Telegram Join My Telegram WhatsApp Join My WhatsApp

Basava Housing Scheme 2026, Big Update : ಪಡೆಯಿರಿ ಉಚಿತ ಮನೆ. ಅರ್ಜಿ, ಅರ್ಹತೆ, ದಾಖಲೆ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

ಸ್ವಂತ ಮನೆ ಇಲ್ಲದವರಿಗೆ ಭರ್ಜರಿ ಗುಡ್ ನ್ಯೂಸ್ ಸರಕಾರದಿಂದ ಉಚಿತ ಮನೆ ( Basava Housing Scheme )

ನಾವು ಹುಟ್ಟಿದ ಮೇಲೆ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಮಹಾದಾಸೆ ಆಗಿರುತ್ತದೆ ಆದರೆ ಬಡತನ ಆರ್ಥಿಕ ಪರಿಸ್ಥಿತಿ ಹಾಗೂ ಭೂಮಿಯನ್ನು ಹೊಂದದಿರುವ ಕಾರಣ ಹಲವರು ಮನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ ಆದರೆ ಸರ್ಕಾರವು ಇದೀಗ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಕನಸನ್ನು ನನಸಾಗಿಸುವ ಒಂದು ಯೋಜನೆಯನ್ನು ತಂದಿದೆ ಅದೇ ಬಸವ ವಸತಿ ಯೋಜನೆ. ಈ ಯೋಜನೆಯ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ಮನೆ ಹಾಗೂ ಅದರ ನಿರ್ಮಾಣಕ್ಕೆ ಸಹಾಯಧನವನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿದೆ ಅದರಂತೆಯೇ ಮನೆಯನ್ನು ನಿರ್ಮಿಸಬೇಕೆಂಬ ಕನಸನ್ನು ಹೊಂದಿರುವವರು ಈ  Basava Housing Scheme ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು ನಾವು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಕೊನೆಯವರೆಗೂ ಓದಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ

ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಉದ್ಯೋಗವನ್ನು ಕಟ್ಟಿಕೊಳ್ಳಲು ಜನರು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದು ನಾವಿಂದು ಕಾಣುತ್ತೇವೆ ಹೀಗೆ ಬಂದು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಕೆಲವರು ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ ಆದುದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಯೋಜನೆಯು ತುಂಬಾ ಉಪಯುಕ್ತವಾಗಿದ್ದು ಸರ್ಕಾರದಿಂದ ಅಧಿಕೃತವಾಗಿ ಮನೆ ನಿರ್ಮಾಣ ಮಾಡಲು ಆರ್ಥಿಕ ನೆರವು ಸಿಗುತಿದೆ ಈ ಯೋಜನೆಯನ್ನು ಬಳಸಿಕೊಂಡು ಈಗಾಗಲೇ ಹಲವು ಕುಟುಂಬಗಳು ಅವರ ಸ್ವಂತ ಮನೆಯನ್ನು ಕಟ್ಟಬೇಕೆಂಬ ಆಸೆಯನ್ನು ಸಾಕಾರ ಮಾಡಿದ್ದಾರೆ ಆದುದರಿಂದ ಅರ್ಹತೆಯನ್ನು ತಿಳಿದುಕೊಂಡು ಇಂದೇ Basava Housing Scheme ಗೆ  ಅರ್ಜಿ ಸಲ್ಲಿಸುವುದು ಉತ್ತಮ

Pradhan Manthri Awas Yojana 2.0: ಉಚಿತ ಸೈಟ್ + ಮನೆಗೆ ಸಹಾಯಧನ! ಅರ್ಜಿ ಪ್ರಾರಂಭ – ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

ಬಸವ ವಸತಿ ಯೋಜನೆ (Basava Housing Scheme) ಎಂದರೆ ಏನು

ಕರ್ನಾಟಕ ಸರ್ಕಾರವು ವಸತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವ ನಿಟ್ಟಿನಲ್ಲಿ ತಂದಿರುವ ಯೋಜನೆ ಇದಾಗಿದ್ದು ಮುಖ್ಯವಾಗಿ ಸರ್ಕಾರದ ಗೃಹ ನಿರ್ಮಾಣ ಯೋಜನೆಗಳಲ್ಲಿ ಒಂದಾಗಿದ್ದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಾಗೂ ಯಾವ ಕುಟುಂಬವು ಸ್ವಂತ ಮನೆಯನ್ನು ಹೊಂದಿಲ್ಲವೋ ಆ ಕುಟುಂಬಗಳಿಗೆ ಮನೆಯನ್ನು ವಂದಿಸುವ ಯೋಜನೆ ಇದಾಗಿದೆ

ಈ ಯೋಜನೆಯ ಕೆಲ ಉದ್ದೇಶಗಳು ಈ ಕೆಳಕಂಡಂತಿವೆ

  • ವಸತಿ ವ್ಯವಸ್ಥೆ ಅಥವಾ ಮನೆ ಇಲ್ಲದವರಿಗೆ ಸ್ವಂತ ಮನೆಯನ್ನು ಒದಗಿಸುವುದು
  • ಬಡವರ ಹಾಗೂ ದುರ್ಬಲ ವರ್ಗದ ಜನರಿಗೆ ವಸತಿ ನೆರವನ್ನು ನೀಡುವುದು
  • ಗ್ರಾಮೀಣ ಭಾಗ ಹಾಗೂ ಹರೆ ಗ್ರಾಮೀಣ ಭಾಗದ ಜನರಿಗೆ ಮನೆ ನಿರ್ಮಿಸುವ ಮೂಲಕ ಅವರಿಗೆ ವಸತಿ ಭದ್ರತೆಯನ್ನು ಬಲಪಡಿಸುವುದು
  • ಮಹಿಳಾ ಪ್ರಧಾನ ಕುಟುಂಬಗಳಿಗೆ ಅಂದರೆ ಯಾವ ಮನೆಯಲ್ಲಿ ಮಹಿಳೆಯು ಪ್ರಧಾನ ನಿರ್ವಹಕರಾಗಿದ್ದಾರೆಯೋ ಆ ಮನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು
  • ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜೊತೆಯಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷ ವಸತಿ ಸೌಲಭ್ಯವನ್ನು ರೂಪಿಸಿ ಅವರಿಗೆ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕಲ್ಪಿಸುವುದು

ಅರ್ಹತಾ ಮಾನದಂಡಗಳು

Basava Housing Scheme ಗೆ  ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕೆಲವು ಅರ್ಹತಮಾನದಂಡಗಳನ್ನು ಪೂರೈಸಬೇಕಾಗುತ್ತದೆ ಅರ್ಹತೆಗಳು ಈ ಕೆಳಕಂಡಂತಿವೆ

  • ಈ Basava Housing Scheme ಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು ಹಾಗೂ ವಾಸ ಸ್ಥಳ ಪ್ರಮಾಣ ಪತ್ರವನ್ನು ಹೊಂದಿರಬೇಕು
  • ಕುಟುಂಬಕ್ಕೆ ಯಾವುದೇ ಸ್ವಂತ ಮನೆ ಇರಬಾರದು ಅಂದರೆ ಕುಟುಂಬದ ಯಾವುದೇ ಸದಸ್ಯರ ಹೆಸರಲ್ಲಿ ಸ್ವಂತ ಮನೆ ಇರಬಾರದು ಹಾಗೂ ಯಾವುದೇ ನೋಂದಣಿ ಪ್ರಕ್ರಿಯೆ ಸಹ ಚಾಲ್ತಿಯಲ್ಲಿ ಇರಬಾರದು
  • ಕುಟುಂಬವು ಪಡಿತರ ಚೀಟಿ ಪ್ರಕಾರ ಬಿಪಿಎಲ್ ಅಥವಾ ಕಡಿಮೆ ಆದಾಯದ ಕುಟುಂಬವಾಗಿರಬೇಕು ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡು ಹೊಂದಿರಬೇಕು
  • ಸರ್ಕಾರವು ನಿಗದಿಪಡಿಸಿರುವ ವಾರ್ಷಿಕ ಆದಾಯದ ಮಿತಿಯ ಒಳಗೆ ಇರಬೇಕು
  • ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದಲ್ಲಿ ಇರುವ ವಸತಿರಹಿತ ಕುಟುಂಬಗಳಿಗೆ ಮೊದಲ ಮತ್ತು ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು

ಈ ಯೋಜನೆಯಿಂದ ಸಿಗುವ ಸೌಲಭ್ಯಗಳು ಹಾಗೂ ಸವಲತ್ತುಗಳು

ಈ  Basava Housing Scheme ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹಲವು ಲಾಭಗಳನ್ನು ಪಡೆಯಬಹುದು ಅದರಲ್ಲಿ ಪ್ರಮುಖವಾದವು ಈ ಕೆಳಕಂಡಂತಿವೆ

  • ಸ್ವಂತ ಮನೆ ನಿರ್ಮಾಣಕ್ಕೆ 1.5 ಲಕ್ಷ ಸಹಾಯಧನ ಮತ್ತು ವಿಸ್ತರಿಸಬಹುದಾದ ಸಹಾಯಧನ
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಅರ್ಜಿದಾರರಿಗೆ ಉಚಿತ ನಿರ್ಮಾಣ ಸಾಮಗ್ರಿಗಳನ್ನು ಒದಗಿಸುವುದು ನಿರ್ಮಾಣ ಕಾರ್ಯವು ಚಾಲ್ತಿಯಲ್ಲಿರುವಾಗ ಹಂತ ಹಂತವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುವುದು
  • ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಮತ್ತು ಈ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ವಿಶೇಷ ಸಬ್ಸಿಡಿಯನ್ನು ನೀಡುವುದು
  • ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮನೆ ಮಂಜೂರು ಮಾಡುವ ಮೂಲಕ ಮಹಿಳಾ ಸಬಲೀಕರಣವನ್ನು ಸಾಧಿಸುವುದು

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು

Basava Housing Scheme ಅನ್ನು ಪಡೆಯುವಲ್ಲಿ ದಾಖಲೆಗಳು ಪ್ರಮುಖ ಪಾತ್ರ ವಹಿಸುತ್ತವೆ ಏಕೆಂದರೆ ದಾಖಲೆಗಳೇ ಯೋಜನೆಯ ಅರ್ಹತೆ ಹಾಗೂ ಅನುಮೋದನೆ ಯಾಗುವ ಸಂಭವವನ್ನು ಹೆಚ್ಚಿಸುತ್ತದೆ ಆದ್ದರಿಂದ ಈ ಕೆಳಗಿರುವ ದಾಖಲಾತಿಗಳನ್ನು ಹಿಂದೆ ಸಿದ್ಧಪಡಿಸಿ

  • ಆಧಾರ್‌ ಕಾರ್ಡ್‌ :  ಕಡ್ಡಾಯವಾಗಿ ಮನೆಯ ಎಲ್ಲಾ ಸದಸ್ಯರು ಆಧಾರ್ ಕಾರ್ಡ್ ಗಳನ್ನು ಹೊಂದಿರಿ
  • ಪಡಿತರ ಚೀಟಿ : ಪಡಿತರ ಚೀಟಿಯ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡನ್ನು ಸಿದ್ಧವಾಗಿಟ್ಟುಕೊಳ್ಳಿ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ : ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಚಾಲ್ತಿಯಲ್ಲಿಟ್ಟುಕೊಳ್ಳಿ ಒಂದು ವೇಳೆ ನಿಮ್ಮ ಜಾತಿ ಅಥವಾ ಅದೇ ಪ್ರಮಾಣ ಪತ್ರವೂ ಅವಧಿ ಮುಗಿದಿದ್ದರೆ ಹಿಂದೆ ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಹೊಂದಿಸಿ ತಮ್ಮ ಹತ್ತಿರದ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿ        ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಅವಧಿ ಇಲ್ಲಿ ತಿಳಿಯಿರಿ       
  • ಬ್ಯಾಂಕ್ ಖಾತೆ : ಬ್ಯಾಂಕ್ ಖಾತೆಯ ಪ್ರತಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ರಾಷ್ಟ್ರೀಕೃತಗೊಂಡ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದುವುದು ಕಡ್ಡಾಯವಾಗಿದೆ ನಿರ್ಮಾಣ ಕ್ರಿಯೆಯ ಹಣವು ಈ ಖಾತೆಗೆ ಜಮೆಯಾಗುವುದರಿಂದ ಡಿಪಿಟಿ ಲಿಂಕ್ ಆಗಿರುವಂತೆ ನೋಡಿಕೊಳ್ಳಿ (ಡಿ ಬಿ ಟಿ ಸ್ಥಿತಿಯನ್ನು ತಮ್ಮ ಆಧಾರ್‌ ಗೆ  ಲಾಗಿನ್‌ ಆಗಿ ಚೆಕ್‌ ಮಾಡಬಹುದು     ಲಾಗಿನ್‌ ಆಗಲು ಇಲ್ಲಿ ಕ್ಲಿಕ್‌ ಮಾಡಿ
  • ಭಾವಚಿತ್ರಗಳು : ಪಾಸ್ಪೋರ್ಟ್ ಸೈಜ್ ಫೋಟೋ ಅರ್ಜಿದಾರರು ಹಾಗೂ ಮನೆಯ ಸದಸ್ಯರ ಎಲ್ಲಾ ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ಸಿದ್ಧವಿರಿಸಿ 
  • ನಿವಾಸದ ಪ್ರಮಾಣ ಪತ್ರ : ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ನಿವಾಸ ಪ್ರಮಾಣ ಪತ್ರ ಅಂದರೆ ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದೇವೆ ಎಂದು ದೃಢೀಕರಿಸಲು ತಾಸಿಲ್ದಾರ್ ರವರಿಂದ ವಾಟ್ಸಾಪ್ ಪ್ರಮಾಣ ಪತ್ರವನ್ನು ಪಡೆದುಕೊಂಡರೆ ಅನುಮೋದನೆ ಸುಲಭವಾಗಿ ವಾಗುತ್ತದೆ 
  • ಮೊಬೈಲ್ ನಂಬರ್ :  ಈ ಡಿಜಿಟಲ್ ಯುಗದಲ್ಲಿ ಓಟಿಪಿ ದೃಢೀಕರಣವು ಮುಖ್ಯವಾಗಿರುವುದರಿಂದ ವೈಯಕ್ತಿಕ ಮೊಬೈಲ್ ನಂಬರ್ ಅನ್ನು ಹೊಂದಿರಿ ಹಾಗೂ ಈ ಮೊಬೈಲ್ ನಂಬರನ್ನು ಯೋಜನೆಯ ಅನುಮೋದನೆ ಹಾಗೂ ಪೂರ್ಣಗೊಳ್ಳುವವರೆಗೂ ಹುಷಾರಾಗಿಟ್ಟುಕೊಳ್ಳಿ  

ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ

Basava Housing Scheme ಯೋಜನೆಗೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಲ್ಲ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಂಡು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳುವುದರ ಮೂಲಕ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬಹುದು

  • Basava Housing Scheme ಗೆ  ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮೊದಲು ಬಸವ ವಸತಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು
  • ಭೇಟಿ ನೀಡಿದ ನಂತರ ಹೌಸಿಂಗ್ ಸ್ಕೀಮ್ ಅಪ್ಲಿಕೇಶನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
  • ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿ ತೆರೆಯುತ್ತದೆ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ವಾಸ ಸ್ಥಳದ ಮಾಹಿತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ  ಹಾಗೂ ಸಂಬಂಧಿಸಿದ ಕೇಳಲಾಗುವ ಎಲ್ಲಾ ಮಾಹಿತಿಯನ್ನು ನಿಖರವಾಗಿ ಯಾವುದೇ ತಪ್ಪು ಇಲ್ಲದೆ ನಮೂದಿಸಿ
  • ಕೇಳಲಾಗುವ ಅಗತ್ಯ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ
  • ಅಪ್ಲೋಡ್ ಮಾಡಿದ ನಂತರ ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ತಾವು ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ದಾಖಲೆಯನ್ನು ಮರುಪರಿಶೀಲಿಸಿ
  • ನಂತರ ಕೊನೆಯದಾಗಿ ಅರ್ಜಿಯನ್ನು ಸಲ್ಲಿಸು ಎಂಬಲ್ಲಿ ಪಿಕ್ ಮಾಡುವುದರ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು
  • ನಂತರ ಸ್ಕ್ರೀನ್ನ ಮೇಲೆ ಕಾಣುವ ನೋಂದಣಿ ಸಂಖ್ಯೆಯನ್ನು ಬರೆದು ಇಟ್ಟುಕೊಳ್ಳಿ ಅಥವಾ ಉಳಿಸಿಕೊಳ್ಳಿ ಈ ನಂಬರನ್ನು ಬಳಸಿಕೊಂಡು ತಮ್ಮ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು

ಅಧಿಕೃತ ವೆಬ್‌ ಸೈಟ್‌ : ಬಸವ ವಸತಿ ಯೋಜನೆ

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು : 1 BHK ಮನೆಗೆ ಅರ್ಜಿ        2 BHK ಮನೆಗೆ ಅರ್ಜಿ 

ನಮ್ಮ ವಾಟ್ಸಾಪ್‌ ಗುಂಪು ಸೇರಲು : ಇಲ್ಲಿ ಕ್ಲಿಕ್‌ ಮಾಡಿ

Basava Housing Scheme ಗೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಸ್ಥಿತಿಯನ್ನು ತಿಳಿಯುವುದು ಹೇಗೆ

Basava Housing Scheme ಗೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ನೋಂದಣಿ ಸಂಖ್ಯೆಯು ಬರುವುದರಿಂದ ತಮ್ಮ ಅರ್ಜಿಯ ಸ್ಥಿತಿಯನ್ನು ಸುಲಭವಾಗಿ ನೀವೇ ಪರಿಶೀಲಿಸಬಹುದು ಅದಕ್ಕೆ ಅನುಸರಿಸಬೇಕಾದ ವಿಧಾನ ಈ ಕೆಳಕಂಡಂತಿದೆ

  • ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಲಾಗಿನ್ ಆಗಿ
  • ನಂತರ ಅಲ್ಲಿ ಕಾಣಿಸಿರುವ ಬೆನಿಫಿಶಿಯರಿ ಮಾಹಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮಗೆ ಸಂಬಂಧಪಟ್ಟ ಜಿಲ್ಲೆಯನ್ನು ಆಯ್ಕೆ ಮಾಡಿ ಸಲ್ಲಿಸಿ
  • ನಂತರ ಅಲ್ಲಿ ಅರ್ಜಿ ಸಂಖ್ಯೆಯನ್ನು ನಮೂದಿಸಲು ಕೇಳಲಾಗುವುದು ತಮ್ಮ ಅರ್ಜಿ ಸಂಖ್ಯೆಯನ್ನು ತಪ್ಪಿಲ್ಲದೆ ನಮೂದಿಸಿ
  • ನೊಂದಣಿ ಸಂಖ್ಯೆಯನ್ನು ನಮೂದಿಸಿ ನಂತರ ಸ್ಟೇಟಸ್ ಕೇಳಿರಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು

ಇದು ಗ್ರಾಮೀಣ ಪ್ರದೇಶದ ಕಲ್ಪವೃಕ್ಷ ವಸತಿ ಯೋಜನೆ

ಬಸವ ವಸತಿ ಯೋಜನೆಯನ್ನು (Basava Housing Scheme) ಗ್ರಾಮೀಣ ಭಾಗದ ಜನರಿಗೆ ಕಲ್ಪವೃಕ್ಷ ಯೋಜನೆ ಎಂದೇ ಹೇಳಬಹುದು ಏಕೆಂದರೆ ಈಗಾಗಲೇ ಸಾವಿರಾರು ಬಡ ಕುಟುಂಬಗಳು ಸ್ವಂತ ಮನೆಯನ್ನು ಪಡೆದಿದ್ದು ಜಮೀನು ಇದ್ದರು ಮನೆ ಕಟ್ಟಲು ಆರ್ಥಿಕ ಸಹಾಯ ದೊರೆಯುವುದರಿಂದ ಈ ಯೋಜನೆಯು ಬಹಳ ಉಪಕಾರಿಯಾಗಿದೆ ಅಂತೆಯೇ ಸರಕಾರದಿಂದ ಸಿಗುವ ಸಹಾಯಧನ ಸಬ್ಸಿಡಿ ಹಾಗೂ ಗೃಹ ಉಪಯೋಗಿ ಗೃಹ ನಿರ್ಮಾಣ ವಸ್ತುಗಳು ಉಚಿತವಾಗಿ ಸಿಗುವುದರಿಂದ ಮನೆಯಲ್ಲಿ ನಿರ್ಮಿಸಿಕೊಳ್ಳುವುದು ಸುಲಭವಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅರ್ಜಿದಾರರಿಗೆ ಮನೆಯನ್ನು ಮಂಜೂರು ಮಾಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ

ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರು ಗಮನಿಸಬೇಕಾದ ಪ್ರಮುಖ ಅಂಶಗಳು

  • ತಾವು ಹೊಂದಿರುವ ಭೂಮಿ ಹಾಗೂ ಪ್ರಮಾಣ ಪತ್ರಗಳಲ್ಲಿ ಯಾವುದೇ ತಪ್ಪು ಮಾಹಿತಿ ಇರಬಾರದು
  • ತಾವು ನೀಡುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಮತ್ತು ಡಿ ಬಿ ಟಿ ಸ್ಟೇಟಸ್ ಸಕ್ರಿಯವಾಗಿರಬೇಕು
  • ತಾವು ಹೊಂದಿರುವ ಮೊಬೈಲ್ ಸಂಖ್ಯೆ ಸರಿಯಾಗಿದ್ದು ರಿಚಾರ್ಜ್ ಹೊಂದಿರಬೇಕು ಹಾಗೂ ಯಾವುದೇ ನಿರ್ಬಂಧಗಳನ್ನು ಹೊಂದಿರಬಾರದು
  • ಅರ್ಜಿ ನಮೂನೆಯಲ್ಲಿ ಯಾವುದೇ ತಪ್ಪು ಮಾಹಿತಿಯನ್ನು ನಮೂದಿಸಬಾರದು ನಮೂದಿಸಿದರೆ ಅರ್ಜಿ ರಿಜೆಕ್ಟ್ ಆಗಬಹುದು
  • ತಾವು ಬೇರೆ ಯಾವುದೇ ಮೂಲಗಳನ್ನು ಉಪಯೋಗಿಸಿ ಅರ್ಜಿ ಸಲ್ಲಿಸದೆ ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಮಧ್ಯವರ್ತಿಗಳನ್ನು ನಂಬುವುದನ್ನು ತಪ್ಪಿಸಿ

ಬಸವ ವಸತಿ ಯೋಜನೆಯು ಸಾಮಾನ್ಯ ಕುಟುಂಬಗಳ ಪಾಲಿಗೆ ವರದಾನವಾಗಿದೆ ಗೃಹ ನಿರ್ಮಾಣ ಪದಾರ್ಥಗಳಾದ ಸಿಮೆಂಟ್ ಇಟ್ಟಿಗೆ ಕಬ್ಬಿಣದ ಪದಾರ್ಥ ಹಾಗೂ ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು ಬಡ ಕುಟುಂಬಗಳಿಗೆ ಸ್ವಂತ ಮನೆಯನ್ನು ರೂಪಿಸುವ ಅವಕಾಶವನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ ಆದ್ದರಿಂದ ಬಸವ ವಸತಿ ಯೋಜನೆಯು ಕುಟುಂಬಕ್ಕೆ ಭದ್ರತೆ ನೀಡುವುದರ ಜೊತೆಯಲ್ಲಿ ಪ್ರಸ್ತುತ ಕಟ್ಟುತ್ತಿರುವ ಬಾಡಿಗೆ ವೆಚ್ಚವನ್ನು ಕಡಿಮೆ ಮಾಡಿ ಮಕ್ಕಳಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸಿ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ಮೂಲಕ ಮಹಿಳಾ ಸಬಲೀಕರಣವನ್ನು ಸಹ ಸಾಧಿಸಲಿವೆ

ಆರ್ಥಿಕ ಸಂಕಷ್ಟದಿಂದ ಸ್ವಂತ ಮನೆಯನ್ನು ಹೊಂದುವ ಕನಸನ್ನು ಮುಂದೂಡಿದ ಕುಟುಂಬಗಳಿಗೆ ಬಸವ ವಸತಿ ಯೋಜನೆಯು ದೊಡ್ಡ ಅವಕಾಶವಾಗಿದೆ ಆದುದರಿಂದ ಅರ್ಜಿದಾರರು ಈಗ ಕೂಡಲೇ ತಮ್ಮ ಅರ್ಹತಮಾನದಂಡಗಳನ್ನು ಪರಿಶೀಲಿಸಿ ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಿ ಸರ್ಕಾರದ ನಿಯಮದ ಪ್ರಕಾರ ಅರ್ಜಿ ಸಲ್ಲಿಸಿದರೆ ಸಹಾಯಧನವನ್ನು ಪಡೆಯುವ ಅವಕಾಶ ಹೆಚ್ಚಾಗುತ್ತದೆ ಆದ್ದರಿಂದ ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿ

Basava Housing Scheme – FAQ (Frequently Asked Questions)

1. ಬಸವ ವಸತಿ ಯೋಜನೆ ಎಂದರೇನು?
ಇದು ಕರ್ನಾಟಕ ಸರ್ಕಾರದ ಮನೆ ಯೋಜನೆ ಆಗಿದ್ದು, ಸ್ವಂತ ಮನೆ ಇಲ್ಲದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ಅಥವಾ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ

2.  ಬಸವ ವಸತಿ ಯೋಜನೆ ಅರ್ಜಿ ಸಲ್ಲಿಕೆಗೆ ಯಾರು ಅರ್ಹರು?
ಕರ್ನಾಟಕ ನಿವಾಸಿಯಾಗಿದ್ದು, ಸ್ವಂತ ಮನೆ ಇಲ್ಲದೇ, BPL ಅಥವಾ ಕಡಿಮೆ ಆದಾಯದ ಕುಟುಂಬಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

3. ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?
ಆಧಾರ್ ಕಾರ್ಡ್, BPL/ಅಂತ್ಯೋದಯ ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ನಿವಾಸ ಪ್ರಮಾಣ ಪತ್ರ ಹಾಗೂ ಮೊಬೈಲ್ ನಂಬರ್ ಹೊಂದಿರಬೇಕು

4. ಬಸವ ವಸತಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಮಾಡಬೇಕು.

5. ಅರ್ಜಿ ಸಲ್ಲಿಸಿದ ನಂತರ ಸ್ಟೇಟಸ್ ಚೆಕ್ ಹೇಗೆ ?
ಅಧಿಕೃತ ವೆಬ್‌ಸೈಟ್‌ನಲ್ಲಿ ಹೋಗಿ Application/Beneficiary Status ಆಯ್ಕೆಯಲ್ಲಿ ನೋಂದಣಿ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

Leave a Comment