Telegram Join Our Telegram WhatsApp Join Our WhatsApp

RTE New Order 2026, Big Update: ಆರ್‌ ಟಿ ಇ ಶಾಲಾ ದಾಖಲಾತಿ ನಿಯಮದಲ್ಲಿ ಸರ್ಕಾರದ ಮಹತ್ತರ ಬದಲಾವಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಸಗಿ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ, ರಾಜ್ಯ ಸರ್ಕಾರದ ಮಹತ್ವದ ಆದೇಶ (RTE New Order)

ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದ್ದು ಈಗ ಆರ್‌ ಟಿ ಇ ಯೋಜನೆಯ ಮೂಲಕ ಎಂಟನೇ ತರಗತಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು 8ನೇ ತರಗತಿಯ ನಂತರವೂ ಅದೇ ಶಾಲೆಯಲ್ಲಿ 10ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಪಡೆಯಬಹುದು ಎಂಬ ಮಹತ್ವದ ಆದೇಶವನ್ನು ಹೊರಡಿಸಿದೆ ಈ ಆದೇಶದಿಂದ ಸಾವಿರಾರು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗಲಿದೆ ಈ ಯೋಜನೆಯಡಿ ಪಡೆಯುವ ಶಿಕ್ಷಣವು ಪೂರ್ಣವಾಗಿ ಉಚಿತವಾಗಿದ್ದು ಹಲವು ಸೌಲಭ್ಯಗಳನ್ನು ಹೊಂದಿದೆ ಈ ಯೋಜನೆಯ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಸರ್ಕಾರದ ಹೊಸ ನಿಯಮ (RTE New Order) ಏನು

ಕರ್ನಾಟಕದಲ್ಲಿ ಇದುವರೆಗೆ ಆರ್‌ಟಿಇ ಯೋಜನೆ ಅಡಿಯಲ್ಲಿ ಉಚಿತ ಶಿಕ್ಷಣ ಸೌಲಭ್ಯವು ಕೇವಲ 8ನೇ ತರಗತಿವರೆಗೆ ಮಾತ್ರ ಸೀಮಿತವಾಗಿದ್ದು ನಂತರ ಾವುದೇ ಆರ್‌ಟಿಇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಆದರೆ ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಹೊಸ ಆದೇಶವನ್ನು ಹೊರಡಿಸಿ 2025 26 ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಪೂರ್ಣಗೊಳಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅದೇ ಶಾಲೆಯಲ್ಲಿ ಒಂಬತ್ತು ಮತ್ತು 10ನೇ ತರಗತಿಗೂ ಉಚಿತವಾಗಿ ದಾಖಲಾತಿಯನ್ನು ಪಡೆದು ಉದ್ಯೋಗ ಶಿಕ್ಷಣವನ್ನು ಹೊಂದಬಹುದು ಎಂದು ಮಹತ್ವದ ಘೋಷಣೆಯನ್ನು ಹೊರಡಿಸಿದೆ

ಯಾವ ಯಾವ ವಿದ್ಯಾರ್ಥಿಗಳಿಗೆ ಈ RTE New Order ಸೌಲಭ್ಯ ಸಿಗಲಿದೆ 

ಈ ಕೆಳಕಂಡ ಅರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಈ RTE New Order ಪೂರಕವಾಗಿ ಅನ್ವಯವಾಗಲಿದೆ ಅವುಗಳೆಂದರೆ

  • ಆರ್‌ ಟಿ ಇ ಕೋಟದ ಮೀಸಲಾತಿ ಅಡಿಯಲ್ಲಿ ಶಾಲೆಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು
  • 2025 26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಯನ್ನು ಪೂರ್ಣಗೊಳಿಸಿರುವವರು
  • ದಾಖಲಾಗಿರುವ ಶಾಲೆಯಲ್ಲಿ 9ನೇ ಮತ್ತು ಹತ್ತನೇ ತರಗತಿ ಸೌಲಭ್ಯ ಇರುವ ಶಾಲೆಯ ವಿದ್ಯಾರ್ಥಿಗಳು ಅದೇ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಬಹುದಾಗಿರುತ್ತದೆ

RTE New Order ಪ್ರಕಾರ ದಾಖಲಾತಿ ಶುಲ್ಕ ಪಾವತಿಸಬೇಕೆ?

ಆರ್ ಟಿ ಇ ದಾಖಲಾತಿಗಳು ಕೇವಲ ಅನುದಾನಿತ ಶಾಲೆಗಳಲ್ಲದೆ ಖಾಸಗಿ ಶಾಲೆಗಳಲ್ಲೂ ಇರುವುದರಿಂದ ಬಹುತೇಕ ಖಾಸಗಿ ಶಾಲೆಗಳು 9ನೇ ತರಗತಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಂದ ಈಗಾಗಲೇ ಶುಲ್ಕ ವಸೂಲಿಯನ್ನು ಮಾಡುತ್ತಿದ್ದವು ಆದರೆ ಕರ್ನಾಟಕ ಸರ್ಕಾರವು ಈ ಹೊಸ ಅಧಿಸೂಚನೆಯ ಮೂಲಕ ಮಾಹಿತಿಯನ್ನು ನೀಡಿದ್ದು ಯಾವುದೇ ಹಣ ಪಾವತಿಸುವ ಅಗತ್ಯತೆ ಇಲ್ಲ ಒಂದು ವೇಳೆ ಈಗಾಗಲೇ ಹಣವನ್ನು ಪಾವತಿಸಿದರೆ ಅದನ್ನು ಮರಳಿ ಪಡೆಯಬಹುದು ಎಂದು RTE New Order  ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ

ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದರು ಶಿಕ್ಷಣವನ್ನು ಮುಂದುವರಿಸಬಹುದೇ?

ಹೌದು, ವರ್ಗಾವಣೆ ಪ್ರಮಾಣ ಪತ್ರವನ್ನು ಪಡೆದಿದ್ದರೂ ಸಹ ಪೋಷಕರು ಅದೇ ಶಾಲೆಯಲ್ಲಿ ಓದಲು ಬಯಸಿದರೆ ಅದನ್ನು ಮುಂದುವರಿಸಲು ಅವಕಾಶವನ್ನು ನೀಡಬೇಕೆಂದು ಶಿಕ್ಷಣ ಇಲಾಖೆ RTE New Order ಮೂಲಕ ತಿಳಿಸಿದೆ ಇದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು 9ನೇ ತರಗತಿಗೆ ಬೇರೆ ಶಾಲೆಗೆ ಬದಲಾಯಿಸಬೇಕೆಂಬ ಸಮಸ್ಯೆಯನ್ನು ಈ ಯೋಜನೆ ತಪ್ಪಿಸಲಿದೆ

ಈ ವರ್ಷದ ಹೊಸ ಆದೇಶದ ಹಿಂದಿನ ಸರ್ಕಾರದ ಉದ್ದೇಶ ಏನು

ರಾಜ್ಯ ಸರ್ಕಾರವು ಈ ನಿರ್ಧಾರವನ್ನು ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ತೆಗೆದುಕೊಂಡಿದ್ದು ಹಲವು ಉದ್ದೇಶಗಳನ್ನು RTE New Order ಮೂಲಕ ಸಾಧಿಸುವ ಗುರಿಯನ್ನು ಹೊಂದಿದೆ ಅವುಗಳೆಂದರೆ

  • ಬಡ ಕುಟುಂಬಗಳ ವಿದ್ಯಾರ್ಥಿಗಳ ಶಾಲಾ ಬಿಟ್ಟುಹೋಗುವಿಕೆಯನ್ನು ಕಡಿಮೆ ಮಾಡುವುದು
  • ವಿದ್ಯಾರ್ಥಿಗಳಲ್ಲಿ ಹಾಗೂ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು ಹಾಗೂ ಮುಂದುವರಿಸುವುದು
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳ ಅಭ್ಯರ್ಥಿಗಳಿಗೆ ಸಮಾನ ಮತ್ತು ಉಚಿತ ಶಿಕ್ಷಣಕ್ಕಾಗಿ ಅವಕಾಶ ನೀಡುವುದು
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈಗಾಗಲೇ ಖಾಸಗಿ ಶಾಲೆಗಳಲ್ಲಿ ದೊರೆತಿರುವ ದಾಖಲಾತಿಗಳನ್ನು ಮುಂದುವರೆಸಲು ನೆರವು ನೀಡುವುದು

ಖಾಸಗಿ ಶಾಲೆಗಳಿಂದ ವಿರೋಧ ಏರ್ಪಟ್ಟಿದೆಯೇ?

ಹೌದು, ಸರ್ಕಾರದ ಈ RTE New Order ನಿರ್ಧಾರದಿಂದ ಖಾಸಗಿ ಶಾಲೆಯ ಸಂಘಟನೆಗಳು ತೀವ್ರವಾದ ವಿರೋಧ ವ್ಯಕ್ತಪಡಿಸಿದೆ ಏಕೆಂದರೆ ಆರ್ ಟಿ ಇ ಕಾಯ್ದೆ ಅಡಿಯಲ್ಲಿ ಇದುವರೆಗೆ 8ನೇ ತರಗತಿವರೆಗೆ ಮಾತ್ರ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು ಪ್ರಸ್ತುತ ತಿದ್ದುಪಡಿ ಮಾಡದೆ ಹತ್ತನೇ ತರಗತಿಯವರೆಗೆ ವಿಸ್ತರಣೆ ಮಾಡಿರುವುದು ಕಾನೂನಿನ ಚೌಕಟ್ಟಿನಲ್ಲಿ ತಪ್ಪು ಹಾಗೂ ಮುಂದೆ ಹೆಚ್ಚಿನ ಸಮಸ್ಯೆಗೆ ಕಾರಣವಾಗಬಹುದು ಎಂದು ಅಭಿಪ್ರಾಯ ಪಟ್ಟಿವೆ ಆದರೆ ಸರ್ಕಾರವು ಈಗಾಗಲೇ ಅಧಿಕೃತ ಆದೇಶವನ್ನು ಹೊರಡಿಸಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕೃತವಾಗಿ ತಿಳಿಸಿದೆ

RTE New Order ನಿಂದ ವಿದ್ಯಾರ್ಥಿಗಳಿಗೆ ಏನು ಅನುಕೂಲ

  • ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ
  • ಶಾಲೆಯನ್ನು ಬದಲಾಯಿಸದೆ ಅದೇ ಶಾಲೆಯಲ್ಲಿ ಶಿಕ್ಷಣದ ಮುಂದುವರಿಕೆ
  • ಶುಲ್ಕ ಪಾವತಿಸುವ ಅಗತ್ಯತೆ ಇಲ್ಲ ಈಗಾಗಲೇ ಪಾವತಿಸಿದ್ದಾರೆ ಶುಲ್ಕದ ಮರುಪಾವತಿ
  • ಬಡ ಕುಟುಂಬಗಳಿಗೆ ಹಣಕಾಸಿನ ಒತ್ತಡ ಕಡಿಮೆ

ಈ RTE New Order ನ ಮಹತ್ವಗಳು

ಗ್ರಾಮೀಣ ಪ್ರದೇಶಗಳಲ್ಲಿ RTE (ಶಿಕ್ಷಣದ ಹಕ್ಕು ಕಾಯ್ದೆ) ಬಹಳ ಮಹತ್ವದ್ದಾಗಿದ್ದು ಈ ಕಾಯ್ದೆಯ ಮೂಲಕ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಅವಕಾಶ ದೊರೆಯುತ್ತದೆ. ಬಡ ಹಾಗೂ ಹಿಂದುಳಿದ ಕುಟುಂಬಗಳ ಮಕ್ಕಳೂ ಸಹ ಉತ್ತಮ ಶಿಕ್ಷಣ ಪಡೆಯಲು ಇದು ಸಹಾಯ ಮಾಡುವುದರ ಜೊತೆಯಲ್ಲಿ ಶಿಕ್ಷಣಚನ್ನು ಉತ್ತೇಜಿಸುತ್ತದೆ.

RTE New Order ಯಿಂದ ಗ್ರಾಮೀಣ ಭಾಗದ ಮಕ್ಕಳ ಶಾಲಾ ಬಿಡುವಿಕೆ (School Dropout) ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿಯು ಹೆಚ್ಚಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಮಕ್ಕಳಿಗೆ 25% ಮೀಸಲಾತಿ ಸೌಲಭ್ಯ ಇರುವುದರಿಂದ ಉತ್ತಮ ಶಿಕ್ಷಣ ಪಡೆಯುವ ಅವಕಾಶ ದೊರೆತಂತಾಗುತ್ತದೆ.

ಇದರ ಮೂಲಕ ಮಕ್ಕಳ ಭವಿಷ್ಯ ಉತ್ತಮ ಆಗುತ್ತದೆ, ಉದ್ಯೋಗ ಅವಕಾಶಗಳು ಹೆಚ್ಚುತ್ತವೆ ಹಾಗೂ ಗ್ರಾಮೀಣ ಪ್ರದೇಶದ ಶಿಕ್ಷಣ ಮಟ್ಟ ಮತ್ತು ಜೀವನಮಟ್ಟ ಸುಧಾರಿಸಲು RTE ಪ್ರಮುಖ ಪಾತ್ರ ವಹಿಸುತ್ತಿದೆ.

ಪೋಷಕರು ಯಾವ ಕ್ರಮಗಳನ್ನು ಕೈಗೊಳ್ಳಬೇಕು

ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಿರುವ ಶಾಲೆಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದಾಖಲಾತಿಯನ್ನು ಮಾಡಬಹುದಾಗಿರುತ್ತದೆ ಒಂದು ವೇಳೆ ಶುಲ್ಕವನ್ನು ಪಾವತಿಸಲು ಕೇಳಿದರೆ ಶಿಕ್ಷಣ ಇಲಾಖೆಯ ಗಮನಕ್ಕೆ ತಂದು ದೂರು ನೀಡಬಹುದು ಅಥವಾ ಈಗಾಗಲೇ ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದರು ಅದರ ಮಾನ್ಯತೆಯನ್ನು ಪ್ರಸಿದ್ಧಗೊಳಿಸಿ ಶಾಲೆಯಲ್ಲಿ ಮರು ಪ್ರವೇಶಕ್ಕಾಗಿ ಅರ್ಜಿಯನ್ನು ಕೊಡಬಹುದಾಗಿರುತ್ತದೆ ಈ RTE New Order ನ ಪಡೆಯುವ ಪ್ರಯೋಜನಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಉಂಟಾದರೂ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ

RTE New Order ಗೆ ಸಂಬಂಧಿತ ಲಿಂಕ್‌ ಗಳು

ಕರ್ನಾಟಕ ಸರ್ಕಾರದ ಈ ಹೊಸ ಆರ್‌ಟಿಐ ಆದೇಶದ ನಿರ್ಧಾರವು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದೃಷ್ಟಿಕೋನವನ್ನು ನೀಡಲಿದೆ ರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ನಿಲ್ಲಿಸುವ ಹಾಗೂ ಶುಲ್ಕವನ್ನು ಪಾವತಿಸಲಾಗದೆ ಶಾಲೆಯನ್ನು ಬದಲಿಸುತ್ತಿರುವ ವಿದ್ಯಾರ್ಥಿಗಳಿಗೆ ಕುಟುಂಬಗಳಿಗೆ ಇದೊಂದು ದೊಡ್ಡ ನೆರವಾಗಿದ್ದು ಆರ್‌ಟಿಇ ಕಾಯ್ದೆ ಅಡಿಯಲ್ಲಿ 8ನೇ ತರಗತಿಯ ಬದಲು 10ನೇ ತರಗತಿಯವರೆಗೆ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ಪಡೆಯುವುದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ಉತ್ತಮ ರೀತಿಯಲ್ಲಿ ಬೆಳವಣಿಗೆಗೊಳ್ಳಲಿದೆ ಸರ್ಕಾರದ ಈ ಮಹತ್ವದ ಯೋಜನೆಗೆ ನಿಮ್ಮದೊಂದು ಮೆಚ್ಚುಗೆ ಇರಲಿ

RTE New Order 2026 –  FAQ’s

1) RTE ಹೊಸ ಆದೇಶದಲ್ಲಿ ಏನಿದೆ?
ಈ ಹೊಸ ಆದೇಶದ ಪ್ರಕಾರ SC/ST ವಿದ್ಯಾರ್ಥಿಗಳು 8ನೇ ತರಗತಿಯ ನಂತರವೂ ಅದೇ ಶಾಲೆಯಲ್ಲಿ 10ನೇ ತರಗತಿಯವರೆಗೆ ಉಚಿತ ಶಿಕ್ಷಣವನ್ನು ಪಡೆಯಬಹುದು.

2) ಯಾರಿಗೆ ಈ ಸೌಲಭ್ಯವು  ಸಿಗಲಿದೆ?
RTE ಕೋಟಾದ ಅಡಿಯಲ್ಲಿ ಪ್ರವೇಶ ಪಡೆದಿರುವ SC/ST ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಅನ್ವಯವಾಗುತ್ತದೆ.

3) ಯಾವ ತರಗತಿಯವರೆಗೆ ಉಚಿತ ಶಿಕ್ಷಣ RTE ಕಾಯ್ದೆ ಅಡಿಯಲ್ಲಿ ಸಿಗಲಿದೆ?
ಪ್ರಸ್ತುತ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

4) ಯಾವ ವಿದ್ಯಾರ್ಥಿಗಳು ಇದಕ್ಕೆ ಅರ್ಹರು?
2025-26ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಪೂರ್ಣಗೊಳಿಸಿರುವ RTE ಕೋಟಾದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.

5) ವಿದ್ಯಾರ್ಥಿಗಳು ಶಾಲೆಯನ್ನು ಬದಲಾಯಿಸಬೇಕೆ?
ಇಲ್ಲ, ವಿದ್ಯಾರ್ಥಿಗಳು ಅದೇ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿ ಶಿಕ್ಷಣವನ್ನು ಮುಂದುವರೆಸಬಹುದು.

6)  ಶಾಲಾ ದಾಖಲಾತಿಗೆ ಶುಲ್ಕ ಪಾವತಿಸಬೇಕೆ?
ಇಲ್ಲ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈಗಾಗಲೇ ಶುಲ್ಕ ಪಾವತಿಸಿದ್ದರೆ ಮರುಪಾವತಿ ಪಡೆಯಬಹುದು, ಶಾಲೆಯನ್ನು ಸಂಪರ್ಕಿಸಿ.

7) ವರ್ಗಾವಣೆ ಪ್ರಮಾಣ ಪತ್ರ (TC) ಪಡೆದಿದ್ದರೆ ಏನಾದರೂ ತೊಂದರೆಯೇ?
TC ಪಡೆದಿದ್ದರೂ, ಪೋಷಕರು ಬಯಸಿದರೆ ಅದೇ ಶಾಲೆಯಲ್ಲಿ ಮರು ದಾಖಲಾತಿ ಮಾಡಬಹುದು.

8) ಈ ಆದೇಶದ ಮುಖ್ಯ ಪ್ರಯೋಜನ ಏನು?
ಬಡ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನಿಲ್ಲಿಸದೇ ಉಚಿತವಾಗಿ ಮುಂದುವರಿಸಲು ಸಹಕರಿಸುವುದು.

9) ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲೂ ಈ ಸೌಲಭ್ಯ ಇದೆಯೇ?
ಹೌದು, RTE ಅಡಿಯಲ್ಲಿ ದಾಖಲಾಗಿ ಪ್ರವೇಶ ಪಡೆದಿರುವ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲೂ ಈ ಸೌಲಭ್ಯವು ಲಭ್ಯವಿದೆ.

10) ಶಾಲೆ ದಾಖಲಾತಿ ಶುಲ್ಕ ಕೇಳಿದರೆ ಏನು ಮಾಡಬೇಕು?
ಶಾಲೆ ಶುಲ್ಕ ಕೇಳಿದರೆ ಶಿಕ್ಷಣ ಇಲಾಖೆಗೆ ದೂರು ನೀಡಬಹುದು ಅಥವಾ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment