ಮೆಟ್ರಿಕ್ ನಂತರದ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರಿಗೆ ಪ್ರಮುಖ ಮಾಹಿತಿ (Free Hostel Scheme)
ನಮಸ್ಕಾರ ಸ್ನೇಹಿತರೆ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶದಿಂದ ಬಂದು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಗುಡ್ ನ್ಯೂಸ್ ನೀಡಿದೆ ಅಂದರೆ ನಗರ ಪ್ರದೇಶಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಾಡಿಗೆ ಊಟದ ಖರ್ಚು ಹಾಗೂ ಇನ್ನಿತರ ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವಾಗದೇ ಇರುವವರಿಗೆ ಕರ್ನಾಟಕ ಸರ್ಕಾರವು ನೆರವಿಗೆ ನಿಂತಿದೆ ಅಂದರೆ ಉಚಿತವಾಗಿ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿಯನ್ನು ಆರಂಭಿಸಿದ್ದು ಈ ಕೂಡಲೇ ಅಪ್ಲೈ ಮಾಡಿ ತಮ್ಮ ವಿದ್ಯಾರ್ಥಿ ನಿಲಯದ ಹಾಗೂ ಕರ್ನಾಟಕ ಸರ್ಕಾರದ ಈ Free Hostel Scheme ನ ಯೋಜನೆಯ ಪ್ರಯೋಜನ ಪಡೆಯಿರಿ
ಕರ್ನಾಟಕ ಸರ್ಕಾರವು 20262ನೇ ಶೈಕ್ಷಣಿಕ ಸಾಲಿನಲ್ಲಿ ಉಚಿತ ವಸತಿ ನಿಲಯಗಳ ಪ್ರವೇಶಕ್ಕಾಗಿ ಮೆಟ್ರಿಕ್ ನಂತರದ ಕೋರ್ಸ್ ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ದಾಖಲಾತಿಯನ್ನು ಆರಂಭಿಸಿದೆ ಈ ಉಚಿತ ವಸತಿ ನಿಲಯಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ತೆರೆದಿದೆ ಉಚಿತ ವಸತಿ ಊಟದ ವ್ಯವಸ್ಥೆ ಹಾಗೂ ಓದಲು ಹೆಚ್ಚು ಸಮಯ ಕಲ್ಪಿಸುವ ನಿಟ್ಟಿನಲ್ಲಿ ಈ ಹಾಸ್ಟೆಲ್ ಗಳ ದಾಖಲಾತಿಯನ್ನು ತೆರೆಯಲಾಗಿದೆ ಆದುದರಿಂದ ನೀವೇನಾದರೂ ಗ್ರಾಮೀಣ ಪ್ರದೇಶದಿಂದ ಬಂದು ನಗರ ಪ್ರದೇಶ ಅಥವಾ ಪಟ್ಟಣ ಪ್ರದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ಇಂದೇ Free Hostel Scheme ಗೆ ಅರ್ಜಿ ಸಲ್ಲಿಸಿ ತಮ್ಮ ವಿದ್ಯಾರ್ಥಿ ನಿಲಯದ ಕಾಯ್ದಿರಿಸುವಿಕೆಯನ್ನು ಪೂರ್ಣಗೊಳಿಸಿ
ಯಾವ ಯಾವ ವಿದ್ಯಾರ್ಥಿಗಳು ಈ Free Hostel Scheme ವಿದ್ಯಾರ್ಥಿ ನಿಲಯ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಮೆಟ್ರಿಕ್ ನಂತರದ ಅಂದರೆ ಹತ್ತನೇ ತರಗತಿ ನಂತರದ ಹಾಗೂ ಉನ್ನತ ಶಿಕ್ಷಣಕ್ಕಾಗಿ ವ್ಯಾಸಂಗ ಮಾಡಲು ಬಂದಿರುವ ಬಡ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆಯಬಹುದು
- ಪದವಿ ಪೂರ್ವ ಕೋರ್ಸುಗಳು (PUC)
- ಪದವಿ ಕೋರ್ಸುಗಳು (Bachelor Degree)
- ಸ್ನಾತಕೋತ್ತರ ಪದವಿ ಕೋರ್ಸುಗಳು (Master Degree)
- ಡಿಪ್ಲೋಮಾ ಕೋರ್ಸುಗಳು (Diploma)
- ಇಂಜಿನಿಯರಿಂಗ್ ಕೋರ್ಸುಗಳು (Engineering)
- ವೈದ್ಯಕೀಯ ಕೋರ್ಸುಗಳು (Medical)
ಈ ಮೇಲಿನ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಹಾಗೂ ದಾಖಲಾಗುವವರು ಈ Free Hostel Scheme ಉಚಿತ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಸಲ್ಲಿಸಬಹುದು.
Free Hostel Scheme ಗೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು
ಎಸ್ ಎಸ್ ಸಿ ( SSP ID )ಪೋರ್ಟಲ್ ನ ವಿದ್ಯಾರ್ಥಿ ಐಡಿ : ಅಂದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಕರ್ನಾಟಕ ಸರ್ಕಾರದ ಅಧಿಕೃತ ವಿದ್ಯಾರ್ಥಿ ವೇತನ ತಂತ್ರಾಂಶವಾದ ಎಸ್ ಎಸ್ ಪಿ ಕೋರ್ಟನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ನೊಂದಣಿಗೊಂಡು ಈ ಸಂಖ್ಯೆಯ ಮೂಲಕವೇ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಈ ವಿದ್ಯಾರ್ಥಿನಿಲಯಕ್ಕೆ Free Hostel Scheme ಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳ ಬಳಿ ಕಡ್ಡಾಯವಾಗಿ ನೊಂದಾಯಿತವಾಗಿರುವ ಗುರುತಿನ ಸಂಖ್ಯೆ ಅಂದರೆ ಎಸ್ ಎಸ್ ಪಿ ಐ.ಡಿ ಇರಬೇಕಾಗುತ್ತದೆ
ನೀವು ಎಸ್ ಎಸ್ ಪಿ ಐಡಿ ಅನ್ನು ಹೊಂದಿಲ್ಲದೇ ಇದ್ದರೆ ಇಲ್ಲಿ ಕ್ಲಿಕ್ ಮಾಡಿ ಖಾತೆಯನ್ನು ತೆರೆಯಿರಿ : ಎಸ್ ಎಸ್ ಪಿ ಖಾತೆ ಸೃಜಿಸು
ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದಾಖಲೆ : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಹಾಗೂ ತಹಸೀಲ್ದಾರ್ ಅವರಿಂದ ಪಡೆದ ಮಾನ್ಯತೆ ಇರುವ ಹಾಗೂ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ ವಿಶೇಷ ಸೂಚನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಪ್ರವರ್ಗ ಒಂದರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರವು ಜೀವಿತಾವಧಿಯಲ್ಲಿದ್ದು ಆದಾಯ ಪ್ರಮಾಣ ಪತ್ರ ಐದು ವರ್ಷಗಳಿಗೊಮ್ಮೆ ಅವಧಿ ಮುಗಿಯುತ್ತದೆ ಹಾಗೂ ಇತರ ಹಿಂದುಳಿದ ವರ್ಗಗಳು ಹಾಗೂ ಮೈನಾರಿಟಿ ವರ್ಗಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒಂದು ಪ್ರಮಾಣ ಪತ್ರದಲ್ಲಿ ಇದ್ದು ಐದು ವರ್ಷಗಳಿಗೊಮ್ಮೆ ಅವಧಿ ಮುಗಿಯುತ್ತದೆ
ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಚಾಲ್ತಿಯಲ್ಲಿದೆ ಎಂದು ಪರಿಶೀಲಿಸಿಕೊಳ್ಳಿ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ : ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಅವಧಿ ಪರಿಶೀಲನೆ
ಕಾಲೇಜು ಪ್ರವೇಶಾತಿ ಸಂಖ್ಯೆ : ವಿದ್ಯಾರ್ಥಿಗಳು ತಾವು ದಾಖಲಾಗಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಪಡೆದ ನೊಂದಣಿ ಸಂಖ್ಯೆ ಅಥವಾ ಕಾಲೇಜಿನ ಅಡ್ಮಿಷನ್ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದಿರಬೇಕಾಗುತ್ತದೆ ಕಾಲೇಜು ವಿದ್ಯಾರ್ಥಿಯ ಮಾಹಿತಿಯನ್ನು ನೊಂದಣಿ ಸಂಖ್ಯೆಯಲ್ಲಿ ನಮೂದು ಮಾಡುವುದರಿಂದ ಕೇವಲ ಸಂಖ್ಯೆಯನ್ನು ನಮೂದಿಸುವ ಮೂಲಕ ವಿದ್ಯಾರ್ಥಿಯ ಮಾಹಿತಿಯನ್ನು ಪಡೆಯಬಹುದು Free Hostel Scheme ಗೆ ಅರ್ಜಿ ಸಲ್ಲಿಸಬಹುದು
ಚಾಲ್ತಿರುವ ಮೊಬೈಲ್ ನಂಬರ್ : ಪ್ರತಿಯೊಬ್ಬ ವಿದ್ಯಾರ್ಥಿಯ ವಯಕ್ತಿಕ ದಾಖಲೆಗಳನ್ನು ಪರಿಶೀಲಿಸಲು ಹಾಗೂ ನವೀಕರಿಸಲು ಒಂದು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕಾಗುತ್ತದೆ ಮೊಬೈಲ್ ನಂಬರ್ ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕಾಗುತ್ತದೆ
Free Hostel Scheme ಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ
ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಉಚಿತ ವಿದ್ಯಾರ್ಥಿ ನಿಲಯ Free Hostel Scheme ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
- ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಈ ಕೆಳಗೆ ನೀಡಿದ್ದೇವೆ ಇದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು
- ಅರ್ಜಿ ತೆರೆದ ನಂತರ ಅಗತ್ಯವಿರುವ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ಪ್ರಸ್ತುತ ಓದುತ್ತಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯ ಹಾಗೂ ವಸತಿ ನಿಲಯದ ಆಯ್ಕೆಗಳನ್ನು ಅತಿ ಎಚ್ಚರಿಕೆಯಿಂದ ಯಾವುದೇ ತಪ್ಪುಗಳಿಲ್ಲದೆ ನಮೂದಿಸಿ ಅಗತ್ಯವಿದ್ದಲ್ಲಿ ನವೀಕರಿಸಿ ಸಬ್ಮಿಟ್ ಮಾಡಿ
ಪ್ರಮುಖ ಸೂಚನೆ : ವಿದ್ಯಾರ್ಥಿನಿಲಯಕ್ಕೆ Free Hostel Scheme ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಾವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಡೇ ಸ್ಕಾಲರ್ ಹಾಗೂ ಹಾಸ್ಟೆಲ್ ಎಂಬ ಎರಡು ಆಯ್ಕೆಗಳನ್ನು ಕೇಳಲಾಗುವುದು ಈ ಸಮಯದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶವನ್ನು ಬಯಸುವ ಅಭ್ಯರ್ಥಿಗಳು ಹಾಸ್ಟೆಲರ್ ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕಾಗುತ್ತದೆ ಅಕಸ್ಮಾತ್ ಏನಾದರೂ ಡೇ ಸ್ಕಾಲರ್ ಎಂದು ನಮ್ಮದು ಮಾಡಿದ್ದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಅರ್ಜಿಯನ್ನು ಸಲ್ಲಿಸಲು ಆಗುವುದಿಲ್ಲ
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು
ಜುಲೈ 31 2026 ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ ಆದರೆ ಕೊನೆ ಕ್ಷಣಗಳಲ್ಲಿ ಸರ್ವರ್ ಸಮಸ್ಯೆ ಆಗಬಹುದು ಆದ್ದರಿಂದ ಸರ್ವರ್ ಇರುವಾಗಲೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಸೀಟ್ ಅನ್ನು ಕಾಯ್ದಿರಿಸಿ
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು : ಸಮಾಜ ಕಲ್ಯಾಣ ಇಲಾಖೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಕೊರತೆ ಇದ್ದು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಬರುತ್ತಿದ್ದಾರೆ ಈ ವಿದ್ಯಾರ್ಥಿಗಳಿಗೆ ನಿರ್ವಹಣೆಯ ಖರ್ಚು ಹಾಗೂ ವಸತಿ ಖರ್ಚನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ ಬೆಲೆ ಏರುತ್ತಿರುವ ಪರಿಣಾಮದಿಂದ ವಿದ್ಯಾಭ್ಯಾಸನ ಜೊತೆ ನಿರ್ವಹಣಾ ವೆಚ್ಚವನ್ನು ಭರಿಸಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ ಸಮಾಜ ಕಲ್ಯಾಣ ಇಲಾಖೆಯಿಂದ Free Hostel Scheme ಉಚಿತ ವಿದ್ಯಾರ್ಥಿನಿಲಯ ಯೋಜನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಹ್ವಾನಿಸಿದ್ದು ಆದಷ್ಟು ಬೇಗ ವಿದ್ಯಾರ್ಥಿಗಳು ಈ Free Hostel Scheme ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ
Free Hostel Scheme – FAQ (Frequently Asked Questions)
1. ಈ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?
10ನೇ ತರಗತಿ (ಮೆಟ್ರಿಕ್) ನಂತರದ PUC, Degree, Diploma, Engineering, Medical ಹಾಗೂ ಉನ್ನತ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
2. ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಪ್ರಮುಖವಾಗಿ ಬೇಕು?
SSP ID, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಾಲೇಜು ಪ್ರವೇಶ ಸಂಖ್ಯೆ (Admission Number), ಆಧಾರ್‌ಗೆ ಲಿಂಕ್ ಆದ ಮೊಬೈಲ್ ನಂಬರ್ ಅಗತ್ಯ.
3. Free Hostel Scheme ಗೆ ಅರ್ಜಿ ಸಲ್ಲಿಕೆ ಹೇಗೆ?
ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಅರ್ಜಿ ಸಲ್ಲಿಸಬಹುದು.
4. SSP Scholarship ನಲ್ಲಿ ಯಾವ ಆಯ್ಕೆಯನ್ನು ಆಯ್ಕೆ ಮಾಡಬೇಕು?
ವಿದ್ಯಾರ್ಥಿ ನಿಲಯ ಬೇಕಿದ್ದರೆ “Hosteller” ಆಯ್ಕೆಯನ್ನು ಆಯ್ಕೆ ಮಾಡಬೇಕು. “Day Scholar” ಆಯ್ಕೆ ಮಾಡಿದರೆ ಹಾಸ್ಟೆಲ್ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಆಯ್ಕೆಯನ್ನು ಗಮನವಿಟ್ಟು ಸೆಲೆಕ್ಟ್ ಮಾಡಿ
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2026 ಆಗಿರುತ್ತದೆ. ಕೊನೆಯ ದಿನದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸುವುದು ಉತ್ತಮ.