ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2026 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿ (Punjab National Bank Recruitment 2026)
ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ತನ್ನ ನೇಮಕಾತಿ ಅನುಸೂಚನೆಯ ಮೂಲಕ 2026 ನೇ ಸಾಲಿನ ಮಹತ್ವದ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದ್ದು ಉದ್ಯೋಗ ಆಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.
Punjab National Bank Recruitment ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಇಂಜಿನಿಯರಿಂಗ್ ಹಿನ್ನೆಲೆಯಲ್ಲಿ ಸಿವಿಲ್ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ವಿಭಾಗಗಳಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಇಂದೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ
ಸದರಿ ಲೇಖನದಲ್ಲಿ ಹುದ್ದೆಯ ಬಗ್ಗೆ ಮಾಹಿತಿ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಹುದ್ದೆಯ ಆಯ್ಕೆ ವಿಧಾನ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಸಂಬಳ ಪರೀಕ್ಷಾ ದಿನಾಂಕ ಸೇರಿದಂತೆ ಎಲ್ಲ ಮಾಹಿತಿಯನ್ನು ಸರಳವಾಗಿ ಸಂಪೂರ್ಣವಾಗಿ ನೀಡಲಾಗಿದೆ.

Punjab National Bank Recruitment ಹುದ್ದೆಗಳ ವಿವರ ಈ ಕೆಳಕಂಡಂತಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವತಿಯಿಂದ ಒಟ್ಟು 30 ಹುದ್ದೆಗಳಿಗೆ ಭರ್ತಿ ಸೂಚನೆಯನ್ನು ಅಧಿಕೃತವಾಗಿ ಹೊರಡಿಸಲಾಗಿದೆ ವಿಭಾಗಗಳ ಪ್ರಕಾರ ಹುದ್ದೆಗಳ ಹಂಚಿಕೆ ಈ ಕೆಳಕಂಡಂತಿದೆ
- ಸಿವಿಲ್ ಇಂಜಿನಿಯರ್ ವಿಭಾಗಕ್ಕೆ 21 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ 7 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
- ಮೆಕ್ಯಾನಿಕಲ್ ವಿಭಾಗಕ್ಕೆ 2 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಒಟ್ಟು 30 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ
ಈ ಮೂರು ವಿಭಾಗಗಳಲ್ಲಿ ಹೆಚ್ಚಿನ ತಾಂತ್ರಿಕ ಜ್ಞಾನ ಹಾಗೂ ಪ್ರಾಯೋಗಿಕ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆಯನ್ನು ನೀಡಿದ್ದು ಅದಕ್ಕೆ ಬೇಕಾಗುವ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ
Punjab National Bank Recruitment ಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆ ಈ ಕೆಳಕಂಡಂತಿದೆ

ಅಭ್ಯರ್ಥಿಗಳು ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿರಬೇಕು ಹೆಚ್ಚಿನ ಮಾಹಿತಿ ಈ ಕೆಳಕಂಡಂತಿದೆ
- ಸಿವಿಲ್ ಇಂಜಿನಿಯರ್: BE / B.Tech in Civil Engineering
- ಇಲೆಕ್ಟ್ರಿಕಲ್ ಇಂಜಿನಿಯರ್: BE / B.Tech in Electrical Engineering
- ಮೆಕ್ಯಾನಿಕಲ್ ಇಂಜಿನಿಯರ್: BE / B.Tech in Mechanical Engineering
ಪ್ರಮುಖ ಸೂಚನೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಗತ್ಯವಾಗಿರುತ್ತದೆ
ಹೆಚ್ಚು ಸಂದರ್ಭಗಳಲ್ಲಿ ಅನುಭವಕ್ಕೂ ಆದ್ಯತೆ ಇರುತ್ತದೆ
ವಯೋಮಿತಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ 01 ಜನವರಿ 2026 ರನ್ವಯ ಅಭ್ಯರ್ಥಿಗಳ ವಯಸ್ಸು ಈ ಕೆಳಕಂಡಂತಿರಬೇಕು
ಕನಿಷ್ಠ ವಯಸ್ಸು: 20 ವರ್ಷ
ಗರಿಷ್ಠ ವಯಸ್ಸು: 30 ವರ್ಷ
ವಯೋಮಿತಿ ಸಡಿಲಿಕೆಯ ಸಂಬಂಧಿಸಿದ ಮಾಹಿತಿ
ಎಸ್ಸಿ ಎಸ್ಟಿ ವರ್ಗಕ್ಕೆ 05 ವರ್ಷ ಸಡಿಲಿಕೆ
ಓಬಿಸಿ ವರ್ಗಕ್ಕೆ 03 ವರ್ಷ
ವಿಶೇಷ ಚೇತನ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ
Punjab National Bank Recruitment ನ ಆಯ್ಕೆ ವಿಧಾನ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿಯಲ್ಲಿ ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ
1. ಆನ್ಲೈನ್ ಪರೀಕ್ಷೆ
ವಿಷಯ ಆಧಾರಿತ ಪ್ರಶ್ನೆಗಳು ತಾಂತ್ರಿಕ ಜ್ಞಾನ ಪರಿಶೀಲನೆ ಹಾಗೂ ಸಾಮಾನ್ಯ ಜ್ಞಾನ ಮತ್ತು ಲಾಜಿಕ್ ಪ್ರಶ್ನೆಗಳು ಈ ಆನ್ಲೈನ್ ಪರೀಕ್ಷೆಯಲ್ಲಿ ಬರುತ್ತವೆ
2. ಸಂದರ್ಶನ
ಹುದ್ದೆಗೆ ಬೇಕಾಗುವ ವ್ಯಕ್ತಿತ್ವ ಮೌಲ್ಯಮಾಪನ ತಾಂತ್ರಿಕ ಪ್ರಶ್ನೆಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಅರಿವಿನ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು
ಈ ನೇಮಕಾತಿಯ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಎರಡು ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡುವುದು ತುಂಬಾ ಅತ್ಯಗತ್ಯವಾಗಿರುತ್ತದೆ
Punjab National Bank Recruitment ಪರೀಕ್ಷೆ ಕೇಂದ್ರಗಳು
ಕರ್ನಾಟಕದ ಪ್ರಮುಖ ನಗರಗಳಲ್ಲಿ ಈ ಪರೀಕ್ಷೆಯು ನಡೆಯಲಿದೆ ಪರೀಕ್ಷಾ ಕೇಂದ್ರಗಳ ಮಾಹಿತಿ ಈ ಕೆಳಕಂಡಂತಿದೆ
- ಬೆಂಗಳೂರು
- ಹುಬ್ಬಳ್ಳಿ ಧಾರವಾಡ
- ಮೈಸೂರು
- ಶಿವಮೊಗ್ಗ
ಅಭ್ಯರ್ಥಿಗಳು ತಮಗೆ ಸುಲಭವಾಗುವಂತೆ ತಮ್ಮ ವಿಳಾಸಕ್ಕೆ ಹತ್ತಿರವಿರುವ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ
Punjab National Bank Recruitment ಗೆ ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಕಡ್ಡಾಯವಾಗಿ ಕೇವಲ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಯಾವುದೇ ಆಫ್ಲೈನ್ ಅಥವಾ ಭಾರತೀಯ ಅಂಚೆಯ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆದಿ ಸೂಚನೆಯಲ್ಲಿ ನಮೂದಿಸಲಾಗಿರುತ್ತದೆ
ಹಂತವಾರು ಮಾರ್ಗದರ್ಶನ
ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
- ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ವಿಭಾಗಕ್ಕೆ ಹೋಗಿ
- ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರು ವಿಳಾಸ ವಿದ್ಯಾರ್ಥಿ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಸಂಬಂಧಿಸಿದ ಮಾಹಿತಿಯನ್ನು ಪೂರ್ಣವಾಗಿ ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಸಂಬಂಧಿಸಿದ ಗಾತ್ರವನ್ನು ಗಮನದಲ್ಲಿಟ್ಟುಕೊಳ್ಳಿ
- ಫೋಟೋ ಸಹಿ ಹಾಗೂ ಸಂಬಂಧಪಟ್ಟ ಶೈಕ್ಷಣಿಕ ಹಾಗೂ ಅನುಭವ ಪ್ರಮಾಣ ಪತ್ರಗಳು
- ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಪರಿಶೀಲಿಸಿ ಅರ್ಜಿ ಶುಲ್ಕ ಪಾವತಿಸಿ ಹಾಗೂ ಫೈನಲ್ ಸಬ್ಮಿಟ್ ಮಾಡಿ
ಕೊನೆಯ ದಿನದಂದು ಸರ್ವರ್ ಸಮಸ್ಯೆ ಎದುರಾಗಬಹುದಾಗಿರುವುದರಿಂದ ಅರ್ಜಿ ಸಲ್ಲಿಸಿ ಅರ್ಜಿ ಶುಲ್ಕ ಪಾವತಿಸಿದ ನಂತರ ತಮ್ಮ ಅಪ್ಲಿಕೇಶನ್ ನನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳುವುದು ಉತ್ತಮ
ಅಧಿಕೃತ ವೆಬ್ ಸೈಟ್: Punjab National Bank Recruitment
ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಗ್ರೂಪ್ ಜಾಯಿನ್ ಆಗಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ
- ಎಸ್ಸಿ ಎಸ್ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ. 59
- ಇತರೆ ಅಭ್ಯರ್ಥಿಗಳಿಗೆ ರೂ.1180 ಗಳನ್ನು ನಿಗದಿಪಡಿಸಲಾಗಿದೆ
ಪಾವತಿ ವಿಧಾನ
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ನೆಟ್ ಬ್ಯಾಂಕಿಂಗ್
- ಯುಪಿಐ
Punjab National Bank Recruitment ಪ್ರಮುಖ ದಿನಾಂಕಗಳು ಈ ಕೆಳಕಂಡಂತಿವೆ
- ಅರ್ಜಿ ಪ್ರಾರಂಭ: ಏಪ್ರಿಲ್ 21 2026
- ಅರ್ಜಿ ಕೊನೆ ದಿನಾಂಕ: ಮೇ 5 2026
- ತಾತ್ಕಾಲಿಕ ಪರೀಕ್ಷಾ ದಿನಾಂಕ: ಮೇ 27 2026
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯುವುದರಿಂದ ಹೊಂದಬಹುದಾದ ಪ್ರಮುಖ ಲಾಭ ಹಾಗೂ ಸೌಲಭ್ಯಗಳು ಈ ಕೆಳಕಂಡಂತಿವೆ
- ಪಂಜಾಬ್ ನ್ಯಾಷನಲ್ ಬ್ಯಾಂಕ್ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವುದರಿಂದ ಸರ್ಕಾರಿ ಬ್ಯಾಂಕ್ ಉದ್ಯೋಗ ಭದ್ರತೆಯು ದೊರೆ
- ಬ್ಯಾಂಕಿಂಗ್ ಕ್ಷೇತ್ರವು ತ್ವರಿತವಾಗಿ ಅಭಿವೃದ್ಧಿ ಗೊಳ್ಳುತ್ತಿರುವುದರಿಂದ ಉತ್ತಮ ಸಂಬಳ ಹಾಗೂ ಭತ್ಯೆಗಳು ದೊರೆಯುತ್ತವೆ
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರೋತ್ಸಾಹ ಮತ್ತು ಪದುನ್ನತಿ ಅವಕಾಶಗಳು ಹೆಚ್ಚಾಗಿರುತ್ತದೆ
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ತಾಂತ್ರಿಕ ಜ್ಞಾನ ಹಾಗೂ ಆಡಳಿತಾತ್ಮಕ ಅನುಭವ ದೊರೆಯುತ್ತದೆ
Punjab National Bank Recruitment ಅರ್ಜಿ ಸಲ್ಲಿಸುವ ಮುನ್ನ ಗಮನಿಸಬೇಕಾದ ಅಂಶಗಳು ಈ ಕೆಳಕಂಡಂತಿವೆ
- ಎಲ್ಲ ಮಾಹಿತಿಯನ್ನು ಸರಿದೆಯಾಗಿ ನಮೂದಿಸಿ ಹಾಗೂ ಪರಿಶೀಲಿಸುವ ಸಮಯದಲ್ಲಿ ಎಚ್ಚರವಾಗಿರಿ
- ತಪ್ಪು ದಾಖಲೆಗಳನ್ನು ಅಪ್ಲೋಡ್ ಮಾಡಬೇಡಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಪರಿಶೀಲಿಸಿ
- ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಸರ್ವರ್ ಸಮಸ್ಯೆ ಎದುರಾಗಬಹುದಾಗಿರುವುದರಿಂದ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ. ಕೊನೆಯ ದಿನದಂದು ಸರ್ವ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ವಿಫಲವಾಗಬಹುದು
- ಅರ್ಜಿ ಸಲ್ಲಿಸಿದ ನಂತರ ಕಡ್ಡಾಯವಾಗಿ ತಮ್ಮ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ ಇದು ಭವಿಷ್ಯದಲ್ಲಿ ಬೇಕಾಗಬಹುದು
Punjab National Bank Recruitment ನ ಪ್ರಮುಖ ಮಾಹಿತಿ
ಇಂಜಿನಿಯರಿಂಗ್ ಹಿನ್ನೆಲೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಫೀಸರ್ ನೇಮಕಾತಿ ಮೂಲಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಉದ್ಯೋಗಾವಕಾಶವನ್ನು ಸುಲಭವಾಗಿ ಪಡೆಯಬಹುದಾಗಿರುತ್ತದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಾಂತ್ರಿಕ ಹುದ್ದೆಯಲ್ಲಿ ಕೆಲಸ ಮಾಡುವುದರಿಂದ ಅನುಭವ ಹಾಗೂ ತಾಂತ್ರಿಕ ಜ್ಞಾನ ಹೆಚ್ಚುತ್ತದೆ ಆದ್ದರಿಂದ ಬ್ಯಾಂಕಿಂಗ್ ಕ್ಷೇತ್ರದ ನೇಮಕಾತಿಯನ್ನು ತಪ್ಪಿಸಿಕೊಳ್ಳಬೇಡಿ
ಸ್ಪರ್ಧೆಯು ಹೆಚ್ಚಾಗಿರುವುದರಿಂದ ಇಂದಿನಿಂದಲೇ ತಮ್ಮ ಸಿದ್ಧತೆಯನ್ನು ಆರಂಭಿಸಿ ನಿಮ್ಮ ಉದ್ಯೋಗಾವಕಾಶದ ಕನಸನ್ನು ನನ್ನ ಸಾಗಿಸಿಕೊಳ್ಳಿ
ಸರಿಯಾದ ಸಮಯದಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದುಕೊಂಡಿರುವ ಕನಸಿನ ಉದ್ಯೋಗವನ್ನು ಪಡೆದುಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ
Read More: Jobs
SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.
India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!
Best Vikas Bank Recruitment 2026: 46 ಹುದ್ದೆಗಳು | ಪದವಿ ಪಾಸಾದವರಿಗೆ ಸುವರ್ಣಾವಕಾಶ – ಇಂದೇ ಅರ್ಜಿ ಹಾಕಿ!
Big CBIC Recruitment 2026: 10ನೇ, 12ನೇ, ಡಿಗ್ರಿ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಕೇಂದ್ರ ಸರ್ಕಾರಿ ಉದ್ಯೋಗ ಅವಕಾಶ!