ಎಕ್ಸಿಮ್ ಬ್ಯಾಂಕಿನ ಮೇನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ (India Exim Bank Recruitment)
ನಮಸ್ಕಾರ ಸ್ನೇಹಿತರೆ ನೀವೇನಾದರೂ ಪದವಿಯನ್ನು ಪೂರ್ಣಗೊಳಿಸಿದ್ದೀರಾ ಹಾಗಿದ್ದರೆ ನಿಮಗೊಂದು ಉದ್ಯೋಗಾವಕಾಶ ಒದಗಿ ಬಂದಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯು ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಅಖಿಲ ಭಾರತ ಮಟ್ಟದಲ್ಲಿ ಉದ್ಯೋಗಾವಕಾಶಗಳು ಇರುವುದರಿಂದ ಆದಷ್ಟು ಬೇಗ ನೇಮಕಾತಿ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವನ್ನು ಪಡೆಯಬೇಕೆಂಬ ಕನಸನ್ನು ಪೂರ್ಣಗೊಳಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ14-06-2026 ಆಗಿರುವುದರಿಂದ ಈ ದಿನಾಂಕದ ಮೊದಲೇ ಅರ್ಜಿ ಸಲ್ಲಿಸಿ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರತದದ್ಯಂತ ಕೆಲಸ ಮಾಡಲು ಬಯಸುವ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಯ ವಿವರ ಶೈಕ್ಷಣಿಕ ಅರ್ಹತೆ ಸಂಬಳ ಆನ್ಲೈನ್ ಅರ್ಜಿ ಶುಲ್ಕ ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದುವುದರ ಮೂಲಕ ಎಲ್ಲ ಮಾಹಿತಿಯನ್ನು ಪಡೆದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
India Exim Bank Recruitment ಹುದ್ದೆಗಳ ವಿವರ
| ವಿವರ | ಮಾಹಿತಿ |
| ನೇಮಕ ಮಾಡಿಕೊಳ್ಳುತ್ತಿರುವ ಸಂಸ್ಥೆ ಹೆಸರು | ಇಂಡಿಯಾ ಎಕ್ಸಿಮ್ ಬ್ಯಾಂಕ್ |
| ಒಟ್ಟು ಹುದ್ದೆಗಳ ಸಂಖ್ಯೆ | 05 |
| ಹುದ್ದೆಯ ಹೆಸರು | ಮ್ಯಾನೇಜ್ಮೆಂಟ್ ಟ್ರೈನಿ |
| ಉದ್ಯೋಗದ ಸ್ಥಳ | ಅಖಿಲ ಭಾರತದದ್ಯಂತ |
| ವೇತನ | ಮಾಸಿಕ 65,000/- ರೂಗಳ ವರೆಗೆ |
ಶೈಕ್ಷಣಿಕ ವಿದ್ಯಾರ್ಹತೆ
ಈ India Exim Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತ ದೇಶದ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಮಂಡಳಿಗಳಿಂದ ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಎಂ.ಬಿ.ಎ, ಪಿ.ಜಿ.ಡಿ.ಬಿ.ಎ, ಪಿ.ಜಿ.ಡಿ.ಬಿ.ಎಂ, ಎಂ.ಎಂ.ಎಸ್ ಪದವಿಗಳನ್ನು ಪೂರ್ಣಗೊಳಿಸಬೇಕು
ವಯೋಮಿತಿ ವಿವರ
ಈ India Exim Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸಿನ ವಿವರ ಈ ಕೆಳಕಂಡಂತಿದೆ
ಅಭ್ಯರ್ಥಿಗಳ ಕನಿಷ್ಠ ವಯಸ್ಸು : 21 ವರ್ಷಗಳು
ಅಭ್ಯರ್ಥಿಗಳ ಗರಿಷ್ಠ ವಯಸ್ಸು : 28 ವರ್ಷಗಳು
ವಯೋಮಿತಿ ಸಡಿಲಿಕೆ
ಈ India Exim Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಯೋಮಿತಿ ಸಡಿಲಿಕೆಯ ಕಾಯ್ದೆಯ ಆಧಾರದ ಮೇಲೆ ವಯೋಮಿತಿ ಸಡಿಲಿಕ್ಕೆ ನೀಡಲಾಗುತ್ತದೆ
ಮಾಸಿಕ ವೇತನ
ಈ India Exim Bank Recruitment ಗೆ ಮೂಲಕ ಆಯ್ಕೆಗಳು ಅಭ್ಯರ್ಥಿಗಳಿಗೆ ಮಾಸಿಕ 65,000/- ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಬ್ಯಾಂಕ್ ಆಗಿರುವುದರಿಂದ ಉತ್ತಮ ಭತ್ಯೆಗಳು ಹಾಗೂ ಮುಂಬಡ್ತಿ ಸೌಲಭ್ಯಗಳು ಸಿಗುತ್ತವೆ
ಆನ್ಲೈನ್ ಅರ್ಜಿ ಶುಲ್ಕದ ವಿವರ
ಈ India Exim Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ನಿರ್ದಿಷ್ಟ ಪಡಿಸಿದ ಮೊತ್ತದ ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಪಾವತಿಸಬೇಕಾದ ಅರ್ಜಿ ಶುಲ್ಕದ ವಿವರ ಈ ಕೆಳಕಂಡಂತಿದೆ
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ : 600/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಹಾಗೂ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳಿಗೆ : 100/- ರೂಗಳು
ಪಾವತಿ ವಿಧಾನ ಆನ್ಲೈನ್ ವಿಧಾನ ಮಾತ್ರ
ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೇವಲ ಆನ್ಲೈನ್ ಪಾವತಿಯನ್ನು ಆಯ್ದುಕೊಳ್ಳು ಕೋರಿದೆ ಇದನ್ನು ಹೊರತುಪಡಿಸಿ ಯಾವುದೇ ಪಾವತಿ ವಿಧಾನಗಳನ್ನು ಅನುಸರಿಸಬೇಡಿ
India Exim Bank Recruitment ನ ಆಯ್ಕೆ ವಿಧಾನದ ಪ್ರಕ್ರಿಯೆ
ಈ India Exim Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎರಡು ನೇಮಕಾತಿ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾಗಿರುತ್ತದೆ ಆ ವಿಧಾನಗಳೆಂದರೆ
ಲಿಖಿತ ಪರೀಕ್ಷೆ : ಅಭ್ಯರ್ಥಿಗಳು ಲಿಖಿತ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಈ ಪರೀಕ್ಷೆಯಲ್ಲಿ ಹುದ್ದೆಗೆ ಸಂಬಂಧಿಸಿದ ತಾರ್ಕಿಕ ತಂತ್ರಜ್ಞಾನ ಹಾಗೂ ಹುದ್ದೆಗೆ ಸಂಬಂಧಿಸಿದ ಮುಖ್ಯ ವಲಯಗಳ ಪ್ರಶ್ನೆಗಳನ್ನು ಕೇಳಬಹುದು ಇದರ ಜೊತೆಯಲ್ಲಿ ಸಾಮಾನ್ಯ ಜ್ಞಾನ ತಾರ್ಕಿಕತೆ ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ ಪ್ರಶ್ನೆಗಳು ಸಹ ಬರಬಹುದು
ವೈಯಕ್ತಿಕ ಸಂದರ್ಶನ : ಸಂದರ್ಶನದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಇರಬೇಕಾದ ಸಮೂಹನ ಕೌಶಲ್ಯ ನಿರ್ವಹಣಾ ಕೌಶಲ್ಯ ಹಾಗೂ ಹುದ್ದೆಯ ಬಗೆಗಿನ ಹೆಚ್ಚುವರಿ ವಿಷಯಗಳನ್ನು ತಿಳಿದುಕೊಳ್ಳಲು ಸಂದರ್ಶನವನ್ನು ಕೈಗೊಳ್ಳಲಾಗುತ್ತದೆ
India Exim Bank Recruitment ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಈ India Exim Bank Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತಾಗೋರ ಅಭ್ಯರ್ಥಿಗಳು ಮೊದಲು ಎಕ್ಸಿಮ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೇಮಕಾತಿ ಸಂಬಂಧಪಟ್ಟ ಅರ್ಹತಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು
- ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳ ಬಳಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಹೊಂದಿರಬೇಕು ಇದರ ಜೊತೆಯಲ್ಲಿ ಗುರುತಿನಪುರವೇ ಶೈಕ್ಷಣಿಕ ದಾಖಲೆಗಳು ಮೀಸಲಾತಿ ಸಂಬಂಧ ದಾಖಲೆಗಳು ಹಾಗೂ ರೆಸ್ಯುಮ್ ಮುಂತಾದ ಅಗತ್ಯ ದಾಖಲಾತಿಗಳನ್ನು ಸಿದ್ಧಗೊಳ್ಳಬೇಕು
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನೇಮಕಾತಿ ವಿಭಾಗವನ್ನು ತೆರೆದು ಅಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನದ ಲಿಂಕನ ಮೇಲೆ ಕ್ಲಿಕ್ ಮಾಡಬೇಕು
- ಮ್ಯಾನೇಜ್ಮೆಂಟ್ ಹುದ್ದೆಗೆ ಆನ್ಲೈನ್ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಅರ್ಜಿ ತೆರೆಯುತ್ತದೆ ಈ ಅರ್ಜಿಯಲ್ಲಿ ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ವಯೋಮಿತಿ ವಿವರ ಅನುಭವಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಂವಹನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಎಚ್ಚರಿಕೆಯಿಂದ ನಿರ್ದಿಷ್ಟ ಪಡಿಸಿರುವ ಜಾಗದಲ್ಲಿ ನಮೂದಿಸಬೇಕು
- ಆನ್ಲೈನ್ ಅರ್ಜಿಯಲ್ಲಿ ಕೇಳಲಾಗುವ ಇತ್ತೀಚಿನ ದಿನಗಳ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಅಪ್ಲೋಡ್ ಮಾಡಬೇಕು
- ಅಭ್ಯರ್ಥಿಗಳು ಅವರ ವರ್ಗಕ್ಕೆ ನಿಗದಿಪಡಿಸಿರುವ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್ಲೈನ್ ವಿಧಾನದ ಮೂಲಕವೇ ಪಾವತಿಸಬೇಕು
- ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಲಾಗಿರುವ ದಾಖಲಾತಿಗಳನ್ನು ಒಂದಲ್ಲ ಎರಡು ಬಾರಿ ಪರಿಶೀಲಿಸಿ ಸರಿಯಾಗಿ ಎಂದು ನೋಡಿ
- ಎಲ್ಲ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಕೊನೆಯದಾಗಿ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದರ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ನಂತರ ಮುಂದೆ ಬರುವ ಅಪ್ಲಿಕೇಶನ್ ನಂಬರ್ ಹಾಗೂ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ ನೇಮಕಾತಿ ಪ್ರಕ್ರಿಯೆಯಲ್ಲಿ ನಿಮಗೆ ಪ್ರಾಥಮಿಕ ದಾಖಲೆ ಇದಾಗಿರುತ್ತದೆ
India Exim Bank Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 11-05-2026
ನೇಮಕಾತಿಗೆ ಅರ್ಜಿ ಸಲ್ಲಿಸಲು ಹಾಗೂ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 14-06-2026
ಅಭ್ಯರ್ಥಿಗಳಿಗೆ ವಿಶೇಷ ಸೂಚನೆ
ಈ India Exim Bank Recruitment ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ದೇಶದಾದ್ಯಂತ ಸಾವಿರಾರು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುತ್ತಾರೆ. ಕೊನೆ ದಿನಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಇಂದೇ ಅರ್ಜಿ ಸಲ್ಲಿಸಿ ಹಾಗೂ ನಿಮ್ಮ ಇತರ ಸ್ನೇಹಿತರಿಗೂ ಮಾಹಿತಿಯನ್ನು ಶೇರ್ ಮಾಡಿ
ಪ್ರಮುಖ ಲಿಂಕ್ ಗಳು
| ಎಕ್ಸಿಮ್ ಬ್ಯಾಂಕಿನ ಅಧಿಕೃತ ವೆಬ್ಸೈಟ್ ನೇಮಕಾತಿ ವಿಭಾಗ | ಇಂಡಿಯ ಎಕ್ಸಿಮ್ ಬ್ಯಾಂಕ್ |
| ಅಧಿಕೃತ ಅಧಿಸೂಚನೆಯ ಪಿಡಿಎಫ್ | India EXIM Bank Recruitment Notification |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು | ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ | ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ |
ಪ್ರಮುಖ ಸಲಹೆಗಳು
ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳನ್ನು ಪಡೆಯಲು ಅಭ್ಯರ್ಥಿಗಳು ಸರಿಯಾದ ಯೋಜನೆಯೊಂದಿಗೆ ಅಭ್ಯಾಸ ನಡೆಸಬೇಕು. ಮೊದಲಿಗೆ ಬ್ಯಾಂಕಿಂಗ್, ಅರ್ಥಶಾಸ್ತ್ರ, ಸಾಮಾನ್ಯ ಜ್ಞಾನ, ತಾರ್ಕಿಕತೆ, ಇಂಗ್ಲಿಷ್ ಭಾಷೆ ಹಾಗೂ ಕಂಪ್ಯೂಟರ್ ಜ್ಞಾನದ ವಿಷಯಗಳ ಸಂಬಂಧ ಪ್ರತಿದಿನ ಅಭ್ಯಾಸ ಮಾಡುವುದು ಮುಖ್ಯವಾಗಿರುತ್ತದೆ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಮಾದರಿ ಪರೀಕ್ಷೆಗಳನ್ನು ಹೆಚ್ಚಾಗಿ ಬರೆಯಿರಿ. ಸಮಯ ನಿರ್ವಹಣೆ ಕೌಶಲ್ಯವನ್ನು ಬೆಳೆಸಿಕೊಳ್ಳಿ. ಬ್ಯಾಂಕಿಂಗ್ ಕ್ಷೇತ್ರದ ಇತ್ತೀಚಿನ ಸುದ್ದಿಗಳು ಹಾಗೂ ಆರ್ಥಿಕ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಸಂದರ್ಶನ ಹಂತಕ್ಕೆ ಆತ್ಮವಿಶ್ವಾಸದಿಂದ ತಯಾರಿ ಮಾಡಿಕೊಳ್ಳಿ ಸಂವಹನ ಕೌಶಲ್ಯವನ್ನು ಉತ್ತಮಗೊಳಿಸಿ, ನಿಯಮಿತ ಓದು, ಶ್ರಮ ಹಾಗೂ ಆತ್ಮವಿಶ್ವಾಸದಿಂದ ಯಶಸ್ಸು ಸಾಧಿಸಿ ಈ ಉದ್ಯೋಗವನ್ನು ಪಡೆಯಿರಿ.
ಕೇಂದ್ರ ಸರ್ಕಾರದ ಪ್ರತಿಷ್ಠಿತ ಬ್ಯಾಂಕ್ ಆದ ಎಕ್ಸಿಮ್ ಬ್ಯಾಂಕ್ 2026 ನೇಮಕಾತಿ ಸೂಚನೆಯ ಮೂಲಕ ಮ್ಯಾನೇಜ್ಮೆಂಟ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಯಾವುದೇ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ ಅಖಿಲ ಭಾರತದ ಅತ್ಯಂತ ಉದ್ಯೋಗವನ್ನು ಒಂದು ಅವಕಾಶವೂ ಪದವಿಧ ರರಿಗೆ ಇದ್ದು ಇದರ ಜೊತೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಉತ್ತಮ ಸಂಬಳ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಈ ಕೆಲಸವನ್ನು ಪಡೆಯಬಹುದಾಗಿದೆ ಆದುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಉದ್ಯೋಗದ ಕನಸನ್ನು ನನಸಾಗಿಸಿ ನಿಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಿ
India Exim Bank Recruitment : FAQʼs
1. ಎಕ್ಸಿಮ್ ಬ್ಯಾಂಕ್ ನೇಮಕಾತಿಯಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ?
ಈ ನೇಮಕಾತಿ ಮೂಲಕ ಮ್ಯಾನೇಜ್ಮೆಂಟ್ ಟ್ರೈನಿ (Management Trainee) ಹುದ್ದೆಗಳಿಗೆ ಅರ್ಜಿಯನ್ನು ಆನ್ ಲೈನ್ ಮೂಲಕ ಆಹ್ವಾನಿಸಲಾಗಿದೆ.
2. ಎಕ್ಸಿಮ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನರಬೇಕು?
ಯಾವುದೇ ಪದವಿ, ಸ್ನಾತಕೋತ್ತರ ಪದವಿ, MBA, PGDBA, PGDBM, MMS ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
3. ಈ ನೇಮಕಾತಿಯಲ್ಲಿರುವ ಹುದ್ದೆಗಳ ಸಂಖ್ಯೆ ಎಷ್ಟು?
ಈ ನೇಮಕಾತಿಯಲ್ಲಿ ಒಟ್ಟು 5 ಮೇನೇಜ್ ಮೆಂಟ್ ಟ್ರೈನಿ ಹುದ್ದೆಗಳು ಖಾಲಿ ಇವೆ.
4. ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು?
ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷಗಳು ಹಾಗೂ ಗರಿಷ್ಠ ವಯಸ್ಸು 28 ವರ್ಷಗಳು ವಯಸ್ಸು ಆಗಿರಬೇಕು.
5. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು 14-06-2026 ಕೊನೆಯ ದಿನಾಂಕವಾಗಿದೆ.
6. ಆಯ್ಕೆ ಪ್ರಕ್ರಿಯೆ ಹಂತಗಳು ಯಾವುವು?
ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
7. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗುವ ಮಾಸಿಕ ವೇತನ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65,000 ರೂಗಳವರೆಗೆ ವೇತನವನ್ನು ನೀಡಲಾಗುತ್ತದೆ.
8. ಅರ್ಜಿ ಶುಲ್ಕದ ಮೊತ್ತ ಎಷ್ಟು?
ಸಾಮಾನ್ಯ/OBC ಅಭ್ಯರ್ಥಿಗಳಿಗೆ 600 ರೂಗಳು, SC/ST/PWD ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ 100 ರೂಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
9. ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಅಭ್ಯರ್ಥಿಗಳು ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
10. ಉದ್ಯೋಗದ ಸ್ಥಳ ಯಾವುದು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಕೆಲಸ ಮಾಡುವ ಅವಕಾಶ ಇರುತ್ತದೆ.