ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ (KEA Recruitments)
ನಮಸ್ಕಾರ ಸ್ನೇಹಿತರೆ ನೀವು ಕರ್ನಾಟಕದಲ್ಲಿದ್ದು ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮಗೆ ಇದು ಸುವರ್ಣ ಅವಕಾಶವಾಗಿದೆ ಕರ್ನಾಟಕ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಈ ನೇಮಕಾತಿ ದಿಸೂಚನೆ ಮೂಲಕ ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮದಲ್ಲಿ ಖಾಲಿ ಇರುವ ಸಹಾಯಕ ಅಭಿಯಂತರರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಥೈಸಿಕೊಂಡು ಹುದ್ದೆಯ ವಿವರ ವಿದ್ಯಾರ್ಹತೆ ಅರ್ಜಿ ವಿಧಾನ ಆಯ್ಕೆ ಪ್ರಕ್ರಿಯೆ ಸಂಬಳ ಹಾಗೂ ಇನ್ನು ಮುಂತಾದ ಅಗತ್ಯ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಓದಿ ಅರ್ಹತೆ ಮಾನದಂಡಗಳನ್ನು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸುವುದರ ಮೂಲಕ ತಮ್ಮ ರಾಜ್ಯ ಸರ್ಕಾರಿ ಹುದ್ದೆಯನ್ನು ಪಡೆಯಿರಿ
ಹುದ್ದೆಯ ಅಧಿಸೂಚನೆಯ ವಿವರಗಳು
KEA Recruitments ಅಧಿಸೂಚನೆ ಹೊರಡಿಸಿರುವ ನಿಗಮ ಮತ್ತು ಮಂಡಳಿಗಳು
- ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ
- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
ಪರೀಕ್ಷಾ ಪ್ರಾಧಿಕಾರದ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆಗಳ ಹೆಸರು : ಸಹಾಯಕ ಅಭಿಯಂತರರು
ಒಟ್ಟು ಹುದ್ದೆಗಳ ಸಂಖ್ಯೆ : 07
ಉದ್ಯೋಗದ ಸ್ಥಳ : ಅಖಿಲ ಕರ್ನಾಟಕ
ಅರ್ಜಿ ಸಲ್ಲಿಕೆಯ ಮೋಡ್ : ಆನ್ಲೈನ್
KEA Recruitments ನ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರಗಳು
ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ
ಸಹಾಯಕ ಅಭಿಯಂತರರು (ಸಿವಿಲ್) – ಗ್ರೂಪ್ ಬಿ
ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಗ್ರೂಪ್ – ಬಿ
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
ಸಹಾಯಕ ಅಭಿಯಂತರರು (ಸಿವಿಲ್) – ಗ್ರೂಪ್ ಬಿ
KEA Recruitments ನ ಒಟ್ಟು ಹುದ್ದೆಗಳ ಸಂಖ್ಯೆ
ಸಹಾಯಕ ಅಭಿಯಂತರರು (ಸಿವಿಲ್) – ಗ್ರೂಪ್ ಬಿ : 05
ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಗ್ರೂಪ್ – ಬಿ : 01
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
ಸಹಾಯಕ ಅಭಿಯಂತರರು (ಸಿವಿಲ್) – ಗ್ರೂಪ್ ಬಿ : 01
KEA Recruitments ನ ವೇತನದ ವಿವರ
KEA Recruitments ನ ಮೂಲಕ ಆಯ್ಕೆಯಾಗುವ ಸಹಾಯಕ ಅಭಿಯಂತರದ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಸೂಚನೆಯ ಪ್ರಕಾರ 69,250/- ರೂಗಳಿಂದ ರೂ.1,34,200/- ರೂಗಳ ವರೆಗೆ ವೇತನ ನೀಡಲಾಗುವುದು
ವಯೋಮಿತಿ ವಿವರ
ಈ KEA Recruitments ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು
ವಯೋಮಿತಿ ಸಡಿಲಿಕೆ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ : 40 ವರ್ಷಗಳು ಗರಿಷ್ಠ ವಯೋಮಿತಿ
ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ : 43 ವರ್ಷಗಳು ಗರಿಷ್ಠ ವಯೋಮಿತಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ : 45 ವರ್ಷಗಳು ಗರಿಷ್ಠ ವಯೋಮಿತಿ
ಈ KEA Recruitments ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ನಾಗರಿಕ ಸೇವೆಗಳು ಸಾಮಾನ್ಯ ನೇಮಕಾತಿ ನಿಯಮದ ಅನುಸಾರ ಹೆಚ್ಚಿನ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ ಪಿಡಿಎಫ್ ಅನ್ನು ಈ ಕೆಳಗೆ ನೀಡಿದ್ದೇವೆ
KEA Recruitments ನ ಶೈಕ್ಷಣಿಕ ಅರ್ಹತೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಿಗಮ ಹಾಗೂ ಮಂಡಳಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಿವಿಲ್ ಹಾಗೂ ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಬೇಕು
KEA Recruitments ನ ಆನ್ಲೈನ್ ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ : 750/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳು ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ 500/- ರೂಗಳು
ಅಂಗವಿಕಲ ಅಭ್ಯರ್ಥಿಗಳಿಗೆ 250/- ರೂಗಳು
ಸೂಚನೆ : ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕಾಗಿರುತ್ತದೆ ಹಾಗೂ ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ
KEA Recruitments ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿರುವ ಅಧಿಕೃತ ನೇಮಕಾತಿಯಲ್ಲಿ ಸೂಚನೆಯನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ
- ಅರ್ಜಿ ಸಲ್ಲಿಸುವ ಮೊದಲು ಸಂವಹನ ಉದ್ದೇಶಕ್ಕಾಗಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಸಿದ್ಧವಾಗಿಟ್ಟುಕೊಂಡಿ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ವೆಬ್ ಸೈಟ್ ಲಿಂಕನ್ನು ಈ ಕೆಳಗೆ ನೀಡಲಾಗಿದೆ
- ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ನೇಮಕಾತಿ ವಿಭಾಗವನ್ನು ತೆರೆದು ಅಲ್ಲಿ ಸಹಾಯಕ ಅಭಿಯಂತರದ ನೇಮಕಾತಿಗೆ ನೀಡಲಾಗಿರುವ ಆನ್ಲೈನ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
- ನೇಮಕತಿ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಆನ್ಲೈನ್ ಅರ್ಜಿಯು ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಎಚ್ಚರಿಕೆಯಿಂದ ನವೀಕರಿಸಿ
- ನಂತರ ತಮ್ಮ ವೈಯಕ್ತಿಕ ದಾಖಲೆಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ವಯೋಮಿತಿ ಸೆಡಿಲಿಕೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅನ್ವಯಿಕ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
- ತಾವು ಭರ್ತಿ ಮಾಡಿರುವ ಆರ್ಜಿಯು ಸರಿಯಾಗಿದೆಯೇ ಮತ್ತು ಅಪ್ಲೋಡ್ ಮಾಡಲಾಗಿರುವ ಸರಿಯಾಗಿ ಅಪ್ಲೋಡ್ ಆಗಿವೆ ಎಂದು ಪರಿಶೀಲಿಸಿ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ನಂತರ ಸ್ಕ್ರೀನ್ ನ ಮೇಲೆ ಕಾಣುವ ನೋಂದಣಿ ಸಂಖ್ಯೆಯನ್ನು ಸೆರೆಯಿಡಿರಿ ಮತ್ತು ಬರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ
KEA Recruitments ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
- ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 21-05-2026
- ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-06-2026
- ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 05-06-2026
ಗಮನಿಸಿ: ಕೊನೆ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದ್ದರಿಂದ ಬೇಗನೆ ಅರ್ಜಿ ಸಲ್ಲಿಸಿ
ಪ್ರಮುಖ ಲಿಂಕ್ ಗಳು
| ನೇಮಕಾತಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
| ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಓದಲು | KEA Recruitment Notification PDF |
| ಆನ್ಲೈನ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು | ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ ಪಡೆಯಲು | ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ |
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಈ ನೇಮಕಾತಿ ಮೂಲಕ ಸಹಾಯಕ ಅಭಿಯಂತರರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ ತಮ್ಮ ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಕನಸನ್ನು ಸಹಕಾರಗೊಳಿಸಿ
ಬೆಂಗಳೂರು ನಗರ ನೀರು ಸರಬರಾಜು ಮಂಡಳಿ (BWSSB) ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC) ಸಹಾಯಕ ಅಭಿಯಂತರರು (ಸಿವಿಲ್/ಮೆಕ್ಯಾನಿಕಲ್) ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಉತ್ತಮ ಸಲಹೆಗಳು
- KEA ಪಠ್ಯಕ್ರಮವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ – ಮೊದಲು ಅಧಿಕೃತ ಸಿಲೆಬಸ್ ಮತ್ತು ಪರೀಕ್ಷಾ ಮಾದರಿಯನ್ನು ಡೌನ್ಲೋಡ್ ಮಾಡಿ. ಸಿವಿಲ್/ಮೆಕ್ಯಾನಿಕಲ್ ಕೋರ್ ವಿಷಯಗಳಿಗೆ ಹೆಚ್ಚು ಗಮನ ಕೊಡಿ.
- ಕೋರ್ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ –
- ಸಿವಿಲ್ : ಆರ್ಸಿಸಿ, ಸ್ಟೀಲ್ ಸ್ಟ್ರಕ್ಚರ್, ಸರ್ವೇಯಿಂಗ್, ಜಿಯೋಟೆಕ್ನಿಕಲ್, ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್, ವಾಟರ್ ಸಪ್ಲೈ & ಸ್ಯಾನಿಟರಿ ಎಂಜಿನಿಯರಿಂಗ್, ಟ್ರಾನ್ಸ್ಪೋರ್ಟೇಶನ್ ಎಂಜಿನಿಯರಿಂಗ್.
- ಮೆಕ್ಯಾನಿಕಲ್ : ಉಷ್ಣಬಲ ವಿಜ್ಞಾನ, SOM, ದ್ರವ ಯಂತ್ರಶಾಸ್ತ್ರ, ಉತ್ಪಾದನೆ, ಕೈಗಾರಿಕಾ ಎಂಜಿನಿಯರಿಂಗ್, ಯಂತ್ರ ವಿನ್ಯಾಸ, ಶಾಖ ವರ್ಗಾವಣೆ.
- ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ – KEA, KPSC, BWSSB, KUWSDB ಮತ್ತು ಸಹಾಯಕ ಇಂಜಿನಿಯರ್ ಮಟ್ಟದ ಪ್ರಶ್ನೆಗಳನ್ನು ಪರಿಹರಿಸಿ. ನಂತರ ಪ್ರಶ್ನೆಗಳ ಮಾದರಿ ಅರ್ಥವಾಗುತ್ತದೆ.
- ಪ್ರತಿ ದಿನ ಮಾಕ್ ಪರೀಕ್ಷೆ ಬರೆಯಿರಿ – ಸಮಯ ಮಿತಿಯಲ್ಲಿ ಪರೀಕ್ಷೆ ಬರೆಯುವ ಅಭ್ಯಾಸ ಮಾಡಿ. ತಪ್ಪಾದ ಪ್ರಶ್ನೆಗಳನ್ನು ಗಮನಿಸಿ ಮರು ಓದಿ ಅರ್ಥೈಸಿಕೊಳ್ಳಿ.
- ಸಾಮಾನ್ಯ ಜ್ಞಾನ ಮತ್ತು ಕರ್ನಾಟಕ ಪ್ರಸ್ತುತ ವ್ಯವಹಾರಗಳ ಮೇಲೆ ಹೆಚ್ಚು ಗಮನ ನೀಡಿ – ಕರ್ನಾಟಕ ಸರ್ಕಾರದ ಯೋಜನೆಗಳು, ನೀರಾವರಿ, ನಗರಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ ಕುರಿತ ಪ್ರಸ್ತುತ ವ್ಯವಹಾರಗಳನ್ನು ಹೆಚ್ಚಾಗಿ ಓದಿ.
- ಚಿಕ್ಕ ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳಿ – ಸೂತ್ರಗಳು, ಐಎಸ್ ಕೋಡ್ಗಳು, ಪ್ರಮುಖ ಪರಿಕಲ್ಪನೆಗಳು ಮತ್ತು ತಾಂತ್ರಿಕ ವ್ಯಾಖ್ಯಾನಗಳನ್ನು ಚಿಕ್ಕ ಟಿಪ್ಪಣಿಗಳಲ್ಲಿ ಬರೆದುಕೊಳ್ಳಿ.
- ಸರಿಯಾದ ವೇಳಾಪಟ್ಟಿ ತಯಾರಿ ಮಾಡಿ ಓದಿ – ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆ ಓದಿ. ಬೆಳಿಗ್ಗೆ ತಾಂತ್ರಿಕ ವಿಷಯಗಳು ಮತ್ತು ಸಂಜೆ MCQ ಅಭ್ಯಾಸ ಮಾಡಿ.
- ನಕಾರಾತ್ಮಕ ಗುರುತು ಇದ್ದರೆ ಊಹೆ ಮಾಡಿ ಉತ್ತರಿಸಬೇಡಿ – ಖಚಿತ ಉತ್ತರಗಳಿಗೆ ಮೊದಲ ಆದ್ಯತೆ ನೀಡಿ, ಋಣಾತ್ಮಕ ಅಂಕಗಳು ಇರುವುದರಿಂದ.
- ನೀರು ಸರಬರಾಜು ಮತ್ತು ಪರಿಸರ ವಿಷಯಗಳ ಮೇಲೆ ಹೆಚ್ಚು ಅಧ್ಯಯನ ಮಾಡಿ – BWSSB AE ಸಿವಿಲ್ ಹುದ್ದೆಗೆ ಈ ವಿಷಯಗಳಿಂದ ಪ್ರಶ್ನೆಗಳು ಹೆಚ್ಚು ಬರಬಹುದು.
- ಕೊನೆಯ 15 ದಿನ ರಿವಿಷನ್ ಮಾತ್ರ ಮಾಡಿ – ಹೊಸ ವಿಷಯ ಶುರು ಮಾಡದೆ ಸೂತ್ರಗಳು, MCQ ಗಳು ಮತ್ತು ದುರ್ಬಲ ವಿಷಯಗಳನ್ನು ಪರಿಷ್ಕರಿಸಿ.
ಒಂದು ಸರಳ ಸೂತ್ರ: 70% ಸಮಯ ಕೋರ್ ಇಂಜಿನಿಯರಿಂಗ್ ವಿಷಯಗಳು + 20% MCQs/Mock Tests + 10% ಪ್ರಚಲಿತ ಘಟನೆಗಳು & ಸಾಮಾನ್ಯ ಜ್ಞಾನ ಮೇಲೆ ಕೊಟ್ಟರೆ ಪಾಸ್ ಆಗುವ ಸಾಧ್ಯತೆಯಿದೆ.
KEA Recruitments 2026 – FAQ’s
1) ಈ KEA ನೇಮಕಾತಿಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು?
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಿವಿಲ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಅನುಗುಣವಾಗಿ ಸಂಬಂಧಿತ ವಿಭಾಗದ ಪದವಿಯನ್ನು ಪಡೆದಿರಬೇಕು.
2) ಒಟ್ಟು ಎಷ್ಟು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಆಗಿದೆ?
ಒಟ್ಟು 07 ಸಹಾಯಕ ಅಭಿಯಂತರರು (Assistant Engineer) ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಇದರಲ್ಲಿ ಸಿವಿಲ್ ವಿಭಾಗ – 06 ಹುದ್ದೆಗಳು ಹಾಗೂ ಮೆಕ್ಯಾನಿಕಲ್ ವಿಭಾಗ – 01 ಹುದ್ದೆ ಒಳಗೊಂಡಿದೆ.
3) ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ಎಷ್ಟಿರಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ, 2A/2B/3A/3B ಅಭ್ಯರ್ಥಿಗಳಿಗೆ 43 ವರ್ಷ, ಹಾಗೂ SC/ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳವರೆಗೆ ವಯೋಮಿತಿ ಸಡಿಲಿಕೆಯನ್ನು ನೀಡಿದೆ.
4) KEA ನೇಮಕಾತಿಗೆ ಎಷ್ಟು ಅರ್ಜಿ ಶುಲ್ಕವನ್ನು ಪಾವತಿಸಬೇಕು?
- ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಳು – ₹750
- SC/ST, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಳು – ₹500
- ಅಂಗವಿಕಲ ಅಭ್ಯರ್ಥಿಗಳಳು – ₹250
5) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 04-06-2026 ಕೊನೆಯ ದಿನಾಂಕವಾಗಿದ್ದು, ಅರ್ಜಿ ಶುಲ್ಕ ಪಾವತಿಸಲು 05-06-2026 ಅಂತಿಮ ದಿನಾಂಕವಾಗಿದೆ. ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.