ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿಯಲ್ಲಿ ಸೈಟ್ ಇಂಜಿನಿಯರ್ ಗಳ ನೇಮಕಾತಿ (RLDA Recruitment)
ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ಸಂಸ್ಥೆಯು ತನ್ನ 2026ರ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಾರ 40 ಸೈಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಆಫ್ ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಖಿಲ ಭಾರತ ಮಟ್ಟದಲ್ಲಿ ಕೇಂದ್ರ ಸರ್ಕಾರ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಆದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಿ

ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ನೇಮಕಾತಿಯ ಪ್ರಮುಖ ವಿವರಗಳು
ಸಂಸ್ಥೆಯ ಹೆಸರು : ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ
ಒಟ್ಟು ಹುದ್ದೆಗಳ ಸಂಖ್ಯೆ : 40 ಹುದ್ದೆಗಳು
ಉದ್ದಯ ಹೆಸರು : ಸೈಟ್ ಇಂಜಿನಿಯರ್
ಉದ್ಯೋಗದ ಸ್ಥಳ : ಅಖಿಲ ಭಾರತದಾದ್ಯಂತ
RLDA Recruitment ನ ಶೈಕ್ಷಣಿಕ ಅರ್ಹತೆ

ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿಯ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸಿವಿಲ್ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಬಿ ಇ ಅಥವಾ ಬಿ ಟೆಕ್ ಪದವಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕೆಂದು ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿರುತ್ತದೆ
RLDA Recruitment ನ ವರ್ಗವಾರು ಹುದ್ದೆಗಳ ಹಂಚಿಕೆ
| ಹುದ್ದೆಯ ಹೆಸರು | ವರ್ಗವಾರು ಹುದ್ದೆಗಳು |
| ಸೈಟ್ ಇಂಜಿನಿಯರ್ (ಸಿವಿಲ್) | 30 |
| ಸೈಟ್ ಇಂಜಿನಿಯರ್ (ಎಲೆಕ್ಟ್ರಿಕಲ್) | 10 |
RLDA Recruitment ನ ವೇತನ
ರೈಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ನೇಮಕಾತಿಯ ಮೂಲಕ ನೇಮಕಗೊಂಡ ಅಭ್ಯರ್ಥಿಗಳಿಗೆ ತಿಂಗಳಿಗೆ 76000/- ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ
RLDA Recruitment ನ ವಯೋಮಿತಿ ವಿವರ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು 22.05.2026 ರಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷಗಳನ್ನು ಹೊಂದಿರಬೇಕು
RLDA Recruitment ಗೆ ಸಂಬಂಧಿಸದ ವಯೋಮಿತಿ ಸಡಿಲಿಕೆ ವಿವರ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದ ವಯೋಮಿತಿ ಸಡಿಲಿಕೆಯನ್ನು ಭಾರತ ಸರ್ಕಾರದ ವಯೋಮಿತಿ ಸಡಲಿಕ್ಕೆ ನಿಯಮದ ಮೂಲಕ ನಿರ್ಧರಿಸಲಾಗುವುದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆಯನ್ನು ಪಡೆಯಬಹುದಾಗಿರುತ್ತದೆ
RLDA Recruitment ನ ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು ಈ ಸಂದರ್ಶನದಲ್ಲಿ ಹುದ್ದೆಗೆ ಬೇಕಾಗುವ ಕನಿಷ್ಠ ಕೌಶಲ್ಯ ಹಾಗೂ ಸಂವಹನಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಲಾಗುವುದು
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಹಿಂಕವನ್ನು ಪಾವತಿಸುವ ಅಗತ್ಯತೆ ಇರುವುದಿಲ್ಲ
RLDA Recruitment ಅರ್ಜಿ ಸಲ್ಲಿಕೆ ಪ್ರಕ್ರಿಯೆ

- ಮೊದಲಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ರಾಯಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿನ ಅಧಿಕೃತ ಅಧಿಸೂಚನೆಯನ್ನು ಓದಿ ಸಂಪೂರ್ಣವಾಗಿ ಅರ್ಥೈಸಿಕೊಂಡು ತಾವು ಅರ್ಹತಮಾನದಲ್ಲಿ ವರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ
- ಈ ನೇಮಕಾತಿಯು ಆಫ್ಲೈನ್ ಮೂಲಕ ನಡೆಯುವುದರಿಂದ ಅಧಿಕೃತ ಅಧಿಸೂಚನೆಯಲ್ಲೇ ಅರ್ಜಿ ನಮೂನೆಯನ್ನು ನೀಡಲಾಗಿರುತ್ತದೆ
- ಅಭ್ಯರ್ಥಿಗಳು ವೈಯಕ್ತಿಕ ದಾಖಲೆಗಳು ಶೈಕ್ಷಣಿಕ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅನುಭವಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳು ಫೋಟೋ ಮುಂತಾದ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು
- ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡ ನಂತರ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ನಿಖರವಾಗಿ ಸ್ಪಷ್ಟವಾಗಿ ನಮೂದಿಸಬೇಕು
- ಯಾವುದಾದರೂ ಬದಲಾವಣೆಗಳಿದ್ದಲ್ಲಿ ಬೇರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡುವುದು ಉತ್ತಮ ಯಾವುದೇ ಅಕ್ಷರಗಳನ್ನು ಹೊಡೆದು ಹಾಕುವುದು ಅಥವಾ ನಿಖರವಾಗಿ ಕಾಣದ ರೀತಿಯಲ್ಲಿ ಭರ್ತಿ ಮಾಡುವುದನ್ನು ಆದಷ್ಟು ತಪ್ಪಿಸಿ
- ಅರ್ಜಿಯನ್ನು ಯಶಸ್ವಿಯಾಗಿ ಭರ್ತಿ ಮಾಡಿದ ನಂತರ ಅಧಿಸೂಚನೆಯಲ್ಲಿ ಕೇಳಲಾಗಿರುವ ಎಲ್ಲಾ ಅಗತ್ಯ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ಅಟೆಸ್ಟ್ ಮಾಡುವ ಮೂಲಕ ಅರ್ಜಿಗೆ ಲಗತ್ತಿಸಿ ಈ ಕೆಳಗೆ ನೀಡಲಾಗಿರುವ ಈಮೇಲ್ ಐಡಿಗೆ ಕಳಿಸಬೇಕಾಗುತ್ತದೆ
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರಮುಖವಾಗಿ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಏಕೆಂದರೆ ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳು ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಮೂಲಕ ನಡೆಯುವುದರಿಂದ ಯಾವುದೇ ತೊಂದರೆ ಇಲ್ಲದ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರನ್ನು ತಮ್ಮ ಬಳಿ ಇಟ್ಟುಕೊಳ್ಳಿ
ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿದ ನಂತರ ಅರ್ಜಿಯನ್ನು ಈ ಇ-ಮೇಲ್ ಗೆ ಸಲ್ಲಿಸಬೇಕು
ಇ-ಮೇಲ್ ಐಡಿ – site.engg.rlda@gmail.com
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು :
- ಬಿ.ಟೆಕ್ ಸಿವಿಲ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಡೆದ ಶೇಕಡಾವಾರು ಅಂಕಗಳು ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಎಂ.ಟೆಕ್ ಅರ್ಹತೆಗೂ ಸಹ ತೂಕವನ್ನು ನೀಡಲಾಗುತ್ತದೆ.
- ಸಾಂಸ್ಥಿಕ ಮತ್ತು ಯೋಜನೆಯ ಅವಶ್ಯಕತೆಗಳ ಪ್ರಕಾರ ಅಭ್ಯರ್ಥಿಗಳನ್ನು ನಿರ್ಣಯಿಸುವ ಹಕ್ಕನ್ನು RLDA ಕಾಯ್ದಿರಿಸಿದೆ.
- ನಿಶ್ಚಿತಾರ್ಥವು ಸಂಪೂರ್ಣವಾಗಿ ಒಂದು (01) ವರ್ಷದ ಆರಂಭಿಕ ಅವಧಿಗೆ ಒಪ್ಪಂದದ ಆಧಾರದ ಮೇಲೆ ಇರುತ್ತದೆ, ಯೋಜನೆಯ ಅವಶ್ಯಕತೆ ಮತ್ತು ತೃಪ್ತಿದಾಯಕ ಕಾರ್ಯಕ್ಷಮತೆಗೆ ಅನುಗುಣವಾಗಿ ವಿಸ್ತರಿಸಬಹುದು. RLDA ಯ ಮತ್ತಷ್ಟು ಅಗತ್ಯವಿದ್ದಲ್ಲಿ, ಒಪ್ಪಂದವನ್ನು ವಿಸ್ತರಿಸಬಹುದು/ನವೀಕರಿಸಬಹುದು.
ಪ್ರಮುಖ ದಿನಾಂಕಗಳು
ಅದು ಸೂಚನೆ ಬಿಡುಗಡೆಗೊಂಡು ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ 02-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-05-2026
ಪ್ರಮುಖ ಲಿಂಕ್‌ಗಳು
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು : ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ
ಅಧಿಕೃತ ಅಧಿಸೂಚನೆಯ ಪಿಡಿಎಫ್ ಓದಲು : ಅಧಿಸೂಚನೆ-1 ಅಧಿಸೂಚನೆ-2
ನಮ್ಮ ವಾಟ್ಸಪ್ ಗ್ರೂಪ್ ಸೇರಲು : ಇಲ್ಲಿ ಕ್ಲಿಕ್ ಮಾಡಿ
ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ ಸಂಸ್ಥೆಯು ಕೇಂದ್ರ ಸರಕಾರದ ಮಟ್ಟದ ಸಂಸ್ಥೆಯಾಗಿದ್ದು ಈ ಸಂಸ್ಥೆಯು ತನ್ನ 2026ರ ಅಧಿಕೃತ ನೇಮಕಾತಿ ಸೂಚನೆಯ ಪ್ರಕಾರ 40 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಆದಷ್ಟು ಬೇಗ ಅಧಿಕೃತ ಅನುಸೂಚನೆಯನ್ನು ಓದಿ ಅರ್ಥೈಸಿಕೊಂಡು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಂಡು ಆದಷ್ಟು ಬೇಗ ಅರ್ಜಿ ಸಲ್ಲಿಸಿ
Read More: Jobs.
KSLSA Recruitments 2026, Big Update: ಪ್ರಾಧಿಕಾರದ ಶಾಖಾಧಿಕಾರಿ ಹುದ್ದೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ