ಸರ್ಕಾರದ ಈ ಐಡಿ ಯನ್ನು ಪಡೆಯಿರಿ, ಯೋಜನೆಗಳ ಸ್ವಯಂ ಚಾಲಿತ ಪ್ರಯೋಜನ ಪಡೆಯಬಹುದು (Family ID)
ನಮಸ್ಕಾರ ಸ್ನೇಹಿತರೆ, ಇಂದಿನ ಯುಗವು ಡಿಜಿಟಲ್ ಯುಗ ಎಂಬುದು ಎಲ್ಲರಿಗೂ ತಿಳಿದಿದೆ ಆದರೆ ಸರ್ಕಾರವು ಶುರು ಮಾಡುವ ಯೋಜನೆಗಳಿಗೆ ಹಾಗೂ ಸೌಲಭ್ಯಗಳನ್ನು ಪಡೆಯಲು ಪ್ರತಿ ಬಾರಿಯೂ ಸರ್ಕಾರ ಕಚೇರಿಗಳಿಗೆ ಅಲೆಯುವುದು ಅಗತ್ಯವಾಗಿದೆ ಪ್ರತಿ ಯೋಜನೆಗೆ ಅರ್ಜಿ ಸಲ್ಲಿಸುವಾಗಲು ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಪದೇ ಪದೇ ಜೆರಾಕ್ಸ್ ಮಾಡಿಕೊಡುವುದು ಮತ್ತು ನೈಜ ದಾಖಲೆ ಅಥವಾ ಜೆರಾಕ್ಸ್ ದಾಖಲೆ ಎಂಬುದು ತಿಳಿಯದಂತಾಗಿದೆ ಈ ತೊಂದರೆಯಿಂದ ಹೊರಬರಲು ಕರ್ನಾಟಕ ಸರ್ಕಾರವು ಒಂದು ಯೋಜನೆಯನ್ನು ರೂಪಿಸಿದ್ದು ಕುಟುಂಬಕ್ಕೆ ವೈಯಕ್ತಿಕವಾದ ನೊಂದಣಿ ಸಂಖ್ಯೆ (Family ID)ಯನ್ನು ನೀಡುವ ಮೂಲಕ ಕುಟುಂಬದ ಸದಸ್ಯರ ಎಲ್ಲಾ ವಿವರಗಳನ್ನು ಒಂದೆಡೆ ಕ್ರೂಡೀಕರಿಸುವ ಯೋಜನೆಯನ್ನು ರೂಪಿಸಿದೆ ಅದನ್ನೇ ಕುಟುಂಬ ಐಡಿ (Family ID) ಎಂದು ಕರೆಯಲಾಗಿದೆ ಈ ಸಂಖ್ಯೆಯನ್ನು ಹೊಂದುವುದರ ಮೂಲಕ ಪ್ರತಿಬಾರಿಯ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಹೆಚ್ಚು ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ ಹಾಗೂ ಈ Family ID ಯನ್ನು ನಮೂದಿಸಿ ನಮಗೆ ಬೇಕಾದ ಮಾಹಿತಿಯನ್ನು ನಾವು ಪಡೆಯಬಹುದಾಗಿದೆ ಡಿಜಿಟಲ್ ಯುಗದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದ್ದು ಕಾಗದ ಬಳಕೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ
ಕುಟುಂಬ ಐಡಿ (Family ID) ಯೋಜನೆ ಎಂದರೇನು? ಇದರ ಉದ್ದೇಶ ಏನಿದೆ
ಕರ್ನಾಟಕ ಸರ್ಕಾರದ ಈ ಯೋಜನೆಯು ಈ ಆಡಳಿತ ಕೇಂದ್ರದಡಿಯಲ್ಲಿ ಬಂದಿರುವ ಡಿಜಿಟಲ್ ವ್ಯವಸ್ಥೆಯಾಗಿದ್ದು ಈ ಯೋಜನೆ ಅಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ ಒಂದು ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವುದರ ಮೂಲಕ ಕುಟುಂಬದ ಸದಸ್ಯರ ಎಲ್ಲ ಮಾಹಿತಿಯನ್ನು ಒಂದು ಕಡೆ ಕ್ರೂಡೀಕರಿಸಿ ಸಂಗ್ರಹಿಸುವುದಾಗಿದೆ
ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಯೋಜನೆಗಳ ಅರ್ಜಿ ಸಲ್ಲಿಕೆಯ ಮಾಹಿತಿಯ ಪ್ರಕಾರದ ಈಗಾಗಲೇ ಇರುವ ಜನರ ಮಾಹಿತಿಯನ್ನು ಬಳಸಿ ಕುಟುಂಬದ ಸದಸ್ಯರು ಯಾವ ಯೋಜನೆಗೆ ಅರ್ಹರು ಎಂಬುದನ್ನು ಸರ್ಕಾರವೇ ಸ್ವಯಂ ಚಾಲಿತವಾಗಿ ಈ ಕುಟುಂಬ ಐಡಿ ಮೂಲಕ ಪತ್ತೆ ಮಾಡುತ್ತದೆ ಯೋಜನೆಗಳನ್ನು ಪತ್ತೆ ಮಾಡುವ ಮೂಲಕ ನೀವು ಅರ್ಜಿ ಹಾಕದಿದ್ದರೂ ಸೌಲಭ್ಯಗಳು ನಿಮ್ಮನ್ನು ಸೇರಲಿವೆ. ಉದಾಹರಣೆಗೆ ನಿಮ್ಮ ಮನೆಯ ಸದಸ್ಯರಲ್ಲಿ ಯಾರಾದರೂ ಅರವತ್ತು ವರ್ಷ ವಯಸ್ಸನ್ನು ಪೂರ್ಣಗೊಳಿಸಿದರೆ ಅವರಿಗೆ ವೃದ್ಧಾಪ್ಯ ವೇತನ ಯೋಜನೆಯು ಸ್ವಯಂ ಚಾಲಿತವಾಗಿ ಶುರುವಾಗುತ್ತದೆ ಇದಕ್ಕೆ ಯಾವುದೇ ಬೇರೆ ದಾಖಲಾತಿಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ
ಕುಟುಂಬ ಇಡಿಯಿಂದ ಜನರಿಗಾಗುವ ಪ್ರಯೋಜನಗಳು ಯಾವುವು
ಪ್ರತಿ ಯೋಜನೆಗಳಿಗೆ ಪ್ರತ್ಯೇಕ ದಾಖಲೆ ನೀಡುವ ಸಮಸ್ಯೆ ಇರುವುದಿಲ್ಲ : ಸರ್ಕಾರಗಳು ಹೊರಡಿಸುವ ಯಾವುದೇ ಯೋಜನೆಗಾಗಲಿ ಅಥವಾ ಕಾರ್ಯಕ್ರಮಗಳಿಗಾಗಲಿ ಪದೇಪದೇ ಅರ್ಜಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವ ಅಗತ್ಯತೆ ಇರುವುದಿಲ್ಲ ಒಂದು ಬಾರಿ ಕುಟುಂಬವಿಡಿಯಲ್ಲಿ ಎಲ್ಲಾ ಮಾಹಿತಿಯನ್ನು ನವೀಕರಿಸಿ ಸಂಗ್ರಹಿಸಿದರೆ ಯೋಜನೆ ಶುರುವಾದರೆ ಸ್ವಯಂ ಚಾಲಿತವಾಗಿ ಮಾಹಿತಿಯು ಹಂಚಿಕೆಗೊಂಡು ಅರ್ಹತೆಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆಯಾಗುತ್ತದೆ
ಸ್ವಯಂ ಚಾಲಿತ ಅನುಮೋದನೆ : ಯಾವುದಾದರೂ ಯೋಜನೆ ಆರಂಭಗೊಂಡಲ್ಲಿ ನಿಮ್ಮ ಕುಟುಂಬದ ಅರ್ಹತೆ ದಾಖಲೆಗಳ ನೈಜೊತೆ ಮತ್ತು ಅನುಮೋದನೆಯ ನಂತರದ ಹಣ ಬಿಡುಗಡೆ ಪ್ರಕ್ರಿಯೆಗಳು ಯಾವುದೇ ಮಾನವ ಚಾಲಿತ ಕೆಲಸ ಅಥವಾ ಹಸ್ತಕ್ಷೇಪವಿಲ್ಲದೆ ಸರ್ವರ್ ಹಾಗೂ ಕಂಪ್ಯೂಟರ್ ಮೂಲಕವೇ ನಡೆಯುತ್ತದೆ ಇದರಿಂದ ಅವ್ಯವಹಾರಗಳು ತಪ್ಪುತ್ತವೆ ಮತ್ತು ಯೋಜನೆಗಳ ಅನುಮೋದನೆಗೆ ಹೆಚ್ಚು ಸಮಯ ಬೇಕಾಗುವುದಿಲ್ಲ
ರಿಜೆಕ್ಟ್ ಆಗುವ ಸಂಭವ ಇರುವುದಿಲ್ಲ : ಯೋಜನೆ ಆರಂಭಗೊಂಡ ನಂತರ ಕುಟುಂಬ ಇಡಿ ಮೂಲಕ ಅರ್ಹತೆಯು ಸ್ವಯಂ ಚಾಲಿತವಾಗಿ ಪರಿಶೀಲನೆಗೊಳ್ಳುವುದರಿಂದ ಕೇವಲ ನೈಜ ಫಲಾನುಭವಿಗಳಿಗೆ ಕಾರ್ಯಕ್ರಮದ ಹಾಗೂ ಯೋಜನೆಗಳ ಪ್ರಯೋಜನ ದೊರೆಯುತ್ತದೆ ಇದರ ಜೊತೆಯಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದ್ದು ಯಾವುದೇ ಸಮಯ ವ್ಯರ್ಥವಾಗದೆ ಕೆಲಸ ಬೇಗ ಮುಗಿಯುತ್ತದೆ
ಆಧಾರ್ ತಂತ್ರಾಂಶ ಆಧಾರಿತ ಸೇವೆಗಳು :ಆಧಾರ್ ದೇಶದ ಪ್ರತಿಯೊಬ್ಬರ ಬಳಿ ಇರುವ ವಯಕ್ತಿಕ ದಾಖಲೆಯಾಗಿದೆ ಈ ಆಧಾರ್ ದತ್ತಾಂಶದ ಮಾಹಿತಿ ಆಧಾರದ ಮೇಲೆ ಎಲ್ಲಾ ಕೆಲಸವೂ ನಿರ್ವಹಿಸಲ್ಪಡುವುದರಿಂದ ಬ್ರಷ್ಟಾಚಾರ ಕಡಿಮೆಯಾಗಿ ನೈಜ ಫಲಾನುಭವಿಗಳು ಯೋಜನೆಯ ಪ್ರಯೋಜನವನ್ನು ಪಡೆದಂತಾಗುತ್ತದೆ
ಮನೆಯಲ್ಲೇ ಕುಳಿತು ಕುಟುಂಬ ಐಡಿ ಪಡೆಯಬಹುದೇ
ಹೌದು, ನೀವು ಮನೆಯಲ್ಲೇ ಕುಳಿತು ಕುಟುಂಬದ ಎಲ್ಲ ಸದಸ್ಯರ ಮಾಹಿತಿಯನ್ನು ಒಂದೆಡೆ ನಮೂದಿಸಿರುವ ಮೂಲಕ ನೀವು ಮನೆಯಲ್ಲಿಯೇ ಮೊಬೈಲ್ ಮೂಲಕ ಕುಟುಂಬ ಐಡಿಯನ್ನು ಪಡೆಯಬಹುದು ಅಂತ ವಾದ ಪ್ರಕ್ರಿಯೆ ಈ ಕೆಳಕಂಡಂತಿದೆ
ಮೊದಲನೇ ಹಂತ : ಮೊದಲು ನೀವು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಕುಟುಂಬ ಕರ್ನಾಟಕಕ್ಕಾಗಿ ಭೇಟಿ ನೀಡಬೇಕು
ಎರಡನೇ ಹಂತ : ಸಾಧ್ಯವಾದಷ್ಟು ಮನೆಯ ಮುಖ್ಯಸ್ಥರ ಆಧಾರ್ ನಂಬರ್ ನಮೂದಿಸುವ ಮೂಲಕ ಬರುವ ಓಟಿಪಿಯನ್ನು ನಮೂದಿಸಿ ನೊಂದಣಿಗೊಂಡು ನಂತರ ಲಾಗಿನ್ ಆಗಿ
ಮೂರನೇ ಹಂತ : ಮುಖ್ಯ ಅರ್ಜಿದಾರರ ವೈಯಕ್ತಿಕ ಮಾಹಿತಿ ಹಾಗೂ ಇತರೆ ಕೇಳಲಾಗುವ ಎಲ್ಲಾ ಅಗತ್ಯ ಮಾಹಿತಿಗಳನ್ನು ಸ್ಪಷ್ಟವಾಗಿ ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ
ನಾಲ್ಕನೇ ಹಂತ : ಮುಖ್ಯ ಅರ್ಜಿದಾರರ ಮಾರಿ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಉಳಿದ ಎಲ್ಲಾ ಸದಸ್ಯರ ಮಾಹಿತಿಯನ್ನು ಒಂದೊಂದಾಗಿ ಸೇರಿಸುತ್ತಾ ಎಷ್ಟು ಸದಸ್ಯರಿದ್ದಾರೋ ಅವರೆಲ್ಲರ ಮಾಹಿತಿಯನ್ನು ಯಶಸ್ವಿಯಾಗಿ ನಮೂದಿಸಿ
ಐದನೇ ಹಂತ : ಕುಟುಂಬದ ಮುಖ್ಯ ಅರ್ಜಿದಾರರನ್ನು ಏಕ ಸಂಪರ್ಕ ಕೇಂದ್ರ ಎಂದು ಆಯ್ದುಕೊಳ್ಳಿ
ಆರನೇ ಹಂತ : ಮುಖ್ಯ ಅರ್ಜಿದಾರರ ಸಂಪೂರ್ಣ ವಿವರಗಳು ಹಾಗೂ ಉಳಿದ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಯಶಸ್ವಿಯಾಗಿ ನಮೂದಿಸಿ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಕ್ಷಣವೇ ನಿಮಗೆ ತಾತ್ಕಾಲಿಕ ಕುಟುಂಬ ಇಡಿ ಸಿಗುತ್ತದೆ
ಈ ಐಡಿಯನ್ನು ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಯೋಜನೆಗಳಿಗೆ ಸ್ವಯಂ ಚಾಲಿತವಾಗಿ ಅರ್ಹತೆ ಪರಿಶೀಲನೆ ಹಾಗೂ ಅರ್ಜಿ ಸಲ್ಲಿಕೆಯನ್ನು ಮಾಡಿ ಅನುಮೋದನೆಯ ನಂತರದ ಪ್ರಕ್ರಿಯೆಯನ್ನು ಪಡೆಯಬಹುದಾಗಿರುತ್ತದೆ
ನೋಂದಣಿಗೆ ಬೇಕಾಗುವ ಅಗತ್ಯ ದಾಖಲೆಗಳು ಮತ್ತು ನೋಂದಣಿಗೆ ಸಂಬಂಧಿಸಿದ ನಿಯಮಗಳು
ಕಡ್ಡಾಯವಾಗಿ ಆಧಾರ್ ಕಾರ್ಡ್ : ಈ Family ID ಯನ್ನು ಪಡೆಯಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಇದ್ದು ಅದಕ್ಕೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು
ಸಕ್ರಿಯವಾದ ಮತ್ತು ಲಿಂಕ್ ಆಗಿರುವ ಮೊಬೈಲ್ ನಂಬರ್ : ಸದಸ್ಯರಾಧಾರ್ ಕಾರ್ಡ್ ಗಳಿಗೆ ಸಕ್ರಿಯವಾಗಿರುವ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಇದಕ್ಕೆ ಸ್ವೀಕೃತಿಗೊಳ್ಳುವ ಒಟಿಪಿ ಮೂಲಕವೇ ಪರಿಶೀಲನೆ ಸಾಧ್ಯವಾಗುತ್ತದೆ
ಹೆಚ್ಚುವರಿ ದಾಖಲೆಗಳು : ಶೈಕ್ಷಣಿಕ ದಾಖಲೆಗಳು ಅಂದರೆ ಅಂಕಪಟ್ಟಿಗಳು ಜನ್ಮ ಪ್ರಮಾಣ ಪತ್ರ ಮದುವೆ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮುಂತಾದ ಸರ್ಕಾರದಿಂದ ನೀಡಲ್ಪಟ್ಟಿರುವ ದಾಖಲೆಗಳನ್ನು ಅವುಗಳನ್ನು ಸಂಖ್ಯೆಯನ್ನು ನಮೂದಿಸುವ ಮೂಲಕ ಸೇರಿಸಬಹುದಾಗಿದೆ
ವಿಳಾಸ ಬದಲಾವಣೆ ಪ್ರಕ್ರಿಯೆ : ನೀವು Family ID ಗೆ ನೊಂದಣಿ ಮಾಡುವಾಗ ನಿಮ್ಮ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಗಿದ್ದರೆ ಮೊದಲು ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಾಯಿಸಿ ನಂತರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗುತ್ತದೆ ಕುಟುಂಬ ಪೋರ್ಟಲ್ ನಲ್ಲಿ ನೇರವಾಗಿ ಯಾವುದೇ ವಿಳಾಸವನ್ನು ಬದಲಾಯಿಸುವ ಆಯ್ಕೆ ಇರುವುದಿಲ್ಲ
ಈ ಐಡಿ ಯಾರಿಗೆ ಸಿಗುತ್ತದೆ
ಈ ಕುಟುಂಬ ಐಡಿಯು, ಕರ್ನಾಟಕ ರಾಜ್ಯದ ಪ್ರತಿಯೊಬ್ಬ ನಿವಾಸಿಗರಿಗೂ ಸಿಗುತ್ತದೆ ಈ ಯೋಜನೆ ಅಡಿಯಲ್ಲಿ ಸಾಮಾನ್ಯವಾಗಿ ಪತಿ ಪತ್ನಿ ಮತ್ತು ಅವರ ಅವಿವಾಹಿತ ಮಕ್ಕಳನ್ನು ಒಂದು ಕುಟುಂಬ ಎಂದು ಪರಿಗಣಿಸಲಾಗಿದ್ದು ವಿಶೇಷ ಸಂದರ್ಭಗಳಲ್ಲಿ ಅವಕಾಶವಿದೆ ಅವುಗಳೆಂದರೆ
- ಮದುವೆ ಆಗದವರು ವಿಧವೆಯರು ನಿರಾಶ್ರಿತರು ಮತ್ತು ಅನಾಥರು ಪ್ರತ್ಯೇಕವಾಗಿ ಕುಟುಂಬಗಳಿಗೆ ಅರ್ಜಿ ಸಲ್ಲಿಸಬಹುದು
- ಪೋಷಕರಿಲ್ಲದ ಸಂದರ್ಭದಲ್ಲಿ ತನ್ನ ಒಟ್ಟಿಗೆ ವಾಸಿಸುವ ಅವಿವಾಹಿತ ಒಡಹುಟ್ಟಿದವರಿಗೂ ಐಡಿ ಸಿಗುತ್ತದೆ ಆದರೆ ಅವರಿಗೆ 18 ವರ್ಷ ತುಂಬಿರಬೇಕು
ಕುಟುಂಬ ಪೋರ್ಟಲ್ ನಲ್ಲಿ Family ID ಪಡೆಯುವುದು ಸುಲಭ ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಇಲಾಖೆಯನ್ನು ಸಂಪರ್ಕಿಸಲು ಕೋರಿದೆ
ನೊಂದಣಿ ಅರ್ಜಿ ಸಲ್ಲಿಸಿದ ಮೇಲೆ ಶಾಶ್ವತ ಕುಟುಂಬ ಐಡಿ ಪಡೆಯಲು ಏನು ಮಾಡಬೇಕು
ನೀವು ಮೊಬೈಲ್ ನಲ್ಲಿ ಮುಖ್ಯ ಅರ್ಜಿದಾರರು ಹಾಗೂ ಎಲ್ಲಾ ಸದಸ್ಯರ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ ನಿಮಗೆ ತಾತ್ಕಾಲಿಕ ಕುಟುಂಬ ಇಡಿ ಸಿಗುತ್ತದೆ ಆದರೆ ಇದು ಕೇವಲ ತಾತ್ಕಾಲಿಕವಾಗಿದ್ದು ಸರ್ಕಾರಿ ಕಚೇರಿಗಳ ಮೂಲಕ ಅನುಮೋದನೆಗೆ ಒಳಪಟ್ಟರೆ ಮಾತ್ರ ಇದು ಕಾಯಂ ಆಗುತ್ತದೆ ಕಾಯಂ ಕುಟುಂಬ ಐಡಿ ಪಡೆಯಲು ಈ ಕ್ರಮಗಳನ್ನು ಅನುಸರಿಸಿ
ಗ್ರಾಮೀಣ ಪ್ರದೇಶದ ಕುಟುಂಬದವರು : ಗ್ರಾಮೀಣ ಪ್ರದೇಶದಲ್ಲಿನ ಕುಟುಂಬದವರು ಕುಟುಂಬ ಹೀಗೆ ಅರ್ಜಿ ಸಲ್ಲಿಸಿದ ನಂತರ ಅದರ ಆಕ್ನಾಲಜಿಮೆಂಟ್ ಅನ್ನು ಊರಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿ ನೀಡಬೇಕಾಗುತ್ತದೆ ಅವರು ಸಂಬಂಧಿತ ಅನುಮೋದನೆ ನೀಡಿದ ನಂತರ ಕುಟುಂಬ ಇಡೀ ಖಾಯಂ ಆಗುತ್ತದೆ
ನಗರ ಪ್ರದೇಶದ ಕುಟುಂಬದವರು : ನಗರ ಹಾಗೂ ಪಟ್ಟಣ ಪ್ರದೇಶದಲ್ಲಿನ ಜನರು ತಮ್ಮ ಕಂದಾಯ ಮಿತಿಗೆ ಬರುವ ಕಂದಾಯ ಅಧಿಕಾರಿ ಅವರನ್ನು ಭೇಟಿ ಮಾಡಿ ಅಧಿಕಾರಿಗಳು ಕೇಳಿದಾಗ ಆನ್ಲೈನ್ ಮೂಲಕ ಅಪ್ಲೋಡ್ ಮಾಡಿದ ದಾಖಲೆಗಳನ್ನು ಖುದ್ದಾಗಿ ಒಂದು ಬಾರಿ ಹಾಜರುಪಡಿಸಿ ಪರಿಶೀಲಿಸುವ ಮೂಲಕ ತಮ್ಮ ಕುಟುಂಬ ಐಡಿಯನ್ನು ಕಾಯಂ ಕುಟುಂಬ ಇಡಿಯಾಗಿ ಪರಿವರ್ತಿಸಬಹುದು
ಕುಟುಂಬ ಐಡಿ ಪಡೆಯುವ ಸಂಬಂಧ ಲಿಂಕ್ ಗಳು
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ : ಕುಟುಂಬ ಪೋರ್ಟಲ್
ಕುಟುಂಬ ಐಡಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಇತರೆ ಹೆಚ್ಚುವರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ : ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಸರ್ಕಾರವು ಡಿಜಿಟಲೀಕರಣ ವ್ಯವಸ್ಥೆಯನ್ನು ಅತ್ಯಂತ ತೊರಿತವಾಗಿ ಕಾರ್ಯರೂಪಕ್ಕೆ ತರುತ್ತಿದ್ದು ಕುಟುಂಬಗಳ ಸದಸ್ಯರ ಮಾಹಿತಿಯನ್ನು ಒಂದು ಕಡೆ ಕ್ರೂಢೀಕರಿಸಿ ಸಂಗ್ರಹಿಸುವ ಮೂಲಕ Family ID ಯನ್ನು ನೀಡಿ ಸರ್ಕಾರಿ ಯೋಜನೆಗಳನ್ನು ಪಡೆಯುವಲ್ಲಿ ಆಗುತ್ತಿರುವ ಸಮಯದ ವ್ಯರ್ಥ ಹಾಗೂ ಭ್ರಷ್ಟಾಚಾರವನ್ನು ತಡೆಯಲು ಈ ಯೋಜನೆಯನ್ನು ರೂಪಿಸಲಾಗಿದೆ ಆದಷ್ಟು ಬೇಗ ಸಾರ್ವಜನಿಕರು, ಕುಟುಂಬ ಐಡಿಯಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳುವುದರ ಮೂಲಕ ಕುಟುಂಬ ಐಡಿಯನ್ನು ಪಡೆದು ಅದರಿಂದ ಸಿಗುವ ಪ್ರಯೋಜನಗಳನ್ನು ಪರಿಣಾಮಕಾರಿಯಾಗಿ ಪಡೆಯಲು ಕೋರಿದೆ ಆದುದರಿಂದ ಯೋಜನೆಗೆ ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಮೇಲೆ ತಿಳಿಸಲಾಗಿದ್ದು ಆ ಎಲ್ಲಾ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಹಿಂದೆ ಕುಟುಂಬ ಹಿಡಿದಿಗೆ ಅಪ್ಲೈ ಮಾಡಿ ತಮ್ಮ ಸಂಬಂಧಿತ ಅಧಿಕಾರಿಯನ್ನು ಭೇಟಿ ಮಾಡುವುದರ ಮೂಲಕ ಕಾಯಂ ಕುಟುಂಬ ಐಡಿಯನ್ನು ಪಡೆಯಬಹುದಾಗಿರುತ್ತದೆ ಕರ್ನಾಟಕ ಸರ್ಕಾರದ ಈ ಮಹತ್ವಪೂರ್ಣ ಯೋಜನೆಯು ಮುಂದೆ ಜನರಿಗೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ
Family ID 2026 – FAQ’s
1. ಕುಟುಂಬ ಐಡಿ (Family ID) ಎಂದರೆ ಎನು?
ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸುವ ಕರ್ನಾಟಕ ಸರ್ಕಾರದ ಡಿಜಿಟಲ್ ಗುರುತಿನ ಸಂಖ್ಯೆ ಇದಾಗಿದೆ. ಇದರಿಂದ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಹಾಗೂ ಸೌಲಭ್ಯ ಪಡೆಯುವುದು ಸುಲಭವಾಗುತ್ತದೆ.
2. ಕುಟುಂಬ ಐಡಿ ಯಿಂದ ಪ್ರಯೋಜನ ಏನೇನು?
ಪ್ರತಿ ಯೋಜನೆಗೆ ಪದೇಪದೇ ದಾಖಲೆ ನೀಡುವ ಅಗತ್ಯ ಕಡಿಮೆಯಾಗುತ್ತದೆ. ಕೆಲವು ಸರ್ಕಾರಿ ಯೋಜನೆಗಳಿಗೆ ಸ್ವಯಂ ಚಾಲಿತವಾಗಿ ಅರ್ಹತೆ ಪರಿಶೀಲನೆ ಆಗಿ ಸೌಲಭ್ಯ ಸಿಗುತ್ತದೆ.
3. ಕುಟುಂಬ ಐಡಿಗೆ ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕ ರಾಜ್ಯದ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯವಾಗಿ ಪತಿ, ಪತ್ನಿ ಮತ್ತು ಅವಿವಾಹಿತ ಮಕ್ಕಳನ್ನು ಒಂದು ಕುಟುಂಬ ಎಂದು ಪರಿಗಣಿಸಲಾಗುತ್ತದೆ.
4. ಕುಟುಂಬ ಐಡಿ ಪಡೆಯಲು ಯಾವ ಯಾವ ದಾಖಲೆಗಳು ಬೇಕು?
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಆಧಾರ್‌ಗೆ ಲಿಂಕ್ ಆದ ಮೊಬೈಲ್ ನಂಬರ್ ಮತ್ತು ಅಗತ್ಯವಿದ್ದರೆ ಜಾತಿ, ಆದಾಯ, ಜನನ ಅಥವಾ ಮದುವೆ ಪ್ರಮಾಣ ಪತ್ರ ಇನ್ನೂ ಹೆಚ್ಚಿನ ದಾಖಲೆಗಳು ಬೇಕಾಗಬಹುದು.
5. ಕುಟುಂಬ ಐಡಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಕುಟುಂಬ ಪೋರ್ಟಲ್ ವೆಬ್‌ಸೈಟ್‌ನಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆಧಾರ್ OTP ಬಳಸಿ ಮನೆಯಲ್ಲೇ ಅರ್ಜಿ ಸಲ್ಲಿಸಬಹುದು. ಮೊದಲು ತಾತ್ಕಾಲಿಕ Family ID ಸಿಗುತ್ತದೆ, ನಂತರ ಅಧಿಕಾರಿಗಳ ಪರಿಶೀಲನೆ ಮತ್ತು ಅನುಮೋದನೆಯ ಬಳಿಕ ಶಾಶ್ವತ Family ID ದೊರೆಯುತ್ತದೆ.