Telegram Join Our Telegram WhatsApp Join Our WhatsApp

Best Courses After PUC in 2026: Top Career Options, Job Opportunities & Expert Guidance

PUC ನಂತರದಲ್ಲಿ ಇರುವ ಪ್ರಮುಖ ಕೋರ್ಸುಗಳ ಬಗ್ಗೆ ಸಂಪೂರ್ಣ ಮಾಹಿತಿ

PUC ಹಂತವು ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಹಂತವಾಗಿದೆ. ಪಿಯುಸಿ ಫಲಿತಾಂಶ ಬಂದ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಂಬ ಏಕೈಕ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಿಗೆ ಬರುತ್ತದೆ ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡುವುದರ ಮೂಲಕ ಉತ್ತಮ ಭವಿಷ್ಯ, ಆಕರ್ಷಕ ವೇತನವನ್ನು ಪಡೆಯಬಹುದೆಂಬ ಜೀವನದ ಯಶಸ್ಸಿನ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿಯನ್ನು ಪಡೆದರೆ ಸಾಕಾಗುವುದಿಲ್ಲ ಬದಲಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದೆ ವಿದ್ಯಾರ್ಥಿಗಳ ಆಸಕ್ತಿ ಯಾವ ಕ್ಷೇತ್ರದಲ್ಲಿದೆ  ಮತ್ತು ವಿದ್ಯಾರ್ಥಿಗೆ ಯಾವ ಕೌಶಲ್ಯಗಳನ್ನು ಹೊಂದಬೇಕು ಮತ್ತು ಭವಿಷ್ಯದ ಗುರಿಗಳನ್ನು ಪರಿಗಣಿಸಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಬೇಕು ಎಂಬುದು ಅಗತ್ಯವಾಗಿದೆ.

ಈ ಲೇಖನದಲ್ಲಿ ಪಿಯುಸಿ ನಂತರ ಲಭ್ಯವಿರುವ ಎಲ್ಲಾ ಪ್ರಮುಖ ಕೋರ್ಸುಗಳು, ಅವುಗಳನ್ನು ಮುಗಿಸಿದ ನಂತರ ಸಿಗಬಹುದಾದ ಉದ್ಯೋಗಾವಕಾಶಗಳು, ಆ ಕೋರ್ಸ್ ಗಳನ್ನು ಮಾಡಲು ಬೇಕಾದ ಅರ್ಹತೆ, ಕೋರ್ಸ್ ಗಳನ್ನು ಪೂರ್ಣಗೊಳಿಸಬೇಕಾಗುವ ಅವಧಿಯ ಸಮಯ, ಸಿಗಬಹುದಾದ ಅಂದಾಜು ಸಂಬಳ ಮತ್ತು ಓದುವ ಸಮಯದಲ್ಲಿ ಸಿಗಬಹುದಾದ ವಿದ್ಯಾರ್ಥಿ ವೇತನಗಳು ಮತ್ತು ಶೈಕ್ಷಣಿಕ ಅರ್ಹತೆಯನ್ನು ಪಡೆದ ನಂತರ ಯಾವ ವೃತ್ತಿ ಮಾರ್ಗದರ್ಶನದ ಮೂಲಕ ಉದ್ಯೋಗಾವಕಾಶವನ್ನು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ

 

SSLC ನಂತರ ಏನು ಮಾಡಬೇಕು? 2026ರ Best ಕೋರ್ಸ್‌ಗಳು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಇಲ್ಲಿದೆ ಮಾಹಿತಿ

PUC ಕೋರ್ಸ್ ನಂತರ ವೃತ್ತಿ ಯೋಜನೆ ಏಕೆ ಮುಖ್ಯ

PUC ನಂತರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಹಂತವು ಆರಂಭವಾಗುತ್ತದೆ ಅಂದರೆ ಎಸ್ ಎಸ್ ಎಲ್ ಸಿ ಹಂತವು ಪ್ರಾಥಮಿಕ ಹಾಗೂ ಅಡಿಪಾಯದ ಹಂತವಾಗಿದ್ದರೆ ಪಿಯುಸಿ ಅಂತವು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ ಆದುದರಿಂದ ಸರಿಯಾದ ವೃತ್ತಿ ಯೋಜನೆ ಮಾಡುವುದು ಅತಿ ಅವಶ್ಯಕವಾಗಿದೆ ಸರಿಯಾದ ವೃತ್ತಿ ಯೋಜನೆ ಮಾಡುವುದರಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು

  • ಭವಿಷ್ಯದ ಗುರಿ ಸ್ಪಷ್ಟವಾಗುತ್ತದೆ ಅಂದರೆ ನಮಗೆ ಯಾವ ವಲಯದಲ್ಲಿ ಆಸಕ್ತಿ ಇದೆ ನಮ್ಮ ಕೌಶಲ್ಯಗಳೇನು ಮತ್ತು ಯಾವ ವಲಯದಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು ಎಂಬ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬಹುದು.
  • ನಮಗೆ ಆಸಕ್ತಿ ಇರುವ ವಲಯಗಳಲ್ಲಿ ಇರುವ ಕೋರ್ಸ್ ಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಇದರಿಂದ ನಮ್ಮ ವೈಯಕ್ತಿಕ ಕೌಶಲ್ಯಗಳು ಸಹ ಹೆಚ್ಚುತ್ತದೆ
  • ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿರುವ ಉದ್ಯೋಗಾವಕಾಶಗಳನ್ನು ಕುಲಂಕುಶವಾಗಿ ಅರಿತುಕೊಳ್ಳಲು ಹಾಗೂ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ
  • ವೃತ್ತಿ ಯೋಜನೆ ಮಾಡುವುದರಿಂದ ಭವಿಷ್ಯದಲ್ಲಿ ಸಮಯ ಮತ್ತು ಹಣದ ವ್ಯರ್ಥತೆ ತಪ್ಪುತ್ತದೆ ಅಂದರೆ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಬೇಕು ಎಂಬ ಯೋಚನೆಗೆ ಇಲ್ಲಿ ಒಂದು ವಿರಾಮ ಸಿಗುತ್ತದೆ
  • ಸರಿಯಾದ ಕೋರ್ಸ್ ಗಳನ್ನು ಆಯ್ಕೆ ಮಾಡುವುದರಿಂದ ಹೆಚ್ಚಿನ ಸಂಬಳವಿರುವ ಉದ್ಯೋಗಗಳನ್ನು ಪಡೆಯಬಹುದು ಅಂದರೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕೋರ್ಸ್ ಗಳನ್ನು ಓದಿದರೆ ಹೆಚ್ಚು ಸಂಬಳ ಬರುವ ಉದ್ಯೋಗವಕಾಶ ಸಿಗುತ್ತದೆ
  • ವೃತ್ತಿ ಯೋಜನೆಯನ್ನು ಮಾಡುವುದರಿಂದ ಭವಿಷ್ಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶಗಳು ಸುಲಭವಾಗಿ ಮತ್ತು ಸಮಗ್ರವಾಗಿರುತ್ತದೆ

ಅನೇಕ ವಿದ್ಯಾರ್ಥಿಗಳು ಸ್ನೇಹಿತರನ್ನು ಹೆಸರಿಸುವ ಮೂಲಕ ಅಥವಾ ಸಮಾಜದ ಒತ್ತಡಕ್ಕೆ ಒಳಗಾಗಿ ಕೋರ್ಸ್ ಅನ್ನು ಆಯ್ಕೆ ಮಾಡುತ್ತಾರೆ ಅಂದರೆ ಸ್ನೇಹಿತರು ಯಾವ ಕೋರ್ಸನ್ನು ಆಯ್ಕೆ ಮಾಡುತ್ತಾರೆ ಅದನ್ನೇ ಆಯ್ಕೆ ಮಾಡುವುದು ಹಾಗೂ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿದರೆ ಹೆಚ್ಚು ಉದ್ಯೋಗಾವಕಾಶ ಸಿಗುತ್ತವೆ ಎಂಬ ಸಮಾಜದ ಒತ್ತಡಕ್ಕೆ ಒಳಗಾಗಿ ತಪ್ಪಾಗಿ ಕೋರ್ಸುಗಳನ್ನು ಆಯ್ಕೆ ಮಾಡುತ್ತಾರೆ ಇದರಿಂದ ಭವಿಷ್ಯದಲ್ಲಿ ತೊಂದರೆ ಆಗಬಹುದು ಆದುದರಿಂದ ಮೃತ್ಯುಂಜಯ ಹಂತವನ್ನು ಅತ್ಯಂತ ಜಾಗರೂಕವಾಗಿ ಮಾಡಿ

PUC ಫಲಿತಾಂಶ ಬಂದ ನಂತರ 30 ದಿನಗಳಲ್ಲಿ ಏನು ಮಾಡಬೇಕು

ಮೊದಲ ವಾರದಲ್ಲಿ : 

  • ನಿಮ್ಮ ಶೈಕ್ಷಣಿಕ ಫಲಿತಾಂಶದ ವಿಶ್ಲೇಷಣೆ ಮಾಡಿಕೊಳ್ಳಿ
  • ನೀವು ಪಡೆದಿರುವ ಅಂಕಗಳನ್ನು ಕೂಲಂಕುಶವಾಗಿ ಪರಿಶೀಲಿಸಿ
  • ನಿಮ್ಮ ಅಂಕಗಳಿಗೆ ತಕ್ಕಂತೆ ಹಾಗೂ ಆಸಕ್ತಿ ಇರುವ ಕ್ಷೇತ್ರಗಳನ್ನು ಗುರುತಿಸಿ

ಎರಡನೇ ವಾರದಲ್ಲಿ : 

  • ವಿವಿಧ ಕೋರ್ಸುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ
  • ನಿಮಗೆ ಆಸಕ್ತಿ ಇರುವ ಕೋರ್ಸುಗಳು ಯಾವ ಕಾಲೇಜುಗಳಲ್ಲಿ ಇದೆ ಎಂಬ ಬಗ್ಗೆ ಅಧ್ಯಯನ ಮಾಡಿ
  • ಉಚಿತ ಪ್ರವೇಶವನ್ನು ಪಡೆಯಲು ಇರುವ ಪ್ರವೇಶ ಪರೀಕ್ಷೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಿ

ಮೂರನೇ ವಾರದಲ್ಲಿ : 

  • ನಿಮಗೆ ತಿಳಿದಿರುವ ವೃತ್ತಿ ಮಾರ್ಗದರ್ಶಕರ ಸಲಹೆಗಳನ್ನು ಪಡೆಯಿರಿ
  • ನೀವು ಓದಬೇಕೆಂದಿರುವ ಕೋರ್ಸಿನ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ
  • ಶೈಕ್ಷಣಿಕ ವಲಯದಲ್ಲಿರುವ ಕೋರ್ಸುಗಳ ಬಗ್ಗೆ ಹೋಲಿಕೆ ಮಾಡಿ ಯಾವ ಕೋರ್ಸ್ ಉತ್ತಮ ಎಂದು ನಿರ್ಧರಿಸಿ

ನಾಲ್ಕನೇ ವಾರದಲ್ಲಿ : 

  • ಕೋರ್ಸ್ ಅನ್ನು ಆಯ್ಕೆ ಮಾಡಿದ ನಂತರ ಉತ್ತಮ ಕಾಲೇಜು ಅನ್ನು ಹುಡುಕಿ ಅರ್ಜಿ ಸಲ್ಲಿಸಿ
  • ದಾಖಲಾತಿಗೆ ಬೇಕಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
  • ಶೈಕ್ಷಣಿಕ ವರ್ಷಗಳಲ್ಲಿ ಸಿಗುವಂತಹ ವಿದ್ಯಾರ್ಥಿ ವೇತನದ ಅವಕಾಶಗಳನ್ನು ಪರಿಶೀಲಿಸಿ

PUC ನಂತರ ಕೋರ್ಸ್ ಆಯ್ಕೆ ಮಾಡುವಾಗ ವಿದ್ಯಾರ್ಥಿಗಳು ಎದುರಿಸುವ ಸವಾಲುಗಳು

  • ಆಸಕ್ತಿಯನ್ನು ಗುರುತಿಸಲಾಗದೇ ಇರುವುದು
  • ಕುಟುಂಬದ ಒತ್ತಡ ಹೆಚ್ಚಾಗಿರುವುದು
  • ಸ್ನೇಹಿತರ ಪ್ರಭಾವಕ್ಕೆ ಒಳಗಾಗುವುದು
  • ಕುಟುಂಬದ ಹಣಕಾಸಿನ ಸಮಸ್ಯೆಗಳು
  • ಉದ್ಯೋಗ ಮಾರುಕಟ್ಟೆಯ ಮಾಹಿತಿ ಕೊರತೆ ಮತ್ತು ಭವಿಷ್ಯದ ಉದ್ಯೋಗಾವಕಾಶದ ಅನಿರೀಕ್ಷತೆ

ಪಿಯುಸಿ ನಂತರ ಇರುವ ಕೋರ್ಸುಗಳ ಸಂಪೂರ್ಣ ಪಟ್ಟಿ

 PUC ವಿಜ್ಞಾನ ವಿಭಾಗದ ನಂತರ ಏನು?

MBBS (Bachelor of Medicine and Bachelor of Surgery)

ಎಂಬಿಬಿಎಸ್ ವೈದ್ಯಕೀಯ ಕ್ಷೇತ್ರದ ಪ್ರಮುಖ ಪದವಿಯಾಗಿದ್ದು ಫಿಸಿಕ್ಸ್ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳೊಂದಿಗೆ ನೀಟ್ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದವರು ಈ ಕೋರ್ಸಿಗೆ ಪ್ರವೇಶ ಪಡೆಯಬಹುದು ಇದು 5.5 ವರ್ಷದ ಕೋರ್ಸ್ ಆಗಿದ್ದು ಇದನ್ನು ಮುಗಿಸಿದ ನಂತರ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಬಹುದು ಕ್ಲಿನಿಕ್ ಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಪಡೆದುಕೊಳ್ಳಬಹುದು

BDS (Bachelor of Dental Surgery)

ಬಿಡಿಎಸ್ ಒಂದು ದಂತ ವೈದ್ಯಕೀಯ ಪದವಿ ಕೋರ್ಸ್ ಆಗಿದ್ದು ಫಿಸಿಕ್ಸ್ ಕೆಮಿಸ್ಟ್ರಿ ಮತ್ತು ಬಯಾಲಜಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಮೂಲಕ ಪ್ರವೇಶವನ್ನು ಪಡೆಯಬಹುದು ಐದು ವರ್ಷದ ಅಧ್ಯಯನ ದಲ್ಲಿ ದಂತಗಳ ಚಿಕಿತ್ಸೆ ಮತ್ತು ಅವುಗಳನ್ನು ನಿರ್ವಹಿಸಬೇಕಾದ ಕೌಶಲ್ಯಗಳ ಬಗ್ಗೆ ಇಲ್ಲಿ ಕಲಿಯಲಾಗುತ್ತದೆ ಈ ಕೋರ್ಸ್ ಮುಗಿದ ನಂತರ ದಂತ ವೈದ್ಯರಾಗಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದು

BAMS (Bachelor of Ayurvedic Medicine and Surgery)

ಬಿಎಎಂಎಸ್ ಒಂದು ಆಯುರ್ವೇದ ಕ್ಷೇತ್ರದ ವೈದ್ಯಕೀಯ ಪದವಿಯಾಗಿದ್ದು ಈ ಪದವಿಯು 5.5 ವರ್ಷದ ಕೋರ್ಸ್ ಆಗಿರುತ್ತದೆ ಇಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನಗಳು ಪರಿಸರದಲ್ಲಿರುವ ಔಷಧೀಯ ಸಸ್ಯಗಳು ಮತ್ತು ಅವುಗಳ ಆರೋಗ್ಯ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಈ ಕೋರ್ಸ್ನ ಪೂರ್ಣಗೊಳಿಸಿದ ನಂತರ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಬಹುದು

BHMS (Bachelor of Homeopathic Medicine and Surgery)

ಬಿಹೆಚ್ಎಂಎಸ್ ಒಂದು ಹೋಮಿಯೋಪತಿ ವೈದ್ಯಕೀಯ ಪದವಿಯಾಗಿದ್ದು 5.5 ವರ್ಷದ ಅಧ್ಯಯನದ ಅವಧಿಯಲ್ಲಿ ಹೋಮಿಯೋಪತಿ ಔಷಧಗಳು ಮತ್ತು ಅವುಗಳ ಬಗ್ಗೆ ಇರುವ ಚಿಕಿತ್ಸಾ ವಿಧಾನಗಳನ್ನು ಕಲಿಯಲಾಗುತ್ತದೆ ಈ ಕೋರ್ಸ್ ಪೂರ್ಣಗೊಂಡ ನಂತರ ಹೋಮಿಯೋಪತಿ ವೈದ್ಯರಾಗಿ ಕೆಲಸ ಪಡೆದುಕೊಳ್ಳಬಹುದು

BPT (Bachelor of Physiotherapy)

ಬಿಪಿಟಿ ಫಿಜಿಯೋಥೆರಪಿ ಕೋರ್ಸ್ ಆಗಿದ್ದು ಮಾನವನ ದೈಹಿಕ ಅಂಗಾಂಗಗಳ ಪುನರ್ವಸತಿ ಮತ್ತು ಚಲನಶೀಲತೆಯಲ್ಲಿ ಸುಧಾರಣೆಯನ್ನು ತರಲು ಅಧ್ಯಯನ ಮಾಡುವ ಕೋರ್ಸ್ ಆಗಿದ್ದು 4.5 ವರ್ಷದ ಅಧ್ಯಯನದ ಅವಧಿಯಲ್ಲಿ ಫಿಸಿಯೋಥೆರಪಿ ಬಗ್ಗೆ ಕಲಿಯಲಾಗುತ್ತದೆ ಫಿಸಿಯೋಥೆರಪಿಸ್ಟ್ ಆಗಿ ಆಸ್ಪತ್ರೆಗಳು ಕ್ರೀಡಾ ಕೇಂದ್ರಗಳು ಮತ್ತು ಪುನರ್ವಸತಿ ಸಂಸ್ಥೆಗಳಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದು

B.Sc Nursing

ಬಿಎಸ್ಸಿ ನರ್ಸಿಂಗ್ ಒಂದು ಆರೋಗ್ಯ ವಲಯದ ಸೇವಾ ಕ್ಷೇತ್ರದ ಪ್ರಮುಖ ಕೋರ್ಸ್ ಆಗಿದ್ದು ನಾಲ್ಕು ವರ್ಷದ. ಅವಧಿಯಲ್ಲಿ ರೋಗಿಗಳನ್ನು ಆರೈಕೆ ಮಾಡುವುದು ತುರ್ತು ಚಿಕಿತ್ಸೆಗಳನ್ನು ಒದಗಿಸುವುದು ಮತ್ತು ವೈದ್ಯಕೀಯ ಸಹಾಯದ ಬಗ್ಗೆ ಇಲ್ಲಿ ಕಲಿಸಲಾಗುತ್ತದೆ ಆಸ್ಪತ್ರೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ

B.Pharm (Bachelor of Pharmacy)

ಬಿಫಾರ್ಮಾ ಫಾರ್ಮಸಿ ಕ್ಷೇತ್ರದ ಪದವಿ ಕೋರ್ಸ್ ಆಗಿದ್ದು ನಾಲ್ಕು ವರ್ಷದ ಅಧ್ಯಯನದ ಅವಧಿಯಲ್ಲಿ ಔಷಧಗಳ ತಯಾರಿಕೆ ಉತ್ತಮ ಗುಣಮಟ್ಟ ಮತ್ತು ಗುಣಮಟ್ಟ ನಿಯಂತ್ರಣ ವಿತರಣೆ ಕುರಿತು ಶಿಕ್ಷಣ ನೀಡಲಾಗುತ್ತದೆ ಔಷಧ ಕಂಪನಿ ಮತ್ತು ಫಾರ್ಮಸಿ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು

D.Pharm (Diploma in Pharmacy)

ಡಿಫಾರ್ಮಾ ಫಾರ್ಮಸಿ ಕ್ಷೇತ್ರದ ಡಿಪ್ಲೋಮಾ ಕೋರ್ಸ್ ಆಗಿದ್ದು ಎರಡು ವರ್ಷದ ಅವಧಿಯಲ್ಲಿ ಔಷಧಗಳ ಬಳಕೆಯ ಮಾಹಿತಿ ಸಂಗ್ರಹಿಸುವ ವಿಧಾನ ಮತ್ತು ವಿತರಣೆ ಕುರಿತು ಮೂಲಭೂತ ಜ್ಞಾನವನ್ನು ಕಲಿಯಲಾಗುತ್ತದೆ ಮೆಡಿಕಲ್ ಸ್ಟೋರ್ ಮತ್ತು ಆಸ್ಪತ್ರೆ ಫಾರ್ಮಸಿಗಳಲ್ಲಿ ಕೆಲಸವನ್ನು ಪಡೆಯಬಹುದು

B.Sc Physics

ಬಿಎಸ್ಸಿ ಫಿಸಿಕ್ಸ್ 4 ವರ್ಷದ ಕೋರ್ಸ್ ಆಗಿದ್ದು ಭೌತಶಾಸ್ತ್ರದ ತತ್ವಗಳು ಶಕ್ತಿ ಚಲನೆ ಮತ್ತು ಪ್ರಕೃತಿ ನಿಯಮಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲಾಗುತ್ತದೆ ಸಂಶೋಧನೆ ತಾಂತ್ರಿಕ ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಕುರುತಿ ಅವಕಾಶಗಳು ದೊರೆಯುತ್ತವೆ

B.Sc Chemistry

ಬಿಎಸ್ಸಿ ಕೆಮಿಸ್ಟ್ರಿ ರಾಸಾಯನಿಕ ಸಂಯುಕ್ತಗಳು ರಾಸಾಯನಿಕ ಪ್ರತಿಕ್ರಿಯೆಗಳು ಹಾಗೂ ಹೊಸ ರೀತಿಯ ಪ್ರಯೋಗಗಳ ಬಗ್ಗೆ ಅಧ್ಯಯನನ್ನು ನಡೆಸುತ್ತದೆ ನಾಲ್ಕು ವರ್ಷದ ಕೋರ್ಸ್ ಇದಾಗಿದ್ದು ಪೂರ್ಣಗೊಳಿಸಿದ ನಂತರ ಔಷದ ಆಹಾರ ಕಸಗೊಬ್ಬರ ತಯಾರಿಕೆ ಮತ್ತು ಸಂಶೋಧನಾ ಸಂಸ್ಥೆ ಗಳಲ್ಲಿ ಉದ್ಯೋಗ ಪಡೆಯಬಹುದು

B.Sc Mathematics

ಬಿಎಸ್ಸಿ ಮ್ಯಾಥಮೆಟಿಕ್ಸ್ ನಾಲ್ಕು ವರ್ಷದ ಕೋರ್ಸ್ ಆಗಿದ್ದು ಗಣಿತದ ಸಿದ್ಧಾಂತಗಳು ಮತ್ತು ಉತ್ತಮ ರೀತಿಯ ವಿಶ್ಲೇಷಣಾ ಕೌಶಲ್ಯಗಳನ್ನು ತಿಳಿದುಕೊಳ್ಳಲಾಗುತ್ತದೆ ಈ ಕೋರ್ಸಿನ ನಂತರ ಬ್ಯಾಂಕಿಂಗ್ ಮಾಹಿತಿ ವಿಶ್ಲೇಷಣೆ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ವಿಮ ಕ್ಷೇತ್ರದಲ್ಲಿ ಕೆಲಸವನ್ನು ಪಡೆದುಕೊಳ್ಳಬಹುದು

B.Sc Biotechnology

ಬಿಎಸ್ಸಿ ಬಯೋಟೆಕ್ನಾಲಜಿ ಜೈವಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ನಾಲ್ಕು ವರ್ಷಗಳ ಕೋರ್ಸ್ ಆಗಿದ್ದು ಔಷದ ಉತ್ಪಾದನೆ, ಕೃಷಿ ವಲಯ ಹಾಗೂ ಕೃಷಿ ಸಂಶೋಧನೆಗೆ ಸಂಬಂಧಿಸಿದಂತೆ ಬಯೋಟೆಕ್ ಕಂಪನಿಗಳಲ್ಲಿ ಉತ್ತಮ ಉದ್ಯೋಗಾವಕಾಶ ಸಿಗುತ್ತವೆ

B.Sc Microbiology

ಬಿಎಸ್ಸಿ ಮೈಕ್ರೋಬಯಾಲಜಿ ಸೂಕ್ಷ್ಮಜೀವಿಗಳ ಅಧ್ಯಯನಕ್ಕೆ ಸಂಬಂಧಿಸಿದ ಕೋರ್ಸ್ ಆಗಿದ್ದು ನಾಲ್ಕು ವರ್ಷದ ಕೋರ್ಸ್ ಅವಧಿಯಲ್ಲಿ ವೈರಸ್ ಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳ ಬಗ್ಗೆ ಕಲಿಯಲಾಗುತ್ತದೆ ವೈದ್ಯಕೀಯ ಪ್ರಯೋಗಾಲಯದಲ್ಲಿ ಉದ್ಯೋಗವನ್ನು ಪಡೆಯಬಹುದು

B.Sc Computer Science

ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ನಾಲ್ಕು ವರ್ಷದ ಕೋರ್ಸ್ ಆಗಿದ್ದು ಕಂಪ್ಯೂಟರ್ ಪ್ರೋಗ್ರಾಮಿಂಗ್ ಸಾಫ್ಟ್ವೇರ್ ಅಭಿವೃದ್ಧಿ ಮತ್ತು ಡಾಟಾ ನಿರ್ವಹಣೆ ಕುರಿತು ಶಿಕ್ಷಣ ನೀಡುತ್ತದೆ ಐ ಟಿ ಕಂಪನಿಗಳು ಸ್ಟಾರ್ಟ್ ಅಪ್ ಗಳು ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗುತ್ತದೆ

Engineering courses

BE / B.Tech (Bachelor of Engineering / Bachelor of Technology)

ಬಿಇ ಅಥವಾ ಬಿ ಟೆಕ್ ಕೋರ್ಸುಗಳು ಇಂಜಿನಿಯರಿಂಗ್ ಕ್ಷೇತ್ರದ ಪ್ರಮುಖ ಪದವಿ ಕೋರ್ಸ್ಗಳಾಗಿದ್ದು ಸಾಮಾನ್ಯವಾಗಿ ನಾಲ್ಕು ವರ್ಷದ ಅವಧಿಯಿಂದ ಕೂಡಿರುತ್ತದೆ ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯವನ್ನು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಲು ಸಹಕರಿಸುವ ಈ ಕೋರ್ಸುಗಳು ಇದರ ಅಡಿಯಲ್ಲಿ ವಿಶೇಷ ವಿಭಾಗಗಳನ್ನು ನೀಡಲಾಗಿದೆ ಈ ವಿಭಾಗಗಳಲ್ಲಿ ಅಧ್ಯಯನ ಮಾಡಲು ಅವಕಾಶವಿದೆ

Computer Science Engineering (CSE)

ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಅಡಿಯಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಸಾಫ್ಟ್ವೇರ್ ಗಳ ಅಭಿವೃದ್ಧಿ ಡಾಟಾಬೇಸ್ಗಳ ನಿರ್ವಹಣೆ ಮತ್ತು ನೆಟ್ವರ್ಕಿಂಗ್ ಕುರಿತು ಶಿಕ್ಷಣವನ್ನು ಪಡೆಯಲಾಗುತ್ತದೆ ಐಟಿ ಕಂಪನಿಗಳು ಸಾಫ್ಟ್ವೇರ್ ಕಂಪನಿಗಳಲ್ಲಿ ಮತ್ತು ಸ್ಟಾರ್ಟ್ ಅಪ್ ಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು

Artificial Intelligence (AI)

ಕೃತಕ ಬುದ್ಧಿಮತ್ತೆ ಯಂತ್ರಗಳ ಸ್ವಯಂ ಕಲಿಕೆ ಮತ್ತು ಸ್ವಯಂ ಚಾಲಿತ ತಂತ್ರಜ್ಞಾನಗಳ ಬಗ್ಗೆ ಅಧ್ಯಯನವನ್ನು ಈ ವಿಭಾಗವು ನಡೆಸುತ್ತದೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪರಿಣತಿ ಪಡೆದವರಿಗೆ ಪ್ರಖ್ಯಾತ ಆಗಬಹುದ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗಾವಕಾಶ ಸಿಗುತ್ತದೆ

Data Science

ಮಾಹಿತಿಗಳ ಸಂಗ್ರಹಣೆ ವಿಶ್ಲೇಷಣೆ ನಿರ್ವಹಣೆ ಮತ್ತು ಅರ್ಥೈಸುವ ವಿಧಾನಗಳನ್ನು ಇಲ್ಲಿ ಕಲಿಯಲಾಗುತ್ತದೆ ಬ್ಯಾಂಕಿಂಗ್ ಕ್ಷೇತ್ರ ಆರೋಗ್ಯವಲಯ ಈ ಕಾಮರ್ಸ್ ಕ್ಷೇತ್ರ ಮತ್ತು ಇತಿ ಕ್ಷೇತ್ರಗಳಲ್ಲಿ ಈ ಕೋರ್ಸಿಗೆ ಉತ್ತಮ ಬೇಡಿಕೆ ಇದೆ

Information Science Engineering (ISE)

ಮಾಹಿತಿಗಳ ನಿರ್ವಹಣೆ ಮಾಹಿತಿಗಳಿಗೆ ಸಂಬಂಧಿಸಿದ ಸಾಫ್ಟ್ವೇರ್ ಗಳ ಅಭಿವೃದ್ಧಿ ಡಾಟಾಬೇಸ್ ಮತ್ತು ನೆಟ್ವರ್ಕ್ ತಂತ್ರಜ್ಞಾನಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಉಪಯುಕ್ತತೆಗೆ ಸಂಬಂಧಿಸಿದಂತೆ ಅಧ್ಯಯನವನ್ನು ಮಾಡಲಾಗುತ್ತದೆ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಸಿಸ್ಟಮ್ ಅನಲಿಸ್ಟ್ ಹುದ್ದೆಗಳಿಗೆ ಹೆಚ್ಚಿನ ಅವಕಾಶವಿದೆ

Electronics Engineering (ECE)

ಎಲೆಕ್ಟ್ರಾನಿಕ್ ಸಾಧನೆಗಳು ಮೈಕ್ರೋ ಪ್ರೊಸೆಸರ್ಗಳ ತಂತ್ರಜ್ಞಾನಗಳು ಸಮೂಹನ ವ್ಯವಸ್ಥೆ ಮುಂತಾದ ವಿಭಾಗಗಳಲ್ಲಿ ಕಲಿಯಲಾಗುತ್ತದೆ ಟೆಲಿಕಾಂ ಕ್ಷೇತ್ರ ಎಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ತಯಾರಿಕಾ ಘಟಕಗಳಲ್ಲಿ ಉದ್ಯೋಗಾವಕಾಶ ದೊರೆಯುತ್ತದೆ

Mechanical Engineering

ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳಲ್ಲಿ ಯಂತ್ರಗಳ ವಿನ್ಯಾಸ ಯಂತ್ರಗಳ ತಯಾರಿಕೆ ಮತ್ತು ಅವುಗಳಿಗೆ ಸಂಬಂಧಿಸಿದ ನಿರ್ವಹಣೆಯ ಅಂಶಗಳಿಗೆ ಸಂಬಂಧಿಸಿದಂತೆ ಈ ಕೋರ್ಸ್ ಅಧ್ಯಯನ ಮಾಡುತ್ತದೆ ವಾಹನಗಳ ಉದ್ಯಮ ವಲಯ ಉತ್ಪಾದನಾ ಕೈಗಾರಿಕೆಗಳು ಶಕ್ತಿ ಕ್ಷೇತ್ರ ಮತ್ತು ಹೊಸ ರೀತಿಯ ಸಂಶೋಧನಾ ಸಂಸ್ಥೆಗಳಲ್ಲಿ ವೃತ್ತಿ ಅವಕಾಶಗಳು ಸಿಗುತ್ತವೆ

Civil Engineering

ಕಟ್ಟಡಗಳ ನಿರ್ಮಾಣ ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆ ರಸ್ತೆಗಳು ಮತ್ತು ಮೂಲಸೌಕರ್ಯಗಳ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಇತರೆ ಎಲ್ಲಾ ನಿರ್ಮಾಣ ಕ್ಷೇತ್ರಗಳ ಬಗ್ಗೆ ಶಿಕ್ಷಣವನ್ನು ನೀಡುತ್ತದೆ ಸರ್ಕಾರಿ ಮತ್ತು ಖಾಸಗಿ ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ನಾವು ಪಡೆಯಬಹುದು

Electrical Engineering (EEE)

ವಿದ್ಯುತ್ ಉತ್ಪಾದನೆ ಮತ್ತು ಅದರ ವಿತರಣೆ ವಿದ್ಯುತ್ ಸಾಧನಗಳ ಉತ್ಪಾದನೆ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಿಸುತ್ತದೆ ವಿದ್ಯುತ್ ಮಂಡಳಿಗಳು ಬೃಹತ್ ಕೈಗಾರಿಕೆಗಳು ಮತ್ತು ಶಕ್ತಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು

Aerospace Engineering

ಹೆಲಿಕಾಪ್ಟರ್ಗಳು ಉಪಗ್ರಹಗಳು ಬಾಹ್ಯಾಕಾಶ ವಾಹನಗಳು ಮತ್ತು ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೋರ್ಸ್ ಇದಾಗಿದ್ದು ಏರೋ ಸ್ಪೇಸ್ ಸಮಸ್ಯೆಗಳು ಸಂಶೋಧನಾ ಕೇಂದ್ರಗಳು ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು

ಈ ಮೇಲಿನ ಎಲ್ಲಾ ಕೋರ್ಸುಗಳ ಅವಧಿಯು 4 ವರ್ಷಗಳಾಗಿದ್ದು ಇದಕ್ಕೆ K-CET, COMED-K, JEE Main ಪ್ರವೇಶ ಪರೀಕ್ಷೆಗಳ ಮೂಲಕ ಪ್ರವೇಶವನ್ನು ಪಡೆಯಬಹುದು

 PUC ವಾಣಿಜ್ಯ ವಿಭಾಗದ ನಂತರ ಏನು?

B.Com (Bachelor of Commerce)

ಬಿಕಾಂ ವಾಣಿಜ್ಯ ಕ್ಷೇತ್ರದ ಪ್ರಮುಖ ಪದವಿ ಕೋರ್ಸ್ ಆಗಿದ್ದು ಮೂರು ವರ್ಷದ ಅವಧಿಯಲ್ಲಿ ಲೆಕ್ಕಪತ್ರ, ತೆರಿಗೆ, ಬ್ಯಾಂಕಿಂಗ್, ವ್ಯವಹಾರ, ಹಣಕಾಸು ನಿರ್ವಹಣೆ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಬ್ಯಾಂಕುಗಳು ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಉದ್ಯೋಗಗಳಿಗೆ ಸಹಕಾರಿಯಾಗಿದೆ

BBA (Bachelor of Business Administration)

ಬಿಬಿಎ ಉದ್ಯಮಗಳ ವ್ಯವಹಾರ ನಿರ್ವಹಣೆಗೆ ಸಂಬಂಧಿಸಿದ ಮೂರು ವರ್ಷದ ಪದವಿ ಕೋರ್ಸ್ ಆಗಿದ್ದು ಮಾನವ ಸಂಪನ್ಮೂಲ ಹಣಕಾಸು ಮತ್ತು ನಿರ್ವಹಣೆ ಕೌಶಲ್ಯಗಳನ್ನು ಹೆಚ್ಚಿಸುತ್ತದೆ ಮಾರ್ಕೆಟಿಂಗ್ ವಿಷಯದಲ್ಲಿ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲಿ ಮತ್ತು ಜೀವನ ಕಟ್ಟಿಕೊಳ್ಳಲು ಉತ್ತಮ ಕೋರ್ಸ್ ಆಗಿದೆ

BCA (Bachelor of Computer Applications)

ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಮೂರು ವರ್ಷದ ಪದವಿ ಕೋರ್ಸ್ ಆಗಿದ್ದು ಸಾಫ್ಟ್ವೇರ್ ಅಭಿವೃದ್ಧಿ ಪ್ರೋಗ್ರಾಮಿಂಗ್ ಮತ್ತು ಡೇಟಾಬೇಸ್ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಐಟಿ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಬಹುದು

CA (Chartered Accountant)

ಸಿಎ ಭಾರತ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಕೋರ್ಸ್ ಆಗಿದ್ದು ಲೆಕ್ಕಪತ್ರ ನಿರ್ವಹಣೆ ಆಡಿಟಿಂಗ್ ಮಾಡುವುದು ತೆರಿಗೆ ಮತ್ತು ಹಣಕಾಸು ನಿರ್ವಹಣೆ ವಿಚಾರಗಳಲ್ಲಿ ಪರಿಣಿತಿಯನ್ನು ನೀಡುತ್ತದೆ ಪರೀಕ್ಷೆ ಕಠಿಣವಾಗಿದ್ದರು ಜೀವನ ಮತ್ತು ಉತ್ತಮ ವೇತನ ದೊರೆಯುತ್ತದೆ

CS (Company Secretary)

ಕಂಪನಿ ಸೆಕ್ರೆಟರಿ ಕೋರ್ಸು ಕಾನೂನು ಆಡಳಿತ ಮತ್ತು ಕಂಪನಿಯಲ್ಲಿನ ನಿಯಮ ಪಾಲನೆಗೆ ಸಂಬಂಧಿಸಿದ ವೃತ್ತಿಪರ ಕೋರ್ಸ್ ಆಗಿದ್ದು ಕಂಪನಿ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಸಹಕರಿಸುತ್ತದೆ ಕಾರ್ಪೊರೇಟ್ ಕಂಪನಿಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು ಉದ್ಯೋಗಗಳು ಬೇಗನೆ ಸಿಗುತ್ತವೆ

CMA (Cost and Management Accountant)

ಕಾಸ್ಟ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ ತೋರಿಸು ವೆಚ್ಚ ಲೆಕ್ಕಪತ್ರ ಹಣಕಾಸು ಯೋಜನೆ ಮತ್ತು ವಿಷಯಗಳ ನಿರ್ವಹಣಾ ವಿಶೇಷತೆಗೆ ಸಂಬಂಧಿಸಿದಂತೆ ವೃತ್ತಿಪರ ಕೋರ್ಸ್ ಆಗಿದ್ದು ಕೈಗಾರಿಕೆಗಳ ಮತ್ತು ಹಣಕಾಸು ಕಂಪನಿಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ

 PUC ಕಲಾ ವಿಭಾಗದ ನಂತರ ಏನು?

BA (Bachelor of Arts)

ಬಿಎ ಕಲಾವಿಭಾಗದ ಪ್ರಮುಖ ಪದವಿ ಕೋರ್ಸ್ ಆಗಿದ್ದು ಮೂರು ವರ್ಷದ ಅವಧಿಯಲ್ಲಿ ಅರ್ಥಶಾಸ್ತ್ರ ಸಮಾಜಶಾಸ್ತ್ರ ಇತಿಹಾಸ ಮತ್ತು ರಾಜಕೀಯ ಮತ್ತು ಮಾನವಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ಸರ್ಕಾರಿ ಉದ್ಯೋಗಗಳಿಗೆ ತಯಾರಿನ ನಡೆಸುವವರಿಗೆ ಬಿಎ ವಿಭಾಗವು ಹೆಚ್ಚಿನ ಸಹಕಾರವನ್ನು ನೀಡುತ್ತದೆ

Economics (ಅರ್ಥಶಾಸ್ತ್ರ)

ಅರ್ಥಶಾಸ್ತ್ರ ವಿಷಯವು ದೇಶದ ಹಾಗೂ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗಳು ಮಾರುಕಟ್ಟೆ ವ್ಯವಸ್ಥೆ ಉತ್ಪಾದನಾ ತಂತ್ರ ಮತ್ತು ಪ್ರೀತಿಗಳು ಸಂಪನ್ಮೂಲಗಳ ಬಳಕೆ ಬಗ್ಗೆ ಅಧ್ಯಯನ ಮಾಡುತ್ತದೆ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳು ಸರಕಾರಿ ಯೋಜನೆಗಳು ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು

Political Science (ರಾಜ್ಯಶಾಸ್ತ್ರ)

ರಾಜ್ಯಶಾಸ್ತ್ರ ವಿಭಾಗವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಜಕೀಯ ವ್ಯವಸ್ಥೆ ಸಾರ್ವಜನಿಕ ಆಡಳಿತ ಮತ್ತು ಸಂವಿಧಾನದ ಬಗ್ಗೆ ಅಧ್ಯಯನ ನಡೆಸುತ್ತದೆ ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳಲ್ಲಿ ಮತ್ತು ಕಾನೂನು ಪರೀಕ್ಷೆಗಳು ಮತ್ತು ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಸಹಕರಿಸುತ್ತದೆ

Sociology (ಸಮಾಜಶಾಸ್ತ್ರ)

ಸಮಾಜಶಾಸ್ತ್ರವು ಸಮಾಜದ ರಚನೆ ಮಾನವನ ನಡವಳಿಕೆ ಮತ್ತು ಸಾಮಾಜಿಕ ಸಂಬಂಧಗಳ ಬಗ್ಗೆ ಅಧ್ಯಯನ ನಡೆಸುತ್ತದೆ ಸಾಮಾಜಿಕ ಸೇವಾ ಸಂಸ್ಥೆಗಳು ಸಂಶೋಧನಾ ಕೇಂದ್ರಗಳು ಮತ್ತು ಸರ್ಕಾರಿ ಯೋಜನೆಗಳಲ್ಲಿ ಉದ್ಯೋಗಾವಕಾಶ ದೊರೆಯುತ್ತದೆ

Psychology (ಮನೋವಿಜ್ಞಾನ)

ಮನೋವಿಜ್ಞಾನವು ಮಾನವನ ಮನಸ್ಸು ಭಾವನೆಗಳು ಮತ್ತು ವರ್ತನೆಯ ಅಧ್ಯಯನಕ್ಕೆ ಸಂಬಂಧಿಸಿದ ಕೋರ್ಸ್ ಆಗಿದ್ದು ಆಪ್ತ ಸಮಾಲೋಚನೆ ಶಿಕ್ಷಣ ಹಾಗೂ ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ವೃತ್ತಿ ಅವಕಾಶ ದೊರೆಯುತ್ತವೆ

BJMC (Bachelor of Journalism and Mass Communication)

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದ ಪದವಿ ಕೋರ್ಸ್ ಇದಾಗಿದ್ದು ಸಾರ್ವಜನಿಕವಾಗಿ ಸುದ್ದಿಗಳ ಸಂಗ್ರಹಣೆ ವರದಿಗಾರಿಕೆ ಡಿಜಿಟಲ್ ಮಾಧ್ಯಮ ಮತ್ತು ಸಾರ್ವಜನಿಕರಲ್ಲಿ ಸಂಪರ್ಕ ಕೌಶಲ್ಯಗಳನ್ನು ವೃದ್ಧಿಸಲು ಕೌಶಲ್ಯಗಳನ್ನು ಕಲಿಸುತ್ತದೆ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು

BSW (Bachelor of Social Work)

ಸಮಾಜ ಕಾರ್ಯದ ಪದವಿ ಕೋರ್ಸ್ ಸಮಾಜದ ಸಮಸ್ಯೆ ಸಮುದಾಯದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಕುರಿತು ಶಿಕ್ಷಣ ನೀಡುತ್ತದೆ ಸರ್ಕಾರಿ ಸಂಸ್ಥೆಗಳು ಏನ್ ಜೀವಗಳು ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬಹುದು

BA LLB (Bachelor of Arts and Bachelor of Laws)

ಬಿಎ ಎಎಲ್‌ಬಿ 5 ವರ್ಷದ ಕೋರ್ಸ್ ಆಗಿದ್ದು ಕಾನೂನು ಕಲೆ ವಿಷಯದ ಬಗ್ಗೆ ಅಧ್ಯಯನವನ್ನು ನಡೆಸುತ್ತದೆ ವಕೀಲಿಕೆ ನ್ಯಾಯಾಂಗ ಸೇವೆಗಳ ಒದಗಿಸುವಿಕೆ ಮತ್ತು ಕಾನೂನು ಸಲಹಾ ಕೃತಿಗಳಿಗೆ ಇದು ಉತ್ತಮ ಮಾರ್ಗವಾಗಿದೆ

BBA LLB (Bachelor of Business Administration and Bachelor of Laws)

ವ್ಯವಹಾರ ನಿರ್ವಹಣೆ ಮತ್ತು ಕಾನೂನು ಶಿಕ್ಷಣವನ್ನು ಪಡೆಯುವಂತಹ ಐದು ವರ್ಷದ ಕೋರ್ಸ್ ಇದಾಗಿದ್ದು ಕಾರ್ಪೊರೇಟ್ ಕಂಪನಿಗಳಲ್ಲಿನ ಕಾನೂನು ವ್ಯವಹಾರ ನಿಯಮಗಳು ಮತ್ತು ಕಾನೂನು ಸಲಹ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದು

LLB (Bachelor of Laws)

ಎಲ್ ಎಲ್ ಬಿ ಕಾನೂನು ಕ್ಷೇತ್ರದ ಮೂಲಭೂತ ಪದವಿ ಕೋರ್ಸ್ ಆಗಿದ್ದು ಸಂವಿಧಾನ ಅಪರಾಧ ಮತ್ತು ನಾಗರಿಕ ಕಾನೂನುಗಳು ಅಧ್ಯಯನ ಮತ್ತು ನ್ಯಾಯಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲಾಗುತ್ತದೆ ವಕೀಲ ನ್ಯಾಯಾಧೀಶ ಹಾಗೂ ಕಾನೂನು ಸಲಹೆಗಾರ ಉದ್ಯೋಗಗಳನ್ನು ಪಡೆಯಬಹುದು

PUC ನಂತರ ಬರೆಯಬಹುದಾದ ಪ್ರಮುಖ ಪ್ರವೇಶ ಪರೀಕ್ಷೆಗಳು ಮತ್ತು ಸಂಬಂಧಿತ ಕೋರ್ಸುಗಳು

ಪರೀಕ್ಷೆ ಕೋರ್ಸ್
NEET ಪರೀಕ್ಷೆ MBBS, BDS ಕೋರ್ಸ್
KCET ಪರೀಕ್ಷೆ Engineering‌ ಕೋರ್ಸ್
COMEDK ಪರೀಕ್ಷೆ Engineering ಕೋರ್ಸ್
JEE Main ಪರೀಕ್ಷೆ Engineering ಕೋರ್ಸ್
CLAT ಪರೀಕ್ಷೆ Law ಕೋರ್ಸ್
NATA ಪರೀಕ್ಷೆ Architecture ಕೋರ್ಸ್
NIFT ಪರೀಕ್ಷೆ Fashion Designing ಕೋರ್ಸ್
CUET ಪರೀಕ್ಷೆ Central Universities ಕೋರ್ಸ್

ವೃತ್ತಿ ಗುರಿಗಳ ಆಧಾರದ ಮೇಲೆ ಅತ್ಯುತ್ತಮ ಕೋರ್ಸುಗಳು

ವೈದ್ಯರಾಗಲು : 

  • MBBS
  • BDS
  • BAMS
  • BHMS

ಸಾಫ್ಟ್ವೇರ್ ಉದ್ಯೋಗವನ್ನು ಪಡೆಯಲು : 

  • B.Tech CSE
  • BCA
  • B.Sc Computer Science

ಸರ್ಕಾರಿ ಉದ್ಯೋಗಕ್ಕಾಗಿ : 

  • BA
  • B.Com
  • B.Sc
  • LLB

ಹೊಸ ಉದ್ಯಮಗಳನ್ನು ಶುರು ಮಾಡಲು : 

  • BBA
  • B.Com
  • CA

PUC ನಂತರ ಲಭ್ಯವಿರುವ ಉದ್ಯೋಗ ಕ್ಷೇತ್ರಗಳು

ಐಟಿ ಕ್ಷೇತ್ರದಲ್ಲಿ :

  • ಸಾಫ್ಟ್ವೇರ್ ನಿರ್ಮಾಣಕಾರರು
  • ಡಾಟಾ ಅನಲಿಸ್ಟ್ ಗಳು
  • ಸೈಬರ್ ಸೆಕ್ಯೂರಿಟಿ ವಿಶೇಷ ಕಾರ್ಯಗಳು
  • ಕೃತಕ ಬುದ್ಧಿಮತ್ತೆ ಇಂಜಿನಿಯರ್ ಗಳು

ಆರೋಗ್ಯ ಕ್ಷೇತ್ರದಲ್ಲಿ‌ : 

  • ಡಾಕ್ಟರ್
  • ನರ್ಸ್
  • ಫಾರ್ಮಸಿಸ್ಟ್
  • ಫಿಜಿಯೋಥೆರಪಿಸ್ಟ್

ಬ್ಯಾಂಕಿಂಗ್ ಕ್ಷೇತ್ರ : 

  • ಬ್ಯಾಂಕ್ ಪ್ರವೇಶನರಿ ಆಫೀಸರ್
  • ಕ್ಲರ್ಕ್
  • ಹಣಕಾಸು ನಿರ್ವಾಹಕ ಮತ್ತು ಸಂಶ್ಲೇಷಕ

ಸರ್ಕಾರಿ ಕ್ಷೇತ್ರ : 

  • ಕೇಂದ್ರ ಲೋಕಸೇವಾ ಆಯೋಗ
  • ಕರ್ನಾಟಕ ಲೋಕಸೇವಾ ಆಯೋಗ
  • ಸಿಬ್ಬಂದಿ ಆಯ್ಕೆ ಆಯೋಗ
  • ಬ್ಯಾಂಕಿಂಗ್ ಎಕ್ಸಾಮ್ ಗಳು

ಶಿಕ್ಷಣ ಕ್ಷೇತ್ರ : 

  • ಪ್ರಾಧ್ಯಾಪಕರು
  • ಅಧ್ಯಾಪಕರು
  • ಶಿಕ್ಷಕರು
  • ಪ್ರೊಫೆಸರ್ ಗಳು

2026ರಲ್ಲಿ ಹೆಚ್ಚು ಬೇಡಿಕೆ ಇರುವ ಕೋರ್ಸುಗಳು

  • ಕೃತಕ ಬುದ್ಧಿಮತ್ತೆ‌
  • ಮಾಹಿತಿ ವಿಜ್ಞಾನ
  • ಸೈಬರ್ ಸೆಕ್ಯೂರಿಟಿ
  • ಕ್ಲೌಡ್ ಕಂಪ್ಯೂಟರ್
  • ಮಶೀನ್ ಲರ್ನಿಂಗ್
  • ರೋಬೋಟಿಕ್ಸ್
  • ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳು
  • ಫೈನಾನ್ಸ್
  • ಜೈವಿಕ ತಂತ್ರಜ್ಞಾನ
  • ಆರೋಗ್ಯ ವಲಯದ ನರ್ಸಿಂಗ್

PUC ‌ನಂತರ ನಿಮ್ಮ ಆಸಕ್ತಿಗೆ ಅನುಗುಣವಾಗಿ ಯಾವ ಕೋರ್ಸ್‌ ಸೂಕ್ತ

  • PUC Biology ವಿಷಯದಲ್ಲಿ ಹೆಚ್ಚು ಆಸಕ್ತಿ ಇದೆಯೇ?
    • ಹೌದು → MBBS / BDS / BAMS / Nursing
  • PUC Maths ವಿಷಯದಲ್ಲಿ ಹೆಚ್ಚು ಜ್ಞಾನ ಇದೆಯೇ?
    • ಹೌದು → Engineering / Data Science / BCA
  • PUC Business ಪ್ರಾರಂಭಿಸಲು ಆಸಕ್ರಿ ಹೊಂದಿದ್ದೀರಾ?
    • ಹೌದು → B.Com / BBA / CA
  • PUC ನಂತರ Government Jobs ಸೇರಲು ಬಯಸುತ್ತೀರಾ?
    • ಹೌದು → BA / B.Com / B.Sc

PUC ನಂತರದಲ್ಲಿ 2026ರಲ್ಲಿ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಉದ್ಯೋಗಗಳು

  • AI (ಕೃತಕ ಬುದ್ದಿಮತ್ತೆ) ಎಂಜಿನಿಯರ್ 
  • ಡೇಟಾ ವಿಜ್ಞಾನಿ
  • ಸೈಬರ್ ಭದ್ರತಾ ವಿಶ್ಲೇಷಕ
  • ಕ್ಲೌಡ್ ಎಂಜಿನಿಯರ್
  • ಆರೋಗ್ಯ ತಜ್ಞ
  • ಡಿಜಿಟಲ್ ಮಾರ್ಕೆಟಿಂಗ್ ತಜ್ಞ
  • ಹಣಕಾಸು ವಿಶ್ಲೇಷಕ
  • ನವೀಕರಿಸಬಹುದಾದ ಇಂಧನ ಎಂಜಿನಿಯರ್

2026ರಲ್ಲಿ PUC ಉತ್ತೀರ್ಣರಾದ ವಿದ್ಯಾರ್ಥಿಗಳು ಮಾಡಬಹುದಾದ ಟ್ರೆಂಡಿಂಗ್ ಕೋರ್ಸುಗಳು

ಕೋರ್ಸ್ ನ ಹೆಸರು ಮಾರುಕಟ್ಟೆಯಲ್ಲಿರುವ  ಬೇಡಿಕೆ
AI & ML Courses ಅತ್ಯಧಿಕ ಬೇಡಿಕೆಯಿದೆ
Data Science Courses ಅತ್ಯಧಿಕ ಬೇಡಿಕೆಯಿದೆ
Cyber Security Courses ಅತ್ಯಧಿಕ ಬೇಡಿಕೆಯಿದೆ
Cloud Computing Courses ಅತ್ಯಧಿಕ ಬೇಡಿಕೆಯಿದೆ
Robotics Courses ಹೆಚ್ಚು ಬೇಡಿಕೆಯಿದೆ
Biotechnology Courses ಹೆಚ್ಚು ಬೇಡಿಕೆಯಿದೆ
Digital Marketing Courses ಹೆಚ್ಚು ಬೇಡಿಕೆಯಿದೆ
FinTech Courses ಹೆಚ್ಚು ಬೇಡಿಕೆಯಿದೆ
Renewable Energy Courses ಬೆಳೆಯುತ್ತಿದೆ ಬೇಡಿಕೆಯಿದೆ
Healthcare Courses ಅತ್ಯಧಿಕ ಬೇಡಿಕೆಯಿದೆ

PUC ನಂತರ ಹುಡುಗಿಯರಿಗೆ ಉತ್ತಮ ಕೋರ್ಸ್ ಗಳು

  • ಎಂಬಿಬಿಎಸ್
  • ನರ್ಸಿಂಗ್
  • ಫಾರ್ಮಸಿ
  • ಬಿಸಿಎ
  • ಬಿಕಾಂ
  • ಸಿಎ
  • ಬಿಬಿಎ
  • ಸೈಕಾಲಜಿ
  • ಜರ್ನಲಿಸಂ
  • ಫ್ಯಾಷನ್ ಡಿಸೈನಿಂಗ್

2026 ರಲ್ಲಿ ಅತ್ಯಧಿಕ ಸಂಬಳ ನೀಡುವ ಕೋರ್ಸುಗಳು

  • ಎಂಬಿಬಿಎಸ್
  • ಬಿ.ಟೆಕ್ / ಸಿಎಸ್ಇ
  • ಡೇಟಾ ಸೈನ್ಸ್
  • AI ಎಂಜಿನಿಯರಿಂಗ್
  • ಸಿ ಎ
  • ಸೈಬರ್ ಭದ್ರತೆ
  • ಔಷಧಾಲಯ
  • ನರ್ಸಿಂಗ್ (ವಿದೇಶಿಗಳಲ್ಲೂ ಲಭ್ಯ)
  • ಡಿಜಿಟಲ್ ಮಾರ್ಕೆಟಿಂಗ್
  • ಕ್ಲೌಡ್ ಕಂಪ್ಯೂಟಿಂಗ್

ವಿವಿಧ ಕೋರ್ಸುಗಳ ಅಂದಾಜು ಆರಂಭಿಕ ಸಂಬಳ

ಕೋರ್ಸಿನ ಹೆಸರು ಆರಂಭಿಕ ಮಾಸಿಕ ಸಂಬಳ (ರೂಗಳಲ್ಲಿ)
MBBS ₹50,000 – ₹1,00,000 ರೂಗಳಿಗೂ ಹೆಚ್ಚು
BDS ₹30,000 – ₹80,000 ರೂಗಳಿಗೂ ಹೆಚ್ಚು
Nursing ₹25,000 – ₹60,000 ರೂಗಳಿಗೂ ಹೆಚ್ಚು
B.Pharm ₹25,000 – ₹50,000 ರೂಗಳಿಗೂ ಹೆಚ್ಚು
BCA ₹25,000 – ₹60,000 ರೂಗಳಿಗೂ ಹೆಚ್ಚು
B.Tech CSE ₹30,000 – ₹1,20,000 ರೂಗಳಿಗೂ ಹೆಚ್ಚು
Data Science ₹50,000 – ₹1,50,000 ರೂಗಳಿಗೂ ಹೆಚ್ಚು
AI Engineering ₹60,000 – ₹2,00,000 ರೂಗಳಿಗೂ ಹೆಚ್ಚು
CA ₹60,000 – ₹2,50,000 ರೂಗಳಿಗೂ ಹೆಚ್ಚು
Digital Marketing ₹25,000 – ₹1,00,000 ರೂಗಳಿಗೂ ಹೆಚ್ಚು

 

ಯಾವುದೇ ಕೋರ್ಸ್ ಆಯ್ಕೆ ಮಾಡಿ ಕೊಳ್ಳುವ ಮೊದಲು ಕೇಳಿಕೊಳ್ಳಬೇಕಾದ 10 ಪ್ರಶ್ನೆಗಳು

  1. ನನಗೆ ಯಾವ ವಿಷಯದಲ್ಲಿ ಓದಲು ಹೆಚ್ಚಿನ ಆಸಕ್ತಿ ಇದೆ?
  2. ನನ್ನ ಸಾಮರ್ಥ್ಯಕ್ಕೆ ಯಾವ ಕ್ಷೇತ್ರವು ಹೋಲುತ್ತದೆ?
  3. ಭವಿಷ್ಯದಲ್ಲಿ ಯಾವ ವಲಯದಲ್ಲಿ ಕೆಲಸ ಮಾಡಲು ಬಯಸುತ್ತೇನೆ?
  4. ಕೋರ್ಸ್ ಅನ್ನು ಪೂರ್ಣಗೊಳಿಸಲು ಎಷ್ಟು ಹಣ ವೆಚ್ಚವಾಗುತ್ತದೆ?
  5. ನಾನು ಓದುತ್ತಿರುವ ಕೋರ್ಸಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶಗಳು ಎಷ್ಟಿವೆ?
  6. ಕೋರ್ಸನ್ನು ಪೂರ್ಣಗೊಳಿಸಿದ ನಂತರ ಪಡೆಯಬಹುದಾದ ಸಂಬಳದ ಸಾಧ್ಯತೆ ಎಷ್ಟಿರುತ್ತದೆ?
  7. ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶಗಳು ಇರುತ್ತವೆಯೇ?
  8. ಈ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಅವಕಾಶಗಳು ಇದೆಯೇ?
  9. ನಾನು ಈ ಕೆಲಸವನ್ನು ದೀರ್ಘಾವಧಿಗೆ ಯೋಜನೆ ಮಾಡಬಹುದೇ?
  10. ಈ ಕೋರ್ಸ್ ಅನ್ನು ಓದಲು ನನ್ನ ಕುಟುಂಬದ ಬೆಂಬಲ ನನಗೆ ಇದೆಯೇ?

ಕೋರ್ಸ್ ಅನ್ನು ಆಯ್ಕೆ ಮಾಡುವ ಮೊದಲು ಪರಿಶೀಲಿಸಬೇಕಾದ ಚೆಕ್ ಲಿಸ್ಟ್ ಮತ್ತು ಮಾಡಬಾರದ ತಪ್ಪುಗಳು

  • ಕಾಲೇಜಿನ ಮಾನ್ಯತೆ‌
  • ಕೋರ್ಸಿನ ಮಾನ್ಯತೆ
  • ಪಾವತಿಸಬೇಕಾದ ಶುಲ್ಕ
  • ವಸತಿ ನಿಲಯದ ಸೌಲಭ್ಯ
  • ಪ್ಲೇಸ್ಮೆಂಟ್ ಅವಕಾಶಗಳು
  • ಇಂಟರ್ನ್ ಶಿಪ್‌
  • ಅಧ್ಯಾಪಕರ ಗುಣಮಟ್ಟ
  • ಸಿಗಬಹುದಾದ ವಿದ್ಯಾರ್ಥಿ ವೇತನಗಳು
  • ಕಾಲೇಜಿನ ಹಿಂದಿನ ವರ್ಷದ ಫಲಿತಾಂಶ
  • ಉದ್ಯೋಗ ದಾಖಲೆಗಳು

ಪಿಯುಸಿ ನಂತರದ ಪ್ರಮುಖ ಮೂರು ಕೋರ್ಸುಗಳ ಹೋಲಿಕೆ

ಅಂಶಗಳು B.Tech ಕೋರ್ಸ್ MBBS‌ ಕೋರ್ಸ್ B.Com ಕೋರ್ಸ್
ಬೇಕಾಗುವ ಅವಧಿ 4 ವರ್ಷಗಳು 5.5 ವರ್ಷಗಳು 3 ವರ್ಷಗಳು
ವೆಚ್ಚದ ಮಟ್ಟ ಮಧ್ಯಮ ಮಟ್ಟ ಹೆಚ್ಚು ಮಟ್ಟ ಕಡಿಮೆ ಮಟ್ಟ
ಸಿಗುವ ಉದ್ಯೋಗ ಅವಕಾಶಗಳು ಹೆಚ್ಚು ಅವಕಾಶಗಳು ಹೆಚ್ಚು ಅವಕಾಶಗಳು ಉತ್ತಮ ಅವಕಾಶಗಳು
ನಿರೀಕ್ಷಿತ ಸಂಬಳ ಹೆಚ್ಚು ಸಂಬಳ ಹೆಚ್ಚು ಸಂಬಳ ಮಧ್ಯಮ ಸಂಬಳ

 

Career Growth Roadmap After PUC (Arts, Commerce, Science & Engineering)

Arts Stream After PUC

  • BA → MA → Lecturer → Colleges & Universities
  • BA → UPSC/KPSC → IAS / IPS / KAS → Government Sector
  • BA → BJMC → Journalist → Media & News Channels
  • BA → BSW → MSW → Social Worker → NGOs & Welfare Departments
  • BA → BA LLB → Advocate → Courts & Corporate Legal Sector

Commerce Stream After PUC

  • B.Com → Accountant → Finance Companies
  • B.Com → CA → Chartered Accountant → Auditing & Tax Sector
  • BBA → MBA → Manager → Corporate Companies
  • B.Com/BBA → Bank Exams → Bank Officer → Banking Sector
  • B.Com → Financial Analyst → Investment & Insurance Sector

Science Stream After PUC

  • PCB → MBBS → Doctor → Hospitals & Healthcare
  • PCB → BDS → Dentist → Dental Clinics
  • PCB → B.Sc Nursing → Nurse → Hospitals & Overseas Jobs
  • PCB → B.Pharm → Pharmacist → Pharma Industry
  • PCMB → B.Sc → MSc → Scientist → Research Institutes

Engineering Stream

  • BE (CSE) → Software Engineer → IT Companies
  • BE (AI & DS) → Data Scientist → Analytics Sector
  • BE (ECE) → Electronics Engineer → Telecom & Electronics
  • BE (Mechanical) → Mechanical Engineer → Manufacturing & Automobile
  • (Civil) → Civil Engineer → Construction & Infrastructure
  • BCA → MCA → Full Stack Developer → IT & Startups

ಯಶೋಗಾಥೆಗಳು

ಸಾವಿರಾರು ವಿದ್ಯಾರ್ಥಿಗಳು ಸಾಮಾನ್ಯ ಹಾಗೂ ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಜೀವನವನ್ನು ಸಮರ್ಥವಾಗಿ ಕಟ್ಟಿಕೊಂಡಿದ್ದಾರೆ. ಕೆಲವರು ಇಂಜಿನಿಯರಿಂಗ್ ಕೋರ್ಸ್ ಮಾಡುವ ಮೂಲಕ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದರೆ, ಇನ್ನು ಕೆಲವರು ವಿಜ್ಞಾನ ವಿಭಾಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನೂ ಹಲವರು ಬಿಕಾಂ ನಂತರ ಸಿಎ ಪೂರ್ಣಗೊಳಿಸಿ, ಲಕ್ಷಾಂತರ ರೂಪಾಯಿಗಳ ಆದಾಯವನ್ನು ಗಳಿಸುತ್ತಿದ್ದಾರೆ.

PUC ನಂತರ ಸರ್ಕಾರಿ ಪರೀಕ್ಷೆಗಳ ಸಂಪೂರ್ಣ ಪಟ್ಟಿ

  • ಎಸ್‌ಎಸ್‌ಸಿ (ಸಿಬ್ಬಂದಿ ಆಯ್ಕೆ ಆಯೋಗ)
  • ಬ್ಯಾಂಕಿಂಗ್ (IBPS, SBI PO)
  • ರೈಲುಮಾರ್ಗಗಳು (RRB)
  • ರಕ್ಷಣಾ (ARMY NAVY AIRFORCE)
  • ಪೊಲೀಸ್ (POLICE)
  • ಯುಪಿಎಸ್‌ಸಿ (UPSC)
  • ಕೆ.ಪಿ.ಎಸ್.ಸಿ. (KPSC)

PUC ನಂತರ ವಿದೇಶದಲ್ಲಿ ಅಧ್ಯಯನ ಅವಕಾಶಗಳು

  • ಯುನೈಟೆಡ್ ಸ್ಟೇಟ್ಸ್‌ (ಅಮೆರಿಕಾ)
  • ಕೆನಡಾ
  • ಆಸ್ಟ್ರೇಲಿಯಾ
  • ಜರ್ಮನಿ
  • ಯುಕೆ (ಯುನೈಟೆಡ್‌ ಕಿಂಗ್‌ ಡಮ್)

ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ವೆಬ್‌ಸೈಟ್‌ಗಳು

ಕರ್ನಾಟಕದಲ್ಲಿರುವ ಪ್ರಮುಖ ಸರ್ಕಾರಿ ಶಿಕ್ಷಣ ಸಂಸ್ಥೆಗಳು

ಬೆಂಗಳೂರು ವಿಶ್ವವಿದ್ಯಾಲಯ   ಬೆಂಗಳೂರು (ಜ್ಞಾನಭಾರತಿ) ವಿಶ್ವವಿದ್ಯಾಲಯ     ಬೆಂಗಳೂರು ನಗರ ವಿಶ್ವವಿದ್ಯಾಲಯ     ಬೆಂಗಳೂರು ಉತ್ತರ ವಿಶ್ವವಿದ್ಯಾಲಯ  
ಮೈಸೂರು ವಿಶ್ವವಿದ್ಯಾಲಯ  ಅಧಿಕೃತ ವೆಬ್‌ ಸೈಟ್
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ  ಅಧಿಕೃತ ವೆಬ್‌ ಸೈಟ್
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ  ಅಧಿಕೃತ ವೆಬ್‌ ಸೈಟ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಅಧಿಕೃತ ವೆಬ್‌ ಸೈಟ್

 

ಜೀವನದಲ್ಲಿ ಯಶಸ್ವಿಗೆ ಅಗತ್ಯ ಕೌಶಲ್ಯಗಳು

  • ಸಂವಹನ ಕೌಶಲ್ಯಗಳು
  • ನಾಯಕತ್ವ ಗುಣ
  • ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯ
  • ಡಿಜಿಟಲ್ ಕೌಶಲ್ಯಗಳು
  • ಪರಿಣಾಮಕಾರಿ ಹಾಗೂ ಉತ್ತಮ ರೀತಿಯ ಯೋಚನೆ ಮಾಡುವುದು
  • ಗುಂಪು ಕೆಲಸ ಸಾಧಿಸುವಿಕೆ
  • ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳುವುದು
  • ಇಂಗ್ಲಿಷ್ ಸಂವಹನ ಕೌಶಲ್ಯ

ಪೋಷಕರಿಗೆ ವಿಶೇಷ ಸಲಹೆಗಳು

  • ಮಕ್ಕಳಿಗೆ ಇರುವ ಆಸಕ್ತಿಯನ್ನು ಗೌರವಿಸಿ
  • ಸಮಾಜದಲ್ಲಿರುವ ಸ್ಥಿತಿಗತಿಗಳೀಗೆ ಒಳಗಾಗಿ ಒತ್ತಡ ಹೇರಬೇಡಿ
  • ಆಸಕ್ತಿ ಹಾಗೂ ಬೇಡಿಕೆ ಇರುವ ಕೋರ್ಸ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ
  • ವೃತ್ತಿ ಸಲಹೆಗಾರ ರಿಂದ ಮಾರ್ಗದರ್ಶನವನ್ನು ಪಡೆಯಿರಿ
  • ಮಕ್ಕಳಿಗಿರುವ ಕೌಶಲ್ಯಗಳ ಅಭಿವೃದ್ಧಿಗೆ ಉತ್ತೇಜನ ನೀಡಿ
  • ಭವಿಷ್ಯದ ಗುರಿಗಳನ್ನು ಮಕ್ಕಳೊಂದಿಗೆ ಚರ್ಚಿಸಿ ಮತ್ತು ಉತ್ತೇಜಿಸಿ

ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡುವ ಸಾಮಾನ್ಯ ತಪ್ಪುಗಳು

  • ಇತರರನ್ನು ತಮ್ಮ ಮಕ್ಕಳಿಗೆ ಹೋಲಿಸಿ ಅವರು ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು
  • ಕೇವಲ ಸಂಬಳವನ್ನು ನೋಡಿ ಕೋರ್ಸಿನ ನಿರ್ಧಾರ ಮಾಡುವುದು
  • ಅಭ್ಯರ್ಥಿಗಳಿಗೆ ಇರುವ ಆಸಕ್ತಿಯನ್ನು ಕಡೆಗಣಿಸುವುದು
  • ವೃತ್ತಿ ಮಾರ್ಗದರ್ಶನವನ್ನು ಪಡೆಯದೇ ಇರುವುದು
  • ಕಾಲೇಜಿನ ಗುಣಮಟ್ಟ ಮತ್ತು ಮಾನ್ಯತೆಯನ್ನು ಪರಿಶೀಲಿಸದೆ ಇರುವುದು
  • ಕಾಲೇಜಿನ ದಾಖಲಾತಿ ಪ್ರವೇಶ ದಿನಾಂಕವನ್ನು ತಪ್ಪಿಸುವುದು

ತಜ್ಞರ ವೃತ್ತಿ ಮಾರ್ಗದರ್ಶನ ಸಲಹೆಗಳು

  • ವಿದ್ಯಾರ್ಥಿಗಳಲ್ಲಿರುವ ಆಸಕ್ತಿಯನ್ನು ಉತ್ತಮ ರೀತಿಯಲ್ಲಿ ಗುರುತಿಸಿ
  • ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ
  • ಹೊಸ ತಂತ್ರಜ್ಞಾನವನ್ನು ಕಲಿಯುವಲ್ಲಿ ತಮ್ಮ ಆಸಕ್ತಿಯನ್ನು ನೀಡಿ
  • ಇಂಟರ್ನ್ ಶಿಪ್ ಕಾರ್ಯಕ್ರಮಗಳನ್ನು ಕೈಗೊಳ್ಳಿ ‌
  • ಕೋರ್ಸುಗಳ ನಡುವೆ ಇರುವ ತಮ್ಮ ಸ್ನೇಹಿತರೊಂದಿಗೆ ನೆಟ್ವರ್ಕ್ ಬೆಳೆಸಿಕೊಳ್ಳಿ
  • ಕೋರ್ಸ್ ಮುಗಿದ ನಂತರ ಉನತ ಶಿಕ್ಷಣ ಯೋಜನೆಯನ್ನು ಮೊದಲಿನಿಂದಲೇ ರೂಪಿಸಿ

PUC ನಂತರ ಸಿಗುವ ವಿದ್ಯಾರ್ಥಿ ವೇತನ ಸೌಲಭ್ಯಗಳು

  1. ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನಗಳು
  2. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಗಳು
  3. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ
  4. ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ
  5. ಮೆರಿಟ್ ವಿದ್ಯಾರ್ಥಿ ವೇತನ
  6. ಖಾಸಗಿ ವಲಯಗಳು ನೀಡುವ ಪ್ರತಿಭಾವಂತ ವಿದ್ಯಾರ್ಥಿ ವೇತನ 

Best Courses After PUC : FAQ’s

1. PUC ಮುಗಿದ ನಂತರ ಉತ್ತಮ ಕೋರ್ಸ್ ಯಾವುದು?

ವಿದ್ಯಾರ್ಥಿಯ ಆಸಕ್ತಿ, ಸಾಮರ್ಥ್ಯ ಹಾಗೂ ವೃತ್ತಿ ಗುರಿಗಳ ಆಧಾರದ ಮೇಲೆ ಉತ್ತಮ ಕೋರ್ಸ್ ಬದಲಾಗುತ್ತದೆ. ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಒಳ್ಳೆಯದು.

2. PUC ನಂತರ ಬೇಗ ಉದ್ಯೋಗ ಪಡೆಯಲು ಯಾವ ಕೋರ್ಸ್ ಅನ್ನು ತೆಗೆದುಕೊಳ್ಳಬೇಕು?

BCA, Nursing, Pharmacy, Polytechnic, IT Courses ಉತ್ತಮ ಆಯ್ಕೆಗಳು ಮತ್ತು ಬೇಗನೆ ಉದ್ಯೋಗ ಪಡೆಯಬಹುದು.

3. PUC ನಂತರ ಸರ್ಕಾರಿ ಉದ್ಯೋಗಕ್ಕೆ ಯಾವ ಕೋರ್ಸ್ ಉತ್ತಮ?

BA, B.Com, B.Sc ಮತ್ತು LLB ಉತ್ತಮ ಆಯ್ಕೆಗಳು, ಇಲ್ಲಿನ ವಿಷಯಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ಚುರುಕುಗೊಳಿಸುತ್ತವೆ..

4. PUC ನಂತರ AI (Artificial Intelligence) ಕ್ಷೇತ್ರಕ್ಕೆ ಹೋಗಬಹುದೇ?

ಹೌದು. B.Tech AI, Data Science ಅಥವಾ Computer Science ಕೋರ್ಸುಗಳನ್ನು ಓದುವ ಮೂಲಕ ಹೋಗಬಹುದು.

5. PUC ನಂತರ ವಿದೇಶದಲ್ಲಿ ಓದುವ ಅವಕಾಶ ಇದೆಯೇ?

ಹೌದು. Engineering, Medicine, Nursing, Business ಮತ್ತು IT ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ವಿದೇಶದಲ್ಲೂ ಸಹ ಓದುವುದರ ಜೊತೆಯಲ್ಲಿ ಕೆಲಸ ಮಾಡುವ ಅವಕಾಶಗಳಿರುತ್ತವೆ.

ಪ್ರಸ್ತುತ ಲೇಖನದ ಮಾಹಿತಿಯ ಮೂಲಗಳು

  • ರಾಷ್ಟ್ರೀಯ ಶಿಕ್ಷಣ ನೀತಿ
  • ವಿವಿಧ ವಿಶ್ವವಿದ್ಯಾಲಯಗಳ ಪ್ರವೇಶ ಮಾರ್ಗಸೂಚಿಗಳು
  • ವೃತ್ತಿ ಮಾರ್ಗದರ್ಶಕರ ಸಲಹೆಗಳು
  • ಶಿಕ್ಷಣ ತಜ್ಞರ ಅಭಿಪ್ರಾಯ
  • ಉದ್ಯೋಗ ಮಾರುಕಟ್ಟೆ ಅಧ್ಯಯನಗಳು

ವೃತ್ತಿ ಮಾರ್ಗದರ್ಶಕರ ಸಲಹೆಗಳು

“ವಿದ್ಯಾರ್ಥಿಗಳು ಕೇವಲ ಸಂಬಳ ಅಥವಾ ಜನಪ್ರಿಯತೆಯನ್ನು ನೋಡಿ ಕೋರ್ಸ್ ಆಯ್ಕೆ ಮಾಡಬಾರದು. ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಗುರಿಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು.”

ಕೊನೆಯ ಮಾತು

ಪಿಯುಸಿ ಮುಗಿದ ನಂತರ ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡುವುದು ಜೀವನದ ಅತ್ಯಂತ ಪ್ರಮುಖ ಶೈಕ್ಷಣಿಕ ನಿರ್ಧಾರಗಳಲ್ಲಿ ಒಂದಾಗಿದೆ ಸ್ನೇಹಿತರು ಅಥವಾ ಇತರರ ಒತ್ತಡದ ಆಧಾರದ ಮೇಲೆ ಯಾವುದೇ ಕೋರ್ಸನ ಆಳ್ವಿಕೆ ಮಾಡಿಕೊಳ್ಳುವಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅದರ ಬದಲಾಗಿ ನಿಮ್ಮ ಆಸಕ್ತಿ ಸಾಮರ್ಥ್ಯ ಭವಿಷ್ಯದ ಗುರಿ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪರಿಗಣಿಸಿ ನಂತರ ಆಯ್ಕೆ ಮಾಡುವುದು ಸೂಕ್ತವಾಗಿದೆ ಸರಿಯಾದ ವೃತ್ತಿ ಯೋಜನೆ ಪರಿಶ್ರಮದ ಮಟ್ಟ ಹಾಗೂ ಕೌಶಲ್ಯ ಅಭಿವೃದ್ಧಿಯ ಮೂಲಕ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲಾಗುತ್ತದೆ ಆದುದರಿಂದ ವೃತ್ತಿ ಮಾರ್ಗದರ್ಶನವನ್ನು ಪಡೆಯಿರಿ

 

ಲೇಖಕರ ಟಿಪ್ಪಣಿ : ಸರ್ಕಾರಿ ಉದ್ಯೋಗಗಳು, ಪರೀಕ್ಷಾ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳನ್ನು ಅಧಿಕೃತ ಮೂಲಗಳ ಆಧಾರದ ಮೇಲೆ ನಿಖರವಾಗಿ ಹಂಚುವುದು ನಮ್ಮ ಉದ್ದೇಶ.

ಲೇಖಕರ ಕುರಿತು : ನಾವು ಶಿಕ್ಷಣ, ಸರ್ಕಾರಿ ಉದ್ಯೋಗ, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಮತ್ತು ಸರ್ಕಾರಿ ಯೋಜನೆಗಳ ಕುರಿತು ವಿಶ್ವಾಸಾರ್ಹ ಮಾಹಿತಿಯನ್ನು ಹಂಚುವ ಕನ್ನಡ ಬ್ಲಾಗರ್ ಆಗಿದ್ದೇವೆ.

Disclaimer : ಈ ವೆಬ್‌ಸೈಟ್‌ನ ಮಾಹಿತಿಯನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಕಡ್ಡಾಯ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment