Telegram Join My Telegram WhatsApp Join My WhatsApp

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್ (PM Yashaswi Yojana)

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಶಿಕ್ಷಣಕ್ಕೆ ದಿನೇ ದಿನೇ ಉತ್ತೇಜನವು ಹೆಚ್ಚುತ್ತದೆ ಈ ನಿಟ್ಟಿನಲ್ಲಿ ಪಿಎಂ ಯಶಸ್ವಿ ಯೋಜನೆಯು ಭಾರತದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾರ್ದಿಕ ಪರಿಸ್ಥಿತಿಯ ಕಾರಣದಿಂದಾಗಿ ಅವರ ವಿದ್ಯಾಭ್ಯಾಸವು ಮಧ್ಯದಲ್ಲಿ ನಿಂತು ಹೋಗಿದ್ದರೆ ಅಥವಾ ಬೇರೆ ಯಾವುದೇ ಕಾರಣಗಳಿಂದ ನಿಲ್ಲಲ್ಪಟ್ಟಿದ್ದರೆ ಅಂತಹ ಸಾಮಾನ್ಯ ಮಧ್ಯಮ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣವನ್ನು ಪಡೆಯುವುದು ದೊಡ್ಡ ಸವಾಲಾಗಿರುತ್ತದೆ, ಆದುದರಿಂದ ಪಿಎಂ ಯಶಸ್ವಿ ಯೋಜನೆಯು ಶಾಲೆಯ ಶುಲ್ಕ ಕಾಲೇಜಿನ ಖರ್ಚು ಪುಸ್ತಕಗಳು ಹಾಸ್ಟೆಲ್ ವ್ಯವಸ್ಥೆ ಜೊತೆಗೆ ಡಿಜಿಟಲ್ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಪಡೆಯಲು ಲ್ಯಾಪ್ಟಾಪ್ ವ್ಯವಸ್ಥೆಯನ್ನು ಒದಗಿಸುತ್ತಿದೆ.

PM Yashaswi Yojana ಒಬ್ಬ ವಿದ್ಯಾರ್ಥಿಯು ತಾನು ಶೈಕ್ಷಣಿಕವಾಗಿ ಎದುರಿಸಬೇಕಾಗುವಂತಹ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ಸಂಪೂರ್ಣವಾಗಿ ಬೆಂಬಲಿಸುವುದರ ಜೊತೆಗೆ ಅವರಿಗಿರುವ ಆರ್ಥಿಕ ಭಾರವನ್ನು ಕಡಿಮೆ ಮಾಡಿ ತಮ್ಮ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

PM YASASVI Scholarship Scheme - Oliveboard

ಪಿಎಂ ಯಶಸ್ವಿ ಯೋಜನೆ ಎಂದರೆ ಏನು ?

ಪಿಎಂ ಯಶಸ್ವಿ ಯೋಜನೆ ಎಂದರೆ Young Achievers Scholarship Award Scheme For Vibrant India ಆಗಿದ್ದೂ ಈ ಯೋಜನೆಯು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಬರುವ ವಿದ್ಯಾರ್ಥಿ ವೇತನ ಯೋಜನೆ ಯಾಗಿದ್ದು ಶಿಕ್ಷಣದ ಉತ್ತೇಜನವು ಇದರ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳು ಈ ಕೆಳಕಂಡಂತಿವೆ

  • ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕೊರತೆ ಇರುವುದರಿಂದ ಉತ್ತಮ ಶಿಕ್ಷಣದ ಅವಕಾಶವನ್ನು ಒದಗಿಸುವುದು.
  • ಕೇವಲ ಆರ್ಥಿಕ ಕಾರಣಗಳಿಂದ ತಮ್ಮ ಉನ್ನತ ಶಿಕ್ಷಣದ ವಿದ್ಯಾಭ್ಯಾಸವನ್ನು ನಿಲ್ಲದಂತೆ ತಡೆಯುವುದು.
  • ಭಾರತದದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದು ಅವರಿಗೆ ಸೂಕ್ತ ಅವಕಾಶ ಸಿಗದೇ ಇರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು ಹಾಗೂ ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

PM Yashaswi Yojana  ಪ್ರಮುಖ ಅಂಶಗಳೆಂದರೆ

PM Yashaswi Yojana ಸವಲತ್ತುಗಳನ್ನು ತಿಳಿದ ನಂತರ ಈ ಯೋಜನೆಯು ಎಲ್ಲಾ ವಿದ್ಯಾರ್ಥಿ ವೇತನದ ಯೋಜನೆಗಳಂತಲ್ಲ ಎಂಬ ನಿರ್ಧಾರಕ್ಕೆ ಬರುತ್ತೀರಿ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.

  • ಶೈಕ್ಷಣಿಕ ವರ್ಷಕ್ಕೆ 2 ಲಕ್ಷದಿಂದ 3.72 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು.
  • ಡಿಜಿಟಲ್ ಶಿಕ್ಷಣದ ಸಹಾಯಕ್ಕಾಗಿ ಲ್ಯಾಪ್ಟಾಪ್ ಖರೀದಿಗೆ 45,000 ವರೆಗೆ ಸಹಾಯಧನ.
  • ಶೈಕ್ಷಣಿಕ ಉದ್ದೇಶಕ್ಕಾಗಿ ಬೇಕಾಗುವ ಪುಸ್ತಕ ನೋಟ್ ಬುಕ್ ಹಾಗೂ ಸ್ಟೇಷನರಿ ಖರ್ಚಿಗೆ ಪ್ರತ್ಯೇಕ ಧನ ನೆರವು.
  • ವಸತಿ ಸಮಸ್ಯೆಯನ್ನು ಬಗೆಹರಿಸಲು ತಿಂಗಳಿಗೆ 3000 ಗಳ ಜೀವನ ವೆಚ್ಚ.

ಎಲ್ಲಕ್ಕಿಂತ ಪ್ರಮುಖವಾಗಿ ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಯಾವುದೇ ಪ್ರವೇಶ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ ಕೇವಲ ಮೆರಿಟ್ ಆಧಾರಿತ ಆಯ್ಕೆಯು ಇರುತ್ತದೆ.

SCHOLORSHIPS

PM Yashaswi Yojana ಅರ್ಜಿ ಸಲ್ಲಿಕೆಗೆ ಯಾರು ಅರ್ಹರು

PM Yashaswi Yojana ಗೆ ಅರ್ಜಿ ಸಲ್ಲಿಸಲು ಕೆಲವು ಷರತ್ತು ಮತ್ತು ನಿಬಂಧನೆಗಳಿವೆ ಅವುಗಳೆಂದರೆ

ಸಮುದಾಯದ ಅರ್ಹತೆ.

  • ಒಬಿಸಿ (ಇತರ ಹಿಂದುಳಿದ ವರ್ಗ)
  • ಇಬಿಸಿ (ಆರ್ಥಿಕವಾಗಿ ಹಿಂದುಳಿದ ವರ್ಗ)
  • ಡಿ ಎನ್ ಟಿ (ಅಲೆಮಾರಿ ಅಥವಾ ಅರ್ಧ ಅಲೆಮಾರಿ ಸಮುದಾಯ)

ಆದಾಯ ಮಿತಿ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷದ ಒಳಗೆ ಇರಬೇಕು

ವಿದ್ಯಾಭ್ಯಾಸದ ಅರ್ಹತೆ.
ವಿದ್ಯಾರ್ಥಿಗಳು 9ನೇ ತರಗತಿ ಅಥವಾ 11ನೇ ತರಗತಿಯಲ್ಲಿ ಓದುತ್ತಿರುವವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ

ಶಿಕ್ಷಣ ಸಂಸ್ಥೆಯ ಅರ್ಹತೆ.
ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಶಾಲೆ ಅಥವಾ ಕಾಲೇಜು UDICE ಅಥವಾ AISHE ನಲ್ಲಿ ಕಡ್ಡಾಯವಾಗಿ ನೋಂದಾಯಿತಗೊಂಡಿರಬೇಕು

PM Yashaswi Yojana ಗೆ ಅರ್ಜಿ ಸಲ್ಲಿಸುವುದರಿಂದ ಸಿಗುವ ಆರ್ಥಿಕ ಸೌಲಭ್ಯಗಳು ಈ ಕೆಳಕಂಡಂತಿವೆ

ಟ್ಯೂಶನ್ ಫೀಸ್:
ಶೈಕ್ಷಣಿಕ ವರ್ಷಕ್ಕೆ ಗರಿಷ್ಠ ಎರಡು ಲಕ್ಷದವರೆಗೆ.
ಈ ಮೊತ್ತವು ವಿದ್ಯಾರ್ಥಿಗಳ ಖಾತೆಗೆ ಬರುವುದಿಲ್ಲ ಪ್ರತಿಯಾಗಿ ಸರ್ಕಾರದಿಂದ ಕಾಲೇಜಿಗೆ ನೇರವಾಗಿ ಪಾವತಿಯಾಗುತ್ತದೆ.

ಪೈಲೆಟ್ ತರಬೇತಿ:
ವೈಮಾನಿಕ ಕೋರ್ಸ್ ಗಳಿಗೆ ವಿಶೇಷವಾಗಿ 3.72 ಲಕ್ಷದವರೆಗೆ ಸಹಾಯಧನ ಸಿಗುತ್ತದೆ.

ಲ್ಯಾಪ್ಟಾಪ್ ಖರೀದಿಗೆ ಸಹಾಯಧನ:
ಮೊದಲ ಬಾರಿ 45,000ಗಳು ಹಾಗೂ ಕಂಪ್ಯೂಟರ್ ಯುಪಿಎಸ್ ಪ್ರಿಂಟರ್ ಅಥವಾ ಇನ್ನಿತರ ಖರೀದಿಗೆ ವೆಚ್ಚಗಳು.

ಜೀವನ ವೆಚ್ಚ:
ಪ್ರತಿ ತಿಂಗಳು 3000 ಗಳ ಜೀವನ ವೆಚ್ಚ ದೊರೆಯುತ್ತದೆ ವರ್ಷಕ್ಕೆ 36,000 ಆಗಿರುತ್ತದೆ.

ಪುಸ್ತಕ ವೆಚ್ಚಗಳು:
ಪಿಎಂ ಯಶಸ್ವಿ ಯೋಜನೆ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಒಂದು ವರ್ಷಕ್ಕೆ 5000 ರೂಗಳ ಪುಸ್ತಕ ವೆಚ್ಚ ದೊರೆಯುತ್ತದೆ.

ಡಿಬಿಟಿ ಹಣ ಪಡೆಯಲು ಮುಖ್ಯ ಸೂಚನೆಗಳು ಈ ಕೆಳಕಂಡಂತಿವೆ

ಟ್ಯೂಷನ್ ಫೀಸ್ ಹೊರತುಪಡಿಸಿ ಮಿಕ್ಕ ಎಲ್ಲಾ ಖರ್ಚು ವೆಚ್ಚಗಳ ಮತ್ತವು ವಿದ್ಯಾರ್ಥಿಗಳ ಖಾತೆಗೆ ಜಮೆ ಆಗುವುದರಿಂದ ಖಾತೆಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳುವುದು ಪ್ರಮುಖವಾಗಿರುತ್ತದೆ ಆದುದರಿಂದ ಈ ಕೆಳಕಂಡ ಅಂಶಗಳನ್ನು ಗಮನವಿಟ್ಟು ಪರಿಶೀಲಿಸಿ.

  • ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆ ಎನ್ ಪಿ ಸಿ ಐ ಡಿಬಿಟಿ ಲಿಂಕ್ ಕಡ್ಡಾಯವಾಗಿ ಆಗಿರಬೇಕು.
  • ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
  • ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಾಗೂ ಎಲ್ಲಾ ಶೈಕ್ಷಣಿಕ ದಾಖಲೆಗಳಲ್ಲಿ ಹೆಸರು ಜನ್ಮ ದಿನಾಂಕ ತಂದೆ ಹೆಸರು ತಾಯಿ ಹೆಸರು ಒಂದೇ ರೀತಿಯಾಗಿರಬೇಕು ಬದಲಾವಣೆಗಳಿದ್ದಲ್ಲಿ ಅರ್ಹತೆಯ ಸಮಯದಲ್ಲಿ ಸಮಸ್ಯೆ ಎದುರಾಗಬಹುದು.
  • ಯೋಜನೆಗೆ ಅರ್ಜಿ ಸಲ್ಲಿಸುವಾಗ ತಮ್ಮದೇ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಬಳಸಿ ಅರ್ಜಿ ಸಲ್ಲಿಸಿ ಏಕೆಂದರೆ ಯಾವುದೇ ರೀತಿಯ ಸಂವಹನವು ಮೊಬೈಲ್ ಅಥವಾ ಇ-ಮೇಲ್ ಮೂಲಕ ಆಗುತ್ತದೆ.

PM Yashaswi Yojana ಯ ಆಯ್ಕೆ ವಿಧಾನ

ವಿಶೇಷವೇನೆಂದರೆ ಈ ಯೋಜನೆಗೆ ಅರ್ಹತೆ ಪಡೆಯಲು ಈ ಮೊದಲು ಪ್ರವೇಶ ಪರೀಕ್ಷೆಯನ್ನು ಬರೆದು ಉತ್ತೀರ್ಣ ಹೊಂದುವ ಅವಶ್ಯಕತೆಯಿತ್ತು ಆದರೆ ಈಗ ಪರೀಕ್ಷೆಯನ್ನು ರದ್ದು ಮಾಡಿ ಮೆರಿಟ್ ಆಧಾರಿತ ಆಯ್ಕೆಯನ್ನು ಮಾಡಲಾಗುತ್ತದೆ.

ಆದುದರಿಂದ ಈಗ ಆಯ್ಕೆಯ ಮಾನದಂಡವು,

  • 9ನೇ ತರಗತಿ ವಿದ್ಯಾರ್ಥಿಗಳಿಗೆ ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು.
  • 11ನೇ ತರಗತಿಗೆ ಅಥವಾ ಪ್ರಥಮ ಪಿಯುಸಿಗೆ ಅಥವಾ ಎಸ್ ಎಸ್ ಎಲ್ ಸಿ ಮುಗಿದ ನಂತರ ಯಾವುದೇ ಇನ್ನಿತರ ಕೋರ್ಸ್ ಗಳಿಗೆ ದಾಖಲಾಗಿದ್ದರೆ ಎಸ್ ಎಸ್ ಎಲ್ ಸಿ ಅಂಕಗಳನ್ನು ಆಧರಿಸಲಾಗುವುದು.

ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ನಿರೀಕ್ಷಿತ ಪ್ರಮುಖ ದಿನಾಂಕಗಳು

  • ಆನ್ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ ಜೂನ್ 02 2026.
  • ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಸ್ಟ್ 31 2026.
  • ಅರ್ಜಿ ಹಾಗೂ ದಾಖಲಾತಿ ಪರಿಶೀಲನೆ ಸೆಪ್ಟೆಂಬರ್ ದಿನಾಂಕ 15 ರಿಂದ  ದಿನಾಂಕ 30…

PM Yashaswi Yojana ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್.
  • ಮಾರ್ಕ್ಸ್ ಕಾರ್ಡ್ (8 ನೇ ಹಾಗೂ 10ನೇ ತರಗತಿ.)
  • ಪಾಸ್ಪೋರ್ಟ್ ಸೈಜ್ ಫೋಟೋ.
  • ಜಾತಿ ಪ್ರಮಾಣ ಪತ್ರ.
  • ಆದಾಯ ಪ್ರಮಾಣ ಪತ್ರ.
  • ವಸತಿ ಪ್ರಮಾಣ ಪತ್ರ.
  • ಬ್ಯಾಂಕ್ ಪಾಸ್ ಬುಕ್.

ಅರ್ಜಿ ಸಲ್ಲಿಸುವ ವಿಧಾನ

  • ಪ್ರಧಾನಮಂತ್ರಿ ಯಶಸ್ವಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • New Registration ಎಂಬಲ್ಲಿ ಕ್ಲಿಕ್ ಮಾಡಿ.
  • ನಂತರ ಅರ್ಜಿ ತೆರೆಯುತ್ತದೆ ವಿದ್ಯಾರ್ಥಿಯ ಮಾಹಿತಿ ಹಾಗೂ ದಾಖಲಾತಿಗಳನ್ನು ಎಚ್ಚರವಾಗಿ ನಮೂದಿಸಿ.
  • ಭಾವಚಿತ್ರ ಶೈಕ್ಷಣಿಕ ದಾಖಲೆಗಳು ಮಾರ್ಚ್ ಕಾರ್ಡ್ ಜಾತಿ ಆದಾಯ ವಸತಿ ಪ್ರಮಾಣ ಪತ್ರಗಳು ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಅಪ್ಲೋಡ್ ಮಾಡಿ.
  • ನಂತರ ತಾವು ನಮೂದಿಸಿರುವ ಎಲ್ಲ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ಎಲ್ಲ ದಾಖಲಾತಿಗಳನ್ನು ಎಚ್ಚರದಿಂದ ಪರಿಶೀಲಿಸಿ ಸಬ್ಮಿಟ್ ಮಾಡಿ.
ಅಧಿಕೃತ ವೆಬ್‌ ಸೈಟ್:‌ ಪಿ ಎಂ ಯಶಸ್ವಿ ಯೋಜನೆ

ಪ್ರಮುಖ ಸೂಚನೆ:

  • PM Yashaswi Yojana  ಗೆ ಒಂದು ಬಾರಿ ಅರ್ಜಿ ಸಲ್ಲಿಸಿದ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ ಆದುದರಿಂದ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಅತಿ ಎಚ್ಚರವಹಿಸಿ ಮಾಹಿತಿ ಹಾಗೂ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು ಉತ್ತಮ.
  • PM Yashaswi Yojana  ಗೆ ಒಬ್ಬ ವಿದ್ಯಾರ್ಥಿಯು ಒಂದೇ ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ. ಬಹು ಅರ್ಜಿಗಳನ್ನು ಸಲ್ಲಿಸಿದರೆ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ.

PM Yashaswi Yojana ಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲಹೆಗಳು

  • ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಇಂದೇ ಸಿದ್ದಪಡಿಸಿ.
  • ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಾಗೂ ಶೈಕ್ಷಣಿಕ ದಾಖಲಾತಿಗಳಲ್ಲಿ ಯಾವುದೇ ಬದಲಾವಣೆಗಳ ಅವಶ್ಯಕತೆ ಇದ್ದಲ್ಲಿ ಇಂದೇ ಸರಿಪಡಿಸಿ.
  • ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯ ಎನ್ ಪಿ ಸಿ ಐ, ಡಿ ಬಿ ಟಿ ಲಿಂಕ್ ಕಡ್ಡಾಯವಾಗಿ ಮಾಡಿಸಿ.
  • ಎಲ್ಲ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಂಡು ಅರ್ಜಿ ಪ್ರಾರಂಭವಾದ ತಕ್ಷಣ ಅಪ್ಲೈ ಮಾಡುವುದು ಉತ್ತಮ.

 

ಇಂದಿನ ದಿನಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವುದು ಎಲ್ಲರ ಮಹಾದಾಸೆಯಾಗಿದೆ ಆದರೆ ಆ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದಾಗ ಆ ಉನ್ನತ ಶಿಕ್ಷಣದ ಕನಸು ಕನಸಾಗಿಯೇ ಉಳಿಯುತ್ತಿದೆ ಯಶಸ್ವಿ ಯೋಜನೆಯ ಮೂಲಕ ಉನ್ನತ ಶಿಕ್ಷಣವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಲು ಹಾಗೂ ಅವರ ಕನಸುಗಳನ್ನು ನನಸು ಮಾಡಲು ಬೆಂಬಲ ನೀಡುತ್ತದೆ, ವಿಶೇಷವಾಗಿ ಎಸ್ ಎಸ್ ಎಲ್ ಸಿ ಮುಗಿದ ನಂತರ ತಮ್ಮ ಶಿಕ್ಷಣವನ್ನು ಮುಂದುವರೆಸಲು ಆರ್ಥಿಕ ಸಮಸ್ಯೆಗಳಿದ್ದಲ್ಲಿ ಈ ಯೋಜನೆಯು ಒಂದು ಸುವರ್ಣ ಅವಕಾಶವಾಗಿದೆ ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸುವುದರಿಂದ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಾಗೂ ವಸತಿಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಪಡೆಯಬಹುದು.

 

Read More: Schemes

Free Catalyst Scholarship 2026: 100% ಫೀಸ್ ಉಚಿತ + ಹಾಸ್ಟೆಲ್ + ಇಂಟರ್ನ್‌ಶಿಪ್ | ತಕ್ಷಣ ಅರ್ಜಿ ಹಾಕಿ

Kiran Scholarship 2026 Big Opportunity: ವಿದ್ಯಾರ್ಥಿಗಳಿಗೆ ತಿಂಗಳಿಗೆ ₹20,000 ಸ್ಕಾಲರ್‌ಶಿಪ್!, ಅರ್ಜಿ ಆರಂಭ – ಪೂರ್ಣ ಮಾಹಿತಿ

Best Self Employment Loan: ಸ್ವಯಂ ಉದ್ಯೋಗವನ್ನು ಆರಂಭಿಸುವವರಿಗೆ ಗೋಲ್ಡನ್‌ ಅವಕಾಶ ₹4 ಲಕ್ಷ ಸಾಲ + 50% ಸಬ್ಸಿಡಿ – ಭರ್ಜರಿ ಅವಕಾಶ

Kaveri 2.0 Property Registration Is Fast: ಕಾವೇರಿ 2.0 ಆರಂಭ, ಕೇವಲ 10 ನಿಮಿಷದಲ್ಲಿ ಆಸ್ತಿ ನೋಂದಣಿ! ಇನ್ಮುಂದೆ ಸಂಪೂರ್ಣ ಕಾಗದರಹಿತ ವ್ಯವಸ್ಥೆ

PM Matru Vandana Yojana: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ತಾಯಂದಿರಿಗೆ ₹5000 ಸಹಾಯಧನ! ಅರ್ಜಿ ಹೇಗೆ ಹಾಕುವುದು? ಸಂಪೂರ್ಣ ಮಾಹಿತಿ

PMMSY Subsidy 2026: ಮೀನುಗಾರರಿಗೆ ಭರ್ಜರಿ ಸಿಹಿಸುದ್ದಿ! ₹60 ಲಕ್ಷವರೆಗೆ ಸಹಾಯಧನ – PM ಮತ್ಸ್ಯ ಸಂಪದ ಯೋಜನೆ 2026 ಸಂಪೂರ್ಣ ಮಾಹಿತಿ

AHIDF Scheme 2026: ಪಶುಸಂಗೋಪನೆ ಯೋಜನೆ, 90% ಸಾಲ + 3% ಬಡ್ಡಿ ಸಬ್ಸಿಡಿ! ರೈತರು, ಉದ್ಯಮಿಗಳಿಗೆ ದೊಡ್ಡ ಅವಕಾಶ

Pradhan Manthri Awas Yojana 2.0: ಉಚಿತ ಸೈಟ್ + ಮನೆಗೆ ಸಹಾಯಧನ! ಅರ್ಜಿ ಪ್ರಾರಂಭ – ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

PM Vishwakarma Yojana: ಪಿಎಂ ವಿಶ್ವಕರ್ಮ ಯೋಜನೆ, ಸ್ವಯಂ ಉದ್ಯೋಗಕ್ಕೆ ₹3 ಲಕ್ಷ ಸಾಲ, ₹15,000 ಟೂಲ್ಕಿಟ್ – ಸಂಪೂರ್ಣ ಮಾಹಿತಿ

Free Computer Training Bangalore 2026: ಬೆಂಗಳೂರಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ, ಟ್ಯಾಲಿ, GST ಕಲಿತು ₹25,000 ಸಂಬಳದ ಅವಕಾಶ!

She Mart Yojane 2026: ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ – ಸಾಲ, ತರಬೇತಿ, ಮಾರ್ಕೆಟ್ ಸೌಲಭ್ಯ!

Ashraya Yojane 2026: ₹3 ಲಕ್ಷ ಉಚಿತ + ₹7 ಲಕ್ಷ ಬಡ್ಡಿರಹಿತ ಸಾಲ – ನಿಮ್ಮ ಮನೆ ಕನಸು ಈಗ ಸಾಕಾರ!

Gruhalakshmi 29th Installment Released: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್, 29ನೇ ಕಂತಿನ ₹2,000 ಹಣ ಬಿಡುಗಡೆ! ನಿಮ್ಮ ಖಾತೆಗೆ ಬಂದಿದೆಯೇ ಹೀಗೆ ಚೆಕ್ ಮಾಡಿ.

Arogya Karnataka Scheme: ಆರೋಗ್ಯ ಕರ್ನಾಟಕ ಯೋಜನೆ: ₹5 ಲಕ್ಷವರೆಗೆ ಉಚಿತ ಚಿಕಿತ್ಸೆ! ಎಲ್ಲರಿಗೂ Health Insurance – ಹೇಗೆ ಪಡೆಯಬೇಕು?

Swami Vivekananda Yuva Shakti Yojana: ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ 2026: ₹10 ಲಕ್ಷದವರೆಗೆ ಸಾಲ + ತರಬೇತಿ! ಗ್ರಾಮೀಣ ಯುವಕರಿಗೆ ಸುವರ್ಣ ಅವಕಾಶ

Leave a Comment