Telegram Join My Telegram WhatsApp Join My WhatsApp

India Post Franchise, Big Update 2026: ಭಾರತೀಯ ಅಂಚೆ ಇಲಾಖೆಯ ಫ್ರಾಂಚೈಸಿ ಪಡೆಯಲು ಅರ್ಜಿ ಆಹ್ವಾನ

ಶಾಖೆಯ ವ್ಯವಸ್ಥೆಯನ್ನು ಪಡೆಯುವುದರ ಮೂಲಕ ತಿಂಗಳಿಗೆ 80000 ಗಳ ವರೆಗೆ ಹಣ ಗಳಿಸುವ ಸುವರ್ಣ ಅವಕಾಶ (India Post Franchise)

ಭಾರತೀಯ ಅಂಚೆ ಇಲಾಖೆಯು ಈಗ ಡಿಜಿಟಲ್ ಸೇವೆಗಳನ್ನು ಒದಗಿಸಲು ಫ್ರಾಂಚೈಸಿಯನ್ನು (India Post Franchise) ನೀಡಲು ಮುಂದಾಗಿದೆ ಭಾರತೀಯ ಅಂಚೆ ಕೇಂದ್ರ ಸರ್ಕಾರದ ಒಂದು ಬಹುಮುಖ್ಯ ಉದ್ಯಮ ವಾಗಿದ್ದು ಇಂದಿನ ಜೀವನದಲ್ಲಿ ಅಂಚೆ ಸೇವೆಗಳನ್ನು ಪಡೆಯುವಲ್ಲಿ ಹಾಗೂ ನಮ್ಮ ಮನೆ ಬಾಗಿಲಿಗೆ ಅಂಚೆ ಸೇವೆಗಳನ್ನು ಒದಗಿಸುವಲ್ಲಿ ಅಂಚೆ ಇಲಾಖೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಈ ಅಂಚೆ ಇಲಾಖೆಯಿಂದ ಈಗ ಫ್ರಾಂಚೈಸಿಗಳನ್ನು ನೀಡುತ್ತಿದ್ದು ಅರ್ಹ ಅಭ್ಯರ್ಥಿಗಳು ಈ ಫ್ರಾಂಚೈಸಿ ಯನ್ನು ಪಡೆಯಬಹುದಾಗಿರುತ್ತದೆ ಕೇಂದ್ರ ಸರ್ಕಾರದ ಸಂಸ್ಥೆಯ ಜೊತೆಗೂಡಿ ಕೆಲಸ ಮಾಡಲು ಇದು ಸುವರ್ಣ ಅವಕಾಶವಾಗಿದ್ದು ಈಗಲೇ ಭಾರತೀಯ ಅಂಚೆ ಇಲಾಖೆಯು ಹೊಸದಾಗಿ ಶುರು ಮಾಡಿರುವ ಫ್ರಾಂಚೈಸಿ ಯೋಜನೆಯನ್ನು ಪಡೆದುಕೊಳ್ಳಲು ಮುಂದಾಗಿ.

Independence Day 2022: India Posts PIN Code Service Turns 50. Read About  Its History, Significance HERE
ಭಾರತೀಯ ಅಂಚೆ ಫ್ರಾಂಚೈಸಿ (India Post Franchise) ಎಂದರೆ ಏನು ?

ಭಾರತೀಯ ಅಂಚೆ ಇಲಾಖೆಯು ಇತ್ತೀಚೆಗೆ ಶುರು ಮಾಡಿರುವ ಡಿಜಿಟಲ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಈ ಅಂಚೆ ಇಲಾಖೆಯ ಹೊಸ ಯೋಜನೆಯನ್ನು ಜನವರಿ 01 2026 ರಿಂದ ಜಾರಿಗೆ ತಂದಿದ್ದು ಡಿಜಿಟಲ್ ಸೇವೆಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ, ಇಂದಿನ ದಿನಗಳಲ್ಲಿ ಅಂಚೆ ಕಚೇರಿ ಪ್ರತಿ ಗ್ರಾಮದಲ್ಲಿ ಅಥವಾ ಹಲವು ಗ್ರಾಮಗಳನ್ನು ಸೇರಿ ಒಂದು ಶಾಖೆಯನ್ನು ಭಾರತೀಯ ಅಂಚೆ ಇಲಾಖೆಯು ನೀಡುತ್ತಿದೆ ಆದರೆ ಸೇವೆಗಳ ಹೆಚ್ಚಳ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಇದೀಗ ಭಾರತೀಯ ಅಂಚೆ ಇಲಾಖೆಯು ಪರಿಣಾಮಕಾರಿಯಾಗಿ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಕಡೆಯಲ್ಲಿ ಫ್ರಾಂಚೈಸಿಯನ್ನು (India Post Franchise) ನೀಡಲು ನಿರ್ಧರಿಸಿದೆ ಈ ಅವಕಾಶವನ್ನು ಭಾರತೀಯ ಅಂಚೆ ಇಲಾಖೆಯು ನೀಡುತ್ತಿದ್ದು ಇದಕ್ಕಾಗಿ APT 2.0 ಎಂಬ ಆಧುನಿಕ ತಂತ್ರಜ್ಞಾನದ ತಂತ್ರಾಂಶವನ್ನು ಬಳಸಿ ಫ್ರಾಂಚೈಸ್ ಅನ್ನು ಒದಗಿಸಿ ಡಿಜಿಟಲ್ ಸೇವೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ

ಅಂಚೆ ಫ್ರಾಂಚೈಸಿ (India Post Franchise) ಯನ್ನು ಪಡೆಯಲು ಎಷ್ಟು ಹೂಡಿಕೆ ಬೇಕಾಗುತ್ತದೆ

ಭಾರತೀಯ ಅಂಚೆ ಇಲಾಖೆಯ ಅಧಿಕೃತ ಫ್ರಾಂಚೈಸಿಯನ್ನು ಪಡೆಯಲು ಭದ್ರತಾ ಠೇವಣಿ ಎಂದು 5,000/- ರೂಗಳಿಂ 10,000/- ರೂಗಳನ್ನು ಪಾವತಿಸಬೇಕಾಗುತ್ತದೆ ಇದು ನಾವು ಫ್ರಾಂಚೈಸಿ ಯನ್ನು ಮುಚ್ಚುತ್ತೇವೆ ಎಂದರೆ ಇದು ಮರುಪಾವತಿಗೆ ಒಳಪಟ್ಟಿರುತ್ತದೆ

ಪೀಠೋಪಕರಣ ಕಂಪ್ಯೂಟರ್ ಪ್ರಿಂಟರ್ ಹಾಗೂ ಇತ್ಯಾದಿ ಪೀಠೋಪಕರಣಗಳನ್ನು ಖರೀದಿಸಲು ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಇದ್ದರೆ ಸಾಕಾಗುತ್ತದೆ ಭದ್ರತಾ ಠೇವಣಿ ಹಾಗೂ ಒಟ್ಟು ಹೂಡಿಕೆಯ ಮೊತ್ತವನ್ನು ಬಿಟ್ಟರೆ ಬೇರೆ ಯಾವುದೇ ಹೂಡಿಕೆ ಇರುವುದಿಲ್ಲ

ಭಾರತೀಯ ಅಂಚೆ ಫ್ರಾಂಚೈಸಿಯನ್ನು ಪಡೆದರೆ ತಿಂಗಳಿಗೆ ಎಷ್ಟು ಹಣ ಗಳಿಸಬಹುದು

ಭಾರತೀಯ ಅಂಚೆ ಇಲಾಖೆಯ ಫ್ರಾಂಚೈಸಿಯನ್ನು (India Post Franchise) ಪಡೆಯುವುದರಿಂದ ಡಿಜಿಟಲ್ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಬಹುದು ಕೆಲಸದ ಸಮಯ ಹಾಗೂ ಗುಣಮಟ್ಟದ ಆಧಾರದ ಮೇಲೆ ತಿಂಗಳಿಗೆ 20,000/- ರೂಗಳಿಂದ ದಿಂದ 80,000/- ರೂಗಳಿಗೂ ಹೆಚ್ಚು ಹಣ ಗಳಿಸಬಹುದಾಗಿರುತ್ತದೆ ಹೆಚ್ಚು ಸೇವೆಗಳನ್ನು ನೀಡಿದಷ್ಟು ಹೆಚ್ಚು ಆದಾಯವನ್ನು ಗಳಿಸಬಹುದಾಗಿರುತ್ತದೆ

ಭಾರತೀಯ ಅಂಚೆ ಫ್ರಾಂಚೈಸಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು

ಶೈಕ್ಷಣಿಕ ಅರ್ಹತೆ : ಈ India Post Franchise ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿಯನ್ನು ಪಾಸ್ ಆಗಿರಬೇಕು ಏಕೆಂದರೆ ಡಿಜಿಟಲ್ ಸೇವೆಗಳನ್ನು ಪೂರೈಸುವುದಕ್ಕೆ ಇಂಗ್ಲೀಷ್ ಭಾಷೆ ಹಾಗೂ ಕೌಶಲ್ಯದ ಅಗತ್ಯತೆ ಇರುವುದರಿಂದ ಕಡ್ಡಾಯವಾಗಿ ಹತ್ತನೇ ತರಗತಿಯನ್ನು ಉತ್ತೀರ್ಣರಾಗಿರಬೇಕಾಗುತ್ತದೆ

ವಯಸ್ಸಿನ ಅರ್ಹತೆ : ಈ India Post Franchise ಗೆ  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಆಗಿರಬೇಕು ಆದರೆ ಇದಕ್ಕೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ

ಇತರ ಅವಶ್ಯಕತೆಗಳು : ಭಾರತೀಯ ಅಂಚೆ ಫ್ರಾಂಚೈಸಿ   ಯನ್ನು ಪಡೆಯಲು ಹಾಗೂ ಪಡೆದ ನಂತರ ಡಿಜಿಟಲ್ ಸೇವೆಗಳನ್ನು ಒದಗಿಸಲು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿರುತ್ತದೆ ಮತ್ತು ಸ್ಥಳೀಯ ಭಾಷೆ ಕಲಿತಿರಬೇಕಾಗುತ್ತದೆ

ಹೊಂದಿಕೆಯ ಸ್ಥಳ : ಯಾವ ಪ್ರದೇಶದಲ್ಲಿ ಜನರು ಹೆಚ್ಚಾಗಿರುತ್ತಾರೆಯೋ ಉದಾಹರಣೆಗೆ ಸಣ್ಣ ಮಳಿಗೆಗಳು ಸರ್ಕಾರಿ ಕಚೇರಿಗಳು ಅಥವಾ ಬೇರೆ ಯಾವುದೇ ಹೆಚ್ಚು ಜನರು ಇರುವ ಪ್ರದೇಶದಲ್ಲಿ ಕಚೇರಿಯನ್ನು ಹೊಂದಿರಬೇಕಾಗುತ್ತದೆ ಏಕೆಂದರೆ ಅಂಚೆ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಬೇಕಾದರೆ ಜನರು ಈ ಫ್ರಾಂಚೈಸಿ ಹಾಗೂ ಶಾಖೆಯ ಬಗ್ಗೆ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ

ಭಾರತೀಯ ಅಂಚೆ ಫ್ರಾಂಚೈಸಿಯನ್ನು (India Post Franchise) ತೆಗೆದುಕೊಂಡ ನಂತರ ಸಿಗುವ ಕಮಿಷನ್ ಮೊತ್ತಗಳು ಈ ಕೆಳಕಂಡಂತಿವೆ

  • ಸ್ಪೀಡ್ ಪೋಸ್ಟ್ ಬುಕ್ ಮಾಡುವುದರ ಮೂಲಕ ಶೇಕಡ 7% ನಿಂದ 25% ಅಷ್ಟು ಕಮಿಷನ್ ಪಡೆಯಬಹುದು
  • ಅಂಚೆ ಚೀಟಿಗಳನ್ನು ಮಾರಾಟ ಮಾಡುವುದರ ಮೂಲಕ ಮಾರಾಟದ ಮೊತ್ತದ ಶೇಕಡ 5% ಅಷ್ಟು ಲಾಭವನ್ನು ನಾವು ಪಡೆಯಬಹುದು
  • ಜನರು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಕಳುಹಿಸುವ ಮನಿ ಆರ್ಡರ್ ಅಂದರೆ ಡಿಜಿಟಲ್ ಹಣ ಸೇವೆಯನ್ನು ಒದಗಿಸುವ ಮೂಲಕ ಮನಿ ಆರ್ಡರ್ ಮೊತ್ತವು 200 ರೂಗಳಿಗಿಂತ ಹೆಚ್ಚಿನ ಮೊತ್ತ ವಾಗಿದ್ದರೆ 5 ರೂಪಾಯಿಗಳ ಕಮಿಷನ್ ದೊರೆಯುತ್ತದೆ
  • ಬೋನಸ್ ಸೌಲಭ್ಯ. ಭಾರತೀಯ ಅಂಚೆ ಪ್ರಾಂತಂಚಿಯನ್ನು ಯಶಸ್ವಿಯಾಗಿ ಪಡೆದು ಉತ್ತಮ ರೀತಿಯಲ್ಲಿ ಡಿಜಿಟಲ್ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಿ ಕೆಲಸ ಮಾಡುವವರಿಗೆ ಅವರು ಗಳಿಸುವ ಮಾಸಿಕ ಮೊತ್ತದ ಮೇಲೆ 25% ರಿಂದ 30% ಅಷ್ಟು ಹೆಚ್ಚುವರಿ ಪ್ರೋತ್ಸಾಹ ಧನವನ್ನು ಪಡೆಯಬಹುದು

ಭಾರತೀಯ ಅಂಚೆ ಫ್ರಾಂಚೈಸಿಯನ್ನು ಪಡೆದ ನಂತರ ಯಾವ ಸೇವೆಗಳನ್ನು ನೀಡಬಹುದು

  • ಸ್ಪೀಡ್ ಪೋಸ್ಟ್ ಬುಕಿಂಗ್ ಹಾಗೂ ರಿಜಿಸ್ಟರ್ಡ್ ಪೋಸ್ಟ್ ಬುಕಿಂಗ್ ಸೇವೆಗಳನ್ನು ಒದಗಿಸಬಹುದು
  • ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಾರ್ಸಲ್ ಸೇವೆಗಳನ್ನು ಒದಗಿಸಬಹುದು
  • ಈ ಕಾಮರ್ಸ್ ಪಾರ್ಸಲ್ ಅಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಕಳುಹಿಸುವ ಸರಕು, ಪಿಕಪ್ ಮತ್ತು ಡೆಲಿವರಿ ಸೇವೆಗಳನ್ನು ನೀವು ಒದಗಿಸಬಹುದು
  • ಭಾರತೀಯ ಅಂಚೆ ಫ್ರಾಂಚೈಸಿ ಯನ್ನು ಹೊಂದಿದ ನಂತರ ನೀವು ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳನ್ನು ಒದಗಿಸಬಹುದು ಅಂದರೆ ಇಂದಿನ ದಿನಗಳಲ್ಲಿ ಎಟಿಎಂ ಅಥವಾ ಬ್ರಾಂಚ್ ಗೆ ಭೇಟಿ ನೀಡದೆಯೇ ಹಣವನ್ನು ವರ್ಗಾವಣೆ ಮಾಡಬಹುದಾದ ಸೇವೆಗಳು ಲಭ್ಯವಿರುವುದರಿಂದ ಈ ಸೇವೆಗಳನ್ನು ಸಹ ಒದಗಿಸಬಹುದಾಗಿರುತ್ತದೆ ಉದಾಹರಣೆಗೆ ಮನಿ ಟ್ರಾನ್ಸ್ಫರ್, ಮೊಬೈಲ್ ರೀಚಾರ್ಜ್, ಡಿಟಿಎಚ್ ರಿಚಾರ್ಜ್, ನೀರಿನ ಬಿಲ್ ಪಾವತಿಸುವಿಕೆ, ಕರೆಂಟ್ ಬಿಲ್ ಪಾವತಿಸುವಿಕೆ, ಇನ್ಸೂರೆನ್ಸ್ ಸೇವೆಗಳು ಮುಂತಾದ ಯುಟಿಲಿಟಿ ಹಣಕಾಸು ಸೇವೆಗಳನ್ನು ಒದಗಿಸಬಹುದು
  • ಭಾರತೀಯ ಅಂಚೆ ಫ್ರಾಂಚೈಸಿಯನ್ನು ಪಡೆಯುವುದರ ಮೂಲಕ ಸ್ಮಾರ್ಟ್ ಲಾಕರ್ ಮತ್ತು ರಿಯಲ್ ಟೈಮ್ ಟ್ರ್ಯಾಕಿಂಗ್ ಸೌಲಭ್ಯವನ್ನು ಒದಗಿಸಬಹುದು

ಅರ್ಜಿ ಸಲ್ಲಿಕೆ ಪ್ರಕ್ರಿಯೆ 

ಈ ಭಾರತೀಯ ಅಂಚೆ ಇಲಾಖೆಯ ಫ್ರಾಂಚೈಸಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತರು ತಮ್ಮ ವ್ಯಾಪ್ತಿಯ ಅಂಚೆ ಇಲಾಖೆಯ ವಿಭಾಗಿಯ ಕಚೇರಿ ಅಂದರೆ ಡಿವಿಷನ್ ಆಫೀಸನ್ನು ಸಂಪರ್ಕಿಸುವುದರ ಮೂಲಕ ಅಥವಾ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದು ಆನ್ಲೈನಲ್ಲಿಯೂ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ನಂತರ ಅಂಚೆ ಇಲಾಖೆ ಅಭ್ಯರ್ಥಿಗಳಿಗೆ ಅಗತ್ಯವಿರುವ ತರಬೇತಿ ಮಾರ್ಗದರ್ಶನ ಹಾಗೂ ತಂತ್ರಜ್ಞಾನ ಸಹಾಯವನ್ನು ನೀಡುತ್ತದೆ

ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ :  ಭಾರತೀಯ ಅಂಚೆ ಇಲಾಖೆ

ಭಾರತೀಯ ಅಂಚೆ ಇಲಾಖೆಯ ಫ್ರಾಂಚೈಸಿಗೆ ಆನ್ಲೈನ್ ನಲ್ಲಿ ಅಪ್ಲೈ ಮಾಡಲು  : ಇಲ್ಲಿ ಕ್ಲಿಕ್ ಮಾಡಿ

ನಮ್ಮ ವಾಟ್ಸಪ್ ಗ್ರೂಪ್ ಸೇರಲು : ಇಲ್ಲಿ ಕ್ಲಿಕ್ ಮಾಡಿ 

ಭಾರತ ಸರ್ಕಾರದ ಒಂದು ಪ್ರಮುಖ ಉದ್ಯಮವಾದ ಭಾರತೀಯ ಅಂಚೆ ಇಲಾಖೆಯು ತನ್ನ ಡಿಜಿಟಲ್ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಈಗ ಪ್ರಸ್ತುತ ಇರುವ ಶಾಖೆಗಳನ್ನು ಹೊರತುಪಡಿಸಿ ಜನ ಹೆಚ್ಚಾಗಿರುವ ಜಾಗಗಳಲ್ಲಿ ಶಾಖೆಗಳನ್ನು ಹೊಂದಲು ಮತ್ತು ಡಿಜಿಟಲ್ ಸೇವೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಆಸಕ್ತರಿಂದ ಫ್ರಾಂಚೈಸಿಗಳನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ ಆಸಕ್ತರು ಆದಷ್ಟು ಬೇಗ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಆದಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯಶಸ್ವಿಯಾಗಿ ಪಡೆಯಿರಿ ಮೂಲಕ ಮಾಸಿಕ 20,000 ದಿಂದ 80,000 ರೂಗಳನ್ನು ತಮ್ಮ ಕೆಲಸದ ನಿರ್ವಹಣೆ ಹಾಗೂ ಪರಿಣಾಮಕಾರಿ ಸೇವೆಗಳ ಒದಗಿಸುವಿಕೆ ಇದರಿಂದ ಪಡೆಯಬಹುದಾಗಿದ್ದು ಕೇಂದ್ರ ಸರ್ಕಾರದ ಇಲಾಖೆಯ ಜೊತೆಯಲ್ಲಿ ಕೆಲಸ ಮಾಡುವ ಹಾಗೂ ಉದ್ಯಮವನ್ನು ಶುರು ಮಾಡುವ ಕನಸನ್ನು ಅರ್ಜಿ ಸಲ್ಲಿಸುವುದರ ಮೂಲಕ ನನಸಾಗಿಸಿಕೊಳ್ಳಿ.

 

Read More: Schemes

Vivo Kanyagyaan Scholorship, Big Update: ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂಗಳ ವರೆಗೆ ವಿದ್ಯಾರ್ಥಿವೇತನ, ಇಂದೇ ಅರ್ಜಿ ಸಲ್ಲಿಸಿ

Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

Leave a Comment