿಯಲ್ಲಿ ರೈತರು ಕಡಿಮೆ ಪ್ರಮಾಣದ ವಿಮೆಯ ಪ್ರೀಮಿಯಂ ಅನ್ನು ಪಾವತಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಳಿದ ಪ್ರೀಮಿಯಂ ಮೊತ್ತವನ್ನು ಭರಿಸುತ್ತವೆ ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಸಹ ಕಡಿಮೆ ವೆಚ್ಚಗಳಲ್ಲಿ ತಮ್ಮ ಬೆಳೆಗಳಿಗೆ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ
PMFBYಯೋಜನೆಯ ವಿಶೇಷತೆ ಏನೆಂದರೆ, ರೈತರಿಗೆ ಸಂಭವಿಸುವ ನಷ್ಟದ ಪ್ರಮಾಣವನ್ನು ಪರಿಶೀಲಿಸಿದ ನಂತರ ಬೆಳೆ ನಷ್ಟವಾಗಿರುವ ಅರ್ಹ ರೈತರಿಗೆ ಪರಿಹಾರದ ಮತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಇದರಿಂದ ಮಧ್ಯವರ್ತಿಗಳ ಮಧ್ಯಸ್ಥಿಕೆ ಕಡಿಮೆಯಾಗಿ ಹಾಗೂ ಹಣವು ಪಾರದರ್ಶಕವಾಗಿ ರೈತರಿಗೆ ನೇರವಾಗಿ ತಲುಪುತ್ತದೆ
2026 27 ರ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಏಕೆ ಮುಖ್ಯ
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯು ರೈತರಿಗೆ ಅತ್ಯಂತ ಪ್ರಮುಖವಾದ ಕೃಷಿ ಅವಧಿ ಯಾಗಿದೆ ಏಕೆಂದರೆ ಈ ಸಮಯದಲ್ಲಿ ರೈತರು ವಿವಿಧ ರೀತಿಯ ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ವಾಣಿಜ್ಯ ಬೆಳೆಗಳು ಹಾಗೂ ಎಣ್ಣೆ ಬೀಜಗಳನ್ನು ಬೆಳೆಯುತ್ತಾರೆ ಆದರೆ ಕಳೆದ ಎರಡು ಮೂರು ವರ್ಷಗಳಿಂದ ಹವಾಮಾನದಲ್ಲಿ ಹೆಚ್ಚಿನ ಪ್ರಮಾಣದ ಬದಲಾವಣೆಗಳು ಉಂಟಾಗುತ್ತಿರುವುದರಿಂದ ಹಾಗೂ ಅನಿರೀಕ್ಷಿತ ಬದಲಾವಣೆಗಳಿಂದ ಕೃಷಿ ಕ್ಷೇತ್ರವು ಹೆಚ್ಚು ಅಪಾಯಕ್ಕೆ ಒಳಗಾಗಿದೆ.
ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಿಂದ ಹೊಲಗಳು ನೀರು ತುಂಬಿ ಹೋದರೆ ಇನ್ನು ಕೆಲವು ಕಡೆ ಮಳೆ ಉಂಟಾಗಿ ಬೆಳೆಗಳು ಒಣಗುವ ಪರಿಸ್ಥಿತಿ ಬರುತ್ತದೆ ಇನ್ನೊಂದೆಡೆ ಕೀಟಗಳ ದಾಳಿ ಹಾಗೂ ವಿವಿಧ ರೀತಿಯ ರೋಗಗಳಿಂದ ಉತ್ಪಾದನೆಯು ಸಹ ಕುಂಠಿತವಾಗಬಹುದು ಒಂದೊಂದು ಸಂದರ್ಭದಲ್ಲಿ ಪೂರ್ಣವಾಗಿ ಹಾಳಾಗಬಹುದು ಇಂತಹ ಸಂದರ್ಭಗಳಲ್ಲಿ ರೈತರ ಪರಿಶ್ರಮ ಮತ್ತು ಹೂಡಿಕೆ ಎರಡಕ್ಕೂ ದೊಡ್ಡ ಹೊಡೆತ ಮತ್ತು ಸಮಸ್ಯೆ ಎದುರಾಗುತ್ತದೆ
ಆದುದರಿಂದ ಬೆಳೆ ವಿಮೆಯನ್ನು ಕೇವಲ ಒಂದು ಆಯ್ಕೆಯ ರೀತಿ ನೋಡದೆ ಕೃಷಿ ಭದ್ರತೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ ಬೆಳೆ ವಿಮೆ ಹೊಂದಿರುವ ರೈತರು ಬೆಳೆ ನಷ್ಟವಾದರೂ ಸಹ ಸಂಪೂರ್ಣ ಆರ್ಥಿಕ ಸಂಕಷ್ಟಕ್ಕೆ ಸಿಲುಕದೆ ಮುಂದಿನ ವರ್ಷ ಆರಂಭಕ್ಕೆ ಸಿದ್ದರಾಗಲು ಸಹಕಾರಿಯಾಗುತ್ತದೆ
ಈ PMFBY ಯೋಜನೆಯ ಪ್ರಮುಖ ಉದ್ದೇಶಗಳು
PMFBY ಯೋಜನೆ ರೈತರಿಗೆ ಹಲವು ರೀತಿಯ ರಕ್ಷಣೆಗಳನ್ನು ಒದಗಿಸುವುದರ ಜೊತೆಯಲ್ಲಿ ಆರ್ಥಿಕ ನೆರವನ್ನು ಸಹ ನೀಡುತ್ತದೆ ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ
- ರೈತರ ಕೃಷಿ ಆದಾಯವನ್ನು ಸ್ಥಿರವಾಗಿ ಮತ್ತು ಉತ್ತಮವಾಗಿರಿಸಲು ಸಹಾಯ ಮಾಡುವುದು
- ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ವೆಚ್ಚದಲ್ಲಿ ವಿಮಾ ಸೌಲಭ್ಯವನ್ನು ಒದಗಿಸುವುದು
- ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸೂಕ್ತ ಪ್ರಮಾಣದ ಆರ್ಥಿಕ ನೆರವನ್ನು ನೀಡುವುದು
- ಕೃಷಿ ಕ್ಷೇತ್ರದಲ್ಲಿ ವಿಶ್ವಾಸ ಹೆಚ್ಚಿಸಿ ರೈತರು ಹೊಸ ತಂತ್ರಜ್ಞಾನಗಳನ್ನು ಮತ್ತು ಆಧುನಿಕ ವಿಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು
- ಬೆಳೆ ಹಾನಿಗೊಳಗಾದ ನಂತರ ರೈತರಿಗೆ ಕೃಷಿಯನ್ನು ಮತ್ತೆ ಆರಂಭಿಸಲು ಆರ್ಥಿಕ ಬೆಂಬಲ ನೀಡುವುದು
- ಕೃಷಿ ಸಾಲ ಪಡೆದ ರೈತರು ಹಾಗೂ ಸ್ವಯಂ ಪ್ರೇರಿತವಾಗಿ ವಿಮೆ ಮಾಡಿಸಿಕೊಳ್ಳುವ ರೈತರಿಗೆ ಇತರ ರಕ್ಷಣೆಯನ್ನು ಒದಗಿಸುವುದು
- ಹವಾಮಾನ ವ್ಯಕ್ತಿಗಳಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವುದು
ಯಾವ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು
ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಅರ್ಹ ಬೆಳೆಗಳನ್ನು ಬೆಳೆಸುವ ರೈತರು ಈ ಯೋಜನೆಯಲ್ಲಿ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ ಸ್ವಂತ ಜಮೀನನ್ನು ಹೊಂದಿದ್ದು ಕೃಷಿ ಜಮೀನಿನಲ್ಲಿ ಕೃಷಿಯನ್ನು ಮಾಡುವ ರೈತರ ಜೊತೆಗೆ ನಿಯಮಾನುಸಾರ ಅರ್ಹರಾಗಿರುವ ಅಥವಾ ಕೆಲವು ಕೃಷಿಕರು ಸಹ ಸಂಬಂಧಿತ ದಾಖಲೆಗಳನ್ನು ಒದಗಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿರುತ್ತದೆ
ಅದೇ ರೀತಿ ಬೆಳೆ ಸಾಲ ಪಡೆದ ರೈತರು ಮತ್ತು ಸಾಲ ಪಡೆಯದ ರೈತರು ನಿಗದಿತ ಷರತ್ತುಗಳನ್ನು ಪೂರೈಸಿದರೆ ಈ ಯೋಜನೆ ಅಡಿಯಲ್ಲಿ ಭಾಗವಹಿಸಿ ವಿಮೆಯ ಸೌಲಭ್ಯದ ಪ್ರಯೋಜನವನ್ನು ಪಡೆಯಬಹುದಾಗಿರುತ್ತದೆ ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಅಥವಾ ಅಧಿಕೃತ ಸೇವಾ ಕೇಂದ್ರದಲ್ಲಿ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸುವುದು ಉತ್ತಮ
ರೈತರು ಬೆಳೆ ವಿಮೆಯನ್ನು ತಪ್ಪದೆ ಮಾಡಿಸಬೇಕೇ
ಕೃಷಿ ಕ್ಷೇತ್ರದ ಯಶಸ್ಸು ಕೇವಲ ಉತ್ತಮ ಇಳುವರಿ ಅಥವಾ ಬಿತ್ತನೆ ಬೀಜ ಅಥವಾ ರಸಗೊಬ್ಬರಗಳ ಮೇಲೆ ಅವಲಂಬಿತವಾಗಿರುವುದಿಲ್ಲ ಜೊತೆಯಲ್ಲಿ ಉತ್ತಮ ಪ್ರಮಾಣದ ಮಳೆ, ಅನುಕೂಲಕರ ಹವಾಮಾನದ ಅಂಶಗಳು, ಕೀಟಗಳ ನಿಯಂತ್ರಣ ಮತ್ತು ಸಮಯೋಚಿತ ನಿರ್ವಹಣೆ ಎಲ್ಲವೂ ಸಹ ಮುಖ್ಯವಾಗಿವೆ ಆದರೆ ಪ್ರಕೃತಿಯನ್ನು ಯಾರು ಸಹ ನಿಯಂತ್ರಿಸಲು ಸಾಧ್ಯವಿಲ್ಲ ಆದುದರಿಂದ ಯಾವುದೇ ಹಂಗಾಮಿನಲ್ಲಿ ಅನಿರೀಕ್ಷಿತ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ
ಬೆಳೆ ವಿಮೆಯನ್ನು ಮಾಡಿಸಿಕೊಂಡಿರುವ ರೈತರಿಗೆ ಇತರ ಬೇರೆ ರೀತಿ ನಷ್ಟಗಳು ಸಂಭವಿಸಿದ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ದೊರೆಯುತ್ತದೆ ಇದರಿಂದ ಕುಟುಂಬದ ಜೀವನೋಪಾಯ ಸಹಾಯಕವಾಗುವುದಲ್ಲದೆ ಮುಂದಿನ ಬೆಳೆ ಹಂಗಾಮಿಗೆ ಅಗತ್ಯ ಬಂಡವಾಳವನ್ನು ಸಹ ಹೊಂದಿಸಿಕೊಳ್ಳಬಹುದಾಗಿರುತ್ತದೆ
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳು ಹೆಚ್ಚುತ್ತಿರುವ ಕಾರಣದಿಂದ ರೈತರು ಬೆಳೆವಿಮೆ ಹೊಂದುವುದು ಅತ್ಯಗತ್ಯವಾಗಿದೆ ಆದ್ದರಿಂದ ಮುಂಗಾರು ಹಂಗಾಮಿನಲ್ಲಿ ರೈತರು ನಿಗದಿತ ಅವಧಿಯ ಒಳಗೆ ತಮ್ಮ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಪಡೆದುಕೊಳ್ಳುವುದು ಉತ್ತಮವಾಗಿದೆ
PMFBY ಯೋಜನೆಯ ಪ್ರಮುಖ ಪ್ರಯೋಜನಗಳು
PMFBY ಯೋಜನೆ ದೇಶದಲ್ಲಿರುವ ಕೃಷಿ ಅವಲಂಬಿತ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರ ಆದಾಯ ಸಂಪೂರ್ಣವಾಗಿ ಕಡಿಮೆಯಾಗದಂತೆ ತಡೆಯುವುದು ಈ ಯೋಜನೆಯ ಉದ್ದೇಶವಾಗಿದೆ
ಪ್ರಕೃತಿ ವಿಕೋಪಗಳಿಂದ ಆರ್ಥಿಕ ರಕ್ಷಣೆ
ಕೃಷಿಯಲ್ಲಿ ಪ್ರಕೃತಿಯ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಬರ, ಚಂಡಮಾರುತ ಗಾಳಿ, ಆಲಿಕಲ್ಲು ಮಳೆ, ಮಿಂಚು ಮುಂತಾದ ಇತರ ಪ್ರಕೃತಿ ವಿಕೋಪಗಳಿಂದ ಬೆಳೆಗಳು ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಇಂತಹ ಸಂದರ್ಭಗಳಲ್ಲಿ ಬೆಳೆವಿಮೆ ಮಾಡಿಸಿಕೊಂಡಿರುವ ರೈತರಿಗೆ ನಷ್ಟದ ಮೌಲ್ಯಮಾಪನ ಮಾಡುವ ಮೂಲಕ ಪರಿಹಾರವನ್ನು ನೀಡಲಾಗುತ್ತದೆ ಇದರಿಂದ ರೈತರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಗಳನ್ನು ತಡೆಯಬಹುದು
ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ರಕ್ಷಣೆ
PMFBYಯೋಜನೆಯ ಪ್ರಮುಖ ವೈಶಿಷ್ಟ್ಯ ಎಂದರೆ ಕಡಿಮೆ ಮೊತ್ತದ ಪ್ರೀಮಿಯಂ ಅನ್ನು ಪಾವತಿಸಿ ಹೆಚ್ಚಿನ ಮೊತ್ತದ ಬೆಳೆ ವಿಮೆ ಪಡೆಯಲು ಸಾಧ್ಯವಾಗುವುದು
ವಿಮೆಯ ಪ್ರೀಮಿಯಂನ ಒಟ್ಟು ವೆಚ್ಚದ ಹೆಚ್ಚಿನ ಭಾಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾವತಿ ಮಾಡುತ್ತವೆ ಇದರಿಂದ ರೈತರ ಅಲ್ಪ ಮೊತ್ತದ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಬೆಳೆಗಳಿಗೆ ಸಮರ್ಪಕ ರೀತಿಯಲ್ಲಿ ರಕ್ಷಣೆಯನ್ನು ನಿಮ್ಮ ಸೌಲಭ್ಯದ ಮೂಲಕ ಪಡೆಯಬಹುದಾಗಿರುತ್ತದೆ
ರೈತರ ಆದಾಯಕ್ಕೆ ಸ್ಥಿರತೆ
ಒಂದು ಹಂಗಾಮಿನಲ್ಲಿ ಬೆಳೆಯುವ ಸಂಪೂರ್ಣವಾಗಿ ಹಾನಿಯಾದರೆ, ರೈತರ ಕುಟುಂಬದ ಆದಾಯದ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ ಅಂತಹ ಸಂದರ್ಭದಲ್ಲಿ ದೊರೆಯುವುದರಿಂದ ರೈತರು ತಮ್ಮ ಕುಟುಂಬದ ಕೃಷಿ ಸಾಲದ ಕಂತುಗಳು ಖರ್ಚು ಮತ್ತು ಇತರ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಬಹುದು ಇದರಿಂದ ರೈತರಲ್ಲಿ ಸ್ಥಿರತೆ ಕಾಣಬಹುದು
ಪರಿಹಾರ ಧನ ನೇರವಾಗಿ ರೈತರ ಖಾತೆಗೆ ವರ್ಗಾವಣೆ
ಈ PMFBY ಯೋಜನೆಯ ಪ್ರಮುಖ ಪ್ರಯೋಜನವೆಂದರೆ ವಿಮಾ ಪರಿಹಾರದ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ ಇದರಿಂದ ಈ ಕೆಳಕಂಡ ಅಂಶಗಳ ಪ್ರಯೋಜನವನ್ನು ಪಡೆಯಬಹುದಾಗಿರುತ್ತದೆ
- ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುತ್ತದೆ
- ಹಣವು ತ್ವರಿತವಾಗಿ ರೈತರಿಗೆ ತಲುಪುತ್ತದೆ
- ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಳವಾಗುತ್ತದೆ
- ಯಾವುದೇ ರೀತಿಯ ವಂಚನೆಗಳು ನಡೆಯುವುದಿಲ್ಲ
ಮುಂದಿನ ಕೃಷಿ ಆರಂಭಕ್ಕೆ ಪ್ರೋತ್ಸಾಹ
ಬೆಳೆ ಹಾನಿಯಾದ ನಂತರ ಅನೇಕ ಪ್ರಮಾಣ ದೊರೆತರೂ ಮುಂದಿನ ಹಂಗಾಮಿನಲ್ಲಿ ಕೃಷಿ ಮಾಡಲು ಹಿಂಜರಿಯುತ್ತಾರೆ ಏಕೆಂದರೆ ಈಗಾಗಲೇ ಬೆಳೆ ನಷ್ಟವಾಗಿದ್ದರೆ ಮುಂದೆ ಅದೇ ರೀತಿ ಆಗಬಹುದು ಎಂಬ ನಿರ್ಧಾರಕ್ಕೆ ಬರುತ್ತಾರೆ ಆದರೆ ನಿಮ್ಮ ಪರಿಹಾರ ದೊರೆಯುವುದರಿಂದ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಧೈರ್ಯವಾಗಿರಬಹುದು ಅವುಗಳೆಂದರೆ
- ಹೊಸ ಬಿತ್ತನೆ ಬೀಜಗಳನ್ನು ಖರೀದಿಸಬಹುದು
- ರಸಗೊಬ್ಬರಗಳನ್ನು ಖರೀದಿ ಮಾಡಬಹುದು
- ಕೃಷಿ ಚಟುವಟಿಕೆಗಳನ್ನು ಧೈರ್ಯದಿಂದ ಪುನರ್ ಆರಂಭಿಸಬಹುದು
- ಮುಂದಿನ ಬೆಳೆ ಹಂಗಾಮಿಗೆ ರೈತರು ಆತ್ಮವಿಶ್ವಾಸದಿಂದ ಸಿದ್ದರಾಗಬಹುದು
ಬೆಳೆ ವಿಮೆ ರೈತರಿಗೆ ಏಕೆ ಅತ್ಯಗತ್ಯ
ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರವು ಹೆಚ್ಚಿನ ಅಪಾಯಕಾರಿ ಸಂದರ್ಭಗಳನ್ನು ಎದುರಿಸುತ್ತಿದೆ ಹೆಚ್ಚಿದ ಹವಾಮಾನ ಬದಲಾವಣೆ, ಅನಿರೀಕ್ಷಿತ ಮಳೆ ಪ್ರಭಾವಗಳು, ಹೊಸ ಕೀಟಗಳ ದಾಳಿ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿದ ಅನಿಸಿಕೆಗಳಿಂದ ರೈತರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಬೆಳೆ ವಿಮೆಯು ರೈತರ ಆರ್ಥಿಕ ಭದ್ರತೆಯ ಪ್ರಮುಖ ಆಧಾರವಾಗಿದೆ
ಬೆಳೆ ವಿಮೆ ಅಗತ್ಯವಾಗಿರುವ ಪ್ರಮುಖ ಕಾರಣಗಳು
- ಕೃಷಿಯ ಮೇಲೆ ಹೂಡಿಕೆ ಮಾಡಿದ ಹಣದ ಭದ್ರತೆ ದೊರೆಯುತ್ತದೆ
- ಕುಟುಂಬದ ಆದಾಯದಲ್ಲಿ ಸ್ಥಿರತೆಯನ್ನು ಸಾಧಿಸಬಹುದು
- ಸಾಲ ಮರುಪಾವತಿಗೆ ಸಹಕಾರಿಯಾಗುತ್ತದೆ
- ಅನಿರೀಕ್ಷಿತ ಬೆಳೆ ನಷ್ಟದಿಂದ ರಕ್ಷಣೆ ದೊರೆಯುತ್ತದೆ
- ಕೃಷಿಯನ್ನು ನಿರಂತರವಾಗಿ ನೆಡೆಸಲು ಆರ್ಥಿಕ ಬೆಂಬಲ ಸಿಗುತ್ತದೆ
- ಮುಂದಿನ ಬೆಳೆಯಲು ಆತ್ಮವಿಶ್ವಾಸ ಹೆಚ್ಚುತ್ತದೆ
ಯಾವ ಸಂದರ್ಭದಲ್ಲಿ ಬೆಳೆ ನಷ್ಟ ಸಂಭವಿಸಬಹುದು
ಕೃಷಿ ವ್ಯವಸ್ಥೆಯಲ್ಲಿ ಹಲವಾರು ಸಂದರ್ಭಗಳಲ್ಲಿ ಬೆಳೆ ನಷ್ಟವು ಸಂಭವಿಸುತ್ತದೆ ಇದರಿಂದ ಬೆಳೆ ಹಾನಿಯಾಗುವುದರ ಜೊತೆಯಲ್ಲಿ ರೈತರ ಆತ್ಮಸ್ಥೈರ್ಯವೂ ಕೂಡ ಕಡಿಮೆಯಾಗಬಹುದು ಬೆಳೆ ನಷ್ಟ ಸಂಭವಿಸುವ ಪ್ರಮುಖ ಕಾರಣಗಳೆಂದರೆ
ಅತಿಯಾದ ಮಳೆ ಸುರಿಯುವುದು
ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹೊಲಗಳಲ್ಲಿ ನೀರು ನಿಂತು ಬೆಳೆಗಳ ಬೇರು ಕಳೆದುಕೊಳ್ಳುವ ಮತ್ತು ಕೊಳೆಯುವ ಸಾಧ್ಯತೆ ಹೆಚ್ಚಿರುತ್ತದೆ ಕೆಲವೊಮ್ಮೆ ಸಂಪೂರ್ಣ ಬೆಳೆಯು ಕೂಡ ನಾಶವಾಗುವ ಸಾಧ್ಯತೆ ಇರುತ್ತದೆ
ಮಳೆಯ ಕೊರತೆ
ಸರಿಯಾಗಿ ಮಳೆ ಬಾರದಿದ್ದರೆ ಬೆಳೆ ಬೆಳವಣಿಗೆ ಕುಂಠಿತವಾಗುತ್ತದೆ ಉತ್ಪಾದನಾ ಮಟ್ಟವು ಗಣನೀಯವಾಗಿ ಕಡಿಮೆಯಾಗುವುದರಿಂದ ರೈತರು ಕೂಡಿರುವ ಬಂಡವಾಳವು ಸಹ ಬರದೇ ಇರಬಹುದು
ಪ್ರವಾಹ
ನದಿ ಅಥವಾ ಕೆರೆಗಳು ತುಂಬಿ ಆಚೆ ಹರಿದಾಗ ಕೃಷಿ ಭೂಮಿಯಲ್ಲಿ ನೀರು ಹೆಚ್ಚಾಗಿ ನಿಂತುಕೊಳ್ಳುತ್ತದೆ ಇದರಿಂದ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗುವುದರ ಜೊತೆಯಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ
ಕೀಟಗಳ ದಾಳಿ
ಕಾಂಡ ಕೊರೆಯುವ ಹುಳು, ಎಲೆ ತಿನ್ನುವ ಕ್ರಿಮಿ ಕೀಟಗಳು ಮತ್ತು ವೈರಸ್ ಗಳು ಹಾಗೂ ಶಿಲೀಂದ್ರಗಳು ಸಸಿಗಳಿಗೆ ಬರುವ ಮೂಲಕ ರೋಗಗಳನ್ನು ತರುತ್ತವೆ ಈ ರೋಗಗಳು ಉತ್ಪಾದನೆಯನ್ನು ತೀವ್ರ ಮಟ್ಟದಲ್ಲಿ ಹಾಳು ಮಾಡುತ್ತವೆ
ಆಲಿಕಲ್ಲು ಮಳೆ ಮತ್ತು ಬಿರುಗಾಳಿ
ಹೆಚ್ಚಿನ ಮಳೆಯಾಗುವ ಸಂದರ್ಭದಲ್ಲಿ ಆಲಿಕಲ್ಲು ಬೀಳುವ ಸಾಧ್ಯತೆ ಇರುತ್ತದೆ ಮತ್ತು ಹೆಚ್ಚಿನ ಗಾಳಿ ಬೀಸುವ ಸಂದರ್ಭದಲ್ಲಿ ರಂಬೆ ಕೊಂಬೆಗಳು ಸಹ ನೆಲಕುರುಳುವ ಸಾಧ್ಯತೆ ಹೆಚ್ಚಿರುತ್ತದೆ ಇದರಿಂದ ಕೃಷಿಭೂಮಿಯ ಬೆಳೆಗಳು ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆಗೆ ಮಹತ್ವ ಏನು
ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ರೈತರು ಸಣ್ಣ ಹಾಗೂ ಅತಿ ಸಣ್ಣ ಭೂಮಿಯನ್ನು ಹೊಂದಿದ್ದಾರೆ ಇಂತಹ ರೈತರಿಗೆ ಈ ಹಂಗಾಮಿಯಲ್ಲಿ ಬೆಳೆ ನಷ್ಟವೇ ದೊಡ್ಡ ಆರ್ಥಿಕ ಹೊರೆಯಾಗಿ ಸಂಭವಿಸುತ್ತದೆ PMFBY ಯೋಜನೆಯ ಮೂಲಕ ಇಂತಹ ರೈತರಿಗೆ ಕಡಿಮೆ ವೆಚ್ಚದಲ್ಲಿ ವಿಮಾ ಸೌಲಭ್ಯವನ್ನು ಒದಗಿಸುವುದರಿಂದ ಕೃಷಿ ಚಟುವಟಿಕೆಗಳು ಭದ್ರತೆ ಸಿಗುವುದರ ಜೊತೆಯಲ್ಲಿ ರೈತರು ಸಹ ಆತ್ಮವಿಶ್ವಾಸದಿಂದ ಇರಬಹುದು ಇದರಿಂದ ಅವರು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗಗಳಿಗೆ ಹೋಗುವ ಪರಿಸ್ಥಿತಿ ಕಡಿಮೆಯಾಗುತ್ತದೆ
ಬೆಳೆ ಬಿಮೆ ಮಾಡಿಸಿಕೊಳ್ಳುವದರಿಂದ ರೈತರಿಗೆ ದೊರೆಯುವ ಹೆಚ್ಚುರಿ ಲಾಭಗಳು ಯಾವುವು
- ಕೃಷಿ ಕ್ಷೇತ್ರದಲ್ಲಿ ಆತ್ಮವಿಶ್ವಾಸದ ಹೆಚ್ಚಳವಾಗುತ್ತದೆ
- ಉತ್ತಮ ಗುಣಮಟ್ಟದ ಬೀಜಗಳನ್ನು ಬಳಸಲು ಮತ್ತು ನಿರ್ವಹಿಸಲು ಪ್ರೇರಣೆ ದೊರಕುತ್ತದೆ
- ಹೊಸ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ
- ಕುಟುಂಬದ ಭವಿಷ್ಯಕ್ಕೆ ಭದ್ರತೆ ದೊರೆತಂತಾಗುತ್ತದೆ
- ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸಬಹುದು
- ಕೃಷಿಗೆ ಮಾಡಿರುವ ಸಾಲ ಮೊತ್ತವನ್ನು ಮರುಪಾವತಿ ಮಾಡುವಲ್ಲಿ ನೆರವಾಗುತ್ತದೆ
- ಅನಿರೀಕ್ಷಿತ ಹವಮಾನ ಬದಲಾವಣೆಗಳಿಂದ ರಕ್ಷಣೆ ದೊರೆಯುತ್ತದೆ
ಪ್ರತಿಯೊಬ್ಬ ರಹ ರೈತರು ಯಾವ ಅವಕಾಶವನ್ನು ಬಳಸಿಕೊಳ್ಳಬೇಕು
ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆಯುವ ರೈತರು ಕೊನೆ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಬೆಳೆ ವಿಮೆ ನೊಂದಣಿ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿ ಯಶಸ್ವಿಯಾಗಿ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿರುತ್ತದೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಯೋಜನೆಯ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ
ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡು ಅಧಿಕೃತ ಅರ್ಜಿ ಸಲ್ಲಿಕೆ ಕೇಂದ್ರಗಳ ಮೂಲಕ PMFBY ಯೋಜನೆಗೆ ಅರ್ಜಿ ಸಲ್ಲಿಸಿ ವಿಮಾ ಸೌಲಭ್ಯವನ್ನು ಪಡೆಯಬೇಕಾಗಿರುತ್ತದೆ ಈ ಯೋಜನೆಯು ಕೇವಲ ಒಂದು ವಿಮೆ ಸೌಲಭ್ಯ ಆಗಿರದೆ ರೈತರ ಹೂಡಿಕೆ ಪರಿಶ್ರಮ ಮತ್ತು ಭವಿಷ್ಯವನ್ನು ರಕ್ಷಿಸುವ ಏಕೈಕ ಭದ್ರತಾ ಕವಚವಾಗಿದೆ
ಬೆಳೆ ವಿಮೆಗೆ ಯಾರು ಅರ್ಹರು
2026 27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಸೂಚನೆಗೆ ಒಳಪಟ್ಟಿರುವ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಪ್ರPMFBY ಯೋಜನೆ ಅಡಿಯಲ್ಲಿ ಬೆಳೆ ವಿಮೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಯೋಜನೆಯ ಲಾಭ ಪಡೆಯಲು ರೈತರು ಈ ಕೆಳಕಂಡ ಷರತ್ತು ಹಾಗೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ
ಸಾಮಾನ್ಯವಾಗಿ ಈ ಕೆಳಗಿನ ವರ್ಗದ ರೈತರು ಯೋಜನೆಗೆ ಅರ್ಹತೆಯನ್ನು ಪಡೆದಿರುತ್ತಾರೆ
- ಸ್ವಂತ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವ ರೈತರು
- ಅಧಿಸೂಚಿತ ಪ್ರದೇಶದಲ್ಲಿ ನಿರ್ದಿಷ್ಟ ಪಡಿಸಿರುವ ಅಧಿಸೂಚಿತ ಬೆಳೆಯನ್ನು ಬೆಳೆದಿರುವ ರೈತರು
- ಬೆಳೆ ಸಾಲವನ್ನು ಪಡೆದಿರುವ ಅರ್ಹ ರೈತರು
- ಬೆಳೆ ಸಾಲ ಪಡೆಯದ ರೈತರು ಸ್ವಯಂ ಪ್ರೇರಿತವಾಗಿ ಅರ್ಜಿ ಸಲ್ಲಿಸಬಹುದು
- ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವ ಅರ್ಹ ರೈತರು
PMFBY ಗೆ ಅರ್ಜಿಯನ್ನು ಸಲ್ಲಿಸುವ ಮೊದಲು ತಮ್ಮ ತಾಲೂಕಿನ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಹತೆಯ ಕುರಿತು ಮಾಹಿತಿ ಪಡೆದುಕೊಳ್ಳುವುದು ಉತ್ತಮವಾಗಿದೆ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
PMFBY ಬೆಳೆ ವಿಮೆಯನ್ನು ಪಡೆಯುವಾಗ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಹಲವು ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ದಾಖಲೆಗಳಲ್ಲಿ ತಪ್ಪು ಮಾಹಿತಿ ಇದ್ದರೆ ಅರ್ಜಿ ವಿಳಂಬವಾಗಬಹುದು ಅಥವಾ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಿರುತ್ತದೆ
ಆಧಾರ್ ಕಾರ್ಡ್
ರೈತರ ಗುರುತಿನ ದೃಡೀಕರಣಕ್ಕಾಗಿ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ ಆಧಾರ್ ನಲ್ಲಿರುವ ಹೆಸರು ಮತ್ತು ಇತರ ದಾಖಲೆಗಳಿರುವ ಹೆಸರು ಒಂದೇ ಆಗಿರಬೇಕಾಗಿರುತ್ತದೆ
ಬ್ಯಾಂಕ್ ಖಾತೆಯ ಪಾಸ್ ಬುಕ್
ವಿಮಾ ಪರಿಹಾರ ಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಸಕ್ರಿಯವಾದ ಬ್ಯಾಂಕ್ ಖಾತೆಯನ್ನು ರೈತರು ಹೊಂದಿರಬೇಕಾಗುತ್ತದೆ ಅರ್ಜಿಯನ್ನು ಭರ್ತಿ ಮಾಡುವಾಗ ಖಾತೆ ಸಂಖ್ಯೆ ಮತ್ತು ಐಎಫ್ಎಸ್‌ಸಿ ಕೋಡ್ ಗಳನ್ನು ಎಚ್ಚರಿಕೆಯಿಂದ ನಮೂದಿಸಬೇಕು
ಪಹಣಿ
ಜಮೀನಿನ ಮಾಲಿಕತ್ವ ಮತ್ತು ಜಮೀನಿನ ಕೃಷಿ ವಿವರಗಳನ್ನು ದೃಢೀಕರಿಸಲು ಇತ್ತೀಚಿನ ನವೀಕರಣಗೊಂಡ ಪಹಣಿಯನ್ನು ಹೊಂದುವುದು ಅಗತ್ಯವಾಗಿರುತ್ತದೆ
ಮೊಬೈಲ್ ಸಂಖ್ಯೆ
ಸಂವಹನ ಉದ್ದೇಶಕ್ಕಾಗಿ ಮತ್ತು ಸಂಪರ್ಕ ಹಾಗೂ ಅರ್ಜಿ ಮಾಹಿತಿ ಸಂದೇಶಗಳು ಮತ್ತು ಇತರ ನವೀಕರಣಗಳನ್ನು ದೃಢೀಕರಣ ಪ್ರಕ್ರಿಯೆಗೆ ಒಳಪಡಿಸಲು ಸಕ್ರಿಯವಾದ ಮೊಬೈಲ್ ಸಂಖ್ಯೆಯನ್ನು ಹೊಂದಬೇಕು ಮತ್ತು ಅರ್ಜಿ ಪ್ರಕ್ರಿಯೆಯಲ್ಲಿ ನೀಡಬೇಕು
ಬೆಳೆ ವಿವರಗಳು
ರೈತರು ಯಾವ ಬೆಳೆಯನ್ನು ಬೆಳೆದಿದ್ದಾರೆ, ಎಷ್ಟು ವಿಸ್ತೀರ್ಣದಲ್ಲಿ ಬೆಳೆದಿದ್ದಾರೆ ಮತ್ತು ಬೆಳೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಖಚಿತವಾಗಿ ಮತ್ತು ನಿಖರವಾಗಿ ನೀಡಬೇಕು
ಅನ್ವಯಿಸಬಹುದಾದ ಇತರೆ ದಾಖಲೆಗಳು
ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಇಲಾಖೆಯ ನಿಯಮಗಳ ಪ್ರಕಾರ ಹೆಚ್ಚುವರಿ ದಾಖಲೆಯನ್ನು ಸಹ ಕೇಳಲಾಗುತ್ತದೆ ಆದುದರಿಂದ ನೀವು ಅರ್ಜಿ ಸಲ್ಲಿಸುವ ಮುನ್ನ ಸಂಬಂಧಿತ ಅಧಿಕೃತ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬೇಕು
ಅರ್ಜಿ ಸಲ್ಲಿಸುವ ಮೊದಲು ರೈತರು ಪರಿಶೀಲಿಸಬೇಕಾದ ಅಂಶಗಳು
ರೈತರು PMFBY ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಈ ಕೆಳಕಂಡ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಅವುಗಳೆಂದರೆ
- ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಲಗತ್ತಿಸುವ ಮತ್ತು ಉಪಯೋಗಿಸುವ ಎಲ್ಲಾ ದಾಖಲೆಗಳು ನವಿಕೃತಗೊಂಡಿರಬೇಕು
- ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು
- ಪಹಣಿಯಲ್ಲಿ ಎಲ್ಲಾ ವಿವರಗಳು ಸರಿಯಾಗಿರಬೇಕು
- ಆಧಾರ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳು ಲಿಂಕ್ ಆಗಿರಬೇಕು
- ಬೆಳೆ ಮತ್ತು ಜಮೀನಿನ ವಿಸ್ತೀರ್ಣವನ್ನು ನಿಖರವಾಗಿ ನಮೂದಿಸಬೇಕು
- ನೀವು ನಮೂದಿಸುವ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಸಕ್ರಿಯವಾಗಿರಬೇಕು
PMFBY ಬೆಳೆ ವಿಮೆಗೆ ಎಲ್ಲಿ ಅರ್ಜಿ ಸಲ್ಲಿಸಬಹುದು
ಅರ್ಹ ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಅಧಿಕೃತ ಕೇಂದ್ರಗಳಲ್ಲಿ ಬೆಳೆ ವಿಮೆಯನ್ನು ಮತ್ತು ನೋಂದಣಿ ಪ್ರಕ್ರಿಯೆಯನ್ನು ಮಾಡಿಸಬಹುದಾಗಿರುತ್ತದೆ
ಗ್ರಾಮ ಒನ್ ಕೇಂದ್ರ
ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ಕಾರದ ಹಲವು ಯೋಜನೆಗಳ ಜೊತೆಯಲ್ಲಿ ಬೆಳೆ ವಿಮೆ ನೋಂದಣಿಯನ್ನು ಸಹ ಮಾಡಿಸಿಕೊಳ್ಳಬಹುದಾಗಿರುತ್ತದೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
ಸಾಮಾನ್ಯ ಸೇವಾ ಕೇಂದ್ರ
ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯೂ ಸಹ ಆನ್ಲೈನ್ ಮೂಲಕ ಬೆಳೆ ವಿಮೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ದಾಖಲೆಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಬಹುದು
ಬ್ಯಾಂಕುಗಳು
ಕೆಲವು ಬ್ಯಾಂಕುಗಳ ವಿಶೇಷ ಶಾಖೆಗಳು ಬೆಳೆವಿಮೆ ನೋಂದಣಿ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ವಿಶೇಷವಾಗಿ ಬೆಳೆ ಸಾಲ ಪಡೆದಿರುವ ರೈತರು ತಮ್ಮ ತಮ್ಮ ಬ್ಯಾಂಕಿನ ಕಚೇರಿಗೆ ಭೇಟಿ ನೀಡಿ ಬೆಳೆ ವಿಮೆಯನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ
ಅಂಚೆ ಕಚೇರಿ
ಆಯ್ದ ಅಂಚೆ ಕಚೇರಿಗಳಲ್ಲಿಯೂ ಸಹ ಬೆಳೆ ವಿಮೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ ಈ ಸೇವೆಗಳನ್ನು ಪಡೆಯಲು ಅಂಚೆ ಕಚೇರಿ ಅಧಿಕಾರಿ ಅಥವಾ ಸಿಬ್ಬಂದಿಯವರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ
ವಿಮಾ ಕಂಪನಿಗಳ ಅಧಿಕೃತ ಪ್ರತಿನಿಧಿಗಳು
ಸರ್ಕಾರದಿಂದ ಅಧಿಕೃತವಾಗಿ ನೇಮಕಗೊಂಡಿರುವ ವಿಮಾ ಕಂಪನಿಯ ಪ್ರತಿನಿಧಿಗಳು ಮತ್ತು ಅವರಿಗೆ ಸಂಬಂಧಿಸಿದ ಕಚೇರಿಗಳ ಮೂಲಕ ನಿಮ್ಮ ಸಲಹೆ ಬೇಕಾದ ಮಾಹಿತಿ ಮತ್ತು ದಾಖಲೆಗಳನ್ನು ಹೊಂದಿಸಬಹುದು ಮತ್ತು ಮಾಹಿತಿಯನ್ನು ಪಡೆಯಬಹುದು
PMFBY ಗೆ ಅರ್ಜಿ ಸಲ್ಲಿಸುವಿಗೆ ಪ್ರಕ್ರಿಯೆ ಹಂತಗಳು
ಈ ಕೆಳಗಿನ ಸುಲಭ ಹಾಗೂ ಸಾಮಾನ್ಯ ಹಂತಗಳನ್ನು ಅನುಸರಿಸುವ ಮೂಲಕ ರೈತರು PMFBY ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಅವುಗಳೆಂದರೆ
ಮೊದಲನೇ ಹಂತ:
ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ
ಎರಡನೇ ಹಂತ:
ರೈತರಿಗೆ ಅನುಕೂಲವಾಗುವಂತೆ ಹತ್ತಿರವಿರುವ ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್ ಅಥವಾ ಅಧಿಕೃತ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು
ಮೂರನೇ ಹಂತ:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿಬ್ಬಂದಿಯವರು ಕೇಳಿದಾಗ ನೀಡಿ ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳು, ಜಮೀನಿನ ಮಾಹಿತಿ, ಬೆಳೆ ವಿವರ ಮತ್ತು ಬ್ಯಾಂಕ್ ಖಾತೆ ವಿವರಗಳು ಸರಿಯಾಗಿ ನಮೂದಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ
ನಾಲ್ಕನೇ ಹಂತ:
ಬೆಳೆ ವಿಮೆ ಪ್ರಕ್ರಿಯೆಗೆ ಅವಶ್ಯಕತೆ ಇರುವ ದಾಖಲೆಗಳನ್ನು ಜೆರಾಕ್ಸ್ ಪ್ರತಿ ಮೂಲಕ ಲಗತಿಸಿ ಅಥವಾ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ಹೇಳಿ
ಐದನೇ ಹಂತ:
ಬೆಳೆ ವಿಮೆ ಪಡೆಯಲು ನಿಗದಿಪಡಿಸಿರುವ ಸಂಬಂಧಿತ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸಿ
ಆರನೇ ಹಂತ:
ಅರ್ಜಿ ಯಶಸ್ವಿಯಾಗಿ ನೋಂದಣಿಯಾದ ನಂತರ ಸಂಬಂಧಪಟ್ಟ ರಶೀದಿ ಮತ್ತು ಅರ್ಜಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ನಿಮ್ಮ ಸೌಲಭ್ಯವನ್ನು ಮತ್ತು ಅದರ ಪ್ರಯೋಜನವನ್ನು ಪಡೆಯಲು ಇದೊಂದು ಪ್ರಾಥಮಿಕ ದಾಖಲೆಯಾಗಿ ಕೇಳಲಾಗುತ್ತದೆ
PMFBY ಗೆ ಅರ್ಜಿ ಸಲ್ಲಿಸುವಾಗ ಆಗುವ ಸಾಮಾನ್ಯ ತಪ್ಪುಗಳು
ಅನೇಕ ರೈತರು ಅವರು ಮಾಡುವ ಸಣ್ಣ ತಪ್ಪುಗಳಿಂದ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಾರೆ ಅವುಗಳನ್ನು ತಪ್ಪಿಸಲು ಈ ಕೆಳಕಂಡ ಅಂಶಗಳನ್ನು ಗಮನಿಸಿ
- ತಪ್ಪಾದ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೀಡುವುದು
- ತಪ್ಪಾದ ಮೊಬೈಲ್ ಸಂಖ್ಯೆಯನ್ನು ನೀಡುವುದು
- ದಾಖಲೆಗಳನ್ನು ಅಪೂರ್ಣ ರೀತಿಯಲ್ಲಿ ಸಲ್ಲಿಸುವುದು
- ಅರ್ಜಿ ರಶೀದಿ ಮತ್ತು ಪ್ರೀಮಿಯಂ ಪಾವತಿ ರಸೀದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದಿರುವುದು
- ಪಹಣಿಯಲ್ಲಿರುವ ಮಾಹಿತಿಗೆ ಹೊಂದಿಕೆಯಾಗದ ಬೆಳೆ ವಿವರ ನಮೂದಿಸುವುದು
- ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು
ರೈತರು ಗಮನಿಸಬೇಕಾದ ಪ್ರಮುಖ ಸೂಚನೆಗಳು
- ಅರ್ಜಿಯಲ್ಲಿ ನೀಡುವ ಪ್ರತಿಯೊಂದು ಮಾಹಿತಿಯನ್ನು ನಿಖರವಾಗಿ ನೀಡಿ
- ಪ್ರೀಮಿಯಂ ಪಾವತಿ ರಶೀದಿಯನ್ನು ಕಡ್ಡಾಯವಾಗಿ ಸುರಕ್ಷಿತವಾಗಿ ಉಳಿಸಿಕೊಳ್ಳಿ
- ಅರ್ಜಿ ಸಲ್ಲಿಸಿದ ನಂತರ ನೋಂದಣಿ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಿ
- ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ
- ಪಹಣಿಯಲ್ಲಿರುವ ಮಾಹಿತಿಗೆ ಹೊಂದಿಕೆಯಾಗುವಂತೆ ಬೆಳೆ ವಿವರಗಳನ್ನು ನಮೂದಿಸಿ
- ಸರಿಯಾದ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ
- ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆಯನ್ನು ನೀಡಿ
ಯಾವುದೇ ಸಂದೇಹ ಬಂದಲ್ಲಿ ಅಥವಾ ಮಾಹಿತಿ ಬೇಕಾದಲ್ಲಿ ಅಧಿಕೃತ ಕೇಂದ್ರಗಳ ಮೂಲಕವೇ ಮಾಹಿತಿಯನ್ನು ಪಡೆಯಿರಿ ಸಾಧ್ಯವಾದಷ್ಟು ಅಧಿಕೃತ ಕೇಂದ್ರಗಳ ಮೂಲಕವೇ ನೋಂದಣಿ ಮಾಡಿಸಿ ಅನಧಿಕೃತ ವ್ಯಕ್ತಿಗಳ ಮೂಲಕ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ
ಸಮಯಕ್ಕೆ ಸರಿಯಾಗಿ ನೋಂದಣಿ ಮಾಡುವುದು ಮುಖ್ಯವೇ
ಪ್ರತಿ ಬೆಳೆಗೆ ಸರ್ಕಾರವು ಪ್ರತ್ಯೇಕ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ ಅದರಂತೆ ಆ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ನಿಗದಿತ ದಿನಾಂಕದ ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಆದುದರಿಂದ ರೈತರು ಕೊನೆಯ ದಿನಗಳವರೆಗೆ ಕಾಯದೆ ಮುಂಚಿತವಾಗಿ PMFBY ಯೋಜನೆಗೆ ಅರ್ಜಿ ಸಲ್ಲಿಸಿದರೆ ತಾಂತ್ರಿಕ ದೋಷಗಳು ಮತ್ತು ದಾಖಲೆಗಳಲ್ಲಿನ ಬದಲಾವಣೆ ಸಮಸ್ಯೆಗಳನ್ನು ತಪ್ಪಿಸಬಹುದು
ಸಮಯಕ್ಕೆ ಸರಿಯಾಗಿ ನೋಂದಣಿ ಮಾಡಿಕೊಳ್ಳುವ ರೈತರಿಗೆ ಬೆಳೆ ಹಾನಿಯಾದ ಸಂದರ್ಭದಲ್ಲಿ ಯೋಜನೆಗೆ ನಿಯಮಾನುಸರ ವಿಮ ರಕ್ಷಣೆ ದೊರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ
ಮುಂಗಾರು ಹಂಗಾಮಿನಲ್ಲಿ ಯಾವ ಬೆಳೆಗೆ ವಿಮೆ ಸೌಲಭ್ಯವಿದೆ
20262 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ಸರ್ಕಾರವು ಹೊರಡಿಸುವ ಅಧಿಸೂಚನೆಯ ಪ್ರಕಾರ ವಿವಿಧ ರೀತಿಯ ಆಹಾರ ಧಾನ್ಯಗಳು, ಎಣ್ಣೆ ಬೀಜಗಳು, ಕಾಳು ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳಿಗೆ PMFBY ಯೋಜನೆ ಅಡಿಯಲ್ಲಿ ನಿಮ್ಮ ಸೌಲಭ್ಯವನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ
ಪ್ರಮುಖವಾಗಿ ಈ ಕೆಳಗಿನ ಬೆಳೆಗಳಿಗೆ ವಿಮಾ ಸೌಲಭ್ಯ ದೊರೆಯಲಿದೆ
- ಮೆಕ್ಕೆಜೋಳ
- ಹತ್ತಿ
- ಸಜ್ಜೆ
- ತೊಗರಿ
- ಎಳ್ಳು
- ಹೆಸರು ಕಾಳು
- ಉದ್ದಿನ ಕಾಳು
- ಸೋಯಾಬೀನ್
- ಅರಿಶಿನ
- ಸೂರ್ಯಕಾಂತಿ
- ಈರುಳ್ಳಿ
ಪ್ರತಿ ಬೆಳೆಯ ಅಪಾಯದ ಪ್ರಮಾಣ, ಉತ್ಪಾದನೆಗೆ ತಗಲುವ ವೆಚ್ಚ ಹಾಗೂ ಇತರ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿಮಾ ಪ್ರೀಮಿಯಂ ಸೌಲಭ್ಯವನ್ನು ನಿಗದಿಪಡಿಸಲಾಗಿದೆ
PMFBY ಬೆಳೆವಾರು ರೈತರ ವಿಮಾ ಪ್ರೀಮಿಯಂ (ಪ್ರತಿ ಹೆಕ್ಟರಿಗೆ)
ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಿರುವಂತೆ ವಿವಿಧ ಬೆಳೆಗಳಿಗೆ ರೈತರು ಪಾವತಿಸಬೇಕಾದ ಅಂದಾಜು ವಿಮಾ ಪ್ರೀಮಿಯಂ ಮೊತ್ತವನ್ನು ನೀಡಲಾಗಿದೆ
| ಬೆಳೆಯ ಹೆಸರು | ಪ್ರತಿ ಹೆಕ್ಟೇರ್ ರೈತರ ವಿಮಾ ಪ್ರೀಮಿಯಂ ಮೊತ್ತ |
| ಮೆಕ್ಕೆಜೋಳ (ಮಳೆ ಆಶ್ರಿತ) | ₹ 1,350 ರೂಗಳು |
| ಮೆಕ್ಕೆಜೋಳ (ನೀರಾವರಿ) | ₹ 1,524 ರೂಗಳು |
| ತೊಗರಿ (ಮಳೆ ಆಶ್ರಿತ) | ₹ 1,152 ರೂಗಳು |
| ತೊಗರಿ (ನೀರಾವರಿ) | ₹ 1,206 ರೂಗಳು |
| ಹತ್ತಿ (ಮಳೆ ಆಶ್ರಿತ) | ₹ 2,985 ರೂಗಳು |
| ಹತ್ತಿ (ನೀರಾವರಿ) | ₹ 4,320 ರೂಗಳು |
| ಸಜ್ಜೆ | ₹ 696 ರೂಗಳು |
| ಎಳ್ಳು | ₹ 638 ರೂಗಳು |
| ಸೋಯಾಬೀನ್ | ₹ 944 ರೂಗಳು |
| ಹೆಸರುಕಾಳು | ₹ 794 ರೂಗಳು |
| ಉದ್ದು | ₹ 776 ರೂಗಳು |
| ಭತ್ತ | ₹ 2,172 ರೂಗಳು |
| ಈರುಳ್ಳಿ | ₹ 4,695 ರೂಗಳು |
| ಸೂರ್ಯಕಾಂತಿ | ₹ 964 ರೂಗಳು |
| ಅರಿಶಿಣ | ₹ 8,210 ರೂಗಳು |
ಗಮನಿಸಿ: ಮೇಲಿನ ಪ್ರೀಮಿಯಂ ಮತ್ತು PMFBY ಯೋಜನೆ ಅಧಿಸೂಚನೆಯ ಹಾಗೂ ಬೆಳೆ ಪ್ರಕಾರ ಬದಲಾವಣೆ ಹೆಚ್ಚಾಗಿರುತ್ತದೆ ಅಂತಿಮವಾಗಿ ಪಾವತಿಸಬೇಕಾದ ಮೊತ್ತವನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಿಳಿದುಕೊಳ್ಳಬಹುದು
ಕೆಲವು ಬೆಳೆಗಳಿಗೆ ಏಕೆ ಪ್ರೀಮಿಯಂ ಹೆಚ್ಚಾಗಿದೆ
ಎಲ್ಲ ಬೆಳೆಗಳಿಗೂ ಒಂದೇ ಪ್ರೀಮಿಯಂ ಇರುವುದಿಲ್ಲ ಏಕೆಂದರೆ ಅವುಗಳ ವೆಚ್ಚ ಮತ್ತು ಅಪಾಯದ ಸಂಭವನೀಯತೆ ಹೆಚ್ಚಾಗಿರುವುದರಿಂದ ಕೆಲವು ಬೆಳೆಗಳಿಗೆ ಪ್ರೀಮಿಯಂ ದರವು ಹೆಚ್ಚಾಗಿರುತ್ತದೆ ಕಾರಣ
- ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿರಬಹುದು
- ಹವಾಮಾನದಿಂದ ಉಂಟಾಗುವ ಅಪಾಯದ ಮಟ್ಟ ಹೆಚ್ಚಿನದಿರಬಹುದು
- ಬೆಳೆ ಬೆಳೆಯುವ ಅವಧಿ ಹೆಚ್ಚಾಗಿರಬಹುದು
- ಬೆಳೆ ಮೌಲ್ಯ ಹೆಚ್ಚಾಗಿರಬಹುದು
- ಹಿಂದಿನ ವರ್ಷಗಳ ನಷ್ಟದ ಅಂಕಿ ಅಂಶಗಳ ಮಾಹಿತಿ ಪರಿಣಾಮಗಳು
- ವಿಮಾ ಅಪಾಯದ ಮೌಲ್ಯಮಾಪನ
ಉದಾಹರಣೆಗೆ ಅರಿಶಿಣ ಮತ್ತು ಈರುಳ್ಳಿ ಅಂತಹ ಬೆಳೆಗಳಿಗೆ ಹೆಚ್ಚು ಹೂಡಿಕೆ ಅವಶ್ಯಕತೆ ಇರಬಹುದು
ಮಳೆ ಆಧಾರಿತ ಮತ್ತು ನೀರಾವರಿ ಬೆಳೆಗಳ ಪ್ರೀಮಿಯಂನಲ್ಲಿ ವ್ಯತ್ಯಾಸಗಳು
ಕೆಲವು ಬೆಳೆಗಳಿಗೆ ಮಳೆ ಆಧಾರಿತ ಮತ್ತು ನೀರಾವರಿ ವ್ಯವಸ್ಥೆಗಳಿಗೆ ಅವಶ್ಯಕವಾಗಿರುವ ಎಂಬ ಎರಡು ವಿಧವಾದ ಬೆಳೆಗಳಿದ್ದು ಅವುಗಳಿಗೆ ಪ್ರತ್ಯೇಕ ವರ್ಗಗಳಿವೆ ಅವುಗಳೆಂದರೆ
1. ಮಳೆ ಆಧಾರಿತ ಬೆಳೆ
- ಸಂಪೂರ್ಣವಾಗಿ ನೈಸರ್ಗಿಕವಾಗಿ ಸುರಿಯುವ ಮಳೆಯನ್ನೇ ಅವಲಂಬಿಸಲಾಗಿರುತ್ತದೆ
- ಮಳೆ ಕೊರತೆ ಅಥವಾ ಹೆಚ್ಚಿನ ಮಳೆ ಸುರಿಯುವುದರಿಂದ ಹೆಚ್ಚಿದ ಅಪಾಯ ಉಂಟಾಗಬಹುದು
2. ನೀರಾವರಿ ಬೆಳೆ
- ಬೋರ್ವೆಲ್, ಕಾಲುವೆ ಮತ್ತು ಇತರೆ ನೀರಾವರಿ ಮೂಲಗಳ ಮೂಲಕ ನೀರನ್ನು ಒದಗಿಸಲಾಗುತ್ತದೆ
- ಉತ್ಪಾದನಾ ಸ್ಥಿತಿ ಭಿನ್ನವಾಗಿರುವುದರಿಂದ ವಿಮಾ ಕಂತು ಮತ್ತು ಲೆಕ್ಕಾಚಾರವು ಸಹ ವಿಭಿನ್ನವಾಗಿರುತ್ತದೆ
PMFBY ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳು
ಕರ್ನಾಟಕ ಸರ್ಕಾರವು ಪ್ರತ್ಯೇಕ ಬೆಳೆಗಳಿಗೆ ಪ್ರತ್ಯೇಕ ಕೊನೆಯ ದಿನಾಂಕಗಳನ್ನು ನಿಗದಿಪಡಿಸಿದೆ ಸದರಿ ನಿಗದಿಪಡಿಸಿದ ದಿನಾಂಕದಂದು ಅಥವಾ ಅದರ ಮೊದಲು ರೈತರು ಅರ್ಜಿ ಸಲ್ಲಿಸಿದರೆ ಮಾತ್ರ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ
ಜುಲೈ 15, 2026 ಕೊನೆಯ ದಿನ
- ಹೆಸರುಕಾಳು
- ಉದ್ದು
- ಅರಿಶಿಣ
ಜುಲೈ 31, 2026 ಕೊನೆಯ ದಿನ
- ಮೆಕ್ಕೆಜೋಳ
- ತೊಗರಿ
- ಹತ್ತಿ
- ಸಜ್ಜೆ
- ಎಳ್ಳು
- ಸೋಯಾಬೀನ್
ಆಗಸ್ಟ್ 14, 2026 ಕೊನೆಯ ದಿನ
- ಭತ್ತ
- ಈರುಳ್ಳಿ
- ಸೂರ್ಯಕಾಂತಿ
ಕೊನೆಯ ದಿನಾಂಕದವರೆಗೂ ಏಕೆ ಕಾಯಬಾರದು
ರೈತರು ಕೊನೆ ದಿನಾಂಕದಂದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಕೆಳಕಂಡ ಸಮಸ್ಯೆಗಳನ್ನು ಎದುರಿಸಬಹುದು
- ಹೆಚ್ಚಿನ ಜನಸಂದಣಿ ಇರಬಹುದು
- ಸರ್ವರ್ ಸಮಸ್ಯೆಗಳು ಇರಬಹುದು
- ದಾಖಲೆಗಳಲ್ಲಿ ತಿದ್ದುಪಡಿ ಮಾಡಲು ಸಮಯದ ಕೊರತೆ ಉಂಟಾಗಬಹುದು
- ಪ್ರೀಮಿಯಂ ಪಾವತಿಯಲ್ಲಿ ವಿಳಂಬವಾಗಬಹುದು
- ಯಶಸ್ವಿಯಾಗಿ ಅರ್ಜಿ ಸಲ್ಲಿಕೆ ಆಗದೆ ಇರಬಹುದು
ಆದುದರಿಂದ ಕೊನೆ ದಿನಾಂಕದವರೆಗೂ ಕಾಯದೆ ಅರ್ಹ ರೈತರು ಮುಂಚಿತವಾಗಿ ನೋಂದಣಿ ಪತ್ರಿಕೆಗೆ ಮುಗಿಸುವುದು ಉತ್ತಮ
ರೈತರು ಪ್ರೀಮಿಯಂ ಪಾವತಿಸುವಾಗ ಗಮನಿಸಬೇಕಾದ ಅಂಶಗಳು
ರೈತರು ವಿಮೆ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಪಾವತಿಸುವ ಪ್ರೀಮಿಯಂ ಅನ್ನು ಪಾವತಿಸಿದ ನಂತರ ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ
- ಪಾವತಿ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
- ಅರ್ಜಿ ಸಂಖ್ಯೆ, ನೋಂದಣಿ ಸಂಖ್ಯೆ ಮತ್ತು ಅರ್ಜಿ ಪ್ರತಿಯನ್ನು ಸುರಕ್ಷಿತವಾಗಿ ದಾಖಲಿಸಿಕೊಳ್ಳಬೇಕು
- ಮೊಬೈಲ್ ಗೆ ಬರುವ ವಿಮಾ ದೃಢೀಕರಣ ಮೆಸೇಜನ್ನು ಡಿಲೀಟ್ ಮಾಡಬಾರದು
- ಅರ್ಜಿ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು
- ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು
ಬೆಳೆವಾರು ವಿಮೆ ಆಯ್ಕೆ ಮಾಡುವ ರೈತರಿಗೆ ಸೂಚನೆಗಳು
- ನಿಜವಾಗಿ ಬೆಳೆದಿರುವ ಬೆಳೆಯನ್ನೇ ನೋಂದಣಿ ಮಾಡಿಸಿ
- ತಪ್ಪು ಮಾಹಿತಿಯನ್ನು ನೀಡುವುದನ್ನು ತಪ್ಪಿಸಿ
- ಜಮೀನಿನ ವಿಸ್ತೀರ್ಣವನ್ನು ಮತ್ತು ಬೆಳೆಗೆ ಸಂಬಂಧಿತ ಮಾಹಿತಿಯನ್ನು ಸರಿಯಾಗಿ ನಮೂದಿಸಿ
- ಒಂದೇ ಜಮೀನಿಗೆ ಅನಗತ್ಯವಾಗಿ ಪುನಃ ಪುನಃ ಅರ್ಜಿಯನ್ನು ಸಲ್ಲಿಸಬೇಡಿ
- ಅಧಿಕೃತ ಅರ್ಜಿ ಸಲ್ಲಿಕೆ ಕೇಂದ್ರಗಳ ಮೂಲಕ ಮಾತ್ರ ಅರ್ಜಿ ಸಲ್ಲಿಸಿ
ಸಮಯಕ್ಕೆ ಸರಿಯಾಗಿ ವಿಮೆ ಮಾಡಿಸಿಕೊಳ್ಳುವುದರಿಂದ ಸಿಗುವ ಲಾಭಗಳು
ಸಮಯಕ್ಕೆ ಸರಿಯಾಗಿ PMFBY ಗೆ ಅರ್ಜಿ ಸಲ್ಲಿಸುವುದರಿಂದ ರೈತರು ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದಾಗಿರುತ್ತದೆ ಅವುಗಳೆಂದರೆ
- ಬೆಳೆ ಹಾನಿ ಉಂಟಾದರೆ ಯೋಜನೆ ನಿಯಮಾನುಸಾರ ಪರಿಹಾರ ಪಡೆಯುವ ಅವಕಾಶ ಇರುತ್ತದೆ
- ಭವಿಷ್ಯದ ಆರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿರುತ್ತದೆ
- ಕೃಷಿ ಹೂಡಿಕೆಗೆ ಭದ್ರತೆ ಸಿಗುತ್ತದೆ
- ಮುಂದಿನ ಬೆಳೆ ಹಂಗಾಮಿಗೆ ಸಿದ್ದರಾಗಲು ನೆರವಾಗುತ್ತದೆ
- ಕುಟುಂಬದ ಸ್ಥಿರತೆ ಕಾಪಾಡಲು ಸಹಕಾರಿಯಾಗುತ್ತದೆ
ಕೃಷಿ ಕ್ಷೇತ್ರದಲ್ಲಿ ಪ್ರತಿಯೊಂದು ಹಂಗಾಮು ಸಹ ಹೆಚ್ಚಿನ ಮಹತ್ವ ಹೊಂದಿರುವುದರಿಂದ ಬೆಳೆ ವಿಮೆ ನೋಂದಣಿಯನ್ನು ಕೊನೆಯ ಕ್ಷಣಕ್ಕೆ ಮುಂದೊಡದೆ ಆದಷ್ಟು ಬೇಗ ಅಗತ್ಯ ದಾಖಲೆಗಳನ್ನು ಹೊಂದಿಸಿ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ ಇದು ರೈತ ಹಿತಾಸಕ್ತಿಯನ್ನು ಕಾಪಾಡುವ ಏಕೈಕ ವಿಧಾನವಾಗಿದೆ
ಬೆಳೆ ವಿಮೆ ಪರಿಹಾರ ಮೊತ್ತವನ್ನು ಹೇಗೆ ಪರಿಶೀಲಿಸಬೇಕು
ಬೆಳೆ ವಿಮೆ ನೋಂದಣಿ ಮಾಡಿದ ನಂತರ ರೈತರು ಪಾವತಿಸಿರುವ ಪ್ರೀಮಿಯಂ ಮೊತ್ತ ಮತ್ತು ಹಾಗೂ ಇತರ ಮಾಹಿತಿಯನ್ನು ಆನ್ಲೈನ್ ಮೂಲಕ ಪರಿಶೀಲಿಸಬಹುದಾಗಿರುತ್ತದೆ ಇದಕ್ಕಾಗಿ ಕರ್ನಾಟಕ ಸರ್ಕಾರದ ಸಂರಕ್ಷಣೆ ಪೋರ್ಟಲ್ ಅನ್ನು ಉಪಯೋಗಿಸುವುದರ ಮೂಲಕ ಮೇಲಿನ ಸಂಬಂಧ ಎಲ್ಲ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ
ಕರ್ನಾಟಕ ಸರ್ಕಾರ ಸಂರಕ್ಷಣೆ ಪೋರ್ಟಲ್
ಈ ಪೋರ್ಟಲ್ ನಲ್ಲಿ ಬೆಳೆವಾರು ಪ್ರೀಮಿಯಂ ನ ಲೆಕ್ಕಾಚಾರ ವಿಮಾ ಮತ್ತು ನೋಂದಣಿ ಸಂಬಂಧಿತ ಸಮಗ್ರ ಮಟ್ಟದ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದಾಗಿರುತ್ತದೆ
PMFBY ಆನ್ಲೈನ್ ನಲ್ಲಿ ಪ್ರೀಮಿಯಂ ಲೆಕ್ಕಾಚಾರ ಪರಿಶೀಲಿಸುವ ವಿಧಾನ
ಈ ಕೆಳಕಂಡ ಸುಲಭ ಹಾಗೂ ಸಾಮಾನ್ಯ ಹಂತಗಳನ್ನು ಅನುಸರಿಸುವುದರ ಮೂಲಕ ಆನ್ಲೈನ್ ನಲ್ಲಿ ಪ್ರೀಮಿಯಂ ಲೆಕ್ಕಾಚಾರವನ್ನು ಬೆಳೆಗಳಿಗೆ ಪ್ರತ್ಯೇಕವಾಗಿ ಪರಿಶೀಲಿಸಬಹುದಾಗಿರುತ್ತದೆ
- ಮೊದಲನೆಯದಾಗಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಸಂರಕ್ಷಣೆ ಪೋರ್ಟಲ್ ತೆರೆಯಿರಿ
- ಮುಖಪುಟದಲ್ಲಿ ಕಾಣಿಸುವ ಪ್ರೀಮಿಯಂ ಲೆಕ್ಕಾಚಾರ ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ
- ನಂತರ ಅಲ್ಲಿ ನಿಮ್ಮ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಲು ಕೇಳಲಾಗುವುದು ನಿಮಗೆ ಸಂಬಂಧಪಟ್ಟ ಜಿಲ್ಲೆಯನ್ನು ಆಯ್ಕೆ ಮಾಡಿ
- ಜಿಲ್ಲೆ ಆಯ್ಕೆ ಮಾಡಿದ ನಂತರ ತಾಲೂಕು, ಹೋಬಳಿ ಹಾಗೂ ಕಂದಾಯ ಗ್ರಾಮವನ್ನು ಆಯ್ಕೆ ಮಾಡಲು ತಿಳಿಸಲಾಗುವುದು ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿ
- ನಂತರ ನೀವು ಬೆಳೆದಿರುವ ಬೆಳೆ ಮಾಹಿತಿಯ ಬಗ್ಗೆ ಕೇಳಲಾಗುತ್ತದೆ ನಿಮ್ಮ ಬೆಳೆದಿರುವ ಬೆಳೆಗೆ ತಕ್ಕಂತೆ ಆಯ್ಕೆಯನ್ನು ಆಯ್ದುಕೊಳ್ಳಿ
- ಬೆಳೆಯನ್ನು ಆಯ್ದುಕೊಂಡ ನಂತರ ಜಮೀನಿನ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಿ
- ನಂತರ ಪ್ರೀಮಿಯಂ ಮೊತ್ತ ತೋರಿಸು ಎಂಬ ಆಯ್ಕೆಯನ್ನು ಆಯ್ದುಕೊಳ್ಳುವುದರ ಮೂಲಕ ರೈತರು ಪಾವತಿಸಬೇಕಾದ ಪ್ರೀಮಿಯಂ ಮತದ ಪ್ರಮಾಣವನ್ನು ಪರಿಶೀಲಿಸಬಹುದಾಗಿರುತ್ತದೆ
ಬೆಳೆ ಹಾನಿಯಾದರೆ ಏನು ಮಾಡಬೇಕು
ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆ ಸುರಿದರೆ, ಬರ, ಪ್ರವಾಹ, ಬಿರುಗಾಳಿ, ಹಾಲಿಕಲ್ಲು ಮಳೆ ಅಥವಾ ಇತರೆ ಬೇರೆ ಯಾವುದೇ ಕಾರಣಗಳಿಂದ ಬೆಳೆಯು ಹಾನಿಗೆ ಒಳಪಟ್ಟರೆ ರೈತರು ವಿಳಂಬ ಮಾಡದೆ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಮಾಹಿತಿಯ ಪರಿಶೀಲನೆ ಮತ್ತು ಮುಂದಿನ ಕ್ರಮಗಳು ಸುಗಮವಾಗಿ ನಡೆಯುತ್ತವೆ.
PMFBY ವಿಮಾ ಕ್ಲೈಮ್ ಪ್ರಕ್ರಿಯೆ ಹೇಗೆ ನಡೆಯುತ್ತದೆ
ಬೆಳೆ ಹಾನಿ ಅದ ನಂತರ ಈ ಕೆಳಕಂಡ ಸಾಮಾನ್ಯ ಪ್ರಕ್ರಿಯೆಗಳನ್ನು ಅನುಸರಿಸಿ ವಿಮಾ ಕ್ಲೈಮ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ
ಬೆಳೆ ಹಾನಿಯ ಮಾಹಿತಿ
ರೈತರು ಬೆಳೆ ಹಾನಿ ಆಗಿರುವ ಸಂಬಂಧ ಕುರಿತು ನೀಡುವ ಎಲ್ಲ ಮಾಹಿತಿಗಳನ್ನು ಸಂಬಂಧಿತ ಇಲಾಖೆ ಮತ್ತು ಅಧಿಕೃತ ವ್ಯವಸ್ಥೆಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ
ಪರಿಶೀಲನೆ
ಸಂಬಂಧಿಕ ಅಧಿಕಾರಿಗಳು ಅಥವಾ ನಿಯೋಜಿತ ತಂಡಗಳ ಸಿಬ್ಬಂದಿಗಳು ಬಂದು ಬೆಳೆಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಾರೆ
ದಾಖಲೆ ಪರಿಶೀಲನೆ
ವಿಮಾ ಸೌಲಭ್ಯಕ್ಕೆ ಸಲ್ಲಿಸಿರುವ ಅರ್ಜಿ, ಬೆಳೆ ವಿವರ, ಜಮೀನಿನ ಮಾಹಿತಿ ಹಾಗೂ ಇತರೆ ದಾಖಲೆಗಳನ್ನು ಪರೀಕ್ಷಿಸಲಾಗುತ್ತದೆ
ಅರ್ಹತೆಯ ನಿರ್ಧಾರ
ಯೋಜನೆ ವಿವರಗಳು ಮತ್ತು ಪರಿಶೀಲನೆಯ ಆಧಾರದ ಹಂತದ ಮೇಲೆ ಅರ್ಹತೆಯನ್ನು ಗುರುತಿಸಲಾಗುತ್ತದೆ
ಪರಿಹಾರದ ಹಣ ವರ್ಗಾವಣೆ
ಅರ್ಹ ರೈತರು ಎಂದರೆ ವಿಮಾ ಸೌಲಭ್ಯವನ್ನು ಪಡೆದಿರುವವರು ಯಾವುದೇ ತಪ್ಪು ಮಾಹಿತಿ ನೀಡಿಲ್ಲದೇ ಸರಿಯಾದ ಮಾಹಿತಿಯನ್ನು ನೀಡಿರುವ ಅರ್ಹತೆರಿಗೆ ಅನುಮೋದಿತ ಪರಿಹಾರದ ಮಹತ್ವವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
PMFBY ಪರಿಹಾರದ ಮತ್ತ ಯಾವ ಅಂಶಗಳ ಮೇಲೆ ನಿರ್ಧಾರವಾಗುತ್ತದೆ
ವಿಮ ಪರಿಹಾರವೂ ಎಲ್ಲ ರೈತರಿಗೆ ಒಂದೇ ರೀತಿಯಾಗಿರುವುದಿಲ್ಲ ಬದಲಾಗಿ ಈ ಕೆಳಕಂಡ ಹಲವು ಅಂಶಗಳನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ಲೆಕ್ಕಾಚಾರ ಹಾಕಲಾಗುತ್ತದೆ ಅವುಗಳೆಂದರೆ
- ಬೆಳೆಯ ಪ್ರಕಾರ
- ಬೆಳೆ ಹಾನಿಯ ಪ್ರಮಾಣ
- ಜಮೀನಿನ ವಿಸ್ತೀರ್ಣ
- ಅಧಿಸೂಚಿತ ಪ್ರದೇಶ
- ಅಧಿಕೃತ ಪರಿಶೀಲನ ವರದಿ
- ಯೋಜನೆ ನಿಯಮಗಳು
ರೈತರ ತಮ್ಮ ಅರ್ಜಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು, ಏಕೆ?
PMFBY ಯೋಜನೆಗೆ ಅರ್ಜಿ ಸಲ್ಲಿಸುವ ದಾಖಲೆಗಳನ್ನು ಪ್ರಮುಖವಾಗಿ ಸುರಕ್ಷಿತವಾಗಿಟ್ಟುಕೊಳ್ಳಬೇಕು ಏಕೆಂದರೆ ಇದರ ಮೂಲಕ ಈ ಕೆಲಕಂಡ ಪ್ರಯೋಜನವನ್ನು ಹೊಂದಬಹುದು ಅವುಗಳೆಂದರೆ
- ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು
- ಅಗತ್ಯವಿದ್ದರೆ ಮಾಹಿತಿ ತಿದ್ದುಪಡಿಯನ್ನು ಮಾಡಿಸಬಹುದು
- ವಿಮಾ ಸೌಲಭ್ಯ ಸಂಬಂಧಿತ ವಿವರಗಳನ್ನು ಸುಲಭವಾಗಿ ಒಂದೇ ವ್ಯವಸ್ಥೆಯಲ್ಲಿ ಪಡೆಯಬಹುದು
- ಭವಿಷ್ಯದಲ್ಲಿ ಉಲ್ಲೇಖಕ್ಕಾಗಿ ಮತ್ತು ವಿಮಾ ಕ್ಲೇಮ್ ಗಾಗಿ ಬಳಸಬಹುದು
ರೈತರು ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆ ಕಾರ್ಯಕ್ರಮಗಳು
PMFBY ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯಲು ರೈತರು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವುದರ ಕ್ಲೈಮ್ ನ ಅನುಮೋದನೆ ಮತ್ತು ಯಾವುದೇ ಸಂದರ್ಭಗಳನ್ನು ಅನಿರೀಕ್ಷಿತವಾಗಿ ಸಮಸ್ಯೆಗಳನ್ನು ಎದುರಿಸುವುದನ್ನು ತಪ್ಪಿಸಬಹುದು ಅವುಗಳೆಂದರೆ
ದಾಖಲೆ ಪರಿಶೀಲನೆ
ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಮತ್ತು ಸಲ್ಲಿಸಿದ ನಂತರ ಎಲ್ಲ ದಾಖಲೆಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ
ನಿಖರ ಮಾಹಿತಿ ನೀಡುವುದು
ಬೆಳೆದಿರುವ ಬೆಳೆ, ಜಮೀನಿನ ವಿಸ್ತೀರ್ಣ, ವೈಯಕ್ತಿಕ ವಿವರಗಳು ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಿ
ಅಧಿಕೃತ ಕೇಂದ್ರಗಳನ್ನು ಮಾತ್ರ ಸಂಪರ್ಕಿಸಿ
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿ ಎ ಸಿ ಕೇಂದ್ರಗಳು, ಬ್ಯಾಂಕ್ ಅಥವಾ ಅಧಿಕೃತ ಕೇಂದ್ರಗಳ ಮೂಲಕವೇ ಅರ್ಜಿ ಸಲ್ಲಿಸಿ
ಕಾಯುವುದು ಉತ್ತಮವಲ್ಲ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯುವುದು ಉತ್ತಮ ಅಭ್ಯಾಸವಲ್ಲ ಕೊನೆ ದಿನಾಂಕದಂದು ಸರ್ವರ್ ಸಮಸ್ಯೆ ಎದುರಾಗಬಹುದು
ಮೊಬೈಲ್ ಸಂಖ್ಯೆ ಸಕ್ರಿಯವಾಗಿರಲಿ
ವಿಮಾ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸಂದೇಶಗಳು ಮತ್ತು ಇತರ ಮಾಹಿತಿಗಳನ್ನು ಮೊಬೈಲ್ ಮೂಲಕ ಪಡೆಯಬಹುದು ಆದುದರಿಂದ ಮೊಬೈಲ್ ಅನ್ನು ಸಕ್ರಿಯವಾಗಿರಿಸಿಕೊಳ್ಳಿ
ಅರ್ಜಿ ಸಲ್ಲಿಸಿದ ನಂತರ ರೈತರ ಮಾಡಬೇಕಾದ ಕೆಲಸಗಳು
- ಅರ್ಜಿ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
- ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮತ್ತು ಎನ್‌ಪಿಸಿಐ ಲಿಂಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು
- ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿದರೆ ಸಂಬಂಧಿಸಿದ ಕಚೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿ ಬದಲಾಯಿಸಬೇಕು
- ಬೆಳೆ ಹಾನಿಯಾದರೆ ವಿಳಂಬ ಮಾಡದೆ ತಕ್ಷಣ ಅಧಿಕಾರಿಗಳಿಗೆ ತಿಳಿಸಬೇಕು
- ಅಗತ್ಯವಿದ್ದಲ್ಲಿ ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಕಚೇರಿ ಮತ್ತು ಅಧಿಕೃತ ಅಧಿಕಾರಿಗಳನ್ನು ಮಾತ್ರ ಸಂಪರ್ಕಿಸಬೇಕು
PMFBY ಬೆಳೆ ವಿಮೆ ರೈತರ ಭವಿಷ್ಯವನ್ನು ಹೇಗೆ ಸುರಕ್ಷಿತಗೊಳಿಸುತ್ತದೆ
ಕೃಷಿ ಕ್ಷೇತ್ರವು ಪ್ರಕೃತಿ ಯಲ್ಲಿ ಬರುವ ಮಳೆಯನ್ನು ಆಧರಿಸಿರುವುದರಿಂದ ಅಪಾಯವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ ಆದರೆ ಆ ಅಪಾಯದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಅದಕ್ಕೆ ಬೆಳೆ ವಿಮೆ ಮಾಡಿಸುವುದು ಪ್ರಮುಖವಾಗಿದೆ ಬೆಳೆ ವಿಮೆ ಹೊಂದಿರುವ ರೈತರು ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು ಅವುಗಳೆಂದರೆ
- ಬೆಳೆ ನಷ್ಟವಾದರೂ ಆರ್ಥಿಕವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ
- ಮುಂದಿನ ಹಂಗಾಮಿನಲ್ಲಿ ಮತ್ತೆ ಕೃಷಿ ಚಟುವಟಿಕೆಗಳನ್ನು ಆರಂಭಿಸಬಹುದು
- ಕೃಷಿ ಸಾಲದ ಒತ್ತಡವನ್ನು ಭಾಗಶಃ ಕಡಿಮೆ ಮಾಡಿಕೊಳ್ಳಬಹುದು
- ಕುಟುಂಬದ ಜೀವನೋಪಾಯಕ್ಕಾಗಿ ಸುಲಭ ಕ್ರಮಗಳನ್ನು ಕೈಗೊಳ್ಳಬಹುದು
- ಕೃಷಿ ಮೇಲಿನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು
ರೈತರಿಗೆ ಅಂತಿಮ ಸಲಹೆ
ಮುಂಗಾರು ಹಂಗಾಮಿನಲ್ಲಿ ಬೆಳೆ ಬೆಳೆದಿರುವ ಪ್ರತಿಯೊಬ್ಬ ರೈತರು ಸಹ ಸರ್ಕಾರವು ನೀಡಿರುವ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸುರುಪಯೋಗವನ್ನು ಪಡೆದುಕೊಳ್ಳಬೇಕು ಬೆಳೆ ವಿಮೆಯ ಕೇವಲ ಪರಿಹಾರ ಪಡೆಯುವ ಯೋಜನೆ ಆಗಿರದೆ ಅದು ರೈತರ ಪರಿಶ್ರಮ ಕುಟುಂಬದ ಆರ್ಥಿಕ ಭವಿಷ್ಯ ಮತ್ತು ಹೂಡಿಕೆಗೆ ಭದ್ರತೆ ನೀಡುವ ಏಕೈಕ ವ್ಯವಸ್ಥೆಯಾಗಿದೆ
ಆದುದರಿಂದ ಕೊನೆ ದಿನಾಂಕದವರೆಗೂ ಕಾಯದೆ ಅಗತ್ಯ ದಾಖಲೆಗಳನ್ನು ಹೊಂದಿಸಿ ಶೀಘ್ರದಲ್ಲಿ ನೋಂದಣಿಯನ್ನು ಪೂರ್ಣಗೊಳಿಸಿ ಅರ್ಜಿ ಸಲ್ಲಿಸಿದ ನಂತರ ರಶೀದಿ ಮತ್ತು ಎಲ್ಲಾ ವಿಮಾ ಸಂಬಂಧಿತ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ
PMFBY Crop Insurance 2026: FAQ’s
1. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಎಂದರೆ ಏನು?
ಉತ್ತರ: ರೈತರ ಬೆಳೆ ನಷ್ಟಕ್ಕೆ ಆರ್ಥಿಕ ರಕ್ಷಣೆ ನೀಡುವ ಕೇಂದ್ರ ಸರ್ಕಾರದ ವಿಮೆ ಯೋಜನೆಯಾಗಿದೆ.
2. ಯಾರು ಬೆಳೆ ವಿಮೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು?
ಉತ್ತರ: ಅರ್ಹ ರೈತರು, ಅಧಿಸೂಚಿತ ಬೆಳೆಗಳಿಗೆ ನಿಯಮಾನುಸಾರ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
3. ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಉತ್ತರ: ಆಧಾರ್, ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ, ಬೆಳೆ ವಿವರಗಳು ಅಗತ್ಯವಾಗಿವೆ.
4. ಬೆಳೆ ವಿಮೆಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬಹುದು?
ಉತ್ತರ: ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್‌ಸಿ, ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
5. ವಿಮಾ ಪರಿಹಾರದ ಹಣವು ಹೇಗೆ ದೊರೆಯುತ್ತದೆ?
ಉತ್ತರ: ಪರಿಶೀಲನೆಯ ನಂತರ ಪರಿಹಾರದ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
6. ಬೆಳೆ ವಿಮೆ ಮಾಡಿಸುವುದು ಕಡ್ಡಾಯವೇ?
ಉತ್ತರ: ಸರ್ಕಾರದ ನಿಯಮಾನುಸಾರ ಅರ್ಹ ರೈತರಿಗೆ ಯೋಜನೆ ಅನ್ವಯವಾಗುತ್ತದೆ ಸದಾ ಪರಿಶೀಲಿಸಿ.
7. ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು?
ಉತ್ತರ: ಅಧಿಕೃತ ಪೋರ್ಟಲ್ ಅಥವಾ ನೋಂದಣಿ ಕೇಂದ್ರದಲ್ಲಿ ಸ್ಥಿತಿ ಪರಿಶೀಲಿಸಬಹುದು ಸುಲಭವಾಗಿ.
8. ಬೆಳೆ ವಿಮೆ ಮಾಡಿಸದಿದ್ದರೆ ಏನು ನಷ್ಟವಾಗಬಹುದು?
ಉತ್ತರ: ಬೆಳೆ ನಷ್ಟವಾದರೆ ಆರ್ಥಿಕ ಪರಿಹಾರ ಪಡೆಯುವ ಅವಕಾಶ ಸಂಪೂರ್ಣವಾಗಿ ತಪ್ಪಿಹೋಗಬಹುದು.
ಅಧಿಕೃತ ಲಿಂಕ್ ಗಳು : PMFBY ಯೋಜನೆ
Last Updated: 11 July 2026
| ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ | ಕರ್ನಾಟಕ ಸರ್ಕಾರ |
| ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ | ಕರ್ನಾಟಕ ಕೃಷಿ ಇಲಾಖೆ |
| ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಧಿಕೃತ ವೆಬ್ ಸೈಟ್ | https://pmfby.gov.in/ |
| ಸಂರಕ್ಷಣೆ ಪೋರ್ಟಲ್ | ಸಂರಕ್ಷಣೆ ಪೋರ್ಟಲ್ |
ಹೆಚ್ಚುವರಿ ಲಿಂಕ್ ಗಳು
| ವಾಟ್ಸಾಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಸಂಬಂಧಿತ ಹೆಚ್ಚುವರಿ ಮಾಹಿತಿ | ನೇಮಕಾತಿ |
ಕೃಷಿ ಕ್ಷೇತ್ರದಲ್ಲಿ ಬೆಳೆ ವಿಮೆಯ ಮಹತ್ವ
ಇಂದಿನ ಸಂದರ್ಭಗಳಲ್ಲಿ ಹವಾಮಾನ ಪರಿಸ್ಥಿತಿಯು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಅನಿಶ್ಚಿತತೆಗಳನ್ನು ತರುತ್ತದೆ ಮಳೆಯ ಕೊರತೆ, ಅತಿವೃಷ್ಟಿ, ಅನಾವೃಷ್ಟಿ, ಕೀಟಗಳು ಮತ್ತು ರೋಗಭಾದೆ ಮುಂದಾದ ಕಾರಣಗಳಿಂದ ರೈತರು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದ್ದಾರೆ
ಇಂತಹ ಸಂದರ್ಭಗಳಲ್ಲಿ ಬೆಳೆ ವಿಮೆ ರೈತರ ಪರಿಶ್ರಮಕ್ಕೆ ಆರ್ಥಿಕ ಭದ್ರತೆ ನೀಡುವ ಜೊತೆಯಲ್ಲಿ ಬೆಳೆ ನಷ್ಟವಾದರೂ ಸಹ ರೈತರ ಮುಂದಿನ ಹಂಗಾಮಿಗೆ ಪುನಃ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸಲು PMFBY ಯೋಜನೆಯು ರೈತರ ಆರ್ಥಿಕ ಸುರಕ್ಷತೆಯನ್ನು ಹೆಚ್ಚಿಸುವ ಮಹತ್ವದ ಯೋಜನೆಯಾಗಿದೆ
ಕಡಿಮೆ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ಬೆಳೆಗಳಿಗೆ ವಿಮೆ ಮಾಡಿಸಿಕೊಂಡು ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ಕಡಿಮೆ ಮಾಡಿ ಈ ವಿಮೆಯ ಮೂಲಕ ಆರ್ಥಿಕ ನೆರವು ಪಡೆಯಬಹುದಾಗಿರುತ್ತದೆ
ಕೊನೆಯ ಮಾತು
2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಯನ್ನು ಬೆಳೆಯುತ್ತಿರುವ ರೈತರು, ಕೊನೆಯ ದಿನಾಂಕದವರೆಗೂ ಕಾಯದೆ ಅಗತ್ಯ ದಾಖಲೆಗಳನ್ನು ಹೊಂದಿಸಿ ಅರ್ಜಿ ಸಲ್ಲಿಸಿ ಯೋಜನೆ ಸೌಲಭ್ಯವನ್ನು ಪಡೆಯಬೇಕಾಗಿರುತ್ತದೆ
ಬೆಳೆ ವಿಮೆಯು ಕೇವಲ ಒಂದು ಯೋಜನೆ ಇಲ್ಲ ಅದು ರೈತರ ಪರಿಶ್ರಮ ಹೂಡಿಕೆ ಮತ್ತು ಭವಿಷ್ಯದ ಆರ್ಥಿಕ ಭದ್ರತೆ ನೀಡುವ ವಿಶ್ವಾಸ ವ್ಯವಸ್ಥೆಯಾಗಿದೆ ಆದ್ದರಿಂದ ಪ್ರತಿಯೊಬ್ಬ ಅರ್ಹ ರೈತರು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ
Related Information:
Shed Construction Subsidy Best Scheme 2026: ಅರ್ಜಿ ಪ್ರಕ್ರಿಯೆ, ಅರ್ಹತೆ, ಸಬ್ಸಿಡಿ ಮೊತ್ತ ಸಂಪೂರ್ಣ ಮಾಹಿತಿ
E Shram Card Big Update 2026, ಮೊಬೈಲ್ ಮೂಲಕವೇ ಕಾರ್ಡನ್ನು ಪಡೆಯಿರಿ, ಇಲ್ಲಿದೆ ಹಂತ ಹಂತವಾದ ಸಂಪೂರ್ಣ ವಿಧಾನ
Author Note : ಈ ಲೇಖನವನ್ನು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕುರಿತು ರೈತರಿಗೆ ನಿಖರ, ಸರಳ ಹಾಗೂ ಉಪಯುಕ್ತ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆ ಮತ್ತು ಸಂಬಂಧಿತ ಇಲಾಖೆಯ ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಉತ್ತಮ.
*****
About Author : ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರ ವಿಭಾಗದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು ಕಳೆದ 3 ವರ್ಷಗಳಿಂದ, ಸರ್ಕಾರಿ ಯೋಜನೆಗಳು, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಸೇವೆಗಳ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದಾರೆ. ಓದುಗರಿಗೆ ನಿಖರ, ನವೀಕೃತ ಹಾಗೂ ಉಪಯುಕ್ತ ಮಾಹಿತಿಯನ್ನು ತಲುಪಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ.
*****
Disclaimer : ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಯೋಜನೆಯ ನಿಯಮಗಳು, ಅರ್ಹತೆ, ಪ್ರೀಮಿಯಂ ಹಾಗೂ ಕೊನೆಯ ದಿನಾಂಕಗಳು ಕಾಲಕಾಲಕ್ಕೆ ಬದಲಾಗಬಹುದು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಿತ ಅಧಿಕೃತ ವೆಬ್‌ಸೈಟ್ ಅಥವಾ ಇಲಾಖೆಯ ಮಾಹಿತಿಯನ್ನು ಪರಿಶೀಲಿಸಿ.