Telegram Join Our Telegram WhatsApp Join Our WhatsApp

Central Bank Of India Recruitment 2026, Job Opportunity: ಬ್ಯಾಂಕಿಂಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

Central Bank Of India ಮೂಲಕ ಅಪ್ರೆಂಟಿಸ್‌ ಹುದ್ದೆಗಳ ಭರ್ತಿ

ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಯುವಕರಿಗೆ ಬೇರೆ ಕ್ಷೇತ್ರಗಳಿಗೆ ಹೋಲಿಸಿದಂತೆ ಅತ್ಯಂತ ಹೆಚ್ಚಿನ ಹಾಗೂ ಆಕರ್ಷಕ ಉದ್ಯೋಗಾವಕಾಶಗಳನ್ನು ಒದಗಿಸುತ್ತಾ ಬಂದಿದೆ. ಪ್ರತಿ ವರ್ಷವೂ ಸಹ ವಿವಿಧ ಪ್ರತಿಷ್ಠಿತ ಸಾರ್ವಜನಿಕ ವಲಯಗಳ ಬ್ಯಾಂಕಿನಲ್ಲಿ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕಟಣೆಗಳನ್ನು ಹೊರಡಿಸುತ್ತಿದ್ದು ಲಕ್ಷಾಂತರ ಅಭ್ಯರ್ಥಿಗಳು ಈ ಅವಕಾಶಗಳಿಗೆ ಕಾಯುತ್ತಿದ್ದಾರೆ. ಇದೀಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯು ದೇಶದ ವಿವಿಧ ಶಾಖೆಗಳಲ್ಲಿನ ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿ ಮೂಲಕ 4500 ಅಪ್ರೆಂಟಿಸ್‌ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಕಾರ್ಯವೈಕರಿ ಕಾರ್ಯ ವಿಧಾನ ಹಾಗೂ ಉತ್ತಮ ಅಭ್ಯಾಸಗಳನ್ನು ಕಲಿಯಲು ವೃತ್ತಿಪರ ಅನುಭವ ಪಡೆಯಲು ಹಾಗೂ ಭವಿಷ್ಯದಲ್ಲಿ ಬ್ಯಾಂಕಿಂಗ್ ವಲಯದ ಉದ್ಯೋಗಗಳಿಗೆ ಸಿದ್ದರಾಗಲು ಈ ನೇಮಕಾತಿಯು ಅತ್ಯುತ್ತಮ ಅವಕಾಶವಾಗಿದೆ

ಈ ನೇಮಕಾತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15000 ಸ್ಟೇ ಫಂಡ್ ಮೊತ್ತವನ್ನು ನೀಡಲಾಗುತ್ತದೆ ಇದರ ಜೊತೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವಿವಿಧ ಭಾಗಗಳಲ್ಲಿ ತರಬೇತಿ ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡಲಾಗಿದ್ದು ಇದರಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ.

Central Bank Of India ಬಗ್ಗೆ ಮಾಹಿತಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯು ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿದೆ. 1911 ರಲ್ಲಿ ಸ್ಥಾಪನೆಯಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಹಾಗೂ ವಿಶೇಷ ಸ್ಥಾನಮಾನವನ್ನು ಹೊಂದಿದೆ. ದೇಶದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಶಾಖೆಗಳು. ಎಟಿಎಂಗಳು ಹಾಗೂ ಗ್ರಾಮೀಣ ಜನರಿ ಗೆಂದು ಉಪಯೋಗವಾಗಲು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ ಇದರಿಂದ ಕೋಟ್ಯಂತರ ಗ್ರಾಹಕರನ್ನು ಈ ಬ್ಯಾಂಕ್ ಪಡೆದುಕೊಂಡಿದ್ದು ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆಗಳನ್ನು ಹೊಂದಿದೆ.

ಈ Central Bank Of India ನಲ್ಲಿ ಅಪ್ರೆಂಟಿಸ್ ಆಗಿ ಕಾರ್ಯ ನಿರ್ವಹಿಸುವುದರಿಂದ ಅಭ್ಯರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದ ವ್ಯವಸ್ಥೆ ಗ್ರಾಹಕರಿಗೆ ಒದಗಿಸಬೇಕಾದ ಸೇವೆ, ಸಾಲ ನೀಡುವ ಹಾಗೂ ಮರುಪಾವತಿ ಪಡೆಯುವ ಪ್ರಕ್ರಿಯೆ, ಠೇವಣಿಗಳ ನಿರ್ವಹಣೆ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗಳು ಹಾಗೂ ಉತ್ತಮ ರೀತಿ ಹಣಕಾಸು ನಿರ್ವಹಣೆಗಳ ಅಂಶಗಳ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳುವುದರ ಜೊತೆಯಲ್ಲಿ ಪ್ರಪಂಚದ ಜ್ಞಾನವನ್ನು ಸಹ ಪಡೆದುಕೊಳ್ಳುತ್ತಾರೆ.

ಅಪ್ರೆಂಟಿಸ್ ಹುದ್ದೆ ಎಂದರೆ ಏನು

ಹೆಚ್ಚಿನ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದಿರುವುದಿಲ್ಲ, ತರಬೇತಿ ಆಧಾರಿತ ಹುದ್ದೆಯಾಗಿದ್ದು ಒಂದು ನಿರ್ದಿಷ್ಟ ಸಮಯದ ಅವಧಿಗೆ ಬ್ಯಾಂಕ್ ನಲ್ಲಿ ತರಬೇತಿ ಪಡೆಯುವ ಪ್ರಕ್ರಿಯೆಯಾಗಿದೆ. ಇದರಿಂದ ಬ್ಯಾಂಕಿಂಗ್ ಕಾರ್ಯಗಳನ್ನು ಪ್ರಾಯೋಗಿಕವಾಗಿ ಹಾಗೂ ವಾಸ್ತವದಲ್ಲಿನ ಸಂದರ್ಭಗಳನ್ನು ಕುರಿತು ಕಲಿಯುತ್ತಾರೆ

ಅಪ್ರೆಂಟಿಸ್ ಹುದ್ದೆಗಳಲ್ಲಿ ಅಭ್ಯರ್ಥಿಗಳಿಗೆ ಈ ಕೆಳಕಂಡ ವಿಶೇಷ ಅನುಭವಗಳು ಸಿಗುತ್ತವೆ

  • ಬ್ಯಾಂಕಿಂಗ್ ಗ್ರಾಹಕರೊಂದಿಗೆ ವ್ಯವಹರಿಸುವ ವಿಧಾನ
  • ಖಾತೆಗಳನ್ನು ತೆರೆಯುವ ಪ್ರಕ್ರಿಯೆ
  • ಹಣವನ್ನು ಠೇವಣಿ ಇಡುವುದು ಹಾಗೂ ಠೇವಣಿ ಇಟ್ಟ ಹಣವನ್ನು ಹಿಂಪಡೆಯುವ ವ್ಯವಸ್ಥೆಯ ಕಲಿಕೆ
  • ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು
  • ಬ್ಯಾಂಕಿನಲ್ಲಿ ಸಿಗಬಹುದಾದ ವಿವಿಧ ರೀತಿಯ ಸಾಲಗಳ ಕುರಿತು ಮಾಹಿತಿ
  • ಬ್ಯಾಂಕಿನ ಹಾಗೂ ಗ್ರಾಹಕರಿಗೆ ಸಂಬಂಧಪಟ್ಟ ದಾಖಲೆಗಳ ನಿರ್ವಹಣೆ
  • ಬ್ಯಾಂಕಿಂಗ್ ಸಾಫ್ಟ್ವೇರ್ ನ ಪ್ರಾಯೋಗಿಕ ಬಳಕೆ

ಅಪ್ರೆಂಟಿಸ್ ಹುದ್ದೆಯನ್ನು ಸೇರುವುದರಿಂದ ಮುಂದಿನ ದಿನಗಳಲ್ಲಿ ಐ.ಬಿ.ಪಿ.ಎಸ್ ಎಸ್. ಬಿ. ಐ ಆರ್‌.ಬಿ.ಐ ಮುಂತಾದ ಪ್ರತಿಷ್ಠಿತ ಸಾರ್ವಜನಿಕ ಬ್ಯಾಂಕುಗಳಲ್ಲಿ ನೇಮಕಾತಿಗಳನ್ನು ಹೊಂದುವಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿದ್ದು ಈ ಪ್ರಾಯೋಗಿಕ ಅನುಭವಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ

ಶೈಕ್ಷಣಿಕ ಅರ್ಹತೆ

ಈ Central Bank Of India ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತಿ ಹಾಗೂ ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು

ಈ ಕೆಳಗಿನ ಪದವಿಯನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು

  • ಬಿ.ಎ (B.A)
  • ಬಿ.ಕಾಂ (B.Com)
  • ಬಿ.ಎಸ್ಸಿ (B.Sc)   
  • ಬಿ.ಬಿ.ಎ (B.B.A)   
  • ಬಿ.ಸಿ.ಎ (B.C.A)   
  • ಬಿ.ಇ / ಬಿ.ಟೆಕ್ (B.E/ B.Tech)   
  • ಎಂ.ಎ (M.A)   
  • ಎಂ.ಎಸ್.ಸಿ (M.Sc)   
  • ಎಂ.ಕಾಂ (M.Com)   
  • ಇತರೆ ಮಾನ್ಯತೆ ಪಡೆದ ಪದವಿಗಳು

ಪದವಿ ಶೈಕ್ಷಣಿಕ ಅರ್ಹತೆಯ ನಿರ್ಧಾರಗೊಂಡಿರುವುದರಿಂದ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಆದುದರಿಂದ ಇದು ಅತ್ಯುತ್ತಮ ಅವಕಾಶವಾಗಿದೆ

ವಯೋಮಿತಿ ವಿವರ

ಈ Central Bank Of India ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಈ ಕೆಳಕಂಡ ನಿಗದಿಪಡಿಸಿದ ವಯಾಮಿತಿಯನ್ನು ಹೊಂದಿರಬೇಕು

  • ಕನಿಷ್ಠ ವಯಸ್ಸು 20 ವರ್ಷಗಳು
  • ಗರಿಷ್ಠ ವಯಸ್ಸು 27 ವರ್ಷಗಳು

ವಯೋಮಿತಿ ಸಡಿಲಿಕೆ

ಸರ್ಕಾರದ ನಿಯಮಾನುಸಾರ ಮೀಸಲಾತಿ ಕಾಯ್ದೆಯ ಅಡಿಯಲ್ಲಿ ಸಾಮಾಜಿಕ ವರ್ಗಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ ಈ ಮಾಹಿತಿಯು ಕೆಳಕಂಡಂತಿದೆ

ವರ್ಗ ವಯೋಮಿತಿ ಸಡಿಲಿಕೆ
ಇತರೆ ಹಿಂದುಳಿದ ವರ್ಗಗಳು (OBC) 3 ವರ್ಷಗಳು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) 5 ವರ್ಷಗಳು
ಅಂಗವಿಕಲ PwBD (General- ಸಾಮಾನ್ಯ) 10 ವರ್ಷಗಳು
ಅಂಗವಿಕಲ PwBD (OBC- ಇತರೆ ಹಿಂದುಳಿದ ವರ್ಗಗಳು) 13 ವರ್ಷಗಳು
ಅಂಗವಿಕಲ PwBD (SC/ST- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) 15 ವರ್ಷಗಳು

 

ಆನ್ಲೈನ್ ಅರ್ಜಿ ಶುಲ್ಕ

ಅಭ್ಯರ್ಥಿಗಳು ತಮ್ಮ ವರ್ಗದ ಅನುಸಾರ ಆನ್ಲೈನ್‌ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಪಾವತಿಸಬೇಕಾದ ಶುಲ್ಕದ ಮಾಹಿತಿ ಈ ಕೆಳಕಂಡಂತಿದೆ

ವರ್ಗ ಪಾವತಿಸಬೇಕಾದ ಅರ್ಜಿ ಶುಲ್ಕ
 SC/ST/PwBD (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ) ಅಭ್ಯರ್ಥಿಗಳು ₹ 200/- ರೂಗಳು
General/EWS/OBC Male (ಸಾಮಾನ್ಯ, ಆರ್ಥಿಕ ಹಿಂದುಳಿದ, ಇತರೆ ಹಿಂದುಳಿದ ಪುರುಷ) ಅಭ್ಯರ್ಥಿಗಳು ₹ 800/- ರೂಗಳು
General/EWS/OBC Female (ಸಾಮಾನ್ಯ, ಆರ್ಥಿಕ ಹಿಂದುಳಿದ, ಇತರೆ ಹಿಂದುಳಿದ ಮಹಿಳೆ) ಅಭ್ಯರ್ಥಿಗಳು ₹ 600/- ರೂಗಳು
Transgender (ತೃತೀಯ ಲಿಂಗಿ)  ಅಭ್ಯರ್ಥಿಗಳು ₹ 600/- ರೂಗಳು

 

ಶುಲ್ಕ ಪಾವತಿ ವಿಧಾನ

ಆನ್ಲೈನ್ ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೂಲಕ ಮಾತ್ರವೇ ಪಾವತಿಸಬೇಕು ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಪಾವತಿ ಮಾಡಬಹುದಾಗಿರುತ್ತದೆ ಬೇರೆ ಯಾವುದೇ ಪಾವತಿ ವಿಧಾನಗಳನ್ನು ಅನುಸರಿಸಬೇಡಿ

Central Bank Of India ನೇಮಕಾತಿಯ ಆಯ್ಕೆ ಪ್ರಕ್ರಿಯೆ

ಈ Central Bank Of India ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳನ್ನು ವಿವಿಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ

ಆನ್ಲೈನ್ ಪರೀಕ್ಷೆ

ಮೊದಲ ಹಂತದಲ್ಲಿ ಅಭ್ಯರ್ಥಿಗಳು ಬ್ಯಾಂಕಿಂಗ್ ಸಂಸ್ಥೆ ನಡೆಸುವ ಆನ್ಲೈನ್ ಪರೀಕ್ಷೆ ಹಾಜರಾಗಬೇಕಾಗುತ್ತದೆ ಈ ಪರೀಕ್ಷೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಪ್ರಮುಖವಾಗಿ ಕೇಳಲಾಗುತ್ತದೆ

ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನದ ವಿಭಾಗದಲ್ಲಿ ಭಾರತ ದೇಶದ ಇತಿಹಾಸ, ಭೌಗೋಳಿಕ ಸನ್ನಿವೇಶಗಳು ಹಾಗೂ ಅಂಶಗಳು ಭಾರತದ ಸಂವಿಧಾನ ವೈಜ್ಞಾನಿಕ ಅಂಶಗಳು, ತಂತ್ರಜ್ಞಾನ, ಕ್ರೀಡೆ ಪ್ರಶಸ್ತಿಗಳ ಬಗ್ಗೆ ಪ್ರಶ್ನೆಗಳು, ಪ್ರಮುಖ ವ್ಯಕ್ತಿಗಳು ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿ, ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗುತ್ತದೆ ಆದುದರಿಂದ ಅಭ್ಯರ್ಥಿಗಳು ಪ್ರತಿದಿನವೂ ದಿನಪತ್ರಿಕೆ ಓದುವುದು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅಧ್ಯಯನ ಮಾಡುವುದು ಇದರಿಂದ ಪ್ರಮುಖ ವಿಷಯಗಳ ಬಗ್ಗೆ ತಿಳಿದುಕೊಂಡು ಸಾಮಾನ್ಯ ಜ್ಞಾನದ ವಿಭಾಗದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು

ಬ್ಯಾಂಕಿಂಗ್ ಜ್ಞಾನ

ಬ್ಯಾಂಕಿಂಗ್ ಜ್ಞಾನದ ವಿಭಾಗದಲ್ಲಿ ವಾಣಿಜ್ಯ ಹಾಗೂ ಇತರೆ ಬ್ಯಾಂಕುಗಳ ಕಾರ್ಯನಿರ್ವಹಣೆ, ಕಾರ್ಯವಿಧಾನ ಠೇವಣಿ ತೆರೆಯುವಿಕೆ ಮತ್ತು ಖಾತೆಗಳಿಗೆ ಸಂಬಂಧಿಸಿದ ಮಾಹಿತಿ ಸಾಲಗಳು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಬ್ಯಾಂಕಿನ ಪಾತ್ರದಲ್ಲಿ ಆರ್‌ಬಿಐ ಬ್ಯಾಂಕಿನ ಪಾತ್ರ ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ NEFT, RTGS,  UPI ಹಾಗೂ ಬ್ಯಾಂಕಿಗೆ ಸಂಬಂಧಿಸಿದಂತಹ ಪದಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇತ್ತೀಚಿನ ತ್ವರಿತ ಬೆಳವಣಿಗೆಯು, ಈ ಪ್ರಶ್ನೆಗಳು ಉದ್ಭವಾಗಲು ಪ್ರಮುಖ ಕಾರಣವಾಗಿದೆ ಆದುದರಿಂದ ಬ್ಯಾಂಕಿಂಗ್ ಕ್ಷೇತ್ರದ ಮೂಲಭೂತ ಅಂಶಗಳನ್ನು ಅರಿತುಕೊಳ್ಳಿ

ಕಂಪ್ಯೂಟರ್ ಜ್ಞಾನ

ಕಂಪ್ಯೂಟರ್ ಜ್ಞಾನದ ವಿಭಾಗದಲ್ಲಿ ಕಂಪ್ಯೂಟರ್ ನ ಮೂಲಭೂತ ಅಂಶಗಳಾದ ಹಾರ್ಡ್ವೇರ್ ಸ್ಥಿತಿಗತಿಗಳು, ಸಾಫ್ಟ್ವೇರ್ ಬಗ್ಗೆ ಮಾಹಿತಿ, ಆಪರೇಟಿಂಗ್ ಸಿಸ್ಟಮ್ ನಲ್ಲಿ ನಿರ್ವಹಿಸಬಹುದಾದ ಕಾರ್ಯಗಳು, ಮಾಹಿತಿ ನಿರ್ವಹಣೆ, ಹಾಗೂ ವಿಷಯ ರಚನೆಗಾಗಿ ಎಂ.ಎಸ್ ಆಫೀಸ್ ಆನ್ಲೈನ್ ಮೂಲಕ ಸೇವೆಗಳನ್ನು ತಲುಪಲು ಇಂಟರ್ನೆಟ್ ವ್ಯವಸ್ಥೆ ಅಧಿಕೃತ ಸಂವಹನ ಉದ್ದೇಶಕ್ಕಾಗಿ ಇ-ಮೇಲ್ ಮಾಡುವುದು ಬ್ಯಾಂಕಿಂಗ್ ಗ್ರಾಹಕರ ಮಾಹಿತಿ ಹಾಗೂ ಹಣಕ್ಕೆ ಸೈಬರ್ ಭದ್ರತೆಯನ್ನು ಒದಗಿಸುವುದು ಹಾಗೂ ಉತ್ತಮ ರೀತಿಯ ಡಿಜಿಟಲ್ ತಂತ್ರಜ್ಞಾನಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ದಿನನಿತ್ಯವೂ ಕಂಪ್ಯೂಟರ್ ವಿಭಾಗದಲ್ಲಿ ಉತ್ತಮ ಚಳುವಳಿಕೆಯನ್ನು ಹೊಂದಿ ಇದು ಉತ್ತಮ ಅಂಕಗಳನ್ನು ಗಳಿಸಲು ಸಹಕಾರಿಯಾಗುತ್ತದೆ ಪ್ರತಿಯೊಂದು ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕಂಪ್ಯೂಟರ್ ಜ್ಞಾನ ಹೊಂದುವುದು ಕಡ್ಡಾಯವಾಗಿದೆ ಏಕೆಂದರೆ ಬಹಳಷ್ಟು ಪ್ರಮಾಣದಲ್ಲಿ ಬ್ಯಾಂಕಿಂಗ್ ಕೆಲಸಗಳು ನಡೆಯುವುದು ಕಂಪ್ಯೂಟರ್ ಮೂಲಕವೇ ಆಗಿದೆ

ತಾರ್ಕಿಕ ಸಾಮರ್ಥ್ಯ ಪರೀಕ್ಷೆ

ತಾರ್ಕಿಕ ಸಾಮರ್ಥ್ಯ ವಿಭಾಗವು ಅಭ್ಯರ್ಥಿಯ ವಿಶ್ಲೇಷಣಾ ಸಾಮರ್ಥ್ಯ ಹಾಗೂ ಯೋಚನೆ ಮಾಡುವ ಕೌಶಲ್ಯವನ್ನು ಪರೀಕ್ಷಿಸುತ್ತದೆ ವ್ಯಕ್ತಿಗಳ ರಕ್ತ ಸಂಬಂಧಗಳು, ಭೌಗೋಳಿಕ ಅಂಶವನ್ನು ನಿರ್ಧರಿಸುವ ದಿಕ್ಕುಗಳು, ಸರಣಿಗಳನ್ನು ಪೂರ್ಣಗೊಳಿಸುವಿಕೆ, ನೀಡಿರುವ ಮಾಹಿತಿಯನ್ನು ಕೋಡಿಂಗ್ ಹಾಗೂ ಡೀಕೋಡಿಂಗ್ ಮಾಡುವುದು, ಫಜಲ್ ಗಳನ್ನು ಬಗೆಹರಿಸುವುದು, ತಾರ್ಕಿಕ ನಿರ್ಣಯಗಳನ್ನು ಕಡಿಮೆ ಸಮಯದಲ್ಲಿ ಉತ್ತಮ ರೀತಿಯಲ್ಲಿ ತೆಗೆದುಕೊಳ್ಳುವ ಬಗ್ಗೆ ಪ್ರಶ್ನೆಗಳು ಬರುತ್ತವೆ ಈ ವಿಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಏಕೆಂದರೆ ಧಾರ್ಮಿಕ ಸಾಮರ್ಥ್ಯವು ಬ್ಯಾಂಕಿಂಗ್ ಉದ್ಯಮಕ್ಕೆ ಪ್ರಮುಖವಾಗಿದೆ

ಸಂಖ್ಯಾತ್ಮಕ ಸಾಮರ್ಥ್ಯ

ಸಂಖ್ಯಾತ್ಮಕ ಸಾಮರ್ಥ್ಯ ವಿಭಾಗದಲ್ಲಿ ಶೇಕಡವಾರು ಅಂಶಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ಲಾಭ ಹಾಗೂ ನಷ್ಟದ ನಡುವಿನ ಸಂಬಂಧ, ಸರಳ ಬಡ್ಡಿ ಮತ್ತು ಚಕ್ರಬಡ್ಡಿ, ಮಾಹಿತಿಗಳ ಅನುಪಾತ, ಸರಾಸರಿ ಅಳಿಯುವಿಕೆ, ನಿಗದಿತ ಸಮಯದಲ್ಲಿ ಮತ್ತು ನಿಗದಿತ ಕೆಲಸವನ್ನು ನಿರ್ವಹಿಸಲು ಬೇಕಾದ ಮಾನವ ಸಾಮರ್ಥ್ಯ, ವೇಗ, ದೂರ, ಸಮಯ ನಡುವಿನ ಸಂದರ್ಭಾನು ಸಾರ ಪ್ರಶ್ನೆಗಳು, ಮಾಹಿತಿ ವಿಶ್ಲೇಷಣೆ ಹಾಗೂ ಗಣಿತ ವಿಷಯಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗುತ್ತದೆ ವೇಗವಾಗಿ ಮತ್ತು ನಿಖರತೆಯಿಂದ ಉತ್ತರ ನೀಡಿದರೆ ಈ ಹಂತದಲ್ಲಿ ಉತ್ತಮ ರೀತಿಯಲ್ಲಿ ಯಶಸ್ಸನ್ನು ಪಡೆಯಬಹುದು

Exam Pattern

ವಿಷಯಗಳು ಗರಿಷ್ಠ ಅಂಕಗಳು
Reasoning Section 25 ಅಂಕಗಳು
Quantitative Aptitude Section 25 ಅಂಕಗಳು
General Awareness Section 25 ಅಂಕಗಳು
Computer Knowledge Section 25 ಅಂಕಗಳು
ಒಟ್ಟು ಅಂಕಗಳು 100 ಅಂಕಗಳು

ದಾಖಲೆ ಪರಿಶೀಲನೆ

ಈ Central Bank Of India ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಂದ ಸಲ್ಲಿಕೆಯಾಗುವ ಪ್ರಮುಖ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ದಾಖಲೆ ಪರಿಶೀಲನೆ ಮಾಡಲಾಗುತ್ತದೆ ದಾಖಲೆಗಳ ನೈಜತೆ ಗುಣಮಟ್ಟ ಹಾಗೂ ಅವಧಿಯನ್ನು ಈ ಹಂತದಲ್ಲಿ ನಡೆಸಲಾಗುತ್ತದೆ ದಾಖಲೆ ಪರಿಶೀಲನೆಯಲ್ಲಿ ಕೇಳಲಾಗುವ ಎಲ್ಲ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ

ಸಂದರ್ಶನ

ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಇರಬೇಕಾದ ವ್ಯಕ್ತಿತ್ವ ಸಂವಹನ ಕೌಶಲ್ಯ, ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಇರುವ ಅರಿವು, ವಾಣಿಜ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತಹ ಪರಿಹಾರಗಳ ನೀಡುವಿಕೆ ಹಾಗೂ ಕಡಿಮೆ ಸಮಯದಲ್ಲಿ ಉತ್ತಮ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಪ್ರಶ್ನೆಗಳು ಇರುತ್ತವೆ

ಬ್ಯಾಂಕಿಂಗ್ ಸಂದರ್ಶನ ಸಲಹೆಗಳು 

  • ನಿಮ್ಮ  ಪರಿಚಯದ ಭಾಗವನ್ನು ಆತ್ಮವಿಶ್ವಾಸದಿಂದ ಸರಿಯಾಗಿ ಹೇಳಲು ಅಭ್ಯಾಸ ಮಾಡಿ
  • ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಮೂಲಭೂತ ಮಾಹಿತಿ ತಿಳಿದುಕೊಳ್ಳಿ
  • ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳನ್ನು ಓದಿ
  • ಸಂದರ್ಶನಕಾರರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರಿಸಿ
  • ಬ್ಯಾಂಕಿಂಗ್ ಪದಗಳಿಗೆ ಇರುವ ಸಂಪೂರ್ಣ ಅರ್ಥವನ್ನು ತಿಳಿದುಕೊಳ್ಳಿ

ಪರೀಕ್ಷೆ ತಯಾರಿ ಹೇಗಿರಬೇಕು

ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರುವವರು ಈ Central Bank Of India ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುವುದರಿಂದ ಹೆಚ್ಚು ಸ್ಪರ್ಧೆ ಏರ್ಪಡುತ್ತದೆ ಆದುದರಿಂದ ಸೂಕ್ತ ರೀತಿಯಲ್ಲಿ ತಯಾರಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ

ಪ್ರತಿದಿನ ದಿನಪತ್ರಿಕೆ ಓದಿ

ಬ್ಯಾಂಕಿಂಗ್ ಕ್ಷೇತ್ರದ ಹುದ್ದೆಗಳಿಗೆ ತಯಾರಿಯನ್ನು ನಡೆಸುವ ಅಭ್ಯರ್ಥಿಗಳು ಪ್ರತಿದಿನವೂ ತಪ್ಪದಂತೆ ದಿನಪತ್ರಿಕೆ ಓದು ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ವಿಶೇಷವಾಗಿ ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳು ಬ್ಯಾಂಕಿಂಗ್ ವಿಷಯಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸರ್ಕಾರಿ ಯೋಜನೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನ ಹರಿಸಬೇಕು ಇದರ ಜೊತೆಯಲ್ಲಿ ರೂಪಾಯಿ ಮೌಲ್ಯ ದೇಶದ ಆರ್ಥಿಕತೆಯಲ್ಲಿ ಇತರ ಆರ್ಥಿಕತೆಗಳ ಪಾತ್ರ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು ಇದು ಸಾಮಾನ್ಯ ಜ್ಞಾನ ಹಾಗೂ ಪ್ರಸ್ತುತ ಘಟನೆಗಳ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ

ಹಿಂದಿನ ವರ್ಷದ ಬ್ಯಾಂಕಿಂಗ್ ವಲಯದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಮಾದರಿಗಳು, ಬರಬಹುದಾದ ಪ್ರಶ್ನೆಗಳು ಹಾಗೂ ಅವುಗಳ ಕಠಿಣತೆಯ ಪ್ರಭಾವತೆ ಮತ್ತು ಪ್ರಮುಖ ವಿಷಯಗಳಲ್ಲಿ ಸ್ಪಷ್ಟವಾದ ಅರಿವು ಸಿಗುತ್ತದೆ ಇದರಿಂದ ಅಭ್ಯರ್ಥಿಗಳು ತಮಗೆ ಕಷ್ಟಕರವೆನಿಸುವ ಹಾಗೂ ಹೆಚ್ಚು ಅಂಕಗಳನ್ನು ಗಳಿಸುವ ವಿಷಯಗಳನ್ನು ಗುರುತಿಸಿ ಪರಿಣಾಮಕಾರಿ ರೀತಿಯಲ್ಲಿ ತಯಾರಿ ನಡೆಸಲು ಸಾಧ್ಯವಾಗುತ್ತದೆ

ಮಾಕ್ ಟೆಸ್ಟ್ ಬರೆಯಿರಿ

ಆನ್ಲೈನ್ ನಲ್ಲಿ ಲಭ್ಯವಿರುವ ಮಾಕ್ ಟೆಸ್ಟ್ ಗಳನ್ನು ಹೆಚ್ಚಾಗಿ ಬರೆಯುವುದರಿಂದ ಪರೀಕ್ಷಾ ವಾತಾವರಣದ ಅನುಭವ ಉತ್ತಮ ರೀತಿಯಲ್ಲಿ ಸಿಗುತ್ತದೆ ಸಮಯವನ್ನು ವ್ಯರ್ಥ ಮಾಡದೆ ಉತ್ತಮ ರೀತಿಯಲ್ಲಿ ಹೇಗೆ ನಿರ್ವಹಿಸಬೇಕು ಪ್ರಶ್ನೆಗಳನ್ನು ವೇಗವಾಗಿ ಹೇಗೆ ಪರಿಹರಿಸಬೇಕು ಮತ್ತು ಅದಕ್ಕೆ ಹೊಂದಬೇಕಾದ ಕೌಶಲ್ಯ ಹಾಗೂ ಆತ್ಮವಿಶ್ವಾಸ ಹೇಗಿರಬೇಕು ಎಂಬುದನ್ನು ದೃಢಪಡಿಸಿ ಹೆಚ್ಚಿಸುತ್ತದೆ ನಮ್ಮ ತಪ್ಪುಗಳನ್ನು ಸರಿಪಡಿಸುವುದಲ್ಲದೆ ವಿಶ್ಲೇಷಣೆ ಮೂಲಕ ಸರಿಪಡಿಸುವ ದಾರಿಗಳನ್ನು ಸಹ ನೀಡುತ್ತದೆ

ಪ್ರಚಲಿತ ಘಟನೆಗಳ ಮೇಲೆ ಹೆಚ್ಚಿನ ಗಮನವಿರಲಿ

ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಚಲಿತ ಘಟನೆಗಳು ಹೆಚ್ಚಾಗಿರುತ್ತವೆ ಹಾಗೂ ಮಹತ್ವವಾಗಿರುತ್ತದೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಬ್ಯಾಂಕಿಂಗ್ ಕ್ಷೇತ್ರದ ಯೋಜನೆಗಳು‌, ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಬ್ಯಾಂಕಿಂಗ್ ನೀತಿಗಳು, ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆಗಳು, ಆರ್ಥಿಕ ವರದಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಿ ಅರಿತುಕೊಳ್ಳಬೇಕಾಗುತ್ತದೆ ನಮ್ಮ ದೇಶದ ಕರೆನ್ಸಿಯು ಬೇರೆ ದೇಶದ ಕರೆನ್ಸಿಯ ಮುಂದೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಸಹ ತಿಳಿದುಕೊಳ್ಳಬೇಕಾಗುತ್ತದೆ ಇದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಸುಲಭವಾಗಿ ಪಡೆಯಲು ನೆರವಾಗುತ್ತದೆ

ಅಗತ್ಯ ದಾಖಲೆಗಳ ಪಟ್ಟಿ

Central Bank Of India‌ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು ಈ ಕೆಳಕಂಡ ಪ್ರಮುಖ ದಾಖಲಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು ಹಾಗೂ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು

  • ಪ್ರಮಾಣಿತ ಗುರುತಿನ ಚೀಟಿ ಅಂದರೆ ಆಧಾರ್ ಕಾರ್ಡ್
  • ಎಸ್ ಎಸ್ ಎಲ್ ಸಿ ಪಿಯುಸಿ ಹಾಗೂ ಪದವಿ ಅಂಕಪಟ್ಟಿಗಳು
  • ಪದವಿ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಪ್ರಮಾಣ ಪತ್ರ ಯುಡಿಐಡಿ ಕಾರ್ಡ್
  • ಇತ್ತೀಚಿನ ದಿನಗಳ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  • ಅಭ್ಯರ್ಥಿಯ ಸಹಿ
  • ಮೊಬೈಲ್ ನಂಬರ್
  • ಇಮೇಲ್ ಐಡಿ

 

ಅರ್ಜಿ ಸಲ್ಲಿಸುವಿಕೆ ವಿಧಾನ

ಈ Central Bank Of India ನೇಮಕಾತಿಗೆ ಅರ್ಜಿ ಸಲ್ಲಿಸುವ ಮುನ್ನ ಪ್ರಕಟಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತಮಾನದಂಡಗಳನ್ನು ಪೂರೈಸುವಂತಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ

  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
  • ಹೊಸ ಬಳಕೆದಾರರಾಗಿದ್ದರೆ ಅಥವಾ ಇದೇ ಮೊದಲು ಅರ್ಜಿ ಸಲ್ಲಿಸುತ್ತಿದ್ದರೆ ತಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ
  • ನೋಂದಣಿ ಮಾಡಿಕೊಂಡ ನಂತರ ನಿಮಗೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ರಚಿಸಲು ಕೇಳಲಾಗುತ್ತದೆ ನಿಮ್ಮ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ಸುರಕ್ಷಿತ ರೀತಿಯಲ್ಲಿ ರಚಿಸಿ
  • ಖಾತೆಯನ್ನು ತೆರೆದ ನಂತರ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅಂಶಗಳನ್ನು ನಮೂದು ಮಾಡಿ ಲಾಗಿನ್ ಆಗಿ
  • ಲಾಗಿನ್ ಆದ ನಂತರ ಅಪ್ರೆಂಟಿಸ್ ರೆಕ್ರೂಟ್ಮೆಂಟ್ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • ನೇಮಕಾತಿ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿ ನಮೂನೆಯು ತೆರೆಯುತ್ತದೆ ಅಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ಮೀಸಲಾತಿ ಮಾಹಿತಿ ಹಾಗೂ ಸಂವಹನಕ್ಕೆ ಸಂಬಂಧಿಸಿದ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಮಾಹಿತಿಗಳನ್ನು ಎಚ್ಚರಿಕೆಯಿಂದ ನಿಗದಿತ ಸ್ಥಳಗಳಲ್ಲಿ ಭರ್ತಿ ಮಾಡಿ
  • ಆನ್ಲೈನ್ ಅರ್ಜಿಯಲ್ಲಿ ಕೇಳಲಾಗುವ ದಾಖಲೆಗಳನ್ನು ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ವರ್ಗಕ್ಕೆ ನಿಗದಿಪಡಿಸಿರುವಂತಹ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ
  • ಎಲ್ಲ ಮಾಹಿತಿಯನ್ನು ನಮೂದಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿ ಶುಲ್ಕ ಪಾವತಿಸಿ ಎಲ್ಲ ಮಾಹಿತಿಯನ್ನು ಪರಿಶೀಲಿಸಲು ಪ್ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ
  • ಎಲ್ಲ ಮಾಹಿತಿಯನ್ನು ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಒತ್ತುವುದರ ಮೂಲಕ ಈ ಅಪ್ರತಿ ಸುದ್ದಿಗಳಿಗೆ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು
  • ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟ್ ಔಟ್ ಅನ್ನು ಡೌನ್ಲೋಡ್ ಮಾಡಿಟ್ಟುಕೊಂಡು ಭವಿಷ್ಯದ ಉದ್ದೇಶಕ್ಕಾಗಿ ಒಂದು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ

ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು

  • ತಪ್ಪಾದ ಮೊಬೈಲ್ ಸಂಖ್ಯೆ‌ ಮತ್ತು ಇ ಮೇಲ್‌ ಐಡಿ ಯನ್ನು ನಮೂದಿಸುವುದು
  • ಫೋಟೋ ಮತ್ತು ಸಹಿಯನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್ ಮಾಡದಿರುವುದು ಮತ್ತು ಸ್ಪಷ್ಟವಾಗಿ ಇಲ್ಲದಿರುವುದು
  • ತಪ್ಪಾದ ಮಾಹಿತಿಯನ್ನು ನಮೂದಿಸುವುದು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯುವುದು ಮತ್ತು ನಿರ್ಲಕ್ಷಿಸುವುದು
  • ದಾಖಲೆಗಳನ್ನು ಪರಿಶೀಲಿಸದೇ ಅರ್ಜಿ ಸಲ್ಲಿಸುವುದು ಅಥವಾ ಅರ್ಜಿಯನ್ನು ಪೂರ್ಣಗೊಳಿಸದೇ ಇರುವುದು

ಈ ನೇಮಕಾತಿಯ ಪ್ರಮುಖ ಪ್ರಯೋಜನಗಳು

ನೈಜ ಕಾರ್ಯ ವೈಖರಿ ಅನುಭವ

Central Bank Of India ದ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗುವುದರಿಂದ ಬ್ಯಾಂಕಿನ ನೈಜ ಕಾರ್ಯವೈಖರಿಯನ್ನು ಕಲಿಯಬಹುದು ಹಾಗೂ ಪ್ರಾಯೋಗಿಕ ವಿಧಾನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಾಚರಣೆಗಳನ್ನು ಅರಿತುಕೊಳ್ಳ ಬಹುದು ಇದರಿಂದ ಸೈದ್ಧಾಂತಿಕ ವಿಷಯಗಳಿಗಿಂತ ಪ್ರಾಯೋಗಿಕ ಬ್ಯಾಂಕಿಂಗ್ ಅನುಭವವು ಹೆಚ್ಚಿನ ಅನುಭವವನ್ನು ನೀಡುತ್ತದೆ

ಮಾಸಿಕ ಸ್ಟೇ ಫಂಡ್

ಈ Central Bank Of India ನೇಮಕಾತಿ ಮೂಲಕ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 15,000/- ರೂಗಳನ್ನು ನೀಡಲಾಗುತ್ತದೆ ಇದರಿಂದ ಅಭ್ಯರ್ಥಿಗಳು ದೈನಂದಿನ ಖರ್ಚುಗಳನ್ನು ನಿಭಾಯಿಸಿಕೊಳ್ಳಬಹುದು

ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳು

ಈ ಬ್ಯಾಂಕಿಂಗ್ ಕ್ಷೇತ್ರದ ಅಪ್ರೆಂಟಿಸ್ ಅವಧಿಯನ್ನು ಪೂರ್ಣಗೊಳಿಸಿದ ನಂತರ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಅಪ್ರೆಂಟಿಸ್ ಹುದ್ದೆಗಳಲ್ಲಿನ ಅನುಭವವು ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶವನ್ನು ತೆರೆಯುವುದರ ಜೊತೆಯಲ್ಲಿ ಉತ್ತಮ ಹಾಗೂ ಆಕರ್ಷಕ ಸಂಬಳವನ್ನು ನೀಡುವಂತಹ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ

ಕೌಶಲ್ಯ ಅಭಿವೃದ್ಧಿ

ಸಂವಹನ ಕೌಶಲ್ಯಗಳು ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಹಾಗೂ ಗ್ರಾಹಕರಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವಲ್ಲಿ ಹೊಂದಬೇಕಾದ ಉತ್ತಮ ರೀತಿಯ ಕೌಶಲ್ಯಗಳನ್ನು ಇಲ್ಲಿ ಕಲಿಯಬಹುದು ಈ ಅಪ್ರೆಂಟಿಸ್ ಹುದ್ದೆಗಳಲ್ಲಿ ಈ ಎಲ್ಲಾ ರೀತಿಯ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ

ವೃತ್ತಿಪರ ಬೆಳವಣಿಗೆ

ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅಪ್ರೆಂಟಿಸ್ ಹುದ್ದೆಗಳು ವೃತ್ತಿಜೀವನವನ್ನು ನಿರ್ಮಿಸಲು ಉತ್ತಮ ಅಡಿಪಾಯವಾಗಿದೆ ಅಂದರೆ ಪ್ರಥಮ ಪ್ರಯತ್ನದಲ್ಲಿಯೇ ಬ್ಯಾಂಕಿಂಗ್ ಉದ್ಯೋಗಿಗಳಾದರೆ ಪ್ರಾಥಮಿಕ ಹಂತಗಳಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದರೆ ಅವಧಿಯನ್ನು ಮುಗಿಸುವುದರಿಂದ ಉದ್ಯೋಗವನ್ನು ಒಂದುವ ಮುಂಚೆಯೇ ಪ್ರಾಯೋಗಿಕ ಹಾಗೂ ಪ್ರಾಥಮಿಕ ಜ್ಞಾನವು ಬರುವುದರಿಂದ ಯಾವುದೇ ಭಯವಿಲ್ಲದೆ ಉದ್ಯೋಗವನ್ನು ಹೊಂದಬಹುದಾಗಿರುತ್ತದೆ

Central Bank Of India ನೇಮಕಾತಿಗೆ ಪ್ರಮುಖವಾಗಿ ಯಾರು ಅರ್ಜಿ ಸಲ್ಲಿಸಬೇಕು

  • ಇತ್ತೀಚೆಗೆ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ
  • ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹೊಂದಲು ಆಕಾಂಕ್ಷಿಗಳಾಗಿರುವವರು
  • ಸರ್ಕಾರಿ ಬ್ಯಾಂಕ್ ನಲ್ಲಿ ಉದ್ಯೋಗವನ್ನು ಪಡೆಯಬೇಕೆಂದು ತಯಾರಿಯನ್ನು ನಡೆಸುತ್ತಿರುವವರು
  • ಉದ್ಯೋಗಕ್ಕೆ ಸಂಬಂಧಿಸಿದ ಪ್ರಾಥಮಿಕ ಅನುಭವವನ್ನು ಪಡೆಯಲು ಬಯಸುವ ಆಕಾಂಕ್ಷಿಗಳು
  • ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಿ

Central Bank Of India Apprentice vs Bank Clerk vs PO ಹೋಲಿಕೆ ವಿಭಾಗ

ಅಂಶಗಳು ಅಪ್ರೆಂಟಿಸ್ ಕ್ಲರ್ಕ್ ಪ್ರೊಬೇಷನರಿ ಆಫೀಸರ್
‌ಸಿಗುವ ಸಂಬಳ ₹15,000/- ರೂಗಳು ₹35,000 ಕ್ಕೂ ಹೆಚ್ಚು (ಭತ್ಯೆಗಳೂ ಸೇರಿ) ₹55,000 ಕ್ಕೂ ಹೆಚ್ಚು (ಭತ್ಯೆಗಳೂ ಸೇರಿ)
ಪಡೆಯುವ ಅನುಭವದ ಮಟ್ಟ  ಸಾಮಾನ್ಯ ಅನುಭವ ಸೀಮಿತ ಅನುಭವ ಹೆಚ್ಚು ಅನುಭವ
ಸ್ಥಿರ ಉದ್ಯೋಗವೇ ಇಲ್ಲ, ತಾತ್ಕಾಲಿಕ ಉದ್ಯೋಗ ಹೌದು ಸ್ಥಿರ ಉದ್ಯೋಗ ಹೌದು ಸ್ಥಿರ ಉದ್ಯೋಗ

ಅಪ್ರೆಂಟಿಸ್ ನಂತರ ಯಾವ ಉದ್ಯೋಗಗಳು ಸಿಗಬಹುದು?

  • SBI ಕ್ಲರ್ಕ್
  • IBPS ಕ್ಲರ್ಕ್
  • IBPS ಪ್ರೊಬೇಷನರಿ ಆಫೀಸರ್
  • SBI ಪ್ರೊಬೇಷನರಿ ಆಫೀಸರ್

Central Bank Of India ಅಪ್ರೆಂಟಿಸ್ ಏಕೆ ಆಯ್ಕೆ ಮಾಡಬೇಕು? 

  • ದೇಶದಾದ್ಯಂತ ಬ್ಯಾಂಕ್ ನೆಟ್ವರ್ಕ್ ಹೊಂದಿದೆ
  • ಉತ್ತಮ ತರಬೇತಿಯನ್ನು ನೀಡಲಾಗುತ್ತದೆ
  • ಪ್ರಾಯೋಗಿಕ ಅನುಭವವನ್ನು ಪಡೆದುಕೊಳ್ಳಬಹುದು
  • ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಸಹಕಾರಿ
  • ಬ್ಯಾಂಕಿಂಗ್ ವಲಯದ ಉತ್ತಮ ಪರಿಚಯವಾಗುತ್ತದೆ

ಅಪ್ರೆಂಟಿಸ್ ಅವಧಿಯಲ್ಲಿ ಕಲಿಯುವ ಪ್ರಮುಖ ಕೌಶಲ್ಯಗಳು 

  • ಗ್ರಾಹಕರಿಗೆ ಸೇವಾ ಕೌಶಲ್ಯಗಳನ್ನು ಒದಗಿಸುವುದು
  • ಬ್ಯಾಂಕಿಂಗ್ ಸಾಫ್ಟ್‌ವೇರ್ ಅನ್ನು ನಿರ್ವಹಣೆ ಮಾಡುವುದು
  • ಆರ್ಥಿಕ ಸಾಕ್ಷರತೆಯನ್ನು ಕಾಯ್ದುಕೊಳ್ಳುವುದು
  • ನಗದು ನಿರ್ವಹಣೆಯ ಬಗ್ಗೆ ಕಲಿಕೆ ಮತ್ತು ಜಾಗೃತಿ
  • ಗ್ರಾಹಕ ಸ್ನೇಹಿ ಸಂವಹನ ಕೌಶಲ್ಯಗಳು
  • ಪರಿಣಾಮಕಾರಿಯಾಗಿ ಸಮಸ್ಯೆ ಪರಿಹರಿಸುವ ಕೌಶಲ್ಯ

Central Bank Of India Recruitment: FAQ’s

1. ಈ Central Bank Of India ನೇಮಕಾತಿ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆ ಹೊಂದಿರಬೇಕು?
ಯಾವುದೇ ಮಾನ್ಯತೆ ಪಡೆದ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

2. ಸ್ಟೇ ಫಂಡ್‌ ಎಷ್ಟು ಸಿಗುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000/- ರೂಗಳ ಸ್ಟೇ ಫಂಡ್‌ ಅನ್ನು ನೀಡಲಾಗುತ್ತದೆ.

3. ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆ?
ಹೌದು, ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

4. ಅರ್ಜಿ ಶುಲ್ಕವನ್ನು ಹೇಗೆ ಪಾವತಿಸಬೇಕು?
ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೂಲಕ ಮಾತ್ರ ಪಾವತಿಸಿ ಇಲ್ಲವಾದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಎದುರಾಗಬಹುದು.

5. ಅಪ್ರೆಂಟಿಸ್ ಹುದ್ದೆಯ ಅನುಭವ ಭವಿಷ್ಯದಲ್ಲಿ ಉದ್ಯೋಗಗಳನ್ನು ಪಡೆಯಲು ಸಹಕಾರಿಯೇ?
ಹೌದು, ಬ್ಯಾಂಕಿಂಗ್ ಕ್ಷೇತ್ರದ ಪ್ರಾಯೋಗಿಕ ಅನುಭವ ಮುಂದಿನ ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಗಳಿಗೆ ಸಹಕರಿಸುತ್ತದೆ ಮತ್ತು ಆದ್ಯತೆಯನ್ನು ನೀಡುವಂತೆ ಮಾಡುತ್ತದೆ.

6. ನಾನು ಈಗ ಅಂತಿಮ ವರ್ಷದ ಪದವಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ, ನಾನು Central Bank Of India ನೇಮಕಾತಿಗೆ ಅರ್ಜಿ ಸಲ್ಲಿಸಬಹುದೇ?

ಇಲ್ಲ, ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳುವ ಮೊದಲೇ ನಿಗಧಿತ ವಿದ್ಯಾರ್ಹತೆಯನ್ನು ಹೊಂದಿರಬೇಕು.

7. Central Bank Of India ಅಪ್ರೆಂಟಿಸ್ ತರಬೇತಿ ಅವಧಿ ಎಷ್ಟು?

ಒಂದು ವರ್ಷದ ಅಪ್ರೆಂಟಿಸ್‌ ತರಬೇತಿ ಇರುತ್ತದೆ.

8. NATS ನೋಂದಣಿ ಕಡ್ಡಾಯವೇ?

ಹೌದು, NATS ಪೋರ್ಟಲ್‌ ನಲ್ಲಿ ನೊಂದಾಯಿಸಿಕೊಂಡ ನಂತರವೇ‌ Central Bank Of India ನೇಮಕಾತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

9. ಅನುಭವ ಪ್ರಮಾಣ ಪತ್ರ ಸಿಗುತ್ತದೆಯೇ?

ಹೌದು, Central Bank Of India ಅಪ್ರೆಂಟಿಸ್‌ ಅವಧಿ ಮುಗಿದ ನಂತರ ಸಂಬಂಧಪಟ್ಟ ಪ್ರಮಾಣಪತ್ರಗಳು ದೊರೆಯುತ್ತವೆ.

10. ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೇ?

ಹೌದು, ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು.

Central Bank Of India Recruitment ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿಕೆಗೆ ಆರಂಭದ ದಿನಾಂಕ : 12-06-2026

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆ ದಿನಾಂಕ : 22-06-2026

ಅರ್ಜಿಯನ್ನು ಸಲ್ಲಿಸಿದ ನಂತರ ಏನು ಮಾಡಬೇಕು?

  • ಅಪ್ಲಿಕೇಶನ್ ಸಲ್ಲಿಸಿದ ನಂತರ ಬರುವ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
  • ಇಮೇಲ್ ಮತ್ತು SMS ಗಳನ್ನು ಆಗಿಂದಾಗ್ಗೆ ಪರಿಶೀಲಿಸಿ
  • ಉತ್ತಮ ರೀತಿಯಲ್ಲಿ ಪರೀಕ್ಷಾ ತಯಾರಿಯನ್ನು ಆರಂಭಿಸಿ
  • ಪ್ರವೇಶ ಪತ್ರ ಬಿಡುಗಡೆಯ ಬಗ್ಗೆ ಅಧಿಕೃತ ವೆಬ್‌ ಸೈಟನ್ನು ಗಮನಿಸುತ್ತಿರಿ

30 ದಿನಗಳ ಪರೀಕ್ಷಾ ತಯಾರಿ ವೇಳಾಪಟ್ಟಿ

ಮೊದಲ ವಾರ : Banking Basics ಬಗ್ಗೆ ತಿಳಿದುಕೊಳ್ಳಿ
ಎರಡನೇ ವಾರ : Reasoning ಅನ್ನು ಅಭ್ಯಾಸ ಮಾಡಿ
ಮೂರನೇ ವಾರ : Quantitative Aptitude ಬಗ್ಗೆ ಪ್ರಾಯೋಗಿಕ ಅಭ್ಯಾಸ ನೆಡೆಸಿ
ನಾಲ್ಕನೇ ವಾರ : Mock Tests ಗಳನ್ನು ಬರೆಯಿರಿ

Central Bank Of India Recruitment ಪ್ರಮುಖ ಲಿಂಕುಗಳು

ಅಧಿಕೃತ ವೆಬ್ಸೈಟ್ Central Bank Of India Recruitment
ಅಧಿಕೃತ ಅಧಿಸೂಚನೆಯ ಪಿಡಿಎಫ್ Central Bank Of India Recruitment Notification
NATS ನೋಂದಣಿ ನೋಂದಣಿ
BSFI ಪೋರ್ಟಲ್‌ ನೋಂದಣಿ ನೋಂದಣಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ ಪರೀಕ್ಷಾ ಸಲಹೆ ವೃತ್ತಿ ಮಾರ್ಗದರ್ಶನ ಸರ್ಕಾರಿ ಯೋಜನೆಗಳು

 

ಕೊನೆಯ ಮಾತು

Central Bank Of India ನೇಮಕಾತಿಯು 2026ನೇ ಆರ್ಥಿಕ ವರ್ಷದಲ್ಲಿ ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಆರಂಭಿಸಲು ಅತ್ಯುತ್ತಮ ಅವಕಾಶವನ್ನು ತಂದಿದೆ ಈ ನೇಮಕಾತಿ ಮೂಲಕ 4,500 ಹುದ್ದೆಗಳ ಬೃಹತ್ ನೇಮಕಾತಿಯನ್ನು ದೇಶದಾದ್ಯಂತ ನಡೆಸುತ್ತಿದ್ದು ಸಾವಿರಾರು ಯುವಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ನೇಮಕಾತಿ ಸೂಚನೆಯನ್ನು ಹೊರಡಿಸಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹಾಗೂ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದರಿಂದ ಈ ಉದ್ಯೋಗಗಳನ್ನು ಪಡೆಯಬಹುದು

 

ಲೇಖಕರ ಕುರಿತು: ರಂಗನಾಥ ಬಿ.ಜಿ. ಅವರು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದು, ಕಳೆದ ಎರಡು ವರ್ಷಗಳಿಂದ ಸರ್ಕಾರಿ ಉದ್ಯೋಗ, ಪರೀಕ್ಷಾ ಸಲಹೆ, ವೃತ್ತಿ ಮಾರ್ಗದರ್ಶನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.

ಲೇಖಕರ ಟಿಪ್ಪಣಿ: ಈ ಲೇಖನವನ್ನು ಓದುಗರಿಗೆ ನಿಖರ, ವಿಶ್ವಾಸಾರ್ಹ ಮತ್ತು ಇತ್ತೀಚಿನ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಅಧಿಕೃತ ಮೂಲಗಳನ್ನು ಪರಿಶೀಲಿಸಿ ಮಾಹಿತಿಯನ್ನು ಹಂಚಲಾಗಿದೆ.

ಹಕ್ಕುತ್ಯಾಗ ಸೂಚನೆ: ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಥವಾ ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಿತ ಅಧಿಕೃತ ವೆಬ್‌ಸೈಟ್‌ನ ಮಾಹಿತಿಯನ್ನು ಪರಿಶೀಲಿಸಿ.

 

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment