ಭೂ ಮಾಲೀಕತ್ವ ಯೋಜನೆಯಿಂದ ಸಾಲ ಹಾಗೂ ಸಹಾಯಧನ ಸೌಲಭ್ಯ (Land Purchase Scheme)
ಇಂದು ಕೃಷಿ ಕ್ಷೇತ್ರವು ಎಷ್ಟು ವೇಗವಾಗಿ ಬೆಳೆಯುತ್ತದೆ ಹಾಗೂ ಕೃಷಿ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಆದರೆ ಕೃಷಿ ಮಾಡಲು ಆಸಕ್ತಿ ಇದ್ದರೂ ಕೃಷಿ ಜಮೀನನ್ನು ಹೊಂದಿರದ ಕಾರಣ ಕೃಷಿ ಚಟುವಟಿಕೆಗಳನ್ನು ಮಾಡುವಲ್ಲಿ ಯುವಜನತೆ ಹಿಂದುಳಿಯುತ್ತಿದ್ದಾರೆ ಅದರಿಂದಲೇ ಇತರರ ಜಮೀನಿನಲ್ಲಿಯೂ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿಯನ್ನು ಹೊಂದುವ ಕನಸು ನನಸಾಗಿಸಲು ಕರ್ನಾಟಕ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ ಆರ್ಥಿಕ ತೊಂದರೆಗಳು ಮತ್ತು ಬಡತನ ಮುಂತಾದ ಕಾರಣಗಳಿಂದ ಕೃಷಿ ಜಮೀನನ್ನು ಹೊಂದಲು ಆಗದ ಕುಟುಂಬಗಳಿಗೆ ಈ ಯೋಜನೆ ಮೂಲಕ ಕೃಷಿ ಜಮೀನನ್ನು ಖರೀದಿಸುವುದಕ್ಕೆ ಸಹಾಯ ಮಾಡಲಿದೆ ಕರ್ನಾಟಕ ಸರ್ಕಾರವು ಭೂ ಮಾಲೀಕತ್ವ ಯೋಜನೆ ಎಂಬ ರೈತ ಉಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಿಂದ ರೈತರು ಕೃಷಿ ಜಮೀನನ್ನು ಹೊಂದಿ ಕೃಷಿ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಅವರ ಲಾಭ ಅಂಶ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ
ಈ ಭೂ ಮಾಲೀಕತ್ವ ಯೋಜನೆ ಅಡಿಯಲ್ಲಿ ಕೃಷಿ ಜಮೀನನ್ನು ಖರೀದಿಸಲು ಫಲಾನುಭವಿಗಳಿಗೆ ಸರ್ಕಾರವು 20 ಲಕ್ಷದಿಂದ 25 ಲಕ್ಷ ರೂಗಳ ವರೆಗೆ ಆರ್ಥಿಕ ಸಹಾಯಧನವನ್ನು ನೀಡಿ ಕೃಷಿ ಜಮೀನನ್ನು ಖರೀದಿಸಲು ಪ್ರೋತ್ಸಾಹಿಸುತ್ತದೆ. ಭೂಮಿ ಇಲ್ಲದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಕೃಷಿಕ ಕಾರ್ಮಿಕರನ್ನು ಭೂ ಮಾಲೀಕರನ್ನಾಗಿ ಮಾಡಲು ಈ ಯೋಜನೆಯು ಸಹಕರಿಸಿದ್ದು ಇದರಿಂದ ಅವರ ಆರ್ಥಿಕ ಜೀವನವು ಉತ್ತಮಗೊಂಡು ಸುರಕ್ಷಿತ ಜೀವನ ನಡೆಸುವಲ್ಲಿ ಮತ್ತು ಜೀವನ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಸಹಾಯ ಮಾಡುವ ಮೂಲಕ ಅವರನ್ನು ಸಾಮಾಜಿಕವಾಗಿ ಬೆಂಬಲಿಸುವ ಉದ್ದೇಶವು ಈ ಯೋಜನೆಯ ಪ್ರಾಥಮಿಕ ಗುರಿಯಾಗಿದೆ
ಈ ಯೋಜನೆಯನ್ನು ಮುಖ್ಯವಾಗಿ ಬಡತನ ಕಡಿಮೆ ಮಾಡಲು ಮಹಿಳೆಯರ ಸಬಲೀಕರಣ ಸಾಧಿಸಲು ಗ್ರಾಮೀಣ ಪ್ರದೇಶದಲ್ಲಿ ಜೀವನಪಾಯವನ್ನು ಸುಧಾರಿಸಲು ಹಾಗೂ ಸಬ್ಸಿಡಿ ಮೂಲಕ ರೈತರು ಕೃಷಿ ಜಮೀನನ್ನು ಹೊಂದಲು ಸಹಕರಿಸುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವು ಇದಾಗಿದ್ದು ಕರ್ನಾಟಕ ಸರ್ಕಾರದ ಈ ಯೋಜನೆಯು ಹಲವು ರೈತರಿಗೆ ಕೃಷಿ ಜಮೀನನ್ನು ಒಂದು ಅವಕಾಶ ಮಾಡಿಕೊಡಲಿದೆ
| Read More : Raita Siri Yojane 2026, Best Scheme : ಕರ್ನಾಟಕ ಸರ್ಕಾರದ ಈ ಯೋಜನೆ ರೈತರಿಗೆ ವರದಾನ, ಸಂಪೂರ್ಣ ವಿವರ ತಿಳಿಯಿರಿ |
ಭೂ ಮಾಲೀಕತ್ವ Land Purchase Scheme ಯೋಜನೆ ಎಂದರೆ ಏನು
ಸ್ವಂತ ಕೃಷಿ ಜಮೀನು ಇಲ್ಲದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಕೃಷಿಕರಿಗೆ ಸ್ವಂತ ಕೃಷಿ ಜಮೀನನ್ನು ಖರೀದಿಸಲು ಸಹಾಯಧನ ನೀಡುವ ಯೋಜನೆಯು ಭೂ ಮಾಲೀಕತ್ವ ಯೋಜನೆಯಾಗಿದ್ದು ಈ Land Purchase Scheme ಮೂಲಕ ಭೂಮಿಯನ್ನು ಖರೀದಿಸಲು ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತದೆ
ಈ ಯೋಜನೆ ಅಡಿಯಲ್ಲಿ ಸಿಗುವ ಸಹಾಯಧನ ದ ವಿವರ
- ಸರ್ಕಾರವು ಜಿಲ್ಲೆ ಮತ್ತು ಪ್ರಾದೇಶಿಕತೆ ಅನುಗುಣವಾಗಿ 20 ಲಕ್ಷದಿಂದ ಗರಿಷ್ಠ 25 ಲಕ್ಷಗಳವರೆಗೆ ಆರ್ಥಿಕ ಸಹಾಯಧನವನ್ನು ನೀಡುತ್ತದೆ
- ಕೃಷಿ ಜಮೀನಿನ ಖರೀದಿಯ ಒಟ್ಟು ಮೊತ್ತದಲ್ಲಿ 50% ಅನ್ನು ಸಬ್ಸಿಡಿಯಾಗಿ ನೀಡಲಾಗುತ್ತದೆ ಹಾಗೂ ಉಳಿದ 50% ಅನ್ನು ವರ್ಷಕ್ಕೆ ಆರು ಪರ್ಸೆಂಟ್ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನಾಗಿ ನೀಡಲಾಗುತ್ತದೆ
- ಕಡಿಮೆ ಬಡ್ಡಿದರ ಹಾಗೂ ಉತ್ತಮ ಮರುಪಾವತಿ ಅವಧಿಯನ್ನು ನೀಡುವುದರ ಮೂಲಕ ಬಡ ಕುಟುಂಬಗಳು ಆರ್ಥಿಕವರೆಯನ್ನು ಕಡಿಮೆ ಮಾಡಿಕೊಳ್ಳುವುದಲ್ಲದೆ ಕೃಷಿ ಜಮೀನನ್ನು ಹೊಂದಲು ಉಪಯೋಗ ಮಾಡಿಕೊಡುತ್ತದೆ
ಯೋಜನೆಯ ಪ್ರಮುಖ ಉದ್ದೇಶಗಳು
ಮಹಿಳಾ ಸಬಲೀಕರಣ ಸಾಧನೆ :ಈ Land Purchase Scheme ಮುಖ್ಯವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳಾ ಕೃಷಿ ಕಾರ್ಮಿಕರ ಮೇಲೆ ಕೇಂದ್ರೀಕೃತವಾಗಿದ್ದು ಮಹಿಳೆಯರು ತಮ್ಮ ಸ್ವಂತ ಹೆಸರಿನಲ್ಲಿ ಕೃಷಿ ಜಮೀನನ್ನು ಖರೀದಿಸಲು ಸಹಾಯ ಮಾಡುವ ಮೂಲಕ ಸರ್ಕಾರವು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಏರ್ಪಡಿಸಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದುವ ಉದ್ದೇಶವನ್ನು ಹೊಂದಿದೆ ಈ ಯೋಜನೆಯ ಮೂಲಕ ಭೂಮಿಯನ್ನು ಹೊಂದುವ ಮಹಿಳೆಯರು ಸಮಾಜದಲ್ಲಿ ಮತ್ತು ಅವರ ಕುಟುಂಬಗಳಲ್ಲಿ ಉತ್ತಮ ಆರ್ಥಿಕ ಸ್ಥಿತಿಗತಿ ಭದ್ರತೆ ಸ್ವಾತಂತ್ರ್ಯ ಮತ್ತು ಗೌರವ್ಯೂಹದ ಸ್ಥಾನವನ್ನು ಪಡೆಯುತ್ತಾರೆ
ಭೂಹೀನತೆಯನ್ನು ಕಡಿಮೆಗೊಳಿಸುವುದು :ಗ್ರಾಮೀಣ ಪ್ರದೇಶದಲ್ಲಿನ ಹಲವಾರು ರೈತರು ಮತ್ತು ಕೃಷಿ ಕಾರ್ಮಿಕರು ಯಾವುದೇ ಸ್ವಂತ ಭೂಮಿಯನ್ನು ಹೊಂದಿಲ್ಲ ಅವರು ಬೇರೆಯವರ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿ ತೊಂದರೆಗಳಿಗೆ ಸಿಲುಕುತ್ತಿದ್ದಾರೆ ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವುದರಿಂದ ಸಂಪೂರ್ಣವಾಗಿ ದೈನಂದಿನ ಕೂಲಿಯ ಮೇಲೆ ಅವಲಂಬನೆ ಹೊಂದಿದ್ದಾರೆ ಈ ಯೋಜನೆಯು ಅಂತಹ ಕುಟುಂಬಗಳಿಗೆ ಬಹುಮಲೀಕರಾಗಲು ಅವಕಾಶವನ್ನು ಒದಗಿಸಿದ್ದು ಸ್ವಂತ ಕೃಷಿ ಜಮೀನನ್ನು ಖರೀದಿಸಿ ಅವರೇ ಭೂ ಮಾಲೀಕರಾಗಿ ಕೃಷಿ ಚಟುವಟಿಕೆಗಳನ್ನು ಶುರು ಮಾಡಲು Land Purchase Scheme ಸಹಾಯಮಾಡುತ್ತದೆ
ಕುಟುಂಬದ ಆದಾಯ ಮಟ್ಟವನ್ನು ಉತ್ತಮಗೊಳಿಸುವುದು :ಈ ಯೋಜನೆಯ ಮೂಲಕ ಕೃಷಿ ಜಮೀನನ್ನು ಹೊಂದುವುದರಿಂದ ಅವರು ಕೃಷಿ ಚಟುವಟಿಕೆಗಳಲ್ಲಿ ಉತ್ತಮ ರೀತಿಯ ಬಂಡವಾಳವನ್ನು ತೊಡಗಿಸಿ ಕಡಿಮೆ ವೆಚ್ಚದಿಂದ ಉತ್ತಮ ಲಾಭವನ್ನು ಪಡೆಯಲು ಆದಾಯವನ್ನು ಗಳಿಸಬಹುದಾಗಿದೆ ಈ ಯೋಜನೆಯಿಂದ ಕುಟುಂಬಗಳು ಬಡತನ ರೇಖೆಗಿಂತ ಮೇಲಕ್ಕೆ ಹೋಗಲು Land Purchase Scheme ಸಹಕರಿಸುತ್ತದೆ
ಈ ಯೋಜನೆ ಅಡಿಯಲ್ಲಿ ಸ್ವಂತ ಭೂಮಿಯನ್ನು ಖರೀದಿಸಲು ಇರುವ ಮಿತಿಗಳು
ಈ Land Purchase Scheme ನಲ್ಲಿ ಸ್ವಂತ ಭೂಮಿಯನ್ನು ಖರೀದಿಸಲು ಅವಕಾಶ ಇದ್ದರು ಪ್ರದೇಶದ ಆಧಾರದ ಮೇಲೆ ಮಿತಿಯನ್ನು ಇರಿಸಲಾಗಿದೆ ಫಲಾನುಭವಿಗಳು ಈ ಕೆಳಕಂಡ ವಿವಿಧ ರೀತಿಯ ಕೃಷಿ ಭೂಮಿಯನ್ನು ಈ ಯೋಜನೆ ಅಡಿಯಲ್ಲಿ ಖರೀದಿಸಬಹುದು
- ಒಣ ಕೃಷಿ ಭೂಮಿಯನ್ನು ಕನಿಷ್ಠ 2 ಎಕರೆಯವರೆಗೆ ಖರೀದಿಸಬಹುದು
- ತೋಟಗಾರಿಕೆ ಭೂಮಿ ಯನ್ನು ಕನಿಷ್ಠ 20 ಗುಂಟೆವರೆಗೆ ಖರೀದಿಸಬಹುದು
- ನೀರಾವರಿ ಕೃಷಿ ಜಮೀನು ಆಗಿದ್ದರೆ ಕನಿಷ್ಠ 1 ಎಕರೆಯವರೆಗೆ ಖರೀದಿಸಬಹುದು
ಅರ್ಜಿದಾರರು ಆಯ್ಕೆ ಮಾಡಿಕೊಳ್ಳುವ ಭೂಮಿಯು ಸಾಗುವಳಿ ಮತ್ತು ಕೃಷಿಗೆ ಉದ್ದೇಶ ಸೂಕ್ತವಾಗಿರಬೇಕು ಅಂದರೆ ಒಣ ಕೃಷಿ ಭೂಮಿಯಲ್ಲಿ ಬೆಳೆಯಬಹುದಾದ ಬೆಲೆಗಳಿಗೆ ಪ್ರದೇಶವು ಸೂಕ್ತವಾಗಿದ್ದರೆ ಒಣ ಕೃಷಿ ಭೂಮಿಯನ್ನು ಖರೀದಿಸಬಹುದಾಗಿರುತ್ತದೆ ತೋಟಗಾರಿಕೆ ಭೂಮಿಯಲ್ಲಿ ಒಣ ಕೃಷಿ ಬೇಸಾಯವನ್ನು ಮಾಡಲು ಸಾಧ್ಯ ಇಲ್ಲದಿರುವುದರಿಂದ ಉದ್ದೇಶ ಒಂದೇ ಆಗಿರಬೇಕು
ಯೋಜನೆ ಅಡಿಯಲ್ಲಿ ಸಿಗುವ ಸಬ್ಸಿಡಿ ಎಷ್ಟು
Land Purchase Scheme ಮೂಲಕ ಕೃಷಿ ಭೂಮಿಯನ್ನು ಖರೀದಿಸುವವರಿಗೆ ಜಿಲ್ಲೆಗಳ ಆಧಾರದ ಮೇಲೆ ಸಹಾಯಧನವನ್ನು ನೀಡಲಾಗುತ್ತದೆ ಈ ಕೆಳಕಂಡ ಜಿಲ್ಲೆಗಳಲ್ಲಿ ಸಬ್ಸಿಡಿ ಮತ್ತು ಸಿಗುತ್ತದೆ
ಈ ಕೆಳಕಂಡ ಜಿಲ್ಲೆಗಳಲ್ಲಿ 25 ಲಕ್ಷ ರೂಗಳ ವರೆಗೆ ಆರ್ಥಿಕ ನೆರವನ್ನು ಪಡೆಯಬಹುದು
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತ,ರ ರಾಮನಗರ (ಬೆಂಗಳೂರು ದಕ್ಷಿಣ) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು (ಸರ್ಕಾರಿ ಸಬ್ಸಿಡಿ 12.5 ಲಕ್ಷ ಸಾಲದ ಮೊತ್ತ 12.5 ಲಕ್ಷ)
ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಲ್ಲಿ ಸಿಗುವ ಸಹಾಯಧನದ ವಿವರ
ಉಳಿದ ಎಲ್ಲ ಜಿಲ್ಲೆಗಳು ಫಲಾನುಭವಿಗಳು ಗರಿಷ್ಠ 20 ಲಕ್ಷಗಳ ವರೆಗೆ ಸಹಾಯಧನವನ್ನು ಪಡೆಯಬಹುದಾಗಿರುತ್ತದೆ ಅಂದರೆ ಸರ್ಕಾರಿ ಸಹಾಯಧನ 10 ಲಕ್ಷ ಸಾಲದ ಮತ್ತು 10 ಲಕ್ಷ
ಈ ಸಬ್ಸಿಡಿಯು ಬಡವರ್ಗದ ಕೃಷಿ ಕಾರ್ಮಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಸಹಾಯಧನವನ್ನು ನೀಡುವ ಮೂಲಕ ಕೃಷಿ ಜಮೀನನ್ನು ಖರೀದಿಸಲು ಅನುವು ಮಾಡಿಕೊಡುವುದರ ಜೊತೆಯಲ್ಲಿ Land Purchase Scheme ರೈತರ ಜೀವನ ಗುಣಮಟ್ಟ ಹಾಗೂ ಲಾಭಾಂಶವನ್ನು ಹೆಚ್ಚಿಸುತ್ತದೆ
ಸಾಲ ಮರುಪಾವತಿ ವಿವರಗಳು
ಫಲಾನುಭವಿಗಳು 50% ಸಬ್ಸಿಡಿಯನ್ನು ಹೊರತುಪಡಿಸಿ ಉಳಿದ 50% ಅನ್ನು ಸಾಲವಾಗಿ ಪಡೆಯುವುದರಿಂದ ಈ ಸಾಲದ ಮೊತ್ತವನ್ನು ಪಾವತಿಸಬೇಕಾಗಿರುತ್ತದೆ
ಕಡಿಮೆ ಬಡ್ಡಿದರ : ವಾರ್ಷಿಕವಾಗಿ 6% ಅಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ ಕಡಿಮೆ ಬಡ್ಡಿದರ ಇರುವುದರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಸುಲಭ ಮರುಪಾವತಿ : ಸಾಲವನ್ನು ಮರುಪಾವತಿಸಲು ಗರಿಷ್ಠ 10 ವರ್ಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ ದೀರ್ಘಾವಧಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಸಾಲವನ್ನು ಮರುಪಾವತಿ ಮಾಡಬಹುದು
ಸುಲಭ ಕಂತಿನ ವ್ಯವಸ್ಥೆ : ಈ ಯೋಜನೆ ಮೂಲಕ ಪಡೆಯುವ ಸಾಲದ ಮೊತ್ತವನ್ನು ಅರ್ಧ ವಾರ್ಷಿಕ ಅಂದರೆ ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸಬಹುದಾಗಿರುತ್ತದೆ ತಿಂಗಳಿಗೊಮ್ಮೆ ಪಾವತಿಸಬೇಕೆಂಬ ಮಾಸಿಕ ಪದ್ಧತಿಯನ್ನು ಇಲ್ಲಿ ತೆಗೆಯಲಾಗಿದೆ
ಈ ಮರುಪಾವತಿ ನಿಯಮಗಳು ರೈತ ಹಿತಾಸಕ್ತಿ ಮತ್ತು ಜಮೀನನ್ನು ಖರೀದಿಸುವ ವರವಾಗಿರುವುದರಿಂದ ಹಣಕಾಸು ನಿರ್ವಹಿಸಲು ಉತ್ತಮ ವ್ಯವಸ್ಥೆಯಾಗಿದೆ
ಅರ್ಹತಾ ಮಾನದಂಡಗಳು
Land Purchase Scheme ಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಈ ಕೆಳಕಂಡ ಶರತ್ತುಗಳನ್ನು ಪೂರೈಸಿದೆ ನಂತರವೇ ಯಶಸ್ವಿಯಾಗಿ ಅರ್ಜಿ ಸಲ್ಲಿಸಬಹುದಾಗಿದೆ ಮುಖ್ಯ ಅರ್ಹತ ಮಾನದಂಡ ಗಳೆಂದರೆ
- ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು
- ಅರ್ಜಿದಾರರು ಭೂರಹಿತ ಕೃಷಿ ಕಾರ್ಮಿಕರಾಗಿರಬೇಕು ಅಂದರೆ ಸ್ವಂತ ಯಾವುದೇ ಕೃಷಿ ಜಮೀನನ್ನು ಹೊಂದಿಲ್ಲ ಎಂದು ದೃಢೀಕರಣ ನೀಡಬೇಕಾಗುತ್ತದೆ ಹಾಗೂ ಜಿಲ್ಲಾಧಿಕಾರಿಯವರಿಂದ ಪಡೆದ ಭೂ ರಹಿತ ಪ್ರಮಾಣ ಪತ್ರವನ್ನು ಸಹ ಪ್ರದರ್ಶಿಸಬೇಕಾಗುತ್ತದೆ
- ಅರ್ಜಿದಾರರ ವಯಸ್ಸು 21 ವರ್ಷದಿಂದ ಗರಿಷ್ಠ 50 ವರ್ಷದ ಒಳಗೆ ಇರಬೇಕು
- ಕುಟುಂಬದ ವಾರ್ಷಿಕ ಆದಾಯವು ಭೂ ಮಾಲೀಕತ್ವ ಯೋಜನೆಯ ಆಧಾರದಲ್ಲಿ ಮಿತಿಯೊಳಗಿರಬೇಕು
- ಕರ್ನಾಟಕ ಸರ್ಕಾರದ ಇತರೆ ಭೂ ಸಹಾಯ ಯೋಜನೆಯಡಿಯಲ್ಲಿ ಈಗಾಗಲೇ ಫಲಾನುಭವಿಗಳಾಗಿರುವವರು ಅಥವಾ ಸಹಾಯಧನ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ
ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು
Land Purchase Scheme ಗೆ ಅರ್ಜಿ ಸಲ್ಲಿಸಲು ವೈಯಕ್ತಿಕ ಹಾಗೂ ಕೃಷಿ ಜಮೀನನ್ನು ಹೊಂದಿಲ್ಲದ ಸಂಬಂಧಿತ ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಪ್ರಮುಖ ದಾಖಲೆಗಳೆಂದರೆ
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಭೂ ರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ
- ಸಂಬಂಧಿತ ಭೂ ದಾಖಲೆಗಳು
- ಪಾಸ್ಪೋರ್ಟ್ ಸೈಜ್ ಭಾವಚಿತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
ಈ ಎಲ್ಲ ದಾಖಲೆಗಳು ಚಾಲ್ತಿಯಲ್ಲಿದ್ದು ನವೀಕರಿಸಿದ ನೈಜ ದಾಖಲೆಗಳನ್ನು ಒಳಗೊಂಡಿದ್ದು ಮಾಹಿತಿಯು ಸ್ಪಷ್ಟವಾಗಿರಬೇಕು ಕೆಲವೊಂದು ಸಂದರ್ಭದಲ್ಲಿ Land Purchase Scheme ಗೆ ಇನ್ನು ಹೆಚ್ಚಿನ ದಾಖಲೆಗಳನ್ನು ಕೇಳಲಾಗಬಹುದು
ಯೋಜನೆಗೆ ಅರ್ಜಿ ಸಲ್ಲಿಸಲು ಹಂತಗಳು
Land Purchase Scheme ಗೆ ಅರ್ಜಿ ಸಲ್ಲಿಸಲು ಆನ್ಲೈನ್ ಹಾಗೂ ಆಫ್ಲೈನ್ ಎರಡು ವಿಧಾನಗಳಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ
Land Purchase Scheme ಗೆ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ:
- ಮೊದಲು ಅರ್ಹ ಹಾಕಿದಾರರು ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು
- ನೊಂದಾವಣಿ ಇಲ್ಲದಿದ್ದರೆ ಮೊದಲು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ಬಳಸಿ ನೋಂದಾವಣೆ ಮಾಡಿಕೊಳ್ಳಬೇಕು.
- ನಂತರ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕು
- ಪ್ರಸ್ತುತ ಯೋಜನೆಗಳ ಅಡಿಯಲ್ಲಿ ಭೂಮಾಗಳಿಕತ್ವ ಯೋಜನೆ ಅರ್ಜಿ ನಮೂನೆಯನ್ನು ಹುಡುಕಿ ಆನ್ಲೈನ್ ಅರ್ಜಿ ಸಲ್ಲಿಕೆ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ನೇಮಕಾತಿ ಅರ್ಜಿಯು ತೆರೆಯಲಿದ್ದು ವೈಯಕ್ತಿಕ ಮಾಹಿತಿ ಭೂಮಿಗೆ ಸಂಬಂಧಿಸಿದ ಮಾಹಿತಿ ಹಾಗೂ ಭೂಮಿಯನ್ನು ಹೊಂದಿಲ್ಲದಿದ್ದರ ಬಗ್ಗೆ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
- ಅಗತ್ಯವಿರುವ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ಅದರ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕ ಇದ್ದಲ್ಲಿ ಪಾವತಿಸಿ
- ಅರ್ಜಿಯನ್ನು ಸಲ್ಲಿಸಿ ಶುಲ್ಕವನ್ನು ಪಾವತಿಸಿದ ನಂತರ ಆರ್ಜಿಯು ಡೌನ್ಲೋಡ್ ಆಗುತ್ತದೆ, ಇದನ್ನು ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಬೇಕು
Land Purchase Scheme ಗೆ ಆಫ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ Land Purchase Scheme ಆನ್ಲೈನ್ ಹಾಗು ಆಫ್ ಲೈನ್ ಎರಡು ವಿಧಾನಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುವುದರಿಂದ ಆಫ್ಲೈನ್ ಮೂಲಕ ಈ ಕೆಳಕಂಡಂತೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
- ಗ್ರಾಮ ಒನ್ ಕಚೇರಿ
- ಬೆಂಗಳೂರು ಒನ್ ಕೇಂದ್ರಗಳು
- ಕರ್ನಾಟಕ ಒನ್ ಕೇಂದ್ರಗಳು
- ತಾಲೂಕಿನ ತಾಲೂಕು ಕಚೇರಿಗಳು
- ಸಮಾಜ ಕಲ್ಯಾಣ ಇಲಾಖೆ ಕಚೇರಿಗಳು
ಈ ಕೇಂದ್ರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ತಿಳಿಸಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಲು ಸಹಕರಿಸುತ್ತಾರೆ
Land Purchase Scheme ನ ಪ್ರಮುಖ ಪ್ರಯೋಜನಗಳು
- ಸ್ವಂತ ಕೃಷಿ ಜಮೀನನ್ನು ಹೊಂದಿಲ್ಲದ ಕುಟುಂಬಗಳಿಗೆ ಕೃಷಿ ಜಮೀನನ್ನು ಒಂದು ಅವಕಾಶವನ್ನು ಕಲ್ಪಿಸುವುದು
- ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿ ಮಹಿಳಾ ಸಬಲೀಕರಣವನ್ನು ಸಾಧಿಸಲು ಸಹಕರಿಸುತ್ತದೆ
- ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಿದಂತಾಗುತ್ತದೆ
- ಗ್ರಾಮೀಣ ಪ್ರದೇಶದಲ್ಲಿನ ಬಡತನದ ಪ್ರಮಾಣವನ್ನು ಕಡಿಮೆ ಮಾಡುತ್ತದೆ
- ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುವುದರಿಂದ ಮರುಪಾವತಿ ಮತ್ತು ಸಬ್ಸಿಡಿಯು ಆರ್ಥಿಕ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ
- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಸುಧಾರಿಸಿ ಸಾಮಾಜಿಕವಾಗಿ ಬೆಳವಣಿಗೆಗೊಳ್ಳಲು ಸಹಕರಿಸುತ್ತದೆ
Land Purchase Scheme ಗೆ ಅರ್ಜಿ ಸಲ್ಲಿಸುವವರಿಗೆ ಪ್ರಮುಖ ಸಲಹೆಗಳು
- ಅರ್ಜಿ ಸಲ್ಲಿಸುವ ಮೊದಲು ತಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆ ಎನ್ ಪಿ ಸಿ ಐ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ
- ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲೆಗಳು ನವೀಕರಣಗೊಂಡು ಮಾನ್ಯ ವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಜಾತಿ ಪ್ರಮಾಣ ಪತ್ರವೂ ಜೀವಿತಾವಧಿಗೆ ಅಸ್ತಿತ್ವದಲ್ಲಿದ್ದರೂ ಆದಾಯ ಪ್ರಮಾಣ ಪತ್ರಗಳು ಐದು ವರ್ಷಕ್ಕೊಮ್ಮೆ ನವೀಕರಣಗೊಳ್ಳಬೇಕು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮಾನ್ಯತೆಯನ್ನು ಪರಿಶೀಲಿಸಲು : ಇಲ್ಲಿ ಕ್ಲಿಕ್ ಮಾಡಿ
- ರೈತರು ಭೂಮಿಯನ್ನು ಖರೀದಿಸುವ ಮೊದಲು ಆ ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು ಸಲಹೆಗಳನ್ನು ಪಡೆಯಿರಿ
- ಅರ್ಜಿ ಪ್ರಕ್ರಿಯೆಯಲ್ಲಿ ಸಲ್ಲಿಸುವ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ ಅಥವಾ ಪ್ರತಿಗಳನ್ನು ಇರಿಸಿಕೊಳ್ಳಿ
- ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅಥವಾ ಅಧಿಕೃತ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮಾತ್ರ ಅರ್ಜಿಯನ್ನು ಸಲ್ಲಿಸಿ ಯಾವುದೇ ಮಧ್ಯವರ್ತಿಗಳು ಅಥವಾ ಬೇರೆ ಅರ್ಜಿ ಸಲ್ಲಿಸುವಿಕೆಯ ಪ್ರಕ್ರಿಯೆಯನ್ನು ನಂಬಬೇಡಿ
| ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ | ಸೇವಾಸಿಂದು ಪೋರ್ಟಲ್ |
| ಸೇವಾಸಿಂದು ಫೋಟೋನಲ್ಲಿ ನೋಂದಾವಣೆಗೊಳ್ಳಲು | ನೋಂದಣಿ |
| ಆರ್‌ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ | ಲಾಗಿನ್ ನಂತರ ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ | ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ |
ಕರ್ನಾಟಕ ಸರ್ಕಾರವು ತಂದಿರುವ ಭೂಮಾಲಿಕತ್ವ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕುಟುಂಬಗಳಿಗೆ ಹಾಗೂ ಮಹಿಳಾ ಕೃಷಿ ಕಾರ್ಮಿಕರನ್ನು ಸಬಲೀಕರಣ ಗೊಳಿಸಲು ತಂದಿರುವ ಮಹತ್ವದ ಯೋಜನೆಯಾಗಿದ್ದು ಈ ಯೋಜನೆಯಲ್ಲಿ 25 ಲಕ್ಷಗಳವರೆಗಿನ ಆರ್ಥಿಕ ಸಹಾಯಧನದ ಜೊತೆಯಲ್ಲಿ ಸಬ್ಸಿಡಿ ಜೊತೆಗೆ ಸಾಲದ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸಲಾಗಿದೆ ಈ ಸಾಲಗಳು ದೀರ್ಘಾವಧಿ ಸಾಲಗಳಾಗಿದ್ದು ಮರುಪಾವತಿ ನಿಯಮಗಳು ರೈತ ಹಿತ ಶಕ್ತಿಗೆ ಒಳಪಟ್ಟಿದೆ ಅದರ ಜೊತೆಯಲ್ಲಿ ಈ ಯೋಜನೆಯು ಬಡ ಕುಟುಂಬಗಳಿಗೆ ಕೃಷಿ ಜಮೀನನ್ನು ಹೊಂದುವ ಕನಸನ್ನು ನನಸಾಗಿಸಲು ಪ್ರಮುಖ ಪಾತ್ರ ವಹಿಸುತ್ತವೆ
ಈ ಯೋಜನೆಯು ಕೇವಲ ಆರ್ಥಿಕ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದಲ್ಲದೆ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಿ ಮಾಲೀಕರಾಗಲು ಸಹಕರಿಸುತ್ತದೆ ಆದುದರಿಂದ ಕರ್ನಾಟಕ ಸರ್ಕಾರದ ಈ ಯೋಜನೆಯ ಬಗ್ಗೆ ಆದಷ್ಟು ಬೇಗ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ
Land Purchase Scheme : FAQ’s
1) ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
SC/ST ವರ್ಗದ ಭೂ ಇಲ್ಲದ ಕೃಷಿ ಕಾರ್ಮಿಕರು ಮಾತ್ರ ಈ ಯೋಜನೆಗೆ ಅರ್ಜಿ ಹಾಕಬಹುದು.
2) ವಯಸ್ಸಿನ ಮಿತಿ ಎಷ್ಟಿರಬೇಕು?
ಅರ್ಜಿದಾರರ ವಯಸ್ಸು 21 ರಿಂದ 50 ವರ್ಷಗಳ ಒಳಗೆ ಇರಬೇಕು.
3) ಸ್ವಂತ ಜಮೀನು ಇದ್ದರೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಸ್ವಂತ ಕೃಷಿ ಜಮೀನು ಇಲ್ಲದವರು ಮಾತ್ರ ಈ ಯೋಜನೆಗೆ ಅರ್ಹರು.
4) ಯಾವ ಪ್ರಮುಖ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಭೂ ರಹಿತ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರಗಳು ಮುಂತಾದ ಪ್ರಮುಖ ಬೇಕಾಗುತ್ತವೆ.
5) ಸರ್ಕಾರದಿಂದ ಈಗಾಗಲೇ ಭೂ ಸಹಾಯ ಪಡೆದವರು ಅರ್ಜಿ ಹಾಕಬಹುದೇ?
ಇಲ್ಲ, ಈಗಾಗಲೇ ಭೂ ಸಹಾಯಧನ ಪಡೆದವರು ಈ ಯೋಜನೆಗೆ ಅರ್ಜಿ ಹಾಕಲು ಅರ್ಹರಲ್ಲ.