Telegram Join Our Telegram WhatsApp Join Our WhatsApp

Jindal Scholarship 2026, Best Opportunity: ನಿಮಗೆ ಪ್ರತಿ ತಿಂಗಳು ಸಿಗುತ್ತದೆ 3600 ರೂಗಳ ವಿದ್ಯಾರ್ಥಿವೇತನ, ಇಂದೇ ಅರ್ಜಿ ಸಲ್ಲಿಸಿ

Jindal Scholarship ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ

ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಪ್ರಮುಖ ಸಾಧನವಾಗಿದೆ. ಆದರೆ ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣದ ವೆಚ್ಚಗಳು ಹೆಚ್ಚುತ್ತಿರುವುದರಿಂದ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಸವಾಲಾಗಿದೆ. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ, ಪಠ್ಯಪುಸ್ತಕಗಳ ಖರೀದಿ ಹಾಗೂ ಇತರ ಶೈಕ್ಷಣಿಕ ಖರ್ಚುಗಳು ಕುಟುಂಬಗಳ ಮೇಲೆ ಹೆಚ್ಚಿನ ಆರ್ಥಿಕ ಭಾರವನ್ನು ಉಂಟುಮಾಡುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿದ್ದಾರೆ. ಈ ವಿದ್ಯಾರ್ಥಿವೇತನದಿಂದ ಹಿಂದುಳಿದ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸೀತಾರಾಂ ಜಿಂದಾಲ್ ಫೌಂಡೇಶನ್‌ನಿಂದ ಭಾರಿ ನೆರವು ಸಿಗಲಿದೆ.

ಈ ಹಿನ್ನೆಲೆಯಲ್ಲಿ, Sitaram Jindal Foundation Scholarship ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದೆ. 2026–27ನೇ ಸಾಲಿನ ವಿದ್ಯಾರ್ಥಿವೇತನ ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ಆರ್ಥಿಕ ಸಹಾಯವು ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಕನಸನ್ನು ನನಸಾಗಿಸಲು ನೆರವಾಗಲಿದೆ. ಅರ್ಹ ವಿದ್ಯಾರ್ಥಿಗಳು ನಿಗದಿತ ಅರ್ಜಿ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.

ಸೀತಾರಾಮ್ ಜಿಂದಾಲ್ ಫೌಂಡೇಶನ್ ಕುರಿತು

Sitaram Jindal Foundation ಭಾರತದ ಪ್ರಮುಖ ಹಾಗೂ ಪ್ರತಿಷ್ಠಿತ ದತ್ತಿ ಸಂಸ್ಥೆಗಳಲ್ಲಿ ಒಂದಾಗಿದೆ. ಶಿಕ್ಷಣ ಕ್ಷೇತ್ರ, ಆರೋಗ್ಯ ವಲಯ, ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಸಾಮಾಜಿಕ ಕಲ್ಯಾಣವನ್ನು ಉಂಟುಮಾಡುವ ಕ್ಷೇತ್ರಗಳಲ್ಲಿ ಮಹತ್ವದ ಸೇವೆಗಳನ್ನು ಸಲ್ಲಿಸುತ್ತಿದೆ, ಪ್ರತಿಯಾಗಿ ಸಾಧನೆಗಳನ್ನು ಸಾಧಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಜನರ ಜೀವನ ಮಟ್ಟವನ್ನು ಹಾಗೂ ಅವರು ಶಿಕ್ಷಣವನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುವ ಹಾಗೂ ಸುಧಾರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ

ಸಂಸ್ಥೆಯ ಸ್ಥಾಪನೆಯ ಉದ್ದೇಶ

ದೇಶದ ಸಮಾಜದ ದುರ್ಬಲ ವರ್ಗಗಳ ಜನರ ಶಿಕ್ಷಣ ಪಡೆಯುವ ಗುರಿ, ಆರೋಗ್ಯ ಮಟ್ಟ ಸುಧಾರಣೆ ಹಾಗೂ ಸ್ವಾವಲಂಬನೆಯವ ಜೀವನಾಧಾರಿತ ಅವಕಾಶಗಳನ್ನು ಒದಗಿಸಿ ಅವರ ಸಮಗ್ರ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಸೀತಾರಾಮ್‌ ಜಿಂದಾಲ್ ಫೌಂಡೇಶನ್‌ ಅನ್ನು ಸ್ಥಾಪಿಸಲಾಯಿತು.

ಈ ಫೌಡೇಶನ್‌ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಹಾಗೂ ನೀಡುತ್ತಿರುವ ಕೊಡುಗೆ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ Scholarship ನೀಡುವುದು, ಶಾಲೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸುವುದು, ಶೈಕ್ಷಣಿಕ ವರ್ಷದ ಪುಸ್ತಕಗಳು ಹಾಗೂ ಶಿಕ್ಷಣಕ್ಕೆ ನೆರವುಗಳನ್ನು ನೀಡುವ ಮೂಲಕ ಶಿಕ್ಷಣದ ಪ್ರಗತಿಯನ್ನು ಸಾಧಿಸುವಲ್ಲಿ ಕೊಡುಗೆಯನ್ನು ಸಮಗ್ರವಾಗಿ ನೀಡುತ್ತಿದೆ.

ಸಾಮಾಜಿಕ ಸೇವೆಗಳ ವಿವರ

ಆರ್ಥಿಕವಾಗಿ ಹಿಂದುಳಿದಿರುವ ಬಡವರು, ವಯಸ್ಸಾಗಿರುವ ವೃದ್ಧರು, ದೇಹದ ಭಾಗಗಳಲ್ಲಿ ಅಂಗವಿಕಲತೆಯನ್ನು ಹೊಂದಿರುವ ವಿಶೇಷ ಚೇತನ ವ್ಯಕ್ತಿಗಳು ಹಾಗೂ ಸಮಾಜದಲ್ಲಿರುವ ನಿರ್ಗತಿಕರಿಗೆ ವಿವಿಧ ಕಲ್ಯಾಣ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿ ಸಾಧಿಸುವ ಗುರಿಯನ್ನು ಹೊಂದಿ ಸಮಾಜ ಸೇವೆಯಲ್ಲಿ ತೊಡಗಿದೆ.

ಆರೋಗ್ಯ ಕ್ಷೇತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಲಯದಲ್ಲಿ ಕಾರ್ಯಕ್ರಮಗಳು

ಉಚಿತ ವೈದ್ಯಕೀಯ ಶಿಬಿರಗಳ ಆಯೋಜನೆ ಮತ್ತು ಅವಶ್ಯಕವಿರುವ ವೈದ್ಯಕೀಯ ಉಪಕರಣಗಳನ್ನು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನೆಡೆಸಿ ಅರಿವನ್ನು ಮೂಡಿಸುವುದು , ಕುಡಿಯುವ ನೀರಿನ ಸರಬರಾಜು ಮಾಡುವುದು, ಸ್ವಚ್ಛತೆ ಕಾಪಾಡುವಿಕೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಉತ್ತೇಜನಕ್ಕೆ ಬೆಂಬಲವನ್ನು ನೀಡುತ್ತಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ನೀಡಿರುವ ನೆರವು

ಸೀತಾರಾಮ್‌ ಜಿಂದಾಲ್ ಫೌಂಡೇಶನ್ ದೇಶದಾದ್ಯಂತ ಸಾವಿರಾರು‌ ಪ್ರತಿಬಾವಂತ ವಿದ್ಯಾರ್ಥಿಗಳಿಗೆ Scholarship ಸೌಲಭ್ಯವನ್ನು ನೀಡುವ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆಗಳು ತೊಡಕಾಗದಂತೆ ಮತ್ತು ವೃತ್ತಿಜೀವನದ ಕನಸುಗಳನ್ನು ಆದಷ್ಟು ಬೇಗ ಪರಿಣಾಮಕಾರಿಯಾಗಿ ಸಾಕಾರಗೊಳಿಸಲು ನೆರವಾಗಿದೆ ಹಾಗೂ ಇಂದೂ ಸಹ ನೆರವಾಗುತ್ತಿದೆ

Sitaram Jindal Foundation ದೇಶದ ಪ್ರಮುಖ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಹಲವು ವರ್ಷಗಳಿಂದ ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ, ಆರ್ಥಿಕ ಸಮಸ್ಯೆಗಳ ಕಾರಣದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಜಿಂದಾಲ್ ವಿದ್ಯಾರ್ಥಿವೇತನ (Scholarship) ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಿ ಅವರ ಉನ್ನತ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸಲು ಪ್ರೋತ್ಸಾಹಿಸಲಾಗುತ್ತದೆ.

ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ, ಯಾವುದೇ ಜಾತಿ, ಧರ್ಮ ಅಥವಾ ವರ್ಗದ ನಿರ್ಬಂಧವಿಲ್ಲದೆ, ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿ, ಅರ್ಹತೆ ಹಾಗೂ ಶೈಕ್ಷಣಿಕ ಸಾಧನೆಗಳ ಆಧಾರದ ಮೇಲೆ Scholarship ge ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಸಮಾಜದ ಎಲ್ಲ ವರ್ಗಗಳ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಪ್ರಯೋಜನ ದೊರೆಯುತ್ತದೆ.

ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಸಲು ನೆರವಾಗುತ್ತಿದ್ದು, ಅವರ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸಿಗುವ ಪ್ರಮುಖ ಪ್ರಯೋಜನಗಳು

ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಹಲವು ರೀತಿಯ ಆರ್ಥಿಕ ನೆರವು ಒದಗಿಸಲಾಗುತ್ತದೆ. ಪ್ರಮುಖ ಪ್ರಯೋಜನಗಳು ಕೆಳಕಂಡಂತಿವೆ:

  • ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿದ್ಯಾರ್ಥಿವೇತನ (Scholarship) ನೀಡಲಾಗುತ್ತದೆ.
  • ವಿದ್ಯಾರ್ಥಿವೇತನದ ಹಣವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೇರಿದಂತೆ ವಿವಿಧ ಪ್ರಮುಖ ಕೋರ್ಸ್‌ಗಳ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.
  • ವಿದ್ಯಾರ್ಥಿನಿಯರಿಗೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತದೆ.
  • ವಿಕಲಚೇತನ (Physically Challenged) ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು ಹಾಗೂ ಹೆಚ್ಚುವರಿ ನೆರವು ದೊರೆಯುತ್ತದೆ.
  • ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ಸಹಾಯ ನೀಡಲಾಗುತ್ತದೆ.
  • ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಲು ಈ ಯೋಜನೆ ಸಹಕಾರಿಯಾಗಿದೆ.
  • ಉನ್ನತ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ವಿದ್ಯಾರ್ಥಿಗಳ ಹಾಗೂ ಅವರ ಕುಟುಂಬಗಳ ಆರ್ಥಿಕ ಹೊರೆ ಇಳಿಸಲು ನೆರವಾಗುತ್ತದೆ.

ಈ ಯೋಜನೆಯು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದ್ದು, ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಮಹತ್ವದ ಅವಕಾಶವಾಗಿದೆ.

ವಿವಿಧ ಕೋರ್ಸ್‌ಗಳಿಗೆ Scholarship ನ ವಿವರ

ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನ ಯೋಜನೆಯಡಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮಾಸಿಕ ಆರ್ಥಿಕ ನೆರವು ನೀಡಲಾಗುತ್ತದೆ. ವಿದ್ಯಾರ್ಥಿಗಳ ಲಿಂಗ ಹಾಗೂ ಕೋರ್ಸ್‌ಗೆ ಅನುಗುಣವಾಗಿ ವಿದ್ಯಾರ್ಥಿವೇತನದ ಮೊತ್ತ ಬದಲಾಗುತ್ತದೆ.

ಕೋರ್ಸ್ ವಿವರ ಗಂಡು (ಪುರುಷ) ವಿದ್ಯಾರ್ಥಿಗಳಿಗೆ ಹೆಣ್ಣು (ಸ್ತ್ರೀ) ವಿದ್ಯಾರ್ಥಿಗಳಿಗೆ
PUC (ಪಿಯುಸಿ) / ITI (ಐ ಟಿ ಐ) ₹ 500/- ರೂಗಳು ₹ 700/- ರೂಗಳು
ಡಿಪ್ಲೊಮಾ ಕೋರ್ಸ್ ₹ 1,000/- ರೂಗಳು ₹ 1,200/- ರೂಗಳು
ಪದವಿ‌ ಕೋರ್ಸ್ ₹ 1,100/- ರೂಗಳು ₹ 1,400/- ರೂಗಳು
ಸ್ನಾತಕೋತ್ತರ‌ ಪದವಿ ಕೋರ್ಸ್ ₹ 1,500/- ರೂಗಳು ₹ 1,800/- ರೂಗಳು
ಇಂಜಿನಿಯರಿಂಗ್‌ ಕೋರ್ಸ್‌ ಗಳು ₹2,800/-  ರಿಂದ ₹3,200/- ರೂಗಳು ₹3,200/- ರಿಂದ ₹3,600/- ರೂಗಳು
ಮೆಡಿಕಲ್ ಸಂಬಂಧಿತ ಕೋರ್ಸುಗಳು ₹2,800/- ರಿಂದ ₹3,200/- ರೂಗಳು ₹3,200/- ರಿಂದ ₹3,600/- ರೂಗಳು

 

ಹೆಚ್ಚುವರಿ ಮಾಹಿತಿ

  • ವಿದ್ಯಾರ್ಥಿಯ ಕೋರ್ಸ್, ಅಂಕಗಳು ಹಾಗೂ ಇತರ ಅರ್ಹತೆಗಳ ಆಧಾರದ ಮೇಲೆ ವಿದ್ಯಾರ್ಥಿವೇತನದ ಮೊತ್ತ ನಿರ್ಧರಿಸಲಾಗುತ್ತದೆ.
  • ಕೆಲವು ಕೋರ್ಸ್‌ಗಳಲ್ಲಿ ವಾರ್ಷಿಕವಾಗಿ ₹15,000 ರಿಂದ ₹35,000 ವರೆಗೆ ಆರ್ಥಿಕ ನೆರವು ದೊರೆಯಬಹುದು.
  • ವಿದ್ಯಾರ್ಥಿನಿಯರು ಹಾಗೂ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಬಹುದಾದ ಕೋರ್ಸ್‌ಗಳ ವಿವರ

ಸೀತಾರಾಮ್ ಜಿಂದಾಲ್ ಫೌಂಡೇಶನ್ Scholarship ಯೋಜನೆಯಡಿ ಕೆಳಗಿನ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:

ಪದವಿ ಪೂರ್ವ ಕೋರ್ಸುಗಳು (PUC)

  • ಪ್ರಥಮ ಪಿಯುಸಿ
  • ದ್ವಿತೀಯ ಪಿಯುಸಿ

ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳು

  • ಐಟಿಐ (ITI)
  • ಡಿಪ್ಲೊಮಾ (Diploma)

ಪದವಿ (Undergraduate) ಕೋರ್ಸ್‌ಗಳು

  • ಬಿಎ (BA)
  • ಬಿಕಾಂ (B.Com)
  • ಬಿಎಸ್ಸಿ (B.Sc)
  • ಬಿಬಿಎ (BBA)
  • ಬಿಇ (BE)
  • ಬಿ.ಟೆಕ್ (B.Tech)
  • ಬಿ.ಫಾರ್ಮ್ (B.Pharm)
  • ಎಂಬಿಬಿಎಸ್ (MBBS)
  • ಬಿಡಿಎಸ್ (BDS)

ಸ್ನಾತಕೋತ್ತರ (Postgraduate) ಕೋರ್ಸ್‌ಗಳು

  • ಎಂಎ (MA)
  • ಎಂಕಾಂ (M.Com)
  • ಎಂಎಸ್ಸಿ (M.Sc)
  • ಎಂಬಿಎ (MBA)
  • ಎಂ.ಫಾರ್ಮ್ (M.Pharm)
  • ಎಂಡಿ (MD)
  • ಎಂಎಸ್ (MS)

ಈ ಕೋರ್ಸ್‌ಗಳಲ್ಲಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಿ ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಸಹಕಾರಿಯಾಗುತ್ತದೆ.

Scholarship ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ

ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

1. ಶೈಕ್ಷಣಿಕ ಅರ್ಹತೆ

  • ವಿದ್ಯಾರ್ಥಿಯು ಹಿಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರಬೇಕು.
  • ಸಾಮಾನ್ಯವಾಗಿ 55% ರಿಂದ 65% ಅಂಕಗಳನ್ನು ಪಡೆದಿರುವುದು ಅಗತ್ಯ.
  • ಕರ್ನಾಟಕದ ವಿದ್ಯಾರ್ಥಿಗಳಿಗೆ, ಕೋರ್ಸ್‌ಗೆ ಅನುಗುಣವಾಗಿ 70% ರಿಂದ 80% ಅಂಕಗಳ ಅವಶ್ಯಕತೆ ಇರಬಹುದು.
  • ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಹಾಗೂ ವರ್ಗದ ಆಧಾರದ ಮೇಲೆ ಅಂಕಗಳ ಮಾನದಂಡ ಬದಲಾಗಬಹುದು.

2. ಆದಾಯ ಮಿತಿ

  • ಕುಟುಂಬದ ವಾರ್ಷಿಕ ಆದಾಯವು ನಿಗದಿತ ಮಿತಿಯೊಳಗಿರಬೇಕು.
  • ಸಾಮಾನ್ಯ ಕೋರ್ಸ್‌ಗಳಿಗೆ ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಕೆಲವು ವೃತ್ತಿಪರ ಕೋರ್ಸ್‌ಗಳಿಗೆ ಹಾಗೂ ಉದ್ಯೋಗದಲ್ಲಿರುವ ಪೋಷಕರ ಮಕ್ಕಳಿಗೆ ಪ್ರತ್ಯೇಕ ಆದಾಯ ಮಿತಿ ಅನ್ವಯಿಸಬಹುದು.

3. ಅನ್ವಯಿಸುವ ವಿದ್ಯಾರ್ಥಿಗಳು

ಈ ವಿದ್ಯಾರ್ಥಿವೇತನವು ಕೆಳಗಿನ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯ: 

  • ಪಿಯುಸಿ
  • ಐಟಿಐ
  • ಡಿಪ್ಲೊಮಾ
  • ಪದವಿ
  • ಸ್ನಾತಕೋತ್ತರ
  • ಇಂಜಿನಿಯರಿಂಗ್
  • ವೈದ್ಯಕೀಯ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳು

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ವಿವರ

ಅರ್ಜಿ ಸಲ್ಲಿಸುವ ವೇಳೆ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು:

  • ಆಧಾರ್ ಕಾರ್ಡ್
  • ಅರ್ಜಿದಾರರ ಗುರುತಿನ ಚೀಟಿ
  • ಹಿಂದಿನ ವರ್ಷದ ಅಂಕಪಟ್ಟಿ
  • ಆದಾಯ ಪ್ರಮಾಣಪತ್ರ
  • ಕಾಲೇಜು ಪ್ರವೇಶ ಪತ್ರ ಅಥವಾ ಶುಲ್ಕ ರಸೀದಿ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ನಿವಾಸ (ವಿಳಾಸ) ಪ್ರಮಾಣಪತ್ರ
  • ಹಾಸ್ಟೆಲ್ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
  • ಕಾಲೇಜು/ಸಂಸ್ಥೆಯ ದೃಢೀಕರಣ ಪತ್ರ

ಅರ್ಹ ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಸೀತಾರಾಮ್ ಜಿಂದಾಲ್ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕ್ರಮ ಈ ಕೆಳಗಿನಂತಿದೆ:

  • ಮೊದಲು ಅಧಿಕೃತ ವೆಬ್‌ ಸೈಟ್   sitaramjindalfoundation.org  ಗೆ ಭೇಟಿ ನೀಡಿ
  • ವೆಬ್‌ಸೈಟ್‌ನಲ್ಲಿ Scholarship (ವಿದ್ಯಾರ್ಥಿವೇತನ) ವಿಭಾಗವನ್ನು ಆಯ್ಕೆ ಮಾಡಿ.‌
  • ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ ನೋಂದಣಿ (Registration) ಮಾಡಿಕೊಳ್ಳಿ.
  • ಮೊಬೈಲ್‌ಗೆ ಬರುವ OTP ಅನ್ನು ನಮೂದಿಸಿ, ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ರಚಿಸಿ ಲಾಗಿನ್ ಆಗಿ.
  • ಆನ್‌ಲೈನ್ ಅರ್ಜಿ ನಮೂನೆ (Application Form) ತೆರೆಯುತ್ತಿದ್ದಂತೆ ಅಗತ್ಯವಿರುವ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ.
  • ಶೈಕ್ಷಣಿಕ ವಿವರಗಳಾದ: ಕಾಲೇಜಿನ ಹೆಸರು, ಕೋರ್ಸ್ ವಿವರ, ಹಿಂದಿನ ವರ್ಷದ ಅಂಕಗಳು, ಪ್ರವೇಶ ಸಂಖ್ಯೆ (Admission Number), ಇವುಗಳನ್ನು ಸರಿಯಾಗಿ ನಮೂದಿಸಿ.
  • ನಂತರ ಬ್ಯಾಂಕ್ ಖಾತೆಯ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು PDF ಅಥವಾ JPEG ರೂಪದಲ್ಲಿ ಅಪ್‌ಲೋಡ್ ಮಾಡಿ.
  • ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
  • ನಂತರ Submit ಬಟನ್ ಒತ್ತುವ ಮೂಲಕ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ.
  • ಅರ್ಜಿ ಸಲ್ಲಿಸಿದ ನಂತರ ಸ್ಕ್ರೀನ್‌ನಲ್ಲಿ ಕಾಣುವ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.

ಪ್ರಮುಖ ಸೂಚನೆ : ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳು ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ತಪ್ಪು ಮಾಹಿತಿ ಅಥವಾ ಅಪೂರ್ಣ ದಾಖಲೆಗಳನ್ನು ಸಲ್ಲಿಸಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.

ಜಿಂದಾಲ್ ವಿದ್ಯಾರ್ಥಿವೇತನ ನವೀಕರಣ (Renewal) ಹೇಗೆ?

  • ಮುಂದಿನ ಶೈಕ್ಷಣಿಕ ವರ್ಷದಲ್ಲೂ ಉತ್ತಮ ಅಂಕಗಳನ್ನು ಪಡೆಯಬೇಕು.
  • ಕಾಲೇಜಿಗೆ ಗೈರು ಹಾಜರಾಗದೇ ಉತ್ತಮ ರೀತಿಯ ಹಾಜರಾತಿ ಹೊಂದಿರಬೇಕು ಹಾಗೂ ತೃಪ್ತಿಕರವಾಗಿರಬೇಕು.
  • ಅರ್ಜಿಯಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಇನ್ನೊಮ್ಮೆ  ಮರುಸಲ್ಲಿಸಬೇಕು.
  • ವಿದ್ಯಾಭ್ಯಾಸವನ್ನು ಯಾವುದೇ ತೊಂದರೆಯಿಲ್ಲದೇ ಹಾಗೂ ವಿದ್ಯಾ ಸಂಸ್ಥೆಯಿಂದ ಹೊರಗೆ ಉಳಿಯದೇ ಮುಂದುವರಿಸುತ್ತಿರುವುದನ್ನು ದೃಢೀಕರಿಸಬೇಕು.

Scholarship ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಅಥವಾ ಇತರ ಶೈಕ್ಷಣಿಕ ನೆರವಿನ ಅರ್ಜಿಗಳನ್ನು ಸಲ್ಲಿಸುವಾಗ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು:

1. ದಾಖಲೆಗಳ ಗುಣಮಟ್ಟ : 

  • ಅಪ್‌ಲೋಡ್ ಮಾಡುವ ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಮತ್ತು ಓದಲು ಸುಲಭವಾಗಿರಬೇಕು.
  • ಅಸ್ಪಷ್ಟ ಅಥವಾ ಅಪೂರ್ಣ ದಾಖಲೆಗಳನ್ನು ಸಲ್ಲಿಸಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.

2. ಬ್ಯಾಂಕ್ ವಿವರಗಳ ಪರಿಶೀಲನೆ : 

  • ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ಎರಡು ಬಾರಿ ಪರಿಶೀಲಿಸಿ.
  • ತಪ್ಪಾದ ಬ್ಯಾಂಕ್ ಮಾಹಿತಿ ನೀಡಿದರೆ ವಿದ್ಯಾರ್ಥಿವೇತನದ ಹಣ ಜಮೆಯಾಗಲು ತೊಂದರೆಯಾಗಬಹುದು.

3. ಸರಿಯಾದ ಮಾಹಿತಿ ನೀಡಿ : 

  • ಹೆಸರು, ವಿಳಾಸ, ತಂದೆ/ತಾಯಿಯ ಹೆಸರು ಹಾಗೂ ಇತರ ವೈಯಕ್ತಿಕ ವಿವರಗಳನ್ನು ಅಂಕಪಟ್ಟಿ ಮತ್ತು ಅಧಿಕೃತ ದಾಖಲೆಗಳಲ್ಲಿ ಇರುವಂತೆ ನಿಖರವಾಗಿ ನಮೂದಿಸಿ.
  • ತಪ್ಪು ಮಾಹಿತಿ ನೀಡಿದರೆ ಅರ್ಜಿ ಅನರ್ಹವಾಗುವ ಸಾಧ್ಯತೆ ಇದೆ.

4. ಅರ್ಜಿ ಸಲ್ಲಿಸಲು ವಿಳಂಬ ಮಾಡಬೇಡಿ : 

  • ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
  • ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

Scholarship ಅರ್ಜಿ ತಿರಸ್ಕಾರವಾಗುವ ಪ್ರಮುಖ ಕಾರಣಗಳು

  • ಅರ್ಜಿಯನ್ನು ಪೂರ್ಣವಾಗಿ ಭರ್ತಿ ಮಾಡದೇ ಅಪೂರ್ಣವಾಗಿ ಭರ್ತಿ ಮಾಡುವುದು
  • ಬ್ಯಾಂಕ್ ವಿವರಗಳನ್ನು ತಪ್ಪಾಗಿ ನಮೂದಿಸುವುದು
  • ಅಸ್ಪಷ್ಟ ದಾಖಲೆಗಳ ಮಾಹಿತಿಯನ್ನು ನೀಡುವುದು ಹಾಗೂ ತಪ್ಪಾದ ಮಾಹಿತಿಯನ್ನು ನೀಡುವುದು
  • ಈ ವಿದ್ಯಾರ್ಥಿ ವೇತನಕ್ಕೆ ನಿಗಧಿಪಡಿಸಿರುವ ಆದಾಯ ಮಿತಿಗಿಂತ ಆದಾಯ ಹೆಚ್ಚಿರುವುದು
  • ಶೈಕ್ಷಣಿಕ ಫಲಿತಾಂಶದಲ್ಲಿ ಕಡಿಮೆ ಅಂಕಗಳನ್ನು ಹೊಂದುವುದು
  • ಕೊನೆಯ ದಿನಾಂಕದ ವರೆಗೂ ಕಾದು, ದಿನಾಂಕ ಮುಗಿದ ನಂತರ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು.

ವಿದ್ಯಾರ್ಥಿಗಳಿಗೆ ಈ Scholarship ಏಕೆ ಮುಖ್ಯ?

ಇಂದಿನ ದಿನಗಳಲ್ಲಿ ಶಿಕ್ಷಣದ ವೆಚ್ಚ ನಿರಂತರವಾಗಿ ಹೆಚ್ಚುತ್ತಿದ್ದು, ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಗಳಿಂದ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸೀತಾರಾಮ್ ಜಿಂದಾಲ್ ಫೌಂಡೇಶನ್ ವಿದ್ಯಾರ್ಥಿವೇತನ ಯೋಜನೆಯು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯು ಕೇವಲ ಆರ್ಥಿಕ ಸಹಾಯವಷ್ಟೇ ಅಲ್ಲ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಮ್ಮ ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡುತ್ತದೆ.

ವಿದ್ಯಾರ್ಥಿಗಳಿಗೆ ತಜ್ಞರ ಸಲಹೆ

  • ವಿದ್ಯಾರ್ಥಿವೇತನವನ್ನು ಕೇವಲ ಆರ್ಥಿಕ ನೆರವಿನಂತೆ ನೋಡಬೇಡಿ, ಪ್ರತಿಯಾಗಿ ಶೈಕ್ಷಣಿಕ ಬೆಳವಣಿಗೆಯ ದಾರಿಯಂತೆ ಕಾಣಬೇಕು
  • ಉತ್ತಮ ಅಂಕಗಳನ್ನು ಪಡೆಯಲು ನಿರಂತರ ಪ್ರಯತ್ನವನ್ನು ಮಾಡಬೇಕು, ಒಮ್ಮೆ ಉತ್ತಮ ಅಂಕಗಳನ್ನು ಪಡೆದು ಮುಂದಿನ ವರ್ಷದಲ್ಲಿ ಅಂಕಗಳು ಕಡಿಮೆಯಾದರೆ ವಿದ್ಯಾರ್ಥಿವೇತನ ತಿರಸ್ಕಾರ ಆಗಬಹುದು
  • ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನೂ ಕಲಿಯಿರಿ, ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತ
  • ವಿದ್ಯಾರ್ಥಿವೇತನದ ಹಣವನ್ನು ಶಿಕ್ಷಣಕ್ಕೆ ಮಾತ್ರ ಬಳಸಿ, ಬೇರೆ ಯಾವುದೇ ಬೇರೆ ಖರ್ಚುಗಳಿಗೆ ಈ ಹಣವನ್ನು ಬಳಸಬೇಡಿ,

Jindal Scholarship FAQ

Q1. ಸೀತಾರಾಮ್ ಜಿಂದಾಲ್ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಲು ಅರ್ಹರು?

ಅರ್ಹ ಅಂಕಗಳನ್ನು ಪಡೆದಿರಬೇಕು ಹಾಗೂ ನಿಗಧಿಪಡಿಸಿರುವ ಆದಾಯ ಮಿತಿಗಿಂತ ಕಡಿಮೆ ಆದಾಯ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

Q2. ವಿದ್ಯಾರ್ಥಿವೇತನದ ಹಣ ವಿದ್ಯಾರ್ಥಿಗಳಿಗೆ ಯಾವ ರೀತಿ ಸಿಗುತ್ತದೆ?

ನೇರವಾಗಿ ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆಗೆ ಡಿ ಬಿ ಟಿ ಮೂಲಕ ಜಮಾ ಮಾಡಲಾಗುತ್ತದೆ.

Q3. ಒಂದಕ್ಕಿಂತ ಹೆಚ್ಚು ವಿದ್ಯಾರ್ಥಿವೇತನ ಪಡೆಯಬಹುದೇ?

ಇಲ್ಲ, ಒಬ್ಬ ವಿದ್ಯಾರ್ಥಿ ಕೇವಲ ಒಂದು ಬಾರಿ ಅರ್ಜಿಯನ್ನು ಸಲ್ಲಿಸಬಹುದು, ಆದ್ದರಿಂದ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಿ.

Q4. ಅರ್ಜಿ ಶುಲ್ಕ ಪಾವತಿ ಮಾಡಬೇಕೇ?

ಇಲ್ಲ, ಎಲ್ಲಾ ವರ್ಗದ ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು

Q5. ಅರ್ಜಿ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು?

ಅಧಿಕೃತ ವೆಬ್‌ಸೈಟ್‌ ಗೆ ಲಾಗಿನ್ ಆಗಿ ಅರ್ಜಿ ಸ್ಥಿತಿ ಪರಿಶೀಲನೆ ಎಂಬಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು

ಈ Scholarship ಯಾರಿಗೆ ಹೆಚ್ಚು ಉಪಯುಕ್ತ?

  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ
  • ವೈದ್ಯಕೀಯ (Medical) ವಿದ್ಯಾರ್ಥಿಗಳಿಗೆ
  • ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ
  • ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ
  • ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
  • ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ವೆಚ್ಚ ಹೆಚ್ಚಿರುವುದರಿಂದ, ಈ ಯೋಜನೆಯು ಅಂತಹ ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಮಹತ್ವದ ಪಾತ್ರ ವಹಿಸುತ್ತದೆ.

ವಿದ್ಯಾರ್ಥಿಗಳಿಗೆ ಇರುವ ಇತರೆ ವಿದ್ಯಾರ್ಥಿವೇತನಗಳು

  • SSP Scholarship (ರಾಜ್ಯದ ವಿದ್ಯಾರ್ಥಿವೇತನ)
  • Vidya Siri Scholarship (ರೈತರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನ)
  • National Scholarship Portal (NSP, ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ)
  • PM YASASVI Scholarship (ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿವೇತನ)
  • AICTE Pragati Scholarship (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನೀಡುವ ವಿದ್ಯಾರ್ಥಿವೇತನ)

ಈ  Sitaram Jindal Scholarship ನ ಪಕ್ಷಿನೋಟ

ಮಾಹಿತಿ ವಿವರ
ವಿದ್ಯಾರ್ಥಿವೇತನದ ಹೆಸರು ಸೀತಾರಾಮ್‌ ಜಿಂದಾಲ್‌ ವಿದ್ಯಾರ್ಥಿವೇತನ
ಫಲಾನುಭವಿಗಳು ವಿದ್ಯಾರ್ಥಿಗಳು
ಅರ್ಜಿ ಸಲ್ಲಿಕೆ ವಿಧಾನ ಆನ್‌ ಲೈನ್‌ ಮಾತ್ರ
Scholarship Amount ₹500/- ರೂಗಳಿಂದ ₹3600/- ರೂಗಳು ಪ್ರತಿ ತಿಂಗಳು
Official Website Sitaram Jindal Foundation
ಅರ್ಜಿ ಶುಲ್ಕ ಇಲ್ಲ (ಉಚಿತ)

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಈಗಾಗಲೇ ಅರ್ಜಿ ಸಲ್ಲಿಕೆ ಶುರುವಾಗಿದೆ

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 10 ಜುಲೈ 2026

ಪ್ರಮುಖ ಲಿಂಕ್‌ ಗಳು

ಅಧಿಕೃತ ವೆಬ್‌ ಸೈಟ್ Sitaram Jindal Foundation Scholarship
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಲಿಂಕ್ ನೋಂದಾವಣಿ     ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಾಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ    ಪರೀಕ್ಷಾ ಸಲಹೆ    ವೃತ್ತಿ ಮಾರ್ಗದರ್ಶನ   ಸರ್ಕಾರಿ ಯೋಜನೆಗಳು

Last Updated : 13-06-2026

ಸಮಾರೋಪ

Sitaram Jindal Foundation Scholarship ಯೋಜನೆಯು ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಅತ್ಯುತ್ತಮ ಯೋಜನೆಯಾಗಿದೆ. ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದು. ಈ ವಿದ್ಯಾರ್ಥಿವೇತನವು ಶಿಕ್ಷಣದ ಕನಸುಗಳನ್ನು ನನಸಾಗಿಸಲು ಮತ್ತು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಹಕಾರಿಯಾಗಲಿದೆ.

 

ಲೇಖಕರ ಮಾತು :ಸರ್ಕಾರಿ ಉದ್ಯೋಗಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳ ಕುರಿತು ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ನಮ್ಮ ಉದ್ದೇಶ. ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ವಿಷಯಗಳನ್ನು ನಿಯಮಿತವಾಗಿ ಪ್ರಕಟಿಸುತ್ತೇವೆ.

ಲೇಖಕರ ಕುರಿತು : ಲೇಖಕರು ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಹಾಗೂ ಸರ್ಕಾರಿ ಯೋಜನೆಗಳ ಕುರಿತ ಲೇಖನಗಳನ್ನು ರಚಿಸುವ ಅನುಭವ ಹೊಂದಿದ್ದಾರೆ. ವಿಶ್ವಾಸಾರ್ಹ ಮಾಹಿತಿಯನ್ನು ಸರಳ ಕನ್ನಡದಲ್ಲಿ ಓದುಗರಿಗೆ ತಲುಪಿಸಲು ಬದ್ಧರಾಗಿದ್ದಾರೆ.

Disclaimer : ಈ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಅರ್ಜಿ ಸಲ್ಲಿಕೆ ಅಥವಾ ಅಧಿಕೃತ ನಿರ್ಧಾರಗಳ ಮೊದಲು ಸಂಬಂಧಿತ ಇಲಾಖೆಯ ಅಧಿಕೃತ ಅಧಿಸೂಚನೆ ಮತ್ತು ವೆಬ್‌ಸೈಟ್ ಪರಿಶೀಲಿಸುವುದು ಕಡ್ಡಾಯ.

Read More : 

Prize Money 2026, Big Update: ಪರೀಕ್ಷೆಗಳಲ್ಲಿ ಮೊದಲನೇ ಪ್ರಯತ್ನದಲ್ಲಿ ಪಾಸ್‌ ಆದವರಿಗೆ ಗುಡ್‌ ನ್ಯೂಸ್,‌ ಯೋಜನೆ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

BCM Hostel Admission 2026, Best Scheme: ಉಚಿತ ಹಾಸ್ಟೆಲ್‌ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿ ಆರಂಭ, ಅಗತ್ಯ ದಾಖಲೆ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment