ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಕೃಷಿ ಸಾಲ ಯೋಜನೆ (Sahakari Krushi Loan Scheme)
ನಮಸ್ಕಾರ ಸ್ನೇಹಿತರೆ ರೈತ ದೇಶದ ಬೆನ್ನೆಲುಬು ಹಾಗೆಯೇ ರೈತರ ಬೆಳೆದ ಬೆಳೆಯನ್ನೇ ನಾವೆಲ್ಲರೂ ತಿನ್ನಬೇಕಾಗಿದೆ. ಆದರೆ ರೈತರು ಇಂದಿನ ಸಮಯದಲ್ಲಿ ಆರ್ಥಿಕ ತೊಂದರೆಗಳಿಗೆ ಒಳಗಾಗಿ ಹೆಚ್ಚು ಬಡ್ಡಿ ದರಗಳಿಗೆ ಸಾಲವನ್ನು ಮಾಡಿಕೊಂಡು ಜೀವನವನ್ನು ತೊಂದರೆ ಮಾಡಿಕೊಂಡಿದ್ದಾರೆ ಆ ಸಮಸ್ಯೆಯನ್ನು ಬಗೆಹರಿಸಲು ಕೃಷಿ ಚಟುವಟಿಕೆಗಳಿಗೆ ಸಾಲ ನೀಡುವ ಯೋಜನೆಯನ್ನು ಕರ್ನಾಟಕ ಸರ್ಕಾರ ತಂದಿದೆ ಈ ಯೋಜನೆಯಿಂದ ರೈತರಿಗೆ ಆರ್ಥಿಕ ನೆರವು ಸಿಗಲಿದ್ದು ರೈತರ ಕೃಷಿ ಚಟುವಟಿಕೆಗಳು ಮುಂಚೂಣಿಗೆ ಬರಲಿವೆ ಕರ್ನಾಟಕ ಸರ್ಕಾರವು ರೈತರ ಹಿತರಕ್ಷಣೆಯನ್ನು ಕಾಪಾಡಲು ಮತ್ತು ಆರ್ಥಿಕ ತೊಂದರೆಗಳನ್ನು ಸರಿಪಡಿಸಲು ಸಹಕಾರಿ ಕೃಷಿ ಸಾಲ ಯೋಜನೆ (Sahakari Krushi Loan Scheme) ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು ರೈತರು ಕೃಷಿ ಚಟುವಟಿಕೆಗಳಿಗಾಗಿ ಮತ್ತು ಅದರ ಉಪಕಸುಬುಗಳನ್ನು ಮಾಡಲು ಬರೋಬ್ಬರಿ 5 ಲಕ್ಷ ರೂಪಾಯಿಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ ಆದುದರಿಂದ ಈ ಯೋಜನೆಯ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಿ
| Read More : Raita Siri Yojane 2026, Best Scheme : ಕರ್ನಾಟಕ ಸರ್ಕಾರದ ಈ ಯೋಜನೆ ರೈತರಿಗೆ ವರದಾನ, ಸಂಪೂರ್ಣ ವಿವರ ತಿಳಿಯಿರಿ |
ಸಹಕಾರಿ ಕೃಷಿ ಸಾಲ ಯೋಜನೆ ಎಂದರೇನು? ಏಕೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ
ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪ್ರಾರಂಭಿಸಲು ಹಾಗೂ ನಿರ್ವಹಿಸಲು ಹಣಕಾಸಿನ ಅವಶ್ಯಕತೆ ತುಂಬಾ ಇದೆ ಆದರೆ ರೈತರ ಆರ್ಥಿಕ ಪರಿಸ್ಥಿತಿ ಕುಂಠಿತ ಆಗಿರುವುದರಿಂದ ಕೃಷಿ ಚಟುವಟಿಕೆಗಳು ಸಹ ಕಡಿಮೆಯಾಗುತ್ತಿದೆ ಈ ಕೃಷಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಈ Sahakari Krushi Loan Scheme ಅನ್ನು ಸರ್ಕಾರವು ಜಾರಿಗೊಳಿಸಿದೆ ಈ ಯೋಜನೆ ಅಡಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ ಈ ಯೋಜನೆಯ ಪ್ರಮುಖ ಮುಖ್ಯ ಅಂಶಗಳು ಈ ಕೆಳಕಂಡಂತಿದೆ
ಅಲ್ಪಾವಧಿ ಬೆಳೆಸಾಲ : ಕಡಿಮೆ ಅವಧಿ ಗೋಸ್ಕರ ತೆಗೆದುಕೊಳ್ಳಬಹುದಾದ 5 ಲಕ್ಷ ರೂಗಳ ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿದರ ಅಂದರೆ Sahakari Krushi Loan Scheme ಅಡಿಯಲ್ಲಿ ಯಾವುದೇ ಬಡ್ಡಿಯ ಇರುವುದಿಲ್ಲ
ಹೈನುಗಾರಿಕೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ : ಈ ಉಪಕಷುಗಳನ್ನು ಶುರು ಮಾಡಲು ಮತ್ತು ಬೇಕಾಗುವ ಬಂಡವಾಳಕ್ಕೂ 2 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ
ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯ : ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್ ಕಲ್ಟಿವೇಟರ್ ಮತ್ತು ನೀರಾವರಿ ವ್ಯವಸ್ಥೆಗಳಿಗೆ ಕೃಷಿ ಸಂಬಂಧಿತ ಉದ್ದೇಶಗಳಿಗೆ ಶೇಕಡ ಮೂರರಷ್ಟು ಕಡಿಮೆ ಬಡ್ಡಿದರದಲ್ಲಿ 15 ಲಕ್ಷ ರೂಗಳವರೆಗೆ ಸಾಲದ ಸೌಲಭ್ಯವಿದೆ ನಿಕುಳಿದ ಬಡ್ಡಿಯ ಮೊತ್ತವನ್ನು ಸರ್ಕಾರವು ಸಬ್ಸಿಡಿ ರೂಪದಲ್ಲಿ ಬ್ಯಾಂಕುಗಳಿಗೆ ಪಾವತಿಸುತ್ತದೆ Sahakari Krushi Loan Scheme ಮೂಲಕ ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲವು ಸಿಗುತ್ತಿರುವುದರಿಂದ ಹಿಂದೆ ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ಯೋಜನೆ ರೂಪಿಸಿ
ಯಾವ ಯಾವ ಬ್ಯಾಂಕ್ ಗಳು ಈ ಯೋಜನೆಯಲ್ಲಿ ಸಾಲ ನೀಡುತ್ತದೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (Primary Agricultural Credit Society)
ಪಿಕಾರ್ಡ್ ಬ್ಯಾಂಕುಗಳು (Primary Co-operative Agriculture and Rural Development Bank)
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು (District Central Co-operative Bank)
ಈ Sahakari Krushi Loan Scheme ಸಾಲ ಪಡೆಯಲು ಯಾರು ಅರ್ಹರು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಇರಬೇಕಾದರೆ ಪ್ರಮುಖವಾಗಿ ರೈತರು ಆಯಾ ಸಹಕಾರಿ ಬ್ಯಾಂಕಿನ ಅಥವಾ ಸಂಘದ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು
- ರೈತರ ಆಧಾರ್ ಕಾರ್ಡಿನಲ್ಲಿರುವ ವಿಳಾಸದ ಆಧಾರದ ಮೇಲೆ ವಾಸ ಸ್ಥಳವನ್ನು ನಿರ್ಧರಿಸಲಾಗುತ್ತದೆ
- ರೈತರು ತಾವು ವಾಸವಿರುವ ಅಥವಾ ಕಂದಾಯ ಜಮೀನು ಇರುವ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಡಿಯಲ್ಲಿ ಮತ್ತು ಸದಸ್ಯತ್ವ ಹೊಂದಿರುವ ಸಂಘದಲ್ಲೇ ಸಾಲ ಪಡೆಯಬೇಕು
ಪ್ರಮುಖ ಸೂಚನೆ : ಬೇರೆ ರಾಜ್ಯಗಳಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದಲ್ಲಿ ಜಮೀನು ಹೊಂದಿರುವ ರೈತರಿಗೆ ಈ Sahakari Krushi Loan Scheme ಅನ್ವಯಿಸುವುದಿಲ್ಲ
ಯಾವ ಕಾರ್ಯ ಯೋಜನೆಗಳಿಗೆ ಸಾಲ ಸಿಗುತ್ತದೆ
- ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು
- ಲಘು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು
- ಭೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು
- ತೋಟಗಾರಿಕೆ ರೇಷ್ಮೆ ಕೃಷಿ ಮತ್ತು ಸಾವಯುವ ಕೃಷಿ ಪದ್ಧತಿಗಳನ್ನು ಶುರು ಮಾಡಲು
- ಪಶುಸಂಗೋಪನೆ ಮೀನು ಸಾಗಾಣಿಕೆ ಹೈನುಗಾರಿಕೆ ಹಂದಿ ಕುರಿ ಮೇಕೆ ಮತ್ತು ಕೋಳಿ ಸಾಕಾಣಿಕೆಗಳಿಗೆ
- ಜೇನು ಸಾಕಾಣಿಕೆಗೆ
ಇನ್ನು ಮುಂತಾದ ಕೃಷಿ ಉಪಯೋಗಿ ಯೋಜನೆಗಳಿಗೆ ಈ Sahakari Krushi Loan Scheme ಅಡಿಯಲ್ಲಿ ಸಾಲದ ಸೌಲಭ್ಯ ಸಿಗುತ್ತದೆ
Sahakari Krushi Loan Scheme ಗೆ ಅರ್ಜಿ ಸಲ್ಲಿಸುವುದು ಹೇಗೆ
- ಈ Sahakari Krushi Loan Scheme ಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಮೊದಲು ನಿಮ್ಮ ವ್ಯಾಪ್ತಿಯಲ್ಲಿ ಇರುವಂತಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿ
- ನೀವೇನಾದರೂ ಸಂಘದ ಸದಸ್ಯರಾಗಿದ್ದಿಲ್ಲದಿದ್ದರೆ ಮೊದಲು ಸದಸ್ಯತ್ವವನ್ನು ಪಡೆಯಲು ಅರ್ಜಿ ಹಾಕಿ ಯಶಸ್ವಿಯಾಗಿ ಸದಸ್ಯರಾದ ನಂತರ ಒಂದು ತಿಂಗಳ ನಂತರಕ್ಕೆ ಸಾಲವನ್ನು ಪಡೆಯಲು ಅರ್ಹತೆ ಸಿಗುತ್ತದೆ
- ನಂತರ ಬ್ಯಾಂಕು ಅಥವಾ ಕೃಷಿ ಸಹಕಾರ ಸಂಘದಲ್ಲಿ ಸಿಗುವ ಸಹಕಾರಿ ಕೃಷಿ ಸಾಲ ಯೋಜನೆ ಯ ಅರ್ಜಿಯನ್ನು ಪಡೆದು ನಿಮ್ಮ ವಯಕ್ತಿಕ ವಿವರ ಜಮೀನಿನ ವಿವರ ಬೆಳೆಯುತ್ತಿರುವ ಬೆಳೆಯ ವಿವರ ಹಾಗೂ ಇನ್ನು ಮುಂತಾದ ಪ್ರಮುಖ ಮಾಹಿತಿಯನ್ನು ನಿಗದಿ ಪಡಿಸಿದ ಸ್ಥಳಗಳಲ್ಲಿ ಭರ್ತಿ ಮಾಡಿ
- ಸಾಲವನ್ನು ಪಡೆಯಲು ಕೇಳಲಾಗುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಬ್ಯಾಂಕಿಗೆ ಸಲ್ಲಿಸಿ
- ನಂತರ ಮುಂದೆ ಬರುವ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ನೀವು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಿದ ನಂತರ ಬ್ಯಾಂಕು ಸಾಲದ ಮೊತ್ತವನ್ನು ನಿಮ್ಮ ಉಳಿತಾಯ ಖಾತೆಗೆ ಅಥವಾ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತಾರೆ
ಪ್ರಮುಖ ಸೂಚನೆ : ಈ Sahakari Krushi Loan Scheme ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಿತು ಬಡ್ಡಿಯ ಮೇಲೆ ಸಹಾಯಧನ ಅಥವಾ ಶೂನ್ಯ ಬಡ್ಡಿ ದರದ ಸೌಲಭ್ಯವನ್ನು ಪಡೆಯಬೇಕಾದರೆ ರೈತರು ಆಯಾ ಬ್ಯಾಂಕ್ ನಿಗದಿಪಡಿಸಿರುವ ಮರುಪಾವತಿ ಗಡುವಿನ ದಿನಾಂಕದೊಳಗೆ ಸಾಲದ ಕಂತನ್ನು ಮರುಪಾವತಿ ಕಡ್ಡಾಯ ಆಗಿರಬೇಕು ಒಂದು ಪಕ್ಷದಲ್ಲಿ ನೀವೇನಾದರೂ ನಿಗದಿತ ಸಮಯದಲ್ಲಿ ಸಾಲದ ಕಂತನ್ನು ಪಾವತಿಸುವಲ್ಲಿ ಅಥವಾ ಅನರ್ಹರೆಂದು ತಿಳಿದರೆ ಈ ಬಡ್ಡಿಯಲ್ಲಿ ಶೂನ್ಯ ಬಡ್ಡಿ ಆಗಲಿ ಸಿಗುವುದಿಲ್ಲ ನಂತರ ನೀವು ಬ್ಯಾಂಕ್ ಅಥವಾ ಸಹಕಾರಿ ಸಂಘ ನಿಗದಿಪಡಿಸುವ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ : ಕರ್ನಾಟಕ ಕೃಷಿ ಇಲಾಖೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಸರ್ಕಾರವು ರೈತರ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿ ಕೃಷಿ ಸಾಲ ಯೋಜನೆಯನ್ನು ಪ್ರಾರಂಭಿಸಿದ್ದು ರೈತರ ಪ್ರದೇಶದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಮೂಲಕ ಶೂನ್ಯ ಪಟ್ಟಿ ದರದಲ್ಲಿ ಸಾಲವನ್ನು ನೀಡುವ ಯೋಜನೆಯನ್ನು ರೂಪಿಸಿದೆ ಇದರಿಂದ ರೈತರು ಸಾಲವನ್ನು ಪಡೆದು ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿ ಉತ್ತಮ ಇಳುವರಿಯನ್ನು ಪಡೆದು ಉತ್ತಮ ಲಾಭವನ್ನು ಪಡೆಯುವುದರ ಜೊತೆಗೆ ರೈತರ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದಾಗಿದೆ ಕರ್ನಾಟಕ ಸರ್ಕಾರದ ಈ ರೈತ ಹಿತಾಸಕ್ತಿ ಯೋಜನೆಯು ರೈತರು ಅಭಿವೃದ್ಧಿಯಾಗಲು ಮತ್ತು ದೇಶದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಸಹಕರಿಸಲಿದೆ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗೆ ಒಂದು ಮೆಚ್ಚುಗೆ ಇರಲಿ
Sahakari Krushi Loan Scheme 2026 – FAQ’s
1. ಸಹಕಾರಿ ಕೃಷಿ ಸಾಲ ಯೋಜನೆ ಎಂದರೆ ಏನು?
ಇದು ಕರ್ನಾಟಕ ಸರ್ಕಾರದ ಸಾಲ ಯೋಜನೆಯಾಗಿದ್ದು, ರೈತರಿಗೆ ಕೃಷಿ ಕೆಲಸಗಳು, ಕೃಷಿ ಉಪಕರಣಗಳು ಹಾಗೂ ಉಪಕಸುಬುಗಳಿಗೆ ಕಡಿಮೆ ಅಥವಾ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
2. ಈ ಯೋಜನೆಯ ಅಡಿಯಲ್ಲಿ ಎಷ್ಟು ಸಾಲ ಸಿಗುತ್ತದೆ?
ಅಲ್ಪಾವಧಿ ಬೆಳೆ ಸಾಲಕ್ಕೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ ದೊರಕುತ್ತದೆ.
3. ಈ ಯೋಜನೆಗೆ ಯಾರು ಅರ್ಜಿ ಹಾಕಬಹುದು?
ಸಹಕಾರಿ ಬ್ಯಾಂಕ್ ಅಥವಾ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿರುವ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ರೈತರು ತಮ್ಮ ಗ್ರಾಮ ವ್ಯಾಪ್ತಿಯ ಸಂಘದಲ್ಲೇ ಸದಸ್ಯತ್ವ ಹೊಂದಿರಬೇಕಾಗುತ್ತದೆ.
4. ಯಾವ ಯಾವ ಬ್ಯಾಂಕುಗಳಲ್ಲಿ ಈ ಸಾಲ ಸಿಗುತ್ತದೆ?
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCC Bank) ಹಾಗೂ ಪಿಕಾರ್ಡ್ ಬ್ಯಾಂಕುಗಳಲ್ಲಿ ಈ ಸಾಲ ಸೌಲಭ್ಯಗಳು ಲಭ್ಯವಿದೆ.
5. ಶೂನ್ಯ ಬಡ್ಡಿ ದರದಲ್ಲಿ ಸೌಲಭ್ಯ ಪಡೆಯಲು ಏನು ಮಾಡಬೇಕು?
ಬ್ಯಾಂಕ್ ನಿಗದಿಪಡಿಸಿದ ಅವಧಿಯೊಳಗೆ ಸಾಲದ ಕಂತುಗಳನ್ನು ಸರಿಯಾಗಿ ಮರುಪಾವತಿ ಮಾಡಬೇಕು. ಸಮಯಕ್ಕೆ ಪಾವತಿ ಮಾಡದಿದ್ದರೆ ಶೂನ್ಯ ಬಡ್ಡಿ ಸೌಲಭ್ಯ ರದ್ದತಿಗೆ ಒಳಪಡಬಹುದು.