Telegram Join Our Telegram WhatsApp Join Our WhatsApp

Prize Money 2026, Big Update: ಪರೀಕ್ಷೆಗಳಲ್ಲಿ ಮೊದಲನೇ ಪ್ರಯತ್ನದಲ್ಲಿ ಪಾಸ್‌ ಆದವರಿಗೆ ಗುಡ್‌ ನ್ಯೂಸ್,‌ ಯೋಜನೆ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

SSLC, PUC, UG, PG, ENGINEERING ಮುಂತಾದ ಪರೀಕ್ಷೆಯಲ್ಲಿ ಪಾಸ್‌ ಆದವರಿಗೆ Prize Money

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ 2025-26 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣಗೊಂಡಿರುವ ಎಸೆಸೆಲ್ಸಿ ಪಿಯುಸಿ ಡಿಪ್ಲೋಮಾ ಪದವಿ ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ಘೋಷಿಸಿದೆ ಈ ಪ್ರೈಸ್ ಮನಿ ಸ್ಕಾಲರ್ಶಿಪ್ ಯೋಜನೆಯು ವಿವಿಧ ತರಗತಿಗಳಲ್ಲಿ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳಿಗೆ ಅಂಕಗಳ ಆಧಾರದ ಮೇಲೆ ಸಹಾಯಧನವನ್ನು ನೀಡಲಾಗುತ್ತಿದೆ ಒಂದು ಶಿಕ್ಷಣವನ್ನು ಪಡೆಯಲು ಹಾಗೂ ಶೈಕ್ಷಣಿಕ ಪ್ರಗತಿಯನ್ನು ಹೊಂದಲು ಸಹಕರಿಸುವುದಲ್ಲದೆ ವಿದ್ಯಾರ್ಥಿಗಳು ಪ್ರತಿಷ್ಠಿತ ಹಾಗೂ ಉತ್ತಮ ಕಾಲೇಜುಗಳಲ್ಲಿ ದಾಖಲಾತಿಯನ್ನು ಪಡೆಯಲು ಸಹಕರಿಸುತ್ತದೆ ಈ ಲೇಖನದಲ್ಲಿ ನಾವು ಈ ಸಹಾಯಧನದ ಬಗ್ಗೆ ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು ಅರ್ಹತೆ ಹಾಗೂ ಸಹಾಯಧನದ ಮೊತ್ತದ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದ್ದೇವೆ ಆದಷ್ಟು ಬೇಗ ಈ ಲೇಖನವನ್ನು ಓದಿ ಅರ್ಹತೆ ಮಾನದಂಡಗಳನ್ನು ಪರಿಶೀಲಿಸಿ ಇಂದೇ ಅರ್ಜಿ ಸಲ್ಲಿಸಿ.

ಪ್ರೈಸ್ ಮನಿ (Prize Money) ಸ್ಕಾಲರ್ಷಿಪ್ ಎಂದರೆ ಏನು

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ವಿದ್ಯಾರ್ಥಿ ಹಿತ ದೃಷ್ಟಿಯ ಯೋಜನೆಯಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತೇಜನಗೊಳ್ಳಲು ಶುರು ಮಾಡಿರುವ Prize Money ಯೋಜನೆಯಾಗಿದೆ ಈ Prize Money ಯೋಜನೆಯ ಮೂಲಕ ಮೊದಲ ಪ್ರಯತ್ನದಲ್ಲೇ ಡಿಸ್ಟಿಂಕ್ಷನ್ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸರಕಾರದಿಂದ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ

ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆ

ಈ Prize Money ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತಮಾನದಂಡಗಳನ್ನು ಪೂರೈಸಿದ ನಂತರವೇ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಪ್ರಮುಖ ಅರ್ಹತ ಮಾನದಂಡಗಳೆಂದರೆ

  • Prize Money ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
  • ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದವರಾಗಿರಬೇಕು
  • ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಥವಾ ಫಸ್ಟ್ ಕ್ಲಾಸ್ ಗ್ರೇಡ್ ಪಡೆದು ಉತ್ತೀರ್ಣರಾಗಿರಬೇಕು
  • ಕನಿಷ್ಠ 60 ಪರ್ಸೆಂಟ್ ಅಂಕಗಳೊಂದಿಗೆ ಉತ್ತೀರ್ಣಗೊಂಡಿರಬೇಕು
  • ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದಂತಹ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಪೂರ್ಣಗೊಳಿಸಬೇಕು

 ಯಾವ ಕೋರ್ಸಿಗೆ ಎಷ್ಟು ಮೊತ್ತದ Prize Money

ಕೋರ್ಸ್ ಸಿಗುವ Prize Money ಮೊತ್ತ (ರೂಗಳಲ್ಲಿ)
ಎಸ್ ಎಸ್ ಎಲ್ ಸಿ 60% ರಿಂದ 75% 15,000/- ರೂಗಳು

>75% 20,000/- ರೂಗಳು

ಪಿಯುಸಿ 20,000/- ರೂಗಳು
ಡಿಪ್ಲೋಮಾ 20,000/- ರೂಗಳು
ಪದವಿ 25,000/- ರೂಗಳು
ಸ್ನಾತಕೋತ್ತರ ಪದವಿ 30,000/- ರೂಗಳು
ಇಂಜಿನಿಯರಿಂಗ್/ ಮೆಡಿಕಲ್/ ಕೃಷಿ /ವೆಟನರಿ 35,000/- ರೂಗಳು

 

Prize Money ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು

ಈ Prize Money ಯೋಜನೆಯು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನವನ್ನು ನೀಡುವುದರಿಂದ ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲಾತಿಗಳು ಪ್ರಮುಖವಾಗಿರುತ್ತದೆ ಪ್ರಮುಖ ದಾಖಲೆಗಳು ಈ ಕೆಳಕಂಡಂತಿವೆ

  • ಆಧಾರ್ ಕಾರ್ಡ್ (ಮೊಬೈಲ್‌ ನಂಬರ್‌ ಕಡ್ಡಾಯವಾಗಿ ಲಿಂಕ್‌ ಆಗಿರಬೇಕು)
  • ಜಾತಿ ಮತ್ತು ಅದಾಯ ಪ್ರಮಾಣ ಪತ್ರ  (ಅವಧಿ ಚಾಲ್ತಿಯಲ್ಲಿರಬೇಕು>> ಜಾತಿ ಮತ್ತು ಅದಾಯ ಪ್ರಮಾಣ ಪತ್ರದ ಅವಧಿ ಪರಿಶೀಲನೆ ಲಿಂಕ್
  • ಶೈಕ್ಷಣಿಕ ವರ್ಷದ ಅಂಕಪಟ್ಟಿ (ನೈಜ ಹಾಗೂ ಉತ್ತೀರ್ಣರಾಗಿರಬೇಕು)
  • ಬ್ಯಾಂಕ್ ಪಾಸ್ ಬುಕ್  (NPCI ಮತ್ತು DBT ಲಿಂಕ್‌ ಆಗಿರಬೇಕು)
  • ವಿದ್ಯಾರ್ಥಿಗಳ ಫೋಟೋ (ಇತ್ತೀಚಿನದ್ದಾಗಿರಬೇಕು)
  • ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ (ಯಾವುದೇ ತೊಂದರೆ ಇಲ್ಲದೇ ಸಕ್ರಿಯವಾಗಿರಬೇಕು)
  • ಕಾಲೇಜಿಗೆ ಸಂಬಂಧಿಸಿದ ದಾಖಲೆಗಳು (ಅಧಿಕೃತ ದಾಖಲೆಗಳಾಗಿರಬೇಕು)

ಕೆಲವೊಂದು ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಇನ್ನೂ ಹೆಚ್ಚುವರಿ ದಾಖಲೆಗಳನ್ನು Prize Money ಅರ್ಜಿಗೆ  ಕೇಳಬಹುದು

Prize Money ಗೆ ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ

  • ಈ Prize Money ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಈ ಕೆಳಗಡೆ ನೀಡಲಾಗಿದೆ
  • ವೆಬ್ಸೈಟ್ ಆದ ನಂತರ ಪ್ರೈಸ್ ಮನಿ ಸ್ಕಾಲರ್ಶಿಪ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು
  • ಸ್ಕಾಲರ್ಶಿಪ್ ಆಯ್ಕೆಯನ್ನು ಆಯ್ದುಕೊಂಡ ನಂತರ ಅಲ್ಲಿ ಕೇಳಲಾಗುವ ವಿದ್ಯಾರ್ಥಿಗಳ ವಿವರ ಶೈಕ್ಷಣಿಕ ವಿವರ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ
  • ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ನಂತರ ತಾವು ನಮೂದಿಸಿರುವ ಎಲ್ಲ ಮಾಹಿತಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ
  • ಕೊನೆಯಲ್ಲಿ ಸಬ್ಮಿಟ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
  • ನಂತರ ಸ್ಕ್ರೀನ್ ಮೇಲೆ ಕಾಣುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಫ್ರೆಂಡ್ಸ್ ತೆಗೆದುಕೊಂಡು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕಾಗಿರುತ್ತದೆ ಎಚ್ಚರಿಕೆಯಿಂದ ಲಗತಿಸಿ ತಾಲೂಕಿನ ಸಮಾಜ ಕಲ್ಯಾಣ ಕಚೇರಿಗೆ ಸಲ್ಲಿಸಿ ಮತ್ತು ನೀವು ನೀಡುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ಸಕ್ರಿಯವಾಗಿ ಇರಿಸಿಕೊಳ್ಳಿ ಏಕೆಂದರೆ ಯಾವುದಾದರೂ ಬದಲಾವಣೆ ಅಥವಾ ಅಪ್ಡೇಟ್ಗಳು ಇದ್ದಲ್ಲಿ ನಿಮ್ಮನ್ನು ಕಚೇರಿಯವರು ಸಂಪರ್ಕಿಸುತ್ತಾರೆ

Prize Money ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಗಮನಕ್ಕೆ ಪ್ರಮುಖ ಸಲಹೆಗಳು

  • ಈ ಯೋಜನೆಯು ಪರಿಚಯ ಮೊದಲ ಪ್ರಯತ್ನದಲ್ಲಿ ಪಾಸಾದವರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ
  • ವಿದ್ಯಾರ್ಥಿಗಳು ಶೇಕಡ 60 ಕ್ಕಿಂತ ಹೆಚ್ಚು ಅಥವಾ ಸಮಾನ ಅಂಕಗಳನ್ನು ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಆಗಿಲ್ಲದಿದ್ದರೆ ತಮ್ಮ ಬ್ಯಾಂಕನ್ನು ಸಂಪರ್ಕಿಸಿ ಖಾತೆಗೆ ಎಂಪಿಸಿಐ ಡಿಬಿಟಿ ಲಿಂಕನ್ನು ಮಾಡಿಸಿ
  • ಯಾವುದೇ ಕಾರಣಕ್ಕೂ ಅರ್ಜಿ ನಮೂನೆಯಲ್ಲಿ ತಪ್ಪು ಮಾಹಿತಿಯನ್ನು ನೀಡಬೇಡಿ ಒಂದು ವೇಳೆ ತಪ್ಪು ಮಾಹಿತಿಯನ್ನು ನೀಡಿದರೆ ಅರ್ಜಿ ತಿರಸ್ಕಾರವಾಗಬಹುದು ಎಂಬುದನ್ನು ಗಮನದಲ್ಲಿಡಿ

ವಿದ್ಯಾರ್ಥಿಗಳಿಗೆ Prize Money ಯೋಜನೆ ಉಪಯುಕ್ತವೇ 

ಕರ್ನಾಟಕ ಸರ್ಕಾರದ ಈ ಪ್ರೈಸ್ ನಲ್ಲಿ ಯೋಜನೆಯು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವುದರಿಂದ ಅವರು ಉನ್ನತ ಶಿಕ್ಷಣವನ್ನು ಪಡೆಯಲು ಹಾಗೂ ಇರುವ ಶಿಕ್ಷಣವನ್ನು ಮುಂದುವರಿಸಲು ಸಹಾಯಕವಾಗುತ್ತದೆ ಇಂದಿನ ಸಂದರ್ಭಗಳಲ್ಲಿ ಅನೇಕ ವಿದ್ಯಾರ್ಥಿಗಳು ಆರ್ಥಿಕ ತೊಂದರೆಯಿಂದ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸುತ್ತಿದ್ದಾರೆ ಆದರೆ ಈ ಯೋಜನೆಯಿಂದ ಸಿಗುವ ಆರ್ಥಿಕ ಸಹಾಯದಿಂದ ಕಾಲೇಜುಗಳ ದಾಖಲಾತಿ ಪುಸ್ತಕ ಖರೀದಿ ಶುಲ್ಕ ಪಾವತಿ ಹಾಗೂ ಇತರೆ ಶಿಕ್ಷಣದ ವೆಚ್ಚಗಳನ್ನು ನಿರ್ವಹಿಸಲು ನೆರವಾಗುತ್ತದೆ ಇದರ ಜೊತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವಂತಹ ಹೆಚ್ಚುವರಿ ಯೋಜನೆಗಳನ್ನು ಪಡೆಯಬಹುದು

Prize Money ಯೋಜನೆಯ ಸಮಗ್ರ ಮಾಹಿತಿ

ಮಾಹಿತಿ ಸಂಬಂಧಿಸಿದ ವಿವರ
ಯೋಜನೆಯ ಹೆಸರು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಪ್ರೈಸ್ ಮನಿ
ಪ್ರೈಸ್ ಮನಿ ನೀಡುವ ಇಲಾಖೆ ಸಮಾಜ ಕಲ್ಯಾಣ ಇಲಾಖೆ
ಪ್ರಯೋಜನದ ಮೊತ್ತ 15,000/- ರೂಗಳಿಂದ 35,000/- ರೂಗಳು
ಅರ್ಜಿ ಸಲ್ಲಿಕೆಗೆ ಅರ್ಹತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು
ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್ ಮಾತ್ರ
ಆಯ್ಕೆ ಮಾನದಂಡದ ಅರ್ಹತೆ ಮೊದಲನೇ ಪ್ರಯತ್ನದಲ್ಲಿ ಫಸ್ಟ್ ಕ್ಲಾಸ್ ಗಿಂತ ಮೇಲಿನ ವರ್ಗಗಳಲ್ಲಿ ತೆರ್ಗಡೆ ಹೊಂದಿರುವವರು
ಶೈಕ್ಷಣಿಕ ವರ್ಷ 2025-26 ನೇ ಸಾಲಿನಲ್ಲಿ ಉತ್ತೀರ್ಣರಾದವರು ಮಾತ್ರ

 

ಕರ್ನಾಟಕ ಸರ್ಕಾರದ ಅಧಿಕೃತ ಪ್ರೈಜ್‌ ಮನಿ ವೆಬ್ಸೈಟ್ : ಸಮಾಜ ಕಲ್ಯಾಣ ಇಲಾಖೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು : ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ :  ನೇಮಕಾತಿ ಮಾಹಿತಿ          ಸರ್ಕಾರಿ ಯೋಜನೆಗಳ ಮಾಹಿತಿ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದರಿಂದ ಆರ್ಥಿಕ ತೊಂದರೆ ಕಡಿಮೆಯಾಗುತ್ತದೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು, ಕಾಲೇಜು ಶುಲ್ಕ ಪಾವತಿಸಲು, ಪುಸ್ತಕ ಖರೀದಿಸಲು ಮತ್ತು ಉನ್ನತ ಶಿಕ್ಷಣ ಮುಂದುವರಿಸಲು ಮುಂತಾದ ಪ್ರಮುಖ ಅವಶ್ಯಕತೆಗಳಿಗೆ ಸಹಾಯವಾಗುತ್ತದೆ. ಇದರಿಂದ ಶಾಲೆ ಬಿಡುವಿಕೆ ಕಡಿಮೆಯಾಗುವುದರ ಜೊತೆಯಲ್ಲಿ ಉತ್ತಮ ಉದ್ಯೋಗಾವಕಾಶ ಹಾಗೂ ಗ್ರಾಮೀಣ ಭಾಗದ ಶಿಕ್ಷಣ ಗುಣಮಟ್ಟವೂ ಹೆಚ್ಚಾಗುತ್ತದೆ.

ಕರ್ನಾಟಕ ಸರ್ಕಾರದ ಈ ಮಹತ್ವಕಾಂಕ್ಷಿ Prize Money ಯೋಜನೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿದ್ಯಾರ್ಥಿ ವೇತನವನ್ನು ಯಶಸ್ವಿ ಮೂಲಕ ನೀಡುವುದರ ಜೊತೆಯಲ್ಲಿ ಹೆಚ್ಚುವರಿ ವಿದ್ಯಾರ್ಥಿ ವೇತನವನ್ನು ಈ ಪ್ರೈಸ್ ಮನಿ ಮೂಲಕ ನೀಡುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಹಾಗೂ ಉತ್ತಮ ಪ್ರತಿಶತ ಕಾಲೇಜುಗಳಿಗೆ ದಾಖಲಾಗಲು ಸಹಕರಿಸುತ್ತದೆ ಈ ಯೋಜನೆಯಿಂದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಉತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಹೆಚ್ಚು ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಆದುದರಿಂದ ಈ ಲೇಖನದಲ್ಲಿರುವ ಎಲ್ಲಾ ಮಾಹಿತಿಯನ್ನು ಆದಷ್ಟು ಬೇಗ ಓದಿಕೊಂಡು ಈ ಕೆಳಗೆ ನೀಡಿರುವ ಅಧಿಕೃತ ಇಲಾಖೆಯ ಲಿಂಕನ್ನು ಉಪಯೋಗಿಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದು ತಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ

 

Prize Money Scholarship – FAQʼs

1. Prize Money ಯೋಜನೆ ಎಂದರೆ ಏನು?
ಇದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಯೋಜನೆಯಾಗಿದ್ದು ಉತ್ತಮ ಅಂಕಗಳೊಂದಿಗೆ ಪಾಸ್ ಆದ SC/ST ವಿದ್ಯಾರ್ಥಿಗಳಿಗೆ ಹಣಕಾಸು ಸಹಾಯ (Prize Money) ನೀಡಲಾಗುತ್ತದೆ.

2. ಈ Prize Money ಗೆ ಯಾರು ಅರ್ಜಿ ಸಲ್ಲಿಸಬಹುದು?
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

3. ಯಾವ ಕೋರ್ಸಿನ ವಿದ್ಯಾರ್ಥಿಗಳಿಗೆ Prize Money ದೊರೆಯುತ್ತದೆ?
SSLC, PUC, Diploma, Degree (UG), PG, Engineering, Medical, Agriculture, Veterinary ಸೇರಿದಂತೆ ಹಲವು ಕೋರ್ಸನ್ನು ಉತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಸಿಗುತ್ತದೆ.

4. ಅರ್ಜಿ ಸಲ್ಲಿಸಲು ಕನಿಷ್ಠ ಎಷ್ಟು ಅಂಕಗಳು ಅಗತ್ಯ?
ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

5. ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿರಬೇಕೇ?
ಹೌದು, ಮೊದಲ ಪ್ರಯತ್ನದಲ್ಲೇ (First Attempt) ಫಸ್ಟ್ ಕ್ಲಾಸ್ ಅಥವಾ ಡಿಸ್ಟಿಂಕ್ಷನ್‌ನಲ್ಲಿ ಪರೀಕ್ಷೆಯನ್ನು ಪಾಸ್ ಆಗಿರಬೇಕು.

6. ಯಾವ ಕೋರ್ಸ್‌ಗೆ ಎಷ್ಟು Prize Money ಮೊತ್ತ ಸಿಗುತ್ತದೆ?

  • SSLC/PUC: ₹15,000 ರಿಂದ ₹20,000
  • Diploma: ₹20,000
  • Degree (UG): ₹25,000
  • PG: ₹30,000
  • Engineering/Medical/Agriculture/Veterinary: ₹35,000

7. ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ, ಬ್ಯಾಂಕ್ ಪಾಸ್‌ಬುಕ್, ಫೋಟೋ, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ  ಮುಂತಾದ ಪ್ರಮುಖ ಬೇಕಾಗುತ್ತದೆ.

8. Prize Money ಗೆ ಹೇಗೆ ಅರ್ಜಿ ಸಲ್ಲಿಸಬಹುದು?
ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ  ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು.

9. ಬ್ಯಾಂಕ್ ಖಾತೆ ಸ್ಥಿತಿ ಹೇಗಿರಬೇಕು?
ಆಧಾರ್, NPCI ಮತ್ತು DBT ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಪ್ರೈಜ್‌ ಮನಿ ಹಣವು ಬರುವುದಿಲ್ಲ.

10. ಈ ಯೋಜನೆ ವಿದ್ಯಾರ್ಥಿಗಳಿಗೆ ಉಪಯುಕ್ತವೇ ?
ಈ ಹಣದಿಂದ ಕಾಲೇಜು ಶುಲ್ಕ, ಪುಸ್ತಕ ಖರೀದಿ, ಶಿಕ್ಷಣ ವೆಚ್ಚಗಳು ನಿರ್ವಹಿಸಲು ಸಹಾಯವಾಗುತ್ತದೆ ಹಾಗೂ ಉನ್ನತ ಶಿಕ್ಷಣವನ್ನು ಮುಂದುವರಿಸಲು ಉಪಯುಕ್ತವಾಗುತ್ತದೆ.

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment