Telegram Join Our Telegram WhatsApp Join Our WhatsApp

NPCIL Recruitment 2026, Big Opportunity : SSLC, PUC, ITI ಪೂರ್ಣಗೊಳಿಸಿರುವವರಿಗೆ ಉದ್ಯೋಗಾವಕಾಶ, ಅರ್ಹತೆ, ಸಂಬಳ, ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ

ಸ್ಟೇಪೆಂಡಿಯರಿ ಟ್ರೈನಿ ಹಾಗೂ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಆಹ್ವಾನ (NPCIL Recruitment)

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಹತ್ತನೇ ತರಗತಿ ದ್ವಿತೀಯ ಪಿಯುಸಿ ಅಥವಾ ಐಟಿಐ ವಿದ್ಯಾರ್ಥಿಯನ್ನು ಹೊಂದಿದ್ದೀರಾ ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶ ಒದಗಿ ಬಂದಿದೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಯು 2026 ನೇಮಕಾತಿ ಸೂಚನೆ ಮೂಲಕ ಸ್ಟೇಪೆಂಡಿಯರಿ ಟ್ರೈನಿ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ ಅಖಿಲ ಭಾರತ ಮಟ್ಟದಲ್ಲಿ ಕೆಲಸವನ್ನು ಹುಡುಕುತ್ತಿರುವವರಿಗೆ ಈ ಹುದ್ದೆ ಹೆಚ್ಚು ಉಪಯುಕ್ತವಾಗಿದ್ದು ಆದಷ್ಟು ಬೇಗ ಅಧಿಕೃತ ನೇಮಕಾತಿಯಲ್ಲಿ ಸೂಚನೆಯನ್ನು ಓದಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆಯಿರಿ

Read More :NALCO Recruitment 2026, Big Opportunity : ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಹಾಗೂ ಸಂಬಳದ ಬಗೆಗಿನ ಸಂಪೂರ್ಣ ಮಾಹಿತಿ

NPCIL Recruitment ನ ಅಧಿಸೂಚನೆಯ ವಿವರಗಳು

ಸಂಸ್ಥೆ ಹೆಸರು : ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆಯ ಹೆಸರು : ಸ್ಟೇಪೆಂಡಿಯರಿ ಟ್ರೈನಿ ಮತ್ತು ತಂತ್ರಜ್ಞ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ : 255 ಹುದ್ದೆಗಳು
ಉದ್ಯೋಗದ ಸ್ಥಳ : ತಿರುನಲ್ ವೇಲಿ, ತಮಿಳುನಾಡು
ಸಂಬಳ (ತಿಂಗಳಿಗೆ) : 21,700/- ರೂಗಳಿಂದ 34,720/- ರೂಗಳವರೆಗೆ

NPCIL Recruitment ನ ನೇಮಕಾತಿಯ ಹುದ್ದೆವಾರು ಹಂಚಿಕೆ

ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ
ಸ್ಥಾವರ ನಿರ್ವಾಹಕರ ಹುದ್ದೆ 136
 ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹುದ್ದೆ 15
ಇನ್ಸ್ಟ್ರುಮೆಂಟೇಶನ್ ಮೆಕಾನಿಕ್ ಹುದ್ದೆ 15
ಎಲೆಕ್ಟ್ರಿಷಿಯನ್ ಹುದ್ದೆ 47
ವೆಲ್ಡರ್ ಹುದ್ದೆ 02
ಯಂತ್ರ ಶಿಲ್ಪಿ ಹುದ್ದೆ 05
ಟರ್ನರ್ ಹುದ್ದೆ 05
ಫಿಟ್ಟರ್‌ ಹುದ್ದೆ 30
ಒಟ್ಟು ಹುದ್ದೆಗಳ ಸಂಖ್ಯೆ 255

 

ಶೈಕ್ಷಣಿಕ ವಿದ್ಯಾರ್ಹತೆ ಮಾಹಿತಿ

  • ಈ NPCIL Recruitment ನ  ಸ್ಥಾವರ ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಪಿ ಯು ಸಿ ಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿ ಇಂದ ಪಡೆದಿರಬೇಕು
  • NPCIL Recruitment ನ ಉಳಿದ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹುದ್ದೆ, ಇನ್ಸ್ಟ್ರುಮೆಂಟೇಶನ್ ಮೆಕಾನಿಕ್ ಹುದ್ದೆ, ಎಲೆಕ್ಟ್ರಿಷಿಯನ್ ಹುದ್ದೆ, ವೆಲ್ಡರ್ ಹುದ್ದೆ, ಯಂತ್ರ ಶಿಲ್ಪಿ, ಹುದ್ದೆ ಟರ್ನರ್, ಹುದ್ದೆ ಫಿಟ್ಟರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿ ಇಂದ  ಹತ್ತನೇ ತರಗತಿ ಹಾಗೂ ಐಟಿಐ ಅನ್ನು ಪೂರ್ಣಗೊಳಿಸಿರಬೇಕು

ವಯಸ್ಸಿನ ಮಿತಿಯ ವಿವರ

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಟ್‌ (NPCIL Recruitment) ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು 29-06-2026 ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 24 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವಯೋಮಿತಿ ಸಡಿದಿಕೆ ವಿವರ

ಈ NPCIL Recruitment ನಲ್ಲಿ ಅಭ್ಯರ್ಥಿಗಳ ವರ್ಗಗಳ ಆಧಾರದ ಮೇಲೆ ವಯೋಮಿತಿ ನೀಡಲಿಕ್ಕೆ ನೀಡಲಾಗುತ್ತದೆ, ವರ್ಗವಾರು ವಯೋಮಿತಿ ಸಲ್ಲಿಕೆ ಮಾಹಿತಿ ಕೆಳಕಂಡಂತಿದೆ

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು :  03 ವರ್ಷಗಳು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು :  05 ವರ್ಷ
ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳು
ಅಂಗವಿಕಲ (ಇತರ ಹಿಂದುಳಿದ ವರ್ಗಗಳು) ಅಭ್ಯರ್ಥಿಗಳು : 13 ವರ್ಷಗಳು
ಅಂಗವಿಕಲ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಅಭ್ಯರ್ಥಿಗಳು : 15 ವರ್ಷಗಳು

NPCIL Recruitment ನ ಆಯ್ಕೆ ಪ್ರಕ್ರಿಯೆ

ಪೂರ್ವಭಾವಿ ಪರೀಕ್ಷೆ : ಈ ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವ ಟ್ರೇಡ್ ಗೆ ಅನುಗುಣವಾಗಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಇರಬೇಕಾದ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಪರೀಕ್ಷಿಸಲಾಗುವುದು

ಅಡ್ವಾನ್ಸ್ಡ್ ಪರೀಕ್ಷೆ : ಈ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಹುದ್ದೆಗನಗುಣವಾಗಿ ಇರಬೇಕಾದ ವಿಶೇಷ ಕೌಶಲ್ಯ ಹಾಗೂ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ ಹುದ್ದೆಗಳು ಹೆಚ್ಚು ತಾಂತ್ರಿಕ ಜ್ಞಾನವನ್ನು ಬಯಸುವುದರಿಂದ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ

ದಾಖಲೆ ಪರಿಶೀಲನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾದಾಗಿನಿಂದ ನೇಮಕಗೊಳ್ಳುವವರೆಗೆ ಸಲ್ಲಿಸುವ ಎಲ್ಲ ದಾಖಲಾತಿಗಳನ್ನು ಮತ್ತು ಅವುಗಳ ನೈಜತೆಯನ್ನು ಪರೀಕ್ಷಿಸಲಾಗುತ್ತದೆ ಇದರ ಜೊತೆಯಲ್ಲಿ ಅಂಗವಿಕಲ ಅಭ್ಯರ್ಥಿಗಳ ಯುಡಿಐಡಿ ಕಾರ್ಡ್ ಪರಿಶೀಲನೆಯು ಕೂಡ ಇರುತ್ತದೆ

NPCIL Recruitment ನ ಆನ್ಲೈನ್ ಅರ್ಜಿ ಶುಲ್ಕ

ಸಾಮಾನ್ಯ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ :  100/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿ ಅಗತ್ಯತೆ ಇರುವುದಿಲ್ಲ
ಆನ್‌ ಲೈನ್‌ ಅರ್ಜಿ ಶುಲ್ಕ ಪಾವತಿ ವಿಧಾನ : ಆನ್ಲೈನ್

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ನೇಮಕಾತಿ ಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತಮಾನದಂಡಗಳನ್ನು ಪರಿಶೀಲಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
  • ದಯವಿಟ್ಟು ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸಂವಹನ ಉದ್ದೇಶದಿಂದ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಸಿದ್ಧವಾಗಿಟ್ಟುಕೊಳ್ಳಿ ಇದರ ಜೊತೆಯಲ್ಲಿ ವೈಯಕ್ತಿಕ ದಾಖಲೆಗಳು ಶೈಕ್ಷಣಿಕ ದಾಖಲೆಗಳು ವಯೋಮಿತಿ ಸಡಲಿಕ್ಕೆ ಪ್ರಮಾಣ ಪತ್ರಗಳು ಹಾಗೂ ಇನ್ನಿತರ ಅಗತ್ಯ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ
  • ಎನ್‌ಪಿಸಿಐಎಲ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಸಿಗುವ ಸ್ಟೈಪೆಂಡಿಯರಿ ಟ್ರೈನಿ ಟೆಕ್ನಿಷಿಯನ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕನ್ನು ನೀಡಲಾಗಿರುತ್ತದೆ ಆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • ಎನ್‌ಪಿಸಿಐಎಲ್ ನ ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಕಡ್ಡಾಯ ಹಾಗೂ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನಮೂದಿಸಿ ಅಗತ್ಯವಿದ್ದಲ್ಲಿ ನವೀಕರಿಸಿ
  • ನಂತರ ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ಅಗತ್ಯ ಮಾಹಿತಿಯನ್ನು ನಮೂದಿಸಿ ಎಲ್ಲ ದಾಖಲಗತಿಗಳನ್ನು ಅಪ್ಲೋಡ್ ಮಾಡಿದ ನಂತರ ಒಮ್ಮೆ ಸರಿಯಾಗಿದೆ ಎಂದು ಪರಿಶೀಲಿಸಿ
  • ನಂತರ ತಮ್ಮ ಅನ್ವಯಿಕ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಶುಲ್ಕವನ್ನು ಪಾವತಿಸಿದ ಸಂಬಂಧ ರಶೀದಿಯನ್ನು ಸೇವೆ ಮಾಡಿ ಇಟ್ಟುಕೊಳ್ಳಿ
  • ನಂತರ ಎನ್‌ಪಿಸಿಐಎಲ್ ನೇಮಕಾತಿಯನ್ನು ಪೂರ್ಣಗೊಳಿಸಲು ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಯಶಸ್ವಿಯಾಗಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಹೆಚ್ಚಿನ ಉಲ್ಲೇಖಕ್ಕಾಗಿ ಬರೆದು ಇಟ್ಟುಕೊಳ್ಳಿ ಈ ಸಂಖ್ಯೆಗಳನ್ನು ಬಳಸಿಕೊಂಡು ನಿಮ್ಮ ಆನ್ಲೈನ್ ಅರ್ಜಿಯನ್ನು ಪ್ರಿಂಟ್ ಅಥವಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ

NPCIL Recruitment ಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು

ಅಧಿಕೃತ ವೆಬ್ಸೈಟ್ (ನೇಮಕಾತಿ ವಿಭಾಗ) ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಅಧಿಕೃತ ಅಧಿಸೂಚನೆಯ ಪಿಡಿಎಫ್ NPCIL Recruitment PDF
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿಯ ನೇಮಕಾತಿ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

NPCIL Recruitment ನ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :  08-06-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2026
ಆನ್ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29-06-2026

NPCIL Recruitment ನ ಟ್ರೈನಿ & ಟೆಕ್ನಿಷಿಯನ್ ಹುದ್ದೆ ಪರೀಕ್ಷೆಯಲ್ಲಿ ಪಾಸ್ ಆಗಲು Best Practices 

  1. ಮೊದಲು ಸಿಲೆಬಸ್‌ ಅನ್ನು ಚೆನ್ನಾಗಿ ತಿಳಿದುಕೊಳ್ಳಿ
    ನೀವು ಅರ್ಜಿ ಹಾಕಿರುವ ಟ್ರೇಡ್‌ (Electrician, Fitter, Welder ಇತ್ಯಾದಿ) ಗೆ ಸಂಬಂಧಿಸಿದ ವಿಷಯಗಳನ್ನು ಹೆಚ್ಚು ಅಧ್ಯಯನ ಮಾಡಿ. ಟೆಕ್ನಿಕಲ್ ಪ್ರಶ್ನೆಗಳು ಹೆಚ್ಚು ಮುಖ್ಯವಾಗಿರುತ್ತವೆ.
  2. ಪ್ರತಿದಿನ 2–3 ಗಂಟೆ ಓದುವ ಅಭ್ಯಾಸ ಮಾಡಿಕೊಳ್ಳಿ
    ಒಂದು ದಿನ ಓದಿ ಒಂದು ದಿನ ಬಿಡಬೇಡಿ. ಪ್ರತಿದಿನ ಸ್ವಲ್ಪವಾದರೂ ಓದಿದರೆ ವಿಷಯ ನೆನಪಿನಲ್ಲಿ ಇರುತ್ತದೆ. ನಿರಂತರ ಅಭ್ಯಾಸ ಯಶಸ್ಸಿನ ಗುಟ್ಟಾಗಿದೆ.
  3. ಟೆಕ್ನಿಕಲ್ ಪ್ರಶ್ನೆಗಳಿಗೆ ಹೆಚ್ಚು ಗಮನ ಕೊಡಿ
    ಐಟಿಐ ಟ್ರೇಡ್‌ ಪ್ರಶ್ನೆಗಳು, ಸಾಮಾನ್ಯ ತತ್ವಗಳು, ಉಪಕರಣಗಳ ಬಳಕೆ, ಸುರಕ್ಷತಾ ನಿಯಮಗಳು ಇತ್ಯಾದಿಗಳನ್ನು ಚೆನ್ನಾಗಿ ಓದಿಕೊಳ್ಳಿ. ಟೆಕ್ನಿಕಲ್ ವಿಬಾಗಕ್ಕೆ ಸಾಮಾನ್ಯವಾಗಿ ಹೆಚ್ಚು ಪ್ರಾಮುಖ್ಯತೆ ಇರುತ್ತದೆ.
  4. ಹಿಂದಿನ ಪ್ರಶ್ನೆ ಪತ್ರಿಕೆ (Previous Papers) ಅಭ್ಯಾಸ ಮಾಡಿ
    ಹಳೆಯ ಪ್ರಶ್ನೆಗಳನ್ನು ಬಿಡಿಸುವುದರಿಂದ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಎಂಬುದು ತಿಳಿದು ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.
  5. Mock Test ಗಳನ್ನು ಬರೆಯಿರಿ
    ವಾರಕ್ಕೆ ಕನಿಷ್ಠ 2–3 Mock Test ಅಭ್ಯಾಸ ಮಾಡಿ. ಇದರಿಂದ ಸಮಯ ನಿರ್ವಹಣೆ (Time Management) ಮತ್ತು ವೇಗ ಹೆಚ್ಚುತ್ತದೆ.
  6. ಪ್ರತಿ ವಾರಕ್ಕೊಮ್ಮೆ Revision ಮಾಡಿ
    ಓದಿದ ವಿಷಯವನ್ನು ವಾರಕ್ಕೆ ಒಂದು ಬಾರಿ ಮರು ಅಭ್ಯಾಸ ಮಾಡಿ ಸ್ವಯಂ ಮೈಲ್ಯಮಾಪನ ಮಾಡಿಕೊಳ್ಳಿ. ಮುಖ್ಯ ಸೂತ್ರಗಳು ಮತ್ತು ಪ್ರಮುಖ ಪ್ರಶ್ನೆಗಳ ನೋಟ್‌ ತಯಾರಿಸಿ.
  7. ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ಕಡೆಗೂ ಗಮನ ಕೊಡಿ
    ಟೆಕ್ನಿಕಲ್ ಜೊತೆಗೆ Basic Mathematics, Science ಮತ್ತು Current Affairs ಕೂಡ ಓದಿದರೆ ಹೆಚ್ಚು ಅಂಕಗಳನ್ನು ಪಡೆಯಬಹುದು.
  8. ಪರೀಕ್ಷೆಗೆ 15 ದಿನಗಳ ಮೊದಲು ಪೂರ್ಣ Revision ಮಾಡಿ
    ಹೊಸ ವಿಷಯ ಓದುವುದಕ್ಕಿಂತ ಈಗಾಗಲೇ ಓದಿದುದನ್ನು ಮರು ಅಭ್ಯಾಸ ಮಾಡುವುದು ಉತ್ತಮವಾಗಿದೆ. ಇದರಿಂದ ತಪ್ಪುಗಳು ಕಡಿಮೆಯಾಗುತ್ತದೆ.

ಮಾಕ್‌ ಟೆಸ್ಟ್‌ ಅಭ್ಯಾಸ ಮಾಡಲು ಲಿಂಕ್‌ : ಮಾಕ್‌ ಟೆಸ್ಟ್‌ ಗಳು

ಕೇಂದ್ರ ಸರ್ಕಾರದ ಸಂಸ್ಥೆಯಾಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು 2026 ನೇ ಸಾಲಿನಲ್ಲಿ ಟ್ರೈನಿಂಗ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು 10ನೇ ತರಗತಿ ಪಿಯುಸಿ ಹಾಗೂ ಐಟಿ ವಿದ್ಯಾರ್ಥಿಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಈ ಹುದ್ದೆಗಳು ಭಾರತದ ಅತ್ಯಂತ ಇರುವುದರಿಂದ ಹಿಂದೆ ನೇಮಕಾತಿಯಲ್ಲಿ ಸೂಚನೆಯನ್ನು ವಿವರವಾಗಿ ಓದಿಕೊಂಡು ಅರ್ಹತಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ ತಮ್ಮ ಉದ್ಯೋಗದ ಕನಸನ್ನು ಸಾಕಾರಗೊಳಿಸಿ ಕಡಿಮೆ ವಿದ್ಯಾರ್ಹತೆಗೆ ಹೆಚ್ಚು ಹುದ್ದೆಗಳು ಇರುವುದರಿಂದ ಸ್ಪರ್ಧಾತ್ಮಕವಾಗಿರುತ್ತದೆ ಹಿಂದಿನಿಂದಲೇ ಆರಂಭಿಸಿ ತಮ್ಮ ಕನಸಿನ ಉದ್ಯೋಗವನ್ನು ಪಡೆಯಿರಿ

NPCIL Recruitment 2026 –  FAQ’s

1) ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು?
10ನೇ ತರಗತಿ + ಐಟಿಐ ಅಥವಾ ಪಿಯುಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದು.

2) ಒಟ್ಟಾರೆ ಎಷ್ಟು ಹುದ್ದೆಗಳಿವೆ?
ಒಟ್ಟು 255 ಹುದ್ದೆಗಳು ಖಾಲಿ ಇದ್ದು, ಸ್ಟೇಪೆಂಡಿಯರಿ ಟ್ರೈನಿ ಮತ್ತು ತಂತ್ರಜ್ಞ ಹುದ್ದೆಗಳಿಗೆ ನೇಮಕಾತಿ ನಡೆಯುವುದಿದೆ.

3) ವಯಸ್ಸಿನ ಮಿತಿ ಎಷ್ಟು ಇರಬೇಕು?
ಅಭ್ಯರ್ಥಿಯ ವಯಸ್ಸು 18 ರಿಂದ 24 ವರ್ಷಗಳೊಳಗೆ ಇರಬೇಕು. ವರ್ಗದ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.

4) ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ?
ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ, ಅಡ್ವಾನ್ಸ್ಡ್ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ  ಪ್ರಕ್ರಿಯೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

5) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು?
ಆನ್‌ಲೈನ್ ಅರ್ಜಿ ಸಲ್ಲಿಸಲು 29-06-2026 ಕೊನೆಯ ದಿನಾಂಕವಾಗಿದೆ. ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

 

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment