Telegram Join Our Telegram WhatsApp Join Our WhatsApp

BCM Hostel Admission 2026, Best Scheme: ಉಚಿತ ಹಾಸ್ಟೆಲ್‌ ಪ್ರವೇಶಾತಿಗೆ ಆನ್‌ಲೈನ್‌ ಅರ್ಜಿ ಆರಂಭ, ಅಗತ್ಯ ದಾಖಲೆ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ (BCM Hostel Admission)

ಸ್ನೇಹಿತರೆ ನಮಸ್ಕಾರ ಇಂದಿನ ಸಂದರ್ಭದಲ್ಲಿ ಶಿಕ್ಷಣವನ್ನು ಪಡೆಯಬೇಕೆಂಬ ಹಂಬಲ ಎಲ್ಲರಿಗೂ ಇದೆ ಆದರೆ ಆರ್ಥಿಕ ಪರಿಸ್ಥಿತಿ ಹಾಗೂ ದೂರದ ಊರುಗಳಿಗೆ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಕಷ್ಟಕರವಾಗುತ್ತಿದೆ ಆದುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯುವ ಉದ್ದೇಶದಿಂದ ಹಾಗೂ ಶಿಕ್ಷಣವನ್ನು ಪಡೆಯುವುದನ್ನು ಸುಲಭಗೊಳಿಸಲು ಬಿಸಿಎಂ ಹಾಸ್ಟೆಲ್ ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ ಶಾಲೆ ಪದವಿಪೂರ್ವ ಪದವಿ ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಇದೀಗ BCM Hostel Admission ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸರ್ಕಾರದ ಉಚಿತ ವಸತಿ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯು ದೊಡ್ಡ ಪ್ರಮಾಣದಲ್ಲಿ ನೆರವಾಗಲಿದ್ದು ತಮ್ಮ ಶಿಕ್ಷಣವನ್ನು ಪೂರೈಸಿಕೊಳ್ಳಲು ಸಿಕ್ಕಿರುವ ವರದಾನವಾಗಿದೆ ಆದ್ದರಿಂದ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಆದಷ್ಟು ಬೇಗ ಮಾಹಿತಿ ಪಡೆದುಕೊಂಡು BCM Hostel Admission ಗೆ  ಅರ್ಜಿಯನ್ನು ಸಲ್ಲಿಸುವುದರ ಮೂಲಕ ತಮ್ಮ ಉಚಿತ ಹಾಸ್ಟೆಲ್ ಪ್ರವೇಶವನ್ನು ಪಡೆಯಿರಿ

ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವ ಸಂದರ್ಭದಲ್ಲಿ ವಸತಿ ಸಮಸ್ಯೆ ಎದುರಾಗುವುದು ಸರ್ವೇಸಾಮಾನ್ಯ ನಗರ ಪ್ರದೇಶಗಳಲ್ಲಿ ಹೆಚ್ಚಿನ ಬಾಡಿಗೆ ಹಾಗೂ ಹೆಚ್ಚಿನ ಖರ್ಚು ವೆಚ್ಚಗಳು ಇರುತ್ತವೆ ಆದದರಿಂದ ಶಿಕ್ಷಣವನ್ನು ಪಡೆಯಲು ತೊಂದರೆಗಳು ಎದುರಾಗುವುದರಿಂದ ಕರ್ನಾಟಕ ಸರ್ಕಾರವು ಬಿಸಿಎಂ ಹಾಸ್ಟೆಲ್ ಗಳನ್ನು ಪ್ರಾರಂಭಿಸುವ ಮೂಲಕ ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ವಸತಿ ವ್ಯವಸ್ಥೆಯನ್ನು BCM Hostel Admission ಮೂಲಕ ಕಲ್ಪಿಸಿದೆ ಈ ಹಾಸ್ಟಲ್ ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದರ ಮೂಲಕ ಶೈಕ್ಷಣಿಕ ಉದ್ದೇಶದಿಂದ ಬಂದಿರುವ ವಿದ್ಯಾರ್ಥಿಗಳು ಖರ್ಚನ್ನು ಕಡಿಮೆಗೊಳಿಸಿ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಪಡೆಯಬಹುದಾಗಿರುತ್ತದೆ ಈ 2026-27ನೇ ಶೈಕ್ಷಣಿಕ ವರ್ಷದಲ್ಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ನೀವೇನಾದರೂ ವಿದ್ಯಾರ್ಥಿ ನಿಲಯವನ್ನು ಹುಡುಕುತ್ತಿದ್ದರೆ ಇಂದೇ BCM Hostel Admission ನ ಬಗ್ಗೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ

Read More : ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್‌ ಮೆಟ್ರಿಕ್‌ ಹಾಸ್ಟೆಲ್‌ ಗೆ ಅರ್ಜಿ ಸಲ್ಲಿಕೆ

ಹಾಸ್ಟೆಲ್ ಸೌಲಭ್ಯಗಳ ವೈಶಿಷ್ಟ್ಯತೆ

ಈ BCM Hostel Admission ಹಾಸ್ಟೆಲ್ ಗಳಲ್ಲಿ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಯಲ್ಲಿ ಓದಲು ಹೆಚ್ಚಿನ ಸಮಯ ರಕ್ಷಣೆ ಊಟದ ವ್ಯವಸ್ಥೆ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಈ ಬಿಸಿಎಂ ಹಾಸ್ಟೆಲ್ ಗಳ ಅಡಿಯಲ್ಲಿ ದೊರೆಯುವ ಪ್ರಮುಖ ಸೌಲಭ್ಯಗಳು ಎಂದರೆ

  • ಉಚಿತ ವಸತಿ
  • ಓದಲು ಪ್ರತ್ಯೇಕ ಕೊಠಡಿ
  • ಪೌಷ್ಟಿಕ ಆಹಾರದ ವ್ಯವಸ್ಥೆ
  • ಶುದ್ಧ ಕುಡಿಯುವ ನೀರು
  • ವಿದ್ಯಾರ್ಥಿಗಳ ಭದ್ರತೆಗಾಗಿ ನಿಯಮಿತ ಮೇಲ್ವಿಚಾರಣೆ
  • ವಿದ್ಯುತ್ ಹಾಗೂ ಇತರ ಮೂಲಭೂತ ಸೌಕರ್ಯಗಳು
  • ಪ್ರತ್ಯೇಕ ಲಾಕರ್ ಸೌಲಭ್ಯ
  • ಡಿಜಿಟಲ್ ಹಾಜರಾತಿ ಪದ್ಧತಿ
  • ಲೈಬ್ರರಿ

ಇನ್ನು ಮುಂತಾದ ಪ್ರಮುಖ ಸೌಲಭ್ಯಗಳು BCM Hostel Admission ನಿಂದ ದೊರಕುತ್ತವೆ

BCM Hostel Admission ಗೆ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು

ಈ ಕೆಳಗೆ ತಿಳಿಸಿರುವ ವಿದ್ಯಾರ್ಥಿಗಳು ಈ BCM Hostel Admission ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಈ ಅರ್ಹತೆಗಳೆಂದರೆ

BCM Hostel Admission ಗೆ ಇರಬೇಕಾದ ವಿದ್ಯಾರ್ಹತೆ ವಿವರ

ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು : ಸರ್ಕಾರಿ ಶಾಲೆ ಅಥವಾ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು
ಪದವಿ ಪೂರ್ವ ವಿದ್ಯಾರ್ಥಿಗಳು ಅಂದರೆ ಪಿಯುಸಿ : ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಪ್ರವೇಶವನ್ನು ಪಡೆದು ಸೂಕ್ತ ದಾಖಲಾತಿಗಳನ್ನು ಹೊಂದಿರಬೇಕು
ಪದವಿ ವಿದ್ಯಾರ್ಥಿಗಳು : ಪ್ರಥಮ ದರ್ಜೆ ಕಾಲೇಜಿಗೆ ದಾಖಲಾತಿ ಆಗಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು
ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು : ಐಟಿಐ ನರ್ಸಿಂಗ್ ಡಿಪ್ಲೋಮಾ ಇಂಜಿನಿಯರಿಂಗ್ ಮುಂತಾದ ಕೋರ್ಸ್ಪ ಗಳಿಗೆ ದಾಖಲಾಗಿರಬೇಕು

BCM Hostel Admission ಗೆ ಅರ್ಜಿ ಸಲ್ಲಿಸಲು ಆದಾಯದ ಮಿತಿ ಎಷ್ಟಿರಬೇಕು

ಈ ಬಿಸಿಎಂ ಹಾಸ್ಟೆಲ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು ವಾರ್ಷಿಕ ಆದಾಯದ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ ಸಾಮಾನ್ಯ ಆದಾಯದ ಮಿತಿ ವಿವರ ಈ ಕೆಳಕಂಡಂತಿದೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ :  1,20,000/- ರೂಗಳ ಒಳಗೆ ಇರಬೇಕು
ನಗರ ಹಾಗೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ : 2,50,000/-  ರೂಗಳ ಒಳಗೆ ಇರಬೇಕು

BCM Hostel Admission ಗೆ ಯಾವ ಯಾವ ದಾಖಲೆಗಳು ಅಗತ್ಯ

BCM Hostel Admission ಗೆ  ಅರ್ಜಿ ಸಲ್ಲಿಸಲು ಪ್ರಮುಖವಾಗಿ ಈ ಕೆಳಕಂಡ ದಾಖಲಾತಿಗಳು ಬೇಕಾಗುತ್ತವೆ ಅವುಗಳೆಂದರೆ

  • ಆಧಾರ್ ಕಾರ್ಡ್
  • ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್ ಇಮೇಲ್ ಐಡಿ
  • ಪಾಸ್ಪೋರ್ಟ್ ಗಾತ್ರದ ಫೋಟೋಗಳು
  • ಕಾಲೇಜು ಮತ್ತು ಶಾಲೆಗೆ ದಾಖಲಾದ ಸಂಬಂಧ ಅರ್ಜಿ ಪ್ರತಿ
  • ಶುಲ್ಕ ಪಾವತಿ ವಿವರದ ರಶೀದಿ
  • ಬ್ಯಾಂಕ್ ಖಾತೆ ವಿವರ

ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚಿನ ದಾಖಲಾತಿಗಳನ್ನು ಕೇಳಲಾಗಬಹುದು

BCM Hostel Admission ಗೆ ಅರ್ಜಿ ಸಲ್ಲಿಕೆಯ ವಿಧಾನ

ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಈ ಹಾಸ್ಟಲ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಗತ್ಯ ದಾಖಲಾತಿಗಳನ್ನು ಸಿದ್ಧವಿರಿಸಿಕೊಂಡು ಯಶಸ್ವಿಯಾಗಿ ಆನ್ಲೈನ್ ಮೂಲಕ BCM Hostel Admission ಗೆ ಅರ್ಜಿ ಸಲ್ಲಿಸುವ ಹಂತ ಹಂತವಾದ ವಿಧಾನ ಈ ಕೆಳಕಂಡಂತಿದೆ

  • ಮೊದಲು ಬಿಸಿಎಂ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
  • ಮುಖಪುಟದಲ್ಲಿ ಕಾಣುವ ಹಾಸ್ಟೆಲ್ ಅಡ್ಮಿಶನ್ ಎಂಬ ಆಯ್ಕೆಯನ್ನು ಆಯ್ದುಕೊಂಡು ಕ್ಲಿಕ್ ಮಾಡಬೇಕು
  • ಅಲ್ಲಿ ಕಾಣಸಿಗುವ ಹೊಸ ವಿದ್ಯಾರ್ಥಿ ನೋಂದಣಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ತಮ್ಮ ಆಧಾರ್ ನಂಬರ್ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ನಮೂದಿಸಿ ಓಟಿಪಿಕೊಳ್ಳಬೇಕು
  • ನಂತರ ಅಪ್ಲೈ ಫಾರ್ ಹಾಸ್ಟೆಲ್ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಹಾಸ್ಟಲ್ ಅರ್ಜಿಯು ತೆರೆಯುತ್ತದೆ ಅಲ್ಲಿ ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ ನವೀಕರಿಸಿ

ವಿಶೇಷ ಸೂಚನೆ : ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ ನಾಲ್ಕನೇ ಹಂತದಲ್ಲಿ ಡೇಸ್ ಕಾಲರ್ ಅಥವಾ ಹಾಸ್ಪಿಲರ್ ಎಂಬ ಆಯ್ಕೆಗಳನ್ನು ಕೇಳಲಾಗುವುದು ಇಲ್ಲಿ ಹಾಸ್ಟೆಲ್ ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು ಒಂದು ವೇಳೆ ನೀವು ಡಿಸ್ ಕಾಲರ್ ಆಯ್ಕೆಯನ್ನು ಆಯ್ದುಕೊಂಡಿದ್ದಲ್ಲಿ ಹಾಸ್ಟೆಲ್ ಪ್ರವೇಶಾತಿ ಸಿಗುವುದಿಲ್ಲ.

  • ನಂತರ ಕೇಳಲಾಗುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ನೀವು ನಮೂದಿಸುವ ಮಾಹಿತಿ ಸರಿಯಾಗಿದೆ ಎಂದು ಪರಿಶೀಲಿಸಿ ಸಬ್ಮಿಟ್ ಮಾಡುವುದರ ಮೂಲಕ ಮುಂದೆ ಬರುವ ಅರ್ಜಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ
  • ಅರ್ಜಿಯನ್ನು ತಮ್ಮ ಕಾಲೇಜಿನ ಪ್ರಾಂಶುಪಾಲರ ಬಳಿ ಪ್ರಮಾಣಿಕರಿಸುವ ಮೂಲಕ ಹಾಸ್ಟೆಲ್ ಗೆ ನೀಡಬೇಕಾಗುತ್ತದೆ ಇದರ ಜೊತೆ ಸಂಬಂಧಿತ ದಾಖಲಾತಿಗಳನ್ನು ಕೇಳಲಾಗಬಹುದು

BCM Hostel Admission ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು

  • ತಾವು ನಮೂದಿಸಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದ್ದು ಯಾವುದೇ ತೊಂದರೆ ಇರಬಾರದು
  • ಅರ್ಜಿ ನಮೂನೆಯಲ್ಲಿ ತಪ್ಪು ಮಾಹಿತಿಯನ್ನು ನೀಡಬಾರದು. ಸರಿಯಾದ ಹಾಗೂ ನಿಖರವಾದ ಮಾಹಿತಿಯನ್ನು ನಮೂದಿಸಬೇಕು
  • ತಾವು ಅಪ್ಲೋಡ್ ಮಾಡುವ ದಾಖಲಾತಿಗಳು ಸ್ಪಷ್ಟವಾಗಿರಬೇಕು ಹಾಗೂ ನೋಡಲು ಅರ್ಥವಾಗುವಂತಿರಬೇಕು
  • ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪ್ರಯತ್ನಿಸುವುದರಿಂದ ಕೊನೆಯ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ
  • ಅರ್ಜಿಯನ್ನು ಸಲ್ಲಿಸಿದ ನಂತರ ಬರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ ಹಾಸ್ಟೆಲ್ ದಾಖಲಾತಿಯು ಪೂರ್ಣಗೊಳ್ಳುವವರೆಗೆ ಈ ದಾಖಲಾತಿಯ ಪ್ರಾಮುಖ್ಯತೆ ಹೆಚ್ಚಿರುತ್ತದೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವರದಾನ

ಈ ಬಿಸಿಎಂ ಹಾಸ್ಟೆಲ್ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಪ್ರಾರಂಭಿಸಿರುವ ಉಚಿತ ವಸತಿ ಯೋಜನೆಯಾಗಿದೆ ಕೆಲವೊಮ್ಮೆ ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮುಂದುವರೆಸಲು ಕಷ್ಟವಾದರೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ತಕ್ಕಮಟ್ಟಿಗೆ ಸಂದರ್ಭಗಳನ್ನು ಸುಲಭಗೊಳಿಸಬಹುದಾಗಿದೆ ವಿಶೇಷವಾಗಿ ಮನೆಯಿಂದ ದೂರದ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಿಂದ ಸಿಗುವ ಸೀಟುಗಳಿಗೆ ದಾಖಲಾತಿ ಪಡೆಯಲು ಕಷ್ಟಕರವಾಗಿದ್ದರು ಉಚಿತ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನು ಸುಲಭಗೊಳಿಸಿವೆ. ಇದರಿಂದ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ಮುಗಿಸುವುದರ ಜೊತೆಯಲ್ಲಿ ಪೋಷಕರಿಗೂ ಆರ್ಥಿಕ ಒತ್ತಡ ಕಡಿಮೆಯಾಗಲಿದೆ

ಅರ್ಜಿ ಸಲ್ಲಿಸಲು ತಡ ಮಾಡಬೇಡಿ

ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬಿಸಿಎಂ ಹಾಸ್ಟೆಲ್ ಗಳ ಪ್ರವೇಶಕ್ಕೆ ಹಾಗೂ ದಾಖಲಾತಿಗೆ ಅರ್ಜಿ ಸಲ್ಲಿಸುತ್ತಾರೆ ಆದ್ದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲಾತಿಗಳನ್ನು ಮತ್ತು ಅವುಗಳ ಚಾಲ್ತಿ ಅವಧಿಯನ್ನು ಪರೀಕ್ಷಿಸಲು ಮರೆಯಬೇಡಿ

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-06-2026

ಅಧಿಕೃತ ವೆಬ್ಸೈಟ್ :  ರಾಜ್ಯ ವಿದ್ಯಾರ್ಥಿನಿಲಯ ಪೋರ್ಟಲ್
ಎಸ್‌ ಎಸ್‌ ಪಿ ಖಾತೆ ಸೃಜಿಸಲು ಖಾತೆ ಸೃಜಿಸಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್‌ ಮಾಡಿ
ಇದೇ ರೀತಿಯ ಹೆಚ್ಚುವರಿ ಮಾಹಿತಿಯನ್ನು ಪಡೆಯಲು ನೇಮಕಾತಿ ಮಾಹಿತಿ      ಸರ್ಕಾರಿ ಯೋಜನೆಗಳ ಮಾಹಿತಿ

 

ಬಿ ಸಿ ಎಂ ಹಾಸ್ಟೆಲ್ ಗಳು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಹಾಗೂ ಅಭಿವೃದ್ಧಿಪಡಿಸಲು ಜಾರಿಗೆ ತಂದಿರುವ ಮಹತ್ವ ಯೋಜನೆಯಲ್ಲಿ ಒಂದಾಗಿದೆ ಉತ್ತಮ ವಸತಿ ಹಾಗೂ ಉತ್ತೇಜಿತ ಶಿಕ್ಷಣದ ವಾತಾವರಣವನ್ನು ಒದಗಿಸುವುದು ಪ್ರಮುಖ ಗುರಿಯಾಗಿದ್ದು ಅರ್ಹ ವಿದ್ಯಾರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ

BCM Hostel Admission 2026 – FAQ’s

1) BCM Hostel Admission ಗೆ ಯಾರು ಯಾರು ಅರ್ಜಿ ಸಲ್ಲಿಸಬಹುದು?
ಶಾಲೆ, ಪಿಯುಸಿ, ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ (ಐಟಿಐ, ಡಿಪ್ಲೊಮಾ, ನರ್ಸಿಂಗ್, ಇಂಜಿನಿಯರಿಂಗ್ ಮುಂತಾದವು) ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

2) BCM Hostel Admission ಗೆ ಅರ್ಜಿ ಸಲ್ಲಿಸಲು ಆದಾಯ ಮಿತಿ ಎಷ್ಟಿದೆ?
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ₹1,20,000/- ಒಳಗೆ ಹಾಗೂ ನಗರ/ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ವಾರ್ಷಿಕ ಆದಾಯವು ₹2,50,000/- ಒಳಗೆ ಇರಬೇಕು.

3) BCM Hostel Admission ಗೆ ಯಾವ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಕಾಲೇಜು/ಶಾಲೆ ದಾಖಲಾತಿ ಪ್ರತಿ, ಶುಲ್ಕ ರಶೀದಿ ಹಾಗೂ ಬ್ಯಾಂಕ್ ಖಾತೆ ವಿವರ ಅಗತ್ಯವಾಗಬಹುದು ಕೆಲವೊಂದು ಸಂದರ್ಭದಲ್ಲಿ ಹೆಚ್ಚಿನ ದಾಖಲೆಗಳು ಬೇಕಾಗಬಹುದು.

4) BCM Hostel Admission ಗೆ ಆನ್‌ ಲೈನ್‌ ಮೂಲಕ ಅರ್ಜಿ ಹೇಗೆ ಸಲ್ಲಿಸಬೇಕು?
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ದಾಖಲಾತಿಗಳನ್ನು ಅಪ್ಲೋಡ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು. ನಂತರ ಅರ್ಜಿಯ ಪ್ರಿಂಟ್ ತೆಗೆದು ಕಾಲೇಜು ಪ್ರಾಂಶುಪಾಲರಿಂದ ಪ್ರಮಾಣೀಕರಿಸಿ ಹಾಸ್ಟೆಲ್‌ ಗೆ ನೀಡಬೇಕು

5) BCM Hostel Admission ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು?
ಆನ್‌ಲೈನ್ ಮೂಲಕ ಹಾಸ್ಟೆಲ್‌ ಗೆ  ಅರ್ಜಿ ಸಲ್ಲಿಸಲು 15-06-2026 ಕೊನೆಯ ದಿನಾಂಕ ಆಗಿದೆ. ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment