Telegram Join Our Telegram WhatsApp Join Our WhatsApp

KEA Recruitment 2026, Job Opportunity : ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಕೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ (KEA Recruitment)

ನಮಸ್ಕಾರ ಸ್ನೇಹಿತರೆ ನೀವೇನಾದರೂ ಪಿಯುಸಿ ಅಥವಾ ಪದವಿಯನ್ನು ಪೂರ್ಣಗೊಳಿಸಿದ್ದು ಸರ್ಕಾರಿ ಹುದ್ದೆಯ ಹುಡುಕಾಟದಲ್ಲಿದ್ದರೆ ನಿಮಗೊಂದು ಸುವರ್ಣ ಅವಕಾಶ ಇದೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಈ ನೇಮಕಾತಿ ಮೂಲಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನ ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದು  03-06-2026 ರ ಮುಂಚೆ ಅಥವಾ ಅದಕ್ಕೂ ಮೊದಲು KEA Recruitment ಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ತಲುಪಿ

KEA Recruitment ಹುದ್ದೆಗಳ ಅಧಿಸೂಚನೆ ವಿವರ

ನೇಮಕಾತಿ ಸಂಸ್ಥೆ ಹೆಸರು :  ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆಗಳ ಹೆಸರು :  ಸಹಾಯಕ ಹುದ್ದೆಗಳು (ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ)
ಒಟ್ಟು ಹುದ್ದೆಗಳ ಸಂಖ್ಯೆ :  06
ಉದ್ಯೋಗ ನಿರ್ವಹಣೆ ಸ್ಥಳ : ಬೆಂಗಳೂರು, ಕರ್ನಾಟಕ
ಸಂಬಳ (ತಿಂಗಳಿಗೆ) : 34,100/- ರೂಗಳಿಂದ 83,700/- ರೂಗಳು

ಈ KEA Recruitment ನ ಅರ್ಹತೆಯ ಮಾಹಿತಿ

KEA Recruitment ನ ಹುದ್ದೆಗಳ ಹಂಚಿಕೆ
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ
ಪ್ರಥಮ ದರ್ಜೆ ಸಹಾಯಕ 02
ದ್ವಿತೀಯ ದರ್ಜೆ ಸಹಾಯಕ 04

 

ಶೈಕ್ಷಣಿಕ ವಿದ್ಯಾರ್ಹತೆ

KEA Recruitment ನ  ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ಪದವಿಯನ್ನು ಪಡೆದಿರಬೇಕು

KEA Recruitment ನ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಇಂದ ದ್ವಿತೀಯ ಪಿಯುಸಿ ಯನ್ನು ಪೂರ್ಣಗೊಳಿಸಿರಬೇಕು

ವೇತನದ ವಿವರಗಳು

ಹುದ್ದೆಯ ಹೆಸರು ವೇತನ (ಮಾಸಿಕ)
ಪ್ರಥಮ ದರ್ಜೆ ಸಹಾಯಕ 44,425/- ರೂಗಳಿಂದ 83,700/- ರೂಗಳು
ದ್ವಿತೀಯ ದರ್ಜೆ ಸಹಾಯಕ 34,100/- ರೂಗಳಿಂದ 67,700/- ರೂಗಳು

 

ವಯೋಮಿತಿ ವಿವರ

ಈ KEA Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನೇಮಕಾತಿ ಸೂಚನೆಯ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಿನವರು ಆಗಿರಬೇಕು

ವಯೋಮಿತಿ ಸಡಿಲಿಕೆ

ಈ KEA Recruitment ಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವರ್ಗದ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ನೀಡಲಾಗುವುದು ವಯೋಮಿತಿ ಸಡಿಲಿಕೆ ಮಾಹಿತಿ ಈ ಕೆಳಕಂಡಂತಿದೆ

2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ :  3 ವರ್ಷಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ರ ಅಭ್ಯರ್ಥಿಗಳಿಗೆ : 05 ವರ್ಷಗಳು

KEA Recruitment ಗೆ ಪಾವತಿಸಬೇಕಾದ ಆನ್ಲೈನ್ ಅರ್ಜಿ ಶುಲ್ಕ

ಸಾಮಾನ್ಯ, 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ : 750/- ರೂಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 500/- ರೂಗಳು
ಅಂಗವಿಕಲ ಅಭ್ಯರ್ಥಿಗಳಿಗೆ : 250/- ರೂಗಳು

KEA Recruitment ನ ನೇಮಕಾತಿ ಆಯ್ಕೆ ಪ್ರಕ್ರಿಯೆ 

ಲಿಖಿತ ಪರೀಕ್ಷೆ : ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯು ಭಾಷಾ ಪ್ರಾವಿಣ್ಯತೆ ಸಾಮಾನ್ಯ ಅಧ್ಯಯನ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳನ್ನು ಹೊಂದಿದ್ದು ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಭಾರತೀಯ ಸಂವಿಧಾನ ಇತಿಹಾಸ ಮತ್ತು ಭೂಗೋಳ ಶಾಸ್ತ್ರ ಸಾಮಾನ್ಯ ವಿಜ್ಞಾನ ಮತ್ತು ದೈನಂದಿನ ವೀಕ್ಷಣೆ ಪ್ರಚಲಿತ ಘಟನೆಗಳು ಹಾಗೂ ರಾಜ್ಯದ ವಿಶೇಷಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವುದಾದರೆ ಈ ಪರೀಕ್ಷೆಯಲ್ಲಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಹಾಗೂ ಸಾಮಾನ್ಯ ಇಂಗ್ಲಿಷ್ ಪರೀಕ್ಷೆ ಸಹ ಇರುತ್ತದೆ

ಸಂದರ್ಶನ : ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉದ್ಯಾನಗೊಂಡ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಆಯೋಜಿಸಿ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಬೇಕಾಗುವ ಸಂವಹನ ಜ್ಞಾನ ತಾಂತ್ರಿಕ ಜ್ಞಾನ ಹಾಗೂ ಇತರೆ ಅರ್ಹತೆಗಳನ್ನು ಪರೀಕ್ಷಿಸಲಾಗುತ್ತದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ

  • ಈ KEA Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಸಹಾಯಕ ಹುದ್ದೆಗಳಿಗೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅಭ್ಯರ್ಥಿಗಳು ಅರ್ಹತಮಾನದಂಡಗಳನ್ನು ಪೂರೈಸಬಹುದೇ ಎಂದು ಖಚಿತ ಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಬಹುದು ನೇಮಕಾತಿ ಲಿಂಕ್ ಅನ್ನು ನಾವು ಕೆಳಗೆ ನೀಡಿದ್ದೇವೆ
  • ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸಮೂಹನದ ಉದ್ದೇಶಕ್ಕಾಗಿ ಸರಿಯಾಗಿರುವ ಹಾಗೂ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಹಾಗೆಯೇ ತಮ್ಮ ವೈಯಕ್ತಿಕ ದಾಖಲೆ ಶೈಕ್ಷಣಿಕ ದಾಖಲೆ ವಯೋಮಿತಿ ಸಡಿಲಿಕೆ ಸಂಬಂಧಿಸಿದಕಲೆ ಹಾಗೂ ಇನ್ನಿತರ ಮುಖ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ವಿಭಾಗದಲ್ಲಿ ಕೆಇಎ ಅಸಿಸ್ಟೆಂಟ್ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಆನ್ಲೈನ್ ಭರ್ತಿ ನಮ್ಮೂರಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ವಿವರಗಳನ್ನು ಸ್ಪಷ್ಟವಾಗಿ ಯಾವುದೇ ತಪ್ಪಿಲ್ಲದೆ ನಮೂದಿಸಿ ಅಗತ್ಯವಿದ್ದಲ್ಲಿ ನವೀಕರಿಸಿ
  • ನಂತರ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಕೇಳಲಾಗುವುದು ತಿಳಿಸಲಾಗಿರುವ ದಾಖಲಾತಿಗಳನ್ನು ಹಾಗೂ ನಿಮ್ಮ ಭಾವಚಿತ್ರ ಹಾಗು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ನಂತರ ನೀವು ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ದಾಖಲೆಗಳು ಎಲ್ಲವೂ ಸರಿಯಾಗಿವೆ ಎಂದು ಪರಿಶೀಲಿಸಿಕೊಳ್ಳಿ
  • ನಿಮ್ಮ ಅನ್ವಯಿತ ವರ್ಗದ ಪ್ರಕಾರ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ
  • ನಿಮ್ಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹಾಯಕ ಹುದ್ದೆಗಳಿಗೆ ಸಲ್ಲಿಸುವ ಅರ್ಜಿಯನ್ನು ಯಶಸ್ವಿಗೊಳಿಸಲು ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಹಾಗೂ ಬಹು ಮುಖ್ಯವಾಗಿ ನಿಮ್ಮ ಅರ್ಜಿ ನೋಂದಣಿ ಸಂಖ್ಯೆ ಮತ್ತು ವಿನಂತಿ ಸಂಖ್ಯೆಯನ್ನು ಪಡೆಯಿರಿ ಈ ನೊಂದಣಿ ಸಂಖ್ಯೆಗಳನ್ನು ಉಪಯೋಗಿಸಿಕೊಂಡು ತಮ್ಮ ಆನ್ಲೈನ್ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

KEA Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 20-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-06-2026
ಆನ್ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 04-06-2026

ಗಮನಿಸಿ : ಈ ಸಹಾಯಕ ಹುದ್ದೆಗಳು ಕರ್ನಾಟಕ ರಾಜ್ಯ ಸರ್ಕಾರದ ಸರ್ಕಾರಿ ಹುದ್ದೆಗಳು ಆಗಿರುವುದರಿಂದ ಸ್ವೀಕೃತ ಗೊಳ್ಳುವ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ, ಆದುದರಿಂದ ಕೊನೆಯ ಕ್ಷಣಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಅಧಿಕೃತ ಅಧಿಸೂಚನೆಯನ್ನು ಇಂದೇ ಓದಿ ಅರ್ಜಿ ಸಲ್ಲಿಸಿ

ಪ್ರಮುಖ ಲಿಂಕುಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ :  ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಅಧಿಕೃತ ಅಧಿಸೂಚನೆಯನ್ನು ಓದಲು ಪಿಡಿಎಫ್ : KEA Recruitment Notification
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು :  ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಉಚಿತ ಮಾಕ್‌ ಟೆಸ್ಟ್‌ ಗಳು :  Mock Tests

ಕರ್ನಾಟಕ ಸರ್ಕಾರದ ಪರೀಕ್ಷಾ ಸಂಸ್ಥೆಯಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ರ ನೇಮಕಾತಿ ದಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು ಈ ನೇಮಕಾತಿ ಮೂಲಕ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಪಿಯುಸಿ ಮತ್ತು ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಪ್ರಥಮ ದರ್ಜೆ ಸಹಾಯಕ ಹಾಗು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಈ ಹುದ್ದೆಗಳು ಕರ್ನಾಟಕ ಸರ್ಕಾರದ ರಾಜ್ಯ ಸರ್ಕಾರ ಹುದ್ದೆಗಳು ಆಗಿರುವುದರಿಂದ ಸ್ಪರ್ಧೆ ಹೆಚ್ಚಿರುತ್ತದೆ ಹಾಗಾಗಿ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ನೌಕರಿಯನ್ನು ಪಡೆಯಬೇಕೆಂಬ ಕನಸನ್ನು ಸಹಕಾರ ಗೊಳಿಸಿ

KEA Recruitment 2026 –  FAQ’s

1) ಈ KEA ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು?
ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಯಾವುದೇ ಪದವಿ ಪೂರೈಸಿದವರು ಅರ್ಜಿ ಹಾಕಬಹುದು. ಹಾಗೆಯೇ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪಿಯುಸಿ ಪಾಸ್‌ ಆದವರು ಅರ್ಜಿ ಸಲ್ಲಿಸಬಹುದು.

2) ಈ ಹುದ್ದೆಗಳಿಗೆ ವಯೋಮಿತಿ ಎಷ್ಟಿದೆ?
ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯಸ್ಸಿನವರು ಅರ್ಜಿ ಹಾಕಬಹುದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗುತ್ತದೆ.

3) ಆಯ್ಕೆ ಪ್ರಕ್ರಿಯೆ ಹೇಗಿದೆ?
ಮೊದಲು ಲಿಖಿತ ಪರೀಕ್ಷೆ ನಡೆಯುತ್ತದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ (Interview) ದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

4) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-06-2026. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 04-06-2026 ಆಗಿರುತ್ತದೆ.

5) ಈ ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸಬೇಕು?
KEA ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, Recruitment ವಿಭಾಗದಲ್ಲಿ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ ಹಾಗೂ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಮಾಡಬೇಕು.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment