Telegram Join Our Telegram WhatsApp Join Our WhatsApp

PM Surya Ghar Scheme 2026, Big Update: ಈ ಯೋಜನೆಯಿಂದ ಸಿಗಲಿದೆ ಉಚಿತ ಸೋಲಾರ್‌. ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ಮಾಹಿತಿ ಇಲ್ಲಿದೆ

ಉಚಿತ ರೂಫ್‌ ಟಾಪ್‌ ಸೋಲಾರ್‌ ಅಳವಡಿಕೆ (PM Surya Ghar Scheme )

ನಮಸ್ಕಾರ ಸ್ನೇಹಿತರೆ ನೀವೇನಾದರೂ ನಿಮ್ಮ ಮನೆಗೆ ಪ್ರತಿ ತಿಂಗಳು ಬರುತ್ತಿರುವ ಕರೆಂಟ್ ಬಿಲ್ ನಿಂದ ಬೇಸರಗೊಂಡಿದ್ದೀರಾ ಹಾಗಿದ್ದರೆ ಕೇಂದ್ರ ಸರ್ಕಾರದಿಂದ ನಿಮಗೊಂದು ಮುಖ್ಯವಾದ ಮಾಹಿತಿ ಇದೆ ಅದೇ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ. ಈ ಯೋಜನೆಯ ಮೂಲಕ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಮನೆಗಳ ಮೇಲೆ ಮೇಲ್ಚಾವಣಿಯಲ್ಲಿ ಸೌರ ಪ್ಯಾನಲ್‌ ಅನ್ನು ಅಳವಡಿಸಿಕೊಳ್ಳುವುದು ಈ ಯೋಜನೆಯ ಗುರಿಯಾಗಿದೆ ಇದರಿಂದ ಪ್ರತಿ ತಿಂಗಳು 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ತನ್ನು ಉತ್ಪಾದಿಸುವ ಅವಕಾಶವನ್ನು ಪಡೆಯಬಹುದಾಗಿದೆ ಇದರ ಜೊತೆಯಲ್ಲಿ ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರಕ್ಕೆ ಮಾರುವ ಯೋಜನೆಯು ಸಹ ಈ ಯೋಜನೆ ಅಡಿಯಲ್ಲಿ ಲಭ್ಯವಿದೆ ಆದುದರಿಂದ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಾಕಿದ್ದೇವೆ ಸಂಪೂರ್ಣ ಲೇಖವನವನ್ನು ಓದುವುದರ ಮೂಲಕ ಮಾಹಿತಿಯನ್ನು ಪಡೆದು ಕೇಂದ್ರ ಸರ್ಕಾರದ ಯೋಜನೆಯ ಪ್ರಯೋಜನವನ್ನು ಪಡೆಯಿರಿ

ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 30,000/- ರೂಗಳಿಂದ 78,000/- ರೂಗಳ ವರೆಗೆ ಸಬ್ಸಿಡಿ ಸೌಲಭ್ಯ ಸಿಗಲಿದೆ ಭಾರತ ದೇಶದ ಒಂದು ಕೋಟಿ ಮನೆಗಳಿಗೆ ಈ ಸೋಲಾರ್ ಮೂಲಕ ತಲುಪಿಸುವ ಗುರಿಯನ್ನು ಭಾರತ ಸರ್ಕಾರವು ಹೊಂದಿದೆ ಈ ಯೋಜನೆಯಿಂದ ವಿದ್ಯುತ್ ಶಕ್ತಿಯ ಅಭಾವ ಕಡಿಮೆಯಾಗಿ ಆರ್ಥಿಕತೆಯು ಸುಗಮಗೊಳ್ಳುತ್ತದೆ

ಪ್ರಧಾನಮಂತ್ರಿ ಸೂರ್ಯ ಘರ್ (PM Surya Ghar Scheme)  ಯೋಜನೆ ಎಂದರೆ ಏನು

PM Surya Ghar Scheme  ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಗಿದ್ದು ಈ ಯೋಜನೆಯ ಮೂಲಕ ದೇಶದ ಮನೆಗಳ ಮೇಲ್ಚಾವಣಿಯ ರೂಫ್ ಟಾಪ್ ಮೇಲೆ ಸೋಲಾರ್ ಪ್ಯಾನೆಲನ್ನು ಅಳವಡಿಸುವುದರ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ವಿದ್ಯುತ್ ಶಕ್ತಿ ಬಿಲ್ ಮೇಲಿನ ಒತ್ತಡವನ್ನು ಕಡಿಮೆ ಮಾಡಲಾಗುವುದು ಆಗಿದೆ ಇದರಿಂದ ಕೆಲವೊಂದು ಪ್ರಯೋಜನಗಳು ಆಗುತ್ತವೆ. ಅವುಗಳು ಈ ಕೆಳಕಂಡಂತಿವೆ

  • ರೂಫ್‌ ಟಾಪ್ ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಗೃಹಪಯೋಗಿ ವಿದ್ಯುತ್ ಶಕ್ತಿ ಬಿಲ್ ಕಡಿಮೆಯಾಗುತ್ತದೆ‌
  • ಯಾವುದೇ ಹಣವನ್ನು ಪಾವತಿಸದೆ ಉಚಿತ ವಿದ್ಯುತ್ತನ್ನು ಪಡೆದಂತಾಗುತ್ತದೆ
  • ಒಮ್ಮೆ ಸಬ್ಸಿಡಿ ಸೌಲಭ್ಯವನ್ನು ಪಡೆದು ನಿರ್ವಹಿಸುವುದರಿಂದ ಜೀವನ ಪರ್ಯಂತ ವಿದ್ಯುತ್ ಶಕ್ತಿಯನ್ನು ಪಡೆಯಬಹುದು ಇದರ ನಿರ್ವಹಣಾ ವೆಚ್ಚವು ಕಡಿಮೆ ಇರುತ್ತದೆ
  • ಗೃಹಪಯೋಗಕ್ಕೆ ಸಾಕಾಗುವಷ್ಟು ವಿದ್ಯುತ್ ಅನ್ನು ಉಳಿಸಿ ಮಿಕ್ಕಿದ ವಿದ್ಯುತ್ ಶಕ್ತಿಯನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಪಡೆಯಬಹುದು
  • ಈ ರೀತಿಯ ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ಕಾರ್ಯಗಳಿಂದ ಪರಿಸರ ಸಂರಕ್ಷಣೆ ಆಗುತ್ತದೆ

ಈ PM Surya Ghar Scheme ನ ಪ್ರಮುಖ ಲಾಭಗಳೆಂದರೆ

  • ಒಂದು ತಿಂಗಳಿಗೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಬಹುದು
  • ಕೇಂದ್ರ ಸರ್ಕಾರದಿಂದ ಕನಿಷ್ಠ 30,000/- ರೂಗಳಿಂದ  ಗರಿಷ್ಠ 78,000/- ರೂಗಳ ವರೆಗೆ ಸಬ್ಸಿಡಿ ಪ್ರಯೋಜನವನ್ನು ಪಡೆಯಬಹುದು
  • ಮನೆ ಮೇಲ್ಚಾವಣಿಯ ಮೇಲೆ ಅಳವಡಿಸುವುದರಿಂದ ಹಾಳಾಗುತ್ತದೆ ಎಂಬ ಭಯ ಇರುವುದಿಲ್ಲ ಮತ್ತು ನಿರ್ವಹಣಾ ವೆಚ್ಚವು ಕಡಿಮೆ
  • 300 ಯೂನಿಟ್ ಗಳಿಗಿಂತ ಹೆಚ್ಚು ವಿದ್ಯುತ್ ಶಕ್ತಿ ಬಳಸಿದರು ಹೆಚ್ಚುವರಿ ಯೂನಿಟ್ ಗೆ ಮಾತ್ರ ಬಿಲ್ ಬರುವುದರಿಂದ ಕಡಿಮೆ ವಿದ್ಯುತ್ ಬಿಲ್ ನ ಪ್ರಯೋಜನವನ್ನು ಪಡೆಯಬಹುದು
  • ಗೃಹ ಉಪಯೋಗಕ್ಕೆ ತಕ್ಕಂತೆ ವಿದ್ಯುತ್ ಶಕ್ತಿಯನ್ನು ಬಳಸಿ ಮಿಕ್ಕುಳಿದ ವಿದ್ಯುಚ್ಛಕ್ತಿಯನ್ನು ಮಾರಾಟ ಮಾಡುವುದರಿಂದ ಆದಾಯದ ಜೊತೆ ಹೆಚ್ಚುವರಿ ಲಾಭವನ್ನು ಪಡೆಯಬಹುದು

PM Surya Ghar Scheme  ಮೂಲಕ ಸಿಗುವ ಸಬ್ಸಿಡಿ ಮೊತ್ತ ಎಷ್ಟು

PM Surya Ghar Scheme ನ ಸಬ್ಸಿಡಿ ಮೊತ್ತವು ನಾವು ಅಳವಡಿಸುವ ಸೋಲಾರ್‌ ನ ಸಾಮರ್ಥ್ಯವನ್ನು ಆಧರಿಸಿದೆ, ಈ ಯೋಜನೆಯಿಂದ ಸಿಗುವ ಸಬ್ಸಿಡಿ ಮೊತ್ತದ ವಿವರ ಈ ಕೆಳಕಂಡಂತಿದೆ

ರೂಫ್‌ ಟಾಪ್‌ ಸೋಲಾರ್‌ ನ ಸಾಮರ್ಥ್ಯ ಸಿಗುವ ಸಬ್ಸಿಡಿ ಮೊತ್ತ
1 ಕಿಲೋ ವ್ಯಾಟ್ 30,000/- ರೂಗಳು
2‌ ಕಿಲೋ ವ್ಯಾಟ್ 60,000/- ರೂಗಳು
3 ಕಿಲೋ ವ್ಯಾಟ್ 78,000/- ರೂಗಳು
3 ಕಿಲೋ ವ್ಯಾಟ್ ಮೇಲ್ಪಟ್ಟು 78,000/- ರೂಗಳು

 

PM Surya Ghar Scheme ಗೆ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ

ಈ PM Surya Ghar Scheme  ಗೆ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಲವು ಅರ್ಹತಮಾನದಂಡಗಳನ್ನು ಪೂರೈಸಬೇಕಾಗುತ್ತದೆ ಪ್ರಮುಖ ಅರ್ಹತಮಾನದಂಡಗಳು ಈ ಕೆಳಕಂಡಂತಿವೆ

  • ಈ PM Surya Ghar Scheme ಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕಡ್ಡಾಯವಾಗಿ ಭಾರತೀಯ ನಾಗರಿಕರಾಗಿರಬೇಕು
  • ಅರ್ಜಿದಾರರ ಹೆಸರಿನಲ್ಲಿ ಸ್ವಂತ ಮನೆ ಇರಬೇಕು
  • ಮನೆಗೆ ವಿದ್ಯುತ್ ಇಲಾಖೆಯಿಂದ ಪಡೆದಂತಹ ಮಾನ್ಯವಾದ ವಿದ್ಯುತ್ ಸಂಪರ್ಕ ಇರಬೇಕು
  • ಮನೆಯ ಮೇಲ್ಚಾವಣಿಯ ಮೇಲೆ ಸಮರ್ಪಕ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲು ಉತ್ತಮ ರೀತಿಯಲ್ಲಿ ಜಾಗವಿರಬೇಕು
  • ಈ ಹಿಂದೆ ಸೋಲಾರ್ ಯೋಜನೆಗಳ್ಲಲಿ ಸಬ್ಸಿಡಿಯನ್ನು ಪಡೆದವರು ಈ ಯೋಜನೆಗೆ ಅರ್ಜಿ ಹಾಕಲು ಅರ್ಹರಾಗಿರುವುದಿಲ್ಲ
  • ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚಿನ ಪರಿಶೀಲನೆಯ ಮೂಲಕ ಸೋಲಾರ್ ಫೈನಲ್ ಅನ್ನು ಪಡೆಯಬಹುದು

ಈ ಮೇಲ್ಕಂಡ ಅರ್ಹತೆಗಳನ್ನು ಪೂರೈಸಿದ ನಂತರವೇ ಈ PM Surya Ghar Scheme ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

ಈ ಕೆಳಕಂಡ ಪ್ರಮುಖ ದಾಖಲಾತಿಗಳಿ ಈ PM Surya Ghar Scheme ನ ಅರ್ಜಿ ಸಕ್ಲಿಕೆಗೆ ಬೇಕಾಗುತ್ತವೆ, ಅವುಗಳೆಂದರೆ

  • ಆಧಾರ್ ಕಾರ್ಡ್
  • ವಿದ್ಯುತ್ ಶಕ್ತಿ ಬಿಲ್
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಮನೆ ಸಂಬಂಧಿಸಿದೆ ದಾಖಲೆ
  • ಈ ಹಿಂದೆ ಈ ಸೌಲಭ್ಯವನ್ನು ಪಡೆಯದೇ ಇರುವ ಬಗ್ಗೆ ಪ್ರಮಾಣ ಪತ್ರ ನೋಟರಿ ಸಹಿತ

ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚಿನ ಪರಿಶೀಲನೆಗಾಗಿ ಅಗತ್ಯ ದಾಖಲಾತಿಗಳ ಪಟ್ಟಿಯನ್ನು ಹೇಳಲಾಗಬಹುದು

ಅರ್ಜಿ ಸಲ್ಲಿಕೆ ವಿಧಾನ

PM Surya Ghar Scheme ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಅರ್ಹತಾ ಮಾನದಂಡವನ್ನು ಪರಿಶೀಲಿಸಿ ನಂತರ ಅರ್ಜಿ ಸಲ್ಲಿಸಬೇಕಾಗುತ್ತದೆ

  • ಮೊದಲು ಪ್ರಧಾನಮಂತ್ರಿ ಸೂರ್ಯದಲ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
  • ಅಲ್ಲಿ ಸಿಗುವ ಪಟ್ಟಿಯಿಂದ ರಾಜ್ಯ ಹಾಗೂ ನಿಮ್ಮ ಮನೆಗೆ ವಿದ್ಯುತ್ತನ್ನು ಪೂರೈಸುತ್ತಿರುವ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ದುಕೊಳ್ಳಬೇಕು
  • ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ದುಕೊಂಡ ನಂತರ ತಮ್ಮ ಗ್ರಾಹಕ ಸಂಖ್ಯೆಯನ್ನು ನಮೂದಿಸಿ ಗ್ರಹಕ ಸಂಖ್ಯೆಯನ್ನು ನಿಮ್ಮ ವಿದ್ಯುಚ್ಛಕ್ತಿ ಬಿಳಿನಲ್ಲಿ ನೋಡಬಹುದು
  • ನಂತರ ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ನಂಬರನ್ನು ನಮೂದಿಸುವ ಮೂಲಕ ಮೊಬೈಲ್ ಗೆ ಬರುವ ಓಟಿಪಿಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು.
  • ನಂತರ ವಿದ್ಯುತ್ ಸರಬರಾಜು ಕಂಪನಿ ಅಡಿಯಲ್ಲಿ ಬರುವ ಅನುಮೋದಿತ ವಿತರಕರ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತು ಅರ್ಜಿ ಸಲ್ಲಿಸಬೇಕು
  • ನಂತರ ಸೂರ್ಯ ಕರಿಯ ಯೋಜನೆಯ ಅರ್ಜಿಯು ಅನುಮೋದನೆಗೊಂಡ ನಂತರ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲು ಅರ್ಜಿ ಸಲ್ಲಿಕೆಯಾಗುತ್ತದೆ ನಂತರ ಮುಂದಿನ ಕ್ರಮಗಳನ್ನು ಅನುಸರಿಸಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು
  • ಯಶಸ್ವಿಯಾಗಿ ಸೋಲಾರ್ ಪ್ಯಾನೆಲ್ ಅನ್ನು ಪೂರ್ಣಗೊಳಿಸಿದ ನಂತರ ಅಗತ್ಯ ಮಾಹಿತಿಗಳನ್ನು ಅಪ್ಡೇಟ್ ಮಾಡುವುದರ ಮೂಲಕ ನೀವು ಎಷ್ಟು ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿದ್ದೀರಿ ಎಂಬ ಆಧಾರದ ಮೇಲೆ ಸಬ್ಸಿಡಿ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ

ಈ PM Surya Ghar Scheme ಗೆ  ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ತುಂಬಾ ಸುಲಭವಾಗಿದ್ದು ಜನಸಾಮಾನ್ಯರು ತಮ್ಮ ಮನೆಯಲ್ಲಿಯೇ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಅರ್ಜಿ ಸಲ್ಲಿಸುವ ಮೊದಲು ಬೇಕಾದ ದಾಖಲಾತಿಗಳು ಹಾಗೂ ಅರ್ಹತೆಯನ್ನು ಪರಿಶೀಲಿಸುವುದನ್ನು ಮರೆಯಬೇಡಿ

ಕರ್ನಾಟಕ ರಾಜ್ಯದಲ್ಲಿ ಯೋಜನೆಯ ಪ್ರಗತಿ ಹೇಗಿದೆ

ಕರ್ನಾಟಕ ರಾಜ್ಯದಲ್ಲೂ PM Surya Ghar Scheme ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು ಪ್ರತಿಷ್ಠಿತ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ ಮೆಸ್ಕಾಂ ಮೆಸ್ಕಾಂ ಎಸ್ಕಾಂ ಜೆಸ್ಕಾಂ ಮುಂತಾದ ವಿದ್ಯುತ್ ಸರಬರಾಜು ಕಂಪನಿಗಳು ಸಂಪರ್ಕವನ್ನು ಹೊಂದಿರುವ ಮನೆಗಳಿಗೆ ಈ ಯೋಚನೆಯು ಅನ್ವಯವಾಗುತ್ತಿದ್ದು ರಾಜ್ಯದಲ್ಲಿ 10 ಕಿಲೋ ವ್ಯಾಟ್‌ಗಳ ವರೆಗೆ ಸರಳ ಅನುಮೋದನೆ ಪ್ರಕ್ರಿಯೆ ಕೂಡ ಜಾರಿಯಲ್ಲಿರುತ್ತದೆ ಆದುದರಿಂದ ಹಿಂದೆ ಅರ್ಹತೆಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ

ಈ PM Surya Ghar Scheme ಗೆ ಜನರ ಪ್ರತಿಕ್ರಿಯೆ ಹೇಗಿದೆ

ಕರ್ನಾಟಕ ರಾಜ್ಯದಲ್ಲಿ ಪ್ರಧಾನ ಮಂತ್ರಿ ಸೂರ್ಯಕರ ಯೋಜನೆಗೆ ಸಂಬಂಧಿಸಿ ದಂತೆ ಸಾರ್ವಜನಿಕರಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಯೋಜನೆಯಿಂದ ಆಗುವ ಧನಾತ್ಮಕ ಉಪಯೋಗಗಳನ್ನು ವಿವರಿಸಿದ್ದಾರೆ ವಿದ್ಯುತ್ ಬಿಲ್ ಶೂನ್ಯತೆ ಇಳಿದಿರುವುದು ಕಡಿಮೆ ನಿರ್ವಹಣಾ ವೆಚ್ಚ ಅರ್ಜಿ ಸಲ್ಲಿಕೆ ಸುಲಭ ಅನುಮೋದನೆ ಗೆ ಯಾವುದೇ ಸಮಯದ ಬೆರತ ಇಲ್ಲ ಮುಂತಾದ ಅನುಭವಗಳನ್ನು ಹಂಚಿಕೊಂಡಿದ್ದು ತಾವು ಹೂಡಿಕೆ ಮಾಡಿರುವ ಹಣವು ಎರಡುವರೆ ವರ್ಷದಿಂದ ನಾಲ್ಕು ವರ್ಷಗಳ ಒಳಗೆ ಹೂಡಿಕೆಯ ಮೊತ್ತವನ್ನು ವಾಪಸ್ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ

PM Surya Ghar Scheme ನ ವಿಶೇಷತೆಗಳು

  • ಈ PM Surya Ghar Scheme ಮೂಲಕ ಪಡೆಯುವ ವಿದ್ಯುಚ್ಛಕ್ತಿ ಪರಿಸರ ಸ್ನೇಹಿ ವಿದ್ಯುತ್ ಆಗಿದ್ದು ಪರಿಸರದ ಮೇಲೆ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ
  • ಒಮ್ಮೆ ಹೂಡಿಕೆ ಮಾಡಿ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವುದರಿಂದ ದೀರ್ಘಕಾಲದ ಉಳಿತಾಯ ಆಗುತ್ತದೆ
  • ಈ ಯೋಜನೆಗೆ ಸರ್ಕಾರದಿಂದ ನೇರವಾಗಿ ಸಬ್ಸಿಡಿ ಸಿಗುವುದರಿಂದ ಕಚೇರಿಗೆ ಅಲೆದಾಡುವುದು ಹಾಗೂ ಸಮಯದ ವ್ಯರ್ಥ ಆಗುವುದಿಲ್ಲ
  • ಈ ಯೋಜನೆಗೆ ಯಾವುದೇ ಆಫ್ಲೈನ್ ವ್ಯವಸ್ಥೆ ಇಲ್ಲದೆ ಆನ್ಲೈನಲ್ಲಿ ಅರ್ಜಿ ಸೌಲಭ್ಯ ಇರುವುದರಿಂದ ಅನುಮೋದನೆ ಸುಲಭ
  • ಈ ಯೋಜನೆಯಿಂದ ಅಳವಡಿಸುವ ಸೋಲಾರ್ ಪ್ಯನಲ್ ಮೂಲಕ ವಿದ್ಯುತ್ ಶಕ್ತಿ ಉತ್ಪಾದನೆ ಆಗುವುದರಿಂದ ವಿದ್ಯುತ್ ಸರಬರಾಜು ಕಂಪನಿ ಗಳಿಂದ ಬರುವ ವಿದ್ಯುತ್ ಬಿಲ್ ನ ಮೊತ್ತದಲ್ಲಿ ಭಾರಿ ಕಡಿತ ಉಂಟಾಗುತ್ತದೆ ಇದರಿಂದ ಮನೆಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ
  • ಈ PM Surya Ghar Scheme ಮೂಲಕ ಗೃಹಕ್ಕೆ ಬೇಕಾದಷ್ಟು ವಿದ್ಯುತ್ ಶಕ್ತಿಯನ್ನು ಉಪಯೋಗಿಸಿಕೊಂಡು ಮಿಕ್ಕುಳಿದ ವಿದ್ಯುತ್ ಶಕ್ತಿ ಪ್ರಮಾಣವನ್ನು ಮಾರಾಟ ಮಾಡುವುದರಿಂದ ಹೆಚ್ಚುವರಿ ಆದಾಯದಿಂದ ಲಾಭವನ್ನು ಪಡೆಯಬಹುದು

PM Surya Ghar Scheme ಗೆ ಅರ್ಜಿ ಸಲ್ಲಿಸಲು ಸಲಹೆಗಳು

  • ಅಧಿಕೃತ ವೆಬ್‌ ಸೈಟ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಿ
  • ಅರ್ಜಿ ನಮೂನೆಯಲ್ಲಿ ಸರಿಯಾದ ಮಾಹಿತಿಯನ್ನೇ ನಮೂದಿಸಿ, ತಪ್ಪಾದ ಮಾಹಿತಿ ನಮೂದಿಸಬೇಡಿ
  • ಯೋಜನೆಯ ಅರ್ಜಿ ಅನುಮೋದನೆಗೆ ಯಾವುದೇ ಮಧ್ಯವರ್ತಿಗಳ ಮಾತುಗಳನ್ನು ಕೇಳಬೇಡಿ
  • ತಪ್ಪಾದ ಮಾಹಿತಿಯನ್ನು ನಮೂದಿಸಿದರೆ ಅರ್ಜಿ ತಿರಸ್ಕಾರ ಆಗಬಹುದು
  • ಈ ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಅಧಿಕೃತ ಸಹಾಯವಾಣಿ 15555 ಅನ್ನು ಸಂಪರ್ಕಿಸಿ

ಸಂಬಂಧಿಸಿದ ಪ್ರಮುಖ ಲಿಂಕ್‌ ಗಳು

ಅಧಿಕೃತ ವೆಬ್ಸೈಟ್ ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆ
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ ಮಾಹಿತಿ       ಸರ್ಕಾರಿ ಯೋಜನೆಗಳ ಮಾಹಿತಿ

 

ಭಾರತದ ಕೇಂದ್ರ ಸರ್ಕಾರದಿಂದ ಶುರು ಮಾಡಿರುವ ಈ ಪ್ರಧಾನಮಂತ್ರಿ ಸೂರ್ಯಕಾರು ಯೋಜನೆಯ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಜನರು ವಿದ್ಯುತ್ ಶಕ್ತಿಯ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಇದರಿಂದಲೂ ಸಹ ಲಾಭವನ್ನು ಪಡೆಯಲು ಶುರು ಮಾಡಿರುವ ಯೋಜನೆಯಾಗಿದ್ದು ಈ ಯೋಜನೆಯಿಂದ ತಮ್ಮ ಮನೆಗಳ ಮೇಲಿರುವ ಕಾಲಿ ಜಾಗದಲ್ಲಿ ಸೋಲಾರ್ ಟಾಪ್ ಫೈನಲ್ ಅನ್ನು ಅಳವಡಿಸುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಅಳವಡಿಸಲು ಕೇಂದ್ರ ಸರ್ಕಾರವು ವಿದ್ಯುತ್ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯಧನವನ್ನು ನೀಡುತ್ತಿರುವುದರಿಂದ ಆರ್ಥಿಕ ಹೊರಗೆ ಕಡಿಮೆಯಾಗಿರುತ್ತದೆ ಹಾಗೂ ಒಮ್ಮೆ ಹೂಡಿಕೆ ಮಾಡಿದ ಹಣವು ಕಡಿಮೆ ನಿರ್ವಹಣಾ ವೆಚ್ಚವನ್ನು ಬಯಸುವುದರಿಂದ ದೀರ್ಘಕಾಲದಲ್ಲಿ ಇದರ ಪ್ರಯೋಜನವನ್ನು ಪಡೆಯಬಹುದು ಹಾಗೂ ನೀವು ಹೂಡಿಕೆ ಮಾಡಿರುವ ಬಂಡವಾಳವನ್ನು 2:30 ಇಂದ 3 ವರ್ಷಗಳ ಒಳಗೆ ನೀವು ಹಿಂಪಡೆಯಬಹುದಾಗಿರುತ್ತದೆ ಆದುದರಿಂದ ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಉಚಿತವಾದ ರೂಪ ಸೋಲಾರ್ ಯೋಜನೆಯನ್ನು ಪಡೆಯಿರಿ ಹಾಗೂ ವಿದ್ಯುತ್ ಶಕ್ತಿ ಸರಬರಾಜು ಕಂಪನಿಗಳ ಮೇಲಿನ ಆಧಾರವನ್ನು ಕಡಿಮೆ ಮಾಡಿಕೊಳ್ಳಿ

 

PM Surya Ghar Scheme : FAQ’s

1. PM Surya Ghar ಯೋಜನೆ ಎಂದರೇನು?

PM Surya Ghar Scheme ಕೇಂದ್ರ ಸರ್ಕಾರದ ಜನ ಹಿತದೃಷ್ಠಿ ಯೋಜನೆಯಾಗಿದ್ದು, ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ಸಬ್ಸಿಡಿ ನೀಡಲಾಗುತ್ತದೆ. ಇದರ ಮೂಲಕ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.

2. ಈ ಯೋಜನೆಯಡಿ ಎಷ್ಟು ಸಬ್ಸಿಡಿ ಹಣ ದೊರೆಯುತ್ತದೆ?

ಸೋಲಾರ್ ಸಾಮರ್ಥ್ಯಕ್ಕೆ ಅನುಗುಣವಾಗಿ ₹30,000/- ರೂಗಳಿಂದ  ₹78,000/- ರೂಗಳ ವರೆಗೆ ವರೆಗೆ ಸಬ್ಸಿಡಿ ಸಿಗುತ್ತದೆ. 1KW ಗೆ ₹30,000 ಮತ್ತು 3KW ವರೆಗೆ ₹78,000 ಸಹಾಯಧನದ ಸೌಲಭ್ಯ ಲಭ್ಯವಿದೆ.

3. ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

ಸ್ವಂತ ಮನೆಯನ್ನು ಹೊಂದಿರುವ ಭಾರತೀಯ ನಾಗರಿಕರು, ಮಾನ್ಯವಾಗಿರುವ ವಿದ್ಯುತ್ ಸಂಪರ್ಕ ಇರುವವರು ಹಾಗೂ ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಅಳವಡಿಸಲು ಜಾಗ ಇರುವವರು ಅರ್ಜಿ ಹಾಕಬಹುದು.

4. PM Surya Ghar Scheme ಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಂತರ ರಾಜ್ಯ, ವಿದ್ಯುತ್ ಸರಬರಾಜು ಕಂಪನಿ ಆಯ್ಕೆಮಾಡಿ, ಗ್ರಾಹಕ ಸಂಖ್ಯೆಯನ್ನು ನಮೂದಿಸಿ ಹಾಗೂ ಮೊಬೈಲ್ OTP ನಮೂದಿಸುವ ಮೂಲಕ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

5. ಸೋಲಾರ್ ಪ್ಯಾನೆಲ್ ಅಳವಡಿಸುವುದರಿಂದ ಏನೇನು ಲಾಭಗಳಿವೆ?

ವಿದ್ಯುತ್ ಬಿಲ್ ಕಡಿಮೆ ಆಗುವುದರ ಜೊತೆಯಲ್ಲಿ, ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಬಹುದು ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯವನ್ನೂ ಕೂಡ ಗಳಿಸಬಹುದು.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment