Telegram Join My Telegram WhatsApp Join My WhatsApp

Krushi Bhagya Agriculture Scheme, Best Of 2026 : ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರದಿಂದ ಬಂಪರ್‌ ಆಫರ್‌, ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ ಇಲ್ಲಿದೆ

ಈ ಸಬ್ಸಿಡಿ ಯೋಜನೆಯಿಂದ ಮಳೆಯನ್ನು ಆಧರಿಸಿ ಕೈಗೊಳ್ಳುವ ಕೃಷಿ ಚಟುವಟಿಕೆಗಳಿಗೆ ಪರ್ಯಾಯ ಮಾರ್ಗ ಹಾಗೂ ಉತ್ತೇಜನ (Krushi Bhagya Agriculture Scheme)

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ ಎಂಬುದು ನಮ್ಮೆಲ್ಲರಿಗೂ ತಿಳಿದೇ ಇದೆ ಪ್ರಮುಖವಾಗಿ ಕರ್ನಾಟಕದಲ್ಲಿ ಮಳೆಯನ್ನು ಆಧರಿಸಿ ಕೃಷಿ ಚಟುವಟಿಕೆಗಳನ್ನು ರೈತರು ಮಾಡುತ್ತಾರೆ ಆದರೆ ಈ ಮಳೆಯನ್ನು ನಂಬಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಅನ್ನದಾತರಿಗೆ ಪ್ರತಿ ವರ್ಷವೂ ಮಳೆ ನೀರಿನಲ್ಲಿ ತೊಂದರೆಯಾಗಿದೆ ಮಳೆಯು ಹೆಚ್ಚಾಗಿ ಬಂದರೆ ಅತಿವೃಷ್ಟಿ ಉಂಟಾಗಿ ಬೆಳೆ ನಷ್ಟ ಆಗುತ್ತದೆ ಬಾರದಿದ್ದರೆ ಅನಾವೃಷ್ಟಿಯಿಂದ ಹಾಕಿದ ಬೆಳೆಯು, ಬಿಸಿಲಿಗೆ ಒಣಗಿ ಹೋಗುತ್ತದೆ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರವು ಕೃಷಿ ಭಾಗ್ಯ ಎಂಬ ರೈತ ಹಿತಾಸಕ್ತಿ ಯೋಜನೆಯನ್ನು ಜಾರಿಗೆ ತಂದಿದೆ ರೈತರು ತಮ್ಮ ಜಮೀನಿನಲ್ಲಿ ಒಂದು ಕೃಷಿಹೊಂಡವನ್ನು ಹೊಂದುವುದರ ಮೂಲಕ ಮಳೆ ನೀರನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟುಕೊಂಡು ಸಂಕಷ್ಟದ ಸಮಯ ಅಥವಾ ಬೆಳಗ್ಗೆ ಅವಶ್ಯಕತೆ ಇದ್ದಾಗ ಈ ನೀರನ್ನು ಬಳಸಿಕೊಳ್ಳಬಹುದಾಗಿರುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನಿರಬೇಕು ಅಗತ್ಯ ದಾಖಲೆಗಳೇನು ಯಾವ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಹೇಗೆ ಈ ಸೌಲಭ್ಯವನ್ನು ಯಶಸ್ವಿಯಾಗಿ ಪಡೆಯಬೇಕು ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.

ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ ಸೈಟ್‌ : ಕರ್ನಾಟಕ ಕೃಷಿ ಇಲಾಖೆ

ಕೃಷಿ ಭಾಗ್ಯ (Krushi Bhagya Agriculture Scheme) ಯೋಜನೆ ಎಂದರೆ ಏನು?

ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತರು ಕೇವಲ ಮಳೆಯ ನೀರನ್ನು ನಂಬಿಕೊಂಡು ವಣಭೂಮಿ ಬೇಸಾಯವನ್ನು ಮಾಡುತ್ತಿದ್ದಾರೆ ಆ ರೈತರಿಗೆ ನೀರಿನ ಅಭಾವವನ್ನು ತಗ್ಗಿಸಲು ಈ ಯೋಜನೆಯನ್ನು ತರಲಾಗಿದೆ ಅಂದರೆ ಹೊಲದಲ್ಲಿ ಬೀಳುವ ಮಳೆ ನೀರನ್ನು ಹರಿಯಲು ಬಿಡದೆ ಅದನ್ನು ಒಂದು ವ್ಯವಸ್ಥಿತ ಕೊಂಡದಲ್ಲಿ ಸಂಗ್ರಹಿಸುವಂತೆ ಮಾಡಿ ಅಗತ್ಯವಿದ್ದಾಗ ತಾವು ಬೆಳೆದಿರುವ ಬೆಳೆಗಳಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಸುಮಾರು 24 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಶುರು ಮಾಡಿ ಮುನ್ನಡೆಸಲಾಗುತ್ತಿದೆ.

ಈ Krushi Bhagya Agriculture Scheme ಯೋಜನೆಯ ಮೂಲಕ ಯಾವ ಯಾವ ಸೌಲಭ್ಯಗಳು ಸಿಗುತ್ತವೆ

ಕೃಷಿ ಹೊಂಡದ ನಿರ್ಮಾಣ : 
ನೈಸರ್ಗಿಕವಾಗಿ ಸುರಿಯುವ ಮಳೆಯ ನೀರನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಒಂದು ಕೊಂಡದ ಅವಶ್ಯಕತೆ ಇರುವುದರಿಂದ ಈ ಹೊಂಡವನ್ನು ನಿರ್ಮಾಣ ಮಾಡುವ ಸೌಲಭ್ಯ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ.

ಪಾಲಿಥಿನ್ ಕವರ್ ನ ಹೊದಿಕೆ : 
ಸಾಮಾನ್ಯವಾಗಿ ಮಣ್ಣು ನೀರನ್ನು ಹೀರಿಕೊಳ್ಳುವುದರಿಂದ ಮಣ್ಣು ಮತ್ತು ನೀರಿನ ನಡುವೆ ಒಂದು ಬಂಧಕದ ಅವಶ್ಯಕತೆ ಇದೆ ಅದರಂತೆಯೇ ಕೃಷಿಗೊಂಡದಲ್ಲಿ ಶೇಖರಣೆಯಾಗುವ ನೀರು ಭೂಮಿಗೆ ಇಂಗಿ ಹೋಗದಂತೆ ಅದನ್ನು ತಡೆಯಲು ಪಾಲಿಥಿನ್ ಎಂಬ ಮ್ಯಾಟ್ ರೀತಿಯ ಸಾಮಗ್ರಿಯನ್ನು ಅಳವಡಿಸಲು ಈ ಯೋಜನೆಯಲ್ಲಿ ಅವಕಾಶವಿದೆ.

ಪಂಪ್ಸೆಟ್ ವ್ಯವಸ್ಥೆ: 
ಕೃಷಿಹೊಂಡದ ಸುತ್ತಳತೆಯನ್ನು ಹಾಗೂ ಆಳವನ್ನು ಹೆಚ್ಚಾಗಿ ಇರಿಸಿರುವ ರೈತರು ನೀರನ್ನು ಮೇಲೆತ್ತಲು ಕಷ್ಟ ಪಡದೆ ಇರಲು ಡೀಸೆಲ್ ಅಥವಾ ಸೋಲಾರ್ ಪಂಪ್ಸೆಟ್ ನ ಮೂಲಕ ನೀರನ್ನು ಮೇಲೆ ಇರಬಹುದಾಗಿರುತ್ತದೆ.

ಸೂಕ್ಷ್ಮ ನೀರಾವರಿ ವ್ಯವಸ್ಥೆ : 
ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುವ ನೀರನ್ನು ಒಮ್ಮೆಲೇ ಅವೈಜ್ಞಾನಿಕವಾಗಿ ಸಿಂಪಡಿಸುವುದು ನೀರನ್ನು ಪೋಲು ಮಾಡಿದಂತಾಗುತ್ತದೆ ಆದುದರಿಂದ ಪಂಪ್ಸೆಟ್ ಮೂಲಕ ಹೊರಬರುವ ನೀರನ್ನು ಪರಿಣಾಮಕಾರಿಯಾಗಿ ಬಳಸಲು ಸೂಕ್ಷ್ಮ ನೀರಾವರಿ ಅಂದರೆ ಹನಿ ಅಥವಾ ತುಂತುರು ನೀರಾವರಿ ಘಟಕವನ್ನು ಈ ಯೋಜನೆ ಅಡಿಯಲ್ಲಿ ಸ್ಥಾಪಿಸಲು ಸೌಲಭ್ಯವನ್ನು ಪಡೆಯಬಹುದು.

ತಂತಿ ಬೇಲಿಯ ನಿರ್ಮಾಣ : 
ಕೃಷಿ ಹೊಂಡವು ಸುತ್ತಳತೆ ಹಾಗೂ ಆಳದ ಪ್ರಮಾಣ ಹೆಚ್ಚಿರುವಾಗ ಈ ಹೊಂಡಕ್ಕೆ ಮನುಷ್ಯರು ಅಥವಾ ಯಾವುದೇ ಪ್ರಾಣಿ ಬಿದ್ದು ತೊಂದರೆಗೆ ಇಡಬಹುದು ಆದುದರಿಂದ ಕೊಂಡದ ಸುತ್ತಲೂ ರಕ್ಷಣೆಗಾಗಿ ಅಥವಾ ಸುರಕ್ಷತೆಗಾಗಿ ತಂತಿ ಬೇಲಿಯ ನಿರ್ಮಾಣವನ್ನು ಮಾಡಿಕೊಳ್ಳಬಹುದು.

Krushi Bhagya Agriculture Scheme ಗೆ ಸರ್ಕಾರವು ನೀಡುವ ಸಬ್ಸಿಡಿ ಪ್ರಮಾಣ

ಸಿಗುವಂತಹ ಸೌಲಭ್ಯದ ಮಾಹಿತಿ  ಸಿಗುವ ಸಬ್ಸಿಡಿ ಪ್ರಮಾಣ (ಸಾಮಾನ್ಯ ವರ್ಗಕ್ಕೆ) ಸಿಗುವ ಸಬ್ಸಿಡಿ ಪ್ರಮಾಣ (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಕ್ಕೆ)
ಕೃಷಿಹೊಂಡದ ನಿರ್ಮಾಣ ಕ್ರಿಯೆ 80% 90%
ಪಾಲಿಥಿನ್ ಮ್ಯಾಟ್ ನ ಖರೀದಿ ಹಾಗೂ ಹೊದಿಕೆ 80% 90%
ಡೀಸೆಲ್ ಅಥವಾ ಸೋಲಾರ್ ಪಂಪ್ಸೆಟ್ ಖರೀದಿ ಮತ್ತು ಅಳವಡಿಕೆ 80% 90%
ಹನಿ ಅಥವಾ ತುಂತುರು ನೀರಾವರಿ ಘಟಕದ ನಿರ್ಮಾಣ 90% 90%
ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ 40% 50%

 

ಈ ಯೋಜನೆಗೆ ಯಾರು ಯಾರು ಅರ್ಜಿ ಸಲ್ಲಿಸಬಹುದು

  • ಈ Krushi Bhagya Agriculture Scheme ಗೆ ಅರ್ಜಿ ಸಲ್ಲಿಸಲು ಬಯಸುವ ರೈತರ ಹೆಸರಿನಲ್ಲಿ ಕನಿಷ್ಠ 1 ಎಕರೆ ಕೃಷಿ ಜಮೀನು ಇರಬೇಕು.
  • ಕೇಂದ್ರ ಸರ್ಕಾರದ ರೈತರ ಗುರುತಿನ ಚೀಟಿಯಾದ fid ಅಂದರೆ ಫ್ರೂಟ್ಸ್ ಐಡಿ ಇರುವುದು ಕಡ್ಡಾಯವಾಗಿರುತ್ತದೆ.
  • Krushi Bhagya Agriculture Scheme ಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಸ್ವಂತ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
  • ಈ ಮುಂಚೆ ಅಂದರೆ ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಪಂಪ್ಸೆಟ್ ಖರೀದಿ ಹನಿ ನೀರಾವರಿ ಅಥವಾ ಇನ್ಯಾವುದೇ ಕೃಷಿ ಭಾಗ್ಯ ಯೋಜನೆಗೆ ಸಂಬಂಧಿಸಿದೆ ಸೌಲಭ್ಯವನ್ನು ಪಡೆದಿದ್ದರೆ ಅವರು ಈ Krushi Bhagya Agriculture Scheme ಗೆ ಅರ್ಜಿ ಸಲ್ಲಿಕೆಗೆ ಅರ್ಹರಾಗಿರುವುದಿಲ್ಲ ಆದರೆ ಹೊಸ ಕೃಷಿ ಹೊಂಡದ ನಿರ್ಮಾಣಕ್ಕೆ ಅರ್ಜಿ ಆಗಬಹುದು.

ಈKrushi Bhagya Agriculture Scheme ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು

  • ಆಧಾರ್ ಕಾರ್ಡ್.
  • ಪಹಣಿ ಹಾಗೂ ಕೃಷಿ ಜಮೀನಿಗೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳು.
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು.
  • ಅಗತ್ಯಕ್ಕೆ ತಕ್ಕಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಚಾಲ್ತಿಯಲ್ಲಿರುವ ಹಾಗೂ ಡಿ ಬಿ ಟಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳು.

Krushi Bhagya Agriculture Scheme ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಈ ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಹಲವು ಸರ್ಕಾರಿ ಕಚೇರಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ ಕರ್ನಾಟಕ ಸರ್ಕಾರವು ಡಿಜಿಟಲ್ ಸೇವೆಗಳನ್ನು ಪೂರೈಸಲು ಹೋಬಳಿ ಮಟ್ಟಗಳಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿದೆ ಅದರಂತೆಯೇ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಅಥವಾ ತಾಲೂಕು ಮಟ್ಟದಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಅಲ್ಲಿನ ಅಧಿಕಾರಿಗಳು ರೈತರಿಗೆ ಕೃಷಿ ಹೊಂಡದ ನಿರ್ಮಾಣದ ಬಗೆಗಿನ ಕಾರ್ಯಯೋಜನೆಯನ್ನು ಅಂದರೆ ಕೊಂಡದ ಅಳತೆ ಆಳ ಹಾಗೂ ಯಾವ ಜಾಗದಲ್ಲಿ ಕೃಷಿ ಹೊಂಡವನ್ನು ನಿರ್ಮಿಸಬೇಕು ಎಂಬ ಮುಂದಿನ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಅದರಂತೆಯೇ ಕೃಷಿ ಭಾಗ್ಯದ ಮೂಲಕ ಕೃಷಿ ಹೊಂಡವನ್ನು ನಿರ್ಮಿಸಿ ಕೃಷಿ ಚಟುವಟಿಕೆಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೃಷಿ ಹೊಂಡವನ್ನು ನಿರ್ಮಾಣ ಮಾಡುವುದರ ಮೂಲಕ ನಿವಾರಿಸಬಹುದಾಗಿದೆ ಆದುದರಿಂದ ಮಳೆಯನ್ನು ಆಧರಿಸಿ ಮಾಡುವ ಕೃಷಿಯಿಂದ ಆಗಬಹುದಾದ ಆನೆಯನ್ನು ತಪ್ಪಿಸುವಲ್ಲಿ ಕೃಷಿ ಭಾಗ್ಯ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಾರೆಯಾಗಿ, ಮಳೆಯನ್ನು ಆಧರಿಸಿ ಕೃಷಿ ಮಾಡುವ ರೈತರಿಗೆ ನೀರಿನ ಕೊರತೆ ದೊಡ್ಡ ಸವಾಲಾಗಿದ್ದು, ಇದಕ್ಕೆ ಶಾಶ್ವತ ಪರಿಹಾರವಾಗಿ ಕೃಷಿ ಭಾಗ್ಯ  Krushi Bhagya Agriculture Scheme ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ಕೃಷಿ ಹೊಂಡ ನಿರ್ಮಾಣ, ಪಾಲಿಥಿನ್ ಮ್ಯಾಟ್‌, ಪಂಪ್‌ಸೆಟ್‌, ಹನಿ/ತುಂತುರು ನೀರಾವರಿ ಹಾಗೂ ತಂತಿ ಬೇಲಿ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ದೊರೆಯುವುದರಿಂದ ರೈತರು ಕಡಿಮೆ ವೆಚ್ಚದಲ್ಲಿ ನೀರಿನ ಸಂಗ್ರಹಣೆ ಹಾಗೂ ಸಮರ್ಪಕ ಬಳಕೆಯನ್ನು ಮಾಡಬಹುದು. ವಿಶೇಷವಾಗಿ ಬರಗಾಲ ಅಥವಾ ಮಳೆಯ ಅಭಾವದ ಸಂದರ್ಭಗಳಲ್ಲಿ ಬೆಳೆ ರಕ್ಷಿಸಲು ಈ ಯೋಜನೆ ಸಹಕಾರಿಯಾಗುತ್ತದೆ. ಆದ್ದರಿಂದ ಅರ್ಹ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಿ ಯೋಜನೆಯ ಸೌಲಭ್ಯವನ್ನು ಪಡೆದು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಿಕೊಳ್ಳಬಹುದು.

Krushi Bhagya Agriculture Scheme 2026 – FAQs

1. ಕೃಷಿ ಭಾಗ್ಯ (Krushi Bhagya Agriculture Scheme) ಯೋಜನೆ ಎಂದರೆ ಏನು?
Krushi Bhagya Scheme ಯೋಜನೆಯು ಮಳೆಯ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಅಗತ್ಯ ಸಮಯದಲ್ಲಿ ಬೆಳೆಗಳಿಗೆ ನೀರಾವರಿ ಒದಗಿಸಲು ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ರೈತ ಹಿತಾಸಕ್ತಿ ಯೋಜನೆಯಾಗಿದೆ.

2. ಕೃಷಿ ಭಾಗ್ಯ ಯೋಜನೆಯಡಿ ಯಾವ ಯಾವ ಸೌಲಭ್ಯಗಳು ದೊರೆಯುತ್ತವೆ?
ಈ ಯೋಜನೆಯ ಅಡಿಯಲ್ಲಿ  ಕೃಷಿ ಹೊಂಡ ನಿರ್ಮಾಣ, ಪಾಲಿಥಿನ್ ಮ್ಯಾಟ್ ಹೊದಿಕೆ, ಡೀಸೆಲ್/ಸೋಲಾರ್ ಪಂಪ್‌ಸೆಟ್‌, ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆ ಹಾಗೂ ತಂತಿ ಬೇಲಿ ನಿರ್ಮಾಣ ಸೌಲಭ್ಯಗಳು ಸಬ್ಸಿಡಿ ದರದಲ್ಲಿ ದೊರೆಯುತ್ತವೆ.

3. ಕೃಷಿ ಭಾಗ್ಯ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಅರ್ಜಿ ಸಲ್ಲಿಸಲು ರೈತರ ಹೆಸರಿನಲ್ಲಿ ಕನಿಷ್ಠ 1 ಎಕರೆ ಕೃಷಿ ಜಮೀನು ಇರಬೇಕು , Fruits ID (FID) ಹಾಗೂ ಸ್ವಂತ ಬ್ಯಾಂಕ್ ಖಾತೆ ಇರಬೇಕು. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಇದೇ ಯೋಜನೆಯ ಸೌಲಭ್ಯ ಪಡೆದವರು ಕೆಲವು ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ.

4. ಕೃಷಿ ಭಾಗ್ಯ ಯೋಜನೆಗೆ ಎಷ್ಟು ಪ್ರಮಾಣದಲ್ಲಿ ಸಬ್ಸಿಡಿ ಸಿಗುತ್ತದೆ?
ಸಾಮಾನ್ಯ ವರ್ಗದ ರೈತರಿಗೆ 80% ರಿಂದ 90% ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ 90% ವರೆಗೆ ಸಬ್ಸಿಡಿ ನೀಡಲಾಗುತ್ತದೆ. ತಂತಿ ಬೇಲಿ ನಿರ್ಮಾಣಕ್ಕೆ 40% ರಿಂದ 50% ರಷ್ಟು ಸಹಾಯಧನ ಸಿಗುತ್ತದೆ.

5. ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು?
ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಧಿಕಾರಿಗಳು ಕೃಷಿ ಹೊಂಡ ನಿರ್ಮಾಣದ ಮುಂದಿನ ಪ್ರಕ್ರಿಯೆಯ ಮಾಹಿತಿಯನ್ನು ನೀಡುತ್ತಾರೆ.

 

Read More: Schemes

Start-Up India Seed Fund Scheme 2026: ಹೊಸ ಸ್ಟಾರ್ಟ್‌ ಅಪ್‌ಗಳನ್ನು ಆರಂಭಿಸುವವರಿಗೆ Good News, ಯೋಜನೆಯ ಅರ್ಹತೆ, ಹಣಕಾಸು ನೆರವು ಬಗ್ಗೆ ಸಂಪೂರ್ಣ ಮಾಹಿತಿ

India Post Franchise, Big Update 2026: ಭಾರತೀಯ ಅಂಚೆ ಇಲಾಖೆಯ ಫ್ರಾಂಚೈಸಿ ಪಡೆಯಲು ಅರ್ಜಿ ಆಹ್ವಾನ

Free Solar Pumpset Scheme 2026: ಸರ್ಕಾರಿ ಸಬ್ಸಿಡಿ ಮೂಲಕ ಸೌರ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಕೆ

Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.

Best Self Employment Loan: ಸ್ವಯಂ ಉದ್ಯೋಗವನ್ನು ಆರಂಭಿಸುವವರಿಗೆ ಗೋಲ್ಡನ್‌ ಅವಕಾಶ ₹4 ಲಕ್ಷ ಸಾಲ + 50% ಸಬ್ಸಿಡಿ – ಭರ್ಜರಿ ಅವಕಾಶ

Leave a Comment