Telegram Join Our Telegram WhatsApp Join Our WhatsApp

Karnataka Police CPC Exam Preparation Tips 2026 | Complete And Best Study Plan

ಈ Exam Preparation Tips ಗಳನ್ನು ಅನುಸರಿಸಿ, ಪರೀಕ್ಷೆಯಲ್ಲಿ ಯಶಸ್ಸು ಪಡೆಯಿರಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಆಹ್ವಾನಿಸಿರುವುದರಿಂದ ಈ Exam ಗೆ ಉತ್ತಮ ರೀತಿಯಲ್ಲಿ ತಯಾರಿ ನಡೆಸುವುದು ಸಹ ಅಷ್ಟೇ ಮುಖ್ಯವಾಗಿದೆ. ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಯುವ ನೇಮಕಾತಿ Exam ರಾಜ್ಯದ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸುತ್ತಾರೆ.

ಆದರೆ ಸ್ಪರ್ಧೆ ಹೆಚ್ಚಿರುವ ಕಾರಣ ಕೇವಲ ಸರಿಯಾದ ತಯಾರಿಯನ್ನು ನಡೆಸುವವರು ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಇದರ ಜೊತೆಯಲ್ಲಿ ಸರಿಯಾದ ಅಧ್ಯಯನ ತಂತ್ರದ ಬಳಕೆ ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ನಿರಂತರವಾಗಿ ವಿಷಯಗಳನ್ನು ಅಭ್ಯಾಸ ಮಾಡುವುದು ಮತ್ತು ಆತ್ಮವಿಶ್ವಾಸವನ್ನು ಹೊಂದುವುದು ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

ಬಹಳಷ್ಟು ಅಭ್ಯರ್ಥಿಗಳು ದಿನಕ್ಕೆ ಹೆಚ್ಚು ಗಂಟೆಗಳ ಕಾಲ ಓದಿದರೂ ಸಹ ಅವರು ಅಂದುಕೊಂಡ ಹಾಗೆ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣವೇನೆಂದರೆ ಸರಿಯಾದ ಯೋಜನೆಯನ್ನು ಮಾಡದೆ ಇರುವುದು ಪರೀಕ್ಷೆ ಸಿಲಬಸ್ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಇರುವುದು ಪ್ರಶ್ನೆಗಳ ಸ್ವರೂಪವನ್ನು ಪರಿಶೀಲನೆ ಮಾಡದೆ ಇರುವುದು ವಿಷಯವಾರು ಮಹತ್ವ ಹಾಗೂ ಬರಬಹುದಾದ ಅಂಕಗಳ ಅಂದಾಜನ್ನು ತಪ್ಪಾಗಿಸಿಕೊಳ್ಳುವುದು ಮತ್ತು ಅಧ್ಯಯನದ ಕ್ರಮವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದರಿಂದ ಸಮಯವೂ ವ್ಯರ್ಥವಾಗುತ್ತದೆ

ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ Examಗೆ ಹೇಗೆ ತಯಾರಿ ನಡೆಸಬೇಕು ಯಾವ ವಿಷಯಗಳಿಗೆ ಹೆಚ್ಚು ಒತ್ತನ್ನು ನೀಡಬೇಕು ಪರೀಕ್ಷ ತಯಾರಿ ಸಮಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು 90 ದಿನಗಳ ಅಧ್ಯಯನ ಯೋಜನೆ ಹೇಗಿರಬೇಕು ಮಾಕ್ ಟೆಸ್ಟ್ ಗಳ ಮಹತ್ವ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ಯಶಸ್ಸಿನ ಸೂತ್ರಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗಿದೆ

ಆದುದರಿಂದ ಈ ಲೇಖನವನ್ನು ಗಮನವಿಟ್ಟು ಸಂಪೂರ್ಣವಾಗಿ ಓದುವುದರಿಂದ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಂಭವನೀಯತೆಯನ್ನು ಹೆಚ್ಚಿಸಬಹುದು

ಕರ್ನಾಟಕ ಸರ್ಕಾರ ಪೊಲೀಸ್‌ ಇಲಾಖೆಯ ಅಧಿಕೃತ ವೆಬ್‌ ಸೈಟ್‌ : ಕರ್ನಾಟಕ ಪೊಲೀಸ್‌ ಇಲಾಖೆ

ಪ್ರಮುಖ ಮಾಹಿತಿ

  • ಹುದ್ದೆ ಹೆಸರು : ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
  • ವಿದ್ಯಾರ್ಹತೆ ವಿವರ : PUC / ತತ್ಸಮಾನ
  • ಉತ್ತಮ ಪರೀಕ್ಷಾ ತಯಾರಿ ಅವಧಿ: 90 ದಿನಗಳು
  • ನೆಗೆಟಿವ್ ಅಂಕಗಳು: 0.25 ಅಂಕ
  • ಪ್ರಮುಖ ವಿಷಯಗಳು: ಸಂವಿಧಾನ, ಇತಿಹಾಸ, ಗಣಿತ, ಪ್ರಚಲಿತ ವಿದ್ಯಮಾನಗಳು, ಕನ್ನಡ ಹಾಗೂ ಇಂಗ್ಲಿಷ್‌ ಭಾಷಾ ಜ್ಞಾನ.

KSP Recruitment 2026, Big Opportunity: ಪೊಲೀಸ್‌ ಇಲಾಖೆಯಲ್ಲಿ ಬೃಹತ್‌ ನೇಮಕಾತಿ, ಹುದ್ದೆ, ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

Exam ತಯಾರಿಕೆಯ ಮೂಲ ತತ್ವ

ಯಾವುದೇ Competitive Exam ನಲ್ಲಿ ಯಶಸ್ಸು ಕಾಣಲು ಪ್ರಮುಖವಾಗಿ ಮೂರು ಅಂಶಗಳನ್ನು ಗಮನಿಸಬೇಕಾಗುತ್ತದೆ ಈ ಪ್ರಾಥಮಿಕ ಅಂಶಗಳನ್ನು ತಿಳಿದುಕೊಳ್ಳುವುದರಿಂದ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಸಂಭವನೀಯತೆಯು ಹೆಚ್ಚಾಗಿರುತ್ತದೆ ಮತ್ತು ಪರೀಕ್ಷಾ ತಯಾರಿಯೂ ಸಹ ಆತ್ಮವಿಶ್ವಾಸದಿಂದ ಕೂಡಿರುತ್ತದೆ

ಸರಿಯಾದ ಯೋಜನೆಯನ್ನು ಮಾಡುವುದು

Examಗೆ ಆಗಲಿ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಯೋಜನೆ ಇಲ್ಲದೆ ಓದುವುದು ಹಾಗೂ ನಿರ್ಧಾರ ತೆಗೆದುಕೊಳ್ಳುವುದು ದಿಕ್ಕಿಲ್ಲದ ಪ್ರಯಾಣದಂತೆಯೇ ಭಾಸವಾಗುತ್ತದೆ ಆದುದರಿಂದ ಅಭ್ಯರ್ಥಿಗಳು ಮೊದಲಿಗೆ ಹುದ್ದೆಗಳಿಗೆ ಸಂಬಂಧಿಸಿದ ಪರೀಕ್ಷೆಯ ಸಂಪೂರ್ಣವಾದ ಸಿಲಬಸ್ ಅನ್ನು ತಿಳಿದುಕೊಳ್ಳಬೇಕು ಯಾವ ವಿಷಯಗಳಲ್ಲಿ ಹೆಚ್ಚು ಪ್ರಶ್ನೆಗಳು ಬರುತ್ತವೆ ಹಾಗೂ ಯಾವ ವಿಷಯಕ್ಕೆ ಹೆಚ್ಚು ಒತ್ತನ್ನು ನೀಡಬೇಕು ಎಂಬುದನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಅಧ್ಯಯನದ ಸಮಯ ಹಾಗೂ

ನಿರಂತರ ಅಭ್ಯಾಸ ಮಾಡುವುದು

ಸಾಮಾನ್ಯವಾಗಿ ಒಂದು ಬಾರಿ ಓದಿದ ವಿಷಯವು ಶಾಶ್ವತವಾಗಿ ನಮ್ಮಲ್ಲಿ ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ ಆದುದರಿಂದ ಒಂದೇ ವಿಷಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮತ್ತು ಅಲ್ಪಕಾಲದಲ್ಲಿ ಪುನರಾವರ್ತನೆ ಮಾಡುವುದರಿಂದ ಮಾತ್ರ ವಿಷಯಗಳು ದೀರ್ಘಕಾಲದಲ್ಲಿ ನೆನಪಿನಲ್ಲಿ ಇರುತ್ತದೆ ಆದ್ದರಿಂದ ಒಂದು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಅವುಗಳ ನಿರಂತರ ಅಭ್ಯಾಸ ಕಡ್ಡಾಯವಾಗಿರುತ್ತದೆ

ಆತ್ಮವಿಶ್ವಾಸ ಹೊಂದುವುದು

ಪರೀಕ್ಷೆಯನ್ನು ಎದುರಿಸಲು ಮುಖ್ಯ ಅಂಶವು ಆತ್ಮವಿಶ್ವಾಸ ಹೊಂದುವುದು ಆಗಿದೆ ಏಕೆಂದರೆ ಆತ್ಮವಿಶ್ವಾಸದಿಂದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಸಹಕರಿಸುತ್ತವೆ ಪ್ರತಿದಿನದ ಸಣ್ಣ ಸಾಧನೆಗಳು ಹಾಗೂ ನಮ್ಮ ಮೇಲಿನ ಆತ್ಮವಿಶ್ವಾಸದ ಮಟ್ಟವು ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಸಹಕರಿಸುತ್ತವೆ ಆದುದರಿಂದ ಪರೀಕ್ಷಾ ತಯಾರಿ ಹಾಗೂ ಪರೀಕ್ಷೆ ಸಮಯದಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದುವುದನ್ನು ರೂಢಿಸಿಕೊಳ್ಳಿ ಹಾಗೂ ಪರೀಕ್ಷಾ ತಯಾರಿ ಸಮಯದಲ್ಲಿ ಮಾಕ್ ಟೆಸ್ಟ್ ಗಳನ್ನು ಬರೆಯುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು

Exam Preparation Tips

ಸಂಪೂರ್ಣ ಸಿಲ್ಲಬಸ್ ಅನ್ನು ಮೊದಲು ಅರ್ಥ ಮಾಡಿಕೊಳ್ಳಿ

ಬಹುತೇಕ ಅಭ್ಯರ್ಥಿಗಳು ನಿಗದಿಪಡಿಸಿರುವ ಸಿಲಬಸ್ ಅನ್ನು ಸಂಪೂರ್ಣವಾಗಿ ಓದದೆ ಅರ್ಥ ಮಾಡಿಕೊಳ್ಳದೆ ನೇರವಾಗಿ ಪುಸ್ತಕಗಳನ್ನು ಓದಲು ಆರಂಭಿಸುತ್ತಾರೆ. ಇದೇ ಅಭ್ಯರ್ಥಿಗಳು ಮಾಡುವ ಮೊದಲನೇ ಹಾಗೂ ದೊಡ್ಡ ತಪ್ಪಾಗಿದೆ ಮೊದಲು ಸಿಲಬಸ್ ಅನ್ನು ಅರ್ಥ ಮಾಡಿಕೊಂಡು ಯಾವ ವಿಷಯಗಳಿಗೆ ಎಷ್ಟು ಸಮಯ ನೀಡಬೇಕು ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಯಾವ ವಿಚಾರಧಾರೆಗಳನ್ನು ಹೆಚ್ಚಾಗಿ ಓದಬೇಕು ಎಂಬುದನ್ನು ತಿಳಿದುಕೊಳ್ಳುವುದರಿಂದ ತಯಾರಿ ಮತ್ತು ಅಧ್ಯಯನ ವಿಧಾನವು ಸ್ಪಷ್ಟವಾಗಿರುತ್ತದೆ

ದಿನನಿತ್ಯ ಅಧ್ಯಯನ ಮಾಡುವುದು ಒಳ್ಳೆಯದು

ಪ್ರತಿದಿನವೂ ಆರರಿಂದ ಎಂಟು ಗಂಟೆಗಳ ಕಾಲ ಗುಣಮಟ್ಟದ ಅಧ್ಯಯನ ಸಾಕಾಗುತ್ತದೆ ಆದರೆ ಒಂದು ದಿನ 12 ಗಂಟೆ ಓದಿ ಮುಂದಿನ ಎರಡು ದಿನಗಳಲ್ಲಿ ಓದಿದ ವಿಷಯಗಳ ಪುನರಾವರ್ತನೆ ಹಾಗೂ ರಿವಿಜನ್ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಆದರೆ ಅಭ್ಯರ್ಥಿಗಳಿಂದ ಅಭ್ಯರ್ಥಿಗಳಿಗೆ ತಯಾರಿ ವಿಧಾನವು ಬೇರೆ ಆಗಿರುವುದರಿಂದ ನಿಮಗೆ ಸಮಯದ ಲಭ್ಯಕ್ಕೆ ತಕ್ಕಂತೆ ತಯಾರಿನೆ ನಡೆಸುವುದು ಉತ್ತಮವಾಗಿರುತ್ತದೆ ಆದರೆ ಪ್ರತಿನಿತ್ಯವು ಓದುವುದರಿಂದ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆಯಲ್ಲಿ ಈಗಾಗಲೇ ಓದಿರುವ ವಿಷಯಗಳನ್ನು ನೆನಪಿನಲ್ಲಿಡಲು ಪ್ರಯತ್ನಿಸಿ

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ

ಸದರಿ ಪರೀಕ್ಷೆಯ ವಿಚಾರವಾಗಿ ಈ ಹಿಂದೆ ನಡೆದಿರುವ ಪರೀಕ್ಷೆಗಳ ಹಿಂದಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ಕೇಳಬಹುದಾದ ಪ್ರಶ್ನೆಗಳ ಮಾದರಿ ಕಠಿಣತೆ ಹಾಗೂ ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ ಇದರ ಜೊತೆಯಲ್ಲಿ ಯಾವ ವಿಷಯಗಳಿಗೆ ಎಷ್ಟು ಅಂಕಗಳು ಬರುತ್ತವೆ ಹಾಗೂ ಪರಿಚಯ ಪ್ರಶ್ನೆಗಳ ನೀಲನಕ್ಷೆಯು ತಿಳಿಯುತ್ತದೆ ಇದು ಹೆಚ್ಚು ಅಂಕಗಳನ್ನು ಗಳಿಸಲು ಸಹಕರಿಸುತ್ತದೆ

ಮಾಕ್ ಟೆಸ್ಟ್ ಗಳನ್ನು ಬರೆಯಿರಿ

ಈ ಹುದ್ದೆಗಳಿಗೆ ಸಂಬಂಧಿಸಿದ ಮಾತೆಸ್ಟ್ ಗಳನ್ನು ಬರೆಯುವುದರಿಂದ ನೈಜ ಪರಿಚಯ ಅನುಭವವನ್ನು ಪಡೆಯಬಹುದಾಗಿರುತ್ತದೆ ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ಹೇಗೆ ಮಾಡಬೇಕು ವೇಗ ಮತ್ತು ನಿಖರತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಹಾಗೂ ನಿಗದಿತ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ಮಾಗಟೆಸ್ಟ್ ಗಳನ್ನು ಹೆಚ್ಚಾಗಿ ಬರೆಯುವುದರ ಮೂಲಕ ತಿಳಿದುಕೊಳ್ಳಬಹುದಾಗಿರುತ್ತದೆ ಪ್ರಾಯೋಗಿಕ ಅನುಭವವನ್ನು ಸಹ ನೀಡುತ್ತವೆ

Exam ಪಠ್ಯಕ್ರಮದ ವಿವರವಾದ ಅಧ್ಯಯನ

ಈ ಕೆಳಕಂಡ ವಿಭಾಗಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಹೆಚ್ಚು ಸಹಕಾರಿಯಾಗಿದೆ ಆದುದರಿಂದ ಈ ಕೆಳಕಂಡ ಅಂಶಗಳನ್ನು ಗಮನವಿಟ್ಟು ಎಚ್ಚರಿಕೆಯಿಂದ ಓದುವುದರಿಂದ ಪರೀಕ್ಷೆಯ ಬಗ್ಗೆ ಹಾಗೂ ಪರೀಕ್ಷಾ ತಯಾರಿಯ ಬಗ್ಗೆ ಸಂಪೂರ್ಣ ಮಾಹಿತಿಯು ಮತ್ತು ಸಿಲಬಸ್ ತಿಳಿಯುತ್ತದೆ

1. ಭಾರತೀಯ ಇತಿಹಾಸ

ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಚೀನ ಭಾರತದ ಇತಿಹಾಸ ಮಧ್ಯಕಾಲಿನ ಭಾರತ ಹಾಗೂ ಆಧುನಿಕ ಭಾರತದ ಇತಿಹಾಸದ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿ ಬರುತ್ತವೆ ಇದರ ಅಡಿಯಲ್ಲಿ ಸಿಂಧೂ ನಾಗರಿಕತೆ ವೇದಗಳ ಕಾಲದ ನಾಗರಿಕತೆ ಪ್ರಮುಖ ಸಾಮ್ರಾಜ್ಯಗಳಾದ ಮೌರ್ಯ ಸಾಮ್ರಾಜ್ಯ ಗುಪ್ತ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಬ್ರಿಟಿಷರ ಆಳ್ವಿಕೆ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಇತಿಹಾಸ ವಿಷಯವನ್ನು ಓದುವಾಗ ದಿನಾಂಕಗಳನ್ನು ಮಾತ್ರ ನೆನಪಿಡುವ ಬದಲು ಆ ಘಟನೆಗಳ ಹಿನ್ನೆಲೆ ಕಾರಣ ಹೋರಾಟಗಾರರು ಫಲಿತಾಂಶ ಪರಿಣಾಮ ಹಾಗೂ ಇನ್ನಿತರ ಪ್ರಮುಖ ಅಂಶಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ

2. ಭೂಗೋಳಶಾಸ್ತ್ರ

ಭಾರತದ ಹಾಗೂ ಕರ್ನಾಟಕ ರಾಜ್ಯದ ಭೌತಿಕ ಲಕ್ಷಣಗಳು ಭೌಗೋಳಿಕತೆ ಪ್ರಮುಖ ನದಿಗಳು ಪರ್ವತಗಳು ಕೃಷಿ ಮತ್ತು ಕೈಗಾರಿಕೆಗಳು ಹವಾಮಾನ ವೈಪರಿತಿಗಳು ಭೂಮಿಗೆ ಸಂಬಂಧಿಸಿದ ಪ್ರಶ್ನೆಗಳು ಭೂಪ್ರದೇಶ ಹಾಗೂ ಭೂಪ್ರದೇಶದ ಅಳತೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಹೆಚ್ಚಾಗಿ ಬರುತ್ತವೆ. ಈ ಭೂಗೋಳಶಾಸ್ತ್ರ ವಿಚಾರದಲ್ಲಿ ಪ್ರಮುಖವಾಗಿ ಕರ್ನಾಟಕದ ಭೂಗೋಳ ಶಾಸ್ತ್ರಕ್ಕೆ ವಿಶೇಷ ಒತ್ತನ್ನು ನೀಡಬೇಕು ಏಕೆಂದರೆ ಪೊಲೀಸ್ ಕಾನ್ಸ್ಟೇಬಲ್ ಕೆಲಸವು ಕ್ಷೇತ್ರ ಕಾರ್ಯ ಆಗಿರುವುದರಿಂದ ಭೂಗೋಳ ಶಾಸ್ತ್ರದ ಜ್ಞಾನವು ಉತ್ತಮ ಜ್ಞಾನವನ್ನು ನೀಡುತ್ತದೆ.

ಕರ್ನಾಟಕ ರಾಜ್ಯದ ಜಿಲ್ಲೆಗಳು ಪ್ರಮುಖ ನದಿಗಳು ಖನಿಜ ಸಂಪತ್ತು ಜಲಾಶಯಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು ಭೂಗೋಳ ಶಾಸ್ತ್ರದಿಂದ ಹೆಚ್ಚು ಪ್ರಶ್ನೆಗಳು ಬರುವ ಸಾಧ್ಯತೆ ಇರುತ್ತದೆ

3. ಭಾರತೀಯ ಸಂವಿಧಾನ

ಭಾರತೀಯ ಸಂವಿಧಾನದ ಪರಿಕಲ್ಪನೆಯು ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರಿಚಯ ಪ್ರಮುಖ ವಿಭಾಗಗಳಲ್ಲಿ ಒಂದಾಗಿದ್ದು ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ.

ಏಕೆಂದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಕ್ಷಣಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿರುವುದರಿಂದ ಹಾಗೂ ಪೊಲೀಸ್ ಇಲಾಖೆಯ ಮಹತ್ವವು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವುದರಿಂದ ಅಭ್ಯರ್ಥಿಗಳು ಈ ವಿಷಯದ ಬಗ್ಗೆ ಕಡ್ಡಾಯವಾಗಿ ತಿಳಿದುಕೊಳ್ಳಬೇಕು

ಮೂಲಭೂತ ಹಕ್ಕುಗಳು

ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಯಾವ ಭಾಗದಲ್ಲಿ ಒಳಗೊಂಡಿವೆ ನಾಗರಿಕರಿಗೆ ಇರುವ ಸ್ವಾತಂತ್ರಗಳು ಮತ್ತು ಸಮಾನತೆಯನ್ನು ರಕ್ಷಿಸುವಲ್ಲಿ ಸಂವಿಧಾನದ ಪಾತ್ರ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಸಂವಿಧಾನಾತ್ಮಕ ಪರಿಹಾರದ ಹಕ್ಕನ್ನು ಯಾವ ವಿಧಿ ಒದಗಿಸುತ್ತದೆ ಮೂಲಭೂತ ಹಕ್ಕುಗಳು ಯಾವ ಭಾಗದಲ್ಲಿವೆ ಎಂಬ ನೇರ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ ಪ್ರಮುಖ ವಿಧಿಗಳ ಜೊತೆಯಲ್ಲಿ ಹಕ್ಕುಗಳ ಸಂಖ್ಯೆಯನ್ನು ನೆನಪಿಡುವುದರಿಂದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಹುದು

ಮೂಲಭೂತ ಕರ್ತವ್ಯಗಳು

ಮೂಲಭೂತ ಕರ್ತವ್ಯಗಳನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ ಸಂವಿಧಾನದ ಯಾವ ವಿಧಿಯಲ್ಲಿ ಉಲ್ಲೇಖಗೊಂಡಿವೆ ಮೂಲಭೂತ ಕರ್ತವ್ಯಗಳನ್ನು ಯಾವ ತಿದ್ದುಪಡಿ ಸೇರಿಸಿತು ಎಷ್ಟು ಕರ್ತವ್ಯಗಳಿವೆ ಎಂಬ ರೀತಿಯ ಪ್ರಶ್ನೆಗಳು ಬರುತ್ತವೆ. ಮೂಲಭೂತ ಕರ್ತವ್ಯಗಳ ಉದ್ದೇಶ ಮತ್ತು ಇದಕ್ಕೆ ಸಂಬಂಧಿಸಿದ ತಿದ್ದುಪಡಿ ವರ್ಷವನ್ನು ವಿಶೇಷವಾಗಿ ಅಧ್ಯಯನ ಮಾಡಬೇಕು

ರಾಜ್ಯ ನಿರ್ದೇಶಕ ತತ್ವಗಳು

ರಾಜ್ಯ ನಿರ್ದೇಶಕ ತತ್ವಗಳು ಯಾವ ಭಾಗ ಆಗುವಿದಿಯಲ್ಲಿ ಸೇರಿವೆ ಇವು ಯಾವ ರೀತಿಯಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತವೆ. ಅವುಗಳ ಉದ್ದೇಶವೇನು ಎಂಬ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ರಾಜ್ಯ ನಿರ್ದೇಶಕ ತತ್ವಗಳ ಭಾಗದ ಸಂಖ್ಯೆ ಮತ್ತು ಪ್ರಮುಖ ತತ್ವಗಳ ಅಡಿಯಲ್ಲಿ ಬರುವ ಪ್ರಮುಖ ವಿಚಾರಗಳನ್ನು ಅಧ್ಯಯನ ಮಾಡಿ

ರಾಷ್ಟ್ರಪತಿ

ರಾಷ್ಟ್ರಪತಿ ಸ್ಥಾನವು ಭಾರತದ ಸಂವಿಧಾನದಲ್ಲಿ ಯಾವ ಸ್ಥಾನಮಾನವನ್ನು ಹೊಂದಿದೆ ಚುನಾವಣಾ ಮಂಡಳಿಗಳ ಆಯ್ಕೆ ಪ್ರಕ್ರಿಯೆ ರಾಷ್ಟ್ರಪತಿಯನ್ನು ಯಾರು ಆಯ್ಕೆ ಮಾಡುತ್ತಾರೆ ಅಧಿಕಾರ ಅವಧಿ ಎಷ್ಟು ತುರ್ತುಪರಿಸ್ಥಿತಿ ಘೋಷಿಸುವ ಅಧಿಕಾರ ಯಾರಿಗೆ ಇರುತ್ತದೆ ಎಂಬ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ರಾಷ್ಟ್ರಪತಿಯವರಿಗೆ ಇರುವ ಅಧಿಕಾರಗಳು ಕರ್ತವ್ಯಗಳು ಹಾಗೂ ಚುನಾವಣೆಯನ್ನು ನಡೆಸುವ ವಿಧಾನಗಳನ್ನು ಅಧ್ಯಯನ ಮಾಡಿ

ಪ್ರಧಾನಮಂತ್ರಿ

ಪ್ರಧಾನ ಮಂತ್ರಿ ಸರ್ಕಾರದ ಮುಖ್ಯಸ್ಥರೆಂದು ಯಾವ ವಿಭಾಗವು ಹೇಳುತ್ತದೆ ಸಚಿವ ಸಂಪುಟದ ನಾಯಕತ್ವ ಯಾರ ಬಯಸುತ್ತಾರೆ. ಪ್ರಧಾನಮಂತ್ರಿಯನ್ನು ಯಾರು ನೇಮಿಸುತ್ತಾರೆ ಪ್ರಧಾನಮಂತ್ರಿ ಅವರು ಯಾವ ಸದನದ ಸದಸ್ಯರಾಗಿರಬಹುದು ಸಚಿವ ಸಂಪುಟದ ಮುಖ್ಯಸ್ಥ ಯಾರು ಎಂಬ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಾಗಿ ಬರುತ್ತವೆ ಇವರ ನೇಮಕಾತಿ ವಿಧಾನ ಅಧಿಕಾರಗಳು ಜವಾಬ್ದಾರಿಗಳನ್ನು ಗಮನದಲ್ಲಿ

ಸಂಸತ್ತು

ಭಾರತದ ಸಂಸತ್ತು ಸಂವಿಧಾನಾತ್ಮಕವಾಗಿ ಹೇಗೆ ರಚನೆಗೊಂಡಿದೆ ಯಾವ ಯಾವ ಆಯಾಮಗಳನ್ನು ಒಳಗೊಂಡಿದೆ ಸಂಸತ್ತಿನ ಅಂಗಗಳು ಯಾವುವು? ಲೋಕಸಭೆಯ ಅಧಿಕಾರ ಅವಧಿ ಎಷ್ಟು? ರಾಜ್ಯಸಭೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ ಲೋಕಸಭೆ ರಾಜ್ಯಸಭೆ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರ ಸಂಖ್ಯೆ ಅವರ ಕಾರ್ಯಗಳು ಹಾಗೂ ವಿಭಾಗಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ

ಸುಪ್ರೀಂ ಕೋರ್ಟ್

ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು ಸಂವಿಧಾನದ ರಕ್ಷಕ ಯಾರು? ಸುಪ್ರೀಂ ಕೋರ್ಟ್ ನ ಮುಖ್ಯ ಕಾರ್ಯವೇನು ನ್ಯಾಯಾಂಗ ಪರಿಶೀಲನೆಯ ಆಯಾಮ ಎಂದರೆ ಏನು ಎಂಬ ರೀತಿಯ ಪ್ರಶ್ನೆಗಳು ಬರುತ್ತವೆ ಇದರಡಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಅಧಿಕಾರಗಳು ನೇಮಕಾತಿ ವಿಧಾನ ಮೂಲಭೂತ ಹಕ್ಕುಗಳನ್ನು ಯಾವ ವಿಭಾಗದ ಅಡಿಯಲ್ಲಿ ರಕ್ಷಣೆಯನ್ನು ಮಾಡಲಾಗುತ್ತದೆ ಎಂಬ ವಿಚಾರಗಳಿಗೆ ಪ್ರಶ್ನೆಗಳು ಉದ್ಭವವಾಗುತ್ತವೆ

ಚುನಾವಣಾ ಆಯೋಗ

ಚುನಾವಣಾ ಆಯೋಗವು ಪ್ರಜಾಪ್ರಭುತ್ವ ಹಾಗೂ ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಧಿಗಳು ಚುನಾವಣಾ ಆಯೋಗದ ಮುಖ್ಯ ಕರ್ತವ್ಯ ಚುನಾವಣೆಗಳ ರಚನೆ ಹಾಗೂ ಚುನಾವಣೆಗಳನ್ನು ನಡೆಸುವ ಸಂಸ್ಥೆ ನ್ಯಾಯ ಸಮ್ಮತ ಚುನಾವಣೆಗಳು ಮುಂತಾದ ರೀತಿಯ ಪ್ರಶ್ನೆಗಳು ಬರುತ್ತವೆ ಚುನಾವಣಾ ಆಯೋಗದ ಮುಖ್ಯಸ್ಥರು ರಾಷ್ಟ್ರ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಚುನಾವಣೆಗಳಲ್ಲಿ ಪಡೆದ ಭಾಗಗಳು ಮತ್ತು ವಿಧಾನಸಭಾ ಮತ್ತು ವಿಧಾನ ಪರಿಷತ್ ಸ್ಥಾನಗಳ ಸಂಖ್ಯೆಗಳ ಬಗ್ಗೆ ಇಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ

ಭಾರತೀಯ ಸಂವಿಧಾನವನ್ನು ಅಧ್ಯಯನ ಮಾಡುವಾಗ ಕೇವಲ ವಿಧಿಗಳನ್ನು ನೆನಪಿಡದೆ ಅವುಗಳ ಅರ್ಥ ಕಾರ್ಯ ಹಾಗೂ ವಿವರಣೆಯನ್ನು ಅರ್ಥಮಾಡಿಕೊಳ್ಳಬೇಕು

ವಿಜ್ಞಾನ ವಿಭಾಗ

ವಿಜ್ಞಾನ ವಿಭಾಗದಲ್ಲಿ ಪ್ರಮುಖವಾಗಿ ಸಾಮಾನ್ಯ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇದರಲ್ಲಿ ಕೇಳಲಾಗುವ ಸಾಮಾನ್ಯ ವಿಚಾರಗಳ ಬಗ್ಗೆ ಉದ್ಭವ ಆಗುವ ಪ್ರಶ್ನೆಗಳ ಬಗ್ಗೆ ವಿವರ ಈ ಕೆಳಕಂಡಂತಿದೆ

ಮಾನವನ ದೇಹ

ಮಾನವನ ದೇಹದ ವಿವಿಧ ಅಂಗಾಂಗಗಳು ಹೃದಯ ಶ್ವಾಸಕೋಶ ಮೆದುಳು ಮೂತ್ರಪಿಂಡ ಮತ್ತು ಜೀರ್ಣಾಂಗಗಳ ಕಾರ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ದೇಹದ ಭಾಗಗಳಿಗೆ ಬರುವ ರೋಗಗಳು ಮತ್ತು ಅವುಗಳಿಗೆ ಇರುವ ಪರಿಹಾರ ಹಾಗೂ ವೈದ್ಯಕೀಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕೇಳಲಾಗುತ್ತದೆ ನಂತರ ಮಾನವನ ದೇಹದ ದೊಡ್ಡ ಅಂಗ ರಕ್ತ ಶುದ್ಧೀಕರಣ ಅಂಗ ಮುಂತಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ನೇರ ಪ್ರಶ್ನೆಗಳು ಸಾಮಾನ್ಯವಾಗಿರುತ್ತದೆ

ಆಹಾರ ಮತ್ತು ಪೋಷಣೆ

ಆಹಾರದಲ್ಲಿರುವ ಪ್ರೋಟೀನ್ ವಿಟಮಿನ್ ಕೊಬ್ಬು ಕಾರ್ಬೋಹೈಡ್ರೇಟ್ಸ್ ಮತ್ತು ಖನಿಜಗಳ ಕಾರ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ವಿಟಮಿನ್ ಗಳ ಕೊರತೆಯಿಂದ ಯಾವ ರೋಗ ಬರುತ್ತದೆ ಮತ್ತು ಇದಕ್ಕೆ ಪರಿಹಾರ ಕ್ರಮಗಳು ದೇಹದ ಬೆಳವಣಿಗೆಗೆ ಬೇಕಾದ ಪೋಷಕಾಂಶ ಯಾವುದು ಮತ್ತು ದೇಹದ ಭಾಗಗಳಿಗೆ ಆಗುವ ಅಂಗವಿಕಲತೆ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ

ಪರಿಸರ

ಪರಿಸರದ ಬಗ್ಗೆ ಪರಿಸರದ ಆಯಾಮಗಳು ಪರಿಸರ ಮಾಲಿನ್ಯ ಜೈವಿಕ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಪರಿಸರ ಸಂರಕ್ಷಣೆಗೆ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಪರಿಸರ ಸಂರಕ್ಷಣಾ ಕಾರ್ಯಾಚರಣೆಗಳು ಭೌಗೋಳಿಕತೆ ಪ್ರದೇಶ ಕಾಡಿನ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇದರ ಜೊತೆಯಲ್ಲಿ ಪರಿಸರದ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಕ್ರಮದ ಬಗ್ಗೆ ತಿಳಿದುಕೊಳ್ಳಿ

ವಿದ್ಯುತ್

ವಿದ್ಯುತ್ ಪ್ರವಾಹ ವೋಲ್ಟೇಜ್ ಪ್ರಮಾಣ ಮತ್ತು ಪರಿಣಾಮ ಪ್ರತಿರೋಧಗಳು ವಾಹಕ ಮತ್ತು ನಿರ್ವಾಹಕಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ವಿದ್ಯುತ್ ಪ್ರವಾಹದ ಘಟಕಗಳು ಉತ್ತಮ ವಿದ್ಯುತ್ ವಾಹಕ ವಿದ್ಯುತ್ ಬಲ್ಬ್ ಯಾವ ಶಕ್ತಿ ಬಳಸುತ್ತದೆ ಮುಂತಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿಚಾರಗಳು ಇರುತ್ತವೆ ಇದರ ಜೊತೆಯಲ್ಲಿ ಬೆಳಕು ಶಬ್ದ ವೇಗ ಮತ್ತು ತರಂಗಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ

ರಾಸಾಯನಿಕ ಕ್ರಿಯೆಗಳು

ರಾಸಾಯನಿಕ ಬದಲಾವಣೆಗಳು ಆಕ್ಸಿಕರಣ ಆಮ್ಲಗಳು ಅಪಚಯ ಶಾಾರ ಮತ್ತು ಲವಣಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಪಿಎಚ್ ಮೌಲ್ಯ ಹಾಗೂ ಪರಿಸರದಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ

ಜೀವಶಾಸ್ತ್ರ

ಜೀವಶಾಸ್ತ್ರದಲ್ಲಿ ಸಸ್ಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ನಿರ್ವಹಣೆ ಪ್ರಾಣಿಗಳು ಮತ್ತು ಅವುಗಳ ಕಾರ್ಯಗಳು ಜೀವಕೋಶಗಳು ದೇಹದ ಅಂಗಾಂಶಗಳು ಮತ್ತು ದೇಹದ ಒಳಗೆ ಮತ್ತು ದೇಹದ ಹೊರಗೆ ಇರುವ ಸೂಕ್ಷ್ಮಜೀವಿಗಳ ಪಾತ್ರಗಳ ಕುರಿತು ಬಗ್ಗೆ ಪ್ರಶ್ನೆಗಳು ಬರುತ್ತವೆ ಜೀವಕೋಶದ ಶಕ್ತಿಗೃಹ ದ್ವಿತಿ ಸಂಶ್ಲೇಷಣೆ ಕ್ರಿಯೆ ಮುಂತಾದ ವಿಷಯಗಳಲ್ಲಿ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ ಪ್ರಮುಖ ವೈಜ್ಞಾನಿಕ ಹೆಸರುಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ನೆನಪಿಡಿ

ಪ್ರಚಲಿತ ವಿದ್ಯಮಾನಗಳು

ಸರ್ಕಾರಿ ಯೋಜನೆಗಳು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸುವ ಪ್ರಮುಖ ಯೋಜನೆಗಳು ಅವುಗಳ ಉದ್ದೇಶ ಫಲಾನುಭವಿಗಳು ಅನುಷ್ಠಾನ ಮಾಡಬಹುದಾದ ಇಲಾಖೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇದರ ಜೊತೆಯಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಹಾಗೂ ಒದಗಿಸುವಲ್ಲಿ ಬರಬಹುದಾದ ಪ್ರಮುಖ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇತ್ತೀಚಿಗೆ ಆರಂಭವಾದ ಸರ್ಕಾರಿ ಯೋಜನೆಗಳು ಅವುಗಳ ಉದ್ದೇಶ ಮತ್ತು ಅರ್ಹತೆಯನ್ನು ತಿಳಿದುಕೊಳ್ಳುವಂತಹ ವಿಚಾರಗಳನ್ನು ಅಧ್ಯಯನ ಮಾಡಿ

ಪ್ರಶಸ್ತಿಗಳು

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹಾಗೂ ಕರ್ನಾಟಕದ ನಾಗರಿಕರಿಗೆ ಸಿಕ್ಕಿರುವ ಪ್ರಶಸ್ತಿಗಳು ಒಲಂಪಿಕ್ ಮುಂತಾದ ಕ್ರೀಡೆ ಸಾಂಸ್ಕೃತಿ ಕಲೆ ಸಾಹಿತ್ಯ ಹಾಗೂ ವಾಣಿಜ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶಸ್ತಿಗಳನ್ನು ಪಡೆದವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇತ್ತೀಚಿಗೆ ಭಾರತ ರತ್ನ ಪಡೆದ ವ್ಯಕ್ತಿ ಯಾರು? ನೊಬೆಲ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಿಗುತ್ತದೆ ಹಾಗೂ ಯಾವ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ

ಕ್ರೀಡೆ

ಭಾರತದ ಹಾಗೂ ಕರ್ನಾಟಕ ರಾಜ್ಯದ ಪ್ರಮುಖ ಕ್ರೀಡಾಸ್ಪರ್ಧಿಗಳು ಹಾಗೂ ಸ್ಪರ್ಧೆಗಳು, ವಿಜೇತರು ಪ್ರಸ್ತುತ ಇರುವ ಕ್ರೀಡಾಪಟುಗಳು ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಪ್ರಾಫಿಗಳ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇದರ ಜೊತೆಯಲ್ಲಿ ಪ್ರತಿಯೊಂದು ಕ್ರೀಡೆಗೂ ಒಂದೊಂದು ಬಹುಮಾನವನ್ನು ನಿಗದಿಪಡಿಸಲಾಗಿರುತ್ತದೆ.

ಉದಾಹರಣೆಗೆ, ಕರ್ನಾಟಕ ಕ್ರಿಕೆಟ್ ಗೆ ಸೈಯದ್ ಮುಷ್ಟಾಕ್‌ ಅಲಿ ಟ್ರೋಫಿ, ರಣಜಿ ಟ್ರೋಫಿ ಮುಂತಾದ ಪ್ರತ್ಯೇಕ ದ್ರಫಿಗಳನ್ನು ಇರಿಸಲಾಗಿರುತ್ತದೆ ಕ್ರಿಕೆಟ್ ವಿಶ್ವಕಪ್ ನ ವಿಜೇತ ರಾಷ್ಟ್ರ ಯಾವುದು ಭಾರತ ಹಾಗೂ ಕರ್ನಾಟಕದಲ್ಲಿ ಕ್ರೀಡೆಯ ಪಾತ್ರ ಹಾಗೂ ಯುವಕರಲ್ಲಿ ಕ್ರೀಡೆಯ ಜವಾಬ್ದಾರಿ ಮತ್ತು ಪಾತ್ರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇತ್ತೀಚಿನ ಕ್ರೀಡಾ ಸುದ್ದಿಗಳನ್ನು ಗಮನವಿಟ್ಟು ಓದಿ

ವಿಜ್ಞಾನ ಮತ್ತು ತಂತ್ರಜ್ಞಾನ

ರಾಜ್ಯ ಹಾಗೂ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಹೊಸ ಆವಿಷ್ಕಾರಗಳು ಬಾಹ್ಯಾಕಾಶ ಯೋಜನೆಗಳು ಉಪಗ್ರಹಗಳ ಉಡಾವಣೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಆಗಿರುವ ಅಭಿವೃದ್ಧಿ ಕುರಿತು ಪ್ರಶ್ನೆಗಳು ಬರುತ್ತವೆ ಚಂದ್ರಯಾನ ಬಾಹ್ಯಾಕಾಶ ಸಂಸ್ಥೆಗಳು ಗಗನಯಾತ್ರಿಗಳು ಮತ್ತು ಅವರ ಜೀವನವನ್ನು ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಇದರಲ್ಲಿ ಪ್ರಮುಖವಾಗಿ ವೈಜ್ಞಾನಿಕ ಸಾಧನೆಗಳ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತವೆ

ರಾಷ್ಟ್ರೀಯ ಘಟನೆಗಳು

ಭಾರತ ದೇಶದಲ್ಲಿ ನಡೆಯುವ ಪ್ರಮುಖ ಸಾಮಾಜಿಕ ಆರ್ಥಿಕ ರಾಜಕೀಯ ಘಟನೆಗಳು ಮತ್ತು ಸಾಂಸ್ಕೃತಿಕ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಯವ್ಯಯ ಅದರ ಮೊತ್ತ ಮತ್ತು ಯಾವ ಕ್ಷೇತ್ರಕ್ಕೆ ಎಷ್ಟು ಬಜೆಟ್ ನಿಯೋಜನೆಗೊಂಡಿದೆ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಉದ್ಘಾಟಿಸಿದವರು ನಡೆದ ದಿನಾಂಕ ವರ್ಷ ಹಾಗೂ ಸಮಯದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಕಳೆದ ಒಂದು ವರ್ಷಗಳ ರಾಷ್ಟ್ರೀಯ ಸುದ್ದಿಗಳಿಗೆ ಹೆಚ್ಚು ಗಮನವನ್ನು ನೀಡಿ

ಅಂತರಾಷ್ಟ್ರೀಯ ಘಟನೆಗಳು

ಜಾಗತಿಕ ಸಮ್ಮೇಳನಗಳು ದೇಶ ದೇಶಗಳ ನಡುವೆ ಏರ್ಪಡುವ ಅಂತರಾಷ್ಟ್ರೀಯ ಒಪ್ಪಂದಗಳು ರಾಷ್ಟ್ರಗಳ ಪ್ರಮುಖ ನಾಯಕರು ಮತ್ತು ಜಾಗತಿಕ ಘಟನೆಗಳ ಕುರಿತು ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತವೆ ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಛೇರಿ ಟಿ20 ಶೃಂಗಸಭೆ ಮತ್ತು ದೇಶ ದೇಶಗಳ ನಡುವೆ ಇರುವ ಮೈತ್ರಿ ಹಾಗೂ ಸ್ನೇಹ ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗುತ್ತದೆ ಇದರಲ್ಲಿಯೂ ಸಹ ಕಳೆದು ಒಂದು ವರ್ಷಗಳ ಅಂತರಾಷ್ಟ್ರೀಯ ಘಟನೆಗಳ ಬಗ್ಗೆ ತಿಳಿದುಕೊಳ್ಳಿ ಇದರಿಂದ ಇತ್ತೀಚಿನ ಜಾಗತಿಕ ಬೆಳವಣಿಗೆಗಳನ್ನು ತಿಳಿದುಕೊಳ್ಳಬಹುದಾಗಿರುವುದರಿಂದ ಈ ವಿಭಾಗದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು

ಮಾನಸಿಕ ಮತ್ತು ಸಂಖ್ಯಾತ್ಮಕ ಸಾಮರ್ಥ್ಯ

ಈ ವಿಭಾಗದಲ್ಲಿ ಅಭ್ಯರ್ಥಿಯು ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಉತ್ತಮ ರೀತಿಯಲ್ಲಿ ಪರೀಕ್ಷಿಸಲಾಗುತ್ತಿದ್ದು ಈ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ತಾರ್ಕಿಕ ಜ್ಞಾನವನ್ನು ಹೊಂದಿದರೆ ಸಾಕಾಗುತ್ತದೆ ಈ ವಿಭಾಗದ ಅಡಿಯಲ್ಲಿ ಬರುವ ಮುಖ್ಯ ಅಂಶಗಳೆಂದರೆ

ಸಂಖ್ಯಾ ಸರಣಿಗಳು

ಸಂಖ್ಯೆಗಳ ಕ್ರಮವನ್ನು ಗುರುತಿಸುವುದು ಹಾಗೂ ಅದರ ಮುಂದಿನ ಸಂಖ್ಯೆಯನ್ನು ಕಂಡುಹಿಡಿಯುವ ಬಗ್ಗೆ ಪ್ರಶ್ನೆಗಳು ಬರುತ್ತವೆ ಇಂತಹ ಪ್ರಶ್ನೆಗಳಿಗೆ ಹೆಚ್ಚಿನ ಅಭ್ಯಾಸ ಅಗತ್ಯವಾಗಿರುತ್ತದೆ ಏಕೆಂದರೆ ತಾರ್ಕಿಕ ಚಿಂತನೆಯು ಸಂಖ್ಯಾ ಸರಣಿಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಬಗೆಹರಿಸಲು ಪ್ರಮುಖ ಪಾತ್ರ ವಹಿಸುತ್ತವೆ

ಕೋಡಿಂಗ್ ಮತ್ತು ಡೀಕೋಡಿಂಗ್

ಒಂದು ಪದದಿಂದ ಅಥವಾ ಸಂಖ್ಯೆಯಿಂದ ಇನ್ನೊಂದು ಪದವಾಗಿ ಅಥವಾ ಸಂಖ್ಯಾ ರೂಪವಾಗಿ ಪರಿವರ್ತಿಸಲು ಯಾವ ಯಾವ ಆಯಾಮಗಳನ್ನು ಅನುಸರಿಸಬೇಕು ಎಂಬ ರೀತಿಯ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗುತ್ತದೆ ಕೋಡಿಂಗ್ ಮತ್ತು ಡಿಕೋಡಿಂಗ್ ಬಗೆಗಿನ ನಿಯಮಗಳನ್ನು ಅರ್ಥ ಮಾಡಿಕೊಂಡರೆ ಈ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು

ಶೇಕಡವಾರು ಪ್ರಶ್ನೆಗಳು

ಶೇಕಡವಾರು ಪ್ರಶ್ನೆಗಳು ಗಣಿತ ವಿಭಾಗದಲ್ಲಿ ಬಹುತೇಕವಾಗಿ ಅಧ್ಯಾಯಗಳಿಗೆ ಮೂಲವಾಗಿವೆ ಮಾಹಿತಿ ವಿಚಾರ ಹಾಗೂ ಸಂಖ್ಯೆಗಳಿಗೆ ಸಂಬಂಧಿಸಿದ ಶೇಕಡವಾರು ಬಗೆಗಿನ ಪ್ರಶ್ನೆಗಳು ಹೆಚ್ಚಾಗಿ ಉದ್ಭವವಾಗುತ್ತವೆ ದೈನಂದಿನ ಅಭ್ಯಾಸದ ಮೂಲಕ ಈ ಶೇಕಡವಾರು ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ವೇಗವನ್ನು ಹೆಚ್ಚಿಸಬಹುದು

ಲಾಭ ನಷ್ಟ

ವಾಣಿಜ್ಯ ಕ್ಷೇತ್ರಗಳು ಮತ್ತು ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಪ್ರಶ್ನೆಗಳು ಬರುತ್ತವೆ ಒಂದು ವಸ್ತುವಿನ ಮಾರಾಟಬೆಲೆ ಕೊಳ್ಳುವ ಬೆಲೆ ಲಾಭದ ಮಟ್ಟ ನಷ್ಟ ಹಾಗೂ ಉತ್ಪನ್ನದ ಬೆಲೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಸೂತ್ರಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಈ ವಿಭಾಗದಲ್ಲಿ ಅಂಕಗಳನ್ನು ಗಳಿಸಬಹುದು

ಅನುಪಾತ ಮತ್ತು ಸಮಾನುಪಾತ

ಒಂದು ಗುಂಪಿನ ಮೌಲ್ಯಗಳು ನಡುವಿನ ಅನುಪಾತ ಹಾಗೂ ಸಮಾನುಪಾತ ವಿಧಾನಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಈ ವಿಧಾನದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು ಮಾಹಿತಿ ವಿವರ ಹಾಗೂ ಸಂಖ್ಯಾತ್ಮಕ ಸಮೂಹಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇಲ್ಲಿ ಬರುತ್ತವೆ

ಸಮಯ ಮತ್ತು ಕೆಲಸ

ಈ ವಿಭಾಗದಲ್ಲಿ ವೇಗ ಶ್ರಮ ಕಾರ್ಯಕ್ಷಮತೆ ಮತ್ತು ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಬರುತ್ತವೆ. ನಿಯಮಿತ ಅಭ್ಯಾಸದಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು

ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ್ಯಗಳು

ಭಾಷಾ ವಿಭಾಗದಲ್ಲಿ ವ್ಯಾಕರಣ ಶಬ್ದಕೋಶ ಮತ್ತು ಓದುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ ಕನ್ನಡ ಹಾಗು ಇಂಗ್ಲಿಷ್ ಭಾಷಾ ಕೌಶಲ್ಯಗಳು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಪರಿಚಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ

ಕನ್ನಡ ಭಾಷೆ

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣದಲ್ಲಿ ನಾಮಪದ ಸರ್ವನಾಮ ಕ್ರಿಯಾಪದ ವಿಶೇಷಣ ಸಂಧಿ ಸಮಾಸ ಹಾಗೂ ಕಾಲಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಮೂಲಭೂತ ವ್ಯಾಕರಣ ನಿಯಮಗಳನ್ನು ಅಭ್ಯಾಸ ಮಾಡುವುದರಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಹುದು

ಸಮಾನಾರ್ಥಕ ಪದಗಳು

ಒಂದು ಪದಕ್ಕೆ ಸಂಬಂಧಿಸಿದಂತೆ ಸಮಾನಾರ್ಥವನ್ನು ನೀಡುವ ಹಾಗೂ ಹೊಂದಿರುವ ಪದಗಳನ್ನು ಸಮಾನಾರ್ಥಕ ಪದಗಳು ಎನ್ನುತ್ತಾರೆ. ಪ್ರಮುಖ ಕನ್ನಡ ಪದಗಳ ಸಮಾನಾರ್ಥಕ ಪದಗಳ ಪಟ್ಟಿಯನ್ನು ರಚಿಸಿ ಅಧ್ಯಯನ ಮಾಡುವುದರಿಂದ ನಿಮ್ಮ ಅಧ್ಯಯನವೂ ಸುಲಭವಾಗುತ್ತದೆ

ವಿರುದ್ಧಾರ್ಥಕ ಪದಗಳು

ಒಂದು ನಿರ್ದಿಷ್ಟ ಪದಕ್ಕೆ ಇರುವ ವಿರುದ್ಧ ಅರ್ಥವನ್ನು ಸೂಚಿಸುವ ಪದಗಳನ್ನು ವಿರುದ್ಧಾರ್ಥಕ ಪದಗಳು ಎಂದು ಕರೆಯಲಾಗುತ್ತದೆ ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಬಳಸುವ ಹಾಗೂ ದಿನನಿತ್ಯ ಬಳಸುವ ಪದಗಳಿಗೆ ಇರುವ ವಿರುದ್ಧಾರ್ಥಕ ಪದದ ಅರ್ಥವನ್ನು ನೆನಪಿಟ್ಟುಕೊಳ್ಳಿ

ಗಾದೆಗಳು

ಜೀವನದ ಅನುಭವಗಳನ್ನು ಜ್ಞಾನ ಪೂರ್ಣಾರ್ಥಗಳಲ್ಲಿ ತಿಳಿಸುವ ಗಾದೆಗಳನ್ನು ತಿಳಿದುಕೊಳ್ಳುವುದು ಸಹ ಪ್ರಮುಖವಾಗಿದೆ ಗಾದೆಯ ಅರ್ಥ ಮತ್ತು ಒಂದು ವಿಷಯಕ್ಕೆ ಹಾಗೂ ಸಂದರ್ಭದಲ್ಲಿ ತಕ್ಕಂತೆ ಆಯ್ಕೆ ಮಾಡಬಹುದಾದ ಸೂಕ್ತ ಗಾದೆ ಹಾಗೂ ಗಾದೆಯನ್ನು ಪೂರ್ಣಗೊಳಿಸುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಕನ್ನಡ ಭಾಷೆಯಲ್ಲಿರುವ ಜನಪ್ರಿಯ ಗಾದೆಗಳು ಮತ್ತು ಅವುಗಳ ಅರ್ಥ ಹಾಗೂ ಪೂರ್ಣ ಮಾಡುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ

ವಾಕ್ಯಗಳ ರಚನೆ

ನಿರ್ದಿಷ್ಟವಾಗಿ ಕೊಟ್ಟಿರುವ ಪದಗಳ ಗುಂಪಿನಲ್ಲಿ ಒಂದು ಕಾಲಾನುಕ್ರಮದಲ್ಲಿ ಹೇಗೆ ಜೋಡಿಸಿದರೆ ಅರ್ಥಪೂರ್ಣ ವಾಕ್ಯ ವಾಗುತ್ತದೆ ಮತ್ತು ಅರ್ಥಪೂರ್ಣ ವಾಕ್ಯವನ್ನು ನಿರ್ಮಿಸುವ ಸಾಮರ್ಥ್ಯವನ್ನು ಈ ವಾಕ್ಯ ರಚನೆ ವಿಭಾಗದಲ್ಲಿ ಪರೀಕ್ಷಿಸಲಾಗುತ್ತದೆ ಸರಿಯಾದ ವಾಕ್ಯಗಳ ಗುರುತಿಸುವಿಕೆ ಅವ್ಯವಸ್ಥಿತ ಪದಗಳನ್ನು ಕ್ರಮಬದ್ಧಗೊಳಿಸುವಿಕೆ ಅಥವಾ ವಾಕ್ಯಗಳಲ್ಲಿನ ತಪ್ಪನ್ನು ಸರಿಪಡಿಸುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ವ್ಯಾಕರಣ ನಿಯಮಗಳನ್ನು ಅಭ್ಯಾಸ ಮಾಡುವುದರಿಂದ ವಾಕ್ಯ ರಚನೆಯನ್ನು ಚೆನ್ನಾಗಿ ಮಾಡಬಹುದು

ಇಂಗ್ಲೀಷ್ ಭಾಷೆ

ಗ್ರಾಮರ್ ವಿಭಾಗ

ಇಂಗ್ಲಿಷ್ ಭಾಷೆಯಲ್ಲಿ ಪಾರ್ಟ್ ಆಫ್ ಸ್ಪೀಚ್, ಟೆನ್ಸ್ ಗಳು, ಆರ್ಟಿಕಲ್ ಗಳು, ಪ್ರಪೋಸಿಶನ್ ಮತ್ತು ಆಕ್ಟಿವ್ ವಾಯ್ಸ್ ಪ್ಯಾಸಿವ್ ವಾಯ್ಸ್ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಒಂದು ವಾಕ್ಯವನ್ನು ನೀಡಿ ಸರಿಯಾದ ಆಯ್ಕೆಗಳನ್ನು ತುಂಬುವಂತೆ ಕೇಳಲಾಗುತ್ತದೆ ಗ್ರಾಮರ್ ನಿಯಮಗಳನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು

ವಕ್ಯಾಬುಲರಿ

ವಕ್ಯಾಬುಲರಿ ವಿಭಾಗದಲ್ಲಿ ಇಂಗ್ಲಿಷ್ ಪದಗಳ ಅರ್ಥ ಬಳಸುವ ಸಂದರ್ಭ ಹಾಗೂ ಸರಿಯಾದ ಆಯ್ಕೆಗಳ ಪದವನ್ನು ಕುರಿತು ಬರಬಹುದಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಬಿಟ್ಟ ಸ್ಥಳ ತುಂಬುವುದು ಸರಿಯಾದ ಪದದ ಆಯ್ಕೆ ಮತ್ತು ಸಮೀಪದಲ್ಲಿರುವ ಪದದ ಅರ್ಥವನ್ನು ಇಲ್ಲಿ ಕೇಳಲಾಗುತ್ತದೆ ಪ್ರತಿದಿನವೂ ಹೊಸ ಇಂಗ್ಲಿಷ್ ಪದಗಳನ್ನು ಕಲಿಯಿರಿ

ಕಾಂಪ್ರಿಹೆಂಶನ್

ಒಂದು ನಿಗದಿತ ಪ್ಯಾರಾಗ್ರಾಫನ್ನು ನೀಡಿ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮುಖ್ಯವಾಗಿ ವಿಷಯಗಳು ಲೇಖಕರ ಅಭಿಪ್ರಾಯ ಮತ್ತು ಪಠ್ಯದ ಅರ್ಥ ಗ್ರಹಿಕೆಯನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಈ ಪ್ಯಾರಾಗ್ರಾಫ್ ನ ಉದ್ದೇಶ ಅಥವಾ ಪ್ರಶ್ನೆಗಳ ಕ್ರಿಯಾಶೀಲತೆಯನ್ನು ಇಲ್ಲಿ ಕೇಳಬಹುದು

ಸಿನೋನಿಮ್ಸ್ ಮತ್ತು ಆಂಟನಿಮ್ಸ್

ಸೀನಾ ನಿಮ್ ಎಂದರೆ ಸಮಾನಾರ್ಥಕ ಪದಗಳು ಆಂಟಾನಿಮ್ಸ್ ಎಂದರೆ ವಿರುದ್ಧಾರ್ಥಕ ಪದಗಳು ಇಂಗ್ಲಿಷ್ ಭಾಷೆಯಲ್ಲಿರುವ ಪ್ರಮುಖ ಪದಗಳಿಗೆ ಇರುವ ಸಮಾನಾರ್ಥಕ ಹಾಗೂ ವಿರುದ್ಧಾರ್ಥಕ ಪದಗಳ ಅರ್ಥ ಬಳಕೆ ಹಾಗೂ ಮಹತ್ವವನ್ನು ತಿಳಿದುಕೊಳ್ಳಿ

Exam ತಯಾರಿ ಸುಲಭವಾಗಿರಲು ಯಾವ ಟೆಕ್ನಿಕ್ ಇರಬೇಕು

Exam ತಯಾರಿಯಲ್ಲಿ ಉತ್ತಮ ಫಲಿತಾಂಶವನ್ನು ಹೊಂದಲು ಸ್ಮಾರ್ಟ್ ಎಂಬ ತಯಾರಿ ತಂತ್ರವು ಪ್ರಮುಖ ಪಾತ್ರ ವಹಿಸುತ್ತದೆ ಅದನ್ನು ವಿವರಿಸುವುದಾದರೆ

SMART Study Technique

S – Specific Learning Mathod

ಒಂದು ದಿನದಲ್ಲಿ ತಯಾರಿ ಮಾಡುವಾಗ ಒಂದು ವಿಷಯದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ, ಗಮನವನ್ನು ಚಂಚಲವಾಗುವಂತೆ ಇರಬೇಡಿ.

M – Measurable Progress

ಪ್ರತಿದಿನ ಮಾಡಿದ ಅಧ್ಯಯನವನ್ನು ದಾಖಲಿಸಿಕೊಳ್ಳಿ ಮತ್ತು ನಿಮ್ಮನ್ನು ನೀವು ಮೌಲ್ಯಮಾಪನ ಮಾಡಿಕೊಳ್ಳಿ.

A – Achievable Goals

ಸಣ್ಣ ಗುರಿಗಳನ್ನು ನಿಗದಿಪಡಿಸಿ ಅವುಗಳನ್ನು ಪೂರ್ಣಗೊಳಿಸಿ. ಇದರಿಂದ ನಿಮ್ಮ ಸಾಧನೆಯ ಹಾದಿ ಸುಲಭವಾಗುತ್ತದೆ

R – Revision

ವಾರಕ್ಕೊಮ್ಮೆ ಸಂಪೂರ್ಣ ಪುನರಾವರ್ತನೆ ಮಾಡಿ. ಹೊಸ ವಿಷಯಗಳನ್ನು ಆರಂಭಿಸುವ ಮೊದಲು ರಿವಿಷನ್‌ ಮಾಡಿ

T – Time Management

ಪ್ರತಿಯೊಂದು ವಿಷಯಕ್ಕೂ ನಿರ್ದಿಷ್ಟ ಸಮಯ ಮೀಸಲಿಡಿ. ಮತ್ತು ಉತ್ತಮ ರೀತಿಯಲ್ಲಿ ಸಮಯವನ್ನು ನಿರ್ವಹಣೆ ಮಾಡಿ

Exam ಗೆ ವೇಗವಾಗಿ ಓದುವ ತಂತ್ರಗಳು

  • ಪರೀಕ್ಷಾ ತಯಾರಿಗೆಂದು ಓದುವಾಗ ಪ್ರಮುಖ ಅಂಶಗಳನ್ನು ಅಂಡರ್ಲೈನ್ ಮಾಡಿ ಮತ್ತು ಕಿರು ಟಿಪ್ಪಣಿಗಳನ್ನು ರಚಿಸಿಕೊಳ್ಳಿ ಇದು ರಿವಿಜನ್ ಗೆ ಸಹಕರಿಸುತ್ತದೆ
  • ಪ್ರತಿ ಬಾರಿ ಓದುವಾಗ 25 ರಿಂದ 30 ನಿಮಿಷ ಓದಿ ನಂತರ ಐದು ನಿಮಿಷಗಳ ವಿರಾಮ ತೆಗೆದುಕೊಳ್ಳಿ ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ
  • ವಿಷಯಗಳ ನಡುವಿನ ಸಂಬಂಧವನ್ನು ಚಿತ್ರ ರೂಪದಲ್ಲಿ ಬರೆದುಕೊಳ್ಳುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಮತ್ತು ಕಾರ್ಯಯೋಜನೆಯ ರೀತಿಯಲ್ಲಿ ಅಂಶಗಳನ್ನು ನೆನಪಿಡಬಹುದು
  • ಸೂತ್ರಗಳು, ದಿನಾಂಕಗಳು, ವರ್ಷಗಳು ಮತ್ತು ಪ್ರಮುಖ ಮಾಹಿತಿಗಳನ್ನು ಕಾರ್ಡುಗಳ ಮೇಲೆ ಬರೆದು ನಿಮ್ಮ ಕೊಠಡಿಯಲ್ಲಿ ಅಂಟಿಸಿಕೊಳ್ಳಿ
  • ಪ್ರತಿ 15 ದಿನಗಳಿಗೊಮ್ಮೆ ಪುನರಾವರ್ತನೆ ಮಾಡುವ ವಿಧಾನವನ್ನು ರೂಡಿಸಿಕೊಳ್ಳಿ ಏಕೆಂದರೆ ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಯಲ್ಲಿ ಅಂಶಗಳನ್ನು ದೀರ್ಘಕಾಲದಲ್ಲಿ ನೆನಪಿಟ್ಟುಕೊಳ್ಳಲು ಸಹಕರಿಸುತ್ತದೆ

Exam ಗೆ 90 ದಿನಗಳ ಅಧ್ಯಯನ ಯೋಜನೆ

ಮೊದಲ 30 ದಿನಗಳು

ಪರೀಕ್ಷೆ ತಯಾರಿಯನ್ನು ಆರಂಭಿಸುವ ಮೊದಲ 30 ದಿನಗಳಲ್ಲಿ ಸಿಲಬಸ್ನ ಮೂಲಭೂತ ಭಾಗಗಳನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಪೂರ್ಣ ರೀತಿಯಲ್ಲಿ ಪರಿಶೀಲಿಸಿಕೊಳ್ಳಿ

  • ಇತಿಹಾಸ
  • ಭೂಗೋಳಶಾಸ್ತ್ರ
  • ಸಂವಿಧಾನ
  • ಪ್ರಚಲಿತ ಘಟನೆಗಳು
  • ಗಣಿತದ ಮೂಲಭೂತ ಅಧ್ಯಾಯಗಳು

ಈ ಎಲ್ಲಾ ವಿಚಾರಗಳನ್ನು ಪ್ರತಿದಿನ ಕನಿಷ್ಠ 5 ರಿಂದ 7 ಗಂಟೆಗಳ ಕಾಲ ಅಧ್ಯಯನ ಮಾಡಿದರೆ, ತಯಾರಿ ಗುಣಮಟ್ಟವು ಉತ್ತಮವಾಗಿರುತ್ತದೆ

31 ರಿಂದ 60 ದಿನಗಳು

ಈ ಹಂತದಲ್ಲಿ ಗಣಿತ ವಿಚಾರಗಳಿಗೆ ಸಂಬಂಧಿಸಿದಂತಹ ಹಾಗೂ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನವನ್ನು ನಡೆಸಬೇಕಾಗುತ್ತದೆ

  • ವಿಜ್ಞಾನ
  • ತಂತ್ರಜ್ಞಾನ
  • ಕನ್ನಡ ಭಾಷೆ
  • ಇಂಗ್ಲಿಷ್ ಭಾಷೆ
  • ತಾರ್ಕಿಕ ವಿಷಯಗಳು
  • ಸಂಖ್ಯಾತಕ ವಿವರಣೆ

ಈ ಮೇಲಿನ ವಿಷಯಗಳನ್ನು ಪೂರ್ಣಗೊಳಿಸುವುದರಿಂದ ಉತ್ತರ ನೀಡುವ ಸಾಮರ್ಥ್ಯವು ಹೆಚ್ಚಾಗುತ್ತದೆ ವಾರಕ್ಕೆ ಮೂರರಿಂದ ನಾಲ್ಕು ಮಾಕ್ ಟೆಸ್ಟ್ ಗಳನ್ನು ಬರೆಯಲು ಆರಂಭಿಸಿ

61 ರಿಂದ 75 ದಿನಗಳು

ಈ ಅವಧಿಯಲ್ಲಿ ರಿವಿಶನ್ ಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗುತ್ತದೆ

  • ರಿವಿಜನ್ ಮಾಡುವುದು
  • ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು
  • ಕಷ್ಟಕರವೆನಿಸುವ ದುರ್ಬಲ ವಿಷಯಗಳಿಗೆ ಹೆಚ್ಚಿನ ಗಮನ ಹಾಗೂ ಅಧ್ಯಯನವನ್ನು ಮಾಡುವುದು

71 ರಿಂದ 91 ದಿನಗಳು

ಈ ಹಂತವು ಪರೀಕ್ಷಾ ತಯಾರಿಯಲ್ಲಿ ಕೊನೆಯ ಹಂತ ಆಗಿರುವುದರಿಂದ ಪ್ರಮುಖ ಕಾಲಘಟ್ಟವಾಗಿರುತ್ತದೆ ಈ ಹಂತದಲ್ಲಿ ಈ ಕೆಳಕಂಡ ವಿಷಯಗಳನ್ನು ಗಮನವಿಟ್ಟು ಅಧ್ಯಯನ ಮಾಡಿ

  • ಪ್ರತಿದಿನ ಒಂದರಿಂದ ಎರಡು ಮಾಕ್‌ ಟೆಸ್ಟ್ ತೆಗೆದುಕೊಳ್ಳಿ  ‌
  • ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆಯನ್ನು ಸಾಧಿಸಿ
  • ಶಾರ್ಟ್ ನೋಟ್ಸ್ ಗಳನ್ನು ಬರೆದುಕೊಂಡಿದ್ದರಿಂದ ರಿವಿಶನ್ ಗಳನ್ನು ಮಾಡಿ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಿ

ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು CPC ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಸ್ಪರ್ಧೆ ಹೆಚ್ಚಿರುವುದರಿಂದ ಸರಿಯಾದ ಅಧ್ಯಯನ ಯೋಜನೆ ಮತ್ತು ನಿರಂತರ ಅಭ್ಯಾಸವೇ ಯಶಸ್ಸಿನ ಗುಟ್ಟು.

Exam‌ Preparation ನಲ್ಲಿ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

  • ಸಿಲಬಸ್ ಅನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ ಪರೀಕ್ಷೆಯನ್ನು ಬರೆಯುವುದರಿಂದ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ
  • ಮಾಕ್ ಟೆಸ್ಟುಗಳನ್ನು ಕಡೆಗಣಿಸುವುದರಿಂದ ಸಮಯ ನಿರ್ವಹಣೆಯ ಕೊರತೆ ಉಂಟಾಗಿ ಪರೀಕ್ಷೆಯಲ್ಲಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಮಯಾವಕಾಶ ಸಾಕಾಗುವುದಿಲ್ಲ
  • ಪುನರವರ್ತನೆ ಮಾಡದಿದ್ದರೆ ಓದಿದ ವಿಷಯಗಳನ್ನು ಜ್ಞಾಪಕ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಆದಷ್ಟು ಬೇಗ ಮರೆಯುವ ಸಂಭವ ಇರುತ್ತದೆ
  • ಪ್ರಚಲಿತ ಘಟನೆಗಳ ವಿಭಾಗಕ್ಕೆ ಕಡಿಮೆ ಸಮಯ ನೀಡುವುದು ಮತ್ತು ಕಡೆಗಣಿಸುವುದರಿಂದ ಸುಲಭವಾಗಿ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ
  • ಹೆಚ್ಚಾಗಿ ಊಹಾತ್ಮಕ ಉತ್ತರಗಳನ್ನು ನೀಡುವುದರಿಂದ ಈ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳು ಇರುತ್ತವೆ ಇದರಿಂದ ಸರಿಯಾದ ಉತ್ತರಕ್ಕೆ ಪಡೆದ ಅಂಕಗಳನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ

ಆರೋಗ್ಯ ಕಾಪಾಡಿಕೊಳ್ಳುವಿಕೆ ಮತ್ತು ಮಾನಸಿಕ ಸಿದ್ಧತೆ

Examಗೆ ಮತ್ತು Exam ನಲ್ಲಿ ಯಶಸ್ಸನ್ನು ಪಡೆಯಲು ಕೇವಲ ಓದುವುದಷ್ಟೇ ಸಾಕಾಗುವುದಿಲ್ಲ ಇದರ ಜೊತೆಯಲ್ಲಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಅವಲಂಬಿಸಿ ಆದರಿಸಿ ಪಾಲಿಸುವುದರ ಮೂಲಕ ಆರೋಗ್ಯದ ಮಟ್ಟ ಮತ್ತು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳಬಹುದಾಗಿರುತ್ತದೆ

  • ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ರೆ ಮಾಡಿ ಇದು ಓದುವ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ವಿರಾಮವನ್ನು ಪಡೆದಂತೆ ಆಗುತ್ತದೆ
  • ಆರೋಗ್ಯಕರ ಆಹಾರವನ್ನು ಸೇವಿಸಿ ಈ ಸಮಯದಲ್ಲಿ ಯಾವುದೇ ಜಂಕ್ ಫುಡ್ ಗಳು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಖಾರದ ಪದಾರ್ಥಗಳು ಮುಂತಾದ ಅನಾರೋಗ್ಯವನ್ನು ತರಿಸುವಂತಹ ಆಹಾರದಿಂದ ದೂರವಿರಿ
  • ಹೆಚ್ಚು ನೀರನ್ನು ಕುಡಿಯಿರಿ ಏಕೆಂದರೆ ನೀವು ಆರೋಗ್ಯವಾಗಿರಲು ಕುಡಿಯುವ ನೀರಿನ ಪ್ರಮಾಣವು ಪ್ರಮುಖ ಪಾತ್ರ ವಹಿಸುತ್ತದೆ
  • ದಿನನಿತ್ಯವೂ ನಿಯಮಿತ ವ್ಯಾಯಾಮವನ್ನು ಮಾಡಿ ಏಕೆಂದರೆ ಓದುವ ಸಮಯದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ ಹಾಗೂ ದೈಹಿಕ ಸಾಮರ್ಥ್ಯವು ಪ್ರಮುಖವಾಗುತ್ತದೆ
  • ಧ್ಯಾನ ಹಾಗೂ ಯೋಗಭ್ಯಾಸ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ
  • ಆರೋಗ್ಯಕರ ದೇಹವನ್ನು ಹೊಂದಿ ಏಕಾಗ್ರತೆ ಮನಸ್ಸನ್ನು ಹೊಂದುವುದರಿಂದ ಉತ್ತಮ ರೀತಿಯ ತಯಾರಿಯನ್ನು ನಡೆಸಬಹುದಾಗಿರುತ್ತದೆ

CPC Exam ನಲ್ಲಿ ಯಶಸ್ಸನ್ನು ಪಡೆಯಲು 5 ಪ್ರಮುಖ ಸೂತ್ರಗಳು

  1. ಸಿಲಬಸ್ ಅನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ
  2. ದಿನನಿತ್ಯ ಅಧ್ಯಯನ ಮಾಡಿ
  3. ಮಾಕ್ ಟೆಸ್ಟ್ ಗಳನ್ನು ಹೆಚ್ಚಾಗಿ ಬರೆಯಿರಿ
  4. ಪ್ರತಿದಿನ ಅಥವಾ 3 ದಿನಗಳಿಗೊಮ್ಮೆ ರಿವಿಷನ್ ಮಾಡಿ
  5. ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ಮಾಡಿ
  6. 90 ದಿನಗಳ ಪರೀಕ್ಷಾ ತಯಾರಿ ವೇಳಾಪಟ್ಟಿಯನ್ನು ಅನುಸರಿಸಿ.

 

ಸಂಬಂಧಿತ ಮಾಹಿತಿಗಳು

ಭಾರತೀಯ ಸಂವಿಧಾನ ಸಂಪೂರ್ಣ ನೋಟ್ಸ್
ಕರ್ನಾಟಕ ಇತಿಹಾಸ ಪ್ರಶ್ನೋತ್ತರ
CPC ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ
ಪ್ರಚಲಿತ ಘಟನೆಗಳು 2026
ಕನ್ನಡ ವ್ಯಾಕರಣ ಪ್ರಶ್ನೆಗಳು

Exam ಗೆ ಸಂಬಂಧಿಸಿದಂತೆ FAQ’s

CPC Exam ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು?

ದ್ವಿತೀಯ ಪಿಯುಸಿ, ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಈ Exam ನಲ್ಲಿ ಯಶಸ್ಸು ಪಡೆಯಲು ದಿನಕ್ಕೆ ಕನಿಷ್ಠ ಎಷ್ಟು ಗಂಟೆ ಓದಬೇಕು?

ಕನಿಷ್ಠ 6 ರಿಂದ 8 ಗಂಟೆಗಳ ಗುಣಮಟ್ಟದ ಅಧ್ಯಯನ ಮಾಡಬೇಕಾಗುತ್ತದೆ

CPC Exam ನಲ್ಲಿ ಯಾವ ವಿಷಯಕ್ಕೆ ಹೆಚ್ಚು ಮಹತ್ವ?

ಇತಿಹಾಸ, ಸಂವಿಧಾನ, ಪ್ರಚಲಿತ ಘಟನೆಗಳು, ಗಣಿತ ಹಾಗೂ ತಾರ್ಕಿಕ ಸಾಮರ್ಥ್ಯ ಮತ್ತು ಕನ್ನಡ ಮತ್ತು ಇಂಗ್ಲಿಷ್‌ ಭಾಷಾ ಜ್ಞಾನ

CPC Exam ನಲ್ಲಿ ನೆಗೆಟಿವ್ ಮಾರ್ಕಿಂಗ್ ಇದೆಯೇ?

ಹೌದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ನೆಗೆಟಿವ್‌ ಮಾರ್ಕಿಂಗ್‌ ಇರುತ್ತದೆ.

CPC Exam ಗೆ ಉತ್ತಮ ಪುಸ್ತಕಗಳು ಯಾವುವು?

ಸಂವಿಧಾನ, ಇತಿಹಾಸ, ವಿಜ್ಞಾನ ಮತ್ತು ಪ್ರಚಲಿತ ಘಟನೆಗಳ ಸಾಮಾನ್ಯ ಪುಸ್ತಕಗಳನ್ನು ಓದಬೇಕು. ಇದರ ಜೊತೆಯಲ್ಲಿ 6 ರಿಂದ 10ನೇ ತರಗತಿಯವರೆಗಿನ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಪುಸ್ತಕಗಳನ್ನು ಓದಬೇಕು

Conclusion

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನೇಮಕ ಪ್ರಕ್ರಿಯೆ ಆರಂಭಗೊಂಡಿದ್ದು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಈ Exam ನಲ್ಲಿ ಯಶಸ್ಸನ್ನು ಸಾಧಿಸಲು ಯಾವುದೇ ಶಾರ್ಟ್ ಕಟ್ ಇರುವುದಿಲ್ಲ ಸರಿಯಾದ ಯೋಜನೆ ಮಾಡುವುದು ನಿಯಮಿತವಾಗಿ ಅಧ್ಯಯನ ಕೈಗೊಳ್ಳುವುದು ಮಾತ್ರಗಳನ್ನು ಬರೆಯುವುದು ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ಮಾಡುವುದು ಮತ್ತು ಆತ್ಮವಿಶ್ವಾಸದಿಂದ ಇರುವುದು ಇವುಗಳೇ ಯಶಸ್ಸಿನ ಗುಟ್ಟು ಆಗಿದೆ.

ಅಭ್ಯರ್ಥಿಗಳು ಪ್ರತಿದಿನ ಶಿಸ್ತು ಬದ್ಧವಾಗಿ ಅಧ್ಯಯನ ಮಾಡಿ ಸಿಲಬಸ್ ಅನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವುದರ ಮೂಲಕ ನಿಯಮಿತವಾಗಿ ಪುನರಾವರ್ತನೆ ಮಾಡಿದರೆ Written Exam ನಲ್ಲಿ ಉತ್ತಮ ಹಂತಗಳನ್ನು ಗಳಿಸಿ ಮುಂದಿನ ದೈಹಿಕ ದಾರ್ಡ್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಸುಲಭವಾಗಿ ಅರ್ಹತೆಯನ್ನು ಪಡೆಯಬಹುದಾಗಿರುತ್ತದೆ ಸರಿಯಾದ ಯೋಜನೆಯಿಂದ ನಿರಂತರ ಅಭ್ಯಾಸ ಮಾಡುವುದರ ಮೂಲಕ ನಿಯಮಿತ ಪುನರಾವರ್ತನೆ ಮಾಡಿ ಆತ್ಮವಿಶ್ವಾಸದಿಂದ ಇರುವುದರಿಂದ ಈ Exam ನಲ್ಲಿ ಯಶಸ್ಸನ್ನು ಸಾಧಿಸಬಹುದಾಗಿರುತ್ತದೆ

Last Updated : 18-06-2026

 

Author Note : ಈ ವೆಬ್‌ ಸೈಟಿನಲ್ಲಿ ಸರ್ಕಾರಿ ಉದ್ಯೋಗಗಳು, ಪರೀಕ್ಷಾ ಸಲಹೆಗಳು, ವೃತ್ತಿ ಮಾರ್ಗದರ್ಶನ ಮತ್ತು ಪ್ರಮುಖ ಸುದ್ದಿಗಳನ್ನು ಸರಳವಾಗಿ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಸರಿಯಾದ ಮಾಹಿತಿ ನೀಡುವುದು ಮುಖ್ಯ ಉದ್ದೇಶವಾಗಿದೆ.

About Author : ಲೇಖಕರು ಸರ್ಕಾರಿ ಉದ್ಯೋಗಗಳು, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಮತ್ತು ಶಿಕ್ಷಣ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅಭ್ಯರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡುವ ಉದ್ದೇಶದಿಂದ ಕಳೆದ 2 ವರ್ಷಗಳಿಂದ ಬ್ಲಾಗ್ ಬರೆಯುತ್ತಾರೆ.

Disclaimer : ಈ ಮಾಹಿತಿಗಳು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸುವುದು ಉತ್ತಮ. ನಿಖರತೆಗಾಗಿ ಅಧಿಕೃತ ಮೂಲಗಳನ್ನು ನೋಡಿ. ಈ ಲೇಖನವನ್ನು ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷೆಗಳ ಸಿಲಬಸ್, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮತ್ತು ಅಭ್ಯರ್ಥಿಗಳ ಅನುಭವಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment